[ನಾದಸ್ಯ ಪ್ರಶಂಸಾ, ಉತ್ಪತ್ತಿಃ, ಲಕ್ಷಣಂ, ಭೇದಾಶ್ಚ]
೧೭ ಇದಾನೀಂ ಸಂಪ್ರವಕ್ಷ್ಯಾಮಿ ನಾದಲಕ್ಷಣಮುತ್ತಮಮ್ || ೧ ||
೧೮ ನ ನಾದೇನ ವಿನಾ ಗೀತಂ ನ ನಾದೇನ ವಿನಾ ಸ್ವರಾಃ |
ನ ನಾದೇನ ವಿನಾ ನೃತ್ತಂ ತಸ್ಮಾನ್ನಾದಾತ್ಮಕಂ ಜಗತ್ || ೨ ||
೧೯ ನಾದರೂಪಃ ಸ್ಮೃತೋ ಬ್ರಹ್ಮಾ ನಾದರೂಪೋ ಜನಾರ್ದನಃ |
ನಾದರೂಪಾ ಪರಾಶಕ್ತಿರ್ನಾದರೂಪೋ ಮಹೇಶ್ವರಃ || ೩ ||
೨೦ ಯದುಕ್ತಂ ಬ್ರಹ್ಮಣಃಸ್ಥಾನಂ ಬ್ರಹ್ಮಗ್ರಂಥಿಶ್ಚ ಯಃ ಸ್ಮೃತಃ |
ತನ್ಮಧ್ಯೇ ಸಂಸ್ತಿತಃ ಪ್ರಾಣಃ ಪ್ರಾಣಾದ್ವಹ್ನಿಸಮುದ್ಗಮಃ || ೪ ||
೨೧ ವಹ್ನಿಮಾರುತಸಂಯೋಗಾನ್ನಾದಃ ಸಮುಪಜಾಯತೇ |
ನಾದಾದುತ್ಪದ್ಯತೇ ಬಿಂದುರ್ನಾದಾತ್ ಸರ್ವಂ ಚ ವಾಙ್ಮಯಮ್ || ೫ ||
– ಇತಿ ಕೇಚಿತ್ ||
೨೨ ಕಂದಸ್ಥಾನಸಮುತ್ಥೋ ಹಿ ಸಮೀರಃ ಸಂಚರನ್ನಧಃ |
ಊರ್ಧ್ವಂ ಚ ಕುರುತೇ ಸರ್ವಾ ನಾದಪದ್ಧತಿಮುದ್ಧತಾಮ್ || ೬ ||
– ಇತ್ಯನ್ಯೇ ವದಂತಿ ||
೨೩ ನಕಾರಃ ಪ್ರಾಣ ಇತ್ಯಾಹುರ್ದಕಾರಶ್ಚಾನಲೋ ಮತಃ |
ನಾದಸ್ಯ ದ್ವಿಪದಾರ್ಥೋsಯಂ ಸಮಿಚೀನೋ ಮಯೋದಿತಃ || ೭ ||
—
ಪಾಠವಿಮರ್ಶೆ : ೧೬ ಅಆ, ಇ, ಊ ೧೯ ಅ ೨೦ಈ ೨೧ಇ, ಈ ೨೨ಅ ಅ-ಈ, ಇಈ ೨೩ ಅ, ಇ
—-
೧೬ ಆಲಾಪವೇ ಮೊದಲಾದುದು ಇಲ್ಲದಿರುವುದು ದೇಶೀ ಎಂದು ಪ್ರಸಿದ್ಧವಾಗಿದೆ. ಈ ದೇಶೀಯು ಈ ಪ್ರಕಾರವಾಗಿದೆಯೆಂದು ಹಾಡಿನ ವಿದ್ವಾಂಸರು ತಿಳಿದುಕೊಳ್ಳಬೇಕು. ಹೀಗೆ ದೇಶೀಯ ಉತ್ಪತ್ತಿ ಮತ್ತು ಲಕ್ಷಣಗಳನ್ನು ನಾನು ಹೇಳಿದ್ದೇನೆ. ೧೬
ಹೀಗೆ ದೇಶಿಯ ಲಕ್ಷಣ[ವು ಮುಗಿಯಿತು.]
[ii ನಾದಪ್ರಕರಣ]
[ನಾದದ ಪ್ರಶಂಸೆ, ಹುಟ್ಟು, ಲಕ್ಷಣ ಮತ್ತು ಭೇದಗಳು]
೧೭ ಈಗ ನಾದದ ಶ್ರೇಷ್ಠ(=ಮುಖ್ಯ)ವಾದ ಲಕ್ಷಣವನ್ನು ನಿರೂಪಿಸುತ್ತೇನೆ. ೧
೧೮ ನಾದವಿಲ್ಲದೆ ಗೀತವಿಲ್ಲ, ನಾದವಿಲ್ಲದೆ ಸ್ವರಗಳಿಲ್ಲ, ನಾದವಿಲ್ಲದೆ ನೃತ್ತವಿಲ್ಲ. ಹೀಗಾಗಿ ಜಗತ್ತು ನಾದಮಯವಾಗಿದೆ. ೨
೧೯ ಬ್ರಹ್ಮನು ನಾದದ ರೂಪವುಳ್ಳವನೆಂದು ಸಮ್ಮತಿಸಿದೆ; ಜನಾರ್ದನನು ನಾದದ ರೂಪವುಳ್ಳವನು; ಪರಾಶಕ್ತಿಯು ನಾದರೂಪಳು; ಮಹೇಶ್ವರನೂ ನಾದರೂಪನೇ. ೩
೨೦ ಯಾವುದು ಬ್ರಹ್ಮನ [ಆವಾಸ] ಸ್ಥಾನವೆಂದು ಹೇಳಿದೆಯೋ ಯಾವದು ಬ್ರಹ್ಮಗ್ರಂಥಿ (=ಬ್ರಹ್ಮಗಂಟು)ಯೆಂದು ಸಮ್ಮತಿಸಿದೆಯೋ ಅದರ ಮಧ್ಯದಲ್ಲಿ ಪ್ರಾಣ[ವಾಯು] ವು ನೆಲೆಸಿದೆ. ಪ್ರಾಣದಿಂದ ಅಗ್ನಿಯ ಉದಯಿಸುತ್ತದೆ. ೪
೨೧ ಅಗ್ನಿ [ಮತ್ತು ಪ್ರಾಣ] ವಾಯುಗಳು ಒಂದನ್ನೊಂದು ಕೂಡಿಕೊಳ್ಳುವುದರಿಂದ ನಾದವು ಹುಟ್ಟುತ್ತದೆ. ನಾದದಿಂದ ಬಿಂದುವು ಉತ್ಪತ್ತಿಯಾಗುತ್ತದೆ. ನಾದದಿಂದ ಎಲ್ಲಾ ಭಾಷೆಗಳೂ (ಉಂಟಾಗುತ್ತವೆ). ೫
– ಹೀಗೆಂದು ಕೆಲವರು (ಹೇಳುತ್ತಾರೆ).
೨೨ ‘[ಹೊಕ್ಕಳು] ಗೆಡ್ಡೆಯಲ್ಲಿ ಹುಟ್ಟಿ [ಪ್ರಾಣ] ವಾಯುವು ಕೆಳಗೂ ಮೇಲೂ ಚಲಿಸಿ ಸಮಸ್ತವಾದ, ಭವ್ಯವಾದ, <ಉದ್ಧತ> ನಾದಪದ್ಧತಿಯನ್ನು ಉಂಟುಮಾಡುತ್ತದೆ’ ೬
– ಹೀಗೆಂದು ಬೇರೆಯವರೆನ್ನುತ್ತಾರೆ.
೨೩ ‘ನ’ ಎಂಬ ವರ್ಣವು ಪ್ರಾಣ [ವಾಯುವನ್ನು ಸೂಚಿಸುತ್ತದೆ] ಎನ್ನುತ್ತಾರೆ. ‘ದ’ ಎಂಬ ವರ್ಣವು ಅಗ್ನಿ[ಯನ್ನು ಸೂಚಿಸುತ್ತದೆ] ಎಂದು ಸಮ್ಮತಿಸಿದೆ. ನಾದವೆಂಬ ಪದದ ಸುಸಂಗತವಾದ ಈ ಎರಡು (ಭಾಗದ) ಅರ್ಥವನ್ನು ನಾನು ಹೇಳಿದ್ದೇನೆ. ೭
____
೨೪ ನಾದೋsಯಂ ನದತೇರ್ಧಾತೋಃ ಸ ಚ ಪಂಚವಿಧೋ ಭವೇತ್ |
ಸೂಕ್ಷ್ಮಶ್ಚೈವಾತಿಸೂಕ್ಷ್ಮಶ್ಚ ವ್ಯಕ್ತೋsವ್ಯಕ್ತಶ್ಚ ಕೃತ್ರಿಮಃ || ೮ ||
೨೫ ಸೂಕ್ಷ್ಮೋ ನಾದೋ ಗುಹಾವಾಸೀ ಹೃದಯೇ ಚಾತಿಸೂಕ್ಷ್ಮಕಃ |
ಕಂಠಮಧ್ಯೇ ಸ್ಥಿತೋ ವ್ಯಕ್ತಶ್ಚಾವ್ಯಕ್ತಸ್ತಾಲುದೇಶಕೇ || ೯ ||
೨೬ ಕೃತ್ರಿಮೋ ಮುಖದೇಶೇ ತು ಜ್ಞೇಯಃ ಪಂಚವಿಧೋ ಬುಧೈಃ |
ಇತಿ ತಾವನ್ಮಯಾ ಪ್ರೋಕ್ತಾ ನಾದೋತ್ಪತ್ತಿರ್ಮನೋಹರಾ || ೧೦ ||
|| ಇತಿ ನಾದೋತ್ಪತ್ತಿಃ ||
Leave A Comment