[ಶ್ರೀ ರಾಮಕೃಷ್ಣ ಪರಮಹಂಸರ ಈ ಅನುಭವವನ್ನು ಹೇಗೆ ಕೆಳಗೆ ಕೊಟ್ಟಿರುವ ಶ್ರೀ ಅರವಿಂದರ ಅನುಭವದೊಡನೆ ಹೋಲಿಸಿನೋಡಿ. ಹಾಗೆಯೇ ಶ್ರೀ ರಾಮಕೃಷ್ಣರ  ಅಂತರಂಗ ಶಿಷ್ಯರಲ್ಲಿ ಒಬ್ಬರಾಗಿದ್ದು ಶ್ರೀರಾಮಕೃಷ್ಣರ ಮಹಾಸಂಘದ ಮಹಾಧ್ಯಕ್ಷರಾಗಿದ್ದ ಶ್ರೀಮತ್ ಸ್ವಾಮಿ ಶಿವಾನಂದರ ಮಾತುಕತೆಗಳಲ್ಲಿ. ಕನ್ನಡಕ್ಕೆ ಕುವೆಂಪು ಅವರಿಂದ ಅನುವಾದಗೊಂಡಿರುವ “ಗುರುವಿನೊಡನೆ ದೇವರಡಿಗೆ” ಎಂಬ ಗ್ರಂಥದ “ಅದ್ಭುತ ಅತೀಂದ್ರಿಯ ಅನುಭಾವಳಿ”, ಎಂಬ ೧೦೨ ನೆಯ ಅಧ್ಯಾಯದಲ್ಲಿ ಅಭಿವ್ಯಕ್ತವಾಗಿರುವ ಅದ್ಭುತಾನುಭೂತಿಯನ್ನೂ ಪರಿಭಾವಿಸಿ ನೋಡಿ]

Disciple: what happens when the human consciousness is replaced by the Divine Consciousness?

Sri Aurobindo: One feels perpetual calm. perpetual strength – one is aware of Infinity, lives not only in Infinity but in  Eternity One feels the immortality and does not care death of the body, and one has the Consciousness of the ONE in all. Everything becomes the mainfestation of the Brahman – it is not thinking. it is a concrete experience – even the wall, the book, is Brahman. I see you not as X, but as a divine being in the Divine, It is a wonderful experience

ಶಿಷ್ಯನ ಪ್ರಶ್ನೆ: ಮಾನವ ಪ್ರಜ್ಞೆಯ ಸ್ಥಾನದಲ್ಲಿ ಬ್ರಾಹ್ಮೀದಿವ್ಯ ಪ್ರಜ್ಞೆ ಸ್ಥಾಪಿತವಾದಾಗ ಏನಾಗುತ್ತದೆ?

ಶ್ರೀ ಅರವಿಂದರು: ನಿರಂತರ ಶಾಂತಿ, ನಿರಂತರ ಶಕ್ತಿ ಅನುಭವಕ್ಕೆ ಬರುತ್ತದೆ. ಅನಂತತೆ ಪ್ರಜ್ಞಾಗೋಚರವಾಗುತ್ತದೆ; ಅನಂತತೆಯಲ್ಲಿ ಮಾತ್ರವೆ ಅಲ್ಲ, ತ್ರಿಕಾಲಾತೀತ ನಿತ್ಯತೆಯಲ್ಲಿಯೂ ಇದ್ದೇವೆ ಎಂಬುದು ಅನುಭವಕ್ಕೆ ಬರುತ್ತದೆ. ಅಮೃತತ್ತ್ವದ ಸಾಕ್ಷಾತ್ಕಾರವಾಗಿ ಶರೀರದ ಅವಸಾನವನ್ನು ಲೆಕ್ಕಿಸವುದೆ ಇಲ್ಲ. ಅಲ್ಲದೆ ಸರ್ವದಲ್ಲಿಯೂ ಏಕದ ಪ್ರತ್ಯಕ್ಷಾನುಭವವಾಗುತ್ತಿರುತ್ತದೆ. ಸರ್ವವೂ ಪರಬ್ರಹ್ಮದ ಆವಿರ್ಭೂತಿಯಾಗುತ್ತದೆ. ಉದಾಹರಣೆಗೆ, ನಾನು ಈಗ ಈ ಕೊಠಡಿಯ ಸುತ್ತ ಕಣ್ಣು ಹಾಯಿಸಿದಂತೆಲ್ಲ ನನಗೆ ಎಲ್ಲವೂ ಸಾಕ್ಷಾತ್ ಬ್ರಹ್ಮವಾಗಿಯೆ ಅನುಭವಕ್ಕೆ ಬರುತ್ತದೆ, – ಅದು ಆಲೋಚನೆ ಮಾಡುವ ರೀತಿಯದಲ್ಲ, ವಸ್ತುನಿಷ್ಠ ಘನ ಅನುಭವವಾಗಿ, – ಆ ಗೋಡೆ, ಆ ಪುಸ್ತಕ ಅವೂ ಬ್ರಹ್‌ಮವೆ. ನಾನು ನಿನ್ನನ್ನೂ ” ದೇವದತ್ತ” ನನ್ನಾಗಿ ನೋಡುವುದಿಲ್ಲ. ಭಗವಲ್ಲೀನವಾಗಿ ಭಗವಂತನ ಅಂಶವಾಗಿರುವ ಒಂದು ದಿವ್ಯ ಜೀವಾತ್ಮನನ್ನಾಗಿಯೆ ಕಾಣುತ್ತೇನೆ. ಅದೊಂದು ಅದ್ಭುತಾನುಭವ!