ಶ್ರೀರಂಗರು ೧೯೦೪ ರಲ್ಲಿ ಬಿಜಾಪುರ ಜಿಲ್ಲೆಯ ಅಗರಖೇಡದಲ್ಲಿ ಜನಿಸಿದರು. ಇವರ ಹೆಸರು ಅದ್ಯರಂಗಾಚಾರ್ಯ. ಶ್ರೀ ರಂಗ ಎಂಬುದು ಅವರ ಕಾವ್ಯನಾಮ. ಸಂಸ್ಕೃತ ಅದ್ಯಾಪಕರಾಗಿ ವೃತ್ತಿಜೀವನ ಪ್ರಾರಂಬಿಸಿದ ಇವರು ಪ್ರಸಿದ್ದ ಕಾದಂಬರಿಕಾರರು, ನಾಟಕಕಾರರು, ಕವಿಗಳೂ, ವಿಮರ್ಶಕರೂ, ಆಗಿ ಕನ್ನಡ ಸಾಹಿತ್ಯಕ್ಕೆ ತಮ್ಮ ಕೃತಿಗಳನ್ನು ನೀಡುವ ಮೂಲಕ ಸಂವೃದ್ದಿಯನ್ನು ತಂದಿದ್ದಾರೆ. ಸಾಮಾಜಿಕ ಸಮಸ್ಯೆಗಳನ್ನು ಎತ್ತಿಕೊಂಡು ಆ ಸಮಾಜದಲ್ಲಿ ಕಂಡುಬರುವ ಲೋಪದೋಷಗಳನ್ನು, ಅವಗುಣಗಳನ್ನು, ವಿಶ್ಲೇಷಿಸಿ ಅವನ್ನು ಕಟು ಟೀಕೆಗೆ ಒಳಗುಮಾಡಿ ಕುರುಡು ಸಮಾಜದ ಕಣ್ಣಿಗೆ ಅಂಜನ ಹಚ್ಚಿ ಅದರ ದೃಷ್ಟಿಯನ್ನು ಸರಿಪಡಿಸಲು ಹೊರಟ ವಿಚಾರಶೀಲ ನಾಟಕಕಾರರಲ್ಲಿ ಶ್ರೀರಂಗರು ಅಗ್ರಗಣ್ಯರು.

‘ಹರಿಜನ್ವಾರ, ಸಂಸಾರಿಗ ಕಂಸ, ನರಕದಲ್ಲಿ ನರಸಿಂಹ, ಪ್ರಪಂಚ ಪಾಣಿಪತ್ತು, ಕೇಳುಜನಮೇಜಯ, ರಂಗಭಾರತ, ಸ್ವರ್ಗಕ್ಕೆ ಮೂರೇ ಬಾಗಿಲು, ಇವು ಅವರ ನಾಟಕಗಳು. ಹರಿಜನ್ವಾರ, ದಲ್ಲಿ ಸ್ವಂತ ಯೋಗ್ಯತೆಯಿಲ್ಲದೆ ಇಲೆಕ್ಷನ್ನಿಗೆ ನಿಂತು ದೊಡ್ಡವರಾಗಬೇಕೆಂಬ ಹಂಬಲವುಳ್ಳ ದೊಡ್ಡರಾಯರು ಅನೇಕ ದ್ವಂದ್ವಗಳ ಮೂರ್ತಿಯಾಗಿದ್ದಾರೆ.

ಜೀವನದ ಮೌಲ್ಯಗಳೆಲ್ಲ ವಿಪರೀತ ಅರ್ಥವನ್ನು ಪಡೆದಿರುವುದನ್ನು ಇಲ್ಲಿ ಕಾಣಬಹುದು. ಜೀವನದ ಸಂಕೀರ್ಣತೆ ಕಲಾತ್ಮಕವಾಗಿ ತೆರೆಯುತ್ತ ಹೋಗುವುದನ್ನು ಸಂಸಾರಿಗಕಂಸ, ದಲ್ಲಿ ಕಣಬಹುದು. ಹೊರಗೆ ಸಂತಾನ ಸಂಯಮದ ಮೇಲೆ ದೀರ್ಘಭಾಷಣ ಮಾಡುವ ಶೀನಣ್ಣರಾಯರ ಮನೆಯ ಜೀವನದ ವಿರೋಧಾಭಾಸ ಅದರೆ ಹಾಸ್ಯವನ್ನು ಮರೆಯಿಸುವಷ್ಟು ಘೋರವಾಗಿದೆ. ಪ್ರಪಂಚ ಪಾಣೀಪತ್ರ, ದಲ್ಲಿ ಶ್ರೀಪತಿ ಹೊಸ ಬಗೆಯ ದುರಂತ ನಾಯಕನಾಗಿ ಕಾಣುತ್ತಾನೆ. ಅಣ್ಣ ತಮ್ಮಂದಿರು ಪಾಲಾಗಬೇಕಾದಾಗ ಒಂದು ಸಹಜ ಸಂಗತಿ ಒಂದು ಸಮಸ್ಯೆಯಾಗಿ ಪರಿಣಮಿಸುತ್ತದೆ. ಹೀಗೆ ಕಲಿತ, ಕಲಿಯುವ, ಅರ್ಧಕಲಿತ, ವ್ಯಕ್ತಿಗಳೆಲ್ಲಾ ಯಾವುದೋ ಮೂಲಭೂತ ಅಜ್ಞಾನವೇ ಸಿಕ್ಕಿ ಬೇಗುದಿಗೊಳ್ಳುವುದನ್ನು ಈ ನಾಟಕಗಳಲ್ಲಿ ಕಾಣಬಹುದು.

ಶ್ರೀರಂಗರ ಕಾದಂಬರಿಗಳು ಬುದ್ದಿವಂತಿಕೆಯ ಇನ್ನೊಂದು ಮಗ್ಗುಲನ್ನು ತೋರಿಸುತ್ತದೆ. ‘ವಿಶ್ವಾಮಿತ್ರನ ಸೃಷ್ಟಿ, ಪುರುಷಾರ್ಥ, ಅನಾದಿ, ಪ್ರಕೃತಿ, ಪುರುಷಿ, ಇವು ಅವರ ಕಾದಂಬರಿಗಳು. ವಿಶ್ವಾಮಿತ್ರನಸೃಷ್ಟಿ, ಯಲ್ಲಿ ಮನಸ್ಸಿಗೊಲ್ಲದ ಮದುವೆಯನ್ನು ಬಿಟ್ಟು ಓಡಿ ಬಂದ ಒಬ್ಬ ತರುಣನ ಅನುಭವ ಪರಂಪರೆಯ ಚಿತ್ರವಿದೆ. ಪುರುಷಾರ್ಥ, ಪ್ರಥಮ ಸ್ವಾತಂತ್ರ್ಯ ದಿನವನ್ನು ಹಿನ್ನೆಲೆಗಿಟ್ಟುಕೊಂಡ ಕೃತಿಯಾಗಿದೆ. ಮನುಷ್ಯ ಜೀವನವನ್ನು ಬೇರೆ ಬೇರೆ ದೃಷ್ಟಿಕೊನಗಳಿಂದ ಬಿನ್ನ ಸನ್ನಿವೇಶಗಳಲ್ಲಿ ನೋಡುವುದು ಇವರ ಕಾದಂಬರಿಗಳಲ್ಲಿ ಸಾಧ್ಯವಾಗಿದೆ.

ಶ್ರೀರಂಗರು ಶ್ರೇಷ್ಠ ನಾಟಕಕಾರರಾಗಿರುವಂತೆ ಒಳ್ಳೆಯ ನಟರು ಹಾಗೂ ನಾಟಕ ನಿರ್ದೇಶಕರೂ ಕೂಡ ನಾಟಕ ಕಲೆ ಇವರ ಅತ್ಯಂತ ಪ್ರಿಯ ಹವ್ಯಾಸ. ಉತ್ತರ ಕರ್ನಾಟಕದಲ್ಲಿ ವಿಲಾಸಿ ನಾಟಕರಂಗವನ್ನು ಬೆಳೆಸಿದರು. ಇವರು ಭಾರತ ಸರ್ಕಾರದ ವಾರ್ತೆ ಹಾಗೂ ನಾಟಕ ವಿಭಾಗದ ಸಾಹಿತ್ಯ ಶಾಖಾದಿಕಾರಿಯಾಗಿದ್ದರು. ಇವರಿಗೆ ಕೇಂದ್ರ ಸರ್ಕಾರದಿಂದ ೧೯೭೧ ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ. ವಿಶ್ವಾಮಿತ್ರನ ಸೃಷ್ಟಿ, ಕನ್ನಡದಲ್ಲಿ ಮೊದಲ ನವ್ಯತೆಯನ್ನೊಳಗೊಂಡ ಕಾದಂಬರಿ. ೧೯೮೪ ರಲ್ಲಿ ಇವರು ನಿಧನ ಹೊಂದಿದರು.