Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಶ್ರೀ ಜಿ. ಟಿ. ನಾರಾಯಣರಾವ್

ವಿಜ್ಞಾನ ಸಾಹಿತ್ಯ ರಚನೆ ಮತ್ತು ಸಂಗೀತಕ್ಕೆ ಸಂಬಂಧಪಟ್ಟ ಬರೆಹಗಳಲ್ಲ ತೊಡಗಿಸಿಕೊಂಡಿರುವವರು ಶ್ರೀ ಗುಡ್ಡೆಹಿತ್ತು ತಿಮ್ಮಪ್ಪಯ್ಯ ನಾರಾಯಣರಾವ್ ಅವರು. ೧೯೨೬ರಲ್ಲಿ ಮಡಿಕೇಲಿಯಲ್ಲಿ ಜನನ. ಮದರಾಸು ವಿಶ್ವವಿದ್ಯಾನಿಲಯದಿಂದ ೧೯೪೭ರಲ್ಲಿ ಗಣಿತ ಎಂ.ಎ. ಪದವಿ. ಮಂಗಳೂರು, ಮಡಿಕೇಲ, ಬೆಂಗಳೂರುಗಳಲ್ಲಿ ೧೯೪೭ ರಿಂದ ೧೯೬೯ರ ವರೆಗೆ ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಕೆ. ೧೯೬೯ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿ ಸೇವೆ ಸಲ್ಲಿಸಿ ೧೯೮೬ರಲ್ಲಿ ನಿವೃತ್ತಿ . ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಬಗೆಗೆ ಆಳವಾದ ಜ್ಞಾನ. ಸಂಗೀತ ನೃತ್ಯಗಳ ಬಗೆಗೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಅನೇಕ ಲೇಖನಗಳ ರಚನೆ, ‘ಶ್ರುತಗಾನ’ ಸಂಗೀತ ಮತ್ತು ನೃತ್ಯ ಲೇಖನಗಳಿಗೆ ಮೀಸಲಾದ ಕೃತಿ. ಇದರ ವಿಸ್ತ್ರತ ಆವೃತ್ತಿ ‘ಸಂಗೀತ ರಸನಿಮಿಷಗಳು’ ಕೃತಿ.
ಐನ್ಸ್ಟೀನ್ ಬಾಳೆದಲಿಲ್ಲ (ವೈಜ್ಞಾನಿಕ ಜೀವನ ಚಲತ್ರೆ) ಕುವೆಂಪು ದರ್ಶನ ಸಂದರ್ಶನ, (ಕುವೆಂಪು ಕುಲತ ಕೃತಿ) ಕೃಷ್ಣ ವಿವರಗಳು (ಬ್ಲಾಕ್ ಹೋಲ್ಸ್) ಕೊಪರ್ನಿಕಸ್ ಕಾಂತಿ (ಖಗೋಳ ವಿಜ್ಞಾನೇತಿಹಾಸ) ವೈಜ್ಞಾನಿಕ ಮನೋಧರ್ಮ, ಸಪ್ತಸಾಗರದಾಚೆಯಲ್ಲೋ, (ಚಂದ್ರಶೇಖರ್ ದರ್ಶನ, ಸಂವಾದ), ಸುಬ್ರಹ್ಮಣ್ಯನ್ ಚಂದ್ರಶೇಖರ್, (ವೈಜ್ಞಾನಿಕ ಜೀವನ ಚಲತ್ರೆ), ಸೈಂಟಿಫಿಕ್ ಟೆಂಪರ್, ಐತ್ ಗ್ರೇಟ್ ಮೈಂಡ್ಸ್ ಮುಂತಾದವು. ಶ್ರೀ ಜಿ. ಟಿ. ನಾರಾಯಣರಾವ್ ಅವರ ಪ್ರಮುಖ ಕೃತಿಗಳು. ಇಂಗ್ಲಿಷ್ನಿಂದ ಕನ್ನಡಕ್ಕೆ ಹಲವು ಕೃತಿಗಳ ಅನುವಾದಿಸಿದ್ದಾರೆ. ಕನ್ನಡ ಸಾಹಿತ್ಯ ಪಲಷತ್ತು ಕರ್ನಾಟಕ ವಿಶ್ವವಿದ್ಯಾಲಯ ಮುಂತಾದ ಸಂಸ್ಥೆಗಳಿಂದ ಅನೇಕ ಕೃತಿಗಳಿಗೆ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸಕ್ತ ಪೂರ್ಣಕಾಲ ವಿಜ್ಞಾನ ವಾಹ್ಮಯ ರಚನೆಯಲ್ಲಿ ಮಗ್ನವಾಗಿರುವ, ಹಿಲಯ ವಿದ್ವಾಂಸರು ಶ್ರೀ ಜಿ. ಟಿ. ನಾರಾಯಣ ರಾವ್ ಅವರು.