ಎಲ್.ಐ.ಜಿ. ೧೨೦, ಬಂಡೇಪುರ,
ಬಂಡೇಪುರ ಕಾಲೋನಿ, ವಿಶ್ವವಿದ್ಯಾಲಯ,
ಗುಲಬರ್ಗಾ – ೫೮೫೧೦೫
ದೂರವಾಣಿ : ೦೮೪೭೨-೬೪೫೬೯೧

ಅರವತ್ತೊಂದು ವರ್ಷದ ಹಿರಿಯ ಕಲಾವಿದೆ ಶ್ರೀಮತಿ ಸಿದ್ಧಮ್ಮ ವಾಲೀಕಾರ, ಗುಲಬರ್ಗಾ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲ್ವಾರ ಗ್ರಾಮದವರು.

ಸಾಂಪ್ರದಾಯಿಕ ಹಾಡುಗಾರಿಕೆ ಕಲೆಗಳಿಗೆ ತಮ್ಮ ಕುಟುಂಬದಿಂದಲೇ ಸ್ಫೂರ್ತಿ ಪಡೆದುಕೊಂಡು ಕಲಾಸೇವೆಗೆ ತಮ್ಮನ್ನು ಅರ್ಪಿಸಿಕೊಂಡ ಸಿದ್ಧಮ್ಮ ನಾಡಿನ ಖ್ಯಾತ ಕಲಾವಿದರಲ್ಲೊಬ್ಬರು.

ಜಾನಪದ ಗೀತೆಗಳು, ತತ್ವಪದಗಳು, ಹೈದ್ರಾಬಾದ್ ಕರ್ನಾಟಕ ಭಾಗದ ಜಾನಪದ ಸಂಸ್ಕೃತಿಗೆ ತಮ್ಮ ಶ್ರಮಧಾರೆ ಎರೆದವರು. ಆಕಾಶವಾಣಿ ಹಾಗೂ ಇನ್ನಿತರ ಮಾಧ್ಯಮಗಳಲ್ಲೂ ಅವರು ತಮ್ಮ ಕಲಾವಂತಿಕೆ ಮೆರೆದವರು.

ಅಭಿಮಾನಿಗಳಿಂದ ಪ್ರಶಸ್ತಿಗಳಿಗೆ ಪಾತ್ರರಾಗಿರುವ ಅವರಿಗೆ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ತನ್ನ ಬೆಳ್ಳಿ ಹಬ್ಬದ ಪ್ರಯುಕ್ತ ಅಭಿನಂದಿಸಿದೆ.