ರಂಗಭೂಮಿ, ೧/೧೯, ಕನಕ ಬೀದಿ,
ರೇಡಿಯೋ ಪಾರ್ಕ್ ಗಣೇಶ ಗುಡಿ ಹತ್ತಿರ,
ಕೌಲ್ ಬಜಾರ್, ಬಳ್ಳಾರಿ – ೫೮೩ ೧೦೨.
ದೂರವಾಣಿ -೦೮೩೯೨-೨೪೦೭೧೫

(ಚಿತ್ರ ೧೪)

 

ಬಳ್ಳಾರಿ  ಜಿಲ್ಲೆಯ  ಬೆಳಗಲ್ಲು  ಗ್ರಾಮದ  ವೀರಣ್ಣನವರು  ಕಲಾವಿದರ

ಕುಟುಂಬದಲ್ಲಿ ಜನಿಸಿದವರು. ಅಪರೂಪದ ತೊಗಲುಗೊಂಬೆಯಾಟ ಕಲೆಯನ್ನು ಜನಪ್ರಿಯಗೊಳಿಸಲು ಶ್ರಮಿಸುತ್ತಿರುವವರು.

ತಂದೆ ದೊಡ್ಡಹನುಂತಪ್ಪನವರ ನಾಟಕ ಕಲೆ ಹವ್ಯಾಸ ವೀರಣ್ಣ ಅವರನ್ನು ಕಲಾಸಕ್ತಿಗೆ ತೊಡಗಿಸಿತು. ರಾಷ್ಟ್ರಮಟ್ಟದ ತೊಗಲುಗೊಂಬೆಯಾಟದ ಕಲಾವಿದ ರಾಗಿ ರೂಪುಗೊಂಡಿರುವ ವೀರಣ್ಣನವರಿಗೆ ಕಲೆ ಕರಗತ.

ರಾಷ್ಟ್ರಪತಿಗಳಿಂದ ಪ್ರಶಂಸೆ, ರಾಜ್ಯೋತ್ಸವ ಪ್ರಶಸ್ತಿ, ಅಕಾಡೆಮಿಗಳಿಂದ ಗೌರವ ಹೀಗೆ ಅವರ ಕೀರ್ತಿಯ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಹಿರಿಯ ಕಲಾವಿದ ವೀರಣ್ಣನವರಿಗೆ ಜಾನಪದ ಕಲೆಗಳಲ್ಲಿ ಅಪಾರವಾದ ಶ್ರದ್ಧೆ, ಆಸಕ್ತಿ ಇದೆ.

ತಮ್ಮದೇ ಆದ ಶ್ರೀರಾಮಾಂಜನೇಯ ತೊಗಲು ಬೊಂಬೆಯಾಟ ಮೇಳವನ್ನು ಹುಟ್ಟುಹಾಕಿ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಜಾಗೃತಿ ಮೂಡಿಸುವಲ್ಲಿ ವೀರಣ್ಣನವರು ತಮ್ಮ ಸಾರ್ಥಕ ಬದುಕು ಕಂಡುಕೊಂಡಿದ್ದಾರೆ.

ಇವರಿಗೆ ಅಕಾಡೆಮಿ ಬೆಳ್ಳಿ ಹಬ್ಬದ ಪ್ರಯುಕ್ತ ಅಭಿನಂದಿಸಿದೆ.