ಕೆಳಮನೆ,  ಹೆಗ್ಗೋಡು ಅಂಚೆ
ಹೆಬ್ಬರಿಗೆ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ
ದೂರವಾಣಿ : ೦೮೧೮೩-೨೬೫೨೩೩
೦೮೨೦-೨೫೬೧೭೦೦

ವತ್ತಾರರ ಕೆ.ಜಿ. ರಾಮರಾವ್, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಳಮನೆಯವರು.

ಬಾಲ್ಯದಲ್ಲಿ ಯಕ್ಷಗಾನ ಹಾಗೂ ಜಾನಪದ ಕಲೆಗಳಿಗೆ ಮಾರುಹೋಗಿ ಅದರ ಒಳ-ಹೊರಗನ್ನು ಅಧ್ಯಯನ ನಡೆಸಿದ ಕಲಾಸಕ್ತರು.

ಸಾಕೇತ ಸಾಂಸ್ಕೃತಿಕ ಕಲಾ ವೇದಿಕೆಯನ್ನು ಹುಟ್ಟುಹಾಕಿರುವ ಅವರು ಭಾಗವತಿಕೆಯನ್ನು ಕರಗತ ಮಾಡಿಕೊಂಡವರು. ಕೆರೆಮನೆ ಶ್ರೀ ಶಂಭು ಹೆಗಡೆಯವರ ಇಡಗುಂಜಿ ಮೇಳದಲ್ಲೂ ಪಾಲ್ಗೊಂಡು ಸೇವೆ ಸಲ್ಲಿಸಿದವರು.

ಭಾಗವತಿಕೆ, ಹಾಡುಗಾರಿಕೆ, ನಿರ್ದೇಶನ, ಮೇಳಗಳ ಜೊತೆಗಿನ ತಿರುಗಾಟ, ಅಧ್ಯಯನ ಇತ್ಯಾದಿಗಳು ಕೆ.ಜಿ. ರಾಮರಾವ್ ಅವರ  ಹೆಗ್ಗಳಿಕೆಗೆ ಕಾರಣವಾಗಿವೆ.

ಇಂತಹ ನಿತ್ಯ ಕಲಾವಿದರ ಪುರಸ್ಕಾರಕ್ಕೆ ಅಕಾಡೆಮಿಯು ಬೆಳ್ಳಿಹಬ್ಬ ಅವಕಾಶ ಪಡೆದುಕೊಂಡಿದೆ.