ಪೋ : ಅಂತರವಳ್ಳಿ,
ತಾ. ರಾಣೇಬೆನ್ನೂರು
ಹಾವೇರಿ ಜಿಲ್ಲೆ.

ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಅಂತರವಳ್ಳಿಯ ರಾಮನಗೌಡ ಹನುಮನಗೌಡ ಜೀವನಗೌಡ್ರ, ಗೊಂಬೆಯಾಟದ ಹಿರಿಯ ಚೇತನ.

ಸುಮಾರು ನಾನೂರು ವರ್ಷಗಳಿಂದ ಪಾರಂಪರಿಕವಾಗಿ ಸೂತ್ರದ ಗೊಂಬೆಯಾಟ ಪ್ರದರ್ಶನಕ್ಕೆ ಪ್ರಸಿದ್ಧಿ ಪಡೆದ ಕುಟುಂಬದ ಆರ್.ಎಚ್. ಜೀವನಗೌಡ್ರ, ಗ್ರಾಮೀಣ ಸಾಂಸ್ಕೃತಿಕ ಪರಂಪರೆಗೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದವರು.

ಗೊಂಬೆಗೌಡ್ರು ಎಂಬ ನಾಮಖ್ಯಾತಿ ಪಡೆದಿರುವ ಅವರು ಕರ್ನಾಟಕವಲ್ಲದೇ ವಿವಿಧ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಲಾಪ್ರದರ್ಶನ ನೀಡಿದ್ದಾರೆ. ಯುರೋಪ್ ರಾಷ್ಟ್ರಗಳಲ್ಲೂ ತಮ್ಮ ಗೊಂಬೆ ಪ್ರದರ್ಶನದಿಂದ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಅವರ ಈ ಜೀವನಕಲೆಗೆ ಹಲವಾರು ಪ್ರಶಸ್ತಿಗಳು ಅವರು ಮುಡಿಗೇರಿವೆ.

ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ತನ್ನ ಬೆಳ್ಳಿಹಬ್ಬದ ಪ್ರಯುಕ್ತ ಅವರನ್ನು ಅಭಿನಂದಿಸಿದೆ.