ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಐದು ದಶಕಗಳಿಂದ ಗಮನಾರ್ಹ ಸಾಧನೆ ಮಾಡಿ ಹೆಸರಾದವರು ಶ್ರೀ ಎಸ್.ಆರ್.ರಾಮಸ್ವಾಮಿ ಅವರು.
ಶ್ರೀಯುತರು ಕಳೆದ ೨೯ ವರ್ಷಗಳಿಂದ ‘ಉತ್ಥಾನ’ ಮಾಸಪತ್ರಿಕೆಯ ಮತ್ತು ‘ರಾಷ್ಟೋತ್ಥಾನ ಸಾಹಿತ್ಯ’ ಪ್ರಕಾಶನದ ಪ್ರಧಾನ ಸಂಪಾದಕರು. ಪರಿಸರದ ಬಗ್ಗೆ ಅಪಾರ ಕಾಳಜಿ, ಹಲವು ಪರಿಸರ ಆಂದೋಲನಗಳಲ್ಲಿ ಭಾಗಿ. ಅಭ್ಯುದಯ ಅರ್ಥಶಾಸ್ತ್ರದಲ್ಲಿ ಆಳವಾದ ಪರಿಶ್ರಮವುಳ್ಳ ಅವರು ಜಾಗತೀಕರಣದ ಹಿನ್ನೆಲೆಯಲ್ಲಿ ಬರೆದ ‘ಆರ್ಥಿಕತೆಯ ಎರಡು ಧ್ರುವ’ ಕೃತಿ ಸಕಾಲಿಕ.
ರಾಷ್ಟ್ರ ನೇತಾರ ಸುಭಾಷ್ ಚಂದ್ರ ಬೋಸ್ ಅವರ ಸಮಗ್ರ ಜೀವನ ಚರಿತ್ರೆ ‘ಕೋಲ್ಕಿಂಚು’, ಜಯಪ್ರಕಾಶ್ ನಾರಾಯಣ್, ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜೀವನ ಚರಿತ್ರೆ ಒಳಗೊಂಡಂತೆ ೪೫ ಕೃತಿಗಳ ಲೇಖಕರು.
ಯಾವುದೇ ವಿಷಯವನ್ನು ತಲಸ್ಪರ್ಶಿಯಾಗಿ ನೋಡಿ, ವಿಶ್ಲೇಷಿಸುವ ಚಾಕಚಕ್ಯತೆ ಅವರಿಗುಂಟು. ಡಿವಿಜಿ, ವೀ.ಸೀತಾರಾಮಯ್ಯ ಮೊದಲಾದ ಧೀಮಂತರನ್ನು ಕುರಿತು ಅವರು ಬರೆದ ‘ದೀವಟಿಗೆಗಳು ವ್ಯಕ್ತಿಚಿತ್ರ ಮಾಲೆ ಸಂಗ್ರಹಯೋಗ್ಯ ಕೃತಿ. ಪತ್ರಿಕೋದ್ಯಮದ ಸೇವೆಗಾಗಿ ಆರ್ಯಭಟ ಪುರಸ್ಕಾರ ಪಡೆದಿರುವ ಸಮಾಜಮುಖಿ ಚಿಂತಕರು ಶ್ರೀ ಎಸ್.ಆರ್.ರಾಮಸ್ವಾಮಿ.
Categories