ವನ್ಯ ಜಗತ್ತಿನ ಅದ್ಭುತಗಳನ್ನು ಕ್ಯಾಮರಾದಲ್ಲಿ ಹಿಡಿದಿಟ್ಟು ಜಾಗತಿಕ ಮಟ್ಟಕ್ಕೆ ಏರಿದ ಕನ್ನಡಿಗ ಜೋಡಿ ಕೃಪಾಕರ್ ಸೇನಾನಿ.
ಪಶ್ಚಿಮ ಘಟ್ಟಗಳ ಪಕ್ಷಿಲೋಕವನ್ನು ಪರಿಚಯಿಸುವ ಛಾಯಾಚಿತ್ರ ಪ್ರದರ್ಶನವನ್ನು ೧೯೮೬ ಹಾಗೂ ೧೯೯೦ರಲ್ಲಿ ವ್ಯವಸ್ಥೆ ಮಾಡಿದ್ದ ಕೃಪಾಕರ್-ಸೇನಾನಿ ಈಗ ಪೂರ್ಣಾವಧಿ ವನ್ಯ ಪ್ರಪಂಚದ ಛಾಯಾಗ್ರಾಹಕರು ಹಾಗೂ ಚಲನಚಿತ್ರ ತಯಾರಕರು.
ಮೈಸೂರಿನಲ್ಲಿ ನೆಲೆನಿಂತ ಕ್ರೀಡಾ ಪತ್ರಕರ್ತ ಬಿ. ಎಸ್. ಕೃಪಾಕರ್ ಹಾಗೂ ಎಂಜಿನಿಯ ಸೇನಾನಿ ಅವರ ಕ್ಯಾಮರಾಗೆ ಸೆರೆಸಿಕ್ಕ ಛಾಯಾಚಿತ್ರಗಳು ದೇಶ ವಿದೇಶಗಳ ಹಲವಾರು ಪ್ರತಿಷ್ಟಿತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ನೀಡಿ ಅ ಅಂತರರಾಷ್ಟ್ರೀಯ ಪ್ರತಿಷ್ಠೆಯ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿರುವ ಭಾರತ ಉಪಖಂಡದ ಪಕ್ಷಿ ಪ್ರಪಂಚದ ಕೃತಿಗಳಲ್ಲಿ ಕೃಪಾಕರ್ ಸೇನಾನಿ ಅವರು ಪಶ್ಚಿಮಘಟ್ಟದ ಪಕ್ಷಿಗಳ ಚಿತ್ರಗಳು ಬಳಕೆಯಾಗಿವೆ.
ನ್ಯಾಷನಲ್ ಜಿಯಾಗ್ರಫಿ, ಬಿ.ಬಿ.ಸಿ., ಡಿಸ್ಕವರಿ, ಚಾನಲ್ ೪ ಟೆಲಿವಿಷನ್ಗಳಿಗೆ ೧೫ಕ್ಕೂ ಹೆಚ್ಚು ವನ್ಯಲೋಕ ಸಾಕ್ಷ್ಯಚಿತ್ರಗಳನ್ನು ತಯಾರಿಸಿರುವ ಕೃಪಾಕರ್ ಸೇನಾನಿ ಕೆ. ಪುಟ್ಟಸ್ವಾಮಿ ಅವರೊಂದಿಗೆ ಬರೆದ ‘ಜೀವಜಾಲ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ.
Categories
ಶ್ರೀ ಕೃಪಾಕರ್
