ನಿರ್ದೇಶಕರು, ಜಾನಪದ ಸಂಶೋಧನ ಕೇಂದ್ರ
ಸಪ್ತಾಪೂರ, ಹಳಿಯಾಳ ರಸ್ತೆ,
ಧಾರವಾಡ.
ದೂರವಾಣಿ : (೦೮೩೬) ೨೭೭೯೪೦೨

ನಲವತ್ತೇಳರ ಉತ್ಸಾಹಿ ಶ್ರೀಮತಿ ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ ಬೆಳಗಾವಿಯ ಕಿತ್ತೂರಿನಲ್ಲಿ ಜನಿಸಿದರು.

ಬಾಲ್ಯದಿಂದಲೇ ರಂಗಭೂಮಿಯೆಡೆಗೆ ಆಸಕ್ತಿ ಬೆಳೆಸಿಕೊಂಡ ಅವರು ಜಾನಪದವನ್ನು ಅಮೂಲಾಗ್ರ ಅಧ್ಯಯನ ಮಾಡುವ ಕಾಯಕಕ್ಕೆ ಮುಂದಾದರು.

ನೀನಾಸಂ ರಂಗತರಬೇತಿಯಿಂದ ಸ್ಫೂರ್ತಿ ಪಡೆದ ಅವರು ಹಲವಾರು ನಾಟಕಗಳಿಗೆ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ವಿಚಾರ, ಸಾಹಿತ್ಯ, ವಿಮರ್ಶೆಗಳು ಅವರ ಪ್ರಕಟಿತ ಹವ್ಯಾಸಕ್ಕೆ ನಿದರ್ಶನ.

ದೇಶದ ನಾನಾ ಭಾಗಗಳಲ್ಲಿ ತಮ್ಮ ಜಾನಪದ ಕಾರ‍್ಯಕ್ರಮಗಳ ರಸದೌತಣ ನೀಡಿರುವ ಅವರಿಗೆ ಸಾಂಸ್ಕೃತಿಕ ಲೋಕ ಕೂಡ ಒಲಿದಿದೆ.

ಈ ಕಲಾವಿದರಿಗೆ ಅಭಿನಂದನೆಗೆ ಅಕಾಡೆಮಿ ಮುಂದಾಗಿದೆ.