ಕೃಷ್ಣರಾಜಸಾಗರ

ದೂರ
ತಾಲ್ಲೂಕು ಕೇಂದ್ರದಿಂದ – ೧೫ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೪೦ ಕಿ.ಮೀ.

ಆಧುನಿಕ ಮೈಸೂರು ನಿರ್ಮಾತೃ ಎಂದೇ ಖ್ಯಾತರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲವೇ ಕೃಷ್ಣರಾಜಸಾಗರ ಜಲಾಶಯ ಸರ್.ಎಂ.ವಿಶ್ವೇಶ್ವರಯ್ಯನವರ ತಾಂತ್ರಿಕ ಮಾರ್ಗದರ್ಶನದಲ್ಲಿ ’ಕನ್ನಂಬಾಡಿ’ ಎಂಬಲ್ಲಿ ೧೯೧೧ರಲ್ಲಿ ಆರಂಭವಾದ ಅಣೆಕಟ್ಟೆಯ ಕೆಲಸ ಅಂದಿನ ತಂತ್ರಗಾರಿಕೆಯಿಂದ ಸ್ಥಳೀಯ ಸಂಪನ್ಮೂಲಗಳಾದ ದೊಡ್ಡ ಬಂಡೆಗಳು ಸುಣ್ಣದಗಾರೆ ಚಿಕ್ಕ ಇಟ್ಟಿಗೆ ಮತ್ತು ನೀರು ರಂದ್ರಗಳಿಂದ ಹೊರಹೋಗದಂತೆ ಹಿಗ್ಗುವ “ಸುರ‍್ಕಿ” ಗಾರೆಯನ್ನು ಬಳಸಿ ಕಟ್ಟಲಾಗಿದೆ. ತಳಪಾಯ ೧೧೪ ಅಡಿಗಳಷ್ಟು ಅಗಲವಿದ್ದು, ಅಣೆಕಟ್ಟೆಯ ಮೇಲ್ಮಟ್ಟ ೧೪ ಅಡಿ ಇದೆ. ೨ ರಿಂದ ೩ ತಿರುವುಗಳನ್ನು ಒಳಗೊಂಡಂತೆ “ಎಲ್” ಆಕಾರದಲ್ಲಿ ಅಣೆಕಟ್ಟೆ ವಿಸ್ತರಿಸಿದೆ. ೨.೬ ಕಿ.ಮೀ. ಉದ್ದವನ್ನು ಹೊಂದಿರುವ ಅಣೆಕಟ್ಟು ೧೨೪.೮೪ ಅಡಿ ಎತ್ತರ ಮತ್ತು ೪೯ ಟಿ.ಎಂ.ಸಿ ನೀರು ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ.

 

ಕರಿಘಟ್ಟ

ದೂರ
ತಾಲ್ಲೂಕು ಕೇಂದ್ರದಿಂದ – ೫ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೨೨ ಕಿ.ಮೀ.

ಈ ಗಿರಿಧಾಮವು ಲೋಕಪಾವನಿ ನದಿಯ ತೀರದಲ್ಲಿದ್ದು ಸಮುದ್ರಮಟ್ಟದಿಂದ ೨೬೯೭ಅಡಿಗಳ ಎತ್ತರದಲ್ಲಿದೆ. ಶ್ರೀರಂಗಪಟ್ಟಣದಿಂದ ೫ ಕಿ.ಮೀ ದೂರದಲ್ಲಿದ್ದು ದ್ರಾವಿಡ ವಿನ್ಯಾಸದಲ್ಲಿ ಶ್ರೀ ವೆಂಕಟೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನವು ವಿಜಯನಗರದ ಅರಸರ ಕಾಲದಲ್ಲಿ ಕಟ್ಟಿದ್ದು ೧೭ನೇ ಶತಮಾನದಲ್ಲಿ ಶ್ರೀ ಚಿಕ್ಕದೇವರಾಯ ಒಡೆಯರ್ ಇವರು ವಿಸ್ತಿರಿಸಿರುತ್ತಾರೆ. ೩ನೇ ಮೈಸೂರು ಯುದ್ದವು ೧೭೯೨ರಲ್ಲಿ ಇಲ್ಲಿ ನಡೆಯಿತು. ಈ ಬೆಟ್ಟವು ಚಾರಿತ್ರಿಕ ಐತಿಹಾಸವನ್ನು ಪಡೆದಿದೆ. ಟಿಪ್ಪು ಮತ್ತು ಹೈದರ್‌ನ ಕಾಲದಲ್ಲಿ ಶತ್ರುಗಳನ್ನು ವೀಕ್ಷಿಸಿ ಅವರ ವಿರುದ್ದ ದಾಳಿ ಮಾಡುತ್ತಿದ್ದರು, ದೇವಸ್ಥಾನವು ವಿಸ್ತಾರವಾದ ಪ್ರಾಂಗಣವನ್ನು ಹೊಂದಿದ್ದು ದೇವರ ಧ್ಯಾನ ಹಾಗೂ ಪೂಜೆಗೆ ಸೂಕ್ತವಾದ ಸ್ಥಳವಾಗಿರುತ್ತದೆ.

 

ರಂಗನತಿಟ್ಟು ಪಕ್ಷಿಧಾಮ

ದೂರ
ತಾಲ್ಲೂಕು ಕೇಂದ್ರದಿಂದ – ೩ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೨೮ ಕಿ.ಮೀ.

ಶ್ರೀರಂಗಪಟ್ಟಣಕ್ಕೆ ಹತ್ತಿರದಲ್ಲಿರುವ ರಂಗನತಿಟ್ಟು ಪಕ್ಷಿಧಾಮವು ಪ್ರಪಂಚದಲ್ಲಿಯೇ ಪ್ರಖ್ಯಾತಿ ಪಡೆದಿದೆ. ಇದು ಶ್ರೀರಂಗಪಟ್ಟಣದಿಂದ ೩ ಕಿ.ಮೀ. ದೂರಲ್ಲಿದ್ದು ಸಣ್ಣದ್ವೀಪವಾಗಿದೆ. ಕಾವೇರಿ ನದಿಯ ಮಧ್ಯಭಾಗದಲ್ಲಿದೆ. ವಿವಿಧ ಜಾತಿಯ ಬಣ್ಣದ ಪಕ್ಷಿಗಳು ಪ್ರಪಂಚದ ಎಲ್ಲಾ ಕಡೆಯಿಂದ ಮೇ ತಿಂಗಳಲ್ಲಿ ಬರುತ್ತವೆ. ಗೂಡು ಕಟ್ಟಿ ಮೊಟ್ಟೆ ಇಟ್ಟು ವಂಶಾಭಿವೃದ್ದಿ ಮಾಡಿಕೊಂಡು ತಮ್ಮ ದೇಶಗಳಿಗೆ ವಾಪಸ್ಸಾಗುತ್ತವೆ. ಮದ್ದೂರು ತಾಲ್ಲೂಕಿನ ಕೊಕ್ಕರೆಬೆಳ್ಳೂರು ಮತ್ತು ಚುಂಚನಗಿರಿ ಬೆಟ್ಟದಲ್ಲಿ ನವಿಲುಗಳ ತಾಣವನ್ನು ನೋಡಬಹುದು.

 

ದರಿಯಾ ದೌಲತ್ (ಟಿಪ್ಪು ಅರಮನೆ)

ದೂರ
ತಾಲ್ಲೂಕು ಕೇಂದ್ರದಿಂದ – ೨ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೨೭ ಕಿ.ಮೀ.

ದರಿಯಾ ದೌಲತ್ (ಟಿಪ್ಪು ಅರಮನೆ) ಈ ಅರಮನೆಯು ಇಂಡೋ ಇಸ್ಲಾಮಿಕ್ ವಿನ್ಯಾಸದಲ್ಲಿ ಕಟ್ಟಡ ನಿರ್ಮಿತವಾಗಿದೆ. ಇದು ಟಿಪ್ಪುವಿನ ಬೇಸಿಗೆಯ ಅರಮನೆಯಾಗಿದೆ. ದರಿಯಾದೌಲತ್ ಎಂದು ಕರೆಯುತ್ತಾರೆ. ೧೭೮೪ರಲ್ಲಿ ಕಟ್ಟಲಾಗಿದ್ದು ಕಟ್ಟಡವು ಆಯತಾಕಾರದಲ್ಲಿ ಕಟ್ಟಿದೆ. ಪ್ರತಿಯೊಂದು ಗೋಡೆ ಕಂಬಗಳು ಕಮಾನುಗಳು ವೈವಿಧ್ಯಮಯ ಬಣ್ಣದ ಕಲಾಕೃತಿಗಳಿಂದ ಕೂಡಿದೆ.  ಟಿಪ್ಪುವಿಗೆ ಸಂಬಂಧಪಟ್ಟ ವಸ್ತುಗಳನ್ನು ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ. ಬತೇರಿ, ಟಿಪ್ಪು ಸಮಾಧಿ ಘೋಸಾಯ್‌ಘಾಟ್ ನೋಡಬಹುದು.

 

ಟಿಪ್ಪು ಸಮಾಧಿ

ದೂರ
ತಾಲ್ಲೂಕು ಕೇಂದ್ರದಿಂದ – ೦ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೨೫ ಕಿ.ಮೀ.

ಬ್ರಿಟಿಷರನ್ನು ಈ ರಾಷ್ಟ್ರದಿಂದ ತೊಲಗಿಸಬೇಕೆಂದು ಅವರ ವಿರುದ್ಧ ಸಂಘಟಿತರಾಗಿ ಹೋರಾಟವನ್ನು ಮೊದಲ ಬಾರಿಗೆ ಮಾಡಿದವರು ಹೈದರಾಲಿ ಮತ್ತು ಆತನ ಮಗ ಟಿಪ್ಪು ಸುಲ್ತಾನ ಕ್ರಿ.ಶ. ೧೭೯೯ರಲ್ಲಿ ನಡೆದ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಸೈನಿಕರ ಗುಂಡಿಗೆ ಟಿಪ್ಪುಸುಲ್ತಾನ ಮಡಿದ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲಾಗಿದೆ.

 

ಕೃಷ್ಣರಾಜಸಾಗರ ಉದ್ಯಾನವನ

ದೂರ
ತಾಲ್ಲೂಕು ಕೇಂದ್ರದಿಂದ – ೧೫ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೪೦ ಕಿ.ಮೀ.


ಮೈಸೂರು ಮಜಾರಾಜರಾದ ನಾಲ್ವರಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನ್ ಸರ್. ಎಂ. ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಫಲವಾಗಿ ಕನ್ನಂಬಾಡಿ ಅಣೆಕಟ್ಟು ನಿರ್ಮಾಣಗೊಂಡಿತು. ಅಣೆಕಟ್ಟಿನ ಮುಂಭಾಗದಲ್ಲಿ ವಿಶಾಲವಾಗಿದ್ದ ಪ್ರದೇಶದಲ್ಲಿ ದಿವಾನ್ ಮಿರ್ಜಾ ಇಸ್ಮಾಯಿಲ್ ರವರು ಸುಂದರವಾದ ಉದ್ಯಾನವನ್ನು ನಿರ್ಮಿಸಿದರು ಇಂದು ಕೃಷ್ಣರಾಜಸಾಗರ ಬೃಂದಾವನ ಉದ್ಯಾನವನವು ಜಗದ್ವಿಖ್ಯಾತವಾಗಿದ್ದು ಅಲ್ಲಿನ ಸಂಗೀತ ನೃತ್ಯ ಕಾರಂಜಿ ದೇಶ ವಿದೇಶಗಳ ಪ್ರವಾಸಿಗರ ಮನಸೂರೆಗೊಂಡಿದೆ.

 

ಬಲಮುರಿ

ದೂರ
ತಾಲ್ಲೂಕು ಕೇಂದ್ರದಿಂದ – ೧೩ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೪೦ಕಿ.ಮೀ.

ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದಿಂದ ೨ ಕಿ.ಮೀ. ಅಂತರದಲ್ಲಿರುವ ರಮಣೀಯವಾದ ಪ್ರೇಕ್ಷಣೀಯ ಸ್ಥಳವೇ ಬಲಮುರಿ ಕಾವೇರಿ ನದಿಗೆ ಅಡ್ಡಲಾಗಿ ಒಡ್ಡುಗಳನ್ನು ನಿರ್ಮಿಸಿದ್ದು ನೀರು ಜಾರುಗುಪ್ಪೆಯಾಕಾರದಲ್ಲಿ ಹರಿದು ಹೋಗುತ್ತದೆ.

 

ಶ್ರೀ ನಿಮಿಷಾಂಭ ದೇವಾಲಯ

ದೂರ
ತಾಲ್ಲೂಕು ಕೇಂದ್ರದಿಂದ – ೨ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೨೮ ಕಿ.ಮೀ.

ಶ್ರೀರಂಗಪಟ್ಟಣ ಗಂಜಾಂನಲ್ಲಿರುವ ಶ್ರೀ ನಿಮಿಷಾಂಭ ದೇವಾಲಯವು ತುಂಬಾ ಪ್ರಸಿದ್ಧವಾಗಿದೆ. ಲಕ್ಷ್ಮೀ ಸಹಿತ ನಾರಾಯಣ, ಮೌಕ್ತಿಕೇಶ್ವರ, ಆಂಜನೇಯ ಹಾಗೂ ಸೂರ್ಯನಾರಾಯಣಸ್ವಾಮಿಯನ್ನೊಳಗೊಂಡ ಶ್ರೀ ಚಕ್ರ ಸಹಿತವಾದ ಈ ದೇವಾಲಯವು ಹಲವು ಐತಿಹ್ಯಗಳನ್ನು ಹೊಂದಿದ್ದು ಕಾವೇರಿ ನದಿಯ ದಡದಲ್ಲಿದೆ.

 

ಶ್ರೀರಂಗನಾಥಸ್ವಾಮಿ ದೇವಾಲಯ

ದೂರ :
ತಾಲ್ಲೂಕು ಕೇಂದ್ರದಿಂದ – ೦ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೨೫ ಕಿ.ಮೀ.

ಶ್ರೀರಂಗಪಟ್ಟಣ ಶ್ರೀರಂಗನಾಥ ಸ್ವಾಮಿ ದೇವಾಲಯದಲ್ಲಿ ಪವಡಿಸಿರುವ ಭಂಗಿಯಲ್ಲಿರುವುದರಿಂದಲೇ “ರಂಗ” ಎಂಬ ಹೆಸರು ಬಂದಿದೆ. ಪವಡಿಸಿರುವ ಶ್ರೀ ರಂಗನಾಥ ೧೫ ಅಡಿಗಳಿದ್ದು, ………. ಮೇಲೆ ಪವಡಿಸಿದ್ದಾನೆ. ಈ ವಿಗ್ರಹದ ಪಾದದ ಕೆಳಗೆ ಗೌತಮ ವಿಗ್ರಹವಿದೆ. ವ್ಯಾಸರಾಯರು ಪ್ರತಿಷ್ಠಾಪಿಸಿದ ಶ್ರೀನಿವಾಸ ವಿಗ್ರಹವಿದೆ. ರಾಮಕೃಷ್ಣ, ನರಸಿಂಹ ಮಂತಾದವರು ತಂದು ಪ್ರತಿಷ್ಠಾಪಿಸಿರುವ ವಿಗ್ರಹಗಳಿವೆ.

 

ಗುಂಬಜ್

ದೂರ
ತಾಲ್ಲೂಕು ಕೇಂದ್ರದಿಂದ – ೨ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೨೭ ಕಿ.ಮೀ.

ಶ್ರೀರಂಗಪಟ್ಟಣದಿಂದ ೩ ಕಿ.ಮೀ. ದೂರದಲ್ಲಿ ಕಾವೇರಿ ನದಿಯು ಎರಡು ಕವಲಾಗಿ, ಒಡೆದು ಮುಂದೆಸಾಗಿ ಒಂದಾಗಿ ಸೇರುವ ಸಂಗಮದ ತಟದಲ್ಲಿರುವ ಟಿಪ್ಪುಸುಲ್ತಾನ್, ಹೈದರಾಲಿ ಮತ್ತು ಅವರ ಕುಟುಂಬ ಸದಸ್ಯರ ಸಮಾಧಿಗಳಿರುವ ಸ್ಮಾರಕ ಸ್ಥಳ. ಗೋಳವಾದ ಗುಮ್ಮಟಾದಾಕಾರದಲ್ಲಿರುವ ಸ್ಮಾರಕವೇ ’ಗುಂಬಜ್’ ಎನಿಸಿಕೊಂಡಿದೆ. ಕಪ್ಪು ಅಮೃತಶಿಲೆಗಳ ಕಂಬಗಳ ಪ್ರಾಂಗಣವನ್ನು ಒಳಗೊಂಡಿರುವ ಈ ಸುಂದರ ಕಟ್ಟಡದ ಒಳಗೆ ಹೈದರಾಲಿ ಟಿಪ್ಪುಸುಲ್ತಾನ್ ಮತ್ತು ಟಿಪ್ಪುವಿನ ತಾಯಿಯ ಸಮಾಧಿ ಇದೆ. ಹೊರ ಪ್ರಾಂಗಣದಲ್ಲಿ ಟಿಪ್ಪುವಿನ ಸಾಕುತಾಯಿ, ಚಿಕ್ಕಮ್ಮಂದಿರು, ಚಿಕ್ಕಪ್ಪ ಹೈದರಾಲಿಯ ಸಹೋದರಿ ಇತ್ಯಾದಿ ಪ್ರಮುಖರ ಸಮಾಧಿಗಳಿವೆ. ಹೊರವಲಯದಲ್ಲಿ ವೀರಸೈನಿಕರು, ಮಂತ್ರಿಗಳು ಅವರ ರಾಜಗುರು ಇವರ ಸಮಾಧಿಗಳಿವೆ ೧೭೮೪ನೇ ಇಸವಿಯಲ್ಲಿ ಟಿಪ್ಪುಸುಲ್ತಾನ್ ಇದನ್ನು ನಿರ್ಮಿಸಿದನೆಂದು ಹೇಳಲಾಗಿದೆ.