ಆಟೋಟಗಳ ರೋಮಾಂಚಕ ಕ್ಷಣಗಳನ್ನು ತಮ್ಮ ಕ್ಯಾಮರಾ ಒಳಗಣ್ಣುಗಳಿಂದ ಹಿಡಿದಿಡುತ್ತಿದ್ದ ಶ್ರೀ ಕೆ.ಎನ್. ಶಾಂತಕುಮಾರ್ ಈಗ ಪ್ರಿಂಟರ್ ಪತ್ರಿಕಾ ಸಮೂಹದ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ಸುಧಾ, ಮಯೂರ ಪತ್ರಿಕೆಗಳ ಸಂಪಾದಕರು.
ಪದವಿ ಪಡೆದ ಬಳಿಕ ಕುಟುಂಬ ಸಂಸ್ಥೆ “ದಿ ಪ್ರಿಂಟರ್ (ಮೈಸೂರು) ಪ್ರೈವೇಟ್’ನ ಆಡಳಿತಕ್ಕೆ ಸೇರ್ಪಡೆಯಾದ ಶಾಂತಕುಮಾರ್ ತಂದೆ ನೆಟ್ಟಕಲ್ಲಪ್ಪನವರ ಪ್ರೀತಿಯ ಕ್ಷೇತ್ರವಾಗಿದ್ದ ಕ್ರೀಡೆಗಳತ್ತ ಒಲಿದರು.
ನಿಜ ಭಾಷಿಗಳ ಬದು ಕ್ರೀಡೆಗಳನ್ನು ಕ್ಯಾಮರಾದಿಂದ ಸೆರೆಹಿಡಿಯುವ ಹವ್ಯಾಸ ಬೆಳೆಸಿಕೊಂಡ ಕೆ. ಎನ್. ಶಾಂತಕುಮಾ ಅನೇಕ ಒಲಿಂಪಿಕ್ಸ್ ಹಾಗೂ ಏಷ್ಯನ್ ಗೇಮ್ಸ್ಗಳಲ್ಲಿ ಪಾಲ್ಗೊಂಡು ನೋಡುಗರಿಗೆ ಕ್ರೀಡಾಸವಿ ಉಣಬಡಿಸಿದರು.
ಗಾಲ್ಫ್ ಆಟಗಾರರಾಗಿ ಈಗ ಬೆಂಗಳೂರು ಗಾಲ್ಫ್ ಕ್ಲಬ್ ಕಪ್ತಾನರೂ ಆಗಿರುವ ಶಾಂತಕುಮಾರ್ ಅನೇಕ ಪತ್ರಿಕೆ ಹಾಗೂ ಕ್ರೀಡಾ ಸಂಘಟನೆಗಳ ಒಡನಾಟ ಹೊಂದಿದವರು.
ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಶಾಂತಕುಮಾರ್ ಅವರಿಗೆ ಏಷ್ಯನ್ ಗೇಮ್ಸ್ನ (ಕೊರಿಯಾ) ಭಾರತೀಯ ಗಾಲ್ಫ್ ತಂಡದ ಮ್ಯಾನೇಜರ್ ಆಗಿದ್ದ ಅನುಭವವೂ ಇದೆ.
Categories
ಶ್ರೀ ಕೆ. ಎನ್. ಶಾಂತಕುಮಾರ್
