Categories
ಪತ್ರಿಕೋದ್ಯಮ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎನ್.ಎಸ್. ಪೊನ್ನಪ್ಪ

ವಾಸ್ತುಶಿಲ್ಪದಲ್ಲಿ ಸ್ನಾತಕೋತ್ತರ ಪದವಿ ಪಡೆದು ವ್ಯಂಗ್ಯಚಿತ್ರಕಾರರಾಗಿರ ಖ್ಯಾತರಾದವರು ಶ್ರೀ ಎನ್.ಎಸ್. ಪೊನ್ನಪ್ಪ ಅವರು, ನಾಡಿನ ಹೆಸರಾಂತ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರಾದ ಪೊನ್ನಪ್ಪ ಕೊಡಗಿನವರು. ಕಾಲೇಜು ದಿನಗಳಿಂದಲೇ ವ್ಯಂಗ್ಯಚಿತ್ರ ಬಿಡಿಸುವ ಹವ್ಯಾಸ ಹಚ್ಚಿಕೊಂಡಿದ್ದ ಪೊನ್ನಪ್ಪ ಷಿಕಾಗೋದಲ್ಲಿ ಅಭ್ಯಾಸ ಮಾಡುತ್ತಿದ್ದಾಗ ವ್ಯಂಗ್ಯಚಿತ್ರಗಳಿಗೆ ಹೆಚ್ಚಿನ ಒತ್ತುಕೊಟ್ಟರು. ಇಂಡಿಯಾ ಟುಡೇನಲ್ಲ ವ್ಯಂಗ್ಯಚಿತ್ರಗಳನ್ನು ಪ್ರಕಟಸಲಾರಂಭಿಸಿದ ಪೊನ್ನಪ್ಪ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರ ಅಂಕಣವನ್ನು ಬರೆಯಲಾರಂಭಿಸಿ ಅದನ್ನ ತಮ್ಮ ವೃತ್ತಿಯನ್ನಾಗಿಸಿಕೊಂಡರು.
ಪೊನ್ನಪ್ಪ ಅವರ ವ್ಯಂಗ್ಯಚಿತ್ರಗಳು ಟೈಮ್ಸ್ ಆಫ್ ಇಂಡಿಯಾ, ಕರೆಂಟ್, ಇಂಡಿಯಾ ಟುಡೇ, ಇಂಡಿಯನ್ ಎಕ್ಸ್ಪ್ರೆಸ್ ಹಾಗೂ ವಿದೇಶಿ ನಿಯತಕಾಲಿಕೆಗಳಲ್ಲೂ ಪ್ರಕಟಗೊಳ್ಳುತ್ತಿವೆ.
ದೇಶ-ವಿದೇಶಗಳ ಪತ್ರಿಕೆಗಳು ಸೊನ್ನಪ್ಪನವರ ವ್ಯಂಗ್ಯಚಿತ್ರಗಳನ್ನು ಬಳಸಿಕೊಳ್ಳುತ್ತಿದ್ದು, ಪ್ರತಿಷ್ಠಿತ ಪೆಂಗ್ವಿನ್ ಪ್ರಕಟಿಸಿರುವ ಇಂಡಿಯನ್ ಕಾರ್ಟುನಿಸ್ಟ್, ಜರ್ಮನಿಯ ಥರ್ಲ್ಡ್ವರ್ಲ್ಡ್ ಕಾರ್ಟೂನ್ ಬುಕ್ ಮುಂತಾದ ಕಾರ್ಟೂನ್ ಕೃತಿಗಳಲ್ಲಿ ಸ್ಥಾನ ಪಡೆದಿರುವ ಸೊನ್ನಪ್ಪನವರು ಅಂತರ್ ರಾಷ್ಟ್ರೀಯ ಕಾರ್ಟೂನ್ ಸ್ಪರ್ಧೆಗಳ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದಾರೆ.
ಶ್ರೀ ಎನ್.ಎಸ್. ಪೊನ್ನಪ್ಪ ಅವರು. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಫ್ರಾಂಕ್ ಫರ್ಟ್ ವರ್ಲ್ಡ್ ಕಾರ್ಟೂನಿಸ್ಟ್ ಸ್ಪರ್ಧೆಯಲ್ಲಿ ಸ್ಪರ್ಧೆಯಲ್ಲಿ ಬಹುಮಾನ ಮುಂತಾದ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರು. ನಾಡು ಕಂಡ ಅತ್ಯಂತ ಪ್ರತಿಭಾಶಾಲಿ ವ್ಯಂಗ್ಯಚಿತ್ರಕಾರರು ಶ್ರೀ ಎನ್.ಎಸ್. ಪೊನ್ನಪ್ಪ ಅವರು.