ನಂ. ೨/೧, ‘ಸಿ’ ಬೀದಿ, ೨ನೇ ಅಡ್ಡರಸ್ತೆ
ಗೋಪಾಲಪುರ, ಮಾಗಡಿ ರಸ್ತೆ
ಬೆಂಗಳೂರು-೫೬೦ ೦೨೩
ದೂರವಾಣಿ : ೦೮೦-೨೩೩೫೭೭೧೫

ಬೆಂಗಳೂರಿನವರಾದ ಚಿಕ್ಕನರಸಪ್ಪ ತಮಟೆ ವಾದ್ಯದ ಹಿರಿಯ ಕಲಾವಿದರು. ತಮ್ಮ ಬಾಲ್ಯದಿಂದಲೂ ಸುತ್ತಮುತ್ತಲಿನ ಜಾನಪದ ಕಲೆಗಳಿಂದ ಪ್ರಭಾವಿತರಾಗಿ ಜಾನಪದ ಕಲಾವಿದರಾಗಿ ರೂಪಗೊಂಡವರು.

ಜನಸಮುದಾಯದ ಅಭಿವ್ಯಕ್ತಿಯ ಕಲೆಯಾಗಿರುವ ತಮಟೆ ವಾದನ ಗ್ರಾಮೀಣರ ಬದುಕಿನ ಅವಿಭಾಜ್ಯ ಅಂಗವೆನಿಸಿದೆ. ಇಂತಹ ಕಲೆಗಾರಿಕೆಗೆ ಸುಮಾರು ಮೂರು ದಶಕಗಳ ಕಾಲ ತಮ್ಮ ಸೇವೆ ಸಲ್ಲಿಸಿರುವ ಚಿಕ್ಕನರಸಪ್ಪ ನಾಡಿನ ಖ್ಯಾತ ಕಲಾವಿದರಾಗಿ ಬೆಳೆದಿದ್ದಾರೆ.

ಈ ಕಲಾವಿದರ ತಮಟೆ ವಾದ್ಯದ ನೈಪುಣ್ಯತೆ ಗಮನಿಸಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಬೆಳ್ಳಿ ಖಡ್ಗ ನೀಡಿ ಗೌರವಿಸಿದ್ದಾರೆ.

ಇಂತಹ ಹಿರಿಯ ಕಲಾವಿದರ ಸನ್ಮಾನಕ್ಕೆ ಕರ್ನಾಟಕ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ತನ್ನ ಬೆಳ್ಳಿ ಹಬ್ಬದ ಅವಕಾಶ ಬಳಸಿಕೊಂಡಿದೆ.