ಕೇರಾಫ್ ದಾಸನೂರ ಮೋಟಾರ‍್ಸ್
ಭೈರೀದೇವರಕೊಪ್ಪ,
ಹುಬ್ಬಳ್ಳಿ – ೫೮೦ ೦೨೫.
ಧಾರವಾಡ ಜಿಲ್ಲೆ
ಮೊಬೈಲ್ : ೯೪೪೮೧ ೧೨೮೯೦

ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಹುಲಸೋಗಿ ಗ್ರಾಮದಲ್ಲಿ ಜನಿಸಿದ ತಿ.ಭ. ಸೊಲಬಕ್ಕನವರ, ಎಳೆ ವಯಸ್ಸಿನಲ್ಲಿ ಜಾನಪದ ಹಾಗೂ ಚಿತ್ರಕಲೆಗಳಲ್ಲಿ ಆಸಕ್ತಿ ಬೆಳೆಸಿಕೊಂಡವರು.

ಅಧ್ಯಯನ, ಸಂಶೋಧನೆ, ಗ್ರಾಮೀಣ ಕಲೆಗಳ ಪುನರುಜ್ಜೀವನಕ್ಕೆ ತಮ್ಮ ಸರ್ವಸ್ವವನ್ನು ಧಾರೆ ಎರೆದು ಕನ್ನಡ ನಾಡಿನ ಜಾನಪದದ ಮೆರುಗಿಗೆ ಮಿಂಚು ತಂದವರು.

ದಾವಣಗೆರೆಯ ಸರ್ಕಾರಿ ಲಲಿತಕಲಾ ಮಹಾವಿದ್ಯಾಲಯದಲ್ಲಿ ಎರಡು ದಶಕಗಳ ಕಾಲ ಚಿತ್ರಕಲೆಯ ಉಪನ್ಯಾಸಕರಾಗಿ ದುಡಿದ ಅವರು ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಸೊಗಡನ್ನು ಉಳಿಸಲು-ಬೆಳೆಸಲು ಸತತ ಯತ್ನ ಮಾಡಿದವರು.

ಕಲೆಯಲ್ಲಿ ಮಾನವೀಯ ಸಂಬಂಧಗಳ ಸೂಕ್ಷ್ಮ ಎಳೆಗಳನ್ನು ಗುರ್ತಿಸಿ ಅದಕ್ಕೆ ಅತ್ಯುತ್ತಮ ರೂಪ ನೀಡುವಲ್ಲಿ ತಮ್ಮ ಸೇವೆಯನ್ನು ಸಾರ್ಥಕಪಡಿಸಿಕೊಂಡರು. ಸದ್ಯ ಸ್ವಗ್ರಾಮ ಹುಲುಸೋಗಿಯಲ್ಲಿ ದೊಡ್ಡಾಟ ಕಲೆಯ ಸಂಶೋಧನೆ ಹಾಗೂ ತರಬೇತಿ ಕಾರ‍್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಚಿತ್ರಕಲೆಯಲ್ಲೂ ಪರಿಣತಿ ಸಾಧಿಸಿ ತಮ್ಮ ಹಲವು ಮಜಲುಗಳ ಹವ್ಯಾಸಗಳನ್ನು ಪೋಷಿಸಿಕೊಂಡು ಬರುತ್ತಿದ್ದಾರೆ.

ಬೆಳ್ಳಿ ಹಬ್ಬದ ಈ ಅಭಿನಂದನೆ ಅವರಿಗೆ ಸಲ್ಲುತ್ತದೆ.