ಮಾಳೇನಹಳ್ಳಿ ಗ್ರಾಮ,
ಸೊಲ್ಲಾಪುರ ಅಂಚೆ, ತರೀಕೆರೆ ತಾಲೂಕು, ಚಿಕ್ಕಮಗಳೂರು ಜಿಲ್ಲೆ.
ಮೊಬೈಲ್ : ೯೯೪೫೦ ೩೨೮೪೨

ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲೂಕು, ಸೊಲ್ಲಾಪುರ ಅಂಚೆ, ಮಾಳೇನಹಳ್ಳಿ ಗ್ರಾಮದ ಎಂ.ಆರ್. ಬಸಪ್ಪ ಚಿಕ್ಕ ವಯಸ್ಸಿನಲ್ಲಿಯೇ ವೀರಗಾಸೆ ಕಲೆಯನ್ನು ಕಲಿಯಲು ಆರಂಭಿಸಿದವರು.

ನೊಲೇನೂರು ರುದ್ರಪ್ಪನವರ ವೀರಗಾಸೆ ಕಲೆಯಿಂದ ಆಕರ್ಷಿತರಾದ ಅವರು ಏಕಲವ್ಯನಂತೆ ವೀರಗಾಸೆಯ ಪಾಂಡಿತ್ಯವನ್ನು ಮೈಗೂಡಿಸಿಕೊಂಡರು.

ಕಲಾವಿದರಾಗಿ ಪರಿಪೂರ್ಣಗೊಂಡ ಎಂ.ಆರ್. ಬಸಪ್ಪ ಹಲವಾರು ಯುವ ಪೀಳಿಗೆಗೆ ಮಾರ್ಗದರ್ಶಕ ಹಾಗೂ ಸ್ಫೂರ್ತಿಯಾದವರು. ಬಹುಮುಖ್ಯವಾಗಿ ತಮ್ಮ ಮಕ್ಕಳಿಗೂ ತಮ್ಮ ಕಲಾವಂತಿಕೆ ಮೂಡಿಬರುವಂತೆ ಮಾಡುವಲ್ಲಿ ಯಶಸ್ವಿಯಾದರು.

ನಾಡಿನ ಹಲವೆಡೆ ತಮ್ಮ ವೀರಗಾಸೆ ಪ್ರದರ್ಶನ ನೀಡಿರುವ ಅವರು, ಮುಂದಿನ ಪೀಳಿಗೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾರೆ. ಕನ್ನಡ ನಾಡು ಇಂತಹ ಕಲಾವಿದರ ಸಾರ್ಥಕ ಸೇವೆಗೆ ಯಾವಾಗಲೂ ಕೃತಜ್ಞವಾಗಿರುತ್ತದೆ.

ಅವರ ಬದುಕು ಹಾಗೂ ಆಶಯಗಳು ಸದಾ ನಮ್ಮಲ್ಲಿ ಹಸಿರಾಗಿರಲಿ.

ಬೆಳ್ಳಿ ಹಬ್ಬದ ಪ್ರಯುಕ್ತ ಅಕಾಡೆಮಿ ಸನ್ಮಾನಿಸುತ್ತದೆ.