ಲೇ|| ಕುರಿಗೊರವಯ್ಯ
ಎಣ್ಣೆಕಟ್ಟೆ, ಚೇಳೂರು ಹೋಬಳಿ
ತುಮಕೂರು ಜಿಲ್ಲೆ.

ರವತ್ತೆಂಟರ ಶ್ರೀಮತಿ ಹನುಮಕ್ಕ, ತುಮಕೂರು ಜಿಲ್ಲೆಯ ಎಣ್ಣೆಕಟ್ಟೆಯವರು. ಸಾಂಪ್ರದಾಯಿಕ ಹಾಡುಗಳಿಗೆ ಹೊಸ ರೂಪ ನೀಡಿ ಜಾನಪದ ಲೋಕದ ಒಂದು ನಕ್ಷತ್ರಕ್ಕೇ ಹೊಳಪಾದವರು.

ತಂದೆ ಯಕ್ಷಗಾನ ಕಲಾವಿದ, ತಾಯಿ ಹಾಡುಗಾತಿ, ಹೀಗೆ ಸಂಗೀತ, ಕಲೆ, ಸಂಪ್ರದಾಯದ ಕುಟುಂಬದಿಂದ ಬಂದಿರುವ ಹನುಮಕ್ಕ ಜಾನಪದ ಹಾಡುಗಳಿಗೇ ದೊಡ್ಡಕ್ಕನೇ ಸರಿ.

ಹನುಮಕ್ಕ ಯಾವುದೇ ವೇದಿಕೆಯಿಂದ ಪ್ರಸಿದ್ಧಿ ಪಡೆಯದೇ ಇದ್ದರೂ ಜಾತ್ರಾ ಮಹೋತ್ಸವ, ಮದುವೆ, ಆರತಿ, ಊರ ಹಬ್ಬ ಇತ್ಯಾದಿಗಳಲ್ಲಿ ತಮ್ಮ ಹಾಡುಗಾರಿಕೆ ಯಿಂದ ಮನ ಸೆಳೆದವರು.

ಬೇಡನಕಟ್ಟೆ ಗ್ರಾಮದ ಈ ಹಿರಿಯ ಪ್ರತಿಭೆಗೆ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ತನ್ನ ಬೆಳ್ಳಿ ಹಬ್ಬದ ಪ್ರಯುಕ್ತ ಸನ್ಮಾನಿಸಿ ಪುರಸ್ಕರಿಸಲು ಮುಂದಾಗಿದೆ.