ಶ್ರೀ ಗುರುವಿನ ಪಾದ | ಪೂಜೆ ಮಾಡುವ ಜ್ಞಾನ || ಯೋಗಿಣಿಯರೇ ಬನ್ನಿ ಮುದದಿಂದ || || ಶ್ರೀ ಗುರು || ವರ ನಿಮ್ಮ ಲೋಧಕ ದಲಿ ಮಿಂ ಬಸಿತಾವ | ಧರಿಸುತ್ತೇ ವಿಧಿಯಿಂದ ಷಡ್ಲಿಂಗಕ್ಕೇ | ಉರು ತರ ದಿಷ್ಟ ಪ್ರಾಣವು ಬಾವವನು ಕೂಡಿ ತ್ವರಿತದಿಂದಲೀ ಶಿವ ಪೂಜೆಯ ಮುಗಿಸುತ್ತ || ಶ್ರೀ ಗುರುವೆ || ಗುರು ಪಾದ ಕಗ್ಗಣಿ ಅರಿಶಿನ ವಿಭೂತಿ ವರಗಂಧ ಕುಂಕಮ ಪತ್ರೆ ಅಕ್ಷತೆಯ ಪರಿಮಾಳ ಮಾದ | ದೂಪವ ಕೊಡುವ ನಮ್ಮ ಶ್ರೀ ಗುರು ಪಾದದೆಡೆಗೆ | ಸಂತಸದಿಂದಗಮಿಸುತ್ತೇ ಧರೆಯೊಳದಿಕ ರಂಭಾಪುರದೊಳು ನೆಲಸಿಹ ಪರಮ ಸದ್ಗುರು ರೇಣುಕರ ಪಾದಕ್ಕೆ || ಗುರು ಮಂತ್ರದಿಂದಷ್ಟ ವಿದರ್ಚನೆಯಾ ಮಾಡಿ || ಸಿರ ಸಹಿತಲಿ ವಂದನೆಗಳ ನರ್ಮಿಸುತೇ || ಶ್ರೀ ಗುರುವಿನ ಪೂಜೆ ಮಾಡುವ ಜ್ಞಾನ ||
ಶ್ರೀ ಗುರುಪಾದ
By kanaja|2011-08-21T14:38:39+05:30August 21, 2011|ಕನ್ನಡ, ಜಾನಪದ, ಪದ್ಯ ಸಾಹಿತ್ಯ ಪ್ರಕಾರ - ೧೪, ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ - ೨೬|0 Comments
Leave A Comment