ಅವತಾರ ವರಿಷ್ಠರೂ, ಋಷಿಪುಂಗವರೂ ಆದ ಶ್ರೀರಾಮಕೃಷ್ಣರ ಜೀವನ ಚರಿತ್ರೆಯನ್ನು ಕನ್ನಡದ ಕವಿಶ್ರೇಷ್ಠರೂ ರಸಋಷಿಗಳೂ ಆದ ಶ್ರೀ ಕುವೆಂಪು ಅವರು ಬರೆದಿರುವುದು ಕನ್ನಡಿಗರ ಸೌಭಾಗ್ಯವೆಂದೇ ಹೇಳಬಹುದು. ಶ್ರೀರಾಮಕೃಷ್ಣರ ಅದ್ಭುತ ಸಮನ್ವಯಾತ್ಮಕ ಜೀವನ ಗೀತೆಯನ್ನು ಕುವೆಂಪುರವರು ತಮ್ಮ ಅನ್ಯಾದೃಶ ಕಾವ್ಯಮಯ ಶೈಲಿಯಲ್ಲಿ ಬರೆದು ಹಾಡಿರುವರು. ಇದುವರೆಗೂ ಈ ಅಪೂರ್ವ ಕೃತಿಯು ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಮೂಲಕ ಪ್ರಕಟವಾಗುತ್ತಿತ್ತು. ಕುವೆಂಪುರವರು ಬರೆದಿರುವ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯು ರಾಮಕೃಷ್ಣ ಆಶ್ರಮದಿಂದಲೇ ಪ್ರಕಟವಾಗುತ್ತಿರುವುದರಿಂದ ಈ ಕೃತಿಯೂ ಆಶ್ರಮದಿಂದಲೇ ಪ್ರಕಟವಾಗುವುದು ಉಚಿತವೆಂದು ಭಾವಿಸಿ ನಾವೀಗ ಇದರ ಪ್ರಕಟಣೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೇವೆ.

ಇದನ್ನು ಪ್ರಕಟಿಸಲು ಅನುಮತಿಯನ್ನು ನೀಡಿರುವ ಮೈಸೂರು ವಿಶ್ವವಿದ್ಯಾನಿಲಯದವರಿಗೂ ಶ್ರೀ ಕುವೆಂಪುರವರ ಕುಟುಂಬವರ್ಗದವರಿಗೂ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.

ಅಧ್ಯಕ್ಷರು