Categories
ಪತ್ರಿಕೋದ್ಯಮ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಐ.ಜೆ.ಎಸ್. ಜಾರ್ಜ್

ಭಾರತೀಯ ಇಂಗ್ಲಿಷ್ ಪತ್ರಕರ್ತರಲ್ಲಿ ಶ್ರೀ ಟಿ.ಜೆ.ಎಸ್. ಜಾರ್ಜ್ ಅವರು ಅಗ್ರಮಾನ್ಯ
ಹೆಸರು ಪಡೆದವರು. ಪತ್ರಿಕೋದ್ಯಮ ಆರಂಭಿಸಿದ್ದು ಮುಂಬೈನ ಫ್ರಿ ಪ್ರೆಸ್ ಜರ್ನಲ್ ಮೂಲಕ. ನಂತರ ಜಾರ್ಜ್ ಅವರು ಹಾಂಗ್ಕಾಂಗ್ನಲ್ಲಿ ‘ಏಷ್ಯಾವೀಕ್’ ನಿಯತಕಾಲಿಕೆ ಆರಂಭಿಸುವ ಮೂಲಕ ಆಂಗ್ಲ ಪತ್ರಿಕೋದ್ಯಮದಲ್ಲಿ ಹೊಸ ಹೆಜ್ಜೆ ಇಟ್ಟರು. ಸರಳ ಹಾಗೂ ನೇರ ಬರವಣಿಗೆಯಿಂದ ಓದುಗರ ಗಮನ ಸೆಳೆದಿರುವ ಜಾರ್ಜ್ ಅವರು ೧೯೮೦ರ ದಶಕದಲ್ಲಿ ಬೆಂಗಳೂರಿನ ಟೈಂಸ್ ಆಫ್ ಡೆಕ್ಕನ್ ಸಲಹೆಗಾರರಾಗಿದ್ದರು. ಇಂಡಿಯನ್ ಎಕ್ಸ್ಪ್ರೆಸ್ನ ಸಲಹೆಗಾರರಾಗಿ ಕಳೆದ ಎರಡು ದಶಕಗಳಿಂದ ದುಡಿಯುತ್ತಿರುವ ಜಾರ್ಜ್ ಅವರು ತಮ್ಮ ನೇರ ನುಡಿ ಹಾಗೂ ಅಭಿಪ್ರಾಯಗಳಿಂದ ಅಧಿಕಾರಸ್ತರನ್ನು ಚುಚ್ಚಿದವರು. ಮುಂಜಾನೆ, ಟೈಂಸ್ ಆಫ್ ಡೆಕ್ಕನ್ ಪತ್ರಿಕೆಗಳ ಪ್ರೇರಕ ಶಕ್ತಿ ಆಗಿದ್ದರು.
ದೇಶವಿದೇಶಗಳ ಪತ್ರಿಕಾ ಸಂಘಟನೆಗಳಲ್ಲಿ ಸಲಹೆಗಾರರಾಗಿರುವ ಜಾರ್ಜ್ ಅವರು ಈಗ ಇಂಡಿಯನ್ ಎಕ್ಸ್ಪ್ರೆಸ್ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿರುವ ಅಂಕಣ ಬಹು ಜನಪ್ರಿಯ. ಇಂಗ್ಲಿಷ್ ಪದಕೋಶದ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಜಾರ್ಜ್ ಅವರು ಭಾರತೀಯ ಆಡುಪದಗಳ ಬಗ್ಗೆ ಶಬ್ದಕೋಶ ರಚಿಸಿದ್ದಾರೆ. ರಾಜಕಾರಣಿ ಕೃಷ್ಣ ಮೆನನ್, ಸಂಗೀತಲೋಕದ ತಾರೆ ಎಂ.ಎಸ್. ಸುಬ್ಬಲಕ್ಷ್ಮೀ, ಚಿತ್ರತಾರೆ ವರ್ಣಸ್ದತ್ ಅವರ ಆತ್ಮಕಥನಗಳನ್ನು ಮನೋಜ್ಞವಾಗಿ ಚಿತ್ರಿಸಿರುವ ಜಾರ್ಜ್ ಮುದ್ರಣ ತಂತ್ರಜ್ಞಾನದ ಬಗ್ಗೆ ಪಲಣಿತರು. ದೇಶವಿದೇಶಗಳ ವೃತ್ತಿ ಸಂಸ್ಥೆಗಳ ಗೌರವಕ್ಕೆ ಪಾತ್ರರಾಗಿರುವ ಶ್ರೀ ಟಿ.ಜೆ.ಎಸ್. ಜಾರ್ಜ್ ಕರ್ನಾಟಕದ ಮಾಧ್ಯಮ ಅಕಾಡಮಿ ಪ್ರಶಸ್ತಿ ಪುರಸ್ಕೃತರು.
ಪತ್ರಿಕೋದ್ಯಮದಲ್ಲಿ ಹೊಸ ಪ್ರಯೋಗಗಳನ್ನು ಮಾಡಿರುವ ಇಂಗ್ಲಿಷ್ ಪತ್ರಕರ್ತರಲ್ಲಿ ಅಪ್ರತಿಮ ಸಾಧನೆ ಮಾಡಿರುವವರು ಶ್ರೀ ಟಿ.ಜೆ.ಎಸ್. ಜಾರ್ಜ್ ಅವರು.