ನಿವೃತ್ತ ಪ್ರಾಧ್ಯಾಪಕ
“ಒಲುಮೆ’’ ಅಡ್ಕ
ಕೋಟೆಕಾರು ದ.ಕ. – ೫೭೫ ೦೨೨.
ದೂರವಾಣಿ : ೦೮೨೪-೨೪೬೭೭೫೫

 

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕೋಟಿಕಾರು ಗ್ರಾಮದ ಅಮೃತ ಸೋಮೇಶ್ವರ ನಾಡಿನ ಜಾನಪದ ನಿಧಿ ಸಂಗ್ರಹ ಮಾಡುವಲ್ಲಿ ಹೆಸರಾದವರು.

ಕ್ಷೇತ್ರಗಳ ಸುತ್ತಿ ಅಪಾರ ಅಧ್ಯಯನಕ್ಕೆ ಚಾಲನೆ ನೀಡಿದ ಅಮೃತ ಸೋಮೇಶ್ವರ ತುಳು ಸಂಸ್ಕೃತಿ ಹಾಗೂ ಕನ್ನಡ ಜಾನಪದ ಲೋಕಕ್ಕೆ ಹೊಸ ಮೆರುಗು ನೀಡಿ ತಮ್ಮ ಕುಶಲತೆ ಮೆರೆದಿದ್ದಾರೆ.

ಜಾನಪದ ವಸ್ತುಗಳನ್ನು ಆಧರಿಸಿದ ಹಲವಾರು ಯಕ್ಷಗಾನ ಹಾಗೂ ನಾಟಕಗಳನ್ನು ರಚಿಸಿರುವ ಅವರಿಗೆ ಸಾಂಪ್ರದಾಯಿಕ ವಿಷಯಗಳ ಬಗ್ಗೆ ಹೆಚ್ಚಿನ ಒಲವಿದೆ. ಅಮೃತ ಸೋಮೇಶ್ವರ ಅವರು ರಚಿಸಿರುವ ‘ಗೊಂದೊಳು ಪೂಜೆ’ ಎಂಬ ಜನಪದ ನಾಟಕ ಇಡೀ ತುಳು ನಾಡಿನಲ್ಲಿ ಮನೆ ಮಾತಾಗಿದೆ.

ತುಳು ಪಾಡ್ಡದ ಕಥೆಗಳು, ತುಳು ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ಹಿಡಿದ ಕನ್ನಡಿಯಾಗಿವೆ ಜಾನಪದ ಕಲೆ, ಸಾಹಿತ್ಯ ಸಂಗ್ರಹಿಸುವಲ್ಲಿ ಅಪಾರ ಶ್ರಮ ವಹಿಸಿರುವ ಅಮೃತ ಸೋಮೇಶ್ವರ ಅವರ ಬದುಕು ಸಾರ್ಥಕ ಹಾಗೂ ಆದರ್ಶಪ್ರಾಯ.

ಜಾನಪದ ತಜ್ಞ, ಹಿರಿಯ ಸಂಶೋಧಕರಾಗಿರುವ ಅವರಿಗೆ ಜನಮನ್ನಣೆಯೂ ಅಪಾರ.

ಬೆಳ್ಳಿ ಹಬ್ಬದ ಪ್ರಯುಕ್ತ ಈ ಅಭಿನಂದನೆ.