ಕುರುಬರ ಬೀದಿ, ರಾಮಸಮುದ್ರ
ಚಾಮರಾಜನಗರ ಟೌನ್,
ಚಾಮರಾಜನಗರ.
ಮೊಬೈಲ್ : ೯೯೮೬೩ ೦೩೭೬೯

(ಚಿತ್ರ ೧೬)

ಚಾಮರಾಜನಗರ ಜಿಲ್ಲೆಯ ರಾಮಸಮುದ್ರದ ಪುಟ್ಟಮಲ್ಲೇಗೌಡರು ಕರ್ನಾಟಕದ ವೃತ್ತಿಗಾಯಕರ ಪರಂಪರೆಯಲ್ಲಿ ಗೊರವರ ಕುಣಿತಕ್ಕೆ ಹೊಸ ಆಯಾಮ ತಂದುಕೊಟ್ಟವರು. ಎಪ್ಪತ್ತರ ಹರೆಯದ ಪುಟ್ಟಮಲ್ಲೇಗೌಡರ ಆರಾಧ್ಯದೈವ ಮೈಲಾರಲಿಂಗ ಸಂಪ್ರದಾಯ ಕೂಡ ಜಾನಪದ ಕಲೆಗೆ ಸ್ಫೂರ್ತಿಯಾಗಿದೆ.

ಕರ್ನಾಟಕದಲ್ಲೇ ಅಲ್ಲ ನೆರೆ ರಾಜ್ಯಗಳಲ್ಲೂ ತಮ್ಮ ಗೊರವರ ಕುಣಿತದ ಪ್ರದರ್ಶನ ನೀಡಿರುವ ಅವರು ನೋಡುಗರನ್ನು ಭಾವುಕರನ್ನಾಗಿ ಮಾಡುತ್ತಾರೆ. ಡಮರುಗ, ಕೊಳಲು ವಾದ್ಯಗಳ ಸಮೇತ ತಮ್ಮ ವಿಶಿಷ್ಟ ಉಡುಪು ಧರಿಸಿ ರಂಗಸಜ್ಜಿಕೆಗೆ ಬಂದರೆ ಅವರ ಕುಣಿತವೇ ಮೋಡಿ ಮಾಡುವಂತಹದ್ದು.

ಗೊರವರ ತಂಡವನ್ನು ಕಟ್ಟಿಕೊಂಡು ಊರೂರು ಅಲೆಯುವ ಪುಟ್ಟಮಲ್ಲೇ ಗೌಡರಿಗೆ ಕಲಾಸಾಧನೆ ಮಾಡುವಲ್ಲಿ ಸ್ವಲ್ಪವೂ ದಣಿವಿಲ್ಲ. ಇಂತಹ ಕಲಾವಿದರನ್ನು ಅಕಾಡೆಮಿ ಗುರ್ತಿಸಿ ಪುರಸ್ಕರಿಸಿದೆ.

ಹಿರಿಯ ಕಲಾವಿದರಾಗಿರುವ ಪುಟ್ಟಮಲ್ಲೇಗೌಡರಿಗೆ ಎಲ್ಲ ರೀತಿಯ ಗೌರವ-ಪುರಸ್ಕಾರಗಳು ಬರಲಿ ಎಂಬುದೇ ಎಲ್ಲರ ಆಶಯ.