ಗೋಸಾಯಿಗುಡ್ಡ, ಹಂಪಿ-ಹರಿಹರ ರಸ್ತೆ,
ಹರಪನಹಳ್ಳಿ – ೫೬೩೧೩೧,
ದಾವಣಗೆರೆ ಜಿಲ್ಲೆ.
ದೂರವಾಣಿ : ೦೮೩೯೮-೨೮೦೧೪೨.

ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಕುಂಚೂರು ಗ್ರಾಮದ ಕುಂ. ಬಾ. ಸದಾಶಿವಪ್ಪ ಎಪ್ಪತ್ತೆರಡರ ಹಿರಿಯ ಜಾನಪದ ಕಲಾವಿದರು ಹಾಗೂ ಅಧ್ಯಯನಾಸಕ್ತರು.

ಬಾಲ್ಯದಲ್ಲೇ ಭಜನಾ ಪದಗಳಿಂದ ಪ್ರಭಾವಿತರಾಗಿ ನಾಟಕ, ಬಯಲಾಟ, ದೊಡ್ಡಾಟ ಇತ್ಯಾದಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಶಿಕ್ಷಕ ವೃತ್ತಿಯಿದ್ದರೂ ಜನ-ಮನ ಗೆಲ್ಲುವ ಸಾಹಿತ್ಯ ಕೃಷಿಗೆ ಕೈ ಹಾಕಿದವರು.

ಸಂಶೋಧನೆ ಹಾಗೂ ಸರ್ವೇಕ್ಷಣೆಯಲ್ಲೂ ಸದಾಶಿವಪ್ಪ ಉತ್ತಮ ಸೇವೆಗೈದವರು. ಕನ್ನಡದಂತೆ ಇಂಗ್ಲೀಷ್ ಬರಹದಲ್ಲೂ ತಮ್ಮ ಜಾಣ್ಮೆ, ಕುಶಲತೆ ತೋರಿದವರು.

ಜಾನಪದ ಸಾಹಿತ್ಯ, ಶಿಕ್ಷಣ ಸಾಹಿತ್ಯ, ಶಿಷ್ಟ ಸಾಹಿತ್ಯ ಹಾಗೂ ಜಾನಪದ ಕಲೆಗಳ ಕ್ಷೇತ್ರದಲ್ಲಿ ಅವರು ಉತ್ತಮ ಸಾಧನೆಗೈದಿದ್ದಾರೆ.

ಬೆಳ್ಳಿ ಹಬ್ಬದ ಪ್ರಯುಕ್ತ ಅಕಾಡೆಮಿ ಅವರಿಗೆ ಅಭಿನಂದಿಸುತ್ತದೆ.