೦       ……………………………………………………….. |
……………………………………………………….. || ೦ ||

[ತತ್ರ ಧ್ವನೇರ್ದೇಶೀತ್ವಮ್]

[ಮತಂಗ ಉವಾಚ]

೧       ನಾನಾವಿಧೇಷು ದೇಶೇಷು ಜಂತೂನಾಂ ಸುಖದೋ ಭವೇತ್‌ |
ತತಃ ಪ್ರಭೃತಿ ಲೋಕಾನಾಂ ನರೇಂದ್ರಾಣಾಂ ಯದೃಚ್ಛಯಾ || ೧ ||

೨       ದೇಶೇ ದೇಶೇ ಪ್ರವೃತ್ತೋsಸೌ ಧ್ವನಿರ್ದೇಶೀತಿ ಸಂಜ್ಞಿತಃ |

[ಗ್ರಂಥಕೃದ್‌ ವಚನಮ್‌]

ಮತಂಗಸ್ಯ ವಚಃ ಶ್ರುತ್ವಾ ನಾರದೋ ಮುನಿರಬ್ರವೀತ್‌ || ೨ ||

[ನಾರದ ಉವಾಚ]

೩       ನನು ಧ್ವನೇಸ್ತು ದೇಶೀತ್ವಂ ಕಥಂ ಜಾತಂ ಮಹಾಮುನೇ |
ಅಮೂರ್ತತ್ವಾಚ್ಚ ತಸ್ಯೇತಿ ಸತ್ಯಂ ಮೇ ವಕ್ತುಮರ್ಹಸಿ || ೩ ||

[ಮತಂಗ ಉವಾಚ]

೪       ಯಥಾನುಭೂತದೇಶಾಚ್ಚ ಧ್ವನೇಃ ಸ್ಥಾನಾನುಗಾದಪಿ |
………………………………………………………..
……………………………………………………….. || ೪ ||

೫       ತತೋ ಬಿಂದುಸ್ತತೋ ನಾದಸ್ತತೋ ಮಾತ್ರಾಸ್ತ್ವನುಕ್ರಮಾತ್ || ೫ ||

೬       ವರ್ಣಾಸ್ತು ಮಾತೃಕೋದ್ಭೂತಾ ಮಾತೃಕಾ ದ್ವಿವಿಧಾ ಮತಾಃ |
ಸ್ವರವ್ಯಂಜನರೂಪೇಣ ಜಗಜ್ಜ್ಯೋತಿರಿಹೋಚ್ಯತೇ || ೬ ||


ಪಾಠವಿಮರ್ಶೆ : ೦ ೨ಇಈ ೪ಅಆ

—-

[i ದೇಶೀಪ್ರಕರಣ]

೦       ……………………………………………………….. |
……………………………………………………….. ೦

[ಅದರಲ್ಲಿ ಧ್ವನಿಯ ದೇಶೀತ್ವ]

[ಮತಂಗನು (ಹೀಗೆ) ಹೇಳಿದನು:]

೧ [ಧ್ವನಿಯು, (ಎಂದರೆ ಕಿವಿಗೆ ಗೋಚರವಾಗುವ ಶಬ್ದವು)] ಬೇರೆ ಬೇರೆ ವಿಧಗಳ ದೇಶಗಳಲ್ಲಿರುವ ಜಂತುಗಳಿಗೂ ಅಲ್ಲಿಂದ (=ಅವುಗಳಿಂದ) ಮೊದಲುಗೊಂಡು (ಸಾಧಾರಣ) ಜನರಿಗೂ ದೊರೆಗಳಿಗೂ ಅವರವರ ಇಷ್ಟದಂತೆ <ಯದೃಚ್ಛಯಾ> ಸುಖವನ್ನು ಕೊಡುತ್ತದೆ.         ೧

೨ ದೇಶದೇಶಗಳಲ್ಲಿ ಹೀಗೆ ಉಂಟಾಗಿರುವ (=ಸುಖವನ್ನು ಕೊಡುವ ಕಾರ್ಯದಲ್ಲಿ ತೊಡಗಿರುವ) ಈ ಧ್ವನಿಯು ದೇಶೀ ಎಂಬ ಹೆಸರನ್ನು (ಹೊಂದಿದೆ).

[ಗ್ರಂಥಕಾರನ ಮಾತು]

ಮತಂಗನ ಮಾತುಗಳನ್ನು ಕೇಳಿ ನಾರದಮುನಿಯು [ಹೀಗೆ] ಹೇಳಿದನು:                                                             ೨

[ನಾರದನ ಮಾತು]

೩ ‘ಆದರೆ, ಮಹಾಮುನಿಯೆ, [ಧ್ವನಿಯು] ಆಕಾರವಿಲ್ಲದ್ದು; (ಹೀಗಿದ್ದರೂ) ಧ್ವನಿಗೆ ದೇಶೀತ್ವವು ಹೇಗೆ ಹುಟ್ಟುತ್ತದೆ? ಇದರ ನಿಜವನ್ನು (ನೀನು) ನನಗೆ ಹೇಳಬೇಕು.’                                                                                                                             ೩

[ಮತಂಗನು (ಹೀಗೆ) ಹೇಳಿದನು:]

೪ ‘ಹೇಗೆಂದರೆ, ಧ್ವನಿಯು (ಇರುವ) ದೇಶವನ್ನು (=ದಿಕ್ಕನ್ನು) ಅನುಭವಿಸಲಾಗುವುದರಿಂದಲೂ ಅದು (ದೇಹದಲ್ಲಿ ಮತ್ತು ಹೊರಗೆ ಇರುವ) ಸ್ಥಾನವನ್ನು ಅನುಸರಿಸಿ ಚಲಿಸುವುದರಿಂದಲೂ (ಅದಕ್ಕೆ ದೇಶೀತ್ವವು ಉಂಟಾಗುತ್ತದೆ).
…………………………………………….
…………………………………………….                                                                                                 ೪

೫ … ಅದರಿಂದ ಬಿಂದುವು (ಹುಟ್ಟುತ್ತದೆ); ಅದರಿಂದ (=ಬಿಂದುವಿನಿಂದ) ನಾದ; ಅದರಲ್ಲಿ ಮಾತ್ರೆ (=ಮಾತೃಕೆ)ಗಳೂ ಕ್ರಮವಾಗಿ ಹುಟ್ಟುತ್ತವೆ.           ೫

೬ ವರ್ಣಗಳು ಮಾತೃಕೆಗಳಿಂದ ಹುಟ್ಟುತ್ತವೆ. ಮಾತೃಕೆಗಳು ಸ್ವರ ಮತ್ತು ವ್ಯಂಜನ ಎಂಬ ರೂಪಗಳಿಂದ ಎರಡು ವಿಧವೆಂದು ಸಮ್ಮತಿಸಿದೆ. ಇಲ್ಲಿ (=ಈ ಶಾಸ್ತ್ರದಲ್ಲಿ ವ್ಯಕ್ತಾವ್ಯಕ್ತವಾದ ಈ ಮಾತೃಕೆಗಳ ಒಟ್ಟನ್ನು) ಜಗತ್ತಿನ ಜ್ಯೋತಿಯೆಂದು ಹೇಳಿದೆ.                    ೬

____

೭       ಸ್ವರ್ಯತೇ ದೇಶಭಾಷಾಯಾಂ ಕಾದಿಕ್ಷಾಂತಂ ಯಥಾವಿಧಿ |
ತೇನ ಸ್ವರಾಃ ಸಮಾಖ್ಯಾತಾ ಅನ್ಯೇ ಷಡ್ಜಾದಯಃ ಸ್ವರಾಃ || ೭ ||

೮       ವ್ಯಂಜನತ್ವಂ ತು ಸರ್ವೇಷು ಕಾದಿವರ್ಗೇಷು ಸಂಸ್ಥಿತಮ್‌ |
ಶಕ್ತ್ಯಭಿವ್ಯಕ್ತಿಮಾತ್ರೇಣ ವ್ಯಂಜನಂ ಶಿವತಾಂ ಗತಮ್‌ || ೮ ||

೯       ಪದವಾಕ್ಯಸ್ವರೂಪೇಣ ವಾಕ್ಯಾರ್ಥವಹನೇನ ಯತ್ |
ವರ್ಣಯಂತಿ ಜಗತ್‌ಸರ್ವಂ ತೇನ ವರ್ಣಾಃ ಪ್ರಕೀರ್ತಿತಾಃ || ೯ ||

೧೦     ವರ್ಣಪೂರ್ವಕಮೇತದ್ಧಿ ಪದಂ ಜ್ಞೇಯಂ ಸದಾ ಬುಧೈಃ |
ಪದೈಸ್ತು ನಿರ್ಮಿತಂ ವಾಕ್ಯಂ ಕ್ರಿಯಾಕಾರಕಸಂಯುತಮ್ || ೧೦ ||

೧೧     ತತೋ ವಾಕ್ಯನ್ಮಹಾವಾಕ್ಯಂ ವೇದಾಃ ಸಾಂಗಾ ಹ್ಯನುಕ್ರಮಾತ್ |
ವ್ಯಕ್ತಾಸ್ತೇ ಧ್ವನಿತಾಃ ಸರ್ವೇ ತತೋ ಗಾಂಧರ್ವಸಂಭವಃ || ೧೧ ||

೧೨     ಧ್ವನಿರ್ಯೋನಿಃ ಪರಾ ಜ್ಞೇಯಾ ಧ್ವನಿಃ ಸರ್ವಸ್ಯ ಕಾರಣಂ |
ಆಕ್ರಾಂತಂ ಧ್ವನಿನಾ ಸರ್ವಂ ಜಗತ್ ಸ್ಥಾವರಜಂಗಮಮ್ || ೧೨ ||

೧೩     ಧ್ವನಿಸ್ತು ದ್ವಿವಿಧಃ ಪ್ರೋಕ್ತೋ ವ್ಯಕ್ತಾವ್ಯಕ್ತವಿಭಾಗತಃ |
ವರ್ಣೋಪಲಂಭನಾದ್ ವ್ಯಕ್ತೋ ದೇಶೀಮುಖಮುಪಾಗತಃ || ೧೩ ||

ಇತಿ ದೇಶ್ಯುತ್ಪತ್ತಿಃ

|| ದೇಶೀಮಾರ್ಗಲಕ್ಷಣಮ್ ||

೧೪     ಅಬಲಾಬಾಲಗೋಪಾಲೈಃ ಕ್ಷಿತಿಪಾಲೈರ್ನಿಜೇಚ್ಛಯಾ |
ಗೀಯತೇ ಯಾsನುರಾಗೇಣ ಸ್ವದೇಶೇ ದೇಶಿರುಚ್ಯತೇ || ೧೪ ||

೧೫     ನಿಬದ್ಧಶ್ಚಾನಿಬದ್ಧಶ್ಚ ಮಾರ್ಗೋsಯಂ ದ್ವಿವಿಧೋ ಮತಃ |
ಆಲಾಪಾದಿನಿಬದ್ಧೋ ಯಃ ಸ ಚ ಮಾರ್ಗಃ ಪ್ರಕೀರ್ತಿತಃ || ೧೫ ||

_

ಪಾಠವಿಮರ್ಶೆ : ೮ಆ ೯ಅ,ಇ ೧೪ಇ, ೧೫ ಅ,ಇ

—-

೭ (ಇವುಗಳ ಪೈಕಿ ಸ್ವರಗಳು ಪ್ರತಿಯೊಂದು) ದೇಶಭಾಷೆಯಲ್ಲಿ ಆಯಾ (ಶಬ್ದಶಾಸ್ತ್ರೀಯ) ವಿಧಿಗೆ ಒಳಪಟ್ಟು ಕಕಾರದಿಂದ ಕ್ಷಕಾರದವರೆಗೆ ಸ್ವರಿಸುತ್ತವೆ (=ಶಬ್ದಿಸುತ್ತವೆ); ಆದುದರಿಂದ (ಅವುಗಳು) ಸ್ವರಗಳೆಂದು ಹೆಸರಾಗಿವೆ. ಬೇರೆಯಾದ ಷಡ್ಜ ಮೊದಲಾದವುಗಳೂ ಸ್ವರಗಳೇ.       ೭

೮ ವ್ಯಂಜನತ್ವವಾದರೋ ಕ(ಕಾರ)ದಿಂದ ಮೊದಲಾಗುವ ಎಲ್ಲ ವರ್ಗಗಳಲ್ಲಿ ನೆಲೆಸಿದೆ. ಶಕ್ತಿಯ (=ಸ್ವರದ) ಅಭಿವ್ಯಕ್ತಿಯಿರುವುದರಿಂದ ಮಾತ್ರವೇ ವ್ಯಂಜನವು ಶಿವತ್ವವನ್ನು ಹೊಂದುತ್ತದೆ.                                                                                                 ೮

೯ ಪದ-ವಾಕ್ಯಗಳ ಸ್ವಂತ ರೂಪದಿಂದಲೂ ವಾಕ್ಯದ ಅರ್ಥವನ್ನು ಒಯ್ಯುವುದರಿಂದಲೂ [ಅವು] ಎಲ್ಲ ಪ್ರಪಂಚವನ್ನೂ ವರ್ಣಿಸುತ್ತವೆ; ಆದುದರಿಂದ ವರ್ಣಗಳೆಂದು ಪ್ರಸಿದ್ಧವಾಗಿವೆ.                                                                                                             ೯

೧೦ ಈ ಪದವು ವರ್ಣಗಳನ್ನು ಕೂಡಿ(ಸಿ)ಯೇ ಆಗುತ್ತದೆಂದು ವಿದ್ವಾಂಸರು ತಿಳಿಯಬೇಕು. ಕ್ರಿಯಾ (ಪದ) ಮತ್ತು ಕಾರಕ (=ಪ್ರತ್ಯಯ)ಗಳಿಂದಾದ ಪದಗಳಿಂದ ವಾಕ್ಯವು ನಿರ್ಮಿತವಾಗುತ್ತದೆ.                                                                                              ೧೦

೧೧ ಆಮೇಲೆ ವಾಕ್ಯದಿಂದ ಮಹಾವಾಕ್ಯವೂ (ತಮ್ಮ ತಮ್ಮ) ಅಂಗಗಳಿಂದೊಡಗೂಡಿದ ಎಲ್ಲ ವೇದಗಳೂ ಕ್ರಮವಾಗಿ ಧ್ವನಿತವಾಗಿ (=ಶಬ್ದಿಸಲ್ಪಟ್ಟು) ವ್ಯಕ್ತವಾದವು. ಆಮೇಲೆ (ವೇದದಿಂದ) ಗಾಂಧರ್ವ (ವೇದ)ವು ಹುಟ್ಟಿತು. ೧೧

೧೨ ಧ್ವನಿಯು (ಎಲ್ಲದರ) ಆತ್ಯಂತಿಕವಾದ <ಪರಾ> ಉತ್ಪತ್ತಿಸ್ಥಾನ <ಯೋನಿ> ಎಂದು ತಿಳಿಯಬೇಕು. ಧ್ವನಿಯು ಎಲ್ಲದರ ಕಾರಣ. ಚಲಿಸುವ, ಚಲಿಸದ ಸಕಲ ಜಗತ್ತೂ ಧ್ವನಿಗೆ ಅಧೀನವಾಗಿದೆ.                                                                                      ೧೨

೧೩ ವ್ಯಕ್ತ ಮತ್ತು ಅವ್ಯಕ್ತ ಎಂಬ ವಿಭಾಗಗಳಿಂದಾಗಿ ಧ್ವನಿಯು ಎರಡು ವಿಧವೆಂದು ಹೇಳಿದೆ. [ಇವುಗಳ ಪೈಕಿ] ವ್ಯಕ್ತವು [ಅದರಲ್ಲಿ] ವರ್ಣಗಳು ಗೋಚರಿಸುವುದರಿಂದ ದೇಶೀಯ ಮುಖ (=ಪ್ರಾರಂಭ, ಮೂಲ)ವನ್ನು ತಲುಪಿದೆ.                                            ೧೩

ಹೀಗೆ ದೇಶೀಯ ಉತ್ಪತ್ತಿ (ಯು ಮುಗಿಯಿತು.)

[ದೇಶೀ ಮತ್ತು ಮಾರ್ಗಗಳ ಲಕ್ಷಣ]

೧೪ ಹೆಂಗಸರು, ಮಕ್ಕಳೂ, ದನಕಾಯುವವರು [ಮತ್ತು] ದೊರೆಗಳು ಸ್ವೇಚ್ಛೆಯಿಂದ (=ತಮ್ಮ ಇಷ್ಟಬಂದಂತೆ), ಪ್ರೀತಿಯಿಂದ ತಮ್ಮ [ತಮ್ಮ] ದೇಶಗಳಲ್ಲಿ ಯಾವುದನ್ನು ಹಾಡಿಕೊಳ್ಳುತ್ತಾರೋ ಅದು ದೇಶೀ ಎಂದು ಹೇಳಿದೆ.                                            ೧೪

೧೫ ಇದರ ಪದ್ಧತಿಯ <ಮಾರ್ಗ> ನಿಬದ್ಧ ಮತ್ತು ಅನಿಬದ್ಧ ಎಂದು ಎರಡು ವಿಧವೆಂದು ಸಮ್ಮತಿಸಿದೆ. ಆಲಾಪ ಮುಂತಾದವುಗಳಿಂದ ಯಾವುದನ್ನು ಕಟ್ಟಿದೆಯೋ ಅದು ಮಾರ್ಗವೆಂದು ಪ್ರಸಿದ್ಧವಾಗಿದೆ.                                                                                 ೧೫

____

೧೬     ಆಲಾಪಾದಿವಿಹೀನಸ್ತು ಸ ಚ ದೇಶೀ ಪ್ರಕೀರ್ತಿತಃ ||
ಏವಂಪ್ರಕಾರಾ ದೇಶೀಯಂ ಜ್ಞಾತವ್ಯಾ ಗೀತಕೋವಿದೈಃ ||
ಏವಮೇತನ್ಮಯಾ ಪ್ರೋಕ್ತಂ ದೇಶ್ಯಾ ಉತ್ಪತ್ತಿಲಕ್ಷಣಮ್ || ೧೬ ||

 || ಇತಿ ದೇಶಿಲಕ್ಷಣಮ್‌ ||