[ತತ್ರ ಶ್ರುತಿಲಕ್ಷಣಮ್; ತತ್ಸಂಖ್ಯಾ ಚ]
೨೭ ಇದಾನೀಂ ತು ಪ್ರವಕ್ಷ್ಯಾಮಿ ಶ್ರುತೀನಾಂ ಚ ವಿನಿಶ್ಚಯಮ್ |
ಶ್ರುಶ್ರವಣೇ ಚಾಸ್ಯ ಧಾತೋಃ ಕ್ತಿ[ನ್] ಪ್ರತ್ಯಯಸಮುದ್ಭವಃ ||
ಶ್ರುತಿಶಬ್ದಃ ಪ್ರಸಾಧ್ಯೋsಯಂ ಶಬ್ದಜ್ಲೈಃ ಕರ್ಮಸಾಧನಃ || ೧ ||
೨೮ (ಅ) ಶ್ರೂಯತ ಇತಿ ಶ್ರುತಿಃ | (ಆ) ಸಾ ಚೈಕಾsನೇಕಾ ವಾ? (ಇ) ತತ್ರೈಕೈವ ಶ್ರುತಿರಿತಿ | (ಈ) ತದ್ಯಥಾ – ತತ್ರಾದೌ ತಾವದ್ದೇಹಾಗ್ನಿಪವನಸಂಯೋಗಾತ್ಪುರುಷಪ್ರಯತ್ನಪ್ರೇರಿತೋ ಧ್ವನಿರ್ನಾಭೇರೂರ್ಧ್ವಮಾಕಾಶದೇಶಮಾಕ್ರಾಮನ್ ಧೂಮವತ್ಸೋಪಾನಪದಕ್ರಮೇಣ ಪವನೇಚ್ಛಯಾsನೆಕಧಾssರೋಹನ್ ಅಂತರ್ಭೂತಪೂರಣ ಪ್ರತ್ಯಯಾರ್ಥತಯಾ [ಚತುಃ] ಶ್ರುತ್ಯಾದಿ ಭೇದಭಿನ್ನಃ ಪ್ರತಿಭಾಸ[ತ] ಇತಿ ಮಾಮಕೀನಂ ಮತಮ್ || 1
೨೯ (ಅ) ಅನ್ಯೇ [ತು] ಪುನರ್ದ್ವಿಪ್ರಕಾರಾಃ ಶ್ರುತೀರ್ಮನ್ಯಂತೇ | (ಆ) ಕಥಮ್? (ಇ) ಸ್ವರಾಂತರಾವಿಭಾಗಾತ್ | (ಈ) ತಥಾ ಚಾಹ ವಿಶ್ವಾವಸುಃ –
—
ಪಾಠವಿಮರ್ಶೆ : ೨೪ಅಆ, ಇಈ ೨೫ಈ ೨೬ಈ ೨೭ಇಈ, ಊ ೨೮ಅ,ಈ ೨೯ ಅ,ಇ
—-
೨೪ ಈ ನಾದ (ವೆಂಬ ಪದ)ವು ‘ನದತೇ’ ಎಂಬ ಧಾತುವಿನಿಂದ [ಹೊರಟಿದೆ]. ಅದು ಸೂಕ್ಷ್ಮ, ಅತಿಸೂಕ್ಷ್ಮ, ವ್ಯಕ್ತ, ಅವ್ಯಕ್ತ ಮತ್ತು ಕೃತಿಮವೆಂದು ಐದು ವಿಧವಾಗಿದೆ.
೨೫ ಸೂಕ್ಷ್ಮ ನಾದವು ರಹಸ್ಯವಾದೆಡೆಯಲ್ಲಿ <ಗುಹಾ> ನೆಲೆಸಿದೆ; ಅತಿಸೂಕ್ಷ್ಮ(ನಾದ)ವು ಹೃದಯದಲ್ಲಿ (ಇದೆ); ವ್ಯಕ್ತವು ಕಂಠದ ನಡುವೆ ಇದೆ. ಅವ್ಯಕ್ತವು ಅಂಗಳಿನ ಪ್ರದೇಶದಲ್ಲಿ (ಇರುತ್ತದೆ).
೨೬ ಕೃತ್ರಿಮ(ನಾದ) ವಾದರೋ ಬಾಯಿಯಲ್ಲಿ <ಮುಖದೇಶ> (ಇರುತ್ತದೆ.) ಹೀಗೆ ಐದು ಬಗೆಯ (ನಾದವ)ನ್ನು ತಿಳಿಯಬೇಕು. ಇಂತು ಮನೋಹರವಾದ ನಾದದ ಉತ್ಪತ್ತಿಯನ್ನು ನಾನು ಹೇಳಿದ್ದೇನೆ. ೧೦
ಹೀಗೆ ನಾದೋತ್ಪತ್ತಿ (ವರ್ಣನವು ಮುಗಿಯಿತು).
[iii ಶ್ರುತಿಪ್ರಕರಣ]
[ಶ್ರುತಿಯ ಲಕ್ಷಣ, ಮತ್ತು ಅದರ ಸಂಖ್ಯೆ]
೨೭ ಈಗ ಶ್ರುತಿಗಳ ನಿರ್ಣಯವನ್ನು ನಿರೂಪಿಸುತ್ತೇನೆ. ಶ್ರುತಿ ಎಂಬ ಶಬ್ದವು ‘ಶ್ರು’ ಎಂದರೆ ‘ಆಲಿಸು’ ಎಂಬ (ಅರ್ಥವನ್ನು ಉಳ್ಳ) ಧಾತುವಿನಿಂದ ‘ಕ್ತಿನ್’ [ಎಂಬ] ಪ್ರತ್ಯಯವು ಸೇರಿಕೊಂಡು ಹುಟ್ಟಿದೆ. ಇದನ್ನು ವ್ಯಾಕರಣವಿದ್ವಾಂಸರು <ಶಬ್ದಜ್ಞ> ಹೀಗೆ ಕರ್ಮಸಾಧನವಾಗಿ (ಕರ್ಮಪದವನ್ನಾಗಿ ಪಡೆಯಲು) ನಿಷ್ಪತ್ತಿಗೊಳಿಸಬೇಕು. ೧
೨೮ (ಅ) ಕೇಳಿಸುತ್ತದೆ ಎಂದು ಶ್ರುತಿ (ಯ ಅರ್ಥ). (ಆ) ಅದು ಒಂದೋ ಅಥವಾ ಅನೇಕವೋ? (ಇ) ಇಲ್ಲಿ (=ಈ ಒಂದು ಪಕ್ಷದಲ್ಲಿ) ಶ್ರುತಿಯು ಒಂದೇ ಎಂದು (ಸಿದ್ಧಾಂತ). (ಈ) ಅದು ಹೇಗೆಂದರೆ ಅಲ್ಲಿ (=ಶರೀರದಲ್ಲಿ) ಮೊದಲು ದೇಹಾಗ್ನಿಯೂ [ಪ್ರಾಣ]ವಾಯುವೂ, ಒಂದನ್ನೊಂದು ಕೂಡಿಕೊಳ್ಳುವುದರಿಂದ, ಪ್ರಯತ್ನದಿಂದ ಉತ್ತೇಜನವನ್ನು ಪಡೆದು, ಧ್ವನಿಯು ಹೊಕ್ಕುಳಿನ ಮೇಲಿನ ಜಾಗ<ಆಕಾಶ>ವನ್ನು ಆಕ್ರಮಿಸಿಕೊಂಡು, ಹೊಗೆಯ ಹಾಗೆ ಏಣಿಯ ಮೆಟ್ಟಲುಗಳನ್ನೆಂಬಂತೆ ಹಲವು ಬಗೆಗಳಲ್ಲಿ ಗಾಳಿಯ ಮರ್ಜಿಗೆ (=ಸ್ವೇಚ್ಛೆಗೆ) ಒಳಪಟ್ಟು ಮೇಲಕ್ಕೆ ಏರುತ್ತದೆ. (ಆದರೆ ಅದು ಒಂದೇ ಆಗಿದ್ದರೂ) ಒಳಗೆಲ್ಲ ತುಂಬಿಕೊಂಡಿದೆಯೆಂಬ ನಿಶ್ಚಿತ ಪರಿಜ್ಞಾನದಿಂದಾಗಿ [ನಾಲ್ಕು] ಶ್ರುತಿಗಳು ಮುಂತಾದ ಭೇದಗಳನ್ನು ಹೊಂದಿದ್ದು ಬೇರೆ ಬೇರೆಯಾಗಿರುವಂತೆ ಭಾಸವಾಗುತ್ತದೆ. ಎಂಬುದು ನನ್ನ ಅಭಿಪ್ರಾಯ. 1
೨೯ (ಅ) ಬೇರೆಯವರು ಎರಡು ಪ್ರಕಾರಗಳ ಶ್ರುತಿಗಳನ್ನು ಒಪ್ಪುತ್ತಾರೆ. (ಆ) ಹೇಗೆ? (ಇ) ಸ್ವರ – (ಮತ್ತು) ಅಂತರ (ಶ್ರುತಿ) ಎಂಬ ವಿಭಾಗದಿಂದಾಗಿ (ಹೀಗೆ ತಿಳಿಯುತ್ತಾರೆ). (ಈ) ವಿಶ್ವಾವಸುವು ಹೀಗೆ ಹೇಳಿದನು- 2
____
೩೦ ”ಶ್ರವಣೇಂದ್ರಿಯಗ್ರಾಹ್ಯತ್ವಾದ್ಧ್ವನಿರೇವ ಶ್ರುತಿರ್ಭವೇತ್ |
ಸಾ ಚೈಕಾsಪಿ ದ್ವಿಧಾ ಜ್ಞೇಯಾ ಸ್ವರಾಂತರವಿಭಾಗತಃ || ೨ ||
೩೧ ನಿಯತಶ್ರುತಿಸಂಸ್ಥಾನಾದ್ಗೀಯಂತೇ ಸಪ್ತಗೀತಿಷು |
ತಸ್ಮಾತ್ಸ್ವರಗತಾ ಜ್ಞೇಯಾಃ ಶ್ರುತಯಃ ಶ್ರುತಿವೇದಿಭಿಃ || ೩ ||
೩೨ ಅಂತಃಸ್ವರವಿವರ್ತಿನ್ಯೋ ಹ್ಯಂತರಶ್ರುತಯೋ ಮತಾಃ |
ಏತಾಸಾಮಪಿ ವೈಸ್ವರ್ಯಂ ಕ್ರಿಯಾಗ್ರಾಮವಿಭಾಗತಃ” || ೩ ||
೩೩ (ಅ) ಕೇಚಿತ್ಸ್ಥಾನತ್ರಯಯೋಗಾತ್ತ್ರಿವಿಧಾಂ ಶ್ರುತಿಂ ಪ್ರತಿಪದ್ಯಂತೇ | (ಆ) ಅಪರೇ ತ್ವಿಂದ್ರಿಯವೈಗುಣ್ಯಾತ್ತ್ರಿವಿಧಾಂ ಶ್ರುತಿಂ ಮನ್ಯಂತೇ | (ಇ) ಇಂದ್ರಿಯವೈಗುಣ್ಯಂ ಚ ತ್ರಿವಿಧಂ – ಸಹಜಂ ದೋಷಜಂ ಅಭಿಘಾತಜಂ ಚೇತಿ | 3
೩೪ (ಅ) ಅಪರೇ ತು ವಾತಪಿತ್ತಕಫಸನ್ನಿಪಾತಭೇದಭಿನ್ನಾಂ ಚತುರ್ವಿಧಾಂ ಶ್ರುತಿಂ ಪ್ರತಿಪೇದಿರೇ |
(ಆ) ತಥಾ ಚಾಹ ತುಂಬುರುಃ – 4
೩೫ ”ಉಚ್ಚೈಸ್ತರೋ ಧ್ವನೀ ರೂಕ್ಷೋ ವಿಜ್ಞೇಯೋ ವಾತಜೋ ಬುಧೈಃ |
ಗಂಭೀರೋ ಘನಲೀನಸ್ತು ಜ್ಞಾತವ್ಯಃ ಪಿತ್ತಜೋ ಧ್ವನಿಃ || ೫ ||
೩೬ ಸ್ನಿಗ್ಧಶ್ಚ ಸುಕುಮಾರಶ್ಚ ಮಧುರಃ ಕಫಜೋ ಧ್ವನಿಃ |
ತ್ರಯಾಣಾಂ ಗುಣಸಂಯುಕ್ತೋ ವಿಜ್ಞೇಯಃ ಸನ್ನಿಪಾತಜಃ” || ೬ ||
೩೭ (ಅ) ಅಪರೇ ತು ವೇಣ್ವಾದಯೋ ನವಧಾಂ ಶ್ರುತಿಂ ಪ್ರತಿಪದ್ಯಂತೇ | (ಆ) ತಥಾ ಹಿ – 5
೩೮ ದ್ವಿಶ್ರುತಿಸ್ತ್ರಿಶ್ರುತಿಶ್ಚೈವ ಚತುಃಶ್ರುತಿಕ ಏವ ಚ |
ಸ್ವರಪ್ರಯೋಗಃ ಕರ್ತವ್ಯೋ ವಂಶೇ ಛಿದ್ರಗತೋ ಬುಧೈಃ || ೭ ||
—
ಪಾಠವಿಮರ್ಶೆ : ೩೦ಇ ೩೧ಅ, ಅಆ ೩೨ಅ,ಇ ೩೩ಅ ೩೪ಆ ೩೫ಇ ೩೬ ಈ ೩೭ ಅ,ಆ
—-
೩೦ ‘ಕಿವಿಯು ಗ್ರಹಿಸುವುದರಿಂದ ಧ್ವನಿಯೇ ಶ್ರುತಿಯಾಗುತ್ತದೆ. ಅದು ಒಂದೇ ಆಗಿದ್ದರೂ ಸ್ವರ (ಮತ್ತು) ಅಂತರ ಎಂಬ ವಿಭಾಗದಿಂದಾಗಿ ಎರಡು ವಿಧವೆಂದು ತಿಳಿಯಬೇಕು. ೨
೩೧ ‘ನಿಶ್ಚಿತವಾದ ಶ್ರುತಿಗಳಲ್ಲಿ ಏಳು (ಸ್ವರಗಳು) ಗೀತಿಗಳಲ್ಲಿ (ಅಥವಾ, ಸ್ವರಗಳು ಏಳು ಗೀತಿಗಳಲ್ಲಿ) ಹಾಡಲ್ಪಡುತ್ತವೆ. ಆದುದರಿಂದ ಶ್ರುತಿಗಳನ್ನು ಬಲ್ಲವರು (ಅವುಗಳನ್ನು) ಸ್ವರಗತಗಳೆಂದು ತಿಳಿಯಬೇಕು. ೩
೩೨ ಸ್ವರಗಳ ನಡುವೆ (ತಿರುಗಿಕೊಂಡು) ಇರುವ ಶ್ರುತಿಗಳು ಅಂತರಶ್ರುತಿಗಳೆಂದು ಸಮ್ಮತಿಸಿದೆ. (ಮೂರ್ಛನಾ, ತಾನ, ಅಲಂಕಾರ, ಮುಂತಾದ) ಕ್ರಿಯಾ (ಮತ್ತು ಷಡ್ಜ -, ಮಧ್ಯಮ- ಎಂಬ) ಗ್ರಾಮಗಳ ವಿಭಾಗದಿಂದ ಇವುಗಳಿಗೆ ವೈಸ್ವರ್ಯವು (=ಮಧ್ಯವರ್ತಿತ್ವವು) (ಉಂಟಾಗುತ್ತದೆ). ೪
೩೩ (ಅ) ಕೆಲವರು (ಮಂದ್ರ, ಮಧ್ಯ, ತಾರಗಳೆಂಬ) ಮೂರು ಸ್ಥಾನಗಳ ಸಂಬಂಧದಿಂದ ಶ್ರುತಿಯನ್ನು ಮೂರು ಬಗೆಯೆಂದು ಪ್ರತಿಪಾದಿಸುತ್ತಾರೆ. (ಆ) ಇನ್ನು ಕೆಲವರಾದರೋ ಇಂದ್ರಿಯ ದೋಷ <ವೈಗುಣ್ಯ> ದಿಂದ ಮೂರು ಬಗೆಯ ಶ್ರುತಿಯನ್ನು ಅಂಗೀಕರಿಸುತ್ತಾರೆ. (ಇ) ಇಂದ್ರಿಯದೋಷವು ಸಹಜ (=ವ್ಯಕ್ತಿಯ ಜೊತೆಯಲ್ಲಿ ಹುಟ್ಟಿದ್ದು), ದೋಷಜ (=ತ್ರಿದೋಷ ವೈಷಮ್ಯದಿಂದ ಹುಟ್ಟಿದ್ದು) ಮತ್ತು ಅಭಿಘಾತಜ (ಎಂದರೆ, ಶಬ್ದೋತ್ಬಾದನೆಗಾಗಿ ಎರಡು ವಸ್ತುಗಳು ಸಂಘರ್ಷವಾಗುವುದಕ್ಕೂ ಬೇರೆ ಬೇರೆ ಯಾಗುವುದಕ್ಕೂ ಬೇಕಾಗುವ ಸಂಯೋಗವು ಅಭಿಘಾತಃ ಇದರ ದೋಷದಿಂದ ಹುಟ್ಟುವ ವೈಸ್ವರ್ಯ) ಎಂದು ಮೂರು ವಿಧ. 3
೩೪ (ಅ) ಮತ್ತೆ ಕೆಲವರಾದರೋ ವಾತಪಿತ್ತಕಫಸನ್ನಿಪಾತಗಳ ವೈಷಮ್ಯದಿಂದ ಬೇರೆ ಬೇರೆಯಾಗಿರುವ ನಾಲ್ಕು ವಿಧದ ಶ್ರುತಿಗಳನ್ನು ಪ್ರತಿಪಾದಿಸುತ್ತಾರೆ. (ಆ) ತುಂಬುರುವು ಹೀಗೆ ಹೇಳಿದನು- 4
೩೫ ”ಉಚ್ಚವಾಗಿ, ಒಣಗಿರುವ ಧ್ವನಿಯು ವಾತ (ವೈಷಮ್ಯ)ದಿಂದ ಹುಟ್ಟಿದ್ದೆಂದು ವಿದ್ವಾಂಸರು ತಿಳಿಯಬೇಕು. ಆಳವೂ ಸಾಂದ್ರವೂ ಲೀನವೂ ಆಗಿರುವ ಧ್ವನಿಯು ಪಿತ್ತ(ವೈಷಮ್ಯ) ದಿಂದ ಹುಟ್ಟಿದ್ದೆಂದು ತಿಳಿಯಬೇಕು. ೫
೩೬ ನುಣುಪಾದುದೂ ಕೋಮಲವೂ ಇಂಪೂ ಆಗಿರುವ ಧ್ವನಿಯು ಕಫ (ವೈಷಮ್ಯ) ದಿಂದ ಹುಟ್ಟಿದ್ದು. [ಈ] ಮೂರರ ಗುಣಗಳನ್ನೂ ಕೂಡಿಕೊಂಡಿರುವುದು ಸನ್ನಿಪಾತದಿಂದ ಹುಟ್ಟಿದ್ದೆಂದು ತಿಳಿಯಬೇಕು.” ೬
೩೭ (ಅ) ವೇಣುವೇ ಮೊದಲಾದ ಇತರರು ಒಂಬತ್ತು ಬಗೆಯ ಶ್ರುತಿಯನ್ನು ಪ್ರತಿಪಾದಿಸುತ್ತಾರೆ. (ಆ) ಹೇಗೆಂದರೆ – 5
೩೮ ಬಿದಿರಿನ ಕೊಳಲಿನಲ್ಲಿರುವ ತೂತುಗಳಲ್ಲಿ ಹೊರಡುವವುಗಳನ್ನು ಎರಡು ಶ್ರುತಿಗಳೂ, ಮೂರು ಶ್ರುತಿಗಳೂ, ಹಾಗೆಯೇ ನಾಲ್ಕು ಶ್ರುತಿಗಳು ಇರುವ (ಪ್ರಮಾಣಗಳನ್ನುಳ್ಳ) ಸ್ವರಗಳು ಎಂದು ವಿದ್ವಾಂಸರು ಪ್ರಯೋಗಿಸಬೇಕು. ೭
____
೩೯ (ಅ) ಭರತೇನಾಪ್ಯಕ್ತಮ್ – 6
ದ್ವಿಕತ್ರಿಕಚತುಷ್ಕಾಸ್ತು ಜ್ಞೇಯಾ ವಂಶಗತಾಃ ಸ್ವರಾಃ |
ಇತಿ ತಾವನ್ಮಯಾ ಪ್ರೋಕ್ತಾಃ ಸವಂಶಶ್ರುತಯೋ ನವ || ೮ ||
೪೧ (ಅ) ತತ್ರ ಕೇಚನ್ಮೀಮಾಂಸಾಮಾಂಸಲಿತಧಿಯೋ ಧೀರಾ ದ್ವಾವಿಂಸತಿ ಶ್ರುತೀಮ್ಮನ್ಯಂತೇ |
(ಅ) ಕೇಚನ ಪುನಃ ಷಟ್ಷಷ್ಟಿಭೇದಭಿನ್ನಾಃ ಶ್ರುತಯ ಇತಿ ಮನ್ಯಂತೇ |
(ಇ) ಅನ್ಯೇ ಪುನರಾಣಂತ್ಯಂ ವರ್ಣಯಂತಿ ಶ್ರುತೀನಾಮ್ | (ಈ) ತಥಾ ಚಾಹ ಕೋಹಲಃ- ೭
೪೨ “ದ್ವಾವಿಂಶತಿಂ ಕೇಚಿದುದಾಹರಂತಿ ಶ್ರುತೀಃ ಶ್ರುತಿಜ್ಞಾನವಿಚಾರದಕ್ಷಾಃ |
ಷಟ್ಷಷ್ಟಿಭಿನ್ನಾಃ ಖಲು ಕೇಚಿದಾಸಾಮಾನಂತ್ಯಮನ್ಯೇ ಪ್ರತಿಪಾದಯಂತಿ” || ೯ ||
೪೩ (ಅ) ನನು ಶ್ರುತೇಃ ಕಿಂ ಮಾನಮ್? (ಆ) ಮಚ್ಯತೇ – (ಇ) ಪಂಚಮಸ್ತಾವದ್ ಗ್ರಾಮದ್ವಯಸ್ಥೋ ಲೋಕೇ ಪ್ರಸಿದ್ಧಃ | (ಈ) ತಸ್ಯ ಶ್ರುತ್ಯುತ್ಕರ್ಷಾಪಕರ್ಷಾಭ್ಯಾಂ ಮಾರ್ದವಾದಾಯತತ್ವಾದ್ ವಾ ಯದಂತರಂ ತತ್ಪ್ರಮಾಣಾ ಶ್ರುತಿರಿತಿ | 8
೪೪ (ಅ) ಇದಾನೀಂ ದ್ವಾವಿಂಶತಿಪ್ರಕಾರತಾಯಾ ನಿದರ್ಶನಂ ಯಥಾ –
(ಆ) ದ್ವೇ ವೀಣೇ ತುಲ್ಯಪ್ರಮಾಣೇ ತಂತ್ರ್ಯುಪಪಾದನದಂಡಮೂರ್ಛನಾಸಮೇ ಕೃತ್ವಾ ಷಡ್ಜಗ್ರಾಮಾಶ್ರಿತೇ ಕಾರ್ಯೇ | (ಇ) ತಯೋರನ್ಯತರಸ್ಯಾಂ ಮಧ್ಯಮಗ್ರಾಮಿಕೀಂ ಕುರ್ಯಾತ್ | (ಈ) ಏಕಶ್ರುತ್ಯಪಕೃಷ್ಟಾ ಭವತಿ ಪರಂ ವಿಶೇಷಲಾಭೋ ನಾಸ್ತಿ, ಉಚ್ಚನೀಚಮಾತ್ರಪ್ರತೀತೇಃ | (ಉ) ಪುನರಪಿ ತದ್ವದೇವಾಪಕಷೇದ್ ಯಥಾ ಗಾಂಧಾರನಿಷಾದೌ ಕರ್ತಾರೌ ಪುನರನ್ಯತರಸ್ಯಾಂ ಸ್ಥಿರವೀಣಾಯಾಂ ಧೈವತರ್ಪಭೌ ಕರ್ಮತಾಮಾಪನ್ನೌ ಪ್ರವೇಕ್ಷ್ಯತಃ ದ್ವಿಶ್ರುತ್ಯಭ್ಯಧಿಕತ್ವಾತ್ | (ಊ) ಪುನರಪಿ ತದ್ವದೇವಾಪಕೃಷ್ಟಾಯಾಂ ಚಲವೀಣಾಯಾಂ ದೈವತರ್ಷಭೌ ಇತರಸ್ಯಾಂ ಪಂಚಮಷಡ್ಜೌ ಪ್ರವೇಕ್ಷ್ಯತಃ ತ್ರಿಶ್ರುತ್ಯಭ್ಯಧಿಕತ್ವಾತ್ | (ಋ) ಪುನರಪಿ ತದ್ವದೇವಾಪಕೃಷ್ಟಾಯಾ ಪಂಚಮ ಮಧ್ಯಮಷಡ್ಜಾ ಇತರಸ್ಯಾಂ ಮಧ್ಯಮಗಾಂಧಾರನಿಷಾದನ್ ಪ್ರವಿಶಂತಿ ಚತುಃ-ಶ್ರುತ್ಯಭ್ಯದಿಕತ್ವಾತ್ |
—
ಪಾಠವಿಮರ್ಶೆ : ೩೯ಈ ೪೦ಈ ೪೧ಅ, ಈ ೪೨ಈ ೪೩ಇ,ಈ ೪೪ಆ,ಈ,ಈ,ಉ,ಊ
—–
೩೯ (ಅ) ಭರತನೂ (ಹೀಗೆಯೇ) ಹೇಳಿದ್ದಾನೆ- 6
೪೦ ಕೊಳಲಿನಲ್ಲಿರುವ ಸ್ವರಗಳನ್ನು ಎರಡು, ಮೂರು [ಮತ್ತು] ನಾಲ್ಕು(ಶ್ರುತಿ)ಗಳ (=ಸಮುಚ್ಚಯಗಳು) ಎಂದು ತಿಳಿಯಬೇಕು. ಹೀಗೆ ಕೊಳಲಿನಲ್ಲಿರುವ ಶ್ರುತಿಗಳು ಒಂಬತ್ತೆಂದು ನಾನು ಹೇಳಿದ್ದೇನೆ. ೮
೪೧ (ಅ) ಈ ಸಂದರ್ಭದಲ್ಲಿ ವಿಚಾರ-ಅನ್ವೇಷಣಗಳಿಮದ ಬಲಿಷ್ಠವಾದ ಬುದ್ಧಿಯುಳ್ಳ ಕೆಲವು ಪಂಡಿತರು ಇಪ್ಪತ್ತೆರಡು ಶ್ರುತಿಗಳನ್ನು ಅಂಗೀಕರಿಸುತ್ತಾರೆ. (ಆ) ಮತ್ತೆ ಕೆಲವರು ಶ್ರುತಿಗಳು ಅರವತ್ತಾರು ಭೇದಗಳಿಂದ ಬೇರೆಬೇರೆಯಾಗಿವೆ ಎಂದು ಅಂಗೀಕರಿಸುತ್ತಾರೆ. (ಇ) ಇನ್ನೂ ಕೆಲವರು ಶ್ರುತಿಗಳು ಕೊನೆಯಿಲ್ಲದಷ್ಟು ಎಂದು ವರ್ಣಿಸುತ್ತಾರೆ. (ಈ) ಕೋಹಲನು ಹೀಗೆ ಹೇಳಿದನು- 7
೪೨ “ಶ್ರುತಿಯ ಜ್ಞಾನವನ್ನು ವಿಚಾರಮಾಡುವುದರಲ್ಲಿ ಸಮಥರಥರಾದ ಕೆಲವರು ಶ್ರುತಿಗಳನ್ನು ಇಪ್ಪತ್ತೆರಡೆಂದು ವಿವರಿಸುತ್ತಾರೆ. (ಬೇರೆ) ಕೆಲವರು [ಅವು] ಅರವತ್ತಾರು ವಿಧಗಳೆಂದು (ಹೇಳುತ್ತಾರೆ). (ಮತ್ತೆ) ಕೆಲವರು ಅವುಗಳು ಅನಂತವೆಂದು ಪ್ರತಿಪಾದಿಸುತ್ತಾರೆ.” ೯
೪೩ (ಅ) ಹಾಗಾದರೆ ಶ್ರುತಿಯ ಅಳತೆಯೇನು? (ಆ) ಹೇಳಲಾಗುವುದು; (ಇ) ಎರಡೂ ಗ್ರಾಮಗಳಲ್ಲಿರುವ ಪಂಚಮವು ಲೋಕದಲ್ಲಿ ಪ್ರಸಿದ್ಧವಾಗಿದೆ. (ಈ) ಅದರ ಶ್ರುತಿಯನ್ನು ಏರಿಸಿ-ಇಳಿಸುವುದರಿಂದಲೂ ಅಥವಾ (ತಂತಿಯನ್ನು) ಮೃದುಗೊಳಿಸಿ (ಕುಗ್ಗಿಸಿ-ಸಡಿಲಿಸಿ) ಹಿಗ್ಗಿ (ಬಿಗಿಗೊಳಿ)ಸುವುದರಿಂದಲೂ ಯಾವ (ಧ್ವನಿಪ್ರಮಾಣದ) ಅಂತರವು (ಗೋಚರಿಸುತ್ತದೆಯೋ) ಆ ಪ್ರಮಾಣದ್ದಾಗಿ ಶ್ರುತಿಯು [ಇರುತ್ತದೆ ಎಂದು ಹೇಳಲಾಗುತ್ತದೆ.]
೪೪ (ಅ) ಈಗ ಶ್ರುತಿಗಳು ಇಪ್ಪತ್ತೆರಡು ಪ್ರಕಾರಗಳಾಗಿರುವದರ ನಿದರ್ಶನ(ವನ್ನು ಹೇಳಲಾಗುವುದು).
(ಆ) ಎರಡು ವೀಣೆಗಳನ್ನು ಸಮಾನವಾದ ಪ್ರಮಾಣದ್ದಾಗಿರುವಂತೆಯೂ ತಂತಿಗಳಲ್ಲಿ ಯುಕ್ತಿಯುಕ್ತಿವಾಗಿ ದಂಡ, ಮೂರ್ಛನೆಗಳನ್ನು ಸಮಾನವಗಿರುವಂತಗೆಯೂ ಮಾಡಿ (ಅವುಗಳನ್ನು) ಷಡ್ಜಗ್ರಾಮದಲ್ಲಿ ಆಶ್ರಯಹೊಂದಿರುವಂತೆ [ಶ್ರುತಿ] ಮಾಡಬೇಕು. (ಇ) ಅವುಗಳಲ್ಲಿ ಒಂದರ ಪಂಚಮವನ್ನು ಇಳಿಸು(=ಕಡಿಮೆಮಾಡು)ವುದರ ಮೂಲಕ ಅದನ್ನು ಮಧ್ಯಮಗ್ರಾಮದ ಶ್ರುತಿಯದನ್ನಾಗಿ ಮಾಡಿ ಅದೇ ಶ್ರುತಿಯನ್ನು ಪಂಚಮದವರೆಗೆ (ಏರೆಸಿ) ಷಡ್ಜಗ್ರಾಮದ್ದನ್ನಾಗಿ ಮಾಡಬೇಕು. (ಈ) (ಹೀಗೆ ಮಾಡುವುದರಿಂದ) ಒಂದು ಶ್ರುತಿಯು (-ಯಷ್ಟು) ಕಡಿಮೆಯಾಯಿತು, ಆದರೆ ವಿಶೇಷಪ್ರಯೋಜನವೇನೂ ಆಗಲಿಲ್ಲ; ಏಕೆಂದರೆ (ಎರಡು ವೀಣೆಗಳಲ್ಲಿಯೂ ಪಂಚಮವು ಷಡ್ಜಗ್ರಾಮದ್ದರಲ್ಲಿ) ಎತ್ತರ (ಮತ್ತು ಮಧ್ಯಮಗ್ರಾಮದ್ದರಲ್ಲಿ) – ತಗ್ಗು ಎಂಬಷ್ಟು ಮಾತ್ರ ಅರಿವು ಉಂಟಾಗುತ್ತದೆ. (ಉ) ಪುನಃ ಹಾಗೆಯೇ (ಧ್ವನಿಯನ್ನು) ತಗ್ಗಿಸಬೇಕು – ಹೇಗೆಂದರೆ (ಚಲವೀಣೆಯಲ್ಲಿ ತಗ್ಗುವ ಕ್ರಿಯೆಗೆ) ಕರ್ಮಭಾವದಲ್ಲಿರುವ ಧಯವತರಿಷಭಗಳನ್ನು (?-ರಿಷಭ-ದೈವತಗಳನ್ನು ಕ್ರಮವಾಗಿ) ಪ್ರವೇಶಿಸುತ್ತವೆ. (-ಸುವಷ್ಟು ತಗ್ಗೆಸಬೇಕು); (ಗಾಂಧಾರನಿಷಾದಗಳು ಪ್ರತ್ಯೇಕವಾಗಿ ರಿಷಭಧೈವತಗಳಿಗಿಂತ) ಎರಡು ಶ್ರುತಿಗಳು (-ಳಷ್ಟು) ಹೆಚ್ಚಾಗಿರುವುದರಿಂದ (ಹೀಗೆ ಪ್ರವೇಶಿಸುತ್ತವೆ). (ಊ) ಇನ್ನೂ ಒಮ್ಮೆ ಇದರಂತೆಯೇ (ಧ್ವನಿಯನ್ನು) ತಗ್ಗಿಸಿದ ಚಲವೀಣೆಯ ಧೈವತರಿಷಭಗಳು ಬೇರೆಯದರ (=ಸ್ಥಿರವೀಣೆಯ) ಪಂಚಮಷಡ್ಜಗಳನ್ನು (ಕ್ರಮವಾಗಿ) ಪ್ರವೇಶಿಸುತ್ತವೆ (-ಸುವಂತೆ ಮಾಡಬೇಕು). (ಅವು ಒಂದೊಂದೂ ಕ್ರಮವಾಗಿ ಪಂಚಮಷಡ್ಜಗಳಿಗಿಂತ ಮೂರು (ಮೂರು) ಶ್ರುತಿಗಳು (-ಳಷ್ಟು) ಹೆಚ್ಚಾಗಿರುವುದರಿಂದ (ಹೀಗೆ ಪ್ರವೇಶಿಸುತ್ತವೆ). (ಋ) ಮತ್ತೊಮ್ಮೆ ಇದೇ ರೀತಿಯಲ್ಲಿ (ಧ್ವನಿಯನ್ನು) ತಗ್ಗಿಸಿದ (ಚಲವೀಣೆಯ) ಪಂಚಮ, ಮಧ್ಯಮ (ಮತ್ತು) ಷಡ್ಜಗಳು ಬೇರೆಯದರ (=ಸ್ಥಿರವೀಣೆಯ) ಮಧ್ಯಮ, ಗಾಂಧಾರ (ಮತ್ತು) ನಿಷಾದಗಳನ್ನು (ಕ್ರಮವಾಗಿ ಪ್ರವೇಶಿಸುತ್ತವೆ. (-ಸುವಷ್ಟು ತಗ್ಗಿಸಬೇಕು.) (ಅವು ಒಂದೊಂದೂ ಕ್ರಮವಾಗಿ ಮಧ್ಯಮ, ಗಾಂಧಾರ ಮತ್ತು ನಿಷಾದಗಳಿಗಿಂತ) ನಾಲ್ಕು (ನಾಲ್ಕು) ಶ್ರುತಿಗಳಷ್ಟು ಹೆಚ್ಚಾಗಿರುವುದರಿಂದ (ಹೀಗೆ ಪ್ರವೇಶಿಸುತ್ತವೆ). 9
____
೪೫ (ಅ) ಏವಮನೇನ ನಿದರ್ಶನೇನ ದ್ವಾವಿಂಶತಿಶ್ರುತಯೋ ಭವಂತಿ | (ಆ) ಏವಂ ಮಧ್ಯಮಗ್ರಾಮೇ ದ್ರಷ್ಟವ್ಯಮ್ |
(ಇ) ಪ್ರಸ್ತಾರೋ ಯಥಾ – 10
ಧ್ರುವವೀಣಾ |
|
|
|
ಸ |
|
|
ರಿ |
|
ಗ |
|
|
|
ಮ |
|
|
|
ಪ |
|
|
ಧ |
|
ನಿ |
ಚಲವೀಣಾ |
|
|
|
ಸ |
|
|
ರಿ |
|
ಗ |
|
|
|
ಮ |
|
|
|
ಪ |
|
|
ಧ |
|
ನಿ |
ಪ್ರಥಮ ಸಾರಣಾ |
|
|
ಸ |
|
|
ರಿ |
|
ಗ |
|
|
|
ಮ |
|
|
|
ಪ |
|
|
ಧ |
|
ನಿ |
|
ದ್ವಿತೀಯ ಸಾರಣಾ |
|
ಸ |
|
|
ರಿ |
|
ಗ |
|
|
|
ಮ |
|
|
|
ಪ |
|
|
ಧ |
|
ನಿ |
|
|
ತೃತೀಯ ಸಾರಣಾ |
ಸ |
|
|
ರಿ |
|
ಗ |
|
|
|
ಮ |
|
|
|
ಪ |
|
|
ಧ |
|
ನಿ |
|
|
|
ಚತುರ್ಥ ಸಾರಣಾ |
|
|
ರಿ |
|
ಗ |
|
|
|
ಮ |
|
|
|
ಪ |
|
|
ಧ |
|
ನಿ |
|
|
|
ಸ |
ಕೋಷ್ಠಕಂ ೧ :ಶ್ರುತಿನಿದರ್ಶನೇ ಸಾರಣಾಚತುಷ್ಟಯಮ್
೪೬ (ಅ) ಚಲವೀಣಾಯಾಃ ಪ್ರಥಮಾಪಕರ್ಷೇ ಶ್ರುತಿಲಾಭೋ ನಾಸ್ತಿ | (ಆ) ದ್ವಿತೀಯೇ ಚತುಃಶ್ರುತಿಲಾಭಃ | (ಇ) ತೃತೀಯೇ ಷಟ್ಶ್ರುತಿಲಾಭಃ | (ಈ) ಚತುರ್ಥೇ ದ್ವಾದಶ ಶ್ರುತಿಲಾಭಃ (ಉ) ಏವಂ ದ್ವಾವಿಂಶತಿಭೇದಭಿನ್ನಾಃ ಶ್ರುತಯೋ ದರ್ಶಿತಾಃ | 11
೪೭ (ಅ) ಇದಾನೀಂ ಷಟ್ಷಷ್ಟಿಭೇದಭಿನ್ನಾಃ ಶ್ರುತಯಃ ಕಥ್ಯಂತೇ | (ಆ) ಮಂದ್ರಮಧ್ಯತಾರೇಷು ಉರಃಕಂಠಶಿರಸ್ಸು ತ್ರಿಷು ಸ್ಥಾನೇಷು ಪ್ರತ್ಯೇಕಂ ದ್ವಾವಿಂಶತಿಪ್ರಕಾರತಯಾ ಭಿದ್ಯಮಾನೇಷು ಶ್ರುತಯೋ ಹಿ ಷಟ್ಷಷ್ಟಿಭೇದಭಿನ್ನಾಭವಂತೀತಿ ಕೇಚಿನ್ಮನ್ಯಂತೇ | 12
—
ಪಾಠವಿಮರ್ಶೆ : ೪೫ಅ, ೪೬ಆ ೪೭ಆ
—-
೪೫ (ಅ) ಹೀಗೆ ಈ ನಿದರ್ಶನದಿಂದ ಇಪ್ಪತ್ತೆರಡು ಶ್ರುತಿಗಳಾಗುತ್ತವೆ. (ಆ) ಹೀಗೆಯೇ ಮಧ್ಯಮಗ್ರಾಮದಲ್ಲಿಯೂ ನೋಡಿಕೊಳ್ಳಬೇಕು. (ಇ) (ಇದರ) ಪ್ರಸ್ತಾರವು ಹೇಗೆಂದರೆ- 10
ಧ್ರುವವೀಣಾ |
|
|
|
ಸ |
|
|
ರಿ |
|
ಗ |
|
|
|
ಮ |
|
|
|
ಪ |
|
|
ಧ |
|
ನಿ |
ಚಲವೀಣಾ |
|
|
|
ಸ |
|
|
ರಿ |
|
ಗ |
|
|
|
ಮ |
|
|
|
ಪ |
|
|
ಧ |
|
ನಿ |
ಪ್ರಥಮ ಸಾರಣಾ |
|
|
ಸ |
|
|
ರಿ |
|
ಗ |
|
|
|
ಮ |
|
|
|
ಪ |
|
|
ಧ |
|
ನಿ |
|
ದ್ವಿತೀಯ ಸಾರಣಾ |
|
ಸ |
|
|
ರಿ |
|
ಗ |
|
|
|
ಮ |
|
|
|
ಪ |
|
|
ಧ |
|
ನಿ |
|
|
ತೃತೀಯ ಸಾರಣಾ |
ಸ |
|
|
ರಿ |
|
ಗ |
|
|
|
ಮ |
|
|
|
ಪ |
|
|
ಧ |
|
ನಿ |
|
|
|
ಚತುರ್ಥ ಸಾರಣಾ |
|
|
ರಿ |
|
ಗ |
|
|
|
ಮ |
|
|
|
ಪ |
|
|
ಧ |
|
ನಿ |
|
|
|
ಸ |
ಕೋಷ್ಠಕ ೧ : ಶ್ರುತಿನಿದರ್ಶನದಲ್ಲಿ ಸಾರಣಾಚತುಷ್ಟಯ
೪೬ (ಅ) ಚಲವೀಣೆಯ ಮೊದಲನೆಯ [ಧ್ವನಿ] ಇಳಿತದಲ್ಲಿ <ಅಪಕರ್ಷೇ> ಶ್ರುತಿಯು ದೊರೆಯುವುದಿಲ್ಲ. (ಆ) ಎರಡನೆಯದರಲ್ಲಿ ನಾಲ್ಕು ಶ್ರುತಿಗಳು ದೊರೆಯುತ್ತವೆ. (ಇ) ಮೂರನೆಯದರಲ್ಲಿ ಆರು ಶ್ರುತಿಗಳು ಸಿಗುತ್ತವೆ. (ಈ) ನಾಲ್ಕನೆಯದರಲ್ಲಿ ಹನ್ನೆರಡು ಶ್ರುತಿಗಳು ದೊರೆಯುತ್ತವೆ. (ಉ) ಹೀಗೆ ಇಪ್ಪತ್ತೆರಡು ಬಗೆಯ ಬೇರೆ ಬೇರೆ ಶ್ರುತಿಗಳನ್ನು ತೋರಿಸಿದ್ದಾಯಿತು. 11
೪೭ (ಅ) ಈಗ ಅರವತ್ತಾರು ಬಗೆಯ ಬೇರೆ ಬೇರೆ ಶ್ರುತಿಗಳನ್ನು ನಿರೂಪಿಸಲಾಗುವುದು. (ಆ) ಎದೆ, ಗಂಟಲು, ಮತ್ತು ತಲೆಗಳಲ್ಲಿ (ಕ್ರಮವಾಗಿ ಇರುವ) ಮಂದ್ರ, ಮಧ್ಯ ಮತ್ತು ತಾರ (ಎಂಬ) ಮೂರು ಸ್ಥಾನಗಳಲ್ಲಿ ಪ್ರತಿಯೊಂದರಲ್ಲಿಯೂ ಇಪ್ಪತ್ತೆರಡು ಶ್ರುತಿಗಳ ಪ್ರಕಾರವಾಗಿ ಬೇರೆ ಬೇರೆಯಾಗಿರುವ ಶ್ರುತಿಗಳೇ ಅರವತ್ತಾರು ಬಗೆಯಾಗಿ ಬೇರೆ ಬೇರೆ ಆಗುತ್ತವೆ. ಎಂದು ಕೆಲವರು ಅಂಗೀಕರಿಸುತ್ತಾರೆ. 12
____
೪೮ (ಅ) ಅಧುನಾ ಶ್ರುತೀನಮಾನಂತ್ಯಂ ದರ್ಶಯಾಮಃ – 13
೪೯ ಆನಂತ್ಯಂ ತು ಶ್ರುತೀನಾಂ ಚ ದರ್ಶಯಂತಿ ವಿಪಶ್ಚಿತಃ |
ಯಥಾ ಧ್ವನಿವಿಶೇಷಾಣಾನಂತ್ಯಂ ಗಗನೋದರೇ || ೧೦ ||
೫೦ ಉತ್ತಾಲಪವನೋದ್ವೇಗಜಲರಾಶಿಸಮುದ್ಭವಾಃ |
ಕಿಯತ್ಯಃ ಪ್ರತಿಪದ್ಯಂತೇ ನ ತರಂಗಪರಂಪರಾಃ || ೧೧ ||
೫೧ (ಅ) ಇತಿ ಶ್ರುತೀನಾಮಾನಂತ್ಯಂ ಚ ದರ್ಶಿತಮ್ | 14[ಶ್ರುತಿ-ಸ್ವರ-ಸಂಬಂಧಮಧಿಕೃತ್ಯ ಪಂಚ ವಿಕಲ್ಪಾಃ, ತೇಷಾಂ ಧೂಷಣಂ ಚ]
೫೨ (ಅ) ಇದಾನೀಂ ಶ್ರುತೀನಾಂ ತಾದಾತ್ಮ್ಯಾದಿ ವಿಕಲ್ಪಃ ಕಥ್ಯತೇ | 15
೫೩ ತಾದಾತ್ಮ್ಯಂ ಚ ವಿವರ್ತತ್ವಂ ಕಾರ್ಯತ್ವಂ ಪರಿಣಾಮಿತಾ |
ಅಭಿವ್ಯಂಜಕತಾ ಚಾಪಿ ಶ್ರುತೀನಾಂ ಪರಿಕಥ್ಯತೇ || ೧೨ ||
೫೪ (ಅ) ಇದಾನೀಮೇತದೇವ ವಿವೃಣೋತಿ – 16
೫೫ ವಿಶೇಷಸ್ಪರ್ಶಶೂನ್ಯತ್ವಾಚ್ಛ್ರವಣೇಂದ್ರಿಯಗ್ರಾಹ್ಯಯೋಃ |
ಸ್ವರಶ್ರುತ್ಯೋಸ್ತು ತಾದಾತ್ಮ್ಯಂ ಜಾತಿವ್ಯಕ್ತ್ಯೋರಿವಾನಯೋಃ || ೧೩ ||
೫೬ ನರಾಣಾಂ ಚ ಮುಖಂ ಯದ್ವದ್ದರ್ಪಣೇ ತು ವಿವರ್ತಿತಮ್ |
ಪ್ರತಿಭಾತಿ ಸ್ವರಸ್ತದ್ವಚ್ಛ್ರುತಿಷ್ವೇವ ವಿವರ್ತಿತಃ || ೧೪ ||
೫೭ ಸ್ವರಾಣಾಂ ಶ್ರುತಿಕಾರ್ಯತ್ವಮಿತಿ ಕೇಚಿದ್ ವದಂತಿ ಹಿ |
ಮೃತ್ಪಿಂಡದಂಡಕಾರ್ಯತ್ವಂ ಘಟಸ್ಯೇಹ ಯಥಾ ಭವೇತ್ || ೧೫ ||
೫೮ ಶ್ರುತಯಃ ಸ್ವರರೂಪೇಣ ಪರಿಣಮಂತಿ ನ ಸಂಶಯಃ |
ಪರಿಣಮೇದ್ ಯಥಾ ಕ್ಷೀರಂ ದಧಿರೂಪೇಣ ಸರ್ವಥಾ || ೧೬ ||
—
ಪಾಠವಿಮರ್ಶೆ : ೪೯ಅ,ಆ,ಈ ೫೦ಅ,ಇ, ೫೩ಊ ೫೫ ಅಆ,ಆ ೫೬ಅ, ಇಈ ೫೭ಅ,ಈ ೫೮ಆ,ಇ
—-
೪೮ (ಅ) ಈಗ ಶ್ರುತಿಗಳು ಅನಂತವಾಗಿರುವುದನ್ನು ತೋರಿಸುತ್ತೇವೆ : 13
೪೯ ಪಂಡಿತರು ಶ್ರುತಿಗಳು ಅನಂತವೆಂಬುದನ್ನು ತೋರಿಸುತ್ತಾರೆ : ಹೇಗೆಂದರೆ ಆಕಾಶದ ಒಡಲಿನಲ್ಲಿ ಅಸಾಮಾನ್ಯವಾದ ಪ್ರತ್ಯೇಕ <ವಿಶೇಷ> ಧ್ವನಿಗಳು ಕೊನೆಯಿಲ್ಲದಷ್ಟಿವೆ. ೧೦
೫೦ ಪ್ರಚಂಡವಾದ ಬಿರುಗಾಳಿಯ ವೇಗಕ್ಕೆ ಸಿಕ್ಕಿರುವ ನೀರಿನ ರಾಶಿಯಲ್ಲಿ (=ಸಮುದ್ರದಲ್ಲಿ) ಹುಟ್ಟಿರುವ ಅಲೆಗಳ ಪರಂಪರೆಯನ್ನು ಇಷ್ಟೇ ಎಂದು [ಲೆಕ್ಕಮಾಡಿ] ಹೇಳಲಾಗುವುದಿಲ್ಲ (ಅಲ್ಲವೆ? ಅಂತೆಯೇ ಆಕಾಶವೆಂಬ ಸಮುದ್ರದಲ್ಲಿರುವ ಶ್ರುತಿ-ಅಲೆಗಳನ್ನು ಇಷ್ಟೇ ಎಂದು ಲೆಕ್ಕಿಸಿ ಹೇಳಲಾಗುವುದಿಲ್ಲ.) ೧೧
೫೧ (ಅ) ಹೀಗೆ ಶ್ರುತಿಗಳು ಅನಂತವಾಗಿವೆಯೆಂಬುದನ್ನು ತೋರಿಸಲಾಯಿತು. 14
[ಶ್ರುತಿ-ಸ್ವರಗಳನ್ನು ಕುರಿತ ಐದು ಪಕ್ಷಗಳು ಮತ್ತು ಅವುಗಳ ಖಂಡನೆ]
೫೨ (ಅ) ಈಗ ಶ್ರುತಿಗಳ ತಾದಾತ್ಮ್ಯವೇ ಮೊದಲಾದ ಪಕ್ಷಗಳನ್ನು ನಿರೂಪಿಸಲಾಗುವುದು. 15
೫೩ ಶ್ರುತಿಗಳ ತಾದಾತ್ಮ್ಯ (=ಸ್ವರವು ಶ್ರುತಿಯೊಡನೆ ಅಭೇದವಾಗಿರುವುದು), ವಿವರ್ತವಾಗಿರುವುದು (=ಸ್ವರವು ಶ್ರುತಿಯ ಪ್ರತಿಬಿಂಬವಾಗಿರುವುದು), ಕಾರ್ಯತ್ವ (=ಶ್ರುತಿಯು ಕಾರಣವಾಗಿ ಸ್ವರವು ಅದರ ಕಾರ್ಯವಾಗಿರುವುದು), ಪರಿಣಾಮವಾಗಿರುವುದು (=ಶ್ರುತಿಯು ಪರಿಣಾಮಹೊಂದಿ ಸ್ವರವಾಗುವುದು), ಅಭಿವ್ಯಂಜಕತ್ವ (=ಶ್ರುತಿಯು ಸ್ವರವನ್ನು ಅಭಿವ್ಯಕ್ತಗೊಳಿಸುವುದು) – ಇವುಗಳನ್ನು ಚೆನ್ನಾಗಿ ಹೇಳಲಾಗುವುದು. ೧೨
೫೪ ಇದನ್ನೇ ಈಗ [ಗ್ರಂಥಕರ್ತನು] ವಿವರಿಸುವನು – 16
೫೫ ಸ್ವರ-ಶ್ರುತಿಗಳನ್ನು ಕಿವಿಯು ಗ್ರಹಿಸುವಲ್ಲಿ (ಅವುಗಳ ನಡುವೆ ಯಾವುದೂ) ವ್ಯತ್ಯಾಸಗಳು ಇಲ್ಲದಿರುವುದರಿಂದ <ವಿಶೇಷಸ್ಪರ್ತಶೂನ್ಯತ್ವಾತ್> ಜಾತಿ-ವ್ಯಕ್ತಿಗಳಲ್ಲಿರುವಂತೆ (ಸ್ವರ-ಶ್ರುತಿಗಳಲ್ಲಿಯೂ) ತಾದಾತ್ಮ್ಯವಿದೆ. ೧೩
೫೬ ಮನುಷ್ಯರ ಮುಖವು ಕನ್ನಡಿಯಲ್ಲಿ ಪ್ರತಿಬಿಂಬಿತವಾಗಿ ಹೇಗೆ ಕಾಣಿಸಿಕೊಳ್ಳುತ್ತದೆಯೋ ಅಂತೆಯೇ ಸ್ವರವು ಶ್ರುತಿಗಳಲ್ಲಿ ಪ್ರತಿಬಿಂಬಿತವಾಗಿ ಕಾಣಿಸಿಕೊಳ್ಳುತ್ತದೆ. ೧೪
೫೭ ಮಣ್ಣುಮುದ್ದೆ (ಮತ್ತು ಕುಂಬಾರನ ಚಕ್ರದ) ಕೋಲುಗಳು (ಕಾರಣವಾಗಿದ್ದು) (ಅವುಗಳ) ಕಾರ್ಯವು ಮಡಕೆಯಾಗಿರುವ ಹಾಗೆ ಶ್ರುತಿಯ (ಕಾರಣತ್ವಕ್ಕೆ) ಕಾರ್ಯತ್ವವು ಸ್ವರ ಎಂದು ಕೆಲವರೆನ್ನುತ್ತಾರೆ. ೧೫
೫೮ ಹಾಲು ಮೊಸರಿನ ರೂಪದಲ್ಲಿ ಸಂಪೂರ್ಣವಾಗಿ ಪರಿಣಾಮ ಹೊಂದುವ ಹಾಗೆ ಶ್ರುತಿಗಳು ಸ್ವರದ ರೂಪದಲ್ಲಿ ಪರಿಣಾಮ ಹೊಂದುತ್ತವೆಯೆನ್ನುವುದರಲ್ಲಿ ಸಂಶಯವಿಲ್ಲ. ೧೬
____
೫೯ ಷಡ್ಜಾದಯಃ ಸ್ವರಾಃ ಸಪ್ತ ವ್ಯಂಜ್ಯಂತೇ ಶ್ರುತಿಭಿಃ ಸದಾ |
ಅಂಧಕಾರಸ್ಥಿತಾ ಯದ್ವತ್ಪ್ರದೀಪೇನ ಘಟಾದಯಃ || ೧೭ ||
೬೦ ಇತಿ ತಾವನ್ಮಯಾ ಪ್ರೋಕ್ತಂ ಶ್ರುತೀನಾಂ ಚ ವಿಕಲ್ಪನಮ್ |
ಇದಾನೀಂ ಸಂಪ್ರವಕ್ಷ್ಯಾಮಿ ವಿಕಲ್ಪಸ್ಯ ಚ ದೂಷಣಮ್ || ೧೮ ||
೬೧ ಭೇದಃ ಸ್ವಲಕ್ಷಣಾನಾಂ ಸಾಮಾನ್ಯೇನಾನ್ಯವಸ್ತುವತ್ಸಿದ್ಧಃ |
ತದ್ಧಿ ವಿಶೇಷೃಃ ಶೂನ್ಯಂ ಭವತಿ ನಭಃಪುಷ್ಪಸಂಕಾಶಮ್ || ೧೯ ||
೬೨ ನಾನಾಬುದ್ಧಿಪ್ರಸಾಧ್ಯತ್ವಾತ್ಸ್ವರಶ್ರುತ್ಯೋಸ್ತು ಭಿನ್ನತಾ |
ಆಶ್ರಯಾಶ್ರಯಿಭೇದಾಚ್ಚ ತಾದಾತ್ಮ್ಯಂ ನೈವ ಸಿದ್ಧ್ಯತಿ || ೨೦ ||
೬೩ ಯದಾಭಾಣಿ ವಿವರ್ತತ್ವಂ ಸ್ವರಾಣಾಂ ತದಸಂಗತಮ್ |
ವಿವರ್ತತ್ವೇ ಸ್ವರಾಣಾಂ ಹಿ ಭ್ರಾಂತಿಜ್ಞಾನಂ ಪ್ರಸಜ್ಯತೇ || ೨೧ ||
೬೪ ಕಾರ್ಯಕಾರಣಭಾವಸ್ತು ಸ್ವರಶ್ರುತ್ಯೋರ್ನ ಸಂಭವೇತ್ |
ಶ್ರುತೀನಾಮಿಹ ಸದ್ಭಾವೇ ಪ್ರಮಾಣಂ ನೈವ ವಿದ್ಯತೇ || ೨೨ ||
೬೫ ಅರ್ಥಾಪತ್ತ್ಯಾ ಯದಿ ವಾ ವ್ಯಾಪ್ತಿಗ್ರಹಣಪೂರ್ವಕಪ್ರಮಾಣಬಲಾತ್ |
ಸಿದ್ಧ [:] ಸ್ವರಜನಕಾನಾಂ ಗಗನಗುಣಾನಾಂ ಸ್ವರೋ ಭೇದಃ || ೨೩ ||
೬೬ ಕಾರ್ಯಕಾರಣಭೇದೋsಸ್ತಿ ಯದ್ಯಪಿ ಸ್ಫುಟಮೇವ ಹಿ |
ತಥಾಪಿ ಕಾರಣತ್ವಂ ಚ ಶ್ರುತೀನಾಂ ನೈವ ಸಂಭವೇತ್ || ೨೪ ||
೬೭ ಕಾರ್ಯೇಷು ವಿದ್ಯಮಾನೇಷು ಕಾರಣಸ್ಯೋಪಲಂಭನಾತ್ |
ಘಟಾದೌ ವಿದ್ಯಮಾನೇ ತು ಮೃತ್ಪಿಂಡೋ ನೋಪಲಭ್ಯತೇ || ೨೫ ||
—
ಪಾಠವಿಮರ್ಶೆ : ೫೯ಆ ೬೧ಅ,ಇಈ ೬೨ಅ, ಈ೬೩ಆ,ಇ ೬೪ಇ ೬೫ ಆ ೬೬ಇ ೬೭ಅ,ಇ,ಈ
—-
೫೯ ಕತ್ತಲಲ್ಲಿರುವ ಮಡಕೆ ಮೊದಲಾದವುಗಳು ದೀಪದಿಂದ ಹೇಗೆ ಅಭಿವ್ಯಕ್ತವಾಗುವವೋ ಅಂತೆಯೇ ಷಡ್ಜವೇ ಮೊದಲಾದ ಏಳು ಸ್ವರಗಳು ಶ್ರುತಿಗಳಿಂದ ಯಾವಾಗಲೂ ಅಭಿವ್ಯಕ್ತ (=ಪ್ರಕಟ)ವಾಗುವವು. ೧೭
೬೦ ಹೀಗೆ ಇಷ್ಟರವರೆಗೆ ಶ್ರುತಿಗಳ (ವಿವಿಧ) ಪಕ್ಷಗಳನ್ನು ನಾನು ಹೇಳಿದೆ. ಈಗ (ಈ) ಪಕ್ಷಗಳ ಖಂಡನೆಯನ್ನು ಹೇಳುತ್ತೇನೆ. ೧೮
೬೧ ಸ್ವಲಕ್ಷಣ(=ತಮ್ಮದೇ ಬೇರೆ ಬೇರೆ ವೈಶಿಷ್ಟ್ಯ) ವುಳ್ಳ ವಸ್ತುಗಳ ಭಿನ್ನತೆಯು ಬೇರೆ (ಸ್ವಲಕ್ಷಣವುಳ್ಳ) ವಸ್ತುಗಳಂತೆ ಸಾಮಾನ್ಯದಿಂದಲೇ (=ಅವು ಬೇರೆಬೇರೆ ಜಾತಿಗಳವು ಎಂಬುದರಿಂದಲೇ ಆತ್ಯಂತಿಕವಾಗಿ) ಸಿದ್ಧಪಡುತ್ತದೆ. ಅದು (=ಈ ಭಿನ್ನತೆಯು) ವಿಶೇಷಗಳಿಂದಾಗಿ ಗಗನಕುಸುಮದಂತೆ ಶೂನ್ಯವೇ ಆಗಿ (=ಇಲ್ಲದೆಯೇ) ಹೋಗುತ್ತದೆ. ೧೯
೬೨ ಸ್ವರ-ಶ್ರುತಿಗಳಲ್ಲಿ ಭಿನ್ನತೆಯು ಇರುವುದೆಂಬುದು ಬೇರೆ ಬೇರೆ ಬುದ್ಧಿಗಳಿಗೆ (=ಬುದ್ಧಿಯುಳ್ಳ ಬೇರೆಬೇರೆಯವರಿಗೆ) ಗೋಚರಿಸುವುದರಿಂದಲೂ ಅವುಗಳಲ್ಲಿ ಆಶ್ರಯ(ವನ್ನು ಪಡೆಯುವ ವಸ್ತು) – ಆಶ್ರಯಿ (=ಆಶ್ರಯವನ್ನು ನೀಡುವ ವಸ್ತು) ಎಂಬ ಭೇದವಿರುವುದರಿಂದಲೂ ಸಿದ್ಧವಾಗುತ್ತದೆ. ಆದುದರಿಂದ ಸ್ವರಶ್ರುತಿಗಳಲ್ಲಿ ತಾದಾತ್ಮ್ಯವು ಸಿದ್ಧಪಡುವುದಿಲ್ಲ. ೨೦
೬೩ ಸ್ವರಗಳಲ್ಲಿ ವಿವರ್ತತ್ವ (=ಪ್ರತಿಬಿಂಬರೂಪ)ವಿದೆಯೆಂದು ಹೇಳಿದ ಮಾತು ಅಸಂಗತವಾಗಿದೆ. (ಏಕೆಂದರೆ) ಸ್ವರಗಳಲ್ಲಿ ವಿವರ್ತತ್ವವಿದ್ದಿದ್ದರೆ ಅವುಗಳ ಜ್ಞಾನವು ಭ್ರಾಂತಿಯಾಗಬೇಕಾಗಿತ್ತು. ೨೧
೬೪ ಸ್ವರಶ್ರುತಿಗಳಲ್ಲಿ ಕಾರ್ಯಕಾರಣಭಾವವೂ ಉಂಟಾಗುವುದಿಲ್ಲ; (ಏಕೆಂದರೆ) ಶ್ರುತಿಗಳ ಆಸ್ತಿತ್ವಕ್ಕೆ <ಸದ್ಭಾವ> ಪ್ರಮಾಣವೇ ಇಲ್ಲ. ೨೨
೬೫ [ಆಕ್ಷೇಪ]:'(ಕಾರ್ಯಕಾರಣಸಂಬಂಧದ ಸಾಧಕಪ್ರಕಾರಗಳಾದ) ಅರ್ಥಾಪತ್ತಿಯಿಂದಲೋ ವ್ಯಾಪ್ತಿಗ್ರಹಣವಿರುವ ಪ್ರಮಾಣ (ಎಂದರೆ ಅನುಮಾನದ) ಬಲದಿಂದಲೋ ಸ್ವರೋತ್ಪತ್ತಿಗೆ ಕಾರಣಗಳಾದ ಆಕಾಶಗುಣಗಳ (ಎಂದರೆ ಶಬ್ದಗಳ) ಭೇದವೇ (ಎಂದರೆ ವಿಕೃತಿಯೇ ಅಥವಾ ಫಲವೇ) ಸ್ವರವೆಂದು ಸಿದ್ಧಪಡಿಸುವುದಾದರೆ (ಸ್ವರಶ್ರುತಿಗಳ ನಡುವೆ ಕಾರ್ಯಕಾರಣ ಸಂಬಂಧವು (ತನಗೆ ತಾನೇ ಏರ್ಪಡುತ್ತದೆ). ೨೩
೬೬ (ಸಮಾಧಾನ:) ಕಾರ್ಯಕರಣಗಳಲ್ಲಿ ಭೇದವೇನೋ ಸ್ಪಷ್ಟವಾಗಿಯೇ ಇದೆ; ಆದರೆ (ಇಲ್ಲಿ) ಶ್ರುತಿಗಳಿಗೆ ಕಾರಣತ್ವವೇ ಉಂಟಾಗುವುದಿಲ್ಲ. ೨೪
೬೭ (ಏಕೆಂದರೆ) (ಇಲ್ಲಿ) ಕಾರ್ಯ(=ಸ್ವರ)ವು ಇರುವಾಗಲೂ ಕಾರಣವು (=ಶ್ರುತಿಯು) ಇದ್ದೇ ಇದೆ (ಗೋಚರಿಸುತ್ತದೆ). [ಆದರೆ] ಮಡಕೆಯಂತಹ ಕಾರ್ಯವು ಇರುವಲ್ಲಿ (ಕಾರಣವಾದ ಮಣ್ಣು ಮುದ್ದೆಯಿರುವುದು ಕಂಡುಬರುವುದಿಲ್ಲ. ೨೫
____
೬೮ ಪರಿಣಾಮೋsಭಿವ್ಯಕ್ತಿಸ್ತು ನ್ಯಾಯ್ಯಃ ಪಕ್ಷಃ ಸತಾಂ ಮತಃ |
ಇತಿ ತಾವನ್ಮಯಾ ಪ್ರೋಕ್ತಂ ತಾದಾತ್ಮ್ಯಾದಿವಿಕಲ್ಪನಮ್ || ೨೬ ||
೬೯ (ಅ) ನನು ಶ್ರುತೀನಾಂ ದ್ವಾವಿಂಶತಿಪ್ರಕಾರತಾ ಯತ್ತದಪ್ಯಸಂಗತಂ ಶ್ರುತಿನಾಂ ಶ್ರುತ್ಯವಯವಾನಾಂ ಚಾನುಪಲಂಭಾತ್ || 17
೭೦ (ಅ) ತದುಕ್ತಮ್- 18
೭೧ ಕಥಂ ಪ್ರತೀತಿಶ್ಚ ಭವೇದಮುಷ್ಯಾ ನಾದೌ ನಭೋ ವ್ಯಾಕುಲಿತಶ್ರುತಿಃ ಸ್ಯಾತ್ |
ಭವೇದಲಕ್ಷ್ಯಾವಯವಾ ಶ್ರುತಿಸ್ತು [ತೇನೈವ] ನೈವಾವಯವಾ ಪ್ರತೀತಾ || ೨೭ ||
೭೨ ತಾಃ ಸಂಭವಂತೀತಸ್ತಾಃ ಸ್ಯುಃ ಕಿಯತ್ಯೋ ಮಾತೃಕಾಃ ಪ್ರತಿ |
ಯದಿ ದ್ವಾವಿಂಶತಿಸ್ತಾಸಾಂ ವ್ಯಾಪಾರಃ ಕಃ ಕ್ರಮೋತ್ರೃಮಾತ್ || ೨೮ ||
೭೩ ಶ್ರುತೀನಾಂ ಯದ್ಯಾನಂತ್ಯಂ ಚ [ವಾ s] ನಿವಾರ್ಯಂ ಪ್ರಸಜ್ಯತೇ |
ಏಕತ್ವಂ ವಾ ಭವೇತ್ತಾಸಾಂ ಮಾತೃಕಾಣಾಮಸಂಶಯಮ್ || ೨೯ ||
೭೪ ಮಾತೃಕಾ ಏವ ನೋ ಸಂತಿ ಕಥಂ ತಾಸಾಂ ವಿಕಲ್ಪನಮ್ |
ಸತಿ ಧರ್ಮಿಣಿ ಧರ್ಮಾಣಾಂ ಸತ್ತೇತ್ಯಾಹುರ್ಮನೀಷಿಣಃ || ೩೦ ||
೭೫ ಧರ್ಮಿಷ್ವಸತ್ಸು ಧರ್ಮಾ ನೋ ಸಂತೀತ್ಯಾಹುರ್ಮನೀಷಿಣಃ |
ಸತ್ತ್ವಾಸತ್ತ್ವೇತದಾ ಗುಣದೋಷಾಣಾಂ ಗುಣಿನಾಂ ಯದಾ || ೩೧ ||
೭೬ ವಿನೈವ ಕಾರಣಂ ತಾಸ್ತಾಃ ಸ್ವರಾಣಾಂ ಕಾರಣಂ ಯದಿ |
ಭವೇಯುಃ ಶ್ರುತಯಸ್ತಾಸಾಂ ಆದಿರ್ನೇಷ್ಯೇತ ಕಾರಣಮ್ || ೩೨ ||
—
ಪಾಠವಿಮರ್ಶೆ : ೬೮ಅ,ಅಆ ೭೧,ಆ,ಇ,ಈ ೭೨ಆ ೭೩ಇ,ಈ ೭೫ಅ,ಆ,ಇ,ಈ
—-
೬೮ ಪರಿಣಾಮವಾದವೂ ಅಭೀವ್ಯಕ್ತಿವಾದವೂ ನ್ಯಾಯವಾದ ಪಕ್ಷಗಳೆಂದು ಜ್ಞಾನಿಗಳಿಗೆ ಸಮ್ಮತವಾಗಿದೆ. ಇಷ್ಟರವರೆಗೆ (ಸ್ವರ-ಶ್ರುತಿಸಂಬಂಧವನ್ನು ಕುರಿತ) ತಾದಾತ್ಮ್ಯವೇ ಮೊದಲಾದ ಪಕ್ಷಗಳನ್ನು ನಾನು ಹೇಳಿದ್ದಾಯಿತು. ೨೬
೬೯ (ಅ) ‘ಆದರೆ ಶ್ರುತಿಗಳೂ (ಮತ್ತು/ಅಥವಾ) ಶ್ರುತಿಗಳ ಅವಯವಗಳೂ (ಗೋಚರಕ್ಕೆ) ದೊರೆಯದೆ ಇರುವುದರಿಂದ ಶ್ರುತಿಗಳು ಇಪ್ಪತ್ತೆರಡೆಂಬುದೂ ಅಸಂಗತವಾಗಿದೆ. 17
೭೦ (ಆಕ್ಷೇಪವನ್ನು ಮುಂದುವರೆಸಿ) ಹೀಗೆ ಹೇಳಿದೆ – 18
೭೧ ‘[ಸ್ವರದ ಉತ್ಪತ್ತಿಗಿಂತ] ಮೊದಲು ಆಕಾಶವು ಕ್ಷೋಭಗೊಂಡಿರುವುದು <ವ್ಯಾಕುಲಿತ> ಕೇಳಿಸುವುದಿಲ್ಲ. (ಹೀಗಿರುವಲ್ಲಿ) ಇದರ (=ಶ್ರುತಿಯ) ಪ್ರತೀತಿಯು ಹೇಗೆ ಆಗಬಲ್ಲುದು? ಶ್ರುತಿಯ ಅವಯವಗಳೂ (ಯಾರ) ಲಕ್ಷ್ಯಕ್ಕೂ ಬಂದಿಲ್ಲ; ಆದುದರಿಂದ ಶ್ರುತಿಗಳು ಅವಯವಗಳನ್ನುಳ್ಳವುಗಳೆಂದು ಅರಿವಾಗುವುದಿಲ್ಲ. ೨೭
೭೨ ‘[ಶ್ರುತಿಗಳಿವೆಯೆಂದು ಒಪ್ಪಿಕೊಳ್ಳುವುದಾದರೆ ಅವುಗಳಿಗೆ ಜನ್ಮವಿತ್ತ ಸೂಕ್ಷ್ಮ] ಮಾತೃಕೆಗಳಿಗೆ ಸಂಬಂಧಿಸಿದಂತೆ (ಶ್ರುತಿಗಳು) ಎಷ್ಷಿವೆ? ಅವು ಇಪ್ಪತ್ತೆರಡೆಂದಾದರೆ (ಸರಿಯಾದ) ಕ್ರಮದಲ್ಲಿರುವಾಗಲೂ ವಿರುದ್ಧಕ್ರಮದಲ್ಲಿರುವಾಗಲೂ ಅವುಗಳ ಕೆಲಸವೇನು <ವ್ಯಾಪಾರ>? ೨೮
೭೩ ‘[ಶ್ರುತಿಗಳು ಇಪ್ಪತ್ತೆರಡೇ ಎಂದಾಗದಿದ್ದರೆ) ಅವು ಅನಂತ ಅಥವಾ ಒಂದೇ ಎಂದು (ಹೇಳುವುದು) ಅನಿವಾರ್ಯವಾಗುತ್ತದೆ. ಹೀಗಿದ್ದಲ್ಲಿ (ಅವುಗಳಿಗೆ) ಮಾತೃಕೆಗಳಿರುವುದರಲ್ಲಿ ಸಂಶಯವಿಲ್ಲ. ೨೯
೭೪ ‘ಮಾತೃಕೆಗಳೇ ಇಲ್ಲ. ಅಂತಲ್ಲಿ ಅವುಗಳು (ಇವೆಯೆಂದು) ಊಹಿಸುವುದು (ಸಂಶಯಪಡುವುದು ಅಥವಾ ಪರ್ಯಾಲೋಚಿಸದೆಯೇ ನಿರ್ಣಯಮಾಡುವುದು) <ವಿಕಲ್ಪನಂ> -ಹೇಗೆ (ಸಾಧ್ಯ)? ಧರ್ಮಿಗಳು, (ಧರ್ಮಗಳನ್ನು, ಎಂದರೆ ಗುಣಗಳನ್ನು, ಹೊಂದಿರುವ ವಸ್ತುಗಳು) ಇರುವಾಗ [ಮಾತ್ರ ಅವುಗಳ] ಅಸ್ತಿತ್ವವು <ಸತ್ತಾ> ಇರುತ್ತದೆಂದು ಬುದ್ಧಿವಂತರು ಹೇಳುತ್ತಾರೆ. ೩೦
೭೫ ‘ಧರ್ಮಿಗಳು ಇಲ್ಲದಿರುವಾಗ [ಅವುಗಳ] ಧರ್ಮಗಳು ಇರುವುದಿಲ್ಲವೆಂದೂ ಬುದ್ಧಿವಂತರು ಹೇಳುತ್ತಾರೆ. ಇದೇ ರೀತಿ ಗುಣಗಳ ಅಥವಾ ದೋಷಗಳ ಸತ್ತಾ (=ಇರುವಿಕೆ) ಅಥವಾ ಅಸತ್ತಾ (=ಇಲ್ಲದಿರುವಿಕೆ)ಗಳು ಗುಣಿಗಳ (ಗುಣಗಳನ್ನುಳ್ಳ ವಸ್ತುಗಳ) (ಸತ್ತಾ ಮತ್ತು ಅಸತ್ತಾಗಳನ್ನು ಅವಲಂಬಿಸುತ್ತವೆ ಎಂದೂ ಬುದ್ಧಿವಂತರು ಹೇಳುತ್ತಾರೆ). ೩೧
೭೬ ‘ಸ್ವತಃ ಆಯಾ ಶ್ರುತಿಗಳಿಗೆ ಕಾರಣ (ವಸ್ತುಗಳು) ಇಲ್ಲದೆಯೇ (ಅವು) ಸ್ವರಗಳಿಗೆ ಕಾರಣ ವಾಗಿವೆಯೆನ್ನುವುದಾದರೆ, ಅವುಗಳ ಮೂಲ (ಕಾರಣ)ವನ್ನು ಹುಡುಕುವುದು ಬೇಕಾಗಿಲ್ಲ. ೩೨
____
೭೭ ಕಿಂಚ ಪ್ರಮಾಣಗಮ್ಯತ್ವೇ ಸಮೇ sಪಿ ಯದಿ ಮಾತೃಕಾಃ |
ನಿಹ್ನೋತವ್ಯಾಸ್ತದಾ ರಕ್ಷಾ ಶ್ರುತೀನಾಮಪಿ ದುರ್ಲಭಾ || ೩೩ ||
೭೮ (ಅ) ಅತ್ರೋಚ್ಯತೇ – 19
೭೯ ಅರ್ಥಾಪತ್ತ್ಯಾsನುಮಾನೇನ ಪ್ರತ್ಯಕ್ಷಜ್ಞಾನತೋsಪಿ ವಾ |
ಗೃಹ್ಯಂತೇ ಶ್ರುತಯಸ್ತಾವತ್ ಸ್ವರಾಭಿವ್ಯಕ್ತಿಹೇತವಃ || ೩೪ ||
[ಮಂಡಲಪ್ರಸ್ತಾರೇಣ ಶ್ರುತೀನಾಂ ನಿದರ್ಶನಮ್]
೮೦ (ಅ) ಏತದೇವ ಸ್ಪಷ್ಟೀಕರಣಾರ್ಥಂ ಪ್ರಸ್ತಾರೇಣ ದರ್ಶಯಾಮಿ (ಆ) ತತ್ರ ಕೇಚಿದ್ ದಂಡಪ್ರಸ್ತಾರೇಣ ದರ್ಶಯಂತಿ ದ್ವಾವಿಂಶತಿಃ ಶ್ರುತಿಯೋ ರೇಖಾಣಾಮಿತಿ | (ಇ) ಅನ್ಯೇ ತು ವೀಣಾಪ್ರಸ್ತಾರಮಾಹುಃ | 20
೮೧ (ಅ) ವಯಂ ಪುನರ್ಮಂಡಲಪ್ರಸ್ತಾರಂ ಬ್ರೂಮಃ | (ಆ) ತಥಾ ಹಿ – (ಇ) ತಿರ್ಯಗೂರ್ಧ್ವಂ ಚ ಪಂಚ ಷಡ್ರೇಖಾ – ಇತ್ಯೇಕಾದಶ | (ಈ) ಉಭಯತೋ ದ್ವಾವಿಂಶತಿಃ | (ಉ) ಏವಂ ಗ್ರಾಮದ್ವಯೋsಪ್ಯುಪಯೋಗಿನ್ಯಃ ಶ್ರುತಯ ಇತಿ ದರ್ಶಿತಾಃ | (ಊ) ತದ್ಯಥಾ – 21
೮೨ ತ್ರಿಶ್ರುತೀರತಿಕ್ರಮ್ಯಾದೌ ಜ್ಞೇಯಃ ಷಡ್ಜಶ್ಚತುಃಶ್ರುತಿ |
ತದೂರ್ಧ್ವಂ ದ್ವೇ ಶ್ರುತೀಸ್ತ್ಯಕ್ತ್ವಾ ತೃತೀಯಾ ಋಷಭೋ ಮತಃ || ೩೫ ||
೮೩ ತತಶ್ಚೈಕಾಂ ಶ್ರುತಿಂ ತ್ಯಕ್ತ್ವಾ ಗಾಂಧಾರೋ ದ್ವಿಶ್ರುತಿಃ ಸ್ಮೃತಃ |
ತದನು ತ್ರಿಶ್ರುತೀಸ್ತ್ಯಕ್ತ್ವಾ ಕರ್ತವ್ಯೋ ಮಧ್ಯಮಸ್ವರಃ || ೩೬ ||
೮೪ ತದೂರ್ಧ್ವಂ ಪಂಚಮಃ ಕಾರ್ಯಃ ಪರಿತ್ಯಜ್ಯ ಶ್ರುತಿತ್ರಯಮ್ |
ಶ್ರುತಿದ್ವಯಂ ಪರಿತ್ಯಜ್ಯ ಕರ್ತವ್ಯೋ ಧೈವತಸ್ತತಃ || ೩೭ ||
೮೫ ಏಕಾಂ ಶ್ರುತಿಂ ಪರಿತ್ಯಜ್ಯ ನಿಷಾದಸ್ತದನಂತರಮ್ |
ಷಡ್ಜಗ್ರಾಮಸಮುದ್ಭೂತ ಉಕ್ತೋsಸೌ ಶ್ರುತಿಮಂಡಲಃ || ೩೮ ||
—
ಪಾಠವಿಮರ್ಶೆ : ೭೭ಅ ೭೯ಅ ೮೦ಆ ೮೨ಅ,ಆ,ಇ ೮೪ಇ
—-
೭೭ ‘ಅಲ್ಲದೆ (ಶ್ರುತಿ, ಮಾತೃಕೆಗಳೆರಡೂ ಇದ್ದು ಗೋಚರಿಸುವುದಕ್ಕೆ) ಪ್ರಮಾಣವು ಸಮಾನವಾಗಿ ಶಕ್ಯವೆಂದಿಟ್ಟುಕೊಂಡರೂ ಮಾತೃಕೆಯು (ಗೋಚರಕ್ಕೆ) ಮರೆಮಾಚಿದೆಯೆನ್ನುದಾದರೆ ಶ್ರುತಿಯನ್ನು (-ಯನ್ನೂ ಮರೆಮಾಚಿದೆಯೆಂಬ ಅಪಲಾಪದಿಂದ) ಉಳಿಸಿಕೊಳ್ಳುವುದು ದುರ್ಲಭ’. ೩೩
೭೮ ಇಲ್ಲಿ (ಇದಕ್ಕೆ ಸಮಾಧಾನರೂಪವಾಗಿ ಹೀಗೆ) ಹೇಳಲಾಗುವುದು: 19
೭೯ ಸ್ವರದ ಅಭಿವ್ಯಕ್ತಿಗೆ ಕಾರಣವಾದ ಶ್ರುತಿಗಳನ್ನು ಅರ್ಥಾಪತ್ತಿಯಿಂದ, ಅನುಮಾನದಿಂದ ಅಥವಾ ನೇರವಾದ ದೋಷರಹಿತ ಇಂದ್ರಿಯಸನ್ನಿಕರ್ಷದಿಂದ <ಪ್ರತ್ಯಕ್ಷಜ್ಞಾನ> ಗ್ರಹಿಸಬಹುದು. ೩೪
[ಮಂಡಲಪ್ರಸ್ತಾರದಿಂದ ಶ್ರುತಿಗಳ ನಿರ್ದಶನ]
೮೦ (ಅ) ಇದನ್ನೇ ಸ್ಪಷ್ಟಪಡಿಸುವದಕ್ಕಾಗಿ ಪ್ರಸ್ತಾರದಿಂದ ತೋರಿಸುತ್ತೇನೆ. (ಆ) ಈ ವಿಷಯದಲ್ಲಿ <ತತ್ರ> ಕೆಲವರು ಇಪ್ಪತ್ತೆರಡು ಶ್ರುತಿಗಳನ್ನು ಗೆರೆಗಳ ಮೂಲಕ ದಂಡಪ್ರಸ್ತಾರದಿಂದ (=ಕಣ್ಣಿಗೆ ಕಾಣುವಂತೆ) ತೋರಿಸುತ್ತಾರೆ. (ಇ) ಬೇರೆಯವರಾದರೋ (ಹೀಗೆ ತೋರಿಸಲು) ವೀಣಾಪ್ರಸ್ತಾರವನ್ನು ಹೇಳುತ್ತಾರೆ. 20
೮೧ (ಅ) ನಾವಾದರೋ <ವಯಂ ಪ್ರನಃ> (ಇದಕ್ಕಾಗಿ) ಮಂಡಲಪ್ರಸ್ತಾರವನ್ನು ಹೇಳುತ್ತೇವೆ. (ಆ) ಅದು ಹೀಗೆ: (ಇ) ಅಡ್ಡಡ್ಡವಾಗಿಯೂ ಮೇಲು-ಕೆಳಗೂ (ಕ್ರಮವಾಗಿ) ಐದು ಮತ್ತು ಆರು ಗೆರೆಗಳನ್ನು (ಎಳೆಯಬೇಕು) -ಹೀಗೆ (ಒಟ್ಟು) ಹನ್ನೊಂದು (ಗೆರೆಗಳಾಗುತ್ತವೆ). (ಈ) ಎರಡೂ (ಕೊನೆ)ಗಳಿಂದ (ಅವು) ಇಪ್ಪತ್ತೆರಡು (ಆಗುತ್ತವೆ). (ಉ) ಹೀಗೆ (ಮಾಡಿದರೆ) ಎರಡು ಗ್ರಾಮಗಳಲ್ಲಿಯೂ ಒಳಕೆಯಾಗುವ ಶ್ರುತಿಗಳನ್ನು ತೋರಿಸಿದ್ದಾಯಿತು. (ಊ) ಅದು ಹೇಗೆಂದರೆ- 21
೮೨ ನಾಲ್ಕು ಶ್ರುತಿಗಳನ್ನುಳ್ಳ ಷಡ್ಜವು ಮೊದಲನೆಯ ಮೂರು ಶ್ರುತಿ(ಗೆರೆ) ಗಳನ್ನು ದಾಟಿ (ನಾಲ್ಕನೆಯದರಲ್ಲಿ) ಇದೆಯೆಂದು ತಿಳಿಯಬೇಕು. ಅದರ ನಂತರ ಎರಡು ಶ್ರುತಿಗಳನ್ನು ಬಿಟ್ಟು ಮೂರನೆಯದಾಗಿ ರಿಷಭವು (ಇರುತ್ತದೆ ಎಂದು) ಸಮ್ಮತಿಸಿದೆ. ೩೫
೮೩ ನಂತರ ಒಂದು ಶ್ರುತಿಯನ್ನು ಬಿಟ್ಟು ಎರಡು ಶ್ರುತಿಗಳನ್ನುಳ್ಳ ಗಾಂಧಾರವು ಇದೆಯೆಂದು ಸ್ಮೃತವಾಗಿದೆ. ಅದರ ನಂತರ ಮೂರು ಶ್ರುತಿಗಳನ್ನು ಬಿಟ್ಟು (ನಾಲ್ಕು ಶ್ರುತಿಗಳನ್ನುಳ್ಳ) ಮಧ್ಯಮ ಸ್ವರವನ್ನು (ಇರುವಂತೆ) ಮಾಡಬೇಕು. ೩೬
೮೪ ಅದರ ನಂತರ ಮೂರು ಶ್ರುತಿಗಳನ್ನು ಬಿಟ್ಟು (ನಾಲ್ಕು ಶ್ರುತಿಗಳನ್ನುಳ್ಳ ಪಂಚಮವನ್ನು ಮಾಡ(=ಬರೆಯ) -ಬೇಕು. ಆಮೇಲೆ ಎರಡು ಶ್ರುತಿಗಳನ್ನು ಬಿಟ್ಟು ಧೈವತವನ್ನು ಮಾಡ (=ಬರೆಯ) ಬೇಕು.
೮೫ ಅದಾದಮೇಲೆ ಒಂದು ಶ್ರುತಿಯನ್ನು ಬಿಟ್ಟು ನಿಷಾದ (ವನ್ನು ಬರೆಯಬೇಕು). ಷಡ್ಜಗ್ರಾಮದಿಂದ ಹುಟ್ಟಿದ ಈ ಶ್ರುತಿಮಂಡಲವನ್ನು (ಹೀಗೆ) ಹೇಳಲಾಯಿತು. ೩೮
____
೮೬ (ಅ) ತದ್ಯಥಾ ಷಡ್ಜಗ್ರಾಮೇ ಶ್ರುತಿಮಂಡಲಮ್ – 22
ಕೋಷ್ಠಕಂ ೨ : ಪಡ್ಜಗ್ರಾಮೇ ಶ್ರುತಿಮಂಡಲಮ್
೮೭ ಇದಾನೀಂ ಸಂಪ್ರವಕ್ಷ್ಯಾಮಿ ಮಧ್ಯಮಶ್ರುತಿಮಂಡಲಮ್ |
ಜ್ಞೇಯಸ್ತಿಸ್ರೋ ಹ್ಯತಿಕ್ರಮ್ಯ ಮಧ್ಯಮೋsಯಂ ಚತುಃಶ್ರುತಿಃ || ೩೯ ||
೮೮ ಶ್ರುತಿದ್ವಯಮತಿಕ್ರಮ್ಯ ತೃತೀಯಾ ಪಂಚಮೋ ಭವೇತ್ |
ತತಸ್ತಿಸ್ರೋ ಹ್ಯತಿಕ್ರಮ್ಯ ಚತುರ್ಥೀ ಧೈವತೋ ಭವೇತ್ || ೪೦ ||
೮೯ ಜ್ಞೇಯಸ್ತ್ವೇಕಾಮತಿಕ್ರಮ್ಯ ನಿಷಾದಸ್ತು ದ್ವಿತೀಯಿಕಾ |
ಶ್ರುತಿತ್ರಯಮತಿಕ್ರಮ್ಯ ತತಃ ಷಡ್ಜಶ್ಚತುರ್ಥಿಕಾ || ೪೧ ||
೯೦ ಋಷಭಸ್ತು ದ್ವಯಂ ತ್ಯಕ್ತ್ವಾತೃತೀಯಾ ಪರತೋ ಭವೇತ್ |
ಶ್ರುತಿಮೇಕಾಮತಿಕ್ರಮ್ಯ ಗಾಂಧಾರಃ ಸ್ಯಾದ್ ದ್ವಿತೀಯಿಕಾ || ೪೨ ||
೯೧ (ಅ)(ತದ್ಯಥಾ-) ಮಧ್ಯಮಗ್ರಾಮೇ ಶ್ರುತಿಮಂಡಲಮ್ – 23

ಕೋಷ್ಠಕಂ ೩ : ಮಧ್ಯಮಗ್ರಾಮೇ ಶ್ರುತಿಮಂಡಲಮ್
—
ಪಾಠವಿಮರ್ಶೆ : ೮೮ ಈ ೮೯ಆ ೯೦ಆ
—-
೮೬ (ಅ)ಪಡ್ಜಗ್ರಾಮದ ಶ್ರುತಿಮಂಡಲವು ಹೇಗಿದೆಯೆಂದರೆ- (ಇದೆ): 22
ಕೋಷ್ಠಕಂ ೨ : ಪಡ್ಜಗ್ರಾಮದಲ್ಲಿ ಶ್ರುತಿಮಂಡಲ
೮೭ ಈಗ ಮಧ್ಯಮ (ಗ್ರಾಮದ) ಶ್ರುತಿಮಂಡಲವನ್ನು ನಿರೂಪಿಸುತ್ತೇನೆ. ನಾಲ್ಕು ಶ್ರುತಿಗಳನ್ನುಳ್ಳ ಈ ಮಧ್ಯಮವು ಮೂರು ಶ್ರುತಿಗಳನ್ನು ದಾಟಿ (ನಾಲ್ಕನೆಯದರಲ್ಲಿ) ಇದೆ ಎಂದು ತಿಳಿಯಬೇಕು. ೩೯
೮೮ ಎರಡು ಶ್ರುತಿಗಳನ್ನು ದಾಟಿ ಮೂರನೆಯ (ದರಲ್ಲಿ ಮೂರುಶ್ರುತಿಗಳನ್ನುಳ್ಳ) ಪಂಚಮವು ಇರುತ್ತದೆ. ಅಲ್ಲಿಂದ ಮೂರನ್ನು ದಾಟಿ ನಾಲ್ಕನೆಯ (ದರಲ್ಲಿ ನಾಲ್ಕು ಶ್ರುತಿಗಳನ್ನುಳ್ಳ) ಧೈವತವು ಇರುತ್ತದೆ. ೪೦
೮೯ ಒಂದನ್ನು ದಾಟಿ ಎರಡನೆಯ (ದರಲ್ಲಿ ಎರಡು ಶ್ರುತಿಗಳನ್ನುಳ್ಳ) ನಿಷಾಧವು (ಇರುತ್ತದೆಂದು) ತಿಳಿಯಬೇಕು. ಆಮೇಲೆ ಮೂರು ಶ್ರುತಿಗಳನ್ನು ದಾಟಿ ನಾಲ್ಕನೆಯ (ದರಲ್ಲಿ ನಾಲ್ಕು ಶ್ರುತಿಗಳನ್ನುಳ್ಳ) ಷಡ್ಜವು (ಇರುತ್ತದೆ). ೪೧
೯೦ ಋಷಭವಾದರೋ ಎರಡನ್ನು ಬಿಟ್ಟು ಮೂರನೆಯ(ದರಲ್ಲಿ ಮೂರು ಶ್ರುತಿಗಳನ್ನು ಹೊಂದಿ) ನಂತರ ಇರುತ್ತದೆ. ಒಂದು ಶ್ರುತಿಯನ್ನು ದಾಟಿ ಗಾಂಧಾರವು ಎರಡನೆಯ (ದರಲ್ಲಿ ಎರಡು ಶ್ರುತಿಗಳನ್ನು ಹೊಂದಿ) ಇದೆ. ೪೨
೯೧ (ಅ) (ಅದು ಹೇಗೆಂದರೆ 🙂 ಮಧ್ಯಮಗ್ರಾಮದ ಶ್ರುತಿಮಂಡಲ: 23
ಕೋಷ್ಠಕಂ ೩ : ಮಧ್ಯಮಗ್ರಾಮದಲ್ಲಿ ಶ್ರುತಿಮಂಡಲ
____
೯೨ (ಅ) ಭರತಸ್ತು ಪುನ ಋಷಭಾದಿ ಶ್ರುತಿಮಂಡಲಂ ದರ್ಶಯತಿ | (ಆ) ಕಿಮತ್ರ ಕಾರಣಮ್? (ಇ) ಉಚ್ಯತೇ | (ಈ) ಗ್ರಾಮದ್ವಯೇsಷ್ಯಂತರಮೂರ್ಛನಾ ಪ್ರತಿಪಾದನಾರ್ಥಂ, ಯದ್ವಾ ಗ್ರಾಮದ್ವಯೇsಪಿ ಷಡ್ಜಮಧ್ಯಮಸ್ವರೌ ಗ್ರಾಮಣ್ಯೌ ಭವತಃ, ಅನ್ಯಸ್ವರಾಸ್ತದಗ್ರೇಸರಾ ಇತಿ | 24
೯೩ ಇತಿ ತಾವನ್ಮಯಾ ಪ್ರೋಕ್ತಾಃ ಶ್ರುತಯೋ ಗ್ರಾಮಸಂಶ್ರಿತಾಃ || ೪೩ ||
[ಇತಿ ಶ್ರುತಿಪ್ರಕರಣಮ್]
Leave A Comment