Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎ. ವಿ. ಸೋಮನಾಥ ದೀಕ್ಷಿತ

ಸಾಮವೇದದಲ್ಲಿ ಪರಿಣತಿ ಪಡೆದು ಕಾಲೇಜು ಪ್ರಾಧ್ಯಾಪಕರಾಗಿದ್ದ ಶ್ರೀ ಎ. ವಿ. ಸೋಮನಾಥ ದೀಕ್ಷಿತ್ ಅವರು ಈಗ ಶೃಂಗೇರಿಯ ಶಾರದಾ ಪೀಠದಲ್ಲಿ ಆಸ್ಥಾನ ವಿದ್ವಾಂಸರು.
ಸಾಮವೇದ ಪರೀಕ್ಷೆಗಳ ರಹಸ್ಯಾಂತ ಸಾಮವೇದ, ಶೌತ ಪ್ರಯೋಗ, ಸ್ಮಾರ್ತ ಪ್ರಯೋಗ ಮುಂತಾದ ವಿಭಾಗಗಳಲ್ಲಿ ತೇರ್ಗಡೆಯಾಗಿ ಬೆಂಗಳೂರಿನ ಶ್ರೀ ಚಾಮರಾಜೇಂದ್ರ ಸರ್ಕಾರಿ ಸಂಸ್ಕೃತ ಕಾಲೇಜಿನಲ್ಲಿ ೩೦ ವರ್ಷಗಳ ಕಾಲ ಪಾಠ ಹೇಳಿದವರು ಶ್ರೀ ಎ. ವಿ. ಸೋಮನಾಥ ದೀಕ್ಷಿತ್ ಅವರು.
ಸಾಮವೇದದ ಮೇಲಿನ ಸಂಶೋಧನೆಗೆ ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುವ ಶ್ರೀ ದೀಕ್ಷಿತ್ ಅವರು ಬರೆದ ಸಂಶೋಧನಾತ್ಮಕ ಲೇಖನಗಳು ಹಲವು.
ಅನೇಕ ವೇದ ಸಮ್ಮೇಳನಗಳಲ್ಲಿ ಗೌರವಕ್ಕೆ ಪಾತ್ರರಾಗಿರುವ ಶ್ರೀ ಸೋಮನಾಥ ದೀಕ್ಷಿತ್ ಅವರು ಈಗ ಶೃಂಗೇರಿಯ ದಕ್ಷಿಣಾಶಾಮ್ನಾಯ ಶಾರದಾ ಪೀಠದಲ್ಲಿ ಆಸ್ಥಾನ ವಿದ್ವಾಂಸರಾಗಿದ್ದಾರೆ.