(ನಾರಾಯಣ ದೇವರು ಹೆಗಡೆ)
ನೆಬ್ಬೂರು ಗ್ರಾಮ, ಸಿರಸಿ ತಾಲೂಕು,
ಉತ್ತರ ಕನ್ನಡ ಜಿಲ್ಲೆ.
ಯಕ್ಷಗಾನ ಕಲೆಯನ್ನು ಕರಗತ ಮಾಡಿಕೊಂಡ ನಾರಾಯಣ ದೇವರು ಹೆಗಡೆ ಭಾಗವತಿಕೆಯನ್ನು ತಮ್ಮದಾಗಿಸಿಕೊಂಡು ಖ್ಯಾತಿ ಪಡೆದವರು.
ಬಾಲ್ಯದಿಂದಲೇ ಯಕ್ಷಗಾನ ಕಲೆಗೆ ಮಾರುಹೋಗಿ ತಮ್ಮ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಲ್ಲಿನ ಈ ಜಾನಪದ ಕಲೆಗೆ ತಮ್ಮನ್ನು ಒಡ್ಡಿಕೊಂಡು ನೈಪುಣ್ಯತೆ ಸಾಧಿಸಿದವರು.
ಅರವತ್ತು ವರ್ಷಗಳ ತಮ್ಮ ಬದುಕಿನುದ್ದಕ್ಕೂ ಸಾಧನೆಯ ಹಾದಿ ತುಳಿದಿರುವ ನೆಬ್ಬೂರು ನಾರಾಯಣ ಭಾಗವತರು ಬಡಗುತಿಟ್ಟಿನ ಯಕ್ಷಗಾನದಲ್ಲಿ ತಮ್ಮ ಪ್ರತಿಭೆ ಮೆರೆದವರು. ಇಡಗುಂಜಿ ಮೇಳದ ಖಾಯಂ ಭಾಗವತರಾಗಿರುವ ಅವರಿಗೆ ಈ ಕಲೆ ಒಲಿದಿದೆ.
ಬಹ್ರೇನ್, ಫ್ರಾನ್ಸ್, ಸ್ಪೇನ್, ಚೈನಾ, ನೇಪಾಳ, ಇಂಗ್ಲೆಂಡ್ ಮುಂತಾದ ವಿದೇಶಗಳಲ್ಲೂ ಅವರ ಭಾಗವತಿಕೆಗೆ ಅವಕಾಶ ದೊರಕಿದ್ದು ಕೂಡ ಅವರ ಕೌಶಲ್ಯತೆಗೆ ಸಾಕ್ಷಿ.
ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ತನ್ನ ಬೆಳ್ಳಿ ಹಬ್ಬದ ಪ್ರಯುಕ್ತ ಅವರಿಗೆ ಗೌರಿವಿಸಿದೆ.
Leave A Comment