೧೬೫   (ಅ) ಅಥ, ಕಿಮುಚ್ಯತೇ ಗ್ರಾಮಶಬ್ದೇನ? (ಆ) ನನು ಕತಿ ಗ್ರಾಮ ಭವಂತಿ?
(ಇ) ಕಸ್ಮಾದುತ್ಪದ್ಯತೇ ಗ್ರಾಮಃ ? (ಈ) ಕಿಂ ವಾ ತಸ್ಯ ಪ್ರಯೋಜನಮ್? 1

ಪಾಠವಿಮರ್ಶೆ : ೧೫೮-೧೫೯ ೧೬೦-೧೬೧ ೧೬೨ಆ ೧೬೩ಇ

—-

೧೫೭ ಪಂಚಮವು ಇಂದ್ರನನ್ನು (ಅಧಿದೇವತೆಯಾಗಿ ಪಡೆದಿದೆ). ಧೈವತವು ಗಣಪತಿಯನ್ನು (ಅಧಿದೇವತೆಯನ್ನಾಗಿ ಉಳ್ಳದ್ದು). ನಿಷಾದವು ಸೂರ್ಯದೇವತೆಯನ್ನು ಹೊಂದಿದೆ. ಇವರು ಸ್ವರಗಳ (ಆಯಾ) ದೇವತೆಗಳು.                                                  ೩೩

೧೫೮ ಷಡ್ಜವು ಅಗ್ನಿ (ದೇವನು) ಹಾಡಿನ ಸ್ವರ; ಋಷಭವು ಬ್ರಹ್ಮನಿಂದ ನಿರೂಪಿತವಾಗಿದೆ. ಗಾಂಧಾರವು ಸೋಮ(ದೇವನಿಂದ) ಹಾಡಲ್ಪಟ್ಟಿದ್ದು. ಮಧ್ಯಮವು ವಿಷ್ಣುವಿನಿಂದ (ನಿರೂಪಿತವಾದುದು).                                                                                  ೩೪

೧೫೯ ಪಂಚಮಸ್ವರವು ಮಹಾತ್ಮನಾದ ನಾರದನಿಂದ ಹಾಡಲ್ಪಟ್ಟಿದೆ. ಧೈವತ ನಿಷಾದ ಸ್ವರಗಳನ್ನು ತುಂಬುರುವು ಹಾಡಿದನು.        ೩೫

೧೬೦ ಮಧ್ಯಮಪಂಚಮಸ್ವರಗಳನ್ನು ಹಾಸ್ಯಶೃಂಗಾರ(ರಸ) ಗಳಲ್ಲಿ (ಕ್ರಮವಾಗಿ ಗಾಯನ) ಮಾಡಬೇಕು. ಷಡ್ಜಋಷಭಗಳನ್ನು ಇದೇ ರೀತಿಯಲ್ಲಿ ವೀರ, ರೌದ್ರ, ಅದ್ಭುತ (ರಸ)ಗಳಲ್ಲಿ (ಹಾಡಬೇಕೆಂದು) ತಿಳಿಯಬೇಕು.                                                           ೩೬

೧೬೧ ಗಾಂಧಾರವನ್ನೂ ನಿಷಾದವನ್ನೂ ಕರುಣರಸದಲ್ಲಿ (ಗಾಯನ-ವಾದನ) ಮಾಡಬೇಕು. ಧೈವತವನ್ನಾದರೋ ಬೀಭತ್ಸ ಮತ್ತು ಭಯಾನಕ(ರಸ)ಗಳಲ್ಲಿ (ನಿರೂಪಣೆ) ಮಾಡಬೇಕು.                                                                                   ೩೭

೧೬೨ ಷಡ್ಜವು ಕಂಠದಿಂದ ಉದಯಿಸುತ್ತದೆ. ಋಷಭವು ಶಿರಸ್ಸಿನಿಂದ(ಹುಟ್ಟುತ್ತದೆ) ಎಂದು ಸ್ಮೃತವಾಗಿದೆ. ಗಾಂಧಾರವು ಮೂಗಿನಿಂದ (ಜನಿಸುತ್ತದೆ); ಮಧ್ಯಮಸ್ವರವು ಎದೆಯಿಂದ (ಉತ್ಪನ್ನವಾಗುತ್ತದೆ).                                                                               ೩೮

೧೬೩ ಪಂಚಮವು ಎದೆ, ತಲೆ ಮತ್ತು ಕಂಠಗಳಿಂದ ಉದಯಿಸುತ್ತದೆ. ಧೈವತವು, ಎಲೈ ಯಶಸ್ವಿ (ಯಾದ ನಾರದಮುನಿಯೇ), ಅಂಗಳಿನ ಪ್ರದೇಶದಿಂದ ಹುಟ್ಟುತ್ತದೆ. ನಿಷಾದವು ಇವುಗಳೆಲ್ಲದರ ಸಂಧಿಗಳಿಂದ ಹುಟ್ಟಿದ್ದೆಂದು ತಿಳಿಯಬೇಕು.                                      ೩೯

೧೬೪ ಹೀಗೆ ಮಹಾದೇವನ (ಐದು) ಮುಖಗಳಿಂದ ಹೊರಟು ಗೀತಸಾಗರದಲ್ಲಿ ಉತ್ಪನ್ನವಾಗಿ, ದೇಶೀ ಎಂಬ ಮಾರ್ಗದಲ್ಲಿ ನೆಲೆಸಿರುವ (ಈ)ಸ್ವರಗಳನ್ನು ತಿಳಿದುಕೊಳ್ಳಬೇಕು.                                                                                                  ೪೦

ಹೀಗೆ ಸ್ವರಪ್ರಕರಣ(ವು ಮುಗಿಯಿತು).

 

[v ಗ್ರಾಮಮೂರ್ಛನಾತಾನಪ್ರಕರಣಮ್]

೧೬೫ (ಅ) ನಂತರ, ಗ್ರಾಮ ಎಂಬ ಶಬ್ದವು ಏನನ್ನು (ಕುರಿತು) ಹೇಳುತ್ತದೆ? (ಆ) ಗ್ರಾಮಗಳು ಎಷ್ಟಿವೆ? (ಇ) ಗ್ರಾಮವು ಏತರಿಂದ ಹುಟ್ಟುತ್ತದೆ ? (ಈ) ಅದರ ಪ್ರಯೋಜನವೇನು?                                                                                                           1

____

೧೬೬   (ಅ) ಅತ್ರೋಚ್ಯತೇ –                                                                                                                 2

೧೬೭   ಸಮೂಹವಾಚಿನೌ ಗ್ರಾಮೌ ಸ್ವರಶ್ರುತ್ಯಾದಿಸಂಯತೌ?
ಯಥಾ ಕುಟುಂಬಿನಃ ಸರ್ವ ಏಕೀಭೂತ್ವಾ ವಸಂತಿ ಹಿ |
ಸರ್ವಲೋಕೇಷು ಸ ಗ್ರಾಮೋ ಯತ್ರ ನಿತ್ಯಂ ವ್ಯವಸ್ಥಿತಿಃ || ೧ ||

೧೬೮   ಷಡ್ಜಮಧ್ಯಮಸಂಜ್ಞೌತು ದ್ವೌ ಗ್ರಾಮೌ ವಿಶ್ರುತೌ ಕಿಲ |
ಗಾಂಧಾರಂ ನಾರದೋ ಬ್ರೂತೇ ಸತು ಮರ್ತ್ಯೈರ್ನ ಗೀಯತೇ || ೨ ||

೧೬೯   ಸಾಮವೇದಾತ್ ಸ್ವರಾಃ ಜಾತಾಃ ಸ್ವರೇಭ್ಯೋ ಗ್ರಾಮಸಂಭವಃ |
ದ್ವಾವೇತೌ ಚ ಇಮೌ ಜ್ಞೇಯೌ ಷಡ್ಜಮಧ್ಯಮಲಕ್ಷಿತೌ || ೩ ||

೧೭೦   (ಅ) ಪ್ರಯೋಜನಂ ಚ ಯಥಾ – ಸ್ವರಶ್ರುತಿಮೂರ್ಛನಾ –
ತಾನಜಾತಿರಾಗಾಣಾಂ ವ್ಯವಸ್ಥಾಪನತ್ವಂ ನಾಮ ಪ್ರಯೋಜನಮ್‌ ||                                                     3

೧೭೧   (ಅ) ನನು ಕಥಂ ಷಡ್ಜಮಧ್ಯಮಸ್ವರಾಭ್ಯಾಂ ಗ್ರಾಮವ್ಯಪದೇಶಃ? (ಆ) ಉಚ್ಯತೇ – (ಇ) ಅಸಾಧಾರಣತ್ವೇನ ತಾಭ್ಯಾಂ ಗ್ರಾಮವ್ಯಪದೇಶಃ | (ಈ) ಅಸಾಧಾರಣತ್ವಂ ಚ ದೇವಕುಲಸಮುತ್ಪನ್ನತ್ವೇನ |
(ಉ) ತಥಾ ಚಾಹ ನಾರದಃ-                                                                                                       4

೧೭೨   ‘ದೇವಕುಲಸಮುತ್ಪನ್ನಾಃ ಷಡ್ಜಗಾಂಧಾರಮಧ್ಯಮಾಃ |
ಏತೇಷಾಂ ದೇವತಾ ಜ್ಞೇಯಾ ಬ್ರಹ್ಮವಿಷ್ಣುಮಹೇಸ್ವರಾಃ’ || ೫ ||

೧೭೩   ಉಭಯೋರ್ಗ್ರಾಮಯೋರ್ಮಧ್ಯೇ ಮುಖ್ಯತ್ವಂ ಕಸ್ಯ ಗಮ್ಯತೇ |
ಷಡ್ಜಸ್ಯೈವ ಹಿ ಮುಖ್ಯತ್ವಂ ಗಮ್ಯೆತೇ ವಚನಾನ್ಮುನೇಃ || ೬ ||

೧೭೪   (ಅ) ಏತದುಕ್ತಂ ಭವತಿ –                                                                                                             5

೧೭೫   ದ್ವೌ ಗ್ರಾಮೌ ವಿಶ್ರುತೌ ಲೋಕೇ ಷಡ್ಜಮಧ್ಯಮಸಂಜ್ಞಿತೌ || ೭ ||

ಪಾಠವಿಮರ್ಶೆ : ೧೬೭ಅಆ ಈ ಉಊ, ಊ ೧೭೧ಈ ೧೭೨ಅ-ಈ ೧೭೩ಆ,ಇ ೧೭೫ಅ

—-

೧೬೬ (ಅ) ಈ ವಿಷಯದಲ್ಲಿ <ಅತ್ರ> [ಉತ್ತರವನ್ನು ಹೀಗೆ] ಹೇಳಲಾಗುವುದು –

೧೬೭ ಗುಂಪು ಎಂಬ ಅರ್ಥವನ್ನು ಹೇಳುವ ಎರಡು ಗ್ರಾಮಗಳು (ಇವೆ. ಅವು) ಸ್ವರ, ಶ್ರುತಿ ಮೊದಲಾದವುಗಳನ್ನು ಕೂಡಿಕೊಂಡಿವೆ.
ಹೇಗೆ ಎಲ್ಲ ಕುಟುಂಬಗಳವರೂ ಒಂದು (ಸಮೂಹದವರು) ಆಗಿ ವಾಸಿಸುತ್ತಾರೋ, ಎಲ್ಲಿ ನಿಯತವಾದ ವ್ಯವಸ್ಥೆಯು ಏರ್ಪಟ್ಟಿದೆಯೋ (ಅದೇ) ಪ್ರಪಂಚದಲ್ಲೆಲ್ಲ ಗ್ರಾಮ (ವೆನ್ನಿಸಿಕೊಳ್ಳುತ್ತದೆ). (ಇದೇ ರೀತಿಯಲ್ಲಿ ಸ್ವರ, ಶ್ರುತಿ ಇತ್ಯಾದಿಗಳು ಒಂದೇ ಸಮೂಹವಾಗಿ ಏರ್ಪಟ್ಟು ನಿಯತವಾದ ವ್ಯವಸ್ಥೆಗೆ ಒಳಪಟ್ಟರೆ ಅದು ಗ್ರಾಮವೆನ್ನಿಸಿಕೊಳ್ಳುತ್ತದೆ)                                                                            ೧

೧೬೮ ಷಡ್ಜ ಮತ್ತು ಮಧ್ಯಮ ಎಂಬ ಹೆಸರಿನ ಎರಡು ಗ್ರಾಮಗಳು ಪ್ರಸಿದ್ಧವಾಗಿಯೇ ಇವೆಯಪ್ಪೆ. ಗಾಂಧಾರ (ಗ್ರಾಮ)ವನ್ನು ನಾರದನು ಹೇಳುತ್ತಾನೆ. ಆದರೆ ಅದನ್ನು ಮನುಷ್ಯರು ಹಾಡುವುದಿಲ್ಲ.                                                                         ೨

೧೬೯ ಸಾಮವೇದದಿಂದ ಸ್ವರಗಳು ಹುಟ್ಟಿವೆ; ಸ್ವರಗಳಿಂದ ಗ್ರಾಮವು ಹುಟ್ಟಿದೆ. ಇವೇ ಎರಡು (ಗ್ರಾಮಗಳೆ) ಷಡ್ಜ- ಮತ್ತು ಮಧ್ಯಮ- ಎಂಬ ಹೆಸರಿನಿಂದ ಕಂಡುಬರುತ್ತಿವೆ. <ಲಕ್ಷಿತೌ>.

೧೭೦ (ಅ) ಇವುಗಳ ಪ್ರಯೋಜನವೇನೆಂದರೆ – ಸ್ವರ, ಶ್ರುತಿ, ಮೂರ್ಛನಾ, ತಾನ, ಜಾತಿ (ಮತ್ತು) ರಾಗಗಳಲ್ಲಿ ವ್ಯವಸ್ಥೆಯನ್ನು ಏರ್ಪಡಿಸುವುದು ಎಂಬುದೇ ಪ್ರಯೋಜನ.                                                                                                                       ೩

೧೭೧ (ಅ) ಆದರೆ ಷಡ್ಜಮಧ್ಯಮಸ್ವರಗಳ ನಾಯಕತ್ವವು <ಗ್ರಾಮಣೀ> (ಅವುಗಳ ಹೆಸರಿಗೆ) ಕಾರಣ (ವ್ಯಾಜ) ವಾದುದು ಹೇಗೆ? (ಆ) [ಇದಕ್ಕೆ ಉತ್ತರವನ್ನು] ಹೇಳಲಾಗುವುದು: (ಇ) ಅವುಗಳ(ಲ್ಲಿರುವ) ಅಸಾಧಾರಣತ್ವದಿಂದ ನಾಯಕತ್ವ <ಗ್ರಾಮಣೀ> ಎಂಬ (ನಾಮಕರಣ) ಕಾರಣವು (ಬಂದಿದೆ). (ಈ) ದೇವಕುಲದಲ್ಲಿ ಹುಟ್ಟಿರುವುದರಿಂದ [ಈ] ಅಸಾಧಾರಣತ್ವವು [ಬಂದಿದೆ].

(ಉ) ಈ ವಿಷಯದಲ್ಲಿ ನಾರದನು ಹೀಗೆ ಹೇಳಿದ್ದಾನೆ –                                                                              4

೧೭೨ ಷಡ್ಜ, ಗಾಂಧಾರ ಮತ್ತು ಮಧ್ಯಮಗಳು ದೇವಕುಲದಲ್ಲಿ ಹುಟ್ಟಿವೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು (ಕ್ರಮವಾಗಿ) ಇವುಗಳ ದೇವತೆಗಳೆಂದು ತಿಳಿಯಬೇಕು.                                                                                                               ೪

೧೭೩ [ಈ] ಎರಡು ಗ್ರಾಮಗಳ ನಡುವೆ ಯಾವುದು ಮುಖ್ಯ? ಮುನಿಯ ವಚನದ (ದ ಆಧಾರ) ದಿಂದಾಗಿ ಷಡ್ಜ (ಗ್ರಾಮ) ವೇ ಮುಖ್ಯವಾಗಿದೆ. ೫

೧೭೪ (ಅ) (ಹೀಗೆ) ಇದನ್ನು ಹೇಳಿದೆ –                                                                                                     5

೧೭೫ ಲೋಕದಲ್ಲಿ ಷಡ್ಜ- ಮತ್ತು ಮಧ್ಯಮ- ಎಂಬ ಹೆಸರಿನ ಎರಡು ಗ್ರಾಮಗಳು ಪ್ರಸಿದ್ಧವಾಗಿವೆ. ೬

____

೧೭೬   (ಅ) ನನು ಕಥಂ ದ್ವಾವೇವ ಗ್ರಾಮೌ? (ಆ) ಉಚ್ಯತೇ – (ಇ) ಇಹ ಹಿ ದ್ವಿಸ್ವರಪ್ರಯೋಗಮೂಲಪ್ರಯೋಗವಶಾದ್‌ದ್ವೌ ಗ್ರಾಮಾವುಪನ್ಯಸ್ತೌ |                                                                                                                                             6

೧೭೭   ಜಾತಿಭಿಃ ಶ್ರುತಿಭಿಶ್ಚೈವ ಸ್ವರಾ ಗ್ರಾಮತ್ವಮಾಗತಾಃ || ೭ ||

೧೭೮   (ಅ) ತತ್ರ ಜಾತಿಭೀಃ ಶುದ್ಧಾಭಿರ್ವಿಕೃತಾಭಿಶ್ಚ ಶ್ರುತಿಭಿಶ್ಚ | (ಆ) ತಸ್ಮಾತ್‌ಶುದ್ಧಾಸು ಜಾತಿಷು ವಿಕೃತಾಸು ಚ ಯೇ ಸ್ವರಾಃ ಸಂತಿ ತೇಷಾಂ ಸ್ವರಾಣಾಂ ಶ್ರುತಿವೈಕಲ್ಯಾತ್‌ಕಿಂಚಿದುತ್ಕರ್ಷಾ ಪಕರ್ಷಾಭ್ಯಾಂ ಸಂಕೀರ್ಣತ್ವೇನ ಚ ಸ್ವರಾ ಗ್ರಾಮತ್ವಮಾಗತಾಃ (ಇ) ತತ್ರ ಶುದ್ಧಾಭಿಃ ಷಡ್ಜೋ ವಿಕೃತಾಭಿರ್ಮಧ್ಯಮ ಇತಿ ದ್ವಾಭ್ಯಾಂ ಚ ಸಂಕೀರ್ಣಾ ಜಾತಾಃ ತಾಭ್ಯೋ ರಾಗಸಂಭವ ಇತಿ | (ಈ) ಗ್ರಾಮಾನ್ಯತ್ವಾಜ್ಜಾತಿರಾಗಾನ್ಯತ್ವಮ್‌ | 7

[ಇತಿ ಗ್ರಾಮನಿರೂಪಣಮ್‌ |]

[ಮೂರ್ಛನಾನಿರೂಪಣಮ್‌ |]

೧೭೯   (ಅ) ಇದಾನೀಮವಸರಪ್ರಾಪ್ತಾ ಮೂರ್ಛನಾಃ ಕಥ್ಯಂತೇ | (ಅ) ನನು, ಮೂರ್ಛನಾಶಬ್ದಸ್ಯವ್ಯುತ್ಪತ್ತಿಃ ಕೀದೃಶೀ? (ಇ) ಲಕ್ಷಣಂ ಚ ಕೀದೃಶಂ ತಸ್ಯ? (ಈ) ಉಚ್ಯತೇ- (ಉ) ಮೂರ್ಛನಾವ್ಯುತ್ಪತ್ತಿಃ ಮೂರ್ಛ್‌ ಮೋಹಸಮುಚ್ಛ್ರಾಯಯೋಃ |                    8

೧೮೦   ಮೂರ್ಛ್ಯತೇ ರಾಗೋ ಹಿ ಮೂರ್ಛನೇತ್ಯಭಿಸಂಜ್ಞಿತಾ |
ಆರೋಹಣಾವರೋಹಣಕ್ರಮೇಣ ಸ್ವರಸಪ್ತಕಮ್‌|
ಮೂರ್ಛನಾಶಬ್ದವಾಚ್ಯಃ ಹಿ ವಿಜ್ಞೇಯಂ ತದ್‌ವಿಚಕ್ಷಣೈಃ || ೮ ||

೧೮೧   (ಅ) ಸಾ ಚ ಮೂರ್ಛನಾ ದ್ವಿವಿಧಾ – (ಆ) ಸಪ್ತಸ್ವರಮೂರ್ಛನಾ ದ್ವಾದಶಸ್ವರಮೂರ್ಛನಾ ಚೇತಿ | (ಇ) ತತ್ರ ಸಪ್ತಸ್ವರಮೂರ್ಛನಾ ಚತುರ್ವಿಧಾ – ಪೂರ್ಣಾ, ಷಾಡವಾ, ಔಡುವಿತಾ, ಸಾಧಾರಣಾ ಚೇತಿ | (ಈ) ತತ್ರ ಸಪ್ತಭಿಃ ಸ್ವರೈರ್ಯಾ

ಪಾಠವಿಮರ್ಶೆ : ೧೭೭ ೧೭೮ಅ,ಆ, ೧೭೯ಅಉ ೧೮೧ಅ

—-

೧೭೬ (ಆ) ಆದರೆ ಗ್ರಾಮಗಳು ಎರಡೇ ಏಕೆ ? (ಆ) (ಉತ್ತರವನ್ನು) ಹೇಳಲಾಗುವುದುಃ – (ಇ) ಲೋಕದಲ್ಲಿ <ಇಹ> ಈ ಎರಡೇ ಸ್ವರಗಳನ್ನು ಮೂಲವಾಗಿ ಉಳ್ಳ (ಗಾಯನವಾದನ) ಪ್ರಯೋಗವಿರುವುದರಿಂದ ಈ (ಎರಡು) ಗ್ರಾಮಗಳು (ಮಾತ್ರ ಇವೆ) ಎಂದು ವಿವರಿಸಲಾಗಿದೆ.    6

೧೭೭ ‘ಜಾತಿಗಳಿಂದಲೂ ಶ್ರುತಿಗಳಿಂದಲೂ ಸ್ವರಗಳೂ ಗ್ರಾಮತ್ವವನ್ನು ಪಡೆದಿವೆ.’                                              ೭

೧೭೮ (ಅ) ಇಲ್ಲಿ ‘ಜಾತಿಗಳಿಂದಲೂ ಶ್ರುತಿಗಳಿಂದಲೂ’ ಎಂದರೆ ಶುದ್ಧ [ಜಾತಿ]ಗಳಿಂದಲೂ [ಮತ್ತು ವಿಕೃತ [ಜಾತಿ]ಗಳಿಂದಲೂ [ಮತ್ತು] ಶ್ರುತಿಗಳಿಂದ (ಎಂದು ಅರ್ಥಮಾಡಿಕೊಳ್ಳಬೇಕು). (ಆ) ಆದುದರಿಂದ ಶುದ್ಧ – ಮತ್ತು ವಿಕೃತ – ಜಾತಿಗಳಲ್ಲಿರುವ (ಯಾವ) ಸ್ವರಗಳಿವೆಯೋ ಅ ಸ್ವರಗಳಲ್ಲಿರುವ ಶ್ರುತಿಗಳ ದೌರ್ಬಲ್ಯದಿಂದಾಗಿ ಸ್ವಲ್ಪವಾಗಿ ಏರುವುದು – ಕುಗುವುದು ಇವುಗಳಿಂದಲೂ ಕಲಬೆರಕೆಯಾಗುವುದರಿಂದಲೂ ಸ್ವರಗಳು ಗ್ರಾಮತ್ವವನ್ನು ಹೊಂದುತ್ತವೆ. (ಇ) ಅದರ ಪ್ಯೆಕಿ ಶುದ್ಧ (ಜಾತಿ)ಗಳಿಂದ ಷಡ್ಜ [ಗ್ರಾಮ] ವೂ, ವಿಕೃತ (ಜಾತಿ) ಗಳಿಂದ ಮಧ್ಯಮ [ಗ್ರಾಮ]ವೂ ಎರಡರಿಂದಲೂ ಸಂಕೀರ್ಣ (ಜಾತಿ)ಗಳೂ ಹುಟ್ಟುತ್ತವೆ;ಅವುಗಳಿಂದ (=ಜಾತಿಗಳಿಂದ) ರಾಗಗಳು ಹುಟ್ಟುತ್ತವೆ. (ಈ) ಗ್ರಾಮವು ಬೇರೆಯಾದರೆ ಜಾತಿಯೂ ರಾಗವೂ ಬೇರೆಯಾಗುತ್ತವೆ.                                                                                                                              7

[ಹೀಗೆ ಗ್ರಾಮವನ್ನು ನಿರೂಪಿಸಿದ್ದಾಯಿತು]

[ಮೂರ್ಛನೆಯ ನಿರೂಪಣೆ]

೧೭೯ (ಅ) ಈಗ [ತಕ್ಕ] ಸಂದರ್ಭವು ಒದಗಿರಲಾಗಿ ಮೂರ್ಛನೆಗಳನ್ನು ಹೇಳಲಾಗುವುದು. (ಆ) ಹಾಗಾದರೆ ಮೂರ್ಛನಾ ಎಂಬ ಶಬ್ದದ ವ್ಯುತ್ಪತ್ತಿಯು ಎಂತಹದು? (ಇ) ಯಾವ ತೆರಣಾದ ಲಕ್ಷಣವು ಅದಕ್ಕಿದೆ? (ಈ) [ಉತ್ತರವನ್ನು ] ಹೇಳಲಾಗುವುದು;- (ಉ) ‘ಮೂರ್ಛ್‌’ ಎಂದರೆ ಮೋಹ (=ಮಂಕು, ತಬ್ಬಿಬ್ಬು) ಮತ್ತು ಸಮುಚ್ಛ್ರಾಯ (=ಏರುವಿಕೆ, ಔನ್ನತ್ಯ) ಎಂಬ (ಅರ್ಥಗಳಿರುವ ಧಾತುವಿನಿಂದ) ಮೂರ್ಛನಾ ಶಬ್ಧದ ವ್ಯುತ್ಪತ್ತಿಯಾಗಿದೆ.     8

೧೮೦ ಯಾವುದರಿಂದ ರಾಗದ (ರಾಗತ್ವವು) ಅಭಿವೃದ್ಧಿಯಾಗುತ್ತದೋ ಅದು ಮೂರ್ಛನಾ ಎಂಬ ಸಂಜ್ಞೆಯನ್ನು ಪಡೆದಿದೆ. ಆರೋಹಣ- ಅವರೋಹಣ ಕ್ರಮದಿಂದ (=ಚಲನೆಯಿಂದ) ಸಪ್ತ ಸ್ವರಗಳೂ (-ಳ ಘಟಕವು) ಮೂರ್ಛನಾ ಎಂಬ ಶಬ್ದದಿಂದ ಕರೆಯಲ್ಪಡುತ್ತದೆ ಎಂದು ಅದರ (=ಮೂರ್ಛನಾಜ್ಞಾನದ) ವಿಚಕ್ಷಣರು ತಿಳಿದುಕೊಳ್ಳಬೇಕು.                                                                            ೮

೧೮೧ (ಅ) ಅಂತಹ ಮೂರ್ಛನೆಯು ಎರಡು ವಿಧವಾಗಿದೆ : (ಆ) ಏಳು ಸ್ವರಗಳ ಮೂರ್ಛನಾ ಮತ್ತು ಹನ್ನೆರಡು ಸ್ವರಗಳ ಮೂರ್ಛನಾ (ಎಂದು ಎರಡು ವಿಧ). (ಇ) ಇದರಲ್ಲಿ ಏಳು ಸ್ವರಗಳ ಮೂರ್ಛನೆಯು ನಾಲ್ಕು ವಿಧ- ಪೂರ್ಣಾ, ಷಾಡವ, ಔಡುವಿತ ಮತ್ತು ಸಾಧಾರಣಾ ಎಂದು. (ಈ)

____

ಗೀಯತೇ ಸಾ ಪೂರ್ಣಾ | (ಉ) ಷಡ್ಭಿಃ ಸ್ವರೈರ್ಯಾ ಗೀಯತೇ ಸಾ ಷಾಡವಾ | (ಊ) ಪಂಚಭಿಃ ಸ್ವರೈರ್ಯಾ ಗೀಯತೇ ಸಾ ಔಡುವಿತಾ | (ಋ) ಕಾಕಲ್ಯಂತರಸ್ವರೈರ್ಯಾ ಗೀಯತೇ ಸಾ ಸಾಧಾರಣಾ |                                                                                 9

೧೮೨ (ಅ) ಇದಾನೀಂ ಮೂರ್ಛನಾಮಂಡಲಮುಚ್ಯತೇ | (ಆ) ತತ್ರ ಪರಿಪಾಟ್ಯಾಹಿತತ್ವೇನ ಪ್ರವೃತ್ತತ್ವಾತ್‌ ಸಪ್ತಸ್ವರಾಣಾಂ ಮೂರ್ಛನಾನಾಂ ಪ್ರತಿಗ್ರಾಮಮೇಕೋನಪಂಚಾಶತ್‌ ಸ್ವರಾಃ ಕೋಷ್ಠಾಶ್ಚ ಭವಂತಿ |
(ಇ) ತದ್ಯಥಾ –                                                                                                                                10

೧೮೩ ಏಕೋನಾಃ ಖಲು ಪಂಚಾಶತ್‌ಕರ್ತವ್ಯಾಃ ಸ್ವರಸಂಯುತಾಃ |
ತಿರ್ಯಗೂರ್ಧ್ವಂ ಚ ರೇಖಾಭಿರಷ್ಟಾಭಿಶ್ಚೈವ ಕೋಷ್ಠಕಾಃ || ೯ ||

೧೮೪ (ಅ) ಸ-ನಿ-ಧ-ಪ-ಮ-ಗ-ರೀತ್ಯಾದ್ಯಾಃ ಸಪ್ತ ಷಡ್ಜಗ್ರಾಮೇ |
(ಆ) ಮ-ಗ-ರಿ-ಸ-ನಿ-ಧ-ಪಾದ್ಯಾಃ ಸಪ್ತ ಮಧ್ಯಮಗ್ರಾಮೇ |
(ಇ) ತಿರ್ಯಗೂರ್ಧ್ವಾ ಅಪಿ ಸ್ವರಾಃ ಕಾರ್ಯಾಃ | (ಈ) ತದ್ಯಥಾ-
(ಉ) ನಿ-ಧ-ಪ-ಮ-ಗ-ರಿ-ಸ ಇತಿ ಷಡ್ಜಗ್ರಾಮೇ |
(ಊ) ಗ-ರಿ-ಸ-ನಿ-ಧ-ಮ-ಪ-ಮ ಇತಿ ಮಧ್ಯಮಗ್ರಾಮೇ |
(ಋ) ಏವಂ ತಾವದುಭಯಗ್ರಾಮಿಕ್ಯತ್ಚತುರ್ದಶ ಮೂರ್ಛನಾಃ ಸಂಪೂರ್ಣಾಃ | 11

೧೮೫   ಸ – ರಿ – ಗ – ಮ – ಪ – ಧ – ನಿ
ನಿ – ಸ – ರಿ – ಗ – ಮ – ಪ – ಧ
ಧ – ನಿ – ಸ – ರಿ – ಗ – ಮ – ಪ
ಪ – ಧ – ನಿ – ಸ – ರಿ – ಗ – ಮ
ಮ – ಪ – ಧ – ನಿ – ಸ – ರಿ – ಗ
ಗ – ಮ – ಪ – ಧ – ನಿ – ಸ – ರಿ
ರಿ – ಗ – ಮ – ಪ – ಧ – ನಿ – ಸ

ಕೋಷ್ಠಮ್‌ ೧೦ : ಇತಿ ಷಡ್ಜಗ್ರಾಮೇ (ಪರಿಪಾಟೀ)

ಪಾಠವಿಮರ್ಶೆ : ೧೮೧ಋ ೧೮೩ ೧೮೪ಇ

—-

ಇವುಗಳ ಪೈಕಿ ಯಾವುದನ್ನು ಏಳೂ ಸ್ವರಗಳಿಂದ ಹಾಡಲಾಗುತ್ತದೋ ಅದು ಪೂರ್ಣಾ. (ಉ) ಆರು ಸ್ವರಗಳಿಂದ ಯಾವುದನ್ನು ಹಾಡಲಾಗುತ್ತದೋ ಅದು ಷಾಡವ. (ಊ) ಐದು ಸ್ವರಗಳೀಂದ ಯಾವುದನ್ನು ಹಾಡಲಾಗುವುದೋ ಅದು ಔಡುವಿತಾ. (ಋ) ಕಾಕಲೀ (ನಿಷಾದ ಮತ್ತು) ಅಂತರ (ಗಾಂಧಾರ) ಸ್ವರಗಳಿಂದ ಯಾವುದನ್ನು ಹಾಡುತ್ತಾರೋ ಅದು ಸಾಧಾರಣಾ.                                                    9

೧೮೨ (ಅ) ಈಗ ಮೂರ್ಛನಾಮಂಡಲವನ್ನು ವಿವರಿಸಲಾಗುವುದು. (ಆ) ಅದರಲ್ಲಿ (=ಮೂರ್ಛನಾಮಂಡಲದಲ್ಲಿ) (ಒಂದಾದಮೇಲೊಂದರಂತೆ) ಅನುಕ್ರಮವಾಗಿ <ಪರಿಪಾಟೀ> ಇಡುವುದರಿಂದ <ಆಹಿತ> ಏರ್ಪಡುವ ಏಳು ಸ್ವರಗಳ ಮೂರ್ಛನೆಗಳಲ್ಲಿ ಒಂದೊಂದು ಗ್ರಾಮದಲ್ಲಿಯೂ ನಲವತ್ತೊಂಬತ್ತು ಸ್ವರಗಳು ಅಷ್ಟೇ ಚೌಕ <ಕೋಷ್ಠ>ಗಳೂ ಇರುತ್ತವೆ. ಅದು ಹೇಗಿರುತ್ತದೆಂದರೆ-                      10

೧೮೩ ಅಡ್ಡವಾಗಿ ಮತ್ತು ಮೇಲುಕೆಳಗೆ ಎಳೆದ ಎಂಟೆಂಟು ಗೆರೆಗಳಿಂದ ಸ್ವರಗಳನ್ನುಳ್ಳ ನಲವತ್ತೊಂಬತ್ತು ಚೌಕಗಳನ್ನು ಉಂಟು ಮಾಡಬೇಕು.   ೯

೧೮೪ (ಅ) ಅದರಲ್ಲಿ ಸ – ನಿ – ಧ – ಪ – ಮ – ಗ – ರಿ ಎಂದು ಮೊದಲಾಗುವ ಏಳು (ಕೋಷ್ಠಗಳು) ಷಡ್ಜಗ್ರಾಮದಲ್ಲಿರುತ್ತವೆ. (ಆ) ಮ – ಗ – ರಿ – ಸ – ನಿ – ಧ – ಪ ಎಂದು ಮೊದಲಾಗುವ ಏಳೇಳು (ಕೋಷ್ಠಗಳು) ಮಧ್ಯಮ ಗ್ರಾಮದಲ್ಲಿರುತ್ತವೆ. (ಇ) ಸ್ವರಗಳನ್ನು ಅಡ್ಡಡ್ಡವಾಗಿಯೂ ಮೇಲುಕೆಳಗೂ ಬರೆಯಬೇಕು. (ಈ) ಅದು ಹೇಗೆಂದರೆ (ಉ) ನಿ – ಧ – ಪ – ಮ – ಗ – ರಿ – ಸ ಎಂದು ಷಡ್ಜಗ್ರಾಮದಲ್ಲಿ (ಬರೆಯಬೇಕು).

(ಊ) ಗ – ರಿ – ಸ – ನಿ – ಧ – ಪ – ಮ (ಎಂದು ಮಧ್ಯಮಗ್ರಾಮದಲ್ಲಿ ಬರೆಯಬೇಕು. (ಋ) ಈ ರೀತಿಯಲ್ಲಿ ಎರಡು ಗ್ರಾಮಗಳ(ಲ್ಲಿ) ಸಂಪೂರ್ಣಮೂರ್ಛನೆಗಳು ಹದಿನಾಲ್ಕು ಆಗುತ್ತವೆ.                                                                                   11

೧೮೫   ಸ – ರಿ – ಗ – ಮ – ಪ – ಧ – ನಿ
ನಿ – ಸ – ರಿ – ಗ – ಮ – ಪ – ಧ
ಧ – ನಿ – ಸ – ರಿ – ಗ – ಮ – ಪ
ಪ – ಧ – ನಿ – ಸ – ರಿ – ಗ – ಮ
ಮ – ಪ – ಧ – ನಿ – ಸ – ರಿ – ಗ
ಗ – ಮ – ಪ – ಧ – ನಿ – ಸ – ರಿ
ರಿ – ಗ – ಮ – ಪ – ಧ – ನಿ – ಸ

ಕೋಷ್ಠಕ ೧೦ : ಇದು ಷಡ್ಜಗ್ರಾಮದಲ್ಲಿ (ಪರಿಪಾಟಿ)

____

೧೮೬   ಮ – ಪ – ಧ – ನಿ – ಸ – ರಿ – ಗ
ಗ – ಮ – ಪ – ಧ – ನಿ – ಸ – ರಿ
ರಿ – ಗ – ಮ – ಪ – ಧ – ನಿ – ಸ
ಸ – ರಿ – ಗ – ಮ – ಪ – ಧ – ನಿ
ನಿ – ಸ – ರಿ – ಗ – ಮ – ಪ – ಧ
ಧ – ನಿ – ಸ – ರಿ – ಗ – ಮ – ಪ
ಪ – ಧ – ನಿ – ಸ – ರಿ – ಗ – ಮ

ಕೋಷ್ಠಮ್ ೧೧ – ಇತಿ ಮಧ್ಯಮಗ್ರಾಮೇ (ಪರಿಪಾಟೀ)

ಮೂರ್ಛನಾಮಂಡಲಮ್‌

೧೮೭

ನಿ ರಿ   ರಿ ನಿ
ರಿ ನಿ   ರಿ ನಿ
ರಿ ನಿ   ನಿ ರಿ
ರಿ ನಿ   ನಿ ರಿ
ರಿ ನಿ   ರಿ ನಿ
ರಿ ನಿ   ರಿ ನಿ
ನಿ ರಿ   ರಿ ನಿ

ಕೋಷ್ಠಕಮ್‌೧೨ : ಇತಿ ಪಡ್ಜಗ್ರಾಮೆ ಮೂರ್ಛನಾಮಂಡಲಮ್‌
ಕೋಷ್ಠಕಮ್‌೧೩ : ಇತಿ ಮಧ್ಯಮಗ್ರಾಮೇ ಮೂರ್ಛನಾಮಂಡಲಮ್‌

೧೮೮   (ಅ) ಏವಂ ತಾವದುಭಯಗ್ರಮಿಕ್ಯಶ್ಚತುರ್ದಶ ಮೂರ್ಛನಾಃ ಸಂಪೂರ್ಣಃ ಕಥಿತಾಃ |
(ಆ) ಇದಾನೀಂ ತಾಸಾಂ ನಾಮಾನಿ ಕಥ್ಯಂತೇ- 12

೧೮೯   ಷಡ್ಜೇ ಚೋತ್ತರಮಂದ್ರಾ ಸ್ಯಾನ್ನಿಷಾದೇ ರಜನೀ ಸ್ಮೃತಾ |
ಧೈವತೇ ಚೋತ್ತರಾ ಜ್ಞೇಯಾ ಶುದ್ಧಷಡ್ಜಾ ಚ ಪಂಚಮೇ || ೧೦ ||

೧೯೦   ಮಧ್ಯಮೇ ಮತ್ಸರೀ ಜ್ಞೇಯಾ ಗಾಂಧಾರೇ ಚಾಶ್ವಕ್ರಾಂತಿಕಾ |
ಋಷಭೇಣ ಚ ವಿಜ್ಞೇಯಾ ಸಪ್ತಮೀ ಚಾಭಿರುದ್ಗತಾ || ೧೧ ||

ಪಾಠವಿಮರ್ಶೆ : ೧೮೯ಅ

—-

೧೮೬   ಮ – ಪ – ಧ – ನಿ – ಸ – ರಿ – ಗ
ಗ – ಮ – ಪ – ಧ – ನಿ – ಸ – ರಿ
ರಿ – ಗ – ಮ – ಪ – ಧ – ನಿ – ಸ
ಸ – ರಿ – ಗ – ಮ – ಪ – ಧ – ನಿ
ನಿ – ಸ – ರಿ – ಗ – ಮ – ಪ – ಧ
ಧ – ನಿ – ಸ – ರಿ – ಗ – ಮ – ಪ
ಪ – ಧ – ನಿ – ಸ – ರಿ – ಗ – ಮ

ಕೋಷ್ಠಕ ೧೧ – ಇದು ಮಧ್ಯಮಗ್ರಾಮದಲ್ಲಿ (ಪರಿಪಾಟಿ)

ಮೂರ್ಛನಾಮಂಡಲ

೧೮೭

ನಿ ರಿ   ರಿ ನಿ
ರಿ ನಿ   ರಿ ನಿ
ರಿ ನಿ   ನಿ ರಿ
ರಿ ನಿ   ನಿ ರಿ
ರಿ ನಿ   ರಿ ನಿ
ರಿ ನಿ   ರಿ ನಿ
ನಿ ರಿ   ರಿ ನಿ

ಕೋಷ್ಠಕ ೧೨ : ಷಡ್ಜಗ್ರಾಮದಲ್ಲಿ ಮೂರ್ಛನಾ ಮಂಡಲ
ಕೋಷ್ಠಕ ೧೩ : ಮಧ್ಯಮಗ್ರಾಮದಲ್ಲಿ ಮೂರ್ಛನಾ ಮಂಡಲ

೧೮೮ (ಅ) ಹೀಗೆ ಎರಡೂ ಗ್ರಾಮಗಳ (ಒಟ್ಟು) ಹದಿನಾಲ್ಕು ಸಂಪೂರ್ಣ ಮೂರ್ಛನೆಗಳನ್ನು ಹೇಳಿದ್ದಾಗಿದೆ. (ಆ) ಈಗ ಅವುಗಳ ಹೆಸರುಗಳನ್ನು ಹೇಳಲಾಗುವುದು.                                                                                                                           12

೧೮೯ ಷಡ್ಜದಲ್ಲಿ ಉತ್ತರಮಂದ್ರಾ (ಮೂರ್ಛನೆಯು) ಆಗುತ್ತದೆ. ನಿಷಾದದಲ್ಲಿ ರಜನೀ ಎಂದು ಸ್ಮೃತವಾಗಿದೆ. ಧೈವತದಲ್ಲಿ ಉತ್ತರಾ ಎಂದು ತಿಳಿಯಬೇಕು ಮತ್ತು ಪಂಚಮದಲ್ಲಿ ಶುದ್ಧಪಡ್ಜಾ (ಮೂರ್ಛನೆಯಾಗುತ್ತದೆ).                                                ೧೦

೧೯೦ ಮಧ್ಯಮದಲ್ಲಿ ಮತ್ಸರೀ (ಮೂರ್ಛನೆ ಎಂದು) ತಿಳಿಯಬೇಕು. ಗಾಂಧಾರದಲ್ಲಿ ಅಶ್ವಕ್ರಾಂತಾ (ಆಗುತ್ತದೆ). ಋಷಭದಿಂದ ಏಳನೆಯದಾ (-ಯ ಮೂರ್ಛನೆಯಾ) ಗುತ್ತದೆಂದು ತಿಳಿಯಬೇಕು.                                                                                           ೧೦

____

೧೯೧   ಷಡ್ಜಗ್ರಾಮಾಸ್ರೀತಾಸ್ವ್ತೇವಂ ವಿಜ್ಞೇಯಾಃ ಸಪ್ತ ಮೂರ್ಛನಾಃ |
ಅತಃ ಪರಂ ಪ್ರವಕ್ಷ್ಯಾಮಿ ಮರ್ಧಯಮಗ್ರಾಮಮೂರ್ಛನಾಃ || ೧೨ ||

೧೯೨   ಮಧ್ಯಮೇನ ಚ ಸೌವೀರೀ ಗಾಂಧಾರೇ ಹರಿಣಾಶ್ವಿಕಾ |
ಸ್ಯಾತ್‌ಕಲೋಪನತಾ ಚೈವ ಋಷಭೇಣೈವ ಮೂರ್ಛನಾ || ೧೩ ||

೧೯೩   ಶುದ್ಧಮಧ್ಯಾ (ತು) ಷಡ್ಜೇ ಸ್ಯಾನ್ನಿಷಾದೇ ಚೈವ ಮಾರ್ಗಿಕಾ |
ಪೌರವೀ ಧೈವತೇ ಜ್ಞೇಯಾ ಹೃಷ್ಯಕಾ ಪಂಚಮೇ ತಥಾ || ೧೪ ||

೧೯೪   ಇತಿ ತಾವನ್ಮಯಾ ಪ್ರೋಕ್ತಾ ಮಧ್ಯಮಗ್ರಾಮಮೂರ್ಛನಾಃ |
ಇದಾನೀಂ ಸಂಪ್ರವಕ್ಷ್ಯಾಮಿ ಷಾಡವೌಡುವಮೂರ್ಛನಾಃ || ೧೫ ||

೧೯೫   ಷಟ್‌ಸ್ವರಾ ಷಾಡವಾ ಜ್ಞೇಯಾ ಔಡುವಾ ಪಂಚಭಿಃ ಸ್ವರೈಃ |
ಷಾಡವೌಡುವಿತಾನಾಂ ಚ ವ್ಯುತ್ಪತ್ತಿಶ್ಚ ನಿಗದ್ಯತೇ || ೧೬ ||

೧೯೬ (ಅ) ಷಟ್‌ಸ್ವರಾ ಅವಂತಿ ರಕ್ಷಂತಿ ಯೇ ತೇ ಷಾಡವಸ್ವರಾಃ | (ಆ) ತೇಷಾಂ ಪ್ರಯೋಗಃ ಷಾಡವಃ | (ಇ) ತಾರಕಾದೀತಚ್ ಪ್ರತ್ಯಯಃ |        13

೧೯೭ (ಅ) ಉಡವೋ ನಕ್ಷತ್ರಾಣಿ ಗಚ್ಛಂತಿ ಯಸ್ಮಿನ್ನಾಕಾಶೇ ತದಾಕಾಶಮೌಡುವಮ್‌ | (ಆ) ತೇನ ಪಂಚಸಂಖ್ಯಾ ಲಕ್ಷ್ಯತೇ, ಪಂಚಮಂ ಹಿ ಮಹಾಭೂತಂ, ತತ್‌ಸಂಖ್ಯಾ ಚ ವಿಧ್ಯತೇ ಯಸ್ಯ ತದೌಡುವಿತಮ್‌ |                                                              14

೧೯೮   ಷಾಡವಂ ಪಟ್‌ಸ್ವರಂ ಜ್ಞೇಯಂ ಲಕ್ಷಣಂ ಸಪ್ತಧಾ ಮತಮ್‌ |
ಏಕೋನಪಂಚಾಶತ್‌ಸಂಖ್ಯಂ ತಜ್‌ಜ್ಞೇಯಂ ಗೀತವೇದಿಭಿಃ || ೧೭ ||

೧೯೯   ಪಂಚಸ್ವರಮೌಡುವಿತಾ ಪಂಚಧಾ ಲಕ್ಷಣಂ ಸ್ಮೃತಮ್‌ |
ಪಂಚತ್ರಿಂಶಚ್ಚ ಸಂಖ್ಯಂ ಹಿ ಆಚಾರ್ಯೈರ್ಯದುದಾಹೃತಮ್‌ || ೧೮ ||

೨೦೦   (ಅ) ಷಡ್ಜರ್ಷಭಪಂಚಮನಿಷಾದೈಃ ಷಡ್ಜಗ್ರಾಮಿಕಾಃ ಷಾಡವಾಃ |
(ಆ) ಪಡ್ಜರ್ಷಭಗಾಂಧಾರೈರ್ಹೀನಾ ಮಧ್ಯಮಗ್ರಾಮೇ ಷಾಡವಾಃ |                                                     15

ಪಾಠವಿಮರ್ಶೆ : ೧೯೨ಆ ೧೯೬ಇ

—-

೧೯೧ ಹೀಗೆ [ಈ] ಏಳು ಮೂರ್ಛನೆಗಳು ಷಡ್ಜಗ್ರಾಮದಲ್ಲಿ ನೆಲೆಸಿವೆಯೆಂದು ತಿಳಿದುಕೊಳ್ಳಬೇಕು. ಇನ್ನು ಮುಂದೆ ಮಧ್ಯಮಗ್ರಾಮದ ಮೂರ್ಛನೆಗಳನ್ನು ಹೇಳುತ್ತೇನೆ.                                                                                                          ೧೨

೧೯೨ ಮಧ್ಯಮದಿಂದ ಸೌವೀರೀ (ಮೂರ್ಛನೆಯು ಏರ್ಪಡುತ್ತದೆ); ಗಾಂಧಾರದಲ್ಲಿ ಹರಿಣಾಶ್ವಾ (ಮೌರ್ಛನೆಯಾಗುತ್ತದೆ); ಋಷಭದಿಂದ ಅಂತೆಯೇ ಕಲೋಪನತಾ ಮೂರ್ಛನೆಯಾಗುತ್ತದೆ.                                                                                                  ೧೩

೧೯೩ ಷಡ್ಜದಲ್ಲಿ ಶುದ್ಧಮಧ್ಯಾ ಇದೆ; ಇದೇ ರೀತಿಯಲ್ಲಿ ನಿಷಾದದಲ್ಲಿ ಮಾರ್ಗೀ (ಮೂರ್ಛನೆಯಿದೆ). ಧೈವತದಲ್ಲಿ ಪೌರವೀ (ಮೂರ್ಛನೆ) ಎಂದು ತಿಳಿಯಬೇಕು. ಹಾಗೆಯೇ ಪಂಚಮದಲ್ಲಿ ಹೃಷ್ಯಕಾ (ಮೂರ್ಛನೆಯಾಗುತ್ತದೆ).                                                ೧೪

೧೯೪ ಇಷ್ಟರವರೆಗೆ ಮಧ್ಯಮಗ್ರಾಮದ ಮೂರ್ಛನೆಗಳನ್ನು ನಾನು ಹೇಳಿದೆ. ಈಗ ಷಾಡವ (ಮತ್ತು) ಔಡುವ ಮೂರ್ಛನೆಗಳನ್ನು ನಿರೂಪಿಸುತ್ತೇನೆ.           ೧೫

೧೯೫ ಆರು ಸ್ವರಗಳು (ಉಂಟುಮಾಡುವ ಪ್ರಯೋಗವನ್ನು) ಷಾಡವ (ಮೂರ್ಛನೆ) ಎಂದು ತಿಳಿಯಬೇಕು. ಔಡುವ (ಮೂರ್ಛನೆಯು) ಐದು ಸ್ವರಗಳಿಂದ (ಆಗುತ್ತದೆ). ಷಾಡವ, ಔಡವಿತ (-ಡುವ)ಗಳ (ಹೆಸರುಗಳ) ವ್ಯುತ್ಪತ್ತಿಯನ್ನು (ಈಗ) ಹೇಳಲಾಗುವುದು. ೧೬

೧೯೬ (ಅ) ಆರು (=ಷಟ್‌) ಸ್ವರಗಳು ಯಾವುದನ್ನು (ಪ್ರಯೋಗದಲ್ಲಿ) ರಕ್ಷಿಸುತ್ತವೆಯೋ (ಅವ), ಅವು ಷಾಡವ ಸ್ವರಗಳು. (ಅ) ಅವುಗಳ ಪ್ರಯೋಗವು ಷಾಡವ (ವೆನ್ನಿಸಿಕೊಳ್ಳುತ್ತದೆ). (ಇ) ತಾರಕಾದಿ ವರ್ಗದ [ಷಾಡವ] ಶಬ್ದವು ‘ಇತಚ್’ ಪ್ರತ್ಯಯದೊಡನೆ ಸೇರಿ (ಷಾಡವಿತ ಎಂಬ ರೂಪವನ್ನು ಪಡೆಯುತ್ತ)ದೆ.                                                                                                              13

೧೯೭ (ಅ) ಉಡುಗಳು, ಎಂದರೆ ನಕ್ಷತ್ರಗಳು ಆಕಾಶದಲ್ಲಿ ಚಲಿಸುವುದರಿಂದ ಆಕಾಶವು ಔಡುವ. (ಆ) ಅದರಿಂದ ಐದು ಎಂಬ ಸಂಖ್ಯೆಯನ್ನು ಸೂಚಿಸಲಾಗುತ್ತದೆ.; (ಆಕಾಶವು) (ಪೃಥ್ವೀ ಮೊದಲಾದವುಗಳಲ್ಲಿ) ಐದನೆಯ ಮಹಾಭೂತ; ಅದರಲ್ಲಿರುವ (ಐದು ಎಂಬ) ಸಂಖ್ಯೆಯು ಎಲ್ಲಿ ಕಂಡುಬರುತ್ತದೋ ಅದು ಔಡುವಿತ.                                                                                                    14

೧೯೮ ಅರು ಸ್ವರಗಳಿರುವುದು ಷಾಡವ ; ಅದರ ಲಕ್ಷಣವು ಏಳು ಬಗೆಯಾಗಿದೆ. ಹಾಡನ್ನು ಬಲ್ಲವರು ಅದರ ಸಂಖ್ಯೆಯನ್ನು ನಲವತ್ತೊಂಬತ್ತು ಎಂದು ತಿಳಿಯಬೇಕು.                                                                                                                        ೧೭

೧೯೯ ಐದು ಸ್ವರಗಳು ಇರುವುದು ಔಡುವಿತ; (ಅದರ) ಲಕ್ಷಣವು ಐದು ಬಗೆಯೆಂದು ತಿಳಿಯಬೇಕು. (ಅದರ) ಸಂಖ್ಯೆಯನ್ನು ಮೂವತ್ತೈದು ಎಂದು ಆಚಾರ್ಯರುಗಳು ನಿರ್ಣಯಿಸಿದ್ದಾರೆ.                                                                                                ೧೮

೨೦೦ (ಅ) ಷಡ್ಜಗ್ರಾಮದ ಷಾಡವಗಳು ಷಡ್ಜ, ಋಷಭ, ಪಂಚಮ (ಮತ್ತು ನಿಷಾದಗಳಿಂದ (-ಗಳ ಲೋಪದಿಂದ ಆಗುತ್ತವೆ). (ಆ) ಮಧ್ಯಮಗ್ರಾಮದಲ್ಲಿ, ಷಾಡವಗಳು ಷಡ್ಜ, ರಿಷಭ ಮತ್ತು ಗಾಂಧಾರಗಳು ಇಲ್ಲದಿರುವುದರಿಂದ (ಆಗುತ್ತವೆ).        15

____

೨೦೧ (ಅ) ಸಂವಾದಿಲೋಪಾದೌಡುವಿತತ್ವಮಿತಿ ವಚನಾತ್‌ ಸಂವಾದಿಸ್ವರಾಭ್ಯಾಮೌಡುವಿತತ್ವಂ ಪ್ರಾಪ್ತಮಿತಿ ಪ್ರಾಯಿಕಮ್‌| (ಆ) ಕದಾಚಿದನುವಾದಿಸ್ವರಾಭ್ಯಾಮೌಡುವಿತತ್ವಂ ಭವತ್ಯೇವ | (ಇ) ಯಥಾ ಪಂಚಮರ್ಷಭಯೋಃ ಷಡ್ಜಗ್ರಾಮೇ ಮಧ್ಯಮಗ್ರಾಮೇ ಧೈವತರ್ಷಭಯೋರಿತಿ |                                                                                                                    16

೨೦೨ (ಅ) ಪಂಚಮಷಡ್ಜವಿಹೀನಾ ದ್ವಿಶ್ರುತಿಕಾಭ್ಯಾಂ ತಥಾ ವಿಹೀನಾಶ್ಚ |
ಪಂಚಮರ್ಷಭವಿಹೀನಾಶ್ಚೌಡುವಿತಾ ಭವಂತಿ ಷಡ್ಜಗ್ರಾಮೇ                                                              17

೨೦೩ (ಅ) ಧೈವತರ್ಷಭವಿಹೀನಾ ದ್ವಿಶ್ರುತಿಕಾಭ್ಯಾಂ ವಿಹೀನಾ(ಸ್‌) ತಾ ಜ್ಞೇಯಾಃ |
ಪಂಚಸ್ವರಕಾಸ್ತಾನಾ ಭವಂತಿ ಖಲು ಮಧ್ಯಮಗ್ರಾಮೇ                                                                     18

೨೦೪ (ಅ) ಇದಾನೀಮೇತದೇವ ಪ್ರಸ್ತಾರೇಣ ದರ್ಶಯತಿ |
(ಆ) ತದ್‌ ಯಥಾ –                                                                                                                 19

ಷಡ್ಜಗ್ರಾಮೇ –

೨೦೫

            x ರಿ ನಿ
          ನಿ x ರಿ  
        ನಿ x ರಿ    
      ನಿ x ರಿ      
    ನಿ x ರಿ        
  ನಿ x ರಿ          
ರಿ ನಿ x     ಪಡ್ಜಹೀನಾಃ ||

ಕೋಷ್ಠಕಮ್‌೧೪ : [ಪಡ್ಜಗ್ರಾಮೇ ಷಡ್ಜಹೀನಷಾಡವಾಃ]

ಪಾಠವಿಮರ್ಶೆ : ೨೦೧ಆ ೨೦೨ಆ, ಆ, ಇ ೨೦೨-೨೦೩ ೨೦೩ಆ,ಇ

—-

೨೦೧ (ಅ) ಔಡುವಿತದ ದೆಸೆಯು ಸಂವಾದಿ(ಸ್ವರ)ಗಳ ಲೋಪದಿಂದ ಲಭಿಸುತ್ತದೆ ಎಂಬ (ಭರತಮುನಿಯ) ಮಾತಿನ ಪ್ರಕಾರ, ಸಂವಾದಿಸ್ವರಗಳಿಂದ(-ಗಳನ್ನು ಬಿಡುವುದರಿಂದ) ಔಡುವಿನ ಸ್ಥಿತಿಯು (ಮೂರ್ಛನೆಗಳಲ್ಲಿ) ಬಹುಮಟ್ಟಿಗೆ ಉಂಟಾಗುತ್ತದೆ. (ಆ) ಕೆಲವೊಮ್ಮೆ ಔಡುವಿತವು ಅನುವಾದಿಸ್ವರಗಳ ಜೋಡಿಯಿಂದ(-ಡಿಯ ಲೋಪದಿಂದ) ಆಗುವುದೂ ಇದೆ. (ಇ) ಹೇಗೆಂದರೆ ಷಡ್ಜಗ್ರಾಮದಲ್ಲಿ ಪಂಚಮಋಷಭಗಳಲ್ಲಿ ಮತ್ತು ಮಧ್ಯಮಗ್ರಾಮದಲ್ಲಿ ಧೈವತಋಷಭಗಳಲ್ಲಿ(-ಗಳ ಲೋಪದಿಂದ ಔಡುವಿತಗಳಾಗುತ್ತವೆ).                                16

೨೦೨ (ಅ)ಪಡ್ಜಗ್ರಾಮದಲ್ಲಿ (ಮೂರ್ಛನೆಗಳು) ಪಂಚಮ-ಷಡ್ಜಗಳು ಹೀನವಾಗಿ, ಹಾಗೆಯೇ ಎರಡು ಶ್ರುತಿಗಳನ್ನುಳ್ಳವು (ಸ್ವರಗಳು, ಎಂದರೆ ಗಾಂಧಾರನಿಷಾದ)ಗಳು ಇಲ್ಲದೆ ಮತ್ತು ಪಂಚಮಋಷಭಗಳು ಇಲ್ಲದೆ ಔಡುವಿತಗಳಾಗುತ್ತವೆ. 17

೨೦೩ ಮಧ್ಯಮಗ್ರಾಮದಲ್ಲಿ (ಮೂರ್ಛನೆಗಳು) ಧ್ಯೆವತಋಷಭಗಳು ಲೋಪವಾಗಿ, ಎರಡು ಶ್ರುತಿಗಳನ್ನುಳ್ಳವು (-ಸ್ವರಗಳು, ಎಂದರೆ ಗಾಂಧಾರನಿಷಾದ)ಗಳು ಹೀನವಾಗಿ, ಐದು ಸ್ವರಗಳನ್ನುಳ್ಳ ತಾನಗಳಾಗಿ (ಪ್ರಯುಕ್ತವಾಗುತ್ತವೆ). 18

೨೦೪ (ಅ) ಈಗ ಇದನ್ನೆ (ಗ್ರಂಥಕಾರನು) ಪ್ರಸ್ತಾರದಿಂದ ತೋರಿಸುತ್ತಾನೆ. (ಆ) ಅದು ಹೇಗಿದೆಯೆಂದರೆ –                 19

ಷಡ್ಜಗ್ರಾಮದಲ್ಲಿ ಷಡ್ಜವಿಲ್ಲದ (ಷಾಡವಗಳು) ;

೨೦೫

            x ರಿ ನಿ
          ನಿ x ರಿ  
        ನಿ x ರಿ    
      ನಿ x ರಿ      
    ನಿ x ರಿ        
  ನಿ x ರಿ          
ರಿ ನಿ x     [ಸ-ಹೀನಗಳು]

ಕೋಷ್ಠ ೧೪ : [ಷಡ್ಜಗ್ರಾಮದಲ್ಲಿ ಷಡ್ಜಲೋಪವಾಗಿರುವ ಷಾಡವಗಳು]

____

೨೦೬

            x ನಿ  
          ನಿ x    
        ನಿ x      
              x        
              x          
              x            
x ನಿ       ಋಷಭಹೀನಾಃ |

ಕೋಷ್ಠಕಮ್‌೧೫ : [ಷಡ್ಜಗ್ರಾಮೇ ಋಷಭಹೀನಾಃ ಷಾಡವಾಃ]

೨೦೭

            ರಿ x ನಿ
          ನಿ ರಿ x  
        ನಿ ರಿ x    
      x ನಿ ರಿ      
    x ನಿ ರಿ        
  x ನಿ ರಿ          
ರಿ x ನಿ   ಪಂಚಮಹೀನಾಃ |

ಕೋಷ್ಠಕಮ್‌೧೬ : [ಪಡ್ಜಗ್ರಾಮೇ ಪಂಚಮಹೀನಾಃ ಷಾಡವಾಃ]

೨೦೮

            ರಿ x
          x ರಿ  
        x ರಿ    
      x ರಿ      
    x ರಿ        
  x ರಿ          
ರಿ x   ನಿಷಾದಹೀನಾಃ |
(ಇತಿಷಾಡವಾಃ)

ಕೋಷ್ಠಕಮ್‌ ೧೭ : [ಪಡ್ಜಗ್ರಾಮೇ ನಿಷಾದಹೀನಾಃ ಷಾಡವಾಃ]

ಪಾಠವಿಮರ್ಶೆ :

—-

೨೦೬

            x ನಿ  
          ನಿ x    
        ನಿ x      
              x        
              x          
              x            
x ನಿ       ರಿ-ಹೀನಗಳು

ಕೋಷ್ಠಕ ೧೫ : [ಷಡ್ಜಗ್ರಾಮದಲ್ಲಿ ಋಷಭಲೋಪದಿಂದಾದ ಷಾಡವಗಳು]

೨೦೭

            ರಿ x ನಿ
          ನಿ ರಿ x  
        ನಿ ರಿ x    
      x ನಿ ರಿ      
    x ನಿ ರಿ        
  x ನಿ ರಿ          
ರಿ x ನಿ   ಪ-ಹೀನಗಳು

ಕೋಷ್ಟಕ ೧೬ : [ಷಡ್ಜಗ್ರಾಮದಲ್ಲಿ ಪಂಚಮಲೋಪದಿಂದಾದ ಷಾಡವಗಳು]

೨೦೮

            ರಿ x
          x ರಿ  
        x ರಿ    
      x ರಿ      
    x ರಿ        
  x ರಿ          
ರಿ x   ನಿಹೀನಗಳು; ಷಾಡವಗಳುಮುಗಿದವು.

ಕೋಷ್ಠಕಮ್‌೧೭ : [ಷಡ್ಜಗ್ರಾಮದಲ್ಲಿ ನಿಷಾದಲೋಪದಿಂದ ಷಾಡವಗಳು]

____

೨೦೯

            x ರಿ x ನಿ
          ನಿ x ರಿ x  
        ನಿ x ರಿ x    
      x ನಿ x ರಿ      
    x ನಿ x ರಿ        
  x ನಿ x ರಿ          
ರಿ x ನಿ x   ಸಪ-ಹೀನಾಃ |

ಕೋಷ್ಠಕಮ್ ೧೮ : [ಷಡ್ಜಗ್ರಾಮೇ ಷಡ್ಜಪಂಚಮಹೀನಾಸ್ತ್ವೌಡುವಾಃ |]

೨೧೦

            ರಿ x x
          x ರಿ x  
        x ರಿ x    
      x ರಿ x      
    x ರಿ x        
  x x ರಿ          
ರಿ x x   ನಿಗ-ಹೀನಾಃ |

ಕೋಷ್ಠಕಮ್‌೧೯ : [ಪಡ್ಜಗ್ರಾಮೇ ನಿಷಾದಗಾಂಧಾರಹೀನಾಸ್ತ್ವೌಡುವಾಃ]

೨೧೧

            x x ನಿ
          ನಿ x x  
        ನಿ x x    
    [ x ನಿ x ]    
    x ನಿ x        
  x ನಿ x          
[x ನಿ   ಪರಿ-ಹೀನಾಃ | ಇತ್ಯೌಢುವಾಃ |ಯೋಗಾಃ

ಕೋಷ್ಠಕಮ್‌೨೦ : [ಷಡ್ಜಗ್ರಾಮೇ ಪಂಚಮರ್ಷಭ ಹೀನಾಸ್ತ್ವೌಡುವಾಃ]

ಪಾಠವಿಮರ್ಶೆ :

—-

೨೦೯

            x ರಿ x ನಿ
          ನಿ x ರಿ x  
        ನಿ x ರಿ x    
      x ನಿ x ರಿ      
    x ನಿ x ರಿ        
  x ನಿ x ರಿ          
ರಿ x ನಿ x   ಸಪ-ಹೀನಗಳು

ಕೋಷ್ಕಕ ೧೮ : [ಪಡ್ಜಗ್ರಾಮದಲ್ಲಿ ಷಡ್ಜಪಂಚಮಲೋಪದಿಂದಾದ ಔಡುವಗಳೂ]

೨೧೦

            ರಿ x x
          x ರಿ x  
        x ರಿ x    
      x ರಿ x      
    x ರಿ x        
  x x ರಿ          
ರಿ x x   ನಿಗ-ಹೀನಗಳು

ಕೋಷ್ಠಕ ೧೯ : [ಪಡ್ಜಗ್ರಾಮದಲ್ಲಿ ನಿಷಾದಗಾಂಧಾರಗಳ ಲೋಪದಿಂದಾದ ಔಡುವಗಳು]

೨೧೧

            x x ನಿ
          ನಿ x x  
        ನಿ x x    
    [ x ನಿ x ]    
    x ನಿ x        
  x ನಿ x          
[x ನಿ   ಪರಿ-ಹೀನಗಳು

ಕೋಷ್ಟಕ ೨೦ : ಷಡ್ಜಗ್ರಾಮದಲ್ಲಿ ಪಂಚಮಋಷಭಗಳ ಲೋಪದಿಂದಾದ ಔಡುವಗಳು ಔಡುವಗಳು ಮುಗಿದವು

____

[ಅಥ ಮಧ್ಯಮಗ್ರಾಮೇ]

೨೧೨

            ನಿ x ರು
          ನಿ x ರಿ  
        ರಿ ನಿ x    
    [ x ರಿ ನಿ ]    
    ನಿ x ರಿ        
  ನಿ x ರಿ          
ನಿ x ರಿ   ಷಡ್ಜಹೀನಾಃ |

ಕೋಷ್ಠಕಮ್‌೨೧ : [ಮಧ್ಯಮಗ್ರಾಮೇ ಷಡ್ಜಹೀನಾಃ ಷಾಡವಾಃ]

೨೧೩

            ನಿ x
          ನಿ x  
      [ x ನಿ ]  
      x ನಿ      
    ನಿ x        
  ನಿ x          
ನಿ x   ರಿಹೀನಾಃ |

ಕೋಷ್ಠಕಮ್‌ ೨೨ : [ಮಧ್ಯಮಗ್ರಾಮೇ ಋಷಭಹೀನಾಃ ಷಾಡವಾಃ]

೨೧೪

            ನಿ ರಿ x
          x ನಿ ರಿ  
        ರಿ x ನಿ    
      ರಿ x ನಿ      
    ನಿ ರಿ x        
  ನಿ ರಿ x          
ನಿ ರಿ x   ಗ- ಹೀನಾಃ [ಇತಿಷಾಡವಾಃ]

ಕೋಷ್ಠಕಮ್‌೨೩ : [ಮಧ್ಯಮಗ್ರಾಮೇ ಗಾಂಧಾರಹೀನಾಃ ಷಾಡವಾಃ]

ಪಾಠವಿಮರ್ಶೆ :

—-

[ನಂತರ ಮಧ್ಯಮಗ್ರಾಮದಲ್ಲಿರುವ ಮೂರ್ಛನೆಗಳು]

೨೧೨

            ನಿ x ರು
          ನಿ x ರಿ  
        ರಿ ನಿ x    
    [ x ರಿ ನಿ ]    
    ನಿ x ರಿ        
  ನಿ x ರಿ          
ನಿ x ರಿ   ಸ-ಹೀನಗಳು

ಕೋಷ್ಕಕ ೨೧ : [ಮಧ್ಯಮಗ್ರಾಮದಲ್ಲಿ ಷಡ್ಜಲೋಪದಿಂದಾದ ಷಾಡವಗಳು]

೨೧೩

            ನಿ x
          ನಿ x  
      [ x ನಿ ]  
      x ನಿ      
    ನಿ x        
  ನಿ x          
ನಿ x   ರಿ-ಹೀನಗಳು

ಕೋಷ್ಟಕ ೨೨ : [ಮಧ್ಯಮಗ್ರಾಮದಲ್ಲಿ ಋಷಭಲೋಪದಿಂದಾದ ಷಾಡವಗಳು]

೨೧೪

            ನಿ ರಿ x
          x ನಿ ರಿ  
        ರಿ x ನಿ    
      ರಿ x ನಿ      
    ನಿ ರಿ x        
  ನಿ ರಿ x          
ನಿ ರಿ x   ಗ-ಹೀನಗಳು. [ಷಾಡವಗಳುಮುಗಿದವು]

ಕೋಷ್ಟಕ ೨೩ : (ಮಧ್ಯಮಗ್ರಾಮದಲ್ಲಿ ಗಾಂಧಾರಲೋಪದಿಂದಾದ ಷಾಡವಗಳು)

____

೨೧೫

            x ನಿ x
          x ನಿ x  
        x x ನಿ    
      x x ನಿ      
    ನಿ x x        
  x ನಿ x          
x ನಿ x   ಧರಿ-ಹೀನಾಃ |

ಕೋಷ್ಠಕಮ್‌೨೪ : [ಮಧ್ಯಮಗ್ರಾಮೇ ಧೈವತಋಷಭಹೀನಾ ಸ್ತ್ವೌಡುವಾಃ]

೨೧೬

            x ರಿ x
          x x ರಿ  
        ರಿ x x    
      ರಿ x x      
    x ರಿ x        
  x ರಿ x          
x ರಿ x   ನಿಗ – ಹೀನಾಃ | ಇತ್ಯೌಡುವಿತಾಃ |

ಕೋಷ್ಠಕಮ್ ೨೫ : [ಮಧ್ಯಮಗ್ರಾಮೇ ನಿಷಾದಗಾಂಧಾರಹೀನಾಸ್ತ್ವೌಡುವಾಃ]

[ಮೂರ್ಛನಾತಾನಯೋರ್ಭೇದಃ]

೨೧೭ (ಅ) ನನು, ಮೂರ್ಛನಾತಾನಯೋಃ ಕೋ ಭೇದಃ? (ಆ) ಉಚ್ಯತೇ – ಮೂರ್ಛನಾತಾನಯೋರ್ನಾಂತರತ್ವಮಿತಿ ವಿಶಾಖಿಲಃ | (ಇ) ಏತಚ್ಚಾಸಂಗತಮ್‌ | ಸಂಗ್ರಹಶ್ಲೋಕೇ ತು ಮೂರ್ಛನಾತಾನಯೋರ್ಭೇದಸ್ಯ ಪ್ರತಿಪಾದಿತತ್ವಾತ್‌ | (ಉ) ತತ್‌ಕಥಮ್‌? [(ಊ) ಆರೋಹಾವರೋಹಕ್ರಮಯುಕ್ತಃ ಸ್ವರಸಮುದಾಯೋ] ಮೂರ್ಛನೇತ್ಯುಚ್ಯತೇ ತಾನಸ್ತ್ವಾ ರೋಹಕ್ರಮೇಣ ಭವತೀತಿ ಭೇದಃ | 20

ಪಾಠವಿಮರ್ಶೆ : ೨ ೧೭ ಅ-ಊ, ಅ,ಇ,ಉ,ಊ

—-

೨೧೫

            x ನಿ x
          x ನಿ x  
        x x ನಿ    
      x x ನಿ      
    ನಿ x x        
  x ನಿ x          
x ನಿ x   ಧರಿ-ಹೀನಗಳು

ಕೋಷ್ಟಕ ೨೪ : [ಮಧ್ಯಮಗ್ರಾಮದಲ್ಲಿ ಧ್ಯೆವತರಿಷಭಗಳ ಲೋಪದಿಂದಾದ ಔಡುವಗಳು]

೨೧೬

            x ರಿ x
          x x ರಿ  
        ರಿ x x    
      ರಿ x x      
    x ರಿ x        
  x ರಿ x          
x ರಿ x   ನಿಗ-ಹೀನಗಳು

ಕೋಷ್ಟಕ ೨೫ : [ಮಧ್ಯಮಗ್ರಾಮದಲ್ಲಿ ನಿಷಾದಗಾಂಧಾರಗಳ ಲೋಪದಿಂದಾದ ಔಡುವಗಳು] ಹೀಗೆ ಔಡುವಿತಗಳು [ಮುಗಿದವು].

[ಮೂರ್ಛನಾ ಮತ್ತು ತಾನಗಳಲ್ಲಿ ಭೇದ]

೨೧೭ (ಅ) ಹಾಗಾದರೆ ಮೂರ್ಛನಾ ಮತ್ತು ತಾನಗಳಲ್ಲಿ ಏನು ವ್ಯತ್ಯಾಸ ? (ಆ) [ಉತ್ತರವನ್ನು] ಹೇಳಲಾಗುವುದು- ಮೂರ್ಛನಾ ಮತ್ತು ತಾನಗಳಲ್ಲಿ ವ್ಯತ್ಯಾಸವೇ ಇಲ್ಲವೆಂದು ವಿಶಾಖಿಲನು (ಹೇಳುತ್ತಾನೆ). (ಇ) ಇದು ಸಮಂಜಸವಲ್ಲ. [ಈ] [ಏಕೆಂದರೆ] (ಭರತನ) ಸಂಗ್ರಹಶ್ಲೋಕದಲ್ಲಿ ಮೂರ್ಛನಾತನಗಳಲ್ಲಿನ ಭೇದವನ್ನು ಪ್ರತಿಪಾದಿಸಿದೆ. (ಉ) ಇದು ಹೇಗಿದೆ? (ಊ) ಆರೋಹಣ- ಅವರೋಹಣಗಳಲ್ಲಿ ಕ್ರಮವಾಗಿ ಏರ್ಪಟ್ಟಿರುವ ಸ್ವರ ಸಮುದಾಯವನ್ನು ಮೂರ್ಛನಾ ಎಂದು ನಿರೂಪಿಸಿದೆ. ಆದರೆ ತಾನವು ಆರೋಹಣ ಕ್ರಮದಲ್ಲಿ ಮಾತ್ರ ಇರುತ್ತದೆ ಎಂಬುದೇ [ಇವುಗಳಲ್ಲಿರುವ] ಭೇದ. 20

____

 

[ತಾನಾನಾಂ ಯಜ್ಞನಾಮಾನಿ]

೨೧೮   (ಅ) ಅಧುನಾ ತಾನಾನಾಂ ಯಜ್ಞನಾಮಾನಿ ಕಥ್ಯಂತೇ | 21

೨೧೯ ಅಗ್ನಿಷ್ಟೋಮೋsತ್ಯಗ್ನಿಷ್ಟೋಮೋ ವಾಜಪೇಯೋsಥ ಷೋಡಶೀ ||
ಪುಂಡರೀಕೋsಶ್ವಮೇಧಶ್ಚ ರಾಜಸೂಯಶ್ಚ ಸಪ್ತಮಃ || ೧೯ ||

|| ಇತಿ ಷಡ್ಜಹೀನಷಾಡವತಾನನಾಮಾನಿ ||

೨೨೦   ಸ್ವಿಷ್ಟಕೃದ್‌ಬಹುಸೌವಣೋ ಗೋಸವಶ್ಚ ಮಹಾವ್ರತಃ |
ವಿಶ್ವಜಿದ್‌ಬ್ರಹ್ಮಯಜ್ಞಶ್ಚ ಪ್ರಾಚಾಪತ್ಯಸ್ತಥೈವ ಚ || ೨೦ ||

|| ಇತಿ ಋಷಭಹೀನಷಾಡವತಾನನಾಮಾನಿ ||

೨೨೧   ಅಶ್ವಕ್ರಾಂತೋ ರಥಕ್ರಾಂತೋ ವಿಷ್ಣುಕ್ರಾಂತಸ್ತಥೈವ ಚ |
ಸೂರ್ಯಕ್ರಾಂತೋ ಗಜಕ್ರಾಂತೋ ಬಲಿಭಿನ್ನಾಗಯಜ್ಞಕಃ || ೨೧ ||

|| ಇತಿ ಪಂಚಮಹೀನಷಾಡವತಾನನಾಮಾನಿ ||

೨೨೨   ಚಾತುರ್ಮಾಸ್ಯೋsಥ ಸಂಸ್ಥಾssಖ್ಯಃ ಶಸ್ತ್ರಶ್ಚೈವೋಕ್ಥ ಸ್ತಥಾ |
ಸೌತ್ರಾಮಣಿಶ್ಚ ಚಿತ್ರಾ ಚ ಉದ್‌ಭಿದ್‌ಯಾಗಶ್ಚ ಸಪ್ತಮಃ || ೨೨ ||

|| ಇತಿ ನಿಷಾದಹೀನಷಾಡವತಾನನಾಮಾನಿ ||

|| ಇತಿ ಷಡ್ಜಗ್ರಾಮೇ ಷಾಡವತನನಾಮಾನಿ ಅಷ್ಟಾವಿಂಶತಿಃ ||

೨೨೩   ಸಾವಿತ್ರೀ ಚಾರ್ಧಸಾವಿತ್ರೀ ಸರ್ವತೋಭದ್ರ ಏವ ಚ |
ಆದಿತ್ಯಾನಾಮಯನಶ್ಚ ಗವಾಮಯನನಾಮಕಃ
ಸರ್ಪಾಣಾಮಯನಃ ಷಷ್ಠಃ ಸಪ್ತಮಃ ಕೌಣಪಾಯನಃ || ೨೩ ||

|| ಇತಿ ಮಧ್ಯಮಗ್ರಾಮೇ ಷಡ್ಜಹೀನತಾನನಾಮಾನಿ ||

೨೨೪   ಅಗ್ನಿಚಿದ್‌ದ್ವಾದಶಾಹಶ್ಚ ಉಪಾಂಶುಃ ಸೋಮ ಏವ ಚ |
ಅಶ್ವಪ್ರತಿಗ್ರಹೋ ಬರ್ಹಿಸ್ತಥಾsಭ್ಯುದಯ ಇತ್ಯಪಿ || ೨೪ ||

|| ಇತಿ ಋಷಭಹೀನತಾನನಾಮಾನಿ ||

೨೨೫   ಸರ್ವಸ್ವದಕ್ಷಿಣೋ ದೀಕ್ಷಾ ಸೋಮಃ ಸಮಿಧಸಂಜ್ಞಕಃ |
ಸ್ವಾಹಾಕಾರಸ್ತನೂನಪಾತ್‌ತತೋ ಗೋದೋಹನಸ್ತಥಾ || ೨೫ ||

|| ಇತಿ ಗಾಂಧಾರಹೀನತಾನನಾಮಾನಿ ||

ಪಾಠವಿಮರ್ಶೆ : ೨೨೦ಅ,ಇ ೨೨೧ಈ ೨೨೨ಅ,ಆ,ಇ ೨೨೩ಅ,ಇಈ,ಉಊ ೨೨೪ಇ ೨೨೫ಇ

—-

[ತಾನಗಳಿಗೆ ಇಟ್ಟ ಯಜ್ಞಗಳ ಹೆಸರುಗಳು]

೨೧೮ (ಅ) ಈಗ ತಾನಗಳಿಗೆ ಇರುವ ಯಜ್ಞಗಳ ಹೆಸರುಗಳನ್ನು ಹೇಳಲಾಗುವುದು.                                              21

೨೧೯ ಅಗ್ನಿಪ್ಟೋಮ, ಅತ್ಯಗ್ನಿಪ್ಟೋಮ, ವಾಜಪೇಯ, ನಂತರ ಷೋಡಶೀ, ಪುಂಡರೀಕ, ಅಶ್ವಮೇಧ, ರಾಜಸೂಯವೆಂಬ ಏಳನೆಯದು,          ೧೯

[ಇವು] ಷಡ್ಜವಿಲ್ಲದಿರುವ ಷಾಡವತಾನಗಳ ಹೆಸರುಗಳು.

೨೨೦ ಸ್ವಿಪ್ಟಕೃತ್‌, ಬಹುಸೌವರ್ಣ, ಗೋಸವ, ಮಹಾವ್ರತ, ವಿಶ್ವಜಿತ್‌, ಬ್ರಹ್ಮಯಜ್ಞ ಅಂತೆಯೇ ಪ್ರಾಜಾಪತ್ಯ         ೨೦

[ಇವು] ಋಷಭವಿಲ್ಲದಿರುವ ಷಾಡವತಾನಗಳ ಹೆಸರುಗಳು.

೨೨೧ ಅಶ್ವಕ್ರಾಂತ, ರಥಕ್ರಾಂತ, ಅಂತೆಯೇ ವಿಷ್ಣುಕ್ರಾಂತ, ಸೂರ್ಯಕ್ರಾಂತ, ಗಜಕ್ರಾಂತ, ಬಲಿಭಿತ್‌, ನಾಗಯಜ್ಞ, ೨೧

[ಇವು] ಪಂಚಮವಿಲ್ಲದಿರುವ ಷಾಡವತಾನಗಳ ಹೆಸರುಗಳು.

೨೨೨ ಚಾತುರ್ಮಾಸ್ಯ, ನಂತರ ಸಂಸ್ಥಾ ಎಂಬುದು, ಶಸ್ತ್ರ ಹಾಗೆಯೇ ಉಕ್ಥ, ಸೌತ್ರಾಮಣಿ, ಚಿತ್ರಾ, ಏಳನೆಯದಾದ ಉದ್‌ಭಿತ್‌ (ಎಂಬ) ಯಾಗ,   ೨೨

[ಇವು] ನಿಷಾದವಿಲ್ಲದಿರುವ ಷಾಡವತಾನಗಳ ಹೆಸರುಗಳು.

ಹೀಗೆ ಷಡ್ಜಗ್ರಾಮದಲ್ಲಿ ಇಪ್ಪತ್ತೆಂಟು ಷಾಡವತಾನಗಳ [ಯಜ್ಞ]ನಾಮಗಳು.

೨೨೩ ಸಾವಿತ್ರೀ, ಅರ್ಧಸಾವಿತ್ರೀ, ಸರ್ವತೋಭದ್ರ, [ಆದಿತ್ಯನಾಮಯನ, ಗವಾಮಯನ ಎಂಬ ಹೆಸರಿನದು], ಸರ್ವಾಣಾಮಯನವೆಂಬ ಆರನೆಯದು, ಏಳನೆಯದಾದ ಕೌಣಪಾಯನ, ೨೩ (ಇವು) ಮಧ್ಯಮಗ್ರಾಮದಲ್ಲ ಷಡ್ಜವಿಲ್ಲದ (ಷಾಡವ) ತಾನಗಳ ಹೆಸರುಗಳು.

೨೨೪ ಅಗ್ನಿಚಿತ್‌, ದ್ವಾದಶಾಹ, ಉಪಾಂಶು, ಹಾಗೆಯೇ ಸೋಮ, ಅಶ್ವಪ್ರತಿಗ್ರಹ, ಬರ್ಹಿ, ಅಂತೆಯೇ ಅಭ್ಯುದಯ ೨೪

(ಇವು) ಮಧ್ಯಮಗ್ರಾಮದಲ್ಲಿ ಋಷಭವಿಲ್ಲದ (ಷಾಡವ) ತಾನಗಳು.

೨೨೫ ಸರ್ವಸ್ವದಕ್ಷಿಣ, ದೀಕ್ಷಾ, ಸೋಮ, ಸಮಿಧವೆಂಬ ಹೆಸರಿನದು, ಸ್ವಾಹಾಕಾರ, ತನೂನಪಾತ್‌, ನಂತರ ಗೋದೋಹ ೨೫

(ಇವು) ಮಧ್ಯಮಗ್ರಾಮದಲ್ಲಿ ಗಾಂಧಾರವಿಲ್ಲದ (ಷಾಡವ) ತಾನಗಳು.

____

|| ಇತಿ ಮಧ್ಯಮಗ್ರಾಮ ಏಕವಿಂಶತಿಃ ಷಾಡವತಾನನಾಮಾನಿ ||

|| ಇತ್ಯೇವಮುಭಯಗ್ರಾಮಾಶ್ರಿತಾನ್ಯೇಕೋನಪಂಚಾಶತ್‌ತಾನನಾಮಾನಿ ||

೨೨೬   ಇಡಾ ಪುರುಷಮೇಧಶ್ಚ ಶ್ಯೇನೋ ವಜ್ರ ಇಷುಸ್ತಥಾ |
ಅಂಗಿರಾಃ ಕಂಕಸಂಜ್ಞಶ್ಚ ಷಡ್ಜಗ್ರಾಮೇ sಪಿ ಚೌಡುವಾಃ || ೨೬ ||

|| ಇತಿ ಪಡ್ಜಪಂಚಮಹೀನತಾನನಾಮಾನಿ ||

೨೨೭   ಅಗ್ನಿಷ್ಟೋಮೋ sಥ ದರ್ಶಶ್ಚ ನಾಂದೀ ವೈ ಪೌರ್ಣಮಾಸಿಕಃ |
ಅಶ್ವಪ್ರತಿಗ್ರಹೋ ರಾತ್ರಿಸ್ತಥಾ ಸೌಭರಕೋ ಮತಃ || ೨೭ ||

|| ಇತಿ ಗಾಂಧಾರನಿಷಾದಹೀನತಾನ ನಾಮಾನಿ ||

೨೨೮   ಸೌಭಾಗ್ಯಕೃಚ್ಚ ಕಾರೀರೀ ಶಾಂತಿಕೃತ್‌ಪುಷ್ಟಿಕೃತ್‌ತಥಾ |
ವೈನತೇಯೋ ಭವೇದೇವ ಉಚ್ಚಾಟನವಶೀಕೃತೌ || ೨೮ ||

|| ಇತಿ ಪಂಚಮರ್ಷಭಹೀನತಾನನಾಮಾನಿ ||

|| ಇತಿ ಷಡ್ಜಗ್ರಾಮ ಔಡುವಿತತಾನನಾಮಾನಿ ಏಕವಿಂಶತಿಃ ||

೨೨೯   ತ್ರೈಲೋಕ್ಯಮೋಹನೋ ವೀರಃ ಕಂದರ್ಪಬಲಶಾತನಃ |
ಶಂಖಚೂಡೋ ಗಜಚ್ಛಾಯೋ ರೌದ್ರೋsಸೌ ವಿಷ್ಣುವಿಕ್ರಮಃ || ೨೯ ||

|| ಇತಿ ಮಧ್ಯಮಗ್ರಾಮೇ ಧೈವತರ್ಷಭಹೀನೌಡುವಿತತಾನನಾಮಾನಿ ||

೨೩೦   ಭೈರವಃ ಕಾಮದಶ್ಚೈವಾವಭೃಥೋsಷ್ಟಕಪಾಲಕಃ |
ಸ್ವಿಷ್ಟಕೃಚ್ಚ ವಷಟ್‌ಕಾರಃ ಸಪ್ತಮೋ ಮೋಕ್ಷದಃ ಸ್ಮೃತಃ || ೩೦ ||

|| ಇತಿ ಮಧ್ಯಮಗ್ರಾಮೇ ನಿಗಹೀನೌಡುವಿತತಾನನಾಮಾನಿ ||

(ಇತ್ಯೇವಮುಭಯಗ್ರಾಮಾಶ್ರಿತಾನಿ ಪಂಚತ್ರಿಂಶದೌಡುವಿತತಾನನಾಮಾನಿ)

೨೩೧ (ಅ) ಉಭಯಗ್ರಾಮಿಕ್ಯೌಡುವಿತಾಃ ಪಂಚತ್ರಿಶದ್‌ಭವಂತಿ | (ಆ) ಷಾಡವಾ ಔಡುವಿತಾಶ್ಚ ಮಿಲಿತ್ವಾ ಚೋಭಯಗ್ರಾಮಿಕಾಸ್ತಾನಶ್ಚತುರಶೀತಿರ್ಭವಂತಿ |                                                                                    22

೨೩೨ (ಅ) ಇದಾನೀಂ ಸಾಧಾರಣಕೃತಾ ಮೂರ್ಛನಾಸ್ತು ಖ್ಯಾತುಮಾಹ- ಸಾಧಾರಣಸ್ವರೌ ನಿಷಾದಗಾಂಧಾರವಂತೌ | (ಆ) ತದಾದಿಕೃತಸ್ತತ್ರೈ ವಾಂತರ್ಭೂತಾ(ಃ)

ಪಾಠವಿಮರ್ಶೆ : ೨೨೬ಅ,ಆ,ಇ ೨೨೭ಅ,ಆ,ಈ ೨೨೮ಅ,ಆ ೨೨೯ಅ,ಆ,ಇ ೨೩೦ಆ,ಇ,ಈ ೨೩೨ಅ,ಆ,ಈ

—-

ಹೀಗೆ ಮಧ್ಯಮಗ್ರಾಮದಲ್ಲಿ ಇಪ್ಪತ್ತೊಂದು ಷಾಡವತಾನಗಳ ಹೆಸರುಗಳು.

ಹೀಗೆ ಎರಡೂ ಗ್ರಾಮಗಳಲ್ಲಿರುವ (ಒಟ್ಟು ನಲವತ್ತೊಂಬತ್ತು ತಾನಗಳ ಹೆಸರುಗಳು.

೨೨೬ ಇಡಾ, ಪುರುಷಮೇಧ, ಶ್ಯೇನ, ವಜ್ರ, ಇಷು, ಹಾಗೆಯೇ ಅಂಗಿರಾ, ಕಂಕವೆಂಬ ಹೆಸರಿನದು-(ಇವು ಷಡ್ಜಗ್ರಾಮದಲ್ಲಿ [ಇರುವ] ಔಡುವ (ತಾನ) ಗಳು.   ೨೬

(ಇವು) ಷಡ್ಜಗ್ರಾಮದಲ್ಲಿ ಷಡ್ಜಪಂಚಮಗಳಿಲ್ಲದ (ಔಡುವ) ತಾನಗಳು.

೨೨೭ ಅಗ್ನಿಷ್ಟೋಮ, ನಂತರ ದರ್ಶ, ನಾಂದೀ, ಪೌರ್ಣಮಾಸಿಕ, ಅಶ್ವಪ್ರತಿಗ್ರಹ, ಅಂತೆಯೇ ರಾತ್ರಿ, ಹಾಗೆಯೇ ಸೌಭರಕ ಎಂದು ಸಮ್ಮತಿಸಿದೆ.    ೨೭
(ಇವು) ಷಡ್ಜಗ್ರಾಮದಲ್ಲಿ ಗಾಂಧಾರನಿಷಾದಗಳಿಲ್ಲದ (ಔಡುವ) ತಾನಗಳು.

೨೨೮ ಸೌಭಾಗ್ಯಕೃತ್‌, ಕಾರೀರೀ, ಶಾಂತಿಕೃತ್‌, ಪುಷ್ಟಿಕೃತ್‌ಹಾಗೆಯೇ ವೈನತೇಯ, ಉಚ್ಚಾಟನ – ವಶೀಕೃತಗಳು ಇದ್ದೇ ಇವೆ.

(ಇವು) ಷಡ್ಜಗ್ರಾಮದಲ್ಲಿ ಪಂಚಮಋಷಭಗಳಿಲ್ಲದ (ಔಡುವ) ತಾನಗಳು.

ಹೀಗೆ ಷಡ್ಜಗ್ರಾಮದಲ್ಲಿ ಔಡುವಿತತಾನಗಳ ಇಪ್ಪತ್ತೊಂದು ಹೆಸರುಗಳು.

೨೨೯ ತ್ರೈಲೋಕ್ಯಮೋಹನ, ವೀರ, ಕಂದರ್ಪಬಲಶಾತನ, ಶಂಖಚೂಡ, ಗಜಚ್ಛಾಯ, ಈ ರೌದ್ರವೆಂಬುದು. ವಿಷ್ಣುವಿಕ್ರಮ,   ೨೯

(ಇವು) ಮಧ್ಯಮಗ್ರಾಮದಲ್ಲಿ ಧೈವತಋಷಭಗಳಿಲ್ಲದ (ಔಡುವ) ತಾನಗಳು.

೨೩೦ ಭೈರವ, ಕಾಮದ, ಅಂತೆಯೇ ಅವಭೃಥ, ಅಷ್ಟಕಪಾಲ, ಸ್ವಿಷ್ಟಕೃತ್‌, ವಷಟ್‌ಕಾರ, ಏಳನೆಯದು ಮೋಕ್ಷದವೆಂದು ಸ್ಮೃತವಾಗಿದೆ.          ೩೦

(ಇವು) ಮಧ್ಯಮಗ್ರಾಮದಲ್ಲಿ ನಿಷಾದಗಾಂಧಾರಗಳಿಲ್ಲದ (ಔಡುವ) ತಾನಗಳು.

ಹೀಗೆ ಮಧ್ಯಮಗ್ರಾಮದಲ್ಲಿ ಔಡುವಿತತಾನಗಳ ಹದಿನಾಲ್ಕು ಹೆಸರುಗಳು.

(ಇಂತು ಎರಡೂ ಗ್ರಾಮಗಳಲ್ಲಿ ನೆಲೆಸಿರುವ ಇಪ್ಪತ್ತೊಂದು ತಾನಗಳ ಹೆಸರುಗಳು.)

೨೩೧ (ಅ) ಎರಡು ಗ್ರಾಮಗಳ ಔಡುವಿತತಾನಗಳು ಮೂವತ್ತೈದಾಗುತ್ತವೆ. (ಆ) ಷಾಡವಗಳೂ ಔಡುವಗಳು ಕೂಡಿಕೊಂಡರೆ ಎರಡು ಗ್ರಾಮಗಳ ತಾನಗಳು ಎಂಬತ್ತನಾಲ್ಕಾಗುತ್ತವೆ.                                                                                                       22

೨೩೨ (ಅ) ಈಗ ಸಾಧಾರಣವನ್ನಾಗಿಮಾಡಿದ ಮೂರ್ಛನೆಗಳನ್ನು ವಿವರಿಸಲು (ಗ್ರಂಥಕಾರನು ಹೀಗೆ) ಹೇಳಿದನು – ಸಾಧಾರಣಸ್ವರಗಳೆಂದರೆ ನಿಷಾದ (ಮತ್ತು) ಗಾಂಧಾರಗಳು. (ಆ) ಅವು (ಅಂತರ ಗಾಂಧಾರ ಮತ್ತು ಕಾಕಲೀನಿಷಾದ) ಗಳಿಂದಲೇ ಪ್ರಾರಂಭವಾಗಿ ಅವು (ಗಾಂಧಾರ ನಿಷಾದ) ಗಳಲ್ಲಿಯೇ

____

ಸಾಧಾರಣಮೂರ್ಛನಾ ಭವಂತಿ | (ಇ) ಕುತಃ? (ಈ) ಸ್ವರಾತ್ಮಕತ್ವಾನ್ಮೂರ್ಛನಾನಾಂ ತಾನಸಾಧಾರಣತಾsಪಿ ಸಾಧಾರಣೇನೈವ ಗತಾರ್ಥಾಃ |                                                                                                       23

೨೩೩ ಇತ್ಯೇವಂ ಚ ಮಯಾ ಪ್ರೋಕ್ತಾ ಮೂರ್ಛನಾಸ್ತು ಚತುರ್ವಿಧಾಃ || ೩೧ ||

[ತಾನಾನಾಂ ಪ್ರಯೋಗಃ]

೨೩೪ (ಅ) ಕಥಮೇಷಾಂ ತಾನಾನಾಂ ಪ್ರಯೋಗಃ ಕಾರ್ಯ ಇತಿ ಚೇತ್‌ಉಚ್ಯತೇ – (ಆ) ದ್ವಿವಿಧಸ್ತಾನಪ್ರಯೋಗಃ ಪ್ರವೇಶೇನ ನಿಗ್ರಹೇಣ ಚ | (ಇ) ಪ್ರವೇಶ ಋಷಭಾಪೇಕ್ಷಯಾ ಷಡ್ಜಸ್ಯಾಧರೀಭೂತಸ್ಯ ಲೋಪನೀಯಸ್ಯ ವಿಪ್ರಕರ್ಷಃ ಪೀಡನಮ್‌ಋಷಭಾಪಾದನಂ ಇತಿ ಯಾವತ್‌ |

(ಈ) ಇತಿ ವಿಪ್ರಕರ್ಷೇಣ ಪ್ರವೇಶನಮ್ |                                                                                                 24

೨೩೫ (ಅ) ಮಾರ್ದವೇನ ಯಥಾ – ತಸ್ಯೈವ ಷಡ್ಜಸ್ಯ ನಿಷಾದಾಪೇಕ್ಷಯಾ ಉತ್ತರೀಭೂತಸ್ಯ ಮಾರ್ದವಂ ಶಿಥಿಲೀಕರಣಂ ನಿಷಾದಾಪಾದನಮಿತಿ ದ್ವಿವಿಧಂ ಪ್ರವೇಶನಮ್‌ ||                                                                                                                 25

೨೩೬ (ಅ) ನಿಗ್ರಹಸ್ತ್ವಂತರಸ್ವರಪರಿತ್ಯಾಗೋ sಸಂಸ್ಪರ್ಶನಮ್ |

(ಆ) ಪ್ರಯೋಗಸ್ತು ಯಥಾ – ಸಾ ಸಾ ಗ ರಿ ಪಾ ಪಾ ಮಾ ರಿ                                                                         26

೨೩೭ (ಅ) ತಥಾ ಚಾಹ ಭರತಃ-

(ಆ) ದ್ವಿವಿಧಾ ತಾನಕ್ರಿಯಾ ತಂತ್ಯ್ರಾಂ ಪ್ರವೇಶನಂ ನಿಗ್ರಹಸ್ತಥಾ | (ಇ) ತತ್ರ ಪ್ರವೇಶನಮಧರಸ್ವರಪ್ರಕಾರ್ಷಾದುತ್ತರಸ್ವರಮಾರ್ದವಾದ್‌ವಾ | (ಈ) ನಿಗ್ರಹಶ್ಚಾಸಂಸ್ಪರ್ಶಃ |                                                                                                                     27

೨೩೮ (ಅ) ದತ್ತಿಲೇನಾಪ್ಯುಕ್ತಮ್‌-                                                                                                       28

೨೩೯   ”ತಾನಕ್ರಿಯಾ ದ್ವಿಧಾ ತಂತ್ಯಾಂ ಪ್ರವೇಶಾನ್ನಿಗ್ರಹಾತ್‌ತಥಾ |
ಪ್ರವೇಶೋ ಧ್ವನಿಸಾದೃಶ್ಯಮಸಂಸ್ಪರ್ಶಸ್ತು ನಿಗ್ರಹಃ” || ೩೨ ||

ಪಾಠವಿಮರ್ಶೆ : ೨೩೪ಅ,ಇಈ ೨೩೫ಅ ೨೩೬ ಅ ೨೩೭ಆ,ಈ,ಅ-ಈ ೨೩೯ಇ

—-

ಸೇರಿಹೋಗಿ (= ಅವುಗಳದ್ದೆಂದೇ ಪರಿಗಣಿತವಾದ) ಮೂರ್ಛನೆಗಳು ಸಾಧಾರಣ ಮೂರ್ಛನೆಗಳೆನ್ನಿಸಿ ಕೊಳ್ಳುತ್ತವೆ. (ಇ) ಹೇಗೆ? (ಈ) (ಸಾಧಾರಣವೆಂಬ) ಸ್ವರಗಳ ಮೂರ್ಛನೆಗಳಾಗಿರುವುದರಿಂದಲೂ ಮೂರ್ಛನೆಗಳಿಗೂ ತಾನಗಳಿಗೂ ಸಾಧಾರಣತ್ವವು (ಇರುವುದರಿಂದಲೂ) (ಇವು) ಸಾಧಾರಣವೆಂಬ (ಹೆಸರಿನ ಸರಿಯಾದ) ಅರ್ಥವನ್ನೇ ಹೊಂದಿದೆ.                                                                   23

೨೩೩ ಹೀಗೆ ನಾಲ್ಕು ವಿಧವಾದ ಮೂರ್ಛನೆಗಳನ್ನು ನಾನು ಹೇಳಿದ್ದಾಯಿತು.                                                   ೩೧

[ತಾನಗಳ ಪ್ರಯೋಗ]

೨೩೪ (ಅ) ಈ ತಾನಗಳ ಪ್ರಯೋಗ (=ಗಾಯನವಾದನ)ವನ್ನು ಹೇಗೆ ಮಾಡಬೇಕು, ಎಂದು ಕೇಳಿದರೆ (ಅದಕ್ಕೆ ಉತ್ತರವನ್ನು) ಹೇಳಲಾಗುವುದು. (ಆ) ಪ್ರವೇಶ ಮತ್ತು ನಿಗ್ರಹ ಎಂಬುದರಿಂದ ತಾನದ ಪ್ರಯೋಗವು ಎರಡು ವಿಧವಾಗಿದೆ. (ಇ) ಪ್ರವೇಶವೆಂದರೆ ಋಷಭವನ್ನು (ಪಡೆಯಬೇಕೆಂದು) ಅಪೇಕ್ಷಿಸಿ, ಅದರ ಕೆಳಗೆ ಇದ್ದು ಬಿಟ್ಟುಬಿಡಬೇಕಾದ ಷಡ್ಜವ (-ದ ತಂತಿಯ)ನ್ನು ಎಳೆದು (ಅಥವಾ ಬಿಗಿಮಾಡಿ ಅದರಲ್ಲಿ) ಋಷಭವನ್ನು ಆರೋಪಿಸುವುದು. (ಈ) ಹೀಗೆ ಎಳೆಯುವುದರಿಂದ (=ಹೆಚ್ಚುಮಾಡುವುದರಿಂದ) ಪ್ರವೇಶವು (ಮೊದಲನೆಯ ವಿಧ). 24

೨೩೫ (ಅ) ಮಾರ್ದವದಿಂದ (=ಮೃದುಗೊಳಿಸುವುದರಿಂದ = ತಂತಿಯನ್ನು ಸಡಿಲಗೊಳಿಸುವುದರಿಂದ) (ಎರಡನೆಯ ವಿಧದ) ಪ್ರವೇಶವು ಹೇಗೆಂದರೆ – ನಿಷಾದವನ್ನು ಅಪೇಕ್ಷಿಸಿ ಅದರ ನಂತರ ಇರುವ ಅದೇ ಷಡ್ಜವನ್ನು ಮೃದುಗೊಳಿಸಿ, ಎಂದರೆ ಸಡಿಲಿಸಿ ಅದರಲ್ಲಿ ನಿಷಾದವನ್ನು ಆರೋಪಿಸುವುದು – (ಹೀಗೆ) ಪ್ರವೇಶನವು ಎರಡು ವಿಧ.                                                                                                        25

೨೩೬ (ಅ) ನಿಗ್ರಹವಾದರೋ ನಂತರದ ಸ್ವರವನ್ನು ಬಿಟ್ಟೇ ಬಿಡುವುದು ಅಥವಾ ಮುಟ್ಟದೆ ಇರುವುದು. (ಆ) (ಅದರ) ಪ್ರಯೋಗವು ಹೇಗೆಂದರೆ ಸಾಸಾ ಗರಿ ಪಾಪಾ ಮಾರಿ (‘ಮಾರಿ’ ಎಂಬಲ್ಲಿ ಗಾಂಧಾರವನ್ನು ತ್ಯಾಗಮಾಡುವುದು ಅಥವಾ ಮುಟ್ಟದೆ ಇರುವುದು). 26

೨೩೭ (ಅ) (ಈ ವಿಷಯದಲ್ಲಿ) ಭರತನು ಹೀಗೆ ಹೇಳಿದ್ದಾನೆ: (ಆ) ‘ತಾನಕ್ರಿಯೆಯು ತಂತಿಯಲ್ಲಿ ಪ್ರವೇಶನ ಮತ್ತು ನಿಗ್ರಹ ಎಂದು ಎರಡು ವಿಧವಾಗಿದೆ. (ಇ) ಅವುಗಳ ಪೈಕಿ ಪ್ರವೇಶನವೆಂದರೆ ಕೆಳಗಿನ ಸ್ವರವನ್ನು ಎಳೆಯುವುದು (ಹೆಚ್ಚಿಸುವುದು) ಅಥವಾ ಮೇಲಿನ ಸ್ವರವನ್ನು ಸಡಿಲಗೊಳಿಸುವುದು (ತಗ್ಗಿಸುವುದು.) (ಈ) ನಿಗ್ರಹವೆಂದರೆ (ನಂತರದ ಸ್ವರವನ್ನು) ಮುಟ್ಟದೆಯೇ ಇರುವುದು.’      27

೨೩೮ (ಅ) (ಈ ವಿಷಯದಲ್ಲಿ) ದತ್ತಿಲನೂ (ಹೀಗೆಯೇ) ಹೇಳಿದ್ದಾನೆ:                                                          28

೨೩೯ ತಂತಿಯಲ್ಲಿ ತಾನಕ್ರಿಯೆಯು ಪ್ರವೇಶದಿಂದ, ಅಂತೆಯೇ ನಿಗ್ರಹದಿಂದ (ಎಂದು) ಎರಡು ವಿಧ. ಪ್ರವೇಶ ವೆಂದರೆ (ಒಂದು ಸ್ವರದಲ್ಲಿ ಇನ್ನೊಂದರ) ಧ್ವನಿಯ ಹೋಲಿಕೆ(ಯನ್ನುಂಟು ಮಾಡುವುದು). (ನಂತರದ ಸ್ವರವನ್ನು) ಮುಟ್ಟದೆಯೇ ಇರುವುದು ನಿಗ್ರಹ.            ೩೨

____

೨೪೦ (ಅ) ನನು ತ್ರಿಷು ಸ್ಥಾನೇಷು ಸ್ವರಪ್ರಯೊಗ ಇತ್ಯುಕ್ತಂ ಕಾಕುವಿಧಾನೇ | (ಆ) ತತ್ರ ಕತಮಂ ಸ್ವರಸಪ್ತಕಮವಲಂಬ್ಯ ಮೂರ್ಛನಾ ಕಾರ್ಯೇತಿ ಯೇ ಸಂಶೇರತೇ ತಾನ್‌ಪ್ರತ್ಯಾಹ – (ಇ) ಮಧ್ಯಮಸಪ್ತಕೇನ ಮೂರ್ಛನಾನಿರ್ದೇಶೋ ಭವತಿ ಮಂದ್ರತಾರಸಂಸಿಧ್ಧ್ಯರ್ಥಮ್‌ | (ಈ) ಕುತಃ? (ಉ) ಮಧ್ಯಮಸಪ್ತಕಸ್ಯಾವಿನಾಶಿತ್ವಾದಿತ್ಯರ್ಥ |                                                                                             29

೨೪೧ (ಅ) ಭರತೇನಾಪ್ಯುಕ್ತಮ್‌-

”ಮಧ್ಯಮಸ್ವರೇಣ (ವೈಣೇನ) ಮೂರ್ಛನಾನಿರ್ದೇಶೋ ಭವತ್ಯವಿನಾಶಿತ್ವಾನ್ಮಧ್ಯಮಸ್ಯ ನಿಗ್ರಹೇ ಪರ್ಯಗ್ರಹೇ ವಾ” 30

೨೪೨ (ಅ) ನನು ಮಧ್ಯಮಸಪ್ತಕೇನ ಮೂರ್ಛನಾನಿರ್ದೇಶಃ ಕ್ರಿಯತೇ ಯದಿ ತದಾ ಕಿಮುಕ್ತಂ ಮಧ್ಯಮೇನ ಸ್ವರೇಣೇತಿ? (ಆ) ಸತ್ಯಮುಕ್ತಮ್‌- ಸ್ವರಜಾತ್ಯಪೇಕ್ಷಯಾ ಏಕವಚನಮ್‌ | (ಇ) ಕಂಠ್ಯೇ ಸ್ವರೇ ಮೂರ್ಛನಾ ಕಾರ್ಯೇತಿ ಭಾವಃ | (ಈ) ವೈಣಗ್ರಹಣಂ ಚ ಶರೀರೇ ಅಪ್ರಕೀರ್ತಿತಸ್ಯಾಪಿ ಸ್ಥಾನಸ್ಯ ಲಾಭಾರ್ಥಮ್‌ |                                                                                                                 31

೨೪೩ (ಅ) ನನು ಷಾಡವೌಡುವಿತೇ ಕ್ರಿಯಮಾಣೇ ಮೂರ್ಛನಾಪ್ರತ್ಯಭಿಜ್ಞಾನಮಸ್ತಿ ವಾ ನ ವಾ? (ಆ) ಅಸ್ತ್ಯೇವ ಮೂರ್ಛನಾಪ್ರತ್ಯಭಿಜ್ಞಾನಮಿತಿ | (ಇ) ತಥಾ ಚಾಹ ದತ್ತಿಲಃ-                                                                                                                      32

೨೪೪   ‘ಏವಂ ಕೃತೇsಪಿ ತಾನತ್ವೇ ಗಣಯಿತ್ವಾ ವಿನಾಶಿನಮ್‌ |
ವಿದ್ವಾನೇತಾವತಿಥ್ಯೇಷಾ ಮೂರ್ಛನೇತ್ಯವಧಾರಯೇತ್‌’ || ೩೩ ||

(ದತ್ತಿಲಮ್‌೩೭)

ಪಾಠವಿಮರ್ಶೆ : ೨೪೦ಅ,ಇ ೨೪೧ಅ ೨೪೨ಇ ೨೪೪ಆ,ಇ

—-

೨೪೦ (ಅ) ಆದರೆ ಕಾಕುವಿಧಾನ(ವೆಂಬ ನಾಟ್ಯಶಾಸ್ತ್ರದ ೧೭ನೆಯ ಅಧ್ಯಾಯದಲ್ಲಿ, ಅಥವಾ ಸ್ವರಗಳಲ್ಲಿ ಕಾಕುಗಳನ್ನು ಬಳಸುವ ವಿಧಾನ)ದಲ್ಲಿ (ಮಂದ್ರ, ಮಧ್ಯ ಮತ್ತು ತಾರಗಳೆಂಬ) ಮೂರು ಸ್ಥಾನಗಳಲ್ಲಿಯೂ ಸ್ವರಗಳ ಪ್ರಯೋಗವಿದೆ ಎಂದು ಹೇಳಿದೆಯಲ್ಲ, (ಆ) ಅದರಲ್ಲಿ ಎಷ್ಟನೆಯ (ಸ್ಥಾನದ) ಸ್ವರಸಪ್ತಕವನ್ನು ಅವಲಂಬಿಸಿ ಮೂರ್ಛನೆಯನ್ನು ರಚಿಸಬೇಕು? ಎಂದು ಯಾರು ಸಂಶಯಪಡುತ್ತಾರೋ ಅವರನ್ನು ಕುರಿತು (ಗ್ರಂಥಕಾರನು ಹೀಗೆ) ಹೇಳಿದನು – (ಇ) ಮಂದ್ರ ಮತ್ತು ತಾರ(ಸ್ಥಾನ)ಗಳ ಪ್ರಯೋಜನವನ್ನು <ಸಂಸಿದ್ಧಿ> ಪಡೆಯುವುದಕ್ಕೋಸ್ಕರವಾಗಿ ಮಧ್ಯ (ಸ್ಥಾನ)ದ ಸ್ವರಸಪ್ತಕದಲ್ಲಿಯೇ ಮೂರ್ಛನೆಗಳನ್ನು ತೋರಿಸ (=ಪ್ರಯೋಗಿಸ)ಬೇಕು. (ಈ) ಏತರಿಂದ? (ಉ) ಮಧ್ಯಮ (ಸ್ಥಾನದ) ಸ್ವರಸಪ್ತಕವು ಎಂದಿಗೂ ನಾಶವಿಲ್ಲದ್ದು, ಎಂಬುದರಿಂದ ಎಂದು [ಈ ಮಾತಿನ] ಅರ್ಥ.                                                         29

೨೪೧ (ಅ) (ಈ ವಿಷಯದಲ್ಲಿ) ಭರತನೇ (ಹೀಗೆ ಹೇಳಿದ್ದಾನೆ : ‘ನಿಗ್ರಹದಲ್ಲಾದಲ್ಲಿ (ಮಂದ್ರಸ್ಥಾನದ ಸ್ವರಗಳಲ್ಲಾಗಲಿ ಪೂರ್ಣವಾದ ಸ್ವರಗಳಲ್ಲಾಗಲಿ ಅಥನಾ ಮುಟ್ಟದೆಯೇ ಇರುವ ಸ್ವರಗಳಲ್ಲಾಗಲಿ), ಪರ್ಯಗ್ರಹದಲ್ಲಾಗಲಿ (=ತಾರಸ್ಥಾನದ ಸ್ವರಗಳಲ್ಲಾಗಲಿ, ಸಂಪೂರ್ಣವಾಗಿ ಸ್ವರಗಳನ್ನು ಬಳಸದೆ ಇರುವಲ್ಲಿ – ಎಂದರೆ ಉಳಿದ ಬೇರೆ ಸ್ವರಗಳನ್ನು ಪ್ರಯೋಗಿಸಲಿ, ಪ್ರಯೋಗಿಸದೆ ಇರಲಿ) ಮಧ್ಯಮಸ್ವರವು ಎಂದೂ ನಾಶವಿಲ್ಲದ್ದರಿಂದ (=ಅದನ್ನು ಯಾವುದೇ ಪ್ರಯೋಗದಲ್ಲಿ ಲೋಪಮಾಡುವುದನ್ನು ನೀಷೇಧಿಸಿರುವುದರಿಂದ) ವೀಣೆಯ ಮಧ್ಯಮಸ್ವರದಿಂದ ಮೂರ್ಛನಾ ನಿರ್ದೇಶವು ಆಗುತ್ತದೆ (=ಆಗಬೇಕು).                                                         30

೨೪೨ (ಅ) ಮಧ್ಯಮ (ಸ್ಥಾನದ) ಸ್ವರಸಪ್ತಕದಿಂದ ಮೂರ್ಛನಾನಿರ್ದೇಶವನ್ನು ಮಾಡಲಾಗುತ್ತದೆ ಎಂದು ಹೇಳಿದ ಮೇಲೆ ಮಧ್ಯಮಸ್ವರದಿಂದ (ಹಾಗೆ ಮಾಡುಬೇಕು) ಎಂದು ಹೇಳಿದ್ದೇಕೆ? (ಆ) ನಿಜವೇ- (ಮಧ್ಯಮಸಪ್ತಕದ) ಸ್ವರ(ಗಳು) ಎಂಬ ಜಾತಿಯನ್ನು ಹೇಳಲು ಅಪೇಕ್ಷಿಸಿ (ಹೀಗೆ) ಏಕವಚನವನ್ನು ಪ್ರಯೋಗಿಸಿದೆ. (ಇ) ಕಂಠದಲ್ಲಿ ಹುಟ್ಟುವ (ಮಧ್ಯಸ್ಥಾನದ)ಸ್ವರದಲ್ಲಿ ಮೂರ್ಛನೆಯನ್ನು ರಚಿಸಬೇಕು ಎಂಬುದು (ನಮ್ಮ) ಭಾವ. (ಈ) ವೀಣೆ ಎಂಬ ಮಾತನ್ನು ಇಲ್ಲಿ ಹಿಡಿದಿದ್ದು ಏಕೆಂದರೆ (ಮನುಷ್ಯ) ಶರೀರದಲ್ಲಿ ಲಭ್ಯವಾಗದಿರುವ ಸ್ಥಾನಗಳನ್ನು ಪಡೆಯುವುದಕ್ಕೋಸ್ಕರವಾಗಿ (ಎಂದು ತಿಳಿಯಬೇಕು).                                                                               31

೨೪೩ (ಅ) ಆದರೆ (ಮೂರ್ಛನೆಗಳನ್ನು) ಷಾಡವ ಮತ್ತು ಔಡುವಗಳನ್ನಾಗಿ ಮಾಡುವಾಗ (ಸ್ವರಗಳು ಲೋಪವಾಗುವುದರಿಂದ) (ಇದು ಇಂತಹ) ಮೂರ್ಛನೆ ಎಂಬ ನಿಶ್ಛಿತವಾದ ನೆನಪು ಉಂಟಾಗುತ್ತದೋ ಇಲ್ಲವೋ? (ಆ) (ಆಯಾ) ಮೂರ್ಛನೆಯ ನೆನಪು ಆಗಿಯೇ ತೀರುತ್ತದೆ. (ಇ) (ಈ ವಿಷಯದಲ್ಲಿ) ದತ್ತಿಲನು ಹೀಗೆ ಹೇಳಿದ್ದಾನೆ –                                                                                      32

೨೪೪ ಈ ರೀತಿಯಲ್ಲಿ (ಸ್ವರಗಳನ್ನು ಶಾಸ್ತ್ರವಿಧಿಗೆ ಅನುಸಾರವಾಗಿ ಲೋಪ ಮಾಡಿ) ತಾನಗಳನ್ನು ರಚಿಸುವಾಗ ವಿದ್ವಾಂಸನು ನಾಶವಾದ (=ಬಿಟ್ಟುಹೋದ) ಸ್ವರವನ್ನು ಎಣಿಸಿಕೊಂಡು, ಈ ಮೂರ್ಛನೆಯು ಇಷ್ಟನೆಯದು ಎಂದು ನಿಶ್ಚಯಿಸಿಕೊಳ್ಳಬೇಕು. (ದತ್ತಿಲಂ, ೩೭)   ೩೩

____

೨೪೫ (ಅ) ನನು ಪ್ರಥಮಾಯಾಂ ಸಪ್ತಮ್ಯಾಂ ಚ ಮೂರ್ಛನಾಯಾಂ ಷಡ್ಜೇ ಲುಪ್ತೇ ರಿಗಮಪಧನೀತಿ ಏಕಮೇವ ರೂಪಂ ಭವತಿ, ತತ್ರ ನ ಜ್ಞಾಯತೇ ವಿಶೇಷಃ | (ಆ) ಸತ್ಯಂ, ಭೇದೋ ನಾಸ್ತಿ | (ಇ) ವಸ್ತುಗಣನೇ ಪುನರಸ್ತ್ಯೇವ ಭೇದಃ, ಮಂದ್ರತಾರಕೃತೋಭೇದಃ |         33

೨೪೬ (ಅ) ಇದಂ ತು ಪ್ರಯೋಕ್ತೃಶ್ರೋತೃಸುಖಾರ್ಥಮೇವ ಮೂರ್ಛನಾತಾನಾನ್ಯತ್ವಮುಕ್ತಮ್‌ |
(ಆ) ತಾನಪ್ರಯೋಜನಮಪಿ ತ್ರಿಸ್ಥಾನಪ್ರಾಪ್ತ್ಯರ್ಥಮಿತ್ಯುಕ್ತಮ್‌ |                                                                 34

೨೪೭ (ಅ) ನನು ಮೂರ್ಛನಾಸ್ತಾವಜ್ಜಾತಿರಾಗೇಷೂಪಯೋಗಿನ್ಯ ಇತಿ ಯುಕ್ತಂ ತಾಸಾಂ ಕಥನಮ್‌ | (ಆ) ತಾನಾಸ್ತು ಕುತ್ರೋಪಯುಜ್ಯತೇ? (ಇ) ಉಚ್ಯತೇ – ದ್ವಯೋರ್ಗ್ರಾಮಯೋರ್ಜಾತಿರಾಗಾನ್ಯತ್ವಪ್ರತಿಪಾದನಾರ್ಥಂ ಪ್ರಯೋಗಸ್ತಾನಾನಾಮ್‌ | (ಈ) ಯದ್ವಾ ನಷ್ಟೋದ್ದಿಷ್ಟಸಂಖ್ಯಾಸಿಧ್ಧ್ಯರ್ಥಂ ಪ್ರಯೋಗಸ್ತಾನಾನಾಮ್ |                                                                   35

೨೪೮ (ಅ) ಕೂಟತಾನಾನಾಂ ಸಹಪ್ರಾಣಿ ಪಂಚ ತ್ರಯಸ್ತ್ರಿಂಶದಧಿಕಾನಿ ನಿಷ್ಪದ್ಯಂತೇ | (ಆ) ದತ್ತಿಲೇನಾಪ್ಯುಕ್ತಮ್‌- 36

೨೪೯   ‘ಪೂರ್ಣಾಃ ಪಂಚಸಹಸ್ರಾಣಿ ತ್ರಯಸ್ತ್ರಿಂಶಚ್ಚ ಸಂಖ್ಯಯಾ |
ಕಥಯಂತಿ ಪ್ರತಿಗ್ರಾಮಮುಪಾಯೋ ಗಣನೇsಧುನಾ’ || ೩೪ ||

೨೫೦ (ಅ) ಗಣನಾsತ್ರ ಪರೇಣ ತಾನಪ್ರಯೋಗೇಣ ಪೂರ್ವಸ್ತಾನಪ್ರಯೋಗೋ ಹನ್ಯತೇ | (ಆ) ತಥಾ ಚಾಹ ದತ್ತಿಲಃ- 37

೨೫೧ ಹನ್ಯಾದನಂತರಾಯೇಣ ಪೂರ್ವಾ ಯಸ್ಯ ಕ್ರಮೋತ್ಕ್ರಮಾತ್‌ |
ಗುಣಕಾರಸಮಾಸ್ತತ್ರ ಕ್ರಮಾಃ ಶೇಷಾಃ ಸ್ಯುರುತ್‌ಕ್ರಮಾಃ || ೩೫ ||

ಪಾಠವಿಮರ್ಶೆ : ೨೪೬ಅ ೨೪೭ಅ,ಆ,ಈ ೨೪೮ಅ ೨೪೯ಅ,ಈ ೨೫೦ಅ ೨೫೧ಅ

—-

೨೪೫ (ಅ) ಆದರೆ ಮೊದಲನೆಯ ಮತ್ತು ಏಳನೆಯ ಮೂರ್ಛನೆಯಲ್ಲಿ ಷಡ್ಜವು ಲೋಪವಾಗಿರುವಾಗರಿಗಮಪಧನಿ ಎಂಬ ಒಂದೇ ರೂಪವು ಉಂಟಾಗುತ್ತದೆ; ಅದರಲ್ಲಿ (ಯಾವ ಸ್ಥಾನದ ಮೂರ್ಛನೆಯೆಂದು ನಿಶ್ಛಯಿಸಲು ಸಹಾಯಕವಾದ) ಯಾವ ವಿಶೇಷ (ಲಕ್ಷಣ)ವೂ ತಿಳಿಯುವುದಿಲ್ಲವಲ್ಲ? (ಆ) ನಿಜ; ಇಲ್ಲಿ ಭೇದವಿಲ್ಲ. ಆದರೆ. ವಸ್ತು (=ಸ್ವರ)ಗಳನ್ನು ಎಣಿಸುವಾಗ ಭೇದವಿದೆ; ಮಂದ್ರ (ಸ್ಥಾನ) – ತಾರ(ಸ್ಥಾನ) ಎಂದು ಮಾಡಿದ ಭೇದವೂ ಇದೆ.                                                                                                          33

೨೪೬ (ಅ) ಈ ಮೂರ್ಛನೆ-ತಾನಗಳು ಬೇರೆ ಬೇರೆಯೆಂಬುದನ್ನು ಹಾಡಿ ನುಡಿಸುವವರ – ಕೇಳುವವರ ಅನುಕೂಲಕ್ಕಾಗಿ ಹೇಳಲಾಯಿತು. (ಆ) ಮೂರು ಸ್ಥಾನಗಳನ್ನು ಪಡೆಯುವುದೇ ತಾನಗಳ (ನ್ನು ವಿವರಿಸಿದ್ದರ) ಪ್ರಯೋಜನ ಎಂದು ಹೇಳಲಾಗಿದೆ.                         34

೨೪೭ (ಅ) ಜಾತಿ(ಗಳಲ್ಲಿ) ಮತ್ತು ರಾಗಗಳಲ್ಲಿ ಉಪಯೋಗವಾಗುತ್ತವೆ ಎಂದು ಮೂರ್ಛನೆಗಳನ್ನು ಹೇಳಿದ್ದೇನೋ ಯುಕ್ತವಾಗಿದೆ. ಆದರೆ ತಾನಗಳು ಎಲ್ಲಿ ಉಪಯೋಗಕ್ಕೆ ಬರುತ್ತವೆ? (ಇ) (ಇದನ್ನು) ಹೇಳಲಾಗುವುದು- ಎರಡೂ ಗ್ರಾಮದಗಳಲ್ಲಿ ಜಾತಿಗಳೂ ರಾಗಗಳೂ ಬೇರೆ ಬೇರೆ ಎಂಬುದನ್ನು ತಿಳಿಸುವುದಕ್ಕಾಗಿ ತಾನಗಳ ಪ್ರಯೋಗವಿದೆ ಅಥವಾ ನಷ್ಟ, ಉದ್ದಿಷ್ಟ, ಸಂಖ್ಯಾ (ಎಂಬ ಷಟ್‌ಪ್ರತ್ಯಯ) ಗಳು ಸಿದ್ಧಪಡುತ್ತವೆ ಎಂದೂ ತಾನಗಳ ಪ್ರಯೋಜನವಿದೆ. 35

೨೪೮ (ಅ) ಕೂಟತಾನಗಳು (ಒಟ್ಟು) ಐದು ಸಾವಿರದ ಮೂವತ್ತಮೂರು ಆಗುತ್ತವೆ. (ಆ) ಈ ವಿಷಯದಲ್ಲಿ ದತ್ತಿಲನ್ನು (ಹೀಗೆ) ಹೇಳಿದ್ದಾನೆ –           36

೨೪೯ (ಏಳೂ ಸ್ವರಗಳಿರುವ) ಪೂರ್ಣತಾನಗಳು ಪ್ರತಿಯೊಂದು ಗ್ರಾಮದಲ್ಲಿಯೂ ಐದು ಸಾವಿರದ ಮೂವತ್ತಮೂರು ಸಂಖ್ಯೆಯಷ್ಟು ಇವೆ ಎಂದು ಬಲ್ಲವರು ಎಣಿಸಿಹೇಳುತ್ತಾರೆ.                                                                                                           ೩೪

೨೫೦ (ಅ) ಇಲ್ಲಿ (=ತಾನಗಳ ವಿಷಯದಲ್ಲಿ) ಎಣಿಕೆಯು (ಹೀಗಿದೆ)- ಮುಂದಿನ ತಾನ ಪ್ರಯೋಗದಿಂದ (=ಮುಂದಿನ ತಾನಗಳಲ್ಲಿರುವ ಸ್ವರಗಳ ಸಂಖ್ಯೆಯಿಂದ) ಹಿಂದಿನ ತಾನ ಪ್ರಯೋಗವನ್ನು (ಎಂದರೆ ಹಿಂದಿನ ತಾನದಲ್ಲಿರುವ ಸಂಖ್ಯೆಯನ್ನು) ಗುಣಿಸಬೇಕು. (ಆ) (ಈ ವಿಷಯದಲ್ಲಿ) ದತ್ತಿಲನು ಹೀಗೆ ಹೇಳಿದ್ದಾನೆ :                                                                                                           37

೨೫೧ (ತಾತ್ಪರ್ಯ:) (ಒಂದು), ಎರಡು, ಮೂರು ….. ಏಳು ಎಂಬ ಸಂಖ್ಯೆಯ ಸ್ವರಗಳನ್ನುಳ್ಳ ತಾನಗಳಲ್ಲಿ ಕ್ರಮವಾಗಿ) (ಹಿಂದು) ಹಿಂದಿನ ತಾನದ ಸ್ವರ ಸಂಖ್ಯೆಯನ್ನು (ಮುಂದು) ಮುಂದಿನದರ ಸಂಖ್ಯೆಯಿಂದ ಗುಣಿಸಬೇಕು. (ಪ್ರತಿಯೊಂದು ಹಂತದಲ್ಲಿಯೂ ದೊರೆತ) ಅಯಾ ಗುಣಲಬ್ಧವು ಅಲ್ಲಿಯವರೆಗೆ ತೆಗೆದುಕೊಂಡ ಎಲ್ಲಾ ತಾನಗಳ ಕ್ರಮಗಳನ್ನೂ ವ್ಯುತ್ಕ್ರಮಗಳೆನ್ನೂ ಒಳಗೊಂಡಿರುತ್ತದೆ. ಅಯಾ ಗುಣಕವು ಅಲ್ಲಿಯವರೆಗೆ ತೆಗೆದುಕೊಂಡು ಎಲ್ಲ ತಾನಗಳ ಒಟ್ಟು ಕ್ರಮಗಳನ್ನು ಸೂಚಿಸುತ್ತದೆ. ಆಯಾ ಗುಣಲಬ್ಧದಲ್ಲಿ ಆಯಾ ಗುಣಕವನ್ನು ಕಳೆದರೆ ಉಳಿಯುವುದು ಅಯಾ ಎಲ್ಲಾ ತಾನಗಳ ಎಲ್ಲಾ ವ್ಯುತ್ಕ್ರಮಗಳ ಒಟ್ಟು ಸಂಖ್ಯೆ. (‘ಕ್ರಮ’ವೆಂದರೆ ಆಯಾ ತಾನದಲ್ಲಿರುವ ಎಲ್ಲ ಸ್ವರಗಳನ್ನು ಆರೋಹಣಕ್ರಮದಲ್ಲಿ ವ್ಯವಸ್ಥೆಗೊಳಿಸಿದ ಮೂಲ ಸಂಯೋಜನ

____

೨೫೨ (ಅ) ಇದಾನೀಂ ಗುಣನೋಪಾಯಂ ಕಥಯತಿ – (ಆ) ದ್ವಾಭ್ಯಾಂ ಪರಾಭ್ಯಾಮೇಕಃ ಪೂರ್ವೋ ಹನ್ಯೇತ ದ್ವಾವೇವ ಭವತಃ | (ಇ) ತೌ ಚ ದ್ವೌ ತ್ರಿಭಿರ್ಹತೌ ಷಟ್‌ಭವತಃ | (ಈ) ತೇ [ಚ ಷಟ್‌] ಚತುರ್ಹತಾಶ್ಚತುರ್ವಿಂಶತಿರ್ಭವಂತಿ | (ಉ) ಸಾ ಚತುರ್ವಿಂಶತಿಃ ಪಂಚಭಿರ್ಹತಾ ಶತಂ ವಿಂಶತ್ಯಧಿಕಂ ಭವತಿ | (ಊ) ವಿಂಶತ್ಯಧಿಕಂ ಶತಂ ಷಡ್ಭಿರ್ಹತಂ ಶತಾನಿ ಸಪ್ತ ವಿಂಶತ್ಯಧಿಕಾನಿ ಭವತಿ | (ಋ) ತಾನಿ ಸಪ್ತಭಿರ್ಹತಾನಿ ಪಂಚಸಹಸ್ರಾಣಿ ಚತ್ವಾರಿಂಶದಧಿಕಾನಿ ಭವಂತಿ |                                                                                                            38

೨೫೩ (ಅ) ತತ್ರ ಕ್ರಮಕೃತಾಂಸ್ತಾನ್‌ ಸ್ಫೋಟಯಿತ್ವಾ ಹ್ಯುತ್ಕ್ರಮಕೃತಾನಿ ಕೂಟತಾನಾನಾಂ ಸಪ್ತಸ್ವರಪ್ರಯೋಗಾತ್‌ ಪಂಚಸಹಸ್ರಾಣಿ ತ್ರಯಸ್ತ್ರಿಂಶದಧಿಕಾನಿ ಭವಂತಿ | (ಆ) ಪ್ರಸ್ತಾರೋ ಯಥಾ-                                                                          39

೨೫೪ (ಅ) ತತ್ರ ಷಡ್ಜಜಸ್ವರಸ್ಯ ಸ ಇತ್ಯೇಕಃ ಕ್ರಮಃ | (ಆ) ಋಷಭಸ್ಯ ಸರೀತ್ಯೇಕ ಏವ ಕ್ರಮಃ | (ಇ) ರಿಸ ಇತಿ ಚ ವ್ಯುತ್‌ಕ್ರಮೋ ದ್ವೀತೀಯಃ | (ಈ) ಗಾಂಧಾರಸ್ಯ ಸರಿಗೇತ್ಯೇಕಃ ಕ್ರಮಃ | (ಉ) ಗರಿಸೇತ್ಯಾದಯೋ ವ್ಯುತ್‌ಕ್ರಮಾಃ ಪಂಚ | (ಊ) ಗರಿಸ ಗಸರಿ ರಿಗಸ [ರಿಸಗ] ಸಗರಿ ಇತಿ ವ್ಯುತ್‌ಕ್ರಮೇಣ ಕೂಟತಾನಾಃ ಪಂಚ | (ಋ) ತದೇವಂ ಗಾಂಧಾರಸ್ಯ ಷಟ್‌ತಾನಾಃ |                                                                 40

೨೫೫ (ಅ) ಏವಂ ಮಧ್ಯಮಸ್ಯ ಸರಿಗಮೇತ್ಯೇಕಃ ಕ್ರಮಃ | (ಆ) ಮಗರಿಸೇತ್ಯೇವಮಾದಯಸ್ತ್ರಯೋವಿಂಶತಿರುತ್‌ಕ್ರಮಾಃ | (ಇ) ತದ್ಯಥಾ- ಮಗರಿಸ, ಮಗಸರಿ, ಮರಿಗಸ, ಮರಿಸಗ, ಮಸಗರಿ, ಮಸರಿಗ ಇತಿ ಮಧ್ಯಮಪೂರ್ವಾಃ ಷಟ್‌ತಾನಾಃ ವ್ಯುತ್‌ಕ್ರಮಕೃತಾಃ | (ಈ) ಏವಂ ಗಾಂಧಾರರ್ಷಭಷಡ್ಜಾನಾಂ ಪ್ರತ್ಯೇಕಂ ಷಟ್‌ತಾನಾ ಭವಂತಿ, ಮಿಲಿತ್ವಾ ಚತುರ್ವಿಂಶತಿರ್ಭವಂತಿ |                                                              41

೨೫೬ (ಅ) ಏವಂ ಪಂಚಮಸ್ಯ ಸರಿಗಮಪೇತ್ಯೇಕ ಏವ ಕ್ರಮಃ | (ಆ) ಪಮಗರಿಸೇತ್ಯಾದಿ ವ್ಯುತ್ಕ್ರಮಕೂಟತಾನಾನಾಂ ಶತಮೇಕೋನವಿಂಶತಿರ್ಭವಂತಿ (ಇ) ತದ್ಯಥಾ- ಸರಿಗಮಪ, ಪಮಗರಿಸ; ಪಮಗರಿಸಾನಾಂ ಪ್ರತ್ಯೇಕಂ ಚತುರ್ವಿಂಶತಿರ್ಭವಂತಿ, ಮಿಲಿತ್ವಾ ವಿಂಶತ್ಯಧಿಕಂ ಶತಂ ಭವತಿ | (ಈ) ಏವಂ ಧೈವತಸ್ಯ ಸರಿಗಮಪಧೇತ್ಯೇಕಃ ಕ್ರಮಃ | (ಉ) ಧಪಮಗರಿಸೇತಿ ವ್ಯುತ್ಕ್ರಮಃ | (ಊ) ಧಪಮಗರಿಸಾನಾಂ ಪ್ರತ್ಯೇಕಂ ವಿಂಶತ್ಯಧಿಕಂ [ಶತಂ] ಭವತಿ, ಮಿಲಿತ್ವಾ

ಪಾಠವಿಮರ್ಶೆ : ೨೫೨ಆ,ಇ,ಊ ೨೫೪ಇ,ಈ,ಉ,ಊ ೨೫೫ಆ

—-

 

____

ಸಪ್ತಶತಾನಿ ವಿಂಶತ್ಯಧಿಕಾನಿ ಭವಂತಿ | (ಋ) ಏವಂ ನಿಷಾದಸ್ಯಾಪಿ ಸರಿಗಮಫದನೀತ್ಯೇಕಃ ಕ್ರಮಃ | (ಋ) ನಿಧಪಮಗರಿಸೇತಿ ವ್ಯುತ್ಕ್ರಮಃ | (ಎ) ನಿಧಪಮಗರಿಸಾನಾಂ ಪ್ರತ್ಯೇಕಂ ಸಪ್ತಶತಾನಿ ವಿಂಶತ್ಯಧಿಕಾನಿ ಭವಂತಿ, ಮಿಲಿತ್ವಾ ಪಂಚಸಹಸ್ರಾಣಿ ಚತಾರಿಂಶಚ್ಚ ಭವಂತಿ |    42

೨೫೭ (ಅ) ತದೇವಮೇತೇಷಾಂ ಸ್ವರಾಣಾಂ ತಾನವಿಧಾನಂ ಷಟ್‌ಷಷ್ಟಿತಂತ್ಯ್ರಾಂ ಶತತಂತ್ಯ್ರಾಂ ಚೋಪಲಭ್ಯತೇ | (ಆ) ತಯೋಃ ಸ್ವಮಾನಾನಿ ಮಧ್ಯಮಾದೀನಿ |                                                                                                                            43

೨೫೮ (ಅ) [ತತ್ರ] ಕೂಟತಾನಭೇದಪ್ರದರ್ಶಮಿಹ ನ ಕೃತಮತಿಪ್ರಸಂಗನಿವೃತ್ತ್ಯರ್ಥಮ್‌ | (ಆ) ಏನೇನೈವ ಕ್ರಮೇಣ ಬುದ್ಧಿಮದ್ಭಿಃ ಸ್ವಯಮೇವ ಲಕ್ಷಣೀಯಮಿತಿ |                                                                                                                             44

೨೫೯ (ಅ) ತದೇಷಾಂ ತಾನಾನಾಂ ಪ್ರಯೋಜನಂ [ಸ್ಥಾನ] ಪ್ರಾಪ್ತ್ಯರ್ಥಮುಕ್ತಮ್‌ | (ಆ) ಸ್ಥಾನಾನಿ ತ್ರೀಣ್ಯುಕ್ತಾನಿ ಕಾಕುವಿಧೌ, ವ್ಯಸ್ತಾನಿ ಷಟ್‌ಷಷ್ಟಿಂ ವಿದ್ಯಾ(ನ್‌) ಮಂದ್ರಾದಿ ಸಿದ್ಧಯೇ |                                                                                                     45

೨೬೦ (ಅ) ತಸ್ಮಾದ್‌ ಯತ್‌ ಕಿಂಚಿದ್‌ ಗೀಯತೇ ತನ್ಮಧ್ಯಮಧ್ವನಿವಿಶೇಷೈಃ ಕಂಠಧ್ವನಿಭಿರ್ಮಂದ್ರತಾರವ್ಯವಸ್ಥಾಸಿಧ್ಧ್ಯರ್ಥಮೇವ |    46

೨೬೧   ಚತುರ್ವಿಧಾ ಮಯಾ ಪ್ರೋಕ್ತಾಃ ಮೂರ್ಛನಾ ಸಪ್ತಸ್ವರಾತ್ಮಿಕಾಃ |
ಇದಾನೀಂ ತು ಪ್ರವಕ್ಷ್ಯಾಮಿ ದ್ವಾದಶಸ್ವರಮೂರ್ಛನಾಃ || ೩೬ ||

೨೬೨ (ಅ) ತತ್ರ ಮೂರ್ಛನಾನಿರ್ದೇಶಃ ಸ್ಥಾನತ್ರಿತಯಪ್ರಾಪ್ತ್ಯರ್ಥಮಿತಿ ವಚನಾತ್‌, ಮಂದ್ರತಾರಸಿದ್ಧ್ಯರ್ಥಮಿತಿ ವಚನಾಚ್ಚ ದ್ವಾದಶಸ್ವರಸಂಪನ್ನಾ ಮೂರ್ಛನಾ ದ್ರಷ್ಟವ್ಯಾಃ ಪ್ರಯೋಗಕಾಲೇ | (ಆ) ತಥಾ ಚಾಹ ಕೋಹಲಃ- 47

೨೬೩ ಯೋಜನೀಯೋ ಬುಧೈರ್ನಿತ್ಯಂ ಕ್ರಮೋ ಲಕ್ಷ್ಯಾನುಸಾರತಃ |
ಸಂಸ್ಥಾಪ್ಯ ಮೂರ್ಛನಾಂ ಜಾತಿರಾಗಭಾಷಾದಿಸಿದ್ಧಯೇ || ೩೭ ||

ಪಾಠವಿಮರ್ಶೆ : ೨೫೭ಅ,ಆ ೨೫೯ ಅ, ಆ ೨೬೧ಇ, ಈ ೨೬೩ಅ-ಈ

—-

ಒಂದು ಕ್ರಮ. (ೠ) ನಿಧಪಮಗರಿಸ ಎಂಬುದು ವೃತ್ಕ್ರಮ. (ಏ) ನಿ-ಧ-ಪ-ಮ-ಗ-ರಿ-ಸ ಗಳ ಪೈಕಿ ಪ್ರತಿಯೊಂದಕ್ಕೂ ಏಳುನೂರಇಪ್ಪತ್ತು (ತಾನಗಳು) ಆಗುತ್ತವೆ; (ಇವುಗಳನ್ನು) ಕೂಡಿಸಿದರೆ ಐದು ಸಾವಿರದ ನಲವತ್ತು (ತಾನಗಳು) ಆಗುತ್ತವೆ.                                  42

೨೫೭ (ಅ) ಇವೇ ಸ್ವರಗಳ ತಾನಪ್ರಯೋಗದ ವಿಧಾನವು ಅರವತ್ತಾರು ತಂತಿಗಳ ಮತ್ತು ನೂರು ತಂತಿಗಳ [ವೀಣೆಗಳ]ಲ್ಲಿ ದೊರೆಯುತ್ತದೆ. (ಆ) ಇವೆರಡರ (=ಈ ವೀಣೆಗಳ) ಸ್ವ-ಮಾನವು (ಅಳತೆ ? ವಾಸಸ್ಥಾನ ? ಪ್ರಮಾಣ ? ಪ್ರಾತ್ಯಕ್ಷಿಕ ಉದಾಹರಣೆ? ) ಮಧ್ಯಮಾದಿ (ಕಿರಿದಲ್ಲದ – ದೊಡ್ಡದಲ್ಲದ ? ಮಧ್ಯಮ ಸ್ವರ? ಮಧ್ಯಮಾದಿ ರಾಗ?) ಗಳು. 43

೨೫೮ (ಅ) ಕೂಟತಾನಭೇದಗಳ ಪ್ರದರ್ಶನವನ್ನು (=ಪ್ರಸ್ತಾರವನ್ನು) (ಈ ವೀಣೆಗಳಲ್ಲಿ) ಹೇಳದಿರುವುದು ಅತಿಪ್ರಸಂಗ (=ಶಾಸ್ತ್ರದಲ್ಲಿ ಅತಿಪ್ರೀತಿ / ಅಸಂಬದ್ದಪ್ರವಾಪ)ವನ್ನು ಮಾಡ ದಿರೋಣವೆಂದು. ಬುದ್ಧಿವಂತರು ಇದನ್ನು ತಾವೇ (ಇವುಗಳಲ್ಲಿ ಇದೇ ಕ್ರಮದಿಂದಮಾಡಿ) ಕಂಡುಕೊಳ್ಳಲಿ, ಎಂದು.                                                                                                                                         44

೨೫೯ (ಅ) ಈ ತಾನಗಳ ಪ್ರಯೋಜನವು (ಸ್ಥಾನಗಳನ್ನು) ಪಡೆದುಕೊಳ್ಳವುದು ಎಂದು (ಮೇಲೆ) ಹೇಳಿದೆ. (ಆ) ಕಾಕುಪ್ರಯೋಗವನ್ನು ವಿಧಿಸುವಲ್ಲಿ (ಕಾಕುವಿಧಾನವೆಂಬ ಅಧ್ಯಾಯದಲ್ಲಿ ಭರತನು) ಮೂರು ಸ್ಥಾನಗಳನ್ನು ಹೇಳಿದ್ದಾಗಿದೆ. ಮಂದ್ರವೇ ಮೊದಲಾದ (ಮೂರು) ಸ್ಥಾನಗಳನ್ನು ಪಡೆಯಬೇಕಾದರೆ ಅವುಗಳನ್ನು (ಕಾಕುಗಳನ್ನು? ಶ್ರುತಿಸ್ಥಾನಗಳನ್ನು) ಬೇರೆ ಬೇರೆಯಾಗಿ ಅರವತ್ತಾರೆಂದು ತಿಳಿಯಬೇಕು.    45

೨೬೦ (ಅ) ಆದುದರಿಂದ ಏನನ್ನೆಲ್ಲ (ತಾನಗಳನ್ನು) ಕಂಠಧ್ವನಿಗಳಾದ ಮಧ್ಯಮ[ಸ್ಥಾನ] ವಿಶೇಷಗಳಿಂದ (=ಪ್ರತ್ಯೇಕ ವ್ಯಕ್ತಿತ್ವವುಳ್ಳ ಸ್ವರಗಳಿಂದ) ಹಾಡಲಾಗುತ್ತದೋ ಅದು ಮಂದ್ರ (ಮತ್ತು) ತಾರ (ಸ್ಥಾನ)ಗಳ (ಗಾಯನ) ವ್ಯವಸ್ಥೆಯು ಸಿದ್ಧಿಸಲಿ ಎಂಬುದಕ್ಕಾಗಿಯೇ (ಎಂದು ತಿಳಿದುಕೊಳ್ಳಬೇಕು).                                                                                                                        46

೨೬೧ ಇದುವರೆಗೆ ನಾನು ಏಳು ಸ್ವರಗಳ ಮೂರ್ಛನೆಗಳನ್ನು ನಾಲ್ಕು ವಿಧಗಳನ್ನು ಹೇಳಿದ್ದಾಯಿತು. ಈಗಲಾದರೋ ಹನ್ನೆರಡು ಸ್ವರಗಳ ಮೂರ್ಛನೆಗಳನ್ನು ವಿವರಿಸುತ್ತೇನೆ.                                                                                                       ೩೬

೨೬೨ (ಅ) ಈ ವಿಷಯದಲ್ಲಿ, ಮೂರ್ಛನೆಗಳನ್ನು ಹೇಳಿರುವುದು <ನಿರ್ದೇಶ> ಮೂರು ಸ್ಥಾನಗಳನ್ನು ಪಡೆಯಲೋಸುಗ ಎಂಬ (ಭರತನ) ಮಾತಿನಿಂದಲೂ, ಮಂದ್ರ (ಮತ್ತು) ತಾರ ಸ್ಥಾನಗಳನ್ನು ಪಡೆಯಲೋಸುಗ ಎಂಬ ಮಾತಿನಿಂದಲೂ, ಗಾಯನವಾದನ ಸಮಯದಲ್ಲಿ ಹನ್ನೆರಡು ಸ್ವರಗಳನ್ನುಳ್ಳ ಮೂರ್ಛನೆಗಳನ್ನು ಪರೀಕ್ಷಿಸಬೇಕು. (ಈ ವಿಷಯದಲ್ಲಿ) ಕೋಹಲನು ಹೀಗೆ ಹೇಳಿದ್ದಾನೆ.            47

೨೬೩ ಜಾತಿ, ರಾಗ ಮತ್ತು ಭಾಷಾ (ರಾಗಗಳು) ಸಿದ್ಧಿಸುವುದಕ್ಕಾಗಿ ವಿದ್ವಾಂಸರು (ಆಯಾ) ಮೂರ್ಛನೆಯನ್ನು (ಮೊದಲು) ನೆಲೆಗೊಳಿಸಿ (ಅದರ) ಕ್ರಮವನ್ನು ಲಕ್ಷ್ಯಕ್ಕೆ ಅನುಸಾರವಾಗಿ ಯಾವಾಗಲೂ ಯೋಜಿಸಿಕೂಳ್ಳಬೇಕು.                                                   ೩೭

____

 

____

೨೬೯ ನಿ ಸ ರಿ ಗ ಮ ಪ ಧ ನಿ ಸ ರಿ ಗ ಮ | ಸೌವೀರೀ (೧)

ಸ ರಿ ಗ ಮ ಪ ಧ ನಿ ಸ ರಿ ಗ ಮ ಪ | ಹರಿಣಾಶ್ವಾ (೨)

ರಿ ಗ ಮ ಪ ಧ ನಿ ಸ ರಿ ಗ ಮ ಪ ಧ | ಕಲೋಪನನಾ (೩)

ಗ ಮ ಪ ಧ ನಿ ಸ ರಿ ಗ ಮ ಪ ಧ ನಿ | ಶುದ್ಧಮಧ್ಯಾ (೪)

ಮ ಪ ಧ ನಿ ಸ ರಿ ಗ ಮ ಪ ಧ ನಿ ಸ | ಮಾರ್ಗೀ (೫)

ಪ ಧ ನಿ ಸ ರಿ ಗ ಮ ಪ ಧ ನಿ ಸ ರಿ | ಪೌರವೀ (೬)

ಧ ನಿ ಸ ರಿ ಗ ಮ ಪ ಧ ನಿ ಸ ರಿ ಗ | ಹೃಷ್ಯಕಾ (೭)

|| ಇತಿ ಮಧ್ಯಮಗ್ರಾಮೇ || 52

(ಇತಿ ಗ್ರಾಮಮೂರ್ಛನಾತನಪ್ರಕರಣಮ್‌ | )