V. ಬೃಹದ್ದೇಶೀಯ ಲುಪ್ತಾಂಶಗಳು, ಉದ್ದೃತಿಗಳು ಮತ್ತು ಉಲ್ಲೇಖಗಳು

ಬೃಹದ್ದೇಶಿಯ ಅಧ್ಯಾಯ ಪುನಾರಚನೆ

ಈಗ ದೊರೆತಿರುವ ಬೃಹದ್ದೇಶಿಯ ಆಕೃತಿಯೂ ವಸ್ತುವೂ ಗ್ರಂಥಲೇಖನ ಪರಂಪರೆಯಲ್ಲಿ ಹೇಗೆ ಅಸಮಗ್ರವಾಗಿಯೂ, ಅಸಮರ್ಪಕವಾಗಿಯೂ ಉಳಿದುಬಂದಿವೆಯೆಂಬುದನ್ನು ಹಿಂದಿನ ಪ್ರಕರಣದಲ್ಲಿ ಸ್ವಲ್ಪಮಟ್ಟಿಗೆ ವಿವೇಚಿಸಲಾಗಿದೆ. ಅದರ ಪ್ರಥಮಸಂಪಾದನವು ಕೇವಲ ಉಪಲಬ್ಧ ಹಸ್ತಪ್ರತಿಮಾತೃಕೆಗಳನ್ನು ಅವಲಂಬಿಸಿತು. ಎರಡನೆಯ ಸಂಪಾದನವೂ ಈಗಿನ ಮೂರನೆಯ ಸಂಪಾದನವೂ ಬೃಹದ್ದೇಶಿಯ ಮೊದಲನೆಯ ಆವೃತ್ತಿಯ ಪಾಠವನ್ನು ಸಂಸ್ಕರಿಸಿ ಅದರಲ್ಲಿ ಉಳಿದ ಲೋಪದೋಷಗಳನ್ನು ಗ್ರಂಥದ ಉದ್ದೃತಿ ಮತ್ತು ಉಪೋದ್ದೃತಿಗಳಿಂದ ಪಾಠಶೋಧನದ ಮೂಲಕ ಸರಿಪಡಿಸಲು ಯತ್ನಿಸಿವೆ. ಬೃಹದ್ದೇಶಿಯ ಬೇರೆ ಸಮರ್ಪಕ ಹಸ್ತಪ್ರತಿಗಳು ದೊರೆಯುವವರೆಗೂ ಗ್ರಂಥಧ ಸ್ವರೂಪವು ಅತೃಪ್ತಿಕರವಾಗಿಯೇ ಉಳಿದಿರುವುದು ಅನಿವಾರ್ಯವಾಗಿದೆ. ಈ ಪ್ರಕರಣದಲ್ಲಿ ಬೃಹದ್ದೇಶಿಯ ಮೂಲಗ್ರಂಥದಲ್ಲಿ ಇತ್ತೆಂದು ಅನುಮಾನಿಸಬಹುದಾದ ಉದ್ದೃತಿ, ಉಪೋದ್ದೃತಿ ಮತ್ತು ಉಲ್ಲೇಖ ಮಾತ್ರಗಳಿಂದ ಉಳಿದುಬಂದಿರುವ ಅಂಶಗಳಿಂದ ಗ್ರಂಥಪೂರಣಪ್ರಯತ್ನವನ್ನು ಕೈಗೊಳ್ಳಲಾಗುವುದು.

ಬೃಹದೇಶಿಯ ಮೂಲಗ್ರಂಥದ ವಿಸ್ತಾರವೇನೆಂಬುದು ಈಗ ತಿಳಿಯುವಂತಿಲ್ಲ. ಅದರಲ್ಲಿ ಯಾವ ಯಾವ ಅಧ್ಯಾಯಗಳಿದ್ದವೆಂಬುದೂ ಪೂರ್ತಿಯಾಗಿ ಸ್ಪಷ್ಟವಿಲ್ಲ. ಹಸ್ತಪ್ರತಿಗಳಲ್ಲಿ ಇರುವುದನ್ನು ಯಥಾವತ್ತಾಗಿ ತೋರಿಸಿರುವ ಪ್ರಥಮಸಂಪಾದಕರು ‘ಇತಿ ಮತಂಗಮುನಿ ವಿರಚಿತ ಬೃಹದ್ದೇಶ್ಯಾಂ ಭಾಷಾಲಕ್ಷಣಾಧ್ಯಾಯೋ ನಾಮ ಪಂಚಮಃ ಸಮಾಪ್ತಃ’ (ಪು.೧೪೧) ಮತ್ತು ‘ಇತಿ ಮತಂಗ ಮುನಿ ವಿರಚಿತ ಬೃಹದ್ದೇಶ್ಯಾಂ ಪ್ರಬಂಧಾಧ್ಯಾಯಃ ಷಷ್ಠಃ’ (ಪು.೧೫೪) ಎಂಬ ಗ್ರಂಥವಿಭಜನಾ ವಾಕ್ಯಗಳನ್ನು ಮಾತ್ರ ತೋರಿಸಿದ್ದಾರೆ. ಇವು ಅವರ ಸಂಪಾದಕೀಯ ಸೇರ್ಪಡೆಗಳಲ್ಲವಾದುದರಿಂದ, ಪ್ರಬಂಧಾಧ್ಯಾಯವು ಬೃಹದ್ದೇಶಿಯಲ್ಲಿ ಆರನೆಯ ಅಧ್ಯಾಯವೆಂದೂ ರಾಗಲಕ್ಷಣವು ಮೂರನೆಯದೆಂದೂ ಅಸಂದಿಗ್ಧವಾಗಿ ಸಿದ್ಧವಾಗುತ್ತದೆ. ಆದುದರಿಂದ ರಾಗಲಕ್ಷಣಕ್ಕಿಂತ ಮುಂಚೆ ಎರಡು ಅಧ್ಯಾಯಗಳೂ ಅದರ ನಂತರ ಎರಡೂ ಅಧ್ಯಾಯಗಳೂ ಇರಬೇಕೆಂಬುದು ಸ್ಪಷ್ಟವಾಗಿದೆ. ‘ಇತಿ ಭಾಷಾಲಕ್ಷಣಂ ಸಮಾಪ್ತಂ’ ಮತ್ತು ‘ಇತಿ ಮತಂಗಮುನಿ ವಿರಚಿತ ಬೃಹದ್ದೇಶ್ಯಾಂ ಭಾಷಾಲಕ್ಷಣಾಧ್ಯಾಯೋ ನಾಮ ಪಂಚಮಃ ಸಮಾಪ್ತಃ | ‘ ಎಂಬ ಮಾತುಗಳು ಸಂದಿಗ್ಧವಾಗಿವೆ. ಭಾಷಾಲಕ್ಷಣವು ಐದನೆಯದಾದರೆ ನಾಲ್ಕನೆಯ ಅಧ್ಯಾಯವು ಯಾವುದು? ಹಾಗಾದರೆ ಕೇವಲ ಒಂದು ಪುಟದ ಹಿಂದೆ ಭಾಷಾಲಕ್ಷಣವು ಮುಗಿಯಿತು ಎಂಬ ಮಾತು ಹೇಗೆ ಸರಿಯಾಗುತ್ತದೆ? ಆದರೆ ರಾಗಲಕ್ಷಣಕ್ಕಿರುವಂತೆ (೫೭೮) ೧೦೪೫-೧೦೫೩ ಎಂಬ ಗ್ರಂಥಭಾಗಗಳಿಗೆ ಪ್ರತ್ಯೇಕವಾದ ಒಂದು ಮಂಗಲಾಚರಣಶ್ಲೋಕವಿದೆ (೧೦೩೭), ಮತ್ತು ‘ಅತಃಪರಂ ಪ್ರವಕ್ಷ್ಯಾಮಿ ದೇಶೀರಾಗಕದಂಬಕಮ್ (೧೦೩೮) ಎಂಬ ಪ್ರತಿಜ್ಞಾವಾಕ್ಯವೂ ರಾಗಾಂಗ, ಭಾಷಾಂಗ, ಕ್ರಿಯಾಂಗಗಳೆಂಬ ತ್ರಿವಿಧ ದೇಶೀರಾಗವರ್ಗೀಕರಣವೂ (೧೦೩೯) ಇವೆ. ಆದುದರಿಂದ ಇದು ಪ್ರತ್ಯೇಕವಾದ ಅಧ್ಯಾಯವೇ ಎಂದಾಯಿತು. ಇದರ ನಂತರ ‘ಇವುಗಳಲ್ಲಿ ಪ್ರತಿಯೊಂದರ ಲಕ್ಷಣವನ್ನೂ ಅನುಪೂರ್ವಿಯಿಂದ (ಎಂದರೆ ಪ್ರತಿಜ್ಞೆಯಿರುವ ಅನುಕ್ರಮದಲ್ಲಿಯೇ ಹೇಳುತ್ತೇನೆ’ ಎಂಬ ಪ್ರತಿಜ್ಞೆಯಿದೆ (೧೦೪೦). ಆದುದರಿಂದ ಇದಕ್ಕೆ ಅವ್ಯವಹಿತವಾಗಿ ಬರುವ ವರ್ಣನೆಗಳು (೧೦೪೫-೧೦೫೧) ರಾಗಾಂಗರಾಗಗಳದ್ದಾಗಿರಬೇಕು. ಇದರ ನಂತರ ಗ್ರಂಥಲೋಪವಿದೆ. ಇದರ ನಂತರ ರಾಗಾಂಗರಾಗಗಳ ಅವು ಇನ್ನೂ ಉಳಿದಿದ್ದರೆ), ಆಮೇಲೆ ಭಾಷಾಂಗ ಮತ್ತು ಕ್ರಿಯಾಂಗರಾಗಗಳ ವರ್ಣನೆಯು ಇದ್ದಿರಬೇಕು. ಆದುದರಿಂದ ಇದನ್ನು ದೇಶೀರಾಗಾಧ್ಯಾಯವೆಂದು ಕರೆಯುವುದು ಸರಿಯಾಗುತ್ತದೆ. ಹೀಗಾಗಿ ಅಧ್ಯಾಯಸಮಾಪ್ತಿವಾಕ್ಯವನ್ನು ‘ಇತಿ ಮತಂಗಮುನಿ ವಿರಚಿತಬೃಹದ್ದೇಶ್ಯಾಂ ಭಾಷಾ(oಗಾದಿ ದೇಶೀರಾಗ) ಲಕ್ಷಣಾಧ್ಯಾಯೋ ಪಂಚಮಃ ಸಮಾಪ್ತಃ’ ಎಂದು ಬಾಹ್ಯಾಭ್ಯಂತರ ಸಂಭಾವ್ಯತೆಗಳಿಂದ ಊಹಾತ್ಮಕವಾಗಿ ತಿದ್ದುವುದು ಸಮಂಜಸವಾಗುತ್ತದೆ. ಆದರೂ ‘ರಾಗಂಗಾದಿ’ ಎಂಬುದು ಇಲ್ಲಿ ಹೆಚ್ಚು ಸಮಂಜಸವಾಗುತ್ತಿತ್ತು ಎಂಬ ಆಕ್ಷೇಪವು ಉಳಿದೇ ತೀರುತ್ತದೆ.

ಅಧ್ಯಾಯವಿಂಗಡನೆಯ ಸಂದರ್ಭದಲ್ಲಿ ಇನ್ನೂ ಕೆಲವು ಮಾತುಗಳು ಪ್ರಸಕ್ತವಾಗಿವೆ. ಮೊದಲನೆಯ ಅಧ್ಯಾಯದ ಪ್ರಾರಂಭವೂ ಸಮಾಪ್ತಿವಾಕ್ಯವೂ ಕಳೆದುಹೋಗಿರುವುದರಿಂದ ಅದರ ಹೆಸರು ಮತ್ತು ಅದು ಎಲ್ಲಿ ಮುಗಿಯುತ್ತದೆಂಬುದು ಗೊತ್ತಾಗುವುದಿಲ್ಲ. ಜಾತಿಲಕ್ಷಣವನ್ನು ಹೇಳುವ ಗ್ರಂಥಾಂಶವು ‘ಇದಾನೀಮವಸರಪ್ತಾಪ್ತಾನಾಂ ಜಾತೀನಾಂ’ ಎಂದು ಮೊದಲಾಗುತ್ತದೆ (೩೯೫). ಮೊದಲನೆಯ ಅಧ್ಯಾಯದ ಉಪಲಬ್ಧಾಂತ್ಯಕ್ಕೂ ಈ ವಾಕ್ಯಕ್ಕೂ ಸಂಬಂಧವಿಲ್ಲ. ಆದುದರಿಂದ ಇಲ್ಲಿ ‘ಅವಸರ’ವು ಏನೆಂಬುದು ತಿಳಿಯದೆ ಇದು ಒಂದು ಪ್ರತ್ಯೇಕ ಅಧ್ಯಾಯವಾಗಿದ್ದರೆ, ಇದರ ಪ್ರಾರಂಭಕ್ಕೂ ಗ್ರಂಥಲೋಪವಿದೆಯೆಂದು ಅನುಮಾನಿಸಬೇಕಾಗುತ್ತದೆ. ಇದರ ಸಮಾಪ್ತಿವಾಕ್ಯವೂ ದೊರೆತಿಲ್ಲ. ಮೂರನೆಯ ಮತ್ತು ನಾಲ್ಕನೆಯ ಅಧ್ಯಾಯಗಳಿಗೆ ಇರುವಂತೆ ಸ್ವಾಭಾವಿಕವಾದ ಸಮಾಪನವು ಮೊದಲನೆಯ ಎರಡಕ್ಕೂ ಐದನೆಯದಕ್ಕೂ ಇಲ್ಲ. ಹೀಗಾಗಿ ವರ್ಣಿಸಿರುವ ವಿಷಯವನ್ನು ಆಧರಿಸಿ ಈ ಮೂರಕ್ಕೂ ಅಧ್ಯಾಯನಾಮವನ್ನು ಊಹೆಯಿಂದ ಒದಗಿಸಬೇಕಾಗಿದೆ. ಇದನ್ನು ದ್ವಿತೀಯ ಸಂಪಾದಕರು ಮಾಡಿದ್ದಾರೆ. ಎರಡನೆಯದಾಗಿ ಗ್ರಂಥಕಾರನು ಎಲ್ಲ ಅಧ್ಯಾಯಗಳಿಗೂ ಮಂಗಲಾಚರಣಶ್ಲೋಕಗಳನ್ನು ರಚಿಸಿದ್ದನೋ ಇಲ್ಲವೋ ಎಂಬುದು ತಿಳಿಯದು. ಗ್ರಂಥಾರಂಭದಲ್ಲಿ ಲೋಪವಿದೆಯಷ್ಟೆ. ಆದುದರಿಂದ ಮೊದಲನೆಯ ಅಧ್ಯಾಯಕ್ಕೆ ಮಂಗಲಾಚರಣವಿದ್ದಿರುವುದು ಅಸಂಭವವಲ್ಲ.ಸ ಎರಡನೆಯ ಅಧ್ಯಾಯದ ಪ್ರಾರಂಭವು ಇದ್ದಕ್ಕಿಂತೆಯೇ ಪ್ರಾರಂಭವಾಗುತ್ತದೆ; ಇಲ್ಲಿ ನಾನು ಊಹಿಸುವ ಲೋಪವು ಮಂಗಲಾಚರಣವನ್ನು ಒಳಗೊಂಡಿದ್ದರೂ ಇರಬಹುದು. ಆರನೆಯ ಅಧ್ಯಾಯಕ್ಕೆ ಸರಿಯಾದ ಪ್ರತಿಜ್ಞಾವಾಕ್ಯವಿದೆ. ಆದರೆ ಮಂಗಲಾಚರಣ ಶ್ಲೋಕವಿಲ್ಲ. ದೊರೆತಿರುವ ಇಂತಹ ಎರಡು ಶ್ಲೋಕಗಳು ಗ್ರಂಥಸಂದರ್ಭಕ್ಕೆ ಸಮಂಜಸವಾಗಿವೆಯೆಂದು ಹೇಳಲಾಗುವುದಿಲ್ಲ. ಏಕೆಂದರೆ ರಾಗಲಕ್ಷಣಕ್ಕೆ ಬರೆದ ‘ಭಂ ಜ್ಯೋತೀ….’ ಎಂಬುದು (೫೭೮) ಭರತಶಬ್ದವನ್ನು ಶ್ಲೇಷೆಯಿಂದ ಒಳಗೊಂಡಿದ್ದರೆ, ‘ರಾಗಮಾರ್ಗಸ್ಯ ಯದ್ರೂಪಂ ಯನ್ನೋಕ್ತಂ ಭರತಾದಿಭಿಃ’ ಎಂದು ತಾನೇ ಭರತನನ್ನು ಉಲ್ಲೇಖಿಸಿ (೫೮೦), ರಾಗಗಳನ್ನೇ ಹೇಳದಯೇ ಇರುವ ಭರತನನ್ನು ರಾಗಾಲಕ್ಷಣಾಧ್ಯಾಯದ ಮೊದಲಲ್ಲಿ ಬ್ರಹ್ಮಜ್ಞಾನವೆಂಬ ಅತ್ಯುನ್ನತ ಆಧ್ಯಾತ್ಮಿಕಸ್ತರಕ್ಕೆ ಏರಿಸಿ ಸ್ತುತಿಸುವುದು ಸಮಂಜಸವಾಗಿ ಕಾಣುವುದಿಲ್ಲ. ಆದರೆ ಜಾತಿಲಕ್ಷಣ ವಿಷಯದಲ್ಲಿ ಭರತನಿಂದ ಉದ್ಧರಿಸಿಕೊಳ್ಳುವಾಗ ಅವನ ಹೆಸರು ಹೇಳದೆ ಗುರುವೆಂದು (೪೫೬,೪೭೦,೪೮೦) ಮೂರು ಸಲ ಪೂಜ್ಯಭಾವದಿಂದ ಉಲ್ಲೇಖಿಸುವುದನ್ನು ನೋಡಿದರೆ ಸಮಂಜಸವಿಲ್ಲದಿದ್ದರೂ ಅಸಂಭಾವ್ಯವೆಂದಂತೂ ಹೇಳಲು ಬರುವುದಿಲ್ಲ. ಗ್ರಂಥದ ಎರಡನೆಯ ಮಂಗಲಾಚರಣವು ದೇಶೀರಾಗವರ್ಣನೆಯ ಆದಿಯಲ್ಲಿದೆ (೧೦೩೭). ಇದು ಶ್ರೀವಿದ್ಯೆಯ ಪರಮೋಚ್ಛ ಉಪಾಸ್ಯವಾದ ಷೋಡಶಿಯನ್ನು ಕುರಿತದ್ದೆಂದು ಹಿಂದೆಯೇ ಸೂಚಿಸಿದೆ. ಗ್ರಂಥಾರಂಭಕ್ಕೋ ಅಂತ್ಯಕ್ಕೋ ಉಚಿತವಾದ ಇದು ಅಧ್ಯಾಯದಲ್ಲಿರುವ ವಿಷಯಕ್ಕೆ ಸಮಂಜಸವಾಗಿಲ್ಲವೆಂದೇ ಹೇಳಬೇಕು.

ಈ ಹಿನ್ನೆಲೆಯಲ್ಲಿ ಬೃಹದ್ದೇಶಿಯಲ್ಲಿ ಇದ್ದಿರಬಹುದಾದ ಇತರ ಅಧ್ಯಾಯಗಳನ್ನು ಕುರಿತು ಆಲೋಚಿಸಬಹುದು. ಕುಂಭಕರ್ಣನು ಸಂಗೀತರಾಜ್ಯದಲ್ಲಿ (೨.೧.೪.೪೧೬, ೪೨೬, ಪು.೨೪೨, ೨೪೩) ಭರತಮುನಿಯೂ ಮತಂಗಮುನಿಯೂ ಕಪಾಲವೆಂಬ ಬ್ರಹ್ಮಪ್ರಣೀತ ಪ್ರಾಚೀನ ಗಾನಗಳನ್ನು ವರ್ಣಿಸಿದ್ದರೆಂದು ಹೇಳುತ್ತಾನೆ:

ಭರತಮತಂಗಸಮ್ಮತಿಜ್ಞೋ ನಿಗದತಿ ಕಾಲುಜೀಭೂಪತಿಃ ಪ್ರೋಕ್ತಮ್ |
ಸುಲಲಿತಪದಸಾಮತುಲ್ಯಂ ವಿಧಿಮುಖಪದ್ಮಭವಂ ಕಪಾಲಗಾನಮ್ || (೪೧೬)

ವಿವೃಣೋತಿ ಮಹೀಪಾಲೋ ಮತಂಗಸ್ಯ ಮತಾದಿಹ |
ನ ತಥಾ ಪ್ರೀಯತೇ ದೇವೋ ನಾನಾಭಾವೈಃ ಸುಪೂಜಿತಃ || (೪೨೬)

ಆದುದರಿಂದ ಮೂಲಬೃಹದ್ದೇಶಿಯಲ್ಲಿ ಕಪಾಲಗಳನ್ನು ಕುರಿತ ಒಂದು ಪ್ರಕರಣವೋ ಒಂದು ಅಧ್ಯಾಯವೋ ಇದ್ದಿರಬಹುದು. ಶುದ್ಧಾಜಾತಿಗಳಲ್ಲಿ ಇವುಗಳನ್ನು ಹಾಡಲಾಗುತ್ತಿದ್ದುದರಿಂದ ಇದು ಜಾತ್ಯಧ್ಯಾಯದ ಕೊನೆಯ ಪ್ರಕರಣವಾಗಿ ಅಥವಾ ಅವ್ಯವಹಿತ ನಂತರದಲ್ಲಿ ಒಂದು ಅಧ್ಯಾಯವಾಗಿ ಸೇರಿತ್ತೆಂಬುದು ಸಂಭಾವ್ಯವಾಗಿದೆ. ಗ್ರಂಥಾಂತ್ಯದಲ್ಲಿ (೧೧೯೧) ‘ಇದಾನೀಂ ಕಥೆಯಿಷ್ಯಾಮಿ ವಾದ್ಯಾನಾಂ ನಿರ್ಣಯೋ ಯಥಾ’ ಎಂದು ವಾದ್ಯಾಧ್ಯಾಯವೊಂದನ್ನು ಬರೆದಿರುವುದಾಗಿ ಗ್ರಂಥಕಾರನೇ ಹೇಳಿದ್ದಾನಷ್ಟೆ ಇದರ ವೀಣಾ ವೇಣು, ರುಂಜಾ, ಮೃದಂಗ ಇತ್ಯಾದಿ ವಾದ್ಯವಿಷಯಕವಾದ ಉದ್ದೃತಿ, ಉಲ್ಲೇಖಗಳು ದೊರೆಯುತ್ತವೆ. ಇದಲ್ಲದೆ ಜಾತಿಲಕ್ಷಣ ವಿವೇಚನೆಯನ್ನು ಮಾಡುವಾಗ ಚತುಃಸ್ವರದ ಅಥವಾ ಸ್ವರಾಂತರದ ಪ್ರಯೋಗದ ಪ್ರಸಕ್ತಿಯಲ್ಲಿ ಗ್ರಂಥಕಾರನು ‘ಯದಾ ಚತುಃಸ್ವರಪ್ರಯೋಗಸ್ತದಾ ಸ್ವರಾಂತರಮಾಹ, ಅವಕೃಷ್ಟಧ್ರುವಾಸ್ವೇವ ವೇದಿತವ್ಯಂ, ತಚ್ಚ ಧ್ರುವಾಮಧ್ಯ ಏವ ಸ್ಫುಟೀಕರಿಷ್ಯಾಮಃ’ ಎನ್ನುತ್ತಾನೆ (೪೪೩). ಅಲ್ಲದೆ ತಾನೂ (೭೩೩), ಕಾಶ್ಯಪನನ್ನು ಉದ್ಧರಿಸಿಕೊಂಡೂ (೭೩೬) ಧ್ರುವಾಗಳನ್ನು ಉಲ್ಲೇಖಿಸಿದ್ದಾನೆ. ಆದುದರಿಂದ ಜಾತ್ಯಧ್ಯಾಯದಿಂದ ಮುಂದೆ, ಬಹುಶಃ ಪ್ರಬಂಧಾಧ್ಯಾಯದ ನಂತರ, ಧ್ರುವಾಗಳನ್ನು ಕುರಿತ ಅಧ್ಯಾಯವನ್ನೂ ಅವನು ರಚಿಸಿದ್ದಿರಬೇಕು. ಅಲ್ಲದೆ ರಾಗಾಧ್ಯಾಯದಲ್ಲಿ ಅವನು ದಶರೂಪಕಗಳಲ್ಲಿ ಬರುವ ವಿವಿಧ ಪ್ರೇಕ್ಷಣಗಳ ಧ್ರುವಗಾನದಲ್ಲಿ ರಾಗಗಳನ್ನು ;ವಿನಿಯೋಗಿಸುವ ವಿಧಿಯನ್ನು ಪದೇ ಪದೇ ಹೇಳುತ್ತಾನೆ. (ಉದಾ. ೩೩೧-೩೩೩, ೩೮೦, ೪೪೩, ೪೪೫, ೭೩೩, ೫೨೮, ೫೩೨, ೫೩೪, ೫೩೮, ೫೪೦, ೫೪೩, ೫೪೫, ೫೫೨, ೫೬೧, ೫೬೪, ೫೬೭, ೫೭೦). ಈ ಸಂಬಂಧದ ಆಸಾರಿತ (೪೯೩), ಪಾಣಿಕ (೪೯೩) ಇತ್ಯಾದಿಗಳನ್ನು ಅವನು ಹಸರಿಸುತ್ತಾನೆ. ಇದಲ್ಲದೆ ಅವಕೃಷ್ಟಧ್ರುವಾದ ಉಲ್ಲೇಖವನ್ನೂ ಮಾಡುತ್ತಾನೆ (೪೪೩, ೪೪೪). ಮೂರನೆಯದಾಗಿ, ಅವನು ತಾಲಸಂಬಂಧಿಯಾದ ಅನೇಕ ವಿಷಯಗಳನ್ನೂ ವಿವರಣೆಯಿಲ್ಲದೆಯೇ ಪ್ರವೇಶಗೊಳಿಸಿದ್ದಾನೆ.ಉದಾ. ಅಯುಗ್ಮ (೪೯೧), ಅರ್ಧಕಲಾ (೩೦೪, ೩೦೫, ೩೫೦), ಅರ್ಧಕಾಲ (೩೭೦), ಅವಪಾಣಿ (೩೮೫), ಆವಾಪ (೩೮೭), ಉಪರಿಪಾಣಿ (೩೮೫), ಏಕಕಲ (೫೨೮, ೫೩೨, ೫೩೬, ೫೩೮, ೫೪೦, ೫೪೫), ಕಾಲ (೩೫೬) ಕಾಲತ್ರಯ (೩೮೮), ಗೋಪುಚ್ಛಾಯತಿ (೩೮೫, ೧೧೬೧, ೧೧೬೩), ಚಿತ್ರಮಾರ್ಗ (೩೭೩ ರಿಂದ ೫೪೫ ರವರೆಗೆ, ಅಲ್ಲಲ್ಲಿ), ದಕ್ಷಿಣಮಾರ್ಗ (೩೭೫ ರಿಂದ ೭೨೬ರವರೆಗೆ ಅಲ್ಲಲ್ಲಿ), ದ್ರುತಲಯ (೩೮೫,, ೩೮೮, ೯೨೮), ದ್ವಿಕಲ (೩೭೪ ರಿಂದ ೫೪೫ರವರೆಗೆ ಅಲ್ಲಲ್ಲಿ), ಮಧ್ಯಲಯ (೩೮೫, ೯೨೮), ಯತಿ (೩೮೫, ೧೧೫೩, ೧೧೮೨), ಯುಗ್ಮ (೪೯೦), ಲಯ (೩೮೫), ವಾರ್ತಿಕಮಾರ್ಗ (೩೭೩ರಿಂದ ೫೭೩ ಅಲ್ಲಲ್ಲಿ) ವೃತ್ತಿ (೩೮೩, ೩೮೬, ೧೧೨೮,೧೧೩೧, ೧೧೩೬), ಸಮಗ್ರಹ (೩೭೮, ೩೮೬), ಸಮಪಾಣಿ (೩೮೫, ೩೮೬), ಸಮಾ (ಯತಿ, ೩೮೫, ೧೧೬೦). ಅಷ್ಟೇ ಅಲ್ಲದೆ ಅವನು ಕೆಲವು ತಾಲಗಳನ್ನೂ ಹೆಸರಿಸುತ್ತಾನೆ. ಉದಾ. ಆದಿ (೧೧೦೨,), ಕಂಕಾಲ(೧೧೧೨, ೧೧೧೭, ೧೧೩೪, ೧೧೫೬, ೧೧೭೯), ಕರಣ (೧೧೦೭, ೧೧೧೦), ಕುಡುಕ್ಕ (೧೧೧೨), ಗಜಲೀಲ (೧೦೯೩), ಚಚ್ಚತ್ಪುಟ (೫೩೦ ರಿಂದ ೭೨೬, ಅಲ್ಲಲ್ಲಿ), ಝಂಪಾ (೧೧೦೩), ತಾಲ(-ಅಷ್ಟಕ ೧೦೯೫, -ತ್ರಯ ೧೦೯೮, -ಚತುಷ್ಟಯ ೧೦೯೯, -ನಿಯಮ ೧೦೭೬), ದೇಶೀಸಂಬಂಧತಾಲ (೧೧೭೯), ದ್ರುತಮಂಠ (೧೧೦೨), ದ್ವಿತೀಯತಾಲ (೧೧೧೭, ೧೧೭೩, ೧೧೫೬), ಪಂಚಪಾಣಿ (೫೨೮, ೫೭೨, ೫೪೦, ೫೪೫, ೫೫೬, ೫೬೧), ಪ್ರತಿ (೧೦೮೮, ೧೧೧೭, ೧೧೩೦, ೧೧೫೬) ಮತ್ತು ಮಂಠ(೧೧೧೭, ೧೧೨೨, ೧೧೫೬). ಇಷ್ಟೆಲ್ಲ ತಾಲಸಂಬಂಧಿ ಸಂಗತಿಗಳನ್ನು ವಿವರಣೆ, ನಿರೂಪಣೆ, ನಿದರ್ಶನಗಳಿಲ್ಲದೆ ಗ್ರಂಥದಲ್ಲಿ ಪ್ರವೇಶಗೊಳಿಸುವುದು ಅವನ ಶೈಲಿಗೆ ಹೊರತಾದುದು. ಆದುದರಿಂದ ಬೃಹದ್ದೇಶಿಯಲ್ಲಿ ಒಂದು ತಾಲಾಧ್ಯಾಯವೂ ಇದ್ದಿದುದು ಸಂಭಾವ್ಯವಾಗಿದೆ. ಇಷ್ಟೇ ಅಲ್ಲದೆ ಕಲ್ಲಿನಾಥನು ಕೋಹಲಪ್ರಣೀತವಾದ ಸಂಗೀತಮೇರುವಿನಿಂದ ಮತಂಗೋಕ್ತವಾದ ನೃತ್ತವಿಷಯವೊಂದನ್ನು ಉದ್ಧರಿಸುತ್ತಾನೆ; ಜಾಯಸೇನಾಪತಿಯೂ ಮತಂಗಮುನಿ ಪ್ರಣೀತವೆನ್ನುವ ನೃತ್ತವಿಷಯಗಳನ್ನು ತನ್ನ ನೃತ್ತರತ್ನಾವಲಿಯಲ್ಲಿ ಸಂಗ್ರಹಿಸುತ್ತಾನೆ. ವೇಮಭೂಪಾಲ, ಕುಂಭಕರ್ಣ, ಶ್ರೀಕಂಠರೂ ನೃತ್ತವಿಷಯಕ ಉದ್ಧೃತಿಗಳನ್ನು ಮತಂಗನಿಂದ ಮಾಡಿಕೊಂಡಿದ್ದಾರೆ. ಆದುದರಿಂದ ಬೃಹದ್ದೇಶೀಮೂಲದಲ್ಲಿ ಒಂದು ನೃತ್ತಾಧ್ಯಾಯವೂ ಇತ್ತೆಂದು ಸಿದ್ಧವಾಗುತ್ತದೆ.

ವಾದ್ಯವು ಗೀತಾನುಗವೂ ನೃತ್ಯವು ವಾದ್ಯಾನುಗವೂ ಆದುದರಿಂದ (‘ನೃತ್ತಂ ವಾದ್ಯಾನುಗಂ ಪ್ರೋಕ್ತಂ ವಾದ್ಯಂ ಗೀತಾನುವರ್ತಿ ಚ, (ಸಂಗೀತರತ್ನಾಕರ, ೧.೧.೨೪) ಬೃಹದ್ದೇಶಿಯಲ್ಲಿ ನೃತ್ತಾಧ್ಯಾಯವು ವಾದ್ಯಾಧ್ಯಾಯದ ನಂತರ, ಬಹುಶಃ ಗ್ರಂಥದ ಕೊನೆಯ ಅಧ್ಯಾಯವಾಗಿ, ಬಂದಿರಬೇಕು. ಹೀಗೆ ಅದರ ಮೊದಲನೆಯ ಅಧ್ಯಾಯದಲ್ಲಿ ಶ್ರುತಿ, ಸ್ವರ, ಗ್ರಾಮ, ಮೂರ್ಛನಾ, ತಾನ, ಅಲಂಕಾರ, ಗೀತಿಗಳೂ, ಎರಡನೆಯದರಲ್ಲಿ ಜಾತಿ(ಮತ್ತು ಕಪಾಲ), ಮೂರನೆಯದರಲ್ಲಿ ಗ್ರಾಮರಾಗಗಳು, ನಾಲ್ಕನೆಯದರಲ್ಲಿ ಭಾಷಾಲಕ್ಷಣ, ಐದನೆಯದರಲ್ಲಿ ದೇಶೀರಾಗಗಳು (ಮತಂಗನು ೧೪೪ ದೇಶೀರಾಗಗಳನ್ನು ವರ್ಣಿಸಿದ್ದಾನೆಂದು ಕುಂಭಕರ್ಣನು ಸಂಗೀತರಾಜದ ೨.೨.೨.೨೨. ಪು.೪೦೪ ಮತ್ತು ೨.೨.೪..೨೨ ಪು.೪೩೯ರಲ್ಲಿ ಹೇಳಿದ್ದಾನೆ). ಆರನೆಯದರಲ್ಲಿ ಪ್ರಬಂಧಗಳು (ಮತ್ತು ಧ್ರುವಾಗಳು?), ಏಳನೆಯದರಲ್ಲಿ ತಾಲಗಳು, ಎಂಟನೆಯದರಲ್ಲಿ ವಾದ್ಯಗಳು ಮತ್ತು ಒಂಭತ್ತನೆಯದರಲ್ಲಿ ನೃತ್ತ ಎಂಬ ವಿಷಯಾನುಕ್ರಮವನ್ನು ಅನುಸರಿಸಿ ಬೃಹದ್ದೇಸಿಯನ್ನು ರಚಿಸಿದ್ದಾನೆಂದು ಊಹಿಸಬಹುದು. ಶಾರ್ಙ್ಗದೇವನು ಇದರ ಸ್ಫೂರ್ತಿಯಿಂದಲೇ ಸಂಗೀತರತ್ನಾಕರವನ್ನು ರಚಿಸಿ ಜಾತ್ಯಧ್ಯಾಯದಲ್ಲಿ ಕಪಾಲ (ಮತ್ತು ಕಂಬಲ)ಗಳನ್ನೂ, ರಾಗವಿವೇಕಾಧ್ಯಾಯದಲ್ಲಿ ಗ್ರಾಮರಾಗ, ಭಾಷಾದಿತ್ರಯ ದೇಶೀರಾಗಗಳನ್ನೂ,, ಪ್ರಕೀರ್ಣಕಾಧ್ಯಾಯದಲ್ಲಿ ಮತಂಗನು ಉಲ್ಲೇಖಿಸಿರುವ ಗಮಕ ಇತ್ಯಾದಿಗಳನ್ನೂ ಅಂತರ್ಭಾವಗೊಳಿಸಿರುವುದು ಸಂಭಾವ್ಯವಾಗಿದೆ. ಭರತಮತಂಗರು ಸಂಗೀತವನ್ನು ದಶರೂಪಕಗಳ ಪ್ರಸಕ್ತಿಯಲ್ಲಿ ಧ್ರುವಾಗಾನಕ್ಕೆಂದು ವರ್ಣಿಸುತ್ತಾರೆ; ಶಾರ್ಙ್ಗದೇವನು ಸಂಗೀತವನ್ನು ಈ ಪ್ರಸಕ್ತಿಯಿಂದ ಮುಕ್ತಗೊಳಿಸಿದ್ದಾನೆ; ಆದುದರಿಂದ ಅವನು ಧ್ರುವಾಗಾನವನ್ನು ನಿರೂಪಿಸುವುದಿಲ್ಲ. ಮತಂಗನು ಗೀತ, ವಾದ್ಯ, ನೃತ್ತಗಳು ಮೂರನ್ನೂ ದೇಶೀ ಎಂದೇ ವ್ಯವಹರಿಸಿದ್ದಾನಷ್ಟೇ. ಇದು ಜಗದೇಕಮಲ್ಲ, ಶಾರ್ಙ್ಗದೇವರು ಗೀತ, ವಾದ್ಯ, ನೃತ್ತ- ಈ ಮೂರೂ ಸಂಗೀತವೆಂದು (ಸಂರ ೧.೧.೨೧) ಎಂದು ಮುಕ್ತೋಕ್ತಿಯಲ್ಲಿ ಹೇಳುವುದಕ್ಕೂ ‘ಮಾರ್ಗೋ ದೇಶೀತಿ ತದ್ ದ್ವೇಧಾ’ (ಅದೇ, ೧.೧.೨೨) ಎಂದು ಅದನ್ನು ನಿರೂಪಿಸಿ ವರ್ಣಿಸುವುದಕ್ಕೂ ಪ್ರೇರಕವಾಗಿದ್ದಿರಬಹುದೆಂದು ಊಹಿಸಬಹುದು.

ಉಲ್ಲೇಖಗಳು ಮತ್ತು ಉದ್ಧೃತಿಗಳು

ಹೀಗೆ ಬೃಹದ್ದೇಶಿಯು ರಚಿತವಾದಾಗ ಅದರಲ್ಲಿ ವಾದ್ಯ, ತಾಲ, ಧ್ರುವಾ, ಕಪಾಲ ಮತ್ತು ನೃತ್ತಗಳನ್ನು ಕುರಿತ ಪ್ರತ್ಯೇಕ ಅಧ್ಯಾಯಗಳಿದ್ದು ಈಗ ಅವು ದೊರೆಯುವುದಿಲ್ಲ. ಬೃಹದ್ದೇಶಿಯ ಉಪಲಬ್ಧ ಹಾಗೂ ಅನುಪಲಬ್ಧ ಗ್ರಂಥಾಂಶಗಳಲ್ಲಿ ಮತಂಗೋಕ್ತಿಯೆಂದು ಉಳಿದು ಬಂದಿರುವ ಕೆಲವು ಉದ್ಧೃತಿಗಳನ್ನೂ ಮತಂಗಪ್ರಣೀತವೆಂದು ಸಂಗ್ರಹಗೊಂಡು ಅಥವಾ ತಾತ್ಪರ್ಯಗೊಂಡು ಉಳಿದು ಬಂದಿರುವ ಕೆಲವು ಉಲ್ಲೇಖಗಳನ್ನೂ ವಿವಿಧ ಆಕರಗಳಿಂದ ಆಯ್ದು ಇಲ್ಲಿ ಕೊಟ್ಟಿದೆ. ಇದರಿಂದ ಬೃಹದ್ದೇಶಿಯ ಸಮಗ್ರಾಧ್ಯಯನಕ್ಕೂ ಸಂಶೋಧನೆಗೂ ನೆರವು ದೊರೆಯಬಹುದೆಂದು ಆಶಿಸಲಾಗಿದೆ.

(ಅ) (ಸ್ವರಗತ-)ಅಧ್ಯಾಯ

  ಆಕರ ವಿಷಯ ಉಲ್ಲೇಖ / ಉದ್ದೃತಿ ( =‘ ’ ) ಬೃ=ಬೃಹದ್ದೇಶೀ, ಮ=ಮತಂಗ, ವ್ಯಾ=ವ್ಯಾಖ್ಯಾನ
1 ಹರಿಪಾಲದೇವ, ಸಂಗೀತಸುಧಾಕರ,
(ಅಪ್ರಕಟಿತ) ೫.೨.೩, ಪು. ೧೬೦
ಮೂರ್ಛನಾಲಕ್ಷಣ, ಸಪ್ತ ಸಪ್ತ ಭವಂತ್ಯೇತಾ ಮೂರ್ಛನಾ
ಗ್ರಾಮಯೋರ್ದ್ವಯೋಃ | ಏತನ್ಮತಂಗಸ್ಯ ಮತಮ್
2 ಜಗದೇಕಮಲ್ಲ, ಸಂಗೀತಚೂಡಾ ಮಣಿ (ಹಸ್ತಪ್ರತಿ), ಪು. ೧ ಪ್ರಾಮಾಣಿಕರಪಟ್ಟಿ ಮತಂಗಭೋಜಪ್ರಮುಖೈಃ ಕೃತಂ ಯದ್ದೇಶೀಗತಂ
ಲಕ್ಷ್ಮವಿಕರ್ಣರೂಪಮ್—-
3 ಅದೇ, ಪು.೫ ನಾದವಿದಗಳು ಸ ತು ಪಂಚವಿಧೋ ನಾದಃ ಮತಂಗಮುನಿಸಮ್ಮತಃ |
4 ಪಾರ್ಶ್ವದೇವ, ಸಂಗೀತಸಮಯ ಸಾರ, ೧.೫.೬. ಪು. ೧ ನಾದವಿಧಗಳು ಸ ಚ ಪಂಚವಿಧೋ ನಾದೋ ಮತಂಗಮುನಿಸಮ್ಮತಃ |
ಅತಿಸೂಕ್ಷ್ಮಶ್ಚ ಸೂಕ್ಷ್ಮಶ್ಚ ಪುಷ್ಟೋsಪುಷ್ಟಶ್ಚ ಕೃತಿಮಃ |
5 ಪಂಡಿತಮಂಡಲಿ, ಸಂಗೀತಶಿರೋ ಮಣಿ, ೧.೯.೧, ಪು. ೮೭ ನಾಡಿಗಳಲ್ಲಿ ನಾದೋತ್ಪತ್ತಿ ತಥಾಹ ಮತಂಗಃ –
‘ಊರ್ಧ್ವನಾಡ್ಯೋತ್ಥಿತೋ ನಾದೋ ಹ್ಯುಕ್ತೋ ವೈ ವಿಗತರಸಃ |
ಹುಂಕಾರಗರ್ಭಸಂಭೂತೋ ವ್ಯಾಪ್ಯಮಾನೋsಪಿ ಸರ್ವತಃ |
ತಿರಶ್ಚ್ಯಸ್ತಾಸ್ತು ತಾವಂತ್ಯೋ ನಾಡ್ಯೋ ದ್ವಾವಿಂಶತಿಎರ್ಮತಾ |
ಸೋಪಾನವತ್ ಸ್ಥಿತಾಃ ಸರ್ವಾ ವಾಯುನಾ ಸಮಾಪೂರಿತಾಃ |
ಸುಪುಮ್ನಾಯಾಂ ತು ಸಂಲಗ್ನಾಃ ಕಂಠಸ್ಥಾನೇ ಸ್ಥಿತಾಸ್ತತಃ |
ದ್ವಾವಿಂಶತಿಸ್ತಾನಿ ಛಿದ್ರಾಣಿ ತೇಭ್ಯಃ ಸಂಜಾಯತೇ ಸ್ಫುಟಮ್ | …..
6 ಅದೇ, ೯.೪, ಪು. ೨೩೦ ಮಾರ್ಗಗಳ ಕಾಲ ಪ್ರಮಾಣ ದಕ್ಷಿಣಾದಾಶ್ರಿತಂ ಯಚ್ಚ ದ್ವಿಗುಣಂ ವಾರ್ತಿಕೇ ಮತಮ್ |
ಚತುರ್ಗುಣ ತಚ್ಚ ಚಿತ್ರೇsಪಿ ಮತಂಗಮುನಿಸಮ್ಮತಮ್.
7 ಕುಂಭಕರ್ಣ, ಸಂಗೀತರಾಜ ೧.೧.೧.೩೯, ಪು. ೬ ಪ್ರಾಮಾಣಿಕರ ಪಟ್ಟಿ ಗೌರೀ ನಂದಿಮತೇ ಮತಂಗಶಿವಸಂಗೀತೇ
ಸಶಾರ್ದೂಲಕೇ …
8 ೨.೧.೧.೩೨, ಪು. ೭೪ ಶ್ರುತಿವಿವೇಚನೆ ತಂ ಮತಂಗಃ ಶ್ರುತಿಂ ಪ್ರಾಹ ಮೇಘೇ(s) ಹರ್ಪತಿರಶ್ಮಿವತ್
9 ೩.೧.೧. ೩೫೨-೩೫೪, ಪು. ೧೨೪ ದ್ವಾದಶಸ್ವರಮೂರ್ಛನಾ ಪ್ರಯೋಜನ ಅಥ ಯಾ ಮೂರ್ಛನಾ ಪ್ರಾಹ ದ್ವಾದಶಸ್ವರಸಂಭವಾಃ |
ಮತಂಗಸ್ತನ್ಮತಂ ನೈವ ಸುಂದರಂ ಪ್ರತಿಭಾತಿ ಮೇ |
ಅತ್ರೈವ ಕೋಹಲಾಚಾರ್ಯೋ ನಂದಿಕೇಶ್ವರ ಏವ ಚ ||
ಮತಂಗಮತಮನುಸೃತ್ಯೈವೋಚತುಸ್ತದಿಹ ವರ್ಣ್ಯತೇ |
10 ಶ್ರೀಕಂಠ, ರಸಕೌಮುದೀ, ೧.೧೧. ಪು. ೨ ಪ್ರಾಮಾಣಿಕರ ಪಟ್ಟಿ ಶ್ರೀಮಲ್ಲಕ್ಷ್ಮೀಶಲೋಕೇಶಶಕ್ತಿಶಂಕರನಾರದಾಃ |
ಮತಂಗಃ ಕೋಹಲೋ ರಂಭಾ ಭರತ ಕಶ್ಯವೋsರ್ಜುನಃ ||
ವಾಯುರ್ವಿಶ್ವಾವಸುರ್ವಾಯುನಂದನೋ ರುದ್ರನಂದನಃ ||
11 ಅದೇ, ೧.೬೪, ಪು. ೮ ಮೂರ್ಛನಾಲಕ್ಷಣ ಸಪ್ತಸ್ವರಾಣಾಮಾರೋಹೋ sವರೋಹಃ ಕ್ರಮಶೋ ಯದಿ |
ತದಾ ಮುನಿಮತಂಗಾದ್ಯೈಮೂರ್ಛನೇತ್ಯಭಿಧೀಯತೇ ||

 

12 ಅದೇ ೧.೬೮, ಪು. ೯ ಮೂರ್ಛನಾಚಾತುರ್ವಿಧ್ಯ ಮೂರ್ಛನಾ ಚತುರ್ವಿಧಾ ಪೂರ್ಣಾ ಷಾಡವೋ(?ವೌ)ಡುವಿತಾ ತಥಾ |
ಸಾಧಾರಣೀತಿ ವಿಖ್ಯಾತಾ ಮತಂಗಾದಿಮುನೀಶ್ವರೈಃ ||
13 ಅದೇ, ೧.೭೪=೭೬, ಪು. ೯.೧೦ ಸ್ವರಪ್ರಸ್ತಾರವಿಧಾನ ಕ್ರಮಂ ಯಥೋಕ್ತಂ ——————- |
———————————– |
ಮತಂಗಾದಿಭಿರಾಚಾರ್ಯೈಃ ಪ್ರಸ್ತಾರ ಇತಿ ನ ದರ್ಶಿತಃ ||
14 ಸೋಮನಾಥ, ರಾಗವಿಬೋಧ ೧.೭, ವ್ಯಾ. ಪು. ೧೦ ದೇಶೀ – ಮಾರ್ಗ ತಥಾಅ ಚ ಬೃಹದ್ದೇಶ್ಯಾಂ ಮತಂಗಃ
‘ಅಬಲಾಬಾಲಬಾಲಗೋಪಾಲೈಃ ಕ್ಷಿತಿಪಾಲೈರ್ನಿಜೇಚ್ಛಯಾ |
ಗೀಯತೇ ಯಾನುರಾಗೇಣ ಸ್ವದೇಶೇ ದೇಶೀರುಚ್ಯತೇ ||
ನಿಬದ್ಧಶ್ಚಾನುಬದ್ಧಶ ಮಾರ್ಗೋ sಯಂ ದ್ವಿವಿಧೋ ಮತಃ |
ಅಲಾಪಾದಿ ನಿಬದ್ಧೋ ಯಃ ಸ ಚ ಮಾರ್ಗಃ ಪ್ರಕೀರ್ತತಃ ||
ಅಲಾಪಾದಿವಿಹೀನಸ್ತು ಸ ಚ ದೇಶೀ ಪ್ರಕೀರ್ತಿತಃ |
15 ಅದೇ, ೧.೧೦-೧೨ವ್ಯಾ, ಪು. ೧೩ ಪಂಚವಿಧನಾದ ಮತಂಗಮತೇ ತು –
‘ಸೂಕ್ಷ್ಮಶ್ಚೈವಾತಿಸೂಕ್ಷ್ಮಶ್ಚ ವ್ಯಕ್ತೋ sವ್ಯಕ್ತಶ್ಚ ಕೃತ್ರಿಮಃ
ಸೂಕ್ಷ್ಮನಾದೋ ಗುಹಾವಾಸೀ ಹೃದಯೇ ಚಾತಿಸೂಕ್ಷ್ಮಕಃ ||’
16 ಅದೇ, ೧.೧೬ ವ್ಯಾ. ಪು. ೧೬ ಶ್ರುತಿವೈವಿಧ್ಯ ಮತಂಗಮತಂ ತು ‘ಸಾ ಚೈಕಾಪಿ ದೃಧಾ ಜ್ಞೇಯಾ’
ಇತ್ಯಾದಿ ಸಮ್ಯಕ್ತು ‘ಶ್ರುತಯೋ ನವ’ ಇತ್ಯಂತಮ್ |
17 ಅದೇ ೧.೩೫ ಪೀಠಿಕೆ, ಪು. ೨೬ ಲಕ್ಷಲಕ್ಷಣವಿರೋಧಪರಿಹಾರ ಇದಾನೀಂ ಪ್ರಸಂಗೇನೋಕ್ತವಕ್ಷ್ಯಮಾಣನಾನಾವಿಧಲಕ್ಷ್ಯ-ಲಕ್ಷಣದೋಷ
ಪರಿಹಾರಾಯ ಮತಂಗಮುನಿಃ – ಶಂಕಾದಿ ಸಂಮತಸ್ಯ
ಶ್ರೀಹನೂಮತಸ್ಯ ಸಂಮತಿಮಾಹ-
18 ಅದೇ ೧.೩೭ ವ್ಯಾ. ಪು. ೨೮ ಸಂವಾದಿಲಕ್ಷಣ ತಥಾ ಚ ಮತಂಗಃ ‘ಸಂವಾದಿನಸ್ತು ಪುನಃ
ಸಮಶ್ರುತಿಕತ್ವೇ ಸತಿ
19 ಅದೇ ೧.೪೪ ವ್ಯಾ. ಪು. ೩೧ ಮೂರ್ಛನಾತಾನಭೇದ ತಥಾ ಚ ಮತಂಗಃ – ‘ನನು ಕಥಂ ಮೂರ್ಛನಾ ತಾನ
ಯೋರ್ಭೇರ್ದ? ಉಚ್ಯತೇ,
ಆರೋಹಾsವರೋಹಕ್ರಮಯುಕ್ತಃ ಸ್ವರಸಮುದಾಯೋ
ಮೂರ್ಛನೇತ್ಯುಚ್ಯತೇ, ತಾನಸ್ತ್ವಾರೋಹಣಂ ಭವತೀತಿ
ಭೇದಃ’ ಇತಿ
20 ಗೋವಿಂದದೀಕ್ಷಿತ, ಸಂಗೀತಸುಧಾ ೧.೧೫೮, ಪು. ೨೦ ಸ್ವರಭೇದನಿರ್ಣಯ ಗಾಂಧರ್ವಶಾಸ್ತ್ರೇ ಪರಿನಿಷ್ಠಿತಾ ಯೇ ಮತಂಗಶಾರ್ದೂಲಕ-ಯಾಷ್ಟಿಕಾದ್ಯಾಃ |
ಆದೇವತಿರ್ಯಙ್‍ಮನುಜಪ್ರಮೋದಹೇತುಪ್ರಭೇದಂ ಕಥೆಯಾಂ ಬಭೂವುಃ ||
21 ತುಲಜೇಂದ್ರ, ಸಂಗೀತಸಾರಾಮೃತ ೧. ಶ್ರತಿಪ್ರಕರಣ, ಪು.೫ ಶ್ರುತಿಸಂಖ್ಯೆ ಅತ್ರ ಶ್ರುತೀನಾಂ ದ್ವಾವಿಂಶತಿತ್ವಮಸಹಮಾನಾ ಮತಂಗಾದಯಃ ಪ್ರಕಾರಾಂತರೇಣ ಸಂಖ್ಯಾ ಮನ್ಯಂತೇ | ತಥಾಹ – ‘ಆಕಾಶಪವನ ಸಂಯೋಗಾತ್ ಪುರುಷಪ್ರಯತ್ನಪ್ರೇರಿತೋ ಧ್ವನಿರ್ನಾಭೇರೂರ್ಧ್ವ ಮಾಕಾಶದೇಶಮಾಕ್ರಾಮನ್ ಧೂಮವತ್ ಸೋನಾಪದಕ್ರಮೇಣ ಪವನೇಚ್ಛಯಾ ssರೋಹನ್ನಂತರ್ಭೂತಪೂರಣಪ್ರತ್ಯಯಾರ್ಥತಯಾ
ಚತುಃಶ್ರುತ್ಯಾದಿಭೇದಭಿನ್ನಃ ಪ್ರತಿಭಾಸತ ಇತ್ಯೇಕೈವ
ಶ್ರುತಿಃ’ ಇತಿ ಮತಂಗಃ | —
22 ಅದೇ, ೨. ಶುದ್ಧಸ್ವರಪ್ರಕರಣ, ಪು. ೧೦-೧೨ ತಾದಾತ್ಮ್ಯಾದಿ ಶ್ರುತಿ-ಶ್ವರ ಸಂಬಂಧ ಸ್ವರಾಣಾಭಿವ್ಯಕ್ತಿರಿತಿ ವಾ ಮತಂಗಾದಿ ಸಂಮತಂ ಮತದ್ವಯ ಮೇವ ಗ್ರಾಹ್ಯಮ್, ಷಡ್ಜಾದಿನಾಮ್ನಾಂ ಅನ್ವರ್ಥತಾ ಚ
      ಮತಂಗಾದಿ ಭಿರುತ್ತಾ ತದ್ಯಥಾ-
‘ಷಣ್ಣಾಂ ಸ್ವರಾಣಾಂ ಜನಕಃ ಷಡ್ಭಿರ್ವಾ ಜಾಯತೇ ಸ್ವರೈಃ |
ಷಡ್ಜೋ ವಾ ಜಾಯತೇ s೦ಗೇಭ್ಯಃ, ಷಡ್ಜ ಇತ್ಯಭಿಧೀಯತೇ ||’
‘ಪ್ರಾಪ್ನೋತಿ ಹೃದಯಂ ಶೀಘ್ರಮನ್ಯಸ್ಮಾದ್ ಋಷಭಃ ಸ್ಮೃತಃ |
ಯದ್ವಾ ಸ್ತ್ರೀಗವೀಷು ಯಥಾ ತಿಷ್ಠನ್ ವಿಭಾತಿ ಋಷಭೋ ಮಹಾನ್ |
ಸ್ವರಗ್ರಾಮೇ ಸಮುತ್ಪನ್ನಃ ಸ್ವರೋ sಯಮೃಷಬಸ್ತಥಾ’
‘ವಾಚಂ ಗಾನಾತ್ಮಿಕಾಂ ಧತ್ತ ಇತಿ ಗಾಂಧಾರಸಂಜ್ಞಕಃ’
‘ಸ್ವರಾಣಾಂ ಮಧ್ಯಮತ್ವಾಚ್ಚ ಮಧ್ಯಮಃ ಸ್ವರ ಇಷ್ಯತೇ |
ಯದ್ವಾ ಮಮ ಧಿಯೋ ರೋಗ ಇತಿ ಮಧ್ಯಮಶಬ್ದನಮ್ |’
‘ಸ್ವರಾಂತರಾಣಾಂ ವಿಸ್ತಾರಂ ರೋಗ ಮಿಮಾತೇ ಸ ಪಂಚಮಃ ||
ಪಾಠಕ್ರಮೇಣ ಗಣನೇ ಸಂಖ್ಯಯಾ ಪಂಚಮೋsಥ ವಾ |’
‘ಧೀರ್ಯಸ್ಯಾಸ್ತಿ ಚ ಧೀವಾಂಸ್ತತ್‍ಸಂಬಂಧೀ ಧೈವತಃ ಸ್ಮೃತಃ’
ಯದ್ವಾ ‘ಷಪ್ಠಸ್ಥಾನೇ ಧೃತೋ ಯಸ್ಮಾತ್ತತೋ sಸೌ
ಧೈವತಃ ಸ್ಮೃತಃ |’ ‘ನಿಷೀದಂತಿ ಸ್ವರಾಃ ಸರ್ವೇ ನಿಷಾದಸ್ತೇನ ಕಥ್ಯತೇ |’
 (ಆ) ಜಾತ್ಯಧ್ಯಾಯ
23 ಅಭಿನವಗುಪ್ತ, ಅಭಿನವಭಾರತೀ, ನಾಟ್ಯಶಾಸ್ತ್ರಂ, ೨೮.೩೫ ವ್ಯಾ. ಪು. ೩೬ ಗ್ರಾಮಸಾಧಾರಣ –ಧೈವತ್ಯಾರ್ಷಭೀವರ್ಜಾಶ್ಚ, ಸರ್ವಜಾತಯೋ sಸಾಧಾರಣ
ಮಿತಿಷಡ್ಜಗ್ರಾಮಾನುಪ್ರವೇಶಾಚ್ಚತುಃಶ್ರುತಿಕತ್ವವಶಾತ್
ಪಂಚಮೇನ ಭವಿತವ್ಯಮಿತಿ ಕೈಶಿಕಾಪರರ್ಯಾಯಂ
ಷಡ್ಜಮಧ್ಯಮಸಾಧಾರಣಂ ತತ್‍ಸ್ಥಾನಮಪ್ಯಸ್ತಿ,
ತದ್ಗತಾತಿದೇಶಾತ್ತು, ಕೈಶಿಕಭಿನ್ನಕೈಶಿಕಾದಿಗ್ರಾಮ
ರಾಗೇಷ್ವಿತಿ ಸರ್ವಂ ಸುಸ್ಥಮ್ | ಏತದೇವ
ಮತಂಗಾಚಾರ್ಯಾದಿ ಭಿರ್ಗ್ರಾಮಸಾಧಾರಣಮಿತ್ಯುಕ್ತಮ್ |
24 ಅದೇ, ೨೮. ೧೩೭-೧೪೧ರ ವ್ಯಾಖ್ಯಾನ, ಪು. ೬೩ ಗ್ರಾಮರಾಗಾದಿಗಳ ಉತ್ಪತ್ತಿ —ತದ್ಯದಿ ಕಸ್ಯಾಪಿ ಜಾತ್ಯಂಶಕಸ್ಯ ಸಂಬಂಧ್ಯಂಶೋsನ್ಯಸ್ಯ ನ್ಯಾಸೋsನ್ಯದೀಯೋ sಪನ್ಯಾಸ ಇತ್ಯಾದಿ ಬಹುತರವೈಚಿತ್ರ್ಯಮ್ | ತದೇವಂಭೂತಂ ಯನ್ಮಿಶ್ರಗೇಯಂ ತದಸ್ಯಾ ಜಾತಿರರ್ಥಿತಮಿತಿ ಯನ್ನಿಯಮ್ಯತೇ ಮತಂಗನಂದಿಕಶ್ಯಪಯಾಷ್ಟಿಕಾದಿಭಿಸ್ತದರ್ಧಿಕೇನ ರೂಪಾಬಾಹುಲ್ಯೇನ | ಯಥಾ (ವಿಹಿ) ತಂ ಪಾನಕಮಿದಮಿತಿ ನ ತು ಕ್ರಮಮಿಶ್ರಿತಮ್ |
25 ಅದೇ. ೨೯. ೮ ರವ್ಯಾಖ್ಯಾನ, ಪು. ೬೯ ಜಾತ್ಯಂಶಸ್ವರಪ್ರಯೋಗವಿಧಿ ಯೋsಯಂ ಜಾತ್ಯಂಶಕಾನಾಂ ವಿನಿಯೋಗ ಉಕ್ತಃ ಸ ಕಶ್ಯಪ- ಮುನಿಮತಂಗಾದಿಭಿರ್ವಿರುಧ್ಯತೇ | ತಥಾ ಹಿ ತೈರುಕ್ತಮ್-‘ಸಂಭೋಗೇ ಚೈವ ಶೃಂಗಾರೇ ಪ್ರೇಂಖೋಲಿತಕಮೇವ ಚ | ಕಾಮಭೂತೇಷು ಸರ್ವೇಷು ಕುರ್ಯಾನ್ ಮಾಲವಕೈಶಿಕಮ್ | ಭಿನ್ನಷಡ್ಜೋ ಮಾನದೈನ್ಯೇ ಚೈಕಾಂತಜೀವಿತಸ್ಯ ಚ || ಇತ್ಯಾದಿ | ನ ಚ ತೇ ರಸಜಾತಯ ಏತೇಷು ಮತೇಷು | ರಸೇಷು ವಿನಿಯುಕ್ತಾಃ | ಯೇನ ವಿರೋಧಃ ಸ್ಯಾತ್ |
26 ಕುಂಭಕರ್ಣ, ಅದೇ. ೩.೧.೪.೨೩ ಪು. ೧೮೫ ಜಾತಿಗಳಲ್ಲಿ ನ್ಯಾಸವಿಧಿ ನ್ಯಾಸವರ್ಜಂ ಸಮುದ್ದಿಷ್ಟಂ ಮತಂಗಾದಿಮುನೀಶ್ವರ್ಯೆಃ |
ನ್ಯಾಸಸ್ಯಾಂತರಮಾರ್ಗಸ್ಯ ಸತ್ಯಾಲಕ್ಷಣಗಾಮಿನಃ ||
27 ಕುಂಭಕರ್ಣ. ಅದೇ. ೨.೧.೪.೪೧೬ ಪು. ೨೪೨ ಕಪಾಲೋತ್ಪತ್ತಿ ಆಥ ಭರತಮತಂಗಸಮ್ಮತಿಜ್ಞೋ ನಿಗದತಿ ಕಾಲುಜಿಭೂ ಪತಿಃ ಪ್ರೋಕ್ತಮ್ |
ಸುಲಲಿತಪದಸಾಮತುಲ್ಯಂ ವಿಧಿಮುಖಪ್ರಭವಂ ಕಪಾಲಗಾನಮ್ |
28 ಅದೇ. ೨.೧.೪.೪೨೫, ಪು. ೨೪೩ ಕಪಾಲೋತ್ಪತ್ತಿ ವಿವೃಣೋತಿ ಮಹೀಪಾಲೋ ಮತಂಗಸ್ಯ ಮತಾದಿಹ |
ನ ತಥಾ ಪ್ರೀಯತೇ ದೇವೋ ನಾನಾಭಾವೈಃ ಸುಪೂಜಿತಃ ||
29 ಕಲ್ಲಿನಾಥ, ಸಂ.ರ. ೧.೭.೩೫-೩೬ ವ್ಯಾ. ಪು. ೧೮೫ ಜಾತಿಗಳಲ್ಲಿ
ತಾರವ್ಯವಸ್ಥೆ
ಯಥಾ ಯಾವತ್ ಷಡ್ಜಮೇವ ತಾರಗತಿರ್ಮಧ್ಯಮಸ್ಯಾಪ್ಯತ್ರ ಸಂವಾದಿತ್ವಾದನಾಶಿತ್ವಾಶ್ಚ ತಾರಗತೀ ರುದ್ರಟೇನ ಕೃತಾ ಮಧ್ಯಮಸ್ಯೇತಿ ನ ದೋಷ ಇತಿ ಮತಂಗೋಕ್ತಮ್ |
(ಇ) ರಾಗಾಧ್ಯಾಯ (ಈ) ಭಾಷಾಲಕ್ಷಣಾಧ್ಯಾಯ
30 ಹರಿಪಾಲದೇವ, ಸಂಗೀತಸುಧಾಕರ

(ಅಪ್ರಕಟಿತ,) ೫.೬.೪೭, ಪು. ೧೭೯

ಗೌಡರಾಗಗಳು ಗೌಡರಾಗಾಸ್ತ್ರಯಃ ಪ್ರೋಕ್ತಾ ಮತಂಗಾದ್ಯೈರ್ಮನೀಷಿಭಿಃ ||
(i) ಷಡ್ಜಗ್ರಾಮರಾಗಗಳು
31 ನಾನ್ಯದೇವ, ಭರತಭಾಷ್ಯ (ಮುದ್ರಿತ)

(ಬೃ=ಬೃಹದ್ದೇಶ್ಯಾಂ:ಮ=ಮತಂಗೋ
sಪ್ಯಾಹ ಎಂಬ ಪೀಠಿಕೆಗಳೊಡನೆ ಉದ್ದೃತಿಗಳು ಮೊದಲಾಗುತ್ತವೆ.)

ನಟ್ಟರಾಗಲಕ್ಷಣ ಬೃ: ಸಂಪೂರ್ಣೋ ಧೈವತನ್ಯಾಸಗ್ರಹಾಂಶಃ |
32 ೨.೧೯೩, ೧೯೪, ಪು. ೩೭೬ ಗೌಡರಾಗಗಳು ನಟ್ಟಸ್ತಾರಶ್ಚ ಮಂದ್ರಶ್ಚ ಸ್ಯಾದಾಗಾಂಧಾರಪಂಚಮಃ ||
33 ಅದೇ, ೨.೧.೯೭, ಪು. ೨೭೮ ಭೈರವರಾಗಲಕ್ಷಣ ಬ್ರೂ: ‘ಧೈವತಾಂಶಗ್ರಹನ್ಯಾಸಃ ಸಂಪೂರ್ಣೋsಥ ಸಮಸ್ವರಃ |
ಅಗಾಂಧಾರಮಥೋ ಷಡ್ಜ ತಾರೋ ಮಂದ್ರಶ್ಚ ಧೈವತಃ ||
34 ಅದೇ, ೨.೨೦೪, ಪು. ೨೮೧ ಸೋಮ ಬೃ: ‘ಅಂಶೇ ನ್ಯಾಸೇ ಗ್ರಹೇ
ಷಡ್ಜೋಮಧ್ಯಮಸ್ತಾರಮಂದ್ರಯೋಃ |
ಭವೇತ್ ಸ (? ಪ)೦ಚಮಸಂಪೂರ್ಣಃ ಸೋಮರಾಗೋ ನಿಗೋತ್ಕಟಃ ||
35 ಅದೇ ೨.೨೦೭, ಪು. ೨೮೨ ಬಂಗಾಲ ಬೃ : ‘ಮಂದ್ರೇ(ಣ) ರಹಿತಃ ಪೂರ್ಣಃ ಷಡ್ಜನ್ಯಾಸಾಂಶಸಂಯುತಃ |
ಸಮಸಪ್ರಸ್ವರೋ ನಿತ್ಯಂ ಬಂಗಾಲೋ ನಾಮ ಗೀಯತೇ ||’
36 ಅದೇ ೨.೨೧೦, ಪು. ೨೮೩ ರಕ್ತಹಂಸ ಬೃ : ‘ಧೈವತಾಂಶಗ್ರಹನ್ಯಾಸಂ ಮತರಾಂ
ಮಂದ್ರಮಧ್ಯಮಮ್ |’
37 ಅದೇ ೨.೨೧೩, ಪು. ೨೮೪ ಕಾಮೋದ ಬೃ : ‘ಗಾಂಧಾರತಾರಸಂಪೂರ್ಣಃ ಸಾಲ್ಪಮಂದ್ರಃ (?) ಸಮಸ್ವರಃ |
ಕಾಮೋದೋ ಧೈವತನ್ಯಾಸಗ್ರಹಾಂಶಃ ಕಿಲ ಗೀಯತೇ’ ||
38 ಅದೇ ೨.೨೧೬, ಪು. ೨೮೫ ‘ಲಘು’ ಕಾಮೋದ ಬೃ : ‘ತಾರಷಡ್ಜಗ್ರಹಃ ಷಡ್ಜನ್ಯಾಸೋ ಧಾಂಶಃ ಸಮಸ್ವರಃ |
ಗತಾರಮಂದ್ರಃ ಸಂಪೂರ್ಣಃ ಕಾಮೋದೋ ಲಘುರುಚ್ಯತೇ’ ||
39 ಅದೇ ೨.೨೧೯, ಪು. ೨೮೬ ಕಾಮೋದ (ತೃತೀಯ-) ಬೃ : ‘ಗಾಂಧಾರಮಂದ್ರಃ ಪೂರ್ಣಃ (ಸ್ಯಾತ್) ಷಡ್ಜನ್ಯಾಸಗ್ರಹಾಂಶಕಃ |
ಸಪ್ತಭಿಶ್ಚ ಸ್ವರೈಸ್ತುಲ್ಯಃ ಕಾಮೋದಸ್ತ್ವಪರೋ ಭವೇತ್ ||’
40 ಅದೇ. ೨.೨೨೨. ಪು. ೨೮೭ ಮೇಘ ” ಬೃ : ‘ಪೂರ್ಣೋ ಮಂದ್ರೇಣ ರಹಿತೋ ನ್ಯಾಸಾಂಶಗ್ರಹದೈಯತಃ |
ಷಡ್ಜಸ್ತಾರಃ ಸ್ವರಸಮೋ ಮೇಘರಾಗೋ ನಿಗದ್ಯತೇ ||’
41 ಅದೇ. ೨.೨೨೫. ಪು. ೨೮೭ ದೇಶೀ ” ಬೃ : ‘ದೇಶ್ಯಾಮಂಶೇ ಗ್ರಹೇ ನ್ಯಾಸೇ ಧೌವತೋ, ನಾಸ್ತಿ ಪಂಚಮಃ |
ಋಷಭೋsಲ್ಪಸ್ತಾರಮಂದ್ರೋ (ನಾ) ಗಗಾಂಧಾರಶ್ಚ ಹ್ಯುದಾಹೃತಃ ||’
42 ಅದೇ. ೨.೨೨೮. ಪು. ೨೮೯ ಮಲ್ಲಾರ ” ಬೃ : ‘ಧೈವತಾಂಶಗ್ರಹನ್ಯಾಸಃ ಷಡ್ಜಪಂಚಮವರ್ಜಿತಃ |
ನಿಷಾದತಾರೋ ಗಾಂಧಾರಮಂದ್ರೋ ಮಲ್ಲಾರಕಃ ಸ್ಮೃತಃ ||’
43 ಅದೇ. ೨.೨೩೪, ಪು. ೨೯೧ ಭೈರವೀ ” ಬೃ : ‘ಗಾಂಧಾರತಾರಮಂದ್ರಾ ಚ ನ್ಯಾಸಾಂಶಗ್ರಹಧೈವತಾ |
ಸಮಾಖಿಲಸ್ವರಾ ಪೂರ್ಣಾ ಧನ್ಯಾ ಭವತಿ ಭೈರವೀ ||’
44 ಅದೇ. ೨.೨೩೭, ಪು. ೨೯೨ ಗೊಲ್ಲೀ ” ಬೃ : ‘ಋಷಡ್ಜಬಹುಲಾ ತಾರತರಾಥ ಗನಿವರ್ಜಿತಾ |
ಮಂದ್ರೇಣ ರಹಿತಾ ಗೊಲ್ಲೀ ನ್ಯಾಸಾಂಶಗ್ರಹಧೈವತಾ ||’
45 ಅದೇ, ೨.೨೩೯, ಪು. ೨೯೩ ಸಾವರೀ ” ಬೃ: ‘ಷಡ್ಜಾಲ್ಪಾ ತಾರಗಾಂಧಾರ ಪಂಚಮೇನ ಚ ವರ್ಜಿತಾ |
ಸಾವರೀಸಹಿತಾ ನ್ಯಾಸಗ್ರಹಾಂಶೈರ್ಧೈವತಾತ್ಮಕೈಃ ||’
46 ಅದೇ, ೨.೨೪೩, ಪು. ೨೯೪ ಕರ್ಣಾಟವರಾಟೀ ” ಬೃ: ‘ಷಡ್ಜನ್ಯಾಸಗ್ರಹಾ ಧಾಂಶಾ ಧ(ತಾ) ರಾ ಮಂದ್ರಮದ್ಯಮಾ |
ಸಮಸ್ವರಾ sಥ ಸಂಪೂರ್ಣಾ (ಸಾ) ಕರ್ಣಾಟವರಾಟೀ ||’
47 ಅದೇ, ೨.೨೫೦, ಪು. ೨೯೭ ವೇಲಾವಲೀ ” ಬೃ: ‘ಸಮಸ್ವರಾ ಚ ಪೂರ್ಣಾ ಚ ಗ್ರಹಾಂಶನ್ಯಾಸಧೈವತಾ |
ತಾರಮಂದ್ರಾ ಚ ಗಾಂಧಾರೇ ಯಾವದ್ ವೇಲಾವಲೀ ಭವೇತ್ ||’
48 ಅದೇ, ೨.೧೬೧, ಪು. ೨೬೭ ಗೌಡ (ಗಾಡಕೈಸ್ಜಿಕ?) ” ಬೃ: ‘ಟಕ್ಕರಾಗೇಣ ಸದೃಶಃ ಪಂಚಮೇನ ವಿವರ್ಜಿತಃ |
ಷಡ್ಜಂಶನ್ಯಾಸಸಂಪನ್ನೋ ಗೌಡಃ ಸ್ಯಾದ್ ಋಷಭಗ್ರಹಃ ||’
49 ಅದೇ, ಹಸ್ತಪ್ರತಿ, ಪು. ೨೩೯ ಭಾಸವಲಿತಾ ” ಮ: ‘ಪಂಚಮಾಂತಾ ಚ ಮಧ್ಯಂಶಾ ರಿಮಂದ್ರಾ ಬಹುಸಪ್ತಮಾ |
ಸಗಹೀನಾ ಚ ತ್ರಿಭಿನ್ನಾ ಭಾಸವಲಿತಾ ತು ಸಾ |’
50 ಅದೇ, ಪು. ೨೪೦ ಸಾಲವಾಹನಿಕಾ ” ಮ: ‘ನಿಗ್ರಹಾ ಧೈವತನ್ಯಾಸಾ ಋಷಭಾಂಶಾ ಸಯಾತಿ(?) ಸಾ |
ಆಂದೋಲಿತೇನ ಸಂಯುಕ್ತಾ ಸಮಂತಾ ಸಾಲವಾಹನೀ ||’
(ii) ಮಧ್ಯಮಗ್ರಾಮರಾಗಗಳು
51 ಅದೇ, ಪು. ೨೪೫ ಮಧ್ಯಮಗ್ರಾಮರಾಗ ಮ: ‘ಗಾಂಧಾರಸ್ಯಾಧಿಪತ್ಯೇ ನಿಷಾದಸ್ಯ ಗತಾಗತೈಃ |
ಧೈವತಸ್ಯ ತ್ರಿ ( ?-ಸ್ಯಾತಿ? ) ದೌರ್ಬಲ್ಯಾ ಮಧ್ಯಮಗ್ರಾಮ ಉಚ್ಯತೇ
52 ಅದೇ, ಪು. ೨೭೦ ನಟ್ಟನಾರಾಯಣ ” ಮ: ‘ಭವೇನ್‍ಮಧ್ಯಮಗಾಂಧಾರಃ ಪಂಚಮೈರ್ಬಹುಲೋ ಯದಿ |
ಆಂದೋಲಿತಸ್ವರೋ ಧಾಂಶೋ ನಟ್ಟನಾರಾಯಣಸ್ತಥಾ ||’
53 ಅದೇ, ಪು. ೨೭೦ ನಾಗಧ್ವನಿ ” ಬೃ: ‘ಷಡ್ಜವ್ಯಾಪ್ತಿಪಂಚಮಾಂಶಗ್ರಹನ್ಯಾಸಸಮಾಧಿಕಃ |
ಮಂದ್ರಸ್ವರಗದಾನಾಶ್ಚ (?) ಪೂರ್ಣೋ ನಾಗಧ್ವನಿರ್ಭವತ್ |’
54 ಅದೇ, ಪು. ೨೭೦-೨೭೧ ಬಂಗಾಲ ” ಬೃ: ‘ಕೈಶಿಕೀಜಾತೀಸಂಭೂತೋ ಮಂದ್ರಪಂಚಮತಾರಕಃ |
ಬಹುತ್ವಾಲ್ಪರಹಿತಃ ಪೂರ್ಣೋ ಬಾಂಗಾಲ ಇಷ್ಯತೇ ||’
55 ಅದೇ, ಪು. ೨೭೧ ಆಮ್ರಪಂಚಮ ” ಬೃ: ‘ತಾರಗಾಂಶಗ್ರಹನ್ಯಾಸೋ ನಿತಾನಿತಾ ಮಂದ್ರವರ್ಜಿತಃ |
ಮಧ್ಯತಾರತರಃ ಪೂರ್ಣೇ ಸಮವಾಯಾಮ್ರಪಂಚಮಃ ||’
56 ಅದೇ, ಪು. ೨೭೧ ದೇಶಾಖ್ಯಾ ” ಬೃ: ‘ಗ್ರಹಾಂಶನ್ಯಾಸಗಾಂಧಾರೋ ರಿಹೀನೋಚ್ಚಸಮಸ್ವರಃ |
ನಿತಾರಮಂದ್ರೋ ದೇಶಾಖ್ಯೋ ಗಾಂಧಾರೀಜಾತಿಸಂಭವಃ ||’
57 ಅದೇ, ಪು. ೨೭೨ ಗೂರ್ಜರೀ ” ಬೃ: ‘ಷಡ್ಜಗ್ರಹಾ ಪಂಚಮಾಂಶಾ ಮನ್ಯಾಸಾ ತಾರಮಧ್ಯಮಾ |
ಪೂರ್ಣಾsಲ್ಪಾ ಸಮಂ–ದ್ವಾವರೀ ವಿರಿತ್ಯಭಿಧೀಯತೇ(?) |’
ರಿತಾರಾ ಮಂದ್ರ ಮಾ ನ್ಯಾಸಗ್ರಹಾಂಶೇ ಕೃತಪಂಚಮಾ |
ರಿಹೀನಾ ಷಡ್ಜಪಾಂ ಭೂರಿಷಸಮುದ್ಭೂತಾ ಗೂರ್ಜರಿಕ | (?)
58 ಅದೇ, ಪು. ೨೭೨ ರಂಜಿಕಾ ” ಮ: ‘ಗಾಂಶನ್ಯಾಸಗ್ರಹಾ ದೀರ್ಘೋಲ್ಲಾಸಿತೈರ್ಗಮಕೈರ್ಯುತಾ |
ತಾರಮಂದ್ರಾ ಚ ಪೂರ್ಣಾ ಚ ರಂಜಿಕೇತ್ಯಭಿಧೀಯತೇ ||’
59 ಅದೇ, ಪು. ೨೭೩ ರೀತಿ ” ಬೃ: ‘ಷಡ್ಜಗ್ರಹಾ ಪಂಚಮಾಂಶಾ ಮನ್ಯಾಸಾ ತಾರಮಧ್ಯಮಾ |
ಪೂರ್ಣಾಲ್ಪಾ ಸಮಂದ್ರಾ ಚ ರೀತಿರಿತ್ಯಭಿಧೀಯತೇ ||’
60 ಅದೇ. ಪು. ೨೭೪ ಪ್ರಥಮಮಂಜರೀ ” ಬೃ: ‘ಷಾಡವಾ ಋಷಭತ್ಯಾಗಾ ಗಮಸಾಂಶಾ ಧಗಮಾ (ಗೋ)ತ್ಕಟಾ |
ತಾರಾ (ಚ) ಪಗ್ರಹನ್ಯಾಸಾಂಶಕಾ ಪ್ರಥಮಮಂಜರೀ |’
61 ಅದೇ, ಪು. ೨೭೪  ” (?) “ ಬೃ: ‘ತಾರಹೀನಾ ಷಡ್ಜಮಂದ್ರಾ ಪವ್ಯಾಪಿರ್ಗತ (-ರ್ಗಧ? ) ವರ್ಜಿತಾ |
ಪಂಚಮಾಂಶಗ್ರಹನ್ಯಾಸಾ ಮಲ್ಲಾರೀಸದೃಶಸ್ವರಾ ||’
62 ಅದೇ, ಪು. ೨೭೪ ಭೋಗವರ್ಧಿನೀ ” ಬೃ: ‘ಮಪಗೈರ್ಬಹುಶೋ sಲ್ಪಾ ಸಗ್ರಹಾಂಶೀಕೃತಧೈವತಾ |
ಆಗಾಂಧಾರತಾರಮಂದ್ರಾ ರಿಹೀನಾ ಭೋಗವರ್ಧಿನೀ ||’
63 ಅದೇ, ಪು. ೨೭೫ ಸ್ತಂಭಪತ್ರಿಕಾ ” ಬೃ: ‘ಷಡ್ಜಾಂಶಾ ಧೈವತನ್ಯಾಸಾ ಸಂಪೂರ್ಣಾ ಸಪ್ತಭಿಃ ಸ್ವರೈಃ |
ಕವಿಭಿಃ ಕಕುಭೋತ್ಥಾ ಕಥ್ಯತೇ ಸ್ತಂಭವರ್ತ್ತಿಚ (!ಪತ್ರಿಕಾ) ||’
64 ಅದೇ, ಪು. ೨೭೫ ಕಾಲಿಂದೀ ” ಬೃ:‘ಕಾಲಿಂದೀ ಧೈವತನ್ಯಾಸಾ ಗಾಂಧಾರಾಂಶಸಮಸ್ವರ |
ಪಂಚಮರ್ಷಭಹೀನಾ ಚ ನಿಷಾದೇನ ಚ ದುರ್ಬಲಾ ||’
65 ಅದೇ, ಪು. ೨೭೭ ಕಿರಣಾವಲೀ ” ಬೃ: ‘ನಿಷಾದಾಂತಾ ಸಗ್ರಹನ್ಯಾಸಾ ಸತಾರಾ ಧರಿವರ್ಜಿತಾ |
ಗಾಂಧಾರಮಧ್ಯಬಹುಲಾ ವಿಜ್ಞೇಯಾ ಕಿರಣಾವಲೀ ||’
66 ಅದೇ, ಪು. ೨೭೭-೨೭೮ ದೇವಕೃತಿ ” ಬೃ: ‘ಮಧ್ಯಮವ್ಯಾಪ್ತಿಕಾ ಷಡ್ಜನ್ಯಾಸಧೈವತಕಗ್ರಹಾ |
ಸಮಸ್ವರಾ ದೇವಕೃತಿರಮಂದ್ರಾ ಪರಿವರ್ಜಿತಾ ||’
67 ಅದೇ, ಪು. ೨೭೮ ತ್ರಿಣೇತ್ರಕೃತಿ ” ಬೃ: ‘ಮನ್ಯಾಸಾ ಸಗ್ರಹಾ ಪಾಂಶಾ ಗಾಂಧಾರಾಲ್ವಾ ಸಮಸ್ವರಾ |
ಆಷಡ್ಜಂ ತಾರಮಂದ್ರಾ ಚ ತ್ರಿನೇತ್ರಕೃತಿರಿಷ್ಯತೇ ||’
(iii) ಗಾಂಧಾರಗ್ರಾಮರಾಗಗಳು
68 ಅದೇ, ಪು. ೨೭೯ ಕೋಮಲಾ
(ತೃತೀಯ-)
ಮ: ‘ಋಷಭಾಂಶಗ್ರಹನ್ಯಾಸಾ ಸನಿಷಾದಾ ಧೈವತವರ್ಜಿತಾ |
ದೀರ್ಘಮಂದ್ರಾ ತು ಷಡ್ಜೇ ತು ಕೋಮಲಾ ಸರ್ವದಾ ಸ್ಮೃತಾ ||’
69 ಅದೇ, ಪು. ೨೮೦ ರುದ್ರಹಾಸ ” ಮ: ‘ಷಡ್ಜಗ್ರಹಾಂಶಯುಕ್ತೋ ಮಾಪನ್ಯಾಸೋ sಥ ಪಂಚಮಾಂತಶ್ಚ |
ಋಷಭನಿಷಾದತ್ಯಕ್ತೋ ರುದ್ರಹಾಸಸಾಧತಾ (?ಸಧೃತಾ?) ರಮಾತ್ |’
70 ಅದೇ, ಪು. ೨೮೧ ವೀರಹಾಸ ” ಮ: ‘ಪಂಚಮಾಂಶೋ ಮಧ್ಯಮಾಂತಃ ಷಡ್ಜಾಪನ್ಯಾಸಸಂಯುತಃ |
ಗಾಂಧಾರವರ್ಷಭಹೀನಶ್ಚ ವೀರಹಾಸ ಇಹೇಷ್ಯತೇ ||’
71 ಅದೇ, ಪು. ೨೮೨ ಪಿಂಜರೀ ” ಮ: ‘ಧೈವತಾಂಶಾ ಮಧ್ಯಮಾಂತಾ (ಚ) ಷಡ್ಜರ್ಷಭವರ್ಜಿತಾ |
ನಿಷಾದಾಲ್ಪಾ ವಿಜ್ಞೇಯಾ ಪಿಂಜರೀ ತಾನಪಂಚಮಾ |’
72 ಅದೇ, ಪು. ೨೮೨ ಷಾಡವ ” ಬೃ: ‘ನಿಷಾದಾಂಶಗ್ರಹನ್ಯಾಸಃ ಷಡ್ಜಾಪನ್ಯಾಸಭೂಷಿತಃ |
ಧೈವತಸ್ವರಹೀನಶ್ಚ ರಾಗಃ ಷಾಡವಕೋ ಮತಃ ||’
73 ಅದೇ, ಪು. ೨೮೭ ಪಾರ್ವತೀ ” ಮ: ‘ಸಾನ್ಯಾಸಾವ(?ಪ?) ನಿತ್ಯಕ್ತಾ ಮಾಪನ್ಯಾಸೋರುಪಧ್ವನಿಃ |
ಪಂಚಮತಾರಾಭಿಹಿತಾ ಪಾರ್ವತೀ ಗೀತವಿತ್ತಮೈಃ |’
74 ಅದೇ, ಪು. ೨೯೦ ಶಕವಲಿತಾ ” ಬೃ: ‘ಪಂಚಮಾಂಶಗ್ರಹನ್ಯಾಸಾ ಷಡ್ಜಗಾಂಧಾರವರ್ಜಿತಾ |
ಶಕವಲಿತಾ ದೀರ್ಘೈಃ ಸ್ಯಾಹ(? ದ್ದ) ರಿಮೈಃ ಸಸ್ಫುರಿತೈಃ ಜನೈಃ ||’
75 ಅದೇ, ಪು. ೨೯೦ ಸಿಂಧುವಲಿತಾ ” ಬೃ: ‘ಸಾಂಶನ್ಯಾಸಗ್ರಹಾ ಮಂದ್ರಸಪ್ತಮಾ ಧವರ್ಜಿತಾ |
ಋಷಭಾಭ್ಯಾ(?ಲ್ಪಾ)೦ಶಬಹುಲಾ ಸಿಂಧುವಲಿತಾ ಮತಾ ||’
76 ಅದೇ, ಪು. ೨೯೧ ಚೂತಮಂಜರೀ ” ಬೃ: ‘ಧೈವತಾಂಶಗ್ರಹನ್ಯಾಸಾ ಷಡ್ಜಮಂಪಮವರ್ಜಿತಾ |
ಮಧ್ಯಾಭ್ಯಾ(?ಲ್ಪಾ?) ತಾರಗಾಂಧಾರ ನಿವಹುತಶ್ಚೂತಮಂಜರೀ ||’
77 ಅದೇ, ಪು. ೨೯೧ ಹಿಮಕೃತಿ ” ‘ನಿಷಾದಾಂಶಾಗ್ರಹನ್ಯಾಸಾ ಧೈವತಬಹುನವರ್ಜಿತಾ |
ಗಾಪನ್ಯಾಸಾ (ಗತಾರಾ) ಚ ಸದಾ ಹಿಮಕೃರ್ತಿಮತಾ ||’
78 ಅದೇ, ಪು. ೨೯೨ ಸ್ವಭಾವಕೃತಿ ” ಬೃ: ನಿಮಂದ್ರಾ ಮಧ್ಯಮವ್ಯಾಪ್ತಿರ್ಮುಕ್ತಪಂಚಮಧೈವತಾ |
ನ್ಯಾಸಾಂಶಗ್ರಹ ಧದ್ದಧ (? ಷಡ್ಜಾ ಚ) ಸ್ವಭಾವಕೃತಿಷ್ಯತೇ ||’