ಹುಲ್ಲೋಳಿಹಟ್ಟಿ ಗ್ರಾಮ : ಅಂಚೆ
ಹುಕ್ಕೇರಿ ತಾಲೂಕು,
ಬೆಳಗಾವಿ ಜಿಲ್ಲೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹುಲ್ಲೋಳಿಹಟ್ಟಿಯವರಾದ ಭೀಮಪ್ಪಾ ಹುದ್ದಾರ ಉತ್ತರ ಕರ್ನಾಟಕದ ಸಣ್ಣಾಟ ಕಲಾವಿದರಾಗಿ ಸುಮಾರು ಮೂವತ್ತು ವರ್ಷಗಳಿಗೂ ಮಿಕ್ಕಿ ಸೇವೆ ಸಲ್ಲಿಸಿದವರು.

ರಾಧನಾಟ, ಸಂಗ್ಯಾಬಾಳ್ಯಾ, ಪುರವಂತಿಕೆ ಹೀಗೆ ಹಲವಾರು ಜನಪದ ಸಂಸ್ಕೃತಿಗಳಿಗೆ ತಮ್ಮ ಛಾಪು ಮೂಡಿಸಿದವರು.

ದೆಹಲಿ, ಮುಂಬಯಿ, ಹಂಪಿ, ಮೈಸೂರು ಉತ್ಸವಗಳಲ್ಲಿ ವೃತ್ತಿಪರ ಜಾನಪದ ಕಲಾವಿದರಾಗಿ ತಮ್ಮ ಸೇವೆ ಸಲ್ಲಿಸಿದ್ದಾರೆ.

ಆಕಾಶವಾಣಿ ದೂರದರ್ಶನಗಳಲ್ಲಿ ತಮ್ಮ ಕಾರ‍್ಯಕ್ರಮಗಳ ಮೂಲಕ ಜಾನಪದ ಕಲೆ ಸಣ್ಣಾಟಕ್ಕೆ ದೊಡ್ಡ ಗರಿ ಮೂಡಿಸಿದವರು.

ಈ ಕಲಾವಿದರಿಗೆ ಅಕಾಡೆಮಿ ಪುರಸ್ಕರಿಸಿ ಅಭಿನಂದಿಸಿದೆ.