VI ಬೃಹದ್ದೇಶೀ ಮತ್ತು ಅಭಿನವಭಾರತೀಗಳಲ್ಲಿ ಪಾಠಸಾದೃಶ್ಯ

ಬೃಹದ್ದೇಶಿಯಲ್ಲಿ ಈಗ ದೊರೆತಿರುವ ಗ್ರಂಥಪಾಠವನ್ನು ನಿರ್ಣಯಿಸಲು ಇರುವ ಇನ್ನೊಂದು ಸಮಸ್ಯೆಯೆಂದರೆ ಅಭಿನವಭಾರತಿಯಲ್ಲೂ ಸದೃಶ ಅಥವಾ ಸಮಾನಾಂತರ ಪಾಠಗಳಿರುವುದು. ಇವೆಲ್ಲ ಅಭಿನವಭಾರತಿಯ ೨೮ ಮತ್ತು ೨೯ನೆಯ ಅಧ್ಯಾಯಗಳಿಗೆ ಸೀಮಿತವಾಗಿವೆ. ಎರಡೂ ಗ್ರಂಥಗಳ ನಡುವೆ ಸುಮಾರು ೩೦೦ ವರ್ಷಗಳ ಅಂತರವಿದೆ. ಈ ಸದೃಶಪಾಠಗಳಲ್ಲಿ ಯಾವುದು ಅಭಿನವಭಾರತಿಯಲ್ಲಿ ಉದ್ದೃತಿ ಅಥವಾ ತಾತ್ಪರ್ಯ ಯಾವುದು ಬೃಹದ್ದೇಶಿಯಲ್ಲಿ ಪ್ರಕ್ಷಿಪ್ತ, ಎಂಬುದನ್ನು ನಿರ್ಣಯಿಸುವ ತೊಡಕಾದ ಕೆಲಸವು ಇನ್ನೂ ಉಳಿದಿದೆ. ಈ ಸದೃಶ್ಯಗ್ರಂಥಾಂಶಗಳನ್ನು ಡಾ || ಎನ್. ರಾಮನಾಥನ್‍ರವರು ಮೇಲೆ ಉಲ್ಲೇಖಿಸಿರುವ ತಮ್ಮ ಸಂಶೋಧನ ಪ್ರಬಂಧದಲ್ಲಿ (ಪು. ೨೬-೩೦) ಗುರುತಿಸಿದ್ದಾರೆ. ಅದರ ಪ್ರಯೋಜನವನ್ನು ಇಲ್ಲಿ ಪಡೆದುಕೊಳ್ಳಲಾಗಿದೆ.

ಬೃಹದ್ದೇಶೀ ಅಭಿನವಭಾರತೀ
೧. (ಅ) ಏತದೇವ ಸ್ಪಷ್ಟೀಕರಣಾರ್ಥಂ ಪ್ರಸ್ತಾರೇಣ
ದರ್ಶಯಾಮಿ | (ಆ) ತತ್ರ ಕೇಚಿದ್ ದಂಡಪ್ರಸ್ತಾರೇಣ
ದರ್ಶಯಂತಿ ದ್ವಾವಿಂಶಂತಿಃ ಶ್ರುತಯೋ ರೇಖಾಣಾಮಿತಿ |
(ಇ) ಅನ್ಯೇ ತು ವೀಣಾ ಪ್ರಸ್ತಾರ ಮಾಹುಃ | ೮೦1
(ಅ) ವಯಂ ಪುನರ್ಮಂಡಲಪ್ರಸ್ತಾರಃ ಬ್ರೂಮಃ | (ಆ) ತಥಾ
ಹಿ – (ಇ) ತಿರ‍್ಯಗೂರ್ಧ್ವಂ ಚ ಪಂಚ ಷಡ್ ರೇಖಾ –
ಇತ್ಯೇಕಾದಶ (ಈ) ಉಭಯತೋ ದ್ವಾವಿಶಂತಿಃ | (ಉ)
ಏವಂ ಗ್ರಾಮದ್ವಯೇ2Sಪ್ಯು ಪಯೋಗಿನ್ಯಃ ಶ್ರುತಯ ಇತಿ
ದರ್ಶಿತಾಃ | (ಊ) ತದ್ಯಥಾ – ೮೧

—-
1. ಈ ಸಂಖ್ಯೆಗಳು ಪ್ರಕೃತಸಂಸ್ಕರಣದ ಗ್ರಂಥಭಾಗಗಳು
2. ಮೂಲಗ್ರಂಥ ಪಾಠದಲ್ಲಿರುವ ‘-ದ್ವಯೋ’ ಎಂಬ
ಅಚ್ಚಿನ ತಪ್ಪನ್ನು (ಪು.೨೨) ಹೀಗೆ ತಿದ್ದಿಕೊಳ್ಳಬೇಕು

…ದ್ವಿಶ್ರುತಿಭಿಸ್ತ್ರಿಶ್ರುತಿಚತುಃಶ್ರುತಿಸ್ವರಸ್ವರೂಪಂ ಚ ಶ್ರುತೇರಿಯತ್ತಾ (ನಿಧಾರಣಾ) ಸ್ಫಟೀಕರಣಾರ್ಥಂ ಪ್ರಸ್ತಾರಾದೇವ ದೃಶ್ಯತೇ | ತತ್ರ ದಂಡಪ್ರಸ್ತಾರೇಣ ಕೇಚಿದ್ ದರ್ಶಯಂತಿ ದ್ವಾವಿಂಶತಾ ರೇಖಾಣಾಮ್ | ಅನ್ಯೇ ತು ಮಂಡಲಪ್ರಸ್ತಾರಮಾಹುಃ | ತಿರ್ಯಗೂರ್ಧ್ವಂ ಚ ಪಂಚ ಷಡ್ರೇಖಾ ಇತ್ಯೇಕಾದಶೋಭಯತೋ ದ್ವಾವಿಂಶತಿಃ | (ನಾಟ್ಯಶಾಸ್ತ್ರಂ ೨೮.೨೭-೨೮ ವ್ಯಾ. ಪು. ೨೩,೨೪)
೨. (ಅ) ನನು ಷಡ್ಜಾದೀನಾಂ ಕಥಂ ಸ್ವರತ್ವಂ,
ವ್ಯಂಜನತ್ವಾತ್? (ಆ) ಯದಿ ವ್ಯಂಜನಾನಾಂ
ಸ್ವರತ್ವಮಭಿಧೀಯತೇ ತದಾನೀಂ ಕಾದೀನಾಮೇ ವಾಸ್ತು
ಸ್ವರತ್ವಮ್ | ೧೦೩
(ಆ) ಆತ್ರೋಚ್ಯತೇ – (ಆ) ಅಸಾಧಾರಣತ್ವಾತ್ ಷಡ್ಜಾದೀನಾಮೇವ ಸ್ವರತ್ವಂ ನ ಕಾದೀನಾಮಿತಿ | (ಇ)ನನು
ಷಡ್ಜಾದೀನಾಮ-ಸಾಧಾರಣತ್ವಂ ಕಥಮ್? (ಈ)
ಅಪ್ತೋಪದೇಶಾತ್ ಶಡ್ಜಾದೀನಾಮ-ಸುಧಾರಣತ್ವಮ್ | ೧೦೪
ಅಥ ವಾ ಷಡ್ಜಾದಯಹ್ ಸ್ತರಾ ನ ಭವಂತಿ, ಆಕಾರಾದಯ
ಏವ ಸ್ವರಾಃ | ಷಡ್ಜಾದಯಸ್ತು ತೇಷಾಮಾಕಾರಾದೀನಾ
-ಮುಚ್ಚಾರಣಾರ್ಥಮಿತಿ | ೧೦೭
(ಆ) ನನು ಚತುರ್ದಶಾನಾಂಸ್ವರಾಣಾಂ ಮಧ್ಯೇ
ಆಕಾರಾದೀನಾಂ ಕಥಂ ಗ್ರಹಣಂ? — (ಉ) ಯದ್ವಾ
ಷಡ್ಜಾದೀನಾಂ ವ್ಯಂಜನಾನಾಂ ಸ್ವರತ್ವಮುಕ್ತಮ್ |
(ಆ) ನನು …… (ಈ) ಆಚಾರ‍್ಯಾಣಾಂ ಪರಿಭಾಷ್ಯೇತ್ಯರ್ಥಃ |
ನನು ರಿ ಇತಿ ವ್ಯಂಜನಂ ಕಥಂ ಸ್ವರಸ್ಯಾನುಕಾರಃ ?ನನು
ಸಕಾರಾದಯೋSಪಿ ಕಿಂ ರೂಪಾಃ? ನನು ಋಷಭಶಬ್ದಸ್ಯ
ನಾಯಮಾದ್ಯಃ ತರ್ಹಿ ಷಡ್ಜಸ್ವರಸ್ಯ ಸಕಾರೋ ನ ಪ್ರಥಮ
ಇತಿ | ಸಂಕೇತ ಮಾತ್ರಂಹಿ ತತ್ | ರಿ ಋ ಇತ್ಯುಭಯಥ್ಯಾ
-ವ್ಯದೋಷಃ |
(ನಾಶಾ. ೨೮.೩೩, ೩೪ ಗದ್ಯ ವ್ಯಾ. ಪು.೨೯)
೩. ಸಂವಾದಿನಸ್ತು ಪುನಃ ಸಮಶ್ರುತಿಕತ್ವೇ ಸತಿ
ತ್ರಯೋದಶ ನವಾಂತರತ್ವೇನಾವಬೋದ್ದಬ್ಯಾಃ | ೧೧೩
ಅನ್ಯೋನ್ಯಸ್ಯೇತಿ ವಚನಂ (ನಾಶಾ.೨೮.೨೨ ರಗದ್ಯ)
ತಾವದ್ಯಸ್ಯ ಸಂವಾದಿನೌ ಮಾ ಭೂತಾಮಿತಿ ಸಮಾನಶ್ರು
-ತಿಕತ್ವೇನ ಸಂವದನಾತ್ ಸಂವಾದಿನೌ
(ನಾಶಾ.೨೮.೨೩ ವ್ಯಾ. ಪು. ೧೭)
೪. (ಅ) ಷಟ್ಸ್ವರಾ ಆವಂತಿ ರಕ್ಷಂತಿ ಯೇ ತೇ
ಷಾಡವಸ್ವರಾ || (ಅ) ತೇಷಾಂ ಪ್ರಯೋಗಃ ಷಾಡವಃ |
೧೯೬
(ಅ) ಉಡವೋ ನಕ್ಷತ್ರಾಣಿ ಗಚ್ಛಂತಿ ಯಸ್ಮಿನ್ನಾಕಾಶೇ
ತದಾಕಾಶಮೌಡುವಮ್ | (ಆ) ತೇನ ಪಂಚ ಸಂಖ್ಯಾ
ಲಕ್ಷ್ಯತೇ, ಪಂಚಮಂ ಹಿ ಮಹಾಭೂತಂ ತತ್‍ಸ್ಥಾ ಚ
ವಿದ್ಯತೇ ಯಸ್ಯ ತದೌಡುವಿತಮ್ | ೧೯೭
ಷಟ್ ಸ್ವರಾ | ಷಾಡವಃ, ಷಟ್ ಆವಂತಿ ಯೇ ಪ್ರಯೋಗಂ
ತೇ ಸ್ವರಾಃ ಷಾಡವಾಃ ತೇಷು ಭವಃ ಪ್ರಯೋಗಃ
ಷಾಡವಃ | ತತ್ ಪ್ರಯೋಗಾತ್ ಪಂಚಸ್ವರಾ ಔಡುವಿಕಾಃ,
ಉಡವೋ ನಕ್ಷತ್ರಾಣಿ, ವಾಂತಿ ಗಚ್ಛಂತಿಸ್ಮಿನ್ನಿತಿ ಉಡುವ
-ಮಾಕಾಶಂ, ತೇನ ಪಂಚಸಖ್ಯಾ, ತೈಃ ಸಪ್ತ ಲಕ್ಷ್ಯಂತೇ |
ಪಂಚಮಂ ಮಹಾಭೂತಂ ಹಿ ತತ್ರ ಸಾ (?ತತ್ ಸ್ಥಾ)
ಸಂಖ್ಯಾ ಸಂಜಾತಾ | ಯೇಷಾಂಕೃತೇ ಔಡುವಿತಾಃ ಸ್ವರಾಃ
ತೇಷು ಬಹ್ವತ್‍ಪ್ರಯೋಗಃ ಔಡುವಿತಃ |
(ನಾಶಾ.೨೮.೩೩, ೨ನೆಯ ಗದ್ಯ ವ್ಯಾ. ಪು. ೨೫)
೫ (ಅ) ಕಥಮೇಷಾಂ ತಾನಾನಾಂ ಪ್ರಯೋಗಃ ಕಾರ‍್ಯ
ಇತಿ ಚೇತ್, ಉಚ್ಯತೇ | (ಆ) ದ್ವಿವಿಧಸ್ತಾನಪ್ರಯೋಗಃ
ಪ್ರವೇಶೇನ ನಿಗ್ರಹೇಣ ಚ | (ಇ) ಪ್ರವೇಶ
ಋಷಭಾಪೇಕ್ಷಯಾ ಷಡ್ಜಸ್ಯಾಧರೀಭೂತಸ್ಯ
ಲೋಪನೀಯಸ್ಯ ವಿಪ್ರಕರ್ಷಃ ಪೀಡನಂ ಋಷಭಾಪಾದನಂ
ಇತಿ ಯಾವತ್ | ಇತಿ ವಿಪ್ರಕರ್ಷೇಣ ಪ್ರವೇಶನಮ್ | ೨೩೪
ಮಾರ್ದವೇನ ಯಥಾ- ತಸ್ಮೈವ ಷಡ್ಜಸ್ಯ
ನಿಷದಾಪೇಕ್ಷಯಾ ಉತ್ತರೀಭೂತಸ್ಯ ಮಾರ್ದವಂ ಶಿಥಿಲೀಕರಣಂ ನಿಷಾದಾಪಾದನಮಿತಿ ದ್ವಿವಿಧಂ
ಪ್ರವೇಶನಮ್ ೨೩೫
ವೀಣಾಯಾಂ ಯದಾ ತಾನಕ್ರಿಯಾ ತದಾಲೋಪ್ಯ
ಸ್ವರತಂತ್ರೀತ್ವಂ ಕ್ರಿಯತೇ ಯದಿ ತಾವತ್ ಕೌಶಲಂ ನ
ಸ್ದೃಶ್ಯತೇ ಯದಿ ವಾ ಶಿಥಿಲೀಕರಣೇ ಸಮಸ್ವರಸಾಮ್ಯಂ
ಪೀಡನೇನ ಚೋತ್ತರಸ್ವರಸಾಮ್ಯಂ ನೀಯತೇ | ತದಾಹ
ದ್ವಿವಿಧೇತಿ (ನಾಶಾ.೨೮.೩೩. ನಂತರ ೩ನೆಯ ಗದ್ಯ,
ಪು. ೨೭) | ತಾನಾರ್ಥಕ್ರಿಯಾ ಉಪಾಯ ಇತ್ಯರ್ಥಃ |
ಆಪರಸ್ಯ ಋಷಭಾಪೇಕ್ಷಯಾ ಷಡ್ಜಸ್ಯ ವಿಪ್ರಕರ್ಷಃ |
ಪೀಡಿತಂ ಋಷಭಾಪಾದನಮ್ | ತಸ್ಕೈವ ನಿಷಾದಾಪೇಕ್ಷೆ
-ಯೋತ್ತರ ಮಂದ್ರಾಯಾ ನಿಷಾದತಾಪಾದನಂ ತದತ್ರ
ಯೋ ಬಲವಾನ್ ಪ್ರಯೋಗೇ ಭವತಿ ತತ್ರ
ಅವಲೋಪ್ಯಂತರ್ಭಾವಃ ಸ ಹಿ ಘೃಷ್ಟತಾಮೇವಂ
ವ್ರಜೇತ್ | (ನಾಶಾ. ೨೮.೩೩ ನಂತರದ ೩ನೆಯ ಗದ್ಯ
ವ್ಯಾ. ಪು. ೨೭)
೬. (ಅ) ನನು ತ್ರಿಷು ಸ್ಥಾನೇಷು ಸ್ವರಪ್ರಯೋಗ ಇತ್ಯುಕ್ತಂ
ಕಾಕು ವಿಧಾನೇ | (ಆ) ತತ್ರ ಕತಮಂ
ಸ್ವರಸಪ್ತಕಮಲಂಬ್ಯಮೂರ್ಛನಾ ಕಾರ‍್ಯೇತಿ ಯೇ
ಸಂಶೇರತೇ ತಾನ್ ಪ್ರತ್ಯಾಹ – (ಇ) ಮಧ್ಯಮ ಸಪ್ತಕೇನ
ಮೂರ್ಛನಾನಿರ್ದೇಶೋ ಭವತಿ ಮಂದ್ರತಾರ
ಸಂಸಿದ್ದ್ಯರ್ಥಮ್ | (ಈ) ಕುತಃ? (ಉ) ಮಧ್ಯಮಸಪ್ತಕಸ್ಯಾವಿನಾಶಿ ತ್ವಾದಿತ್ಯರ್ಥಃ | ೨೪೦
(ಆ) ನನು ಮಧ್ಯಮಸಪ್ತಕೇನ ಮೂರ್ಛನಾ ನಿರ್ದೇಶಃ
ಕ್ರಿಯತೇ ಯದಿ ತದಾ ಕಿಮುಕ್ತಂ ಮಧ್ಯಮೇನ
ಸ್ವರೇಣೇತಿ? (ಆ) ಸತ್ಯಮುಕ್ತಂ – ಸ್ವರಜಾತ್ಯಪೇಕ್ಷಯಾ
ಏಕವಚನಮ್ | (ಇ) ಕಂಠ್ಯೇ ಸ್ವರೇ ಮೂರ್ಛನಾ ಕಾರ‍್ಯೇತಿ
ಭಾವಃ | (ಈ) ವೈಣಗ್ರಹಣಂ ಚ ಶರೀರೇ ಅಪ್ರಕೀರ್ತಿತ
-ಸ್ಯಾಪಿ ಸ್ಥಾನಸ್ಯ ಲಾಭಾರ್ಥಮ್ |
ನನು ತ್ರಿಷು ಸ್ಥಾನೇಷು ಸಪ್ತಸ್ವರಾ ಇತ್ಯುಕ್ತಂ
ಕಾಕುವಿಧಾನೇ | (ತತ್ರ ಕತಮಂ ಸ್ವರಸಪ್ತಕಮವಲಂಬ್ಯ)
ಮೂರ್ಛನಾ ಕಾರ‍್ಯೇತಿ ಯೇ ಸಂಶೇರತೇ ತಾನ್
ಪ್ರತ್ಯಾಹ – ಮಧ್ಯಮಸ್ವರೇಣ ತ್ವಿತಿ (ನಾಶಾ. ೨೮.೩೩ರ
೩ನೆಯ ಗದ್ಯ, ಪು. ೨೭) ಜಾತಾವೇಕವಚನಾತ್
ಮಧ್ಯೈರೈವ ಸ್ವರೈರಿತ್ಯರ್ಥಃ | ವೈಣಗ್ರಹಣಂ ಶರೀರೇ
ಅಪ್ರಗೀತಸ್ಯಾಪಿ (?ಅಪ್ರಕೀರ್ತಿತಸ್ಯಾಪಿ?)
ಸ್ಥಾನಲಾಭಾರ್ಥಮ್ | (ನಾಶಾ. ೨೮.೩೩. ೩ನೆಯ ಗದ್ಯ ವ್ಯಾ.ಪು. ೨೭,೨೮)
೭. (ಅ) ನನು ಪ್ರಥಮಾಯಾಂ ಸಪ್ತಮ್ಯಾಂ ಚ
ಮೂರ್ಛನಾಯಾಂ ಷಡ್ಜೇ ಲುಪ್ತೇ ರಿಗಮಪಧನೀತಿ
ಏಕಮೇವ ರೂಪಂ ಭವತಿ, ತತ್ರ ನ ಜ್ಞಾಯತೇ ವಿಶೇಷಃ |
(ಆ) ಸತ್ಯಂ, ಭೇದೋ ನಾಸ್ತಿ | (ಇ) ವಸ್ತುಗಣನೇ
ಪುನರಸ್ತ್ಯೇ ಭೇದಃ, ಮಂದ್ರತಾರಕೃತೋ ಭೇದಃ | ೨೪೫
ನನು ಪ್ರಥಮಾಯಾಂ ಸಪ್ತಮ್ಯಾಂ ಚ ಮೂರ್ಛನಾಯಾಂ ಷಡ್ಜೇ ಲುಪ್ತೇ ರಿಗಮಪಧನೀ ರೂಪಂ ಭವತೀತಿ
ದುರ್ಜ್ಞಾತೋ ವಿಶೇಷಃ |
ಸತ್ಯಂ, ಲೇಖ್ಯಭೇದೋ ನಾಸ್ತಿ | ಏಷು ನ, ಪುನರಸ್ತ್ವೇ
(?ಸ್ತ್ಯೇ) ವ: ತಥಾ ಹಿ – ಯದಿ ತಾವತ್ ಸರಿಗಮಪಧನಿ
ಇತಿ ಮೂರ್ಛನಾ ನಂತರಂ ನಿಸರಿಗಮಪಧನೀತಿ
ಮೂರ್ಛನಾ ನಿಷಾದೇನ ಪೂರ್ವ ಕೇಣೈವ ಕ್ರಿಯತೇ, ನ
ತು ಸಪ್ತಕಾನಂತರಂ ಗತಸ್ಯ ಸ್ವರಸ್ಯಾನುಪ್ರವೇಶಃ |
….. (ನಾಶಾ. ಅದೇ, ವ್ಯಾ. ಪು. ೨೮)
೮. (ಅ) ನನು ಮೂರ್ಛನಾಸ್ತಾವಜ್ಜಾತಿರಾಗೇಪೂಪಯೋಗಿ
-ನ್ಯ ಇತಿ ಯುಕ್ತಂ ತಾಸಾಂ ಕಥನಮ್ | (ಆ) ತಾನಾಸ್ತು
ಕ್ಜುತ್ರೋಪ ಯುಜ್ಯಂತೇ? (ಇ) ಉಚ್ಯತೇ –
ದ್ವಯೋರ್ಗ್ರಾಮಯೋರ್ಜಾತಿ ರಾಗಾನ್ಯತ್ವಪ್ರತಿಪಾದನಾ
-ರ್ಥಂ – ಪ್ರಯೋಗಸ್ತಾನಾನಾಮ್ | (ಈ) ಯದ್ವಾ
ನಷ್ಟೋದ್ದಿಷ್ಟಸಂಖ್ಯಾಸಿದ್ದ್ಯರ್ಥಂ ಪ್ರಯೋಗಸ್ತಾನಾನಾಮ್ |  ೨೪೭
ನನು ಚ ಮೂರ್ಛನಾಸ್ತಾವತ್‍ಜಾ(!)ಜ್ಜಾತಿಗ್ರಹಭಾಷಾವನ್ನ
ಪ್ರಯೋಗೋಪಯೋಗಿನ್ಯಃ ತಾನಾಶ್ಚ ಕುತ್ರ
ಉಪಯುಜ್ಯಂತೇ? ತಾನೋಕ್ತಸ್ವರಾತಿರಿಕ್ತಾನಾಮಪಿ
ಜಾತಿಷು ಲೋಪಾಭಾವಾದ್ ದೃಷ್ಟತ್ವಾತ್ | (ನಾಶಾ.
ಅದೇ ಸ್ಥಾನ, ವ್ಯಾ. ಪು. ೨೯)
೯. …(ಊ) ತ್ರಿಸ್ತ್ರಿರ್ನಿವೃತ್ತಿಸ್ತ್ರಿರಾವೃತ್ತಿಮಾರ್ಗಧೀ | (ಋ)
ಯಥಾ- ದೇವಮಿತಿ ಪದಂ ಗೀತ್ವಾ ಪ್ರಥಮಾಂ ಕಲಾಂ
ನಿತ್ವಾಹ್ಯ ವಿಲಂಬಿತಲಯೇನ ಯಥಾ ದ್ದಿತೀಯಾಂ ಕಲಾಂ
ಮಧ್ಯಮಮಲಯೇನ ದೇವಮಿತ್ಯನೇನ ಪದೇನ
ಶರ್ವಮಿತಿ ಸಹಿತೇನ ಗಾಯತಿ, ತತ್ರಾಪಿ ಚ ತೃತೀಯಾಂ
ಕಲಾಂ ದ್ರುತಲಯೇನ ಶರ್ವಮಿತಿ ಪದದ್ವಯೇನ ವಂದೇ
ಇತಿ ಪದಾಂತಸಹಿತೇನ ನಿರ್ವಾಹಯತೀತಿ ಕಾಲತ್ರಯ
-ವ್ಯಾಒಅನಮ್ | ಯಥಾ – ಮಾಮಾಸಾಸಾ
ಮಾಸಾಸಾಮಾ ಸಸಮಸಮಮ | ೩೮೮
(ಅ) ಮಗಧದೇಶೋದ್ಭವತ್ವಾನ್ಮಾಗಧೀ | (ಆ) ಅನ್ಯೇ ತು ದ್ವಿರ್ನಿವೃತ್ತಾಂ ಮಾಗಧೀಂ ಪಠಂತಿ! (ಇ) ಅರ್ಧಮಿತಿಪದ
ಸಂಬಂಧ್ಯರ್ಧ ಪದತ್ವೇನಾರ್ಧಮಾಗಧೀ | (ಈ) ನ ಚ
ಪದಾದ್ಯರ್ಧನಿವೃತ್ತಾವರ್ಥಃ ಪ್ರವೃತ್ತಿನಿವೃತ್ತಿಗೋ
ಹೇತುರ್ಮಂತವ್ಯಃ |
(ಉ) ಯತಃ ಸಾಮವೇದೇ ಗೀತಪ್ರಧಾನೇ ಆವೃತ್ತಿಷ್ವತ -ರ್ಥೋ ನಾದ್ರಿಯತ ಇತಿ | (ಊ) ತದುಕ್ತಂ – ಯ ಆವೃತ್ತ್ಯಾ
-ತ್ಮಾಜಾತವೇದ ಸಮಿತಿ
[ಶಬ್ದಃ] ೩೮೯
(ಆ) ಅತ್ರ ವೇದಶಬ್ದಪರ‍್ಯವಸಿತಾ ಸಂಭಾವಿತಾ,
ಲಘುಪ್ರಾಯತ್ವೇ ಚ ಪೃಥುಲಾ, ಭೂಯಸ್ತ್ವಾತ್ ಪದಗ್ರಾ
ಮಸ್ಯ ಪೃಥುಲೇತ್ಯುಕ್ತಾ | ೩೯೦
ಸನ್ನಿ (ತ್ರಿನಿ) ವೃತ್ತಿಪ್ರಗೀತಾಯಾ ಗೀತಿಃ ಸಾ ಮಾಗಧೀತಿ |
(ನಾಶಾ.೨೯.೪೭) ……. ದೇವಮಿತಿ ಪದಂ ಗೀತ್ವಾ ಪ್ರಥಮಕಲಾಂ ನಿರ್ವಾಹ್ಯ ವಿಲಂಬಿತೇನ ಲಯೇನ ಯದಾ
ದ್ವಿತೀಯಾಂ ಕಲಾಂ ಮಧ್ಯಮಲಯೇನ ದೇವಮಿತಿತೇ
(-ಮಿತ್ಯೇ)ನ ಪದೇನ ಶರ್ವಮಿತಿ ಶಬ್ದಸಹಿತೇನ ಗಾಯತಿ
ತತೋSಪಿ ತೃತೀಯಾಂ ಕಲಾಂ ದ್ರುತಲಯೇನ ದೇವಂ
ಶರ್ವಮಿತಿ ಪದದ್ವಯೇನ ಚ ವಂದೇಶರ್ವಮಿತಿ
ಪದಾಂತರಸಹಿತೇನ ತತ ಏವ ದೇವ ಇತ್ಯಯಂ ಶಬ್ದಃ
ಕಲಾತ್ರಯವ್ಯಾಪನಾತ್ ತ್ರಿನಿವೃತ್ತಿನಿರ್ವಾಹ ಏವ |
……. ಮಗಧೇಷು ತಥಾ ಗಾನನಿರ್ವಾಹೋಪಲಂಭಾತ್ | .
…… ಉದಾಹರಣಂ – ಮಾಸಾಸಸಸಾ ಮಾಸ ಸಮ
ಸಸಸ ಸಮಸರಿರೀತಿ | …… ಅರ್ಧತ ಇತಿ (ನಾಶಾ. ಅದೇ
ಸ್ಥಾನ) | ಪರಸ್ಯ ಸಂಬಂಧ್ಯರ್ಧಪದಾದ್ಯದಾವರ್ತಸ್ತದಾ
Sರ್ಧಮಾಗಧೀತಿ | ನ ಚಾತ್ರ ಪದಾರ್ಧಪ್ರವೃತ್ತೌ ನಿವರ್ತನ
-ಹೇತುರ್ಮಂತವ್ಯಃ |
ಯತಃ ಸಾಮವೇದೇ ಗೀತಪ್ರಧಾನೇ ಆವೃತ್ತಿಷ್ವರ್ಧೋ
(!ರ್ಥೋ) ನಾದ್ರಿಯತೇ | ಏವಮಾದಿ ತು ಜಾತವೇದಸಮಿತಿ (ಸಾಮವೇದ ಸಂಹಿತಾ ೧.೧.೩.೧೧)
ಹಿ ಅತ್ರ ‘ಜಾ’ ಶಬ್ದಪರ‍್ಯಂತಮಾವೃತ್ತಿ
ಪರ‍್ಯಂತಪರಂಪರಯಾ ಗೀತ್ವಾ ‘ತವೇದಸ’ ಮಿತಿ ಪದಸ್ಯ
ಷಡ್ಜನಾದಾರ್ಧಭಂಗೋ ಭವತ್ಯಪಿ |
ಅನ್ಯೇತು ತ್ರಿನಿವೃತ್ತಪ್ರವೃತ್ತೇತಿ ಮಾಗಧ್ಯಾ ಲಕ್ಷಣಂ
ಪಠಂತೋ Sರ್ಧಮಾಗಧ್ಯಾಃ ಸಪದಾವೃತ್ತಿಂ ವ್ಯಾಚಕ್ಷಾ

ಣಾ ಅರ್ಧಭಂಜನಮಪಿ ಕರಿಹರಂತಿ || (ನಾಶಾ. ೨೯.
೪೭ ವ್ಯಾ. ಪು. ೯೩)
…….. ಲಘುಪ್ರಾಯತ್ವೇ ತು ಪೃಥುಲಾ (ನಾಶಾ. ೨೯.
೪೮ ವ್ಯಾ. ಪು. ೯೪)

೧೦. (ಅ) ತತ್ರ ನ್ಯಾಸವಿಧಿಮಾಹ – ತತ್ರ ನ್ಯಾಸವಿಧೌ
ಯಾ ಜಾತಯಃ ಶುದ್ಧಾಃ, ತಾಸು ನಾಮಕಾರೀನ್ಯಾಸಃ[ಸ] ನಿಯಮೇನ ಮಂದ್ರೋ ಭವತಿ | ವಿಕೃತಾಸು ಚ
ನಾಮಕಾರೀ [ನ್ಯಾಸಃ] ತಾರೋ ವಾ ಮಂದ್ರೋ ವಾ
ಭವತೀತ್ಯನಿಯಮಃ | ೪೦೩
ನನ್ವೇವಂ (ಗ್ರಹಾಪ) ನ್ಯಾಸಭಾಗೇ ಶುದ್ಧೇತರವಿಭಾಗಃ
ಕಥಮಿತ್ಯಾಹ – ನ್ಯಾಸವಿಧಾವಪೀತಿ | (ನಾಶಾ. ೨೮. ೮೫ ನಂತರ ೨ನೆಯ ಗದ್ಯ. ಪು. ೩೭) ತಾಸಾಂ ಜಾತೀನಾಂ ಮಧ್ಯೇSಪಿ ಯಾಃ ಶುದ್ಧಾಸ್ತಾನು ನಾಮಕಾರೀ ಯೋನ್ಯಾ
ಸಃ ನಿಯಮೇನ ಮಂದ್ರೋ ಭವತಿ, ವಿಕೃತಾಸು
ತ್ವನಿಯಮಃ | (ನಾಶಾ ೨೮.೪೫ ನಂತರ ೨ನೆಯ ಗದ್ಯ.
ವ್ಯಾ. ಪು. ೩೭)
೧೧. (ಅ) ಶ್ರುತಿಗ್ರಹಸ್ತರಾದಿ ಸಮೂಹಾಜ್ಜಾಯಂತ
ಅತೋ ಜಾತಯ ಇತ್ಯುಚ್ಯಂತೇ | ೪೨೪
ನಿರ್ಹೇತೌ ಸಮವಾಯಾತ್ ಶ್ರುತಿಸ್ವರಗ್ರಹಾದಿಸಮೂಹಾ
ದ್ಯತೋ ಜಾಯತೇ ತತೋ ಜಾತಯ ಇತಿ
ನಿರ್ವಚನಮ್ | (ನಾಶಾ.೨೮.೪೬ ವ್ಯಾ. ಪು. ೩೭)
೧೨. (ಅ) ಯಸ್ಮಾಜ್ಜಾಯತೇ ರಸಪ್ರತೀತಿರಾರಭ್ಯತೇ[ವಾ] ಇತಿ ಜಾತಯಃ | ೪೨೪ ಅಂಶಗ್ರಹಾದಿ ಶತಯೋಜನಾಯಾ ಜಾಯಂತ ಇತಿ
ಜಾತಯ ಇತ್ಯನ್ಯೇ | ಜಾತೇ ರಸಂಪ್ರತಿ ಆಭ್ಯ ಇತಿ ವಾ
ಸಕಲಸ್ಯ ರಾಗದೇರ್ಜನ್ಮ ಹೇತುರ್ಹಾತಿರಿತಿ ಟೀಕಾಕಾರಃ
(ನಾಶಾ.೨೮.೪೬ ವ್ಯಾ. ಪು. ೩೮)
೧೩. (ಅ) ಷಟ್ ಸ್ವರಂ ಷಾಡವಮಿತಿ ; ಚತುರ್ದಶಜಾತಿ ವಿಷೇಯತ್ವಾತ್ ಚತುರ್ದಶವಿಧಂ, ಚತಸೃಣಾಂ
ಜಾತೀನಾಂ ನಿತ್ಯಸಂಪೂರ್ಣತ್ವೇನ
ತದಭಾವಾಜ್ಜಾತ್ಯಂಶಭೇಧೇನ ತು ಸಪ್ತಚತ್ವಾರಿಂಶತ್
ಪ್ರಕಾರಂ ಚ ತದ್ ಭವತಿ! ೪೪೧
ಷಟ್ ಸ್ವರಂ ಷಾಡವಮಿಮಿತಿ | (ನಾಶಾ. ೨೮. ೭೫ ರ
ನಂತರದ ಗದ್ಯ. ಪು. ೪೯) ಚತುರ್ದಧಜಾತಿಗತಾಶ್ಚ
(ವಿಧಾಃ) ತಚ್ಚತುರ್ದಶಜಾತಿ ವಿಧಯಃ (ಚತುರ್ದಶವಿಧಂ)
ಚತುಸೃಣಾಂ ನಿತ್ಯಂ ಪೂರ್ಣತ್ವೇನ ತದಭಾವಾತ್ |
ಸಪ್ತಚತ್ವಾರಿಂಶತ್ ಪ್ರಕಾರಮಿತಿ | (ನಾಶಾ. ಅದೇ ಸ್ಥಾನ
ದ ವ್ಯಾ.)
೧೪. (ಇ) ಅಂತರಮಾರ್ಗಸ್ಯ ಲಕ್ಷಣಂ ಯಥಾ – ಜಾತಿಷು
ಕ್ಚಚಿದ್ ವಾSನಂಶೋSಪಿ ನಾಲ್ಟಃ | (ಈ) ತಥಾ ಚ
ಕಾರ್ಮಾರವ್ಯಾಂ ಗಾಂಧಾರಸ್ಯ ಸ್ವರಸಂಗತ್ಯಾ ಬಹುತ್ವೇನಾಂತರಮಾರ್ಗೇ ಪ್ರಯೋಗ ಇತಿ ವಕ್ಷ್ಯತೇ | ೪೪೬
‘ಗಾಂಧಾರಸ್ಯ ವಿಶೇಷೇಣ ಸರ್ವತೋ ಗಮನಂ ಭವೇತ್’ |
ಇತಿ ೪೪೭
ಅಂತರಮಾರ್ಗಣಮಿತಿ (ನಾಶಾ. ೨೮.೭೫) ಅಂತರಮಾ
ರ್ಗಣಸ್ಯ (-ಮಾರ್ಗಸ್ಯ) ಲಕ್ಷಣಮ್ | ಯಥಾ ಜಾತೀತಿ
(ನಾ.ಶಾ. ೨೮.೭೫ರ ನಂತರದ ಗದ್ಯ, ಪು. ೪೯)
ಕ್ವಚಿದ್ವಾSನಂಶೋSಪಿ ನಾಲ್ಪಃ |
ತಥಾ ಚ ಕಾರ್ಮಾರವ್ಯಾಂ ಗಾಂಧಾರಸ್ಯ ಸರ್ವಸ್ವರ
ಸಂಗತ್ಯಾ ಬಹುತ್ವೇ ನಾಂತರಮಾರ್ಗೇ ಪ್ರಯೋಗ ಇತಿ ವಕ್ಷ್ಯತೇ – ’ಗಾಂಧಾರಸ್ಯ ವಿಶೇಷಣ ಸರ್ವತೋ ಗಮನಂ ಭವೇತ್ |’ (ನಾಶಾ.೨೮.೭೫ ವ್ಯಾ. ಪು. ೪೯)
೧೫. (ಅ) ಅಥ ಬಹುತ್ವಮಾಹ – ಅಲ್ಪ (ತ್ವ) ವದತ್ರ
ಬಹುತ್ವಮಿತಿ ಲಕ್ಷಯೇದಿತಿ ವಿಶೇಷಃ | (ಆ) ಕಥಮಿತ್ಯಾಹ
ಬಲವದಬಲವತೋ ರ್ವಿಪರ‍್ಯಾಸೋSಬಲಮಲ್ಪಂ
ತದ್ವಿಪರ‍್ಯಯೇ ಬಲವದಿತಿ ಬಲವಲ್ಲಕ್ಷಣಂ ಗಮ್ಯತ ಏವ |
(ಇ) ಅತ ಏವಾಹ – ೪೪೮
‘ಜಾತಿಸ್ವರೈಸ್ತು ನಿತ್ಯಂ (ಸ್ಯಾಜ್) ಜಾತ್ಯಲ್ಪತ್ವಂ ದ್ವಿಧಾ ಚ
ತತ್ |’ ೪೪೯
ಅಥ ಬಹುತ್ವಮಾಹ | ಅಲ್ಪತ್ವಂ ತದ್ವದ್ ಬಹು (ಲ)ತ್ವಮಿತಿ
(ನಾಶಾ. ೨೮.೭೩ರ ನಂತರದ ಗದ್ಯ) | ಲಕ್ಷಯತೀತಿ
ಶೇಷಃ | ಕಥಮಿತ್ಯಾಹ – ಬಲವದಬಲವತೋSಪಿ
(-ತೋರ್ವಿ) ಪರ‍್ಯೆಯೇ | (ನಾಶಾ.? ಮತಂಗ, ಅಭಿನವಗುಪ್ತರು ಬಳಸಿರುವ ಈ ಭಾರತೀಯ ಪಾಠವು
ಈಗ ನಷ್ಟವಾಗಿರುವಂತೆ ಕಾಣುತ್ತದೆ.) ಅಬಲಮಲ್ಪಂ
ತದ್ವಿಪರ‍್ಯಯಾದ್ ಬಲವದಿತಿ ಬಹುತ್ವಾಲ್ಲಕ್ಷಣಂ ಗಮ್ಯತ
ಏವ | ಅತ ಏವಾಹ – ‘ಜಾತಿಸ್ವರೈಸ್ತು ನಿತ್ಯಂ ಹಾತ್ಯಲ್ಪತ್ವಂ ದ್ವಿಧಾ ಚೈತ (ದ್)’ ;
(ನಾಶಾ. ೨೮.೭೩ರ ನಂತರದ ಗದ್ಯ, ೭೪ ವ್ಯಾ. ಪು. ೪೯)
೧೬. ….(ಋ) ಯಥಾ ಷಡ್ಜಗ್ರಾಮೇ ಷಡ್ಜಮಧ್ಯಮಾಯಾಃ
ಸಪ್ತಾಪನ್ಯಾಸಾ ಭವಂತಿ | (ಋ) ಷಡ್ಜೋದೀಚ್ಯವಾಯಾಶ್ಚ
ದ್ವೌ, ಪಂಚಾನಾಂ ಪ್ರತ್ಯೇಕಂ ತ್ರಯಂ ತ್ರಯಮಿತಿ
ಚತುರ್ವಿಂಶಿತಿಃ |
(ಎ) ಶೇಷಾಸ್ತು ಮಧ್ಯಮಗ್ರಾಮೇ | ತಥಾ ಚಾಹ ಭರತಃ –
೪೫೧
ತತ್ರ ಷಡ್ಜಗ್ರಾಮೇ ಷಡ್ಜಮಧ್ಯಮಾಯಾಃ ಸಪ್ತಾಪನ್ಯಾಸಾಃ |
ಷಡ್ಜೋದೀಚ್ಯವಾಯಾಂ ದ್ವೌ, ಪಂಚಾನಾಂ ಪ್ರತ್ಯೇಕ
ತ್ರಯ ಇತಿ ಚತುರ್ವಿಂಶತಿಃ | ಶೇಷಾಸ್ತು
ಮಧ್ಯಮಗ್ರಾಮೇ | …….
ಯಥಾ –
೧೭. (ಅ) ಅಸ್ಯಾಶ್ಚ ದಶಾಂಶಕಾಃ | (ಆ) ತದ್ಯಥಾ – ಶುದ್ಧಃ
ಏಕತ್ರಾಶ್ವ ಪಂಚ ಪೂರ್ಣಾಶ್ಚತ್ವಾರಃ ಷಾಡವಾಃ,
ಗಾಂಧಾರೇS೦ಶೇ ಷಾಡವಾ ಪವಾದಾತ್ | (ಇ) ಯೇನಾಂಶಾಃ ಸ್ಫುಟಯಂತೇ ತೇನ ಲಿಖಿತಾಃ | ೫೨೮
……. ಅಂಶಾಶ್ಚ ದಶಕಾಃ | ತದ್ಯಥಾ- ಶುದ್ಧಾ ವಿಕೃತಾಃ
ಪಂಚ ಪೂರ್ಣಾಶ್ಚತ್ವಾರಃ ಷಾಡವಾಃ | ಗಾಂಧಾರೇS೦ಶೇ
ಷಾಡವಾ ಏವಾಪವಾದಾತ್ ತೇ ಚಾಂಶಕಾ ಲುಪ್ತಕಾತ್
ಸ್ಫುಟಂ ಜ್ಞಾಯಂತೇ || ತೇನ ಲಾಲಿತಾ …….. ನಾಶಾ
೨೮. ೯೫ ವ್ಯಾ. ಪು. ೫೪.

 

ಮೇಲ್ಕಂಡ ಉದ್ಧೃತಿ, ಉಲ್ಲೇಖ ಮತ್ತು ಸದೃಶಗ್ರಂಥಾಂಶಗಳ ಪರಿಶೀಲನೆಯಿಂದ ಕೆಲವು ಸಂಗತಿಗಳು ಸಿದ್ಧಪಡುತ್ತವೆ:

೧. ಈಗ ದೊರೆತಿರುವ ಬೃಹದ್ದೇಶಿಯು ಅಸಮಗ್ರವಾಗಿದೆ.

೨. ಉಪಲಬ್ಧಬೃಹದ್ದೇಶೀ ಗ್ರಂಥಪಾಠವನ್ನು ಸಮರ್ಥಿಸುವ ಹಲವು ವಿಶ್ವಾಸನೀಯ ಉದ್ಧೃತಿ, ಉಲ್ಲೇಖಗಳು ಈಗ ದೊರೆತಿರುವ ಅಧ್ಯಾಯಗಳಿಗೂ ಸಿಗುತ್ತವೆ. ಆದುದರಿಂದ ಇದು ಮೂಲಗ್ರಂಥವೂ ಪ್ರಾಚೀನವೂ ಆಗಿದೆಯೆನ್ನಬಹುದು.

೩. ಕ್ರಿ.ಶ. ಎಂಟನೆಯ ಶತಮಾನದಿಂದ ಹದಿನೆಂಟನೆಯ ಶತಮಾನದವರೆಗೂ ಭಾರತೀಯ ಸಂಗೀತ ಶಾಸ್ತ್ರಪರಂಪರೆಯಲ್ಲಿ ಬೃಹದ್ದೇಶಿಯು ಪ್ರಾಮಾಣಿಕ ಗ್ರಂಥವೆಂದು ಪುರಸ್ಕೃತವಾಗಿ ಜೀವಂತವಾಗಿ ಉಳಿದುಬಂದಿದೆ.

೪. ಈಗ ಉಳಿದು ಬಂದಿರುವ ಗ್ರಂಥವಲ್ಲದೆ ಬೃಹದ್ದೇಈ ಮೂಲದಲ್ಲಿ ಕಪಾಲ, ಧ್ರುವಾ, ತಾಳ, ವಾದ್ಯ, ಮತ್ತು ನರ್ತನಗಳನ್ನೊಳಗೊಂಡ ಅಧ್ಯಾಯಗಳೋ ಅಧಿಕರಣಗಳೋ ಇದ್ದವು. ಈ ವಿಷಯಗಳಲ್ಲಿ ವಿಶ್ವಸನೀಯ ಆಕರಗಳಿಂದ ಉದ್ಧೃತಿ, ಉಲ್ಲೇಖಗಳು ದೊರೆಯುತ್ತವೆ. ಹೀಗೆ ಮೂಲಬೃಹದ್ದೇಶೀ ಗ್ರಂಥದಲ್ಲಿ ಎಂಟಕ್ಕೆ ಕಡಿಮೆಯಿಲ್ಲದೆ, ಹತ್ತನ್ನು ಮೀರದ ಅಧ್ಯಾಗಳಿದ್ದವು.

೫. ಉದ್ಧೃತಿ ಮತ್ತು ಉಲ್ಲೇಖಗಳು ದೊರೆಯುವ ಆಕರಗಳು ವಿಶ್ವಸನೀಯವಾಗಿವೆ. ಇವುಗಳ ರಚನಾಕಾಲಗಳೂ ಹೆಚಚು ಕಡಿಮೆ ನಿಶ್ಚಿತವಾಗಿವೆ.ಪ್ರಶ್ನಾರ್ಹವಾದ ಆಕರಗಳಲ್ಲಿ ನಾನ್ಯದೇವ ಮತ್ತು ವೆಂಕಟಮುಖಿಗಳನ್ನು ಹೆಸರಿಸಬಹುದು. ಮತಂಗನು ಗಾಂಧಾರಗ್ರಾಮದ ಅಸ್ತಿತ್ವವನ್ನು ನಿರಾಕರಿಸಿದ್ದರೂ ನಾನ್ಯದೇವನು ಅದರಲ್ಲಿ ರಾಗಲಕ್ಷಣಗಳನ್ನು ಮತಂಗನದೆಂದು ಉದ್ಧರಿಸಿಕೊಳ್ಳುವುದು ಸಮಾನರಾಗಗಳಲ್ಲಿ ಉಪಲಬ್ಧ ಬೃಹದ್ದೇಶಿಯುಲ್ಲೂ ಭರತಭಾಷ್ಯದಲ್ಲೂ ಲಕ್ಷಣಭೇದಗಳಿರುವುದು, ಒಂದೇ ರಾಗಕ್ಕೆ ಬೃಹದ್ದೇಶೀ ಮತ್ತು ಮತಂಗರಿಂದ ಬೇರೆ ಬೇರೆ ಲಕ್ಷಣಗಳನ್ನು ನೀಡುವುದು, ಈ ಕಾರಣಗಳಿಂದ ಅವನು ಪ್ರಶ್ನಾರ್ಹನಾದ ಆಕರನಾಗಿದ್ದಾನೆ. ತುಂಬಾ ಅರ್ವಾಚೀನವಾದ ರಾಗದ ಲಕ್ಷಣಗಳನ್ನು ನೀಡುವುದು, ಈ ಕಾರಣಗಳಿಂದ ಅವನು ಪ್ರಶ್ನಾರ್ಹನಾದ ಆಕರನಾಗಿದ್ದಾನೆ. ತುಂಬಾ ಅರ್ವಾಚೀನವಾದ ರಾಗದ ಲಕ್ಷಣವನ್ನು ಮತಂಗನಿಗೆ ಆರೋಪಿಸುವುದರಿಂದ ವೆಂಕಟಮುಖಿಯು ಆಯಾ ರಾಗಲಕ್ಷಣದಲ್ಲಿ ವಿಶ್ವಸನೀಯವಲ್ಲದ ಆಕರನಾಗಿದ್ದಾನೆ.

೬. ಮತಂಗನು ಅನೇಕಾಂಶಗಳಲ್ಲಿ ಪ್ರಾಮಾಣಿಕನೆಂದು ನಂತರದ ಶಾಸ್ತ್ರಕಾರರಿಗೆ ಸಮ್ಮತವಾಗಿದ್ದರೂ, ರಾಗಲಕ್ಷಣವಿಷಯದಲ್ಲಿ ಅತ್ಯಂತ ಹೆಚ್ಚಿಗೆ ಉದ್ಧೃತವಾಗಿದ್ದಾನೆ. ತಾಲವಿಷಯದಲ್ಲಿ ಅವನ ಏಕೈಕವಾದ ಒಂದು ಉಲ್ಲೇಖವು ಹದಿನಾರನೆಯ ಶತಮಾನದಲ್ಲಿ ದೊರೆಯುತ್ತದೆ ; ಧ್ರುವಾಗಳ ವಿಷಯದಲ್ಲಿ ಒಂದೇ ಒಂದು ಉಲ್ಲೇಖವಾಗಲಿ ಉದ್ಧೃತಿಯಾಗಲಿ ಈವರೆಗೆ ದೊರೆತಿಲ್ಲ. ಬೃಹದ್ದೇಶೀಯ ವಾದ್ಯಾಧ್ಯಾಯವು ಕ್ರಿ.ಶ. ಹದಿನೇಳನೆಯ ಶತಮಾನದವರೆಗೂ ನೃತ್ಯಾಧ್ಯಾಯವು ಹದಿನೈದನೆಯ ಶತಮಾನದವರೆಗೂ ದೊರೆಯುತ್ತಿದ್ದವು. ಮತಂಗನನ್ನು ಕುರಿತ ಉಲ್ಲೇಖಗಳು ಬಹುಮಟ್ಟಿಗೆ ‘ಮತಂಗಾದಿ’ ಎಂದೇ ದೊರೆಯುತ್ತವೆ. ಮತಂಗಮುನಿಯ ಅಭಿಪ್ರಾಯಗಳನ್ನು ಬಹುಮಂದಿ ಲಾಕ್ಷಣಿಕರು ಒಪ್ಪಿಕೊಂಡಿದ್ದುದರಿಂದ ಮತಂಗಪ್ರಮುಖರಾದ ಅವರನ್ನು ಸಮಷ್ಟಿಯಲ್ಲಿ ಹೀಗೆ ಸೂಚಿಸಲಾಗಿದೆಯೆಂದು ಕಾಣುತ್ತದೆ. ‘ಬೃಹದ್ದೇಶೀ’ ಎಂಬುದನ್ನು ಗ್ರಂಥನಾಮಸೂಚಕವಾಗಿಯೂ ದೇಶೀಪದ್ಧತಿಯ ಸೂಚಕವಾಗಿಯೂ ಈ ಆಕರಗಳಲ್ಲಿ ಬಳಸಲಾಗಿದೆ.

೭. ಬೃಹದ್ದೇಶಿಯು ಈಗ ಅನುಪಲಬ್ಧವಾಗಿರುವ ಮುಖ್ಯವೂ ಪ್ರಾಚೀನವೂ ಆಗಿರುವ ಪ್ರಾಮಾಣಿಕರ ಮಾತುಗಳನ್ನು ಅಕ್ಷರಶಃ ಉದ್ಧರಿಸಿಕೊಳ್ಳುವ ಅಮೂಲ್ಯ ಆಕರವಾಗಿದೆ. ಈ ಉದ್ಧೃತಪ್ರಾಮಾಣಿಕರ ವಿಷಯದಲ್ಲಿ ಸಂಕ್ಷೇಪವೂ ವಿಮರ್ಶಾತ್ಮಕವೂ ಆದ ವಿವೇಚನೆಯನ್ನು ಮುಂದೆ ಮಾಡಲಾಗುವುದು.

೮. ಮತಂಗನು ತನ್ನ ಜೀವಿತಕಾಲದ ನಂತರದ ಕೇವಲ ಮುನ್ನೂರು ವರ್ಷಗಳ ಅವಧಿಯಲ್ಲಿ (ವೀಣಾವಾದಕನೆಂದು, ವೇಣುನಿರ್ಮಾಪಕನೆಂದು) ಪೌರಾಣಿಕ ಸ್ಥಾನಮಾನಗಳನ್ನು ಗಳಿಸಿದ್ದಾನೆ.

೯. ಬೃಹದ್ದೇಶಿಯಿಂದ ಉದ್ಧೃತವಾಗಿರುವ ವಾದ್ಯದ ಮತ್ತು ನೃತ್ತದ ಅಂಶಗಳ ಲಕ್ಷಣಗಳು ಸ್ವತಂತ್ರವೂ, ಸ್ವಾರಸ್ಯಕರವೂ ಅನನ್ಯೋಪಲಬ್ಧವೂ ಆಗಿವೆ.

೧೦. ಈಗ ದೊರೆತಿರುವ ದೇಶೀರಾಗಾಧ್ಯಾಯವು ಅತ್ಯಂತ ಹ್ರಸ್ವವಾಗಿದ್ದರೂ ಅದು ತುಂಬಾ ದೀರ್ಘವಾಗಿತ್ತೆನ್ನುವುದಕ್ಕೆ ಸೂಚನೆಗಳಿವೆ. ಯಾಷ್ಟಿಕನ ಸರ್ವಾಗಮಸಂಹಿತೆಯ ನಾಲ್ಕನೆಯ ಅಧ್ಯಾಯವನ್ನು ಅನಾಮತ್ತಾಗಿ ಉದ್ಧರಿಸಿಕೊಂಡೂ, ಈ ಗ್ರಂಥಾಂತಕ್ಕೆ ಮತಾಂತರವನ್ನು ಮಾತ್ರ ಶಾರ್ದೂಲನಿಂದ ಎತ್ತಿಕೊಂಡೂ ಮತಂಗನು ನಾಲ್ಕನೆಯ ಅಧ್ಯಾಯವನ್ನು ರಚಿಸಿದ್ದಾನೆ. ಮೊದಲನೆಯ ಭಾಗದಲ್ಲಿ ಯಾಷ್ಟಿಕನ ಹೆಸರಿನ ಪ್ರಥಮೈಕಪುರುಷದ ಉಲ್ಲೇಖಗಳು ಮತಂಗವಿರಚಿತ ಪ್ರಕ್ಷೇಪಗಳು ಅಥವಾ ಯಾಷ್ಟಿಕೋಕ್ತಿಗಳು ಎಂಬ ಎರಡೂ ಪಕ್ಷಗಳನ್ನು ಹಿಡಿಯಲು ಸಾಧ್ಯವಿದೆ. ಶಾರ್ದೂಲಮತವು ಮತಂಗನಿಂದಲೇ ಸಂಗ್ರಹೀತವಾಗಿದೆಯೆಂದು ಸಂಶಯವಿಲ್ಲದೆ ಹೇಳಬಹುದು.(೯೬೨)

೧೧. ಬೃಹದ್ದೇಶೀ ಮತ್ತು ಅಭಿನವಭಾರತೀಗಳಲ್ಲಿ ಸದೃಶವಾದ, ಸಮಾನಾಂತರವಾದ ಮತ್ತು ತಾತ್ಪರ್ಯಗೊಳಿಸಿದ ಗ್ರಂಥಾಂಶಗಳು ದೊರೆಯುತ್ತವೆ. ಎರಡೂ ಗ್ರಂಥಗಳೂ ಕ್ರಮವಾಗಿ ಎರಡು ಮತ್ತು ಒಂದೇ ಹಸ್ತಪ್ರತಿಗಳಲ್ಲಿ ಉಳಿದುಬಂದಿದ್ದು ಲೋಪಗಳಿಂದಲೂ ಭ್ರಷ್ಟಪಾಠಗಳಿಂದಲೂ ತುಂಬಿವೆಯಾದುದರಿಂದ ಯಾವುದು ಯಾವುದಕ್ಕೆ ಋಣಿಯಾಗಿದೆಯೆಂದು ಹೇಳುವುದು ಕಷ್ಟ. ಆದರೆ ಅಭಿನವಭಾರತಿಯಲ್ಲಿರುವ ಕೆಲವು ಗ್ರಂಥಭಾಗಗಳು ಬೃಹದ್ದೇಶಿಯಲ್ಲಿರುವ ಆಯಾ ಗ್ರಂಥಭಾಗಗಳನ್ನು ತಾತ್ಪರ್ಯಗೊಳಿಸುತ್ತವೆ ಎನ್ನುವಲ್ಲಿ ತಕ್ಕಷ್ಟು ಸಂಭಾವ್ಯತೆಯಿದೆ. ಮತಂಗಾನಂತರದಲ್ಲೂ ಅಭಿನವಗುಪ್ತಪೂರ್ವದಲ್ಲೂ ರಚಿತವಾದ ಆಕರಗಳು ಈ ಗ್ರಂಥಭಾಗಗಳನ್ನು ಉದ್ಧರಿಸಿದ್ದು ಅವು ದೊರೆತಾಗ ಮಾತ್ರ ಅಭಿನವಗುಪ್ತನು ಮತಂಗನಿಗೆ ಋಣಿಯಾಗಿದ್ದಾನೆಂದು ನಿಃಸಂದಿಗ್ಧವಾಗಿ ತೀರ್ಮಾನಿಸಬಹುದು.

೧೨. ಸಾಮಾನ್ಯವಾಗಿ ಪ್ರಾಚೀನ ಅಥವಾ ಅರ್ವಾಚೀನ ಸಂಗೀತಶಾಸ್ತ್ರಚಾರ್ಯರು ಬೃಹದ್ದೇಶಿಯನ್ನೂ ಮತಂಗನನ್ನೂ ಉದ್ಧರಿಸಿಕೊಳ್ಳುವಾಗ ಅವುಗಳಲ್ಲಿ ಅಭೇದವನ್ನೇ ಗ್ರಹಿಸುತ್ತಾರೆ. ನಾನ್ಯದೇವನು ಮಾತ್ರ ಇವೆರಡನ್ನೂ ಯಾವಾಗಲೂ ಬೇರೆ ಬೇರೆಯಾಗಿಯೇ ಹೇಳುತ್ತಾನೆ ಮತ್ತು ಅವುಗಳು ಒಳಗೊಳ್ಳುವ ಲಕ್ಷಣಾಂಶಗಳು, ಸಾಧಾರಣವಲ್ಲ, ಪರಸ್ಪರ ಪೂರಕವಾಗಿವೆ. ಒಂದು ಸಂದರ್ಭ (ರಂಜಿಕಾರಾಗಲಕ್ಷಣ)ದಲ್ಲಿ ಅವು ಸಂಪೂರ್ಣವಾಗಿ ಭಿನ್ನವಾಗಿಯೇ ಇವೆ. ನಾನ್ಯದೇವನು ತನ್ನ ಆಕರಗಳನ್ನು ಆಯಾ ಕರ್ತೃವಿನ ಹೆಸರಿನಿಂದ ಮಾತ್ರ ನಿರ್ದೇಶಿಸುತ್ತಾನೆ. ಆದರೆ ಭರತಭಾಷ್ಯದ ರಾಗಲಕ್ಷಣಕಥನಾವಸರದಲ್ಲಿ ಮಾತ್ರ ಬೃಹದ್ದೇಶಿಯು ಇದಕ್ಕೆ ಅಪವಾದವಾಗಿದೆ. (ಗಾಂಧಾರಗ್ರಾಮಜನ್ಯರಾಗಗಳನ್ನು ಅವನು ಎರಡೂ ಆಕರಗಳಿಂದ ಉದ್ಧರಿಸಿಕೊಳ್ಳುತ್ತಾನೆ.) ಹೀಗಾಗಿ ನಾನ್ಯದೇವನು ಬೃಹದ್ದೇಶಿಯು ಅನ್ಯಕೃತವಾಗಿದ್ದಿರಬಹುದೆ, ಅಥವಾ ಬೇರೆ ಸ್ವರೂಪದ್ದಾಗಿತ್ತೆ ಎಂಬ ಒಂದು ಸಣ್ಣ ಸಂಶಯವು ತಲೆದೋರುತ್ತದೆ.

VII ಬೃಹದ್ದೇಶಿಯ ಪ್ರಾಮಾಣಿಕರು

ಮತಂಗಮುನಿಯು ಬೃಹದ್ದೇಶೀರಚನೆಯಲ್ಲಿ ಅವಲಂಬಿಸಿರುವ ಪ್ರಾಮಾಣಿಕರನ್ನು ನಾಮೋಲ್ಲೇಖವಿಲ್ಲದೆಯೇ ಸಾಮಾನ್ಯವಾಗಿ ಸೂಚಿತರಾದವರು, ಹೆಸರಿನಿಂದ ನಿರ್ದಿಷ್ಟರಾದವರು, ತನ್ನ ಸ್ವತಂತ್ರಾಭಿಪ್ರಾಯವನ್ನು ತಿಳಿಸುವ ಆತ್ಮೋಲ್ಲೇಖಗಳು ಎಂದು ಮೂರು ಬಗೆಯಾಗಿ ವಿಂಗಡಿಸಬಹುದು. ಮೊದಲನೆಯ ವಿಭಾಗದಲ್ಲಿ ಗ್ರಂಥಪೂರಣಕ್ಕಾಗಿ ಇಂತಹ ಉಲ್ಲೇಖಗಳು ಅಷ್ಟಿಷ್ಟು ಇಲ್ಲವೆಂದಿಲ್ಲ. ಆದರೆ ಅದರ ಬಹುಭಾಗವು ಅರ್ಥಪೂರ್ಣವೂ ಬುದ್ಧಿಪೂರ್ವಕವೂ ಆಗಿದೆ. ಈ ಎಲ್ಲ ಪ್ರಾಮಾಣಿಕರನ್ನೂ ಅನುಬಂಧ(೧)ದಲ್ಲಿ ಪಟ್ಟಿಮಾಡಿದೆ.

ಅನಿರ್ದಿಷ್ಟ ಆಕರಗಳನ್ನು ಪುನಃ ಹೀಗೆ ವಿಂಗಡಿಸಬಹುದು :

i. ಮತಾಂತರ ಸೂಚನೆ : ಗ್ರಂಥಕಾರನಿಗೆ ಒಪ್ಪಿಗೆಯಾದ ಒಂದು ಪ್ರಧಾನಮತವನ್ನು ನಾಮನಿರ್ದಿಷ್ಟವಾದ ಒಂದು ಆಕರದಿಂದ ಮಂಡಿಸಿ ಇದರಿಂದ ಭಿನ್ನವಾದ ಇನ್ನೊಂದು ಅಭಿಪ್ರಾಯವನ್ನು ವಿಷಯದ ಸಮಗ್ರಪರಿಶೀಲನೆಗೆಂದು ಸೇರಿಸಲೆಂದು ಅಂತಹವುಗಳನ್ನು ಅನ್ಯೇ, ಅಪರೇ, ಕೇಚನ, ಕೇಚಿತ್, ಕೈಶ್ಚಿತ್, ಕೇಷಾಂಚನ, ಮುಂತಾದ ಶಬ್ದಗಳಿಂದ ಸೂಚಿಸಿದೆ.

ii. ಗ್ರಂಥಕಾರನಿಗೆ ಉಪದೇಶರೂಪದಿಂದ ನೇರವಾಗಿ ಆತ್ಮೀಯವಾಗಿ, ದೊರೆತ ಪ್ರಮಾಣಗಳನ್ನು ಅಚಾರ್ಯ, ಆಪ್ತವಚನ, ಆಪ್ತೋಪದೇಶ, ಗುರು, ಮುನಿ ಮುಂತಾದ ಶಬ್ದಗಳಿಂದ ಸೂಚಿಸಿದೆ. ಇವುಗಳ ಪೈಕಿ ಮುನಿ ಎಂಬುದು ಮಹಾಮುನಿ, ಮುನಿ, ಮುನಿಪುಂಗವ, ಮುನಿಸತ್ತಮ ಎಂಬ ರೂಪಗಳಲ್ಲಿ ಬಂದಿದೆ. ಇವುಗಳ ಪೈಕಿ ಮಹಾಮುನಿ ಎಂಬುದು ನಾರದಸಂಭೋದನೆಯಲ್ಲಿ ಮತಂಗನಿಗೂ ಮುನಿಸತ್ತಮ ಎಂಬುದು ಬಹುಶಃ ನಾರದನಿಗೂ ಮುನಿ ಎಂಬುದು (೧೭೩,೬೩೨) ಭರತಮುನಿಗೂ, ಒಮ್ಮೆ ಬಹುಶಃ ಪೃಚ್ಛಕರಾದ ನಾರದಾದಿ ಮುನಿಗಳಿಗೂ (೧೦೫೪) ಮೂರು ಸಲ (೧೦೬೭, ೧೦೭೩, ೧೦೭೪) ಪ್ರಬಂಧಲಕ್ಷಣಕ್ಕೆ ಪ್ರಮಾಣಭೂತರಾದ, ಭರತಮುನಿಯಲ್ಲದ ಇತರ ಮುನಿಗಳಿಗೂ (ಕಾಶ್ಯಪ?) ಮುನಿಪುಂಗವ ಎಂಬುದು (೧೧೩೭) ಏಲಾಪ್ರಬಂಧ ಲಕ್ಷಣವನ್ನು ನಿರೂಪಿಸುವ, ಆದುದರಿಂದ ಭರತನಲ್ಲದ ಮುನಿಗೂ ಅನ್ವಯಿಸುತ್ತವೆ. ಉಳಿದ ಉಲ್ಲೇಖಗಳು ಮತಂಗನ ಪ್ರತ್ಯಕ್ಷ ಆಚಾರ್ಯರಿಗೆ ಅಥವಾ ಗುರುಕಲ್ಪರಿಗೆ ಒಪ್ಪುತ್ತವೆ.

iii. ಆಗಮ ಎಂಬುದು (೧೫೧) ಸಪ್ತಸ್ವರಗಳನ್ನು (ಮಂತ್ರಗಳ ಹಾಗೆ) ಉದ್ಧಾರಕ್ರಮದಲ್ಲಿ ಹೇಗೆ ಪಡೆಯಬಹುದೆಂಬುದನ್ನು ಉಪದೇಶಿಸುವ, ಬಹುಶಃ ಉಪಾಸನಾಕಾಂಡವನ್ನು ಬೋಧಿಸುವ (ಅರ್ವಾಚೀನ ಕಾಲದ ಕೋಹಲಮತದಂತಹ) ಒಂದು ಸಂಗೀತ ಶಾಸ್ತ್ರಗ್ರಂಥವನ್ನು ಸೂಚಿಸುತ್ತದೆ.

iv. ಅತಿಮಾನವ (ಅಥವಾ ಅರ್ಧದೇವತಾರೂಪದ) ವರ್ಗದ ಹಾಗೂ ಪುರಾಣೋಕ್ತವಾದ ಕಿನ್ನರ (೮೯೦, ೮೮೦, ೯೨೩, ೯೩೧) ಗಂಧರ್ವ (೧೧೦೭, ೧೧೦೯, ೧೧೪೯, ೧೧೫೨), ನಾಗಕಿನ್ನರ (೮೧೧), ನಾಗಲೋಕ (೯೦೦), ವಿದ್ಯಾಧರ (೯೨೬) ಮುಂತಾದವರನ್ನು ಸೂಚಿಸಲಾಗಿದೆ.

v. ಪ್ರಾದೇಶಿಕವಾದ ಅಥವಾ ಆದಿವಾಸೀ ಬುಡಕಟ್ಟುಗಳ ಸಂಗೀತಪದ್ಧತಿ ಶೈಲಿ, ವೈಶಿಷ್ಟ್ಯ ಮುಂತಾದವನ್ನು ಬೋಧಿಸುವ ಉಲ್ಲೇಖಗಳು : ಆಂದ್ರ ಕಿರಾತ ಕಾಂಬೋಜ, ದ್ರಾವಿಡ, ಪುಲಿಂದ, ಬಂಗ, ಬಾಹ್ಲೀ, ಶಬರ (೪೪೩), ಕಾಲಿಂಗ (೯೦೮)

vi. ದೇಶೀಸಂಗೀತಕ್ಕೆ ಪ್ರತಿಯಾದ, ಪ್ರಾಚೀನ ಗೌರವಿತ, ಪೂಜನೀಯ, ಗಾಂಧರ್ವ (೧೧), ಗಾಂಧರ್ವವೇದಿ (೮೨೦,, ೮೬೮, ೧೦೮೮)

vii. ಸಂಗೀತದ ವಿವಿಧ ಅಂಗಗಳಲ್ಲಿ ತಜ್ಞರಾದವರ ಉಲ್ಲೇಖಗಳು : ತಜ್ಞ (೧೧೪೭), ತದ್ವಿದ (೧೦೬೬), ವಿಚಕ್ಷಣ (೧೮೦), ವಸ್ತುವಿಚಕ್ಷಣ (೧೧೧೦), ವಿದ್ವಾನ್ (೩೯೪), ವಿಪಶ್ಚಿತ್ (೪೯), ಪೂರ್ವಸೂರಿ (೧೧೨೫), ಸೂರಿ (೩೪೮, ೫೪೯), ಶ್ರುತಿಜ್ಞಾನವಿಚಾರದಕ್ಷ (೪೨), ಶ್ರುತಿವೇದಿ (೩೧), ಸ್ವರಜ್ಞ (೧೪೫, ೬೪೪, ೬೫೫), ಗೀತಜ್ಞ (೫೮೭, ೮೭೧ ,೯೭೧, ೧೦೪೧, ೧೧೧೬, ೧೧೭೮), ಗೀತತತ್ತ್ವಜ್ಞ (೧೦೮೨), ಗೀತಪಾರಗ (೧೧೨೯) ಗೀತಯೋಕ್ಷೃ (೧೩೦, ೪೯೩), ಗೀತವಿಚಕ್ಷಣ (೬೦೬),, ಗೀತವೇದಿ (೧೧೩೩), ಗೀತವಿಶಾರದ (೧೦೭೮), ಗೀತಶಾಸ್ತ್ರಜ್ಞ (೧೧೪೩, ೧೧೭೫), ಬುಧ (೩೮ ಇತ್ಯಾದಿ).

viii ಲೋಕಸಮ್ಮತಿಸೂಚಕ : ಜನ (೭೪೨, ೭೮೯, ೮೨೮, ೯೪೫, ೧೦೪೭), ಪ್ರಯೋಕ್ಷೃ (೪೬೬, ೪೭೨, ೭೯೫, ೮೫೩, ೮೮೪, ೮೯೧), ಪ್ರಯೋಗಜ್ಞ (೪೪೨)

ಬೃಹದ್ದೇಶಿಯಲ್ಲಿ ನಾಮನಿರ್ದಿಷ್ಟರಾಗಿರುವ ಪ್ರಾಮಾಣಿಕರ ಉಲ್ಲೇಖಗಳನ್ನು ಹೀಗೆ ಪಟ್ಟಿಮಾಡಬಹುದು :

ನಾಮನಿರ್ದಿಷ್ಟ ಪ್ರಾಮಾಣಿಕರ ಪಥಕ

ಗ್ರಂಥಭಾಗ ಪ್ರಾಮಾಣಿಕ ಉಲ್ಲೇಖವಿಷಯ
೫೯೨ ಕಾಶ್ಯಪ ಗೀತಿಗಳುಭಾಷಾ, ವಿಭಾಷಾಎಂಬಎರಡುಬಗೆ
೬೩೦ ಶುದ್ಧರಾಗಗಳಗಾಮವಿನಿಯೋಗ
೬೬೨ ಭಿನ್ನರಾಗಗಳಗ್ರಾಮವಿನಿಯೋಗ
೬೭೬ ವೇಸರರಾಗಲಕ್ಷಣ
೬೮೦ ಟಕ್ಕರಾಗವುಏಕೆಮುಖ್ಯ
೬೯೫ ಟಕ್ಕಕೈಶಿಕವುನಿಗಲೋಪದಿಂದಔಡವವಾಗುತ್ತದೆ
೭೦೪ ಕಾಶ್ಯಪ ಸಾಧಾರಣರಾಗಗಳುಏಳಿವೆ
೭೦೬ ನರ್ತರಾಗವನ್ನುಮೊದಲನೆಯದೆಂದುಏಕೆವರ್ಣಿಸಿದ್ದು
೭೦೮ ನರ್ತರಾಗಲಕ್ಷಣ
೭೩೧ ಗ್ರಾಮರಾಗಗಳಿಗೆಮೂರ್ಛನಾನಿರ್ದೇಶ
೭೩೩ ಗೀತಿ-ರಾಗಗಳಲ್ಲಿಭೇದ
೪೧ ಕೋಹಲ ಶ್ರುತಿಗಳು೨೨, ೬೬ಅಥವಾಅನಂತ
೯೬ ಸ್ವರೋತ್ಪತ್ತಿ
೯೮ ಸ್ವರವುಹೇಗೆಅನಂತ
೧೦೦ ಸ್ವರವುವ್ಯಾಪಕ
೧೦೪ ಸ್ವರವಕ್ಷೃಜಂತುಗಳು
೨೬೨ ಜಾತಿಭಾಷಾರಾಗಸಿದ್ಧಿಗಾಗಿಮೂರ್ಛನಾಸ್ಥಾಪನೆ
೩೦೩ ಕೋಹಲ ನಿಷ್ಕೂಜಿತಾಲಂಕಾರಲಕ್ಷಣ
೬೯೨ ಷಡ್ಜಗ್ರಾಮದಲ್ಲಿರಿಧ-ಲೋಪವಿಲ್ಲ
೧೦೨ ಚಾರ್ವಾಕ ಸ್ವರವುಶಾಶ್ವತವಲ್ಲ, ವ್ಯಾಪಕವಲ್ಲ
೧೦೨ ಚಾರ್ಹ(೦)ತ -ಅದೇ-
.೩೪ ತುಂಬುರು ವಾತಪಿತ್ತಾದಿದೋಷಗಳಿಂದಾಗಿಶ್ರುತಿಯುನಾಲ್ಕುವಿಧ
೨೩೮ ದತ್ತಿಲ ಎರಡುಬಗೆಯತಾನಕ್ರಿಯೆ
೨೪೩ ಮೂರ್ಛನೆಯುಇಷ್ಟನೆಯದೆಂಬಅವಧಾರಣೆ
೨೪೮ ಕೂಟತಾನಗಳಸಂಖ್ಯೆ
೨೫೦ ಪ್ರಸ್ತಾರದಿಂದತಾನಸಂಖ್ಯಾಪ್ರಾಪ್ತಿ
೫೦೯ ದುರ್ಗಾಶಕ್ತಿ ಗೀತಿಗಳುಐದುವಿಧ
೬೭೮ ವೇಸರರಾಗಲಕ್ಷಣ
೬೮೦ ವೇಸರಷಾಡವರಾಗವುಏಕೆಮುಖ್ಯ
೭೦೬ ಷಡ್ಜಕೈಶಿಕರಾಗವುಏಕೆಮುಖ್ಯ
೭೦೯ ನರ್ತರಾಗಕ್ಕೆಷಡ್ಜಗ್ರಾಮದ್ದೇಸಂಬಂಧ
೭೧೯ ಗಾಂಧಾರಪಂಚಮಕ್ಕೆಮಧ್ಯಮಗ್ರಾಮದ್ದೇಸಂಬಂಧ
೨೬೪ ನಂದಿಕೇಶ್ವರ ದ್ವಾದಶಸ್ವರಮೂರ್ಛನೆ
ನಾರದ ಧ್ವನಿಯುಹೇಗೆದೇಶೀಎಂಬಪ್ರಶ್ನೆ
೧೫೯ ಪಂಚಮಸ್ವರದಗಾಯಕ
೫೮೦   ರಾಗವಿಷಯದಪ್ರಶ್ನೆ
೧೫೬ ಷಡ್ಜಸ್ವರದಅಧಿದೇವತೆ
೧೫೮ ಋಷಭಸ್ವರದಗಾಯಕ
೧೭೨ ಷಡ್ಜಗ್ರಾಮದಅಧಿದೇವತೆ
೩೯೬ ಜಾತಿಗಳುಹದಿನೆಂಟಿವೆ
೬೩೪ ರೂಪಕಸಂಧಿಗಳಲ್ಲಿಶುದ್ಧರಾಗಗಳವಿನಿಯೋಗ
೩೯ ಭರತ ಕೊಳಲಿನಲ್ಲಿಹುಟ್ಟುವಶ್ರುತಿಗಳುಒಂಭತ್ತು
೯೨ ಋಷಭಾದಿಶ್ರುತಿಮಂಡಲಗಳು
೨೩೭ ಎರಡುಬಗೆಯತಾನಕ್ರಿಯೆ
೨೪೧ ಮಧ್ಯಮಸ್ವರದಿಂದಮೂರ್ಛನಾನಿರ್ದೇಶ
೩೧೯ ವರ್ಣಾಲಂಕಾರನಿರೂಪಣೆ
೪೨೯ ಜಾತಿಗಳಲ್ಲಿಅಂಶಸ್ವರವುಗ್ರಹದವಿಕಲ್ಪ
೪೩೮ ಜಾತಿಗಳಲ್ಲಿತಾರಗತಿ
೪೪೧ ಜಾತಿಗಳಲ್ಲಿಷಾಡವಲಕ್ಷಣ
೪೪೩ ಜಾತಿಗಳಲ್ಲಿ೪,೫,೬ಸ್ವರಗಳಪ್ರಯೋಗ
೪೫೧ ಜಾತಿಗಳಲ್ಲಿ೫೬ಅಪನ್ಯಾಪ್ರಕಾರಗಳು
೫೧೦ ಭರತ ಜಾತಿಗಳಲ್ಲಿಅಂಶಗಣನೆ
೫೮೦ ರಾಗಮಾರ್ಗವನ್ನುಭರತಾದಿಗಳುಹೇಳಿಲ್ಲ
(೫೯೦) ಗೀತಿಗಳುನಾಲ್ಕುವಿಧ
೬೩೦ ರಾಗಗಳಿಗೆಗ್ರಾಮಗಳವಿಶೇಷಸಂಬಂಧ
೬೩೨ ಶುದ್ಧರಾಗಗಳಿಗೆರೂಪಕಸಂಧಿಗಳಲ್ಲಿವಿನಿಯೋಗ
೬೯೨ ಷಡ್ಜಗ್ರಾಮದಲ್ಲಿರಿಧ-ಲೋಪವಿಲ್ಲ
೧೦೪ ಮಹೇಶ್ವರ ಸ್ವರವಕ್ಷೃಜಂತುಗಳು
೧೭೨ ಮಧ್ಯಮಸ್ವರದದೇವತೆ
೫೯೧ ಯಾಷ್ಟಿಕ ಗೀತಿಗಳುಮೂರುವಿಧ
೭೪೪ ಭಾಷಾಲಕ್ಷಣನಿರೂಪಣೆ
೮೧೩ ಟಕ್ಕಜನ್ಯಭಾಷಾರಾಗವರ್ಣನೆಗಳಸಮಾಪನ
೮೩೪ ಮಾಲವಕೈಶಿಕಜನ್ಯಭಾಷಾರಾಗಗಳಸಮಾಪನ
[೮೫೨ ಕಕುಭಜನ್ಯಭಾಷಾರಾಗವರ್ಣನೆಗಳಸಮಾಪನ]
[೮೬೩ ಹಿಂದೋಲಜನ್ಯಭಾಷಾರಾಗವರ್ಣನೆಗಳಸಮಾಪನ]
೮೮೯ ಯಾಷ್ಟಿಕ ಪಂಚಮಜನ್ಯಭಾಷಾರಾಗವರ್ಣನೆಗಳಸಮಾಪನ
೯೦೩ ಭಿನ್ನಷಡ್ಜಜನ್ಯಭಾಷಾರಾಗವರ್ಣನೆಗಳಸಮಾಪನ
[೯೨೧ ಸೌವೀರಜನ್ಯಭಾಷಾರಾಗವರ್ಣನೆಗಳಸಮಾಪನ]
೯೩೨ ಭಿನ್ನಪಂಚಮಜನ್ಯಭಾಷಾರಾಗವರ್ಣನೆಗಳಸಮಾಪನ
[೯೩೫ ಬೋಟ್ಟಜನ್ಯಭಾಷಾರಾಗವರ್ಣನೆಗಳಸಮಾಪನ]
[೯೪೩ ಟಕ್ಕಕೈಶಿಕಜನ್ಯಭಾಷಾರಾಗವರ್ಣನೆಗಳಸಮಾಪನ]
[೯೪೯ ವೇಸರಷಾಡವಜನ್ಯಭಾಷಾರಾಗವರ್ಣನೆಗಳಸಮಾಪನ]
[೯೫೧ ಭಿನ್ನತಾಜನ್ಯಭಾಷಾರಾಗವರ್ಣನೆಗಳಸಮಾಪನ
[೯೫೫ ರೇವಗುಪ್ತಜನ್ಯಭಾಷಾರಾಗವರ್ಣನೆಗಳಸಮಾಪನ]
೧೧೪೨ ವಲ್ಲಭ ಮಾತ್ರೈಲಾಲಕ್ಷಣಕ್ಕೆಪ್ರಾಮಾಣಿಕ
೨೧೭ ವಿಶಾಖಿಲ ಮೂರ್ಛನಾತಾನಗಳಲ್ಲಿಭೇದವಿಲ್ಲ
೨೯ ವಿಶ್ವಾವಸು ಶ್ರುತಿಗಳುಸ್ವರ, ಅಂತರವೆಂದುಎರಡುಬಗೆ
೩೭ ವೇಣು ಶ್ರುತಿಗಳುಒಂಭತ್ತುಬಗೆ
೫೯೨ ಶಾರ್ದೂಲ ಗೀತಿಯುಒಂದೇವಿಧ
೯೬೨ ಭಾಷಾಲಕ್ಷಣನಿರೂಪಣೆ
೯೭೭ ಟಕ್ಕಜನ್ಯಭಾಷಾರಾಗವರ್ಣನೆಗಳಸಮಾಪನ
೯೯೧ ಹಿಂದೋಲಜನ್ಯಭಾಷಾರಾಗವರ್ಣನೆಗಳಸಮಾಪನ
೧೦೦೩ (ಮಾಲವ) ಪಂಚಮಜನ್ಯಭಾಷಾರಾಗವರ್ಣನೆಗಳಸಮಾಪನ
೧೦೩೫ ಭಿನ್ನಷಡ್ಜಜನ್ಯಭಾಷಾರಾಗವರ್ಣನೆಗಳಸಮಾಪನ
೯೬೧ ಸರ್ವಾಗಮ ಭಾಷಾರಾಗಗಳವರ್ಣನೆ
  ಸಂಹಿತಾ  
೩೮೯ ಸಾಮವೇದ ಸಾಮಗಾನದಆವೃತ್ತಿಯಲ್ಲಿಅರ್ಥವುಮುಖ್ಯವಲ್ಲ
೧೪೦ ಸುಶ್ರುತ ಶರೀರಧಾತುಗಳುಏಳು
೧೦೫೩ ಹರ ದೇಶಿಕಾರಪ್ರಬಂಧಗಳಜನ್ಯಸ್ಥಾನ
೧೦೯ ಅಹಂ(ಮತಂಗ) ಸರಿಂಗಾದಿಗಳಲ್ಲಿಸ್ವರತ್ವ
೭೪೬ ” (ಯಾಷ್ಟಿಕ) ಭಾಷಾಲಕ್ಷಣಕಥನ
೧೬ ಮಯಾ(=ಮತಂಗ) ದೇಶೀಉತ್ಪತ್ತಿಲಕ್ಷಣ
೨೬ ಪಂಚವಿಧನಾದೋತ್ಪತ್ತಿ
೪೦ ಕೊಳಲಿನಲ್ಲಿಶ್ರುತಿಗಳುಒಂಭತ್ತು
೬೦ ಶ್ರುತಿಗಳವಿವಿಧಪಕ್ಷಗಳು
೬೮ ಶ್ರುತಿ-ಸ್ವರಸಂಬಂಧದಲ್ಲಿತಾದಾತ್ಮ್ಯಾದಿಪಕ್ಷಗಳು
೯೩ ಗ್ರಾಮಗಳಲ್ಲಿರುವಶ್ರುತಿಗಳು
೧೯೪ ಮಧ್ಯಮಗ್ರಾಮಮೂರ್ಛನೆಗಳು
೨೩೩ ಚತುರ್ವಿಧ್ಯಮೂರ್ಛನೆಗಳು
೩೬೯ ಅಲಂಕಾರನಿರೂಪಣೆಯಮುಕ್ತಾಯ
೭೩೮ ಗ್ರಾಮರಾಗನಿರೂಪಣೆಯಮುಕ್ತಾಯ
೧೧೯೧ ಪ್ರಬಂಧನಿರೂಪಣೆಯಮುಕ್ತಾಯ
೨೮ ಮಾದುಕೀನಂ (=ಮತಂಗ) ಶ್ರುತಿಯುಒಂದೇಎಂಬಮತ
ಮೇ ಧ್ವನಿಯದೇಶೀತ್ವವನ್ನುನನಗೆಹೇಳುಎಂಬನಾರದನಪ್ರಶ್ನೆ
೮೧ ವಯಂ(ಮತಂಗ) ಮಂಡಲಪ್ರಸ್ತಾರದಿಂದಶ್ರುತಿನಿದರ್ಶನ

ಮೇಲ್ಕಂಡ ಪ್ರಾಮಾಣಿಕರನ್ನು ಕುರಿತು ಕೆಲವು ಟಿಪ್ಪಣಿಗಳನ್ನು ಬರೆಯುವುದು ಪ್ರಸಂಗೋಚಿತವಾಗಿದೆ. ಡಾ || ವಿ. ರಾಘವನ್‌ರವರ ಹಲವು ಬರೆಹಗಳು, ಡಾ || ಪ್ರೇಮಲತಾಶರ್ಮಾ (ಸಂಗೀತರಾಜ), ಮಮ ಪಿ.ವಿ.ಕಾಣೆ (ಹಿಸ್ಟರಿ ಆಫ್ ಸಂಸ್ಕೃತ ಪೊಎಟಿಕ್ಸ್) ಮುಂತಾದವುಗಳಲ್ಲಿರುವ ಮಾಹಿತಿಗಳನ್ನೂ ನನ್ನದೇ ಸಂಶೋಧನೆಗಳನ್ನೂ ಇಲ್ಲಿ ಯಥೋಚಿತವಾಗಿ ಬಳಸಿಕೊಂಡಿದೆ.