೪೨೫   (ಅ) ಇದಾನೀಂ ದಶವಿಧಲಕ್ಷಣಮಾಹ-                                                                                         10

೪೨೬   ಗ್ರಹಾಂಶೌ ತಾರಮಂದ್ರೌ ಚ ಷಾಡವೌಡುವಿತೇ ತಥಾ |
ಅಲ್ಪತ್ವಂ ಚ ಬಹುತ್ವಂ ಚ ನ್ಯಾಸೋ Sಪನ್ಯಾಸ ಏವ ಚ || ೨೩ ||

೪೨೭   ಗೀಯತೇ ತದ್‌ಯಥಾಜಾತಿ ದಶಕಂ ಜಾತಿಲಕ್ಷಣಮ್‌ |
ಲಕ್ಷಣಂ ದಶಕಸ್ಯಾಸ್ಯ ಸಂಕ್ಷೇಪೇಣಾಭಿಧೀಯತೇ || ೨೪ ||

[೧. ಗ್ರಹಲಕ್ಷಣಮ್‌]

೪೨೮ (ಅ) ಅತ್ರಾದೌ ಜಾತ್ಯಾದಿಪ್ರಯೋಗೋ ಗೃಹ್ಯತೇ ಯೇನಾಸೌ ಗ್ರಹಃ, ಸೋS೦ಶವತ್‌ತ್ರಿಷ್ಟಿಭೇದಭಿನ್ನೋ ಬೋದ್ಧವ್ಯಃ | (ಆ) ನನ್ವೇವಂ ಗ್ರಹಾಂಶಯೋಃ ಕೋ ಭೇದ? (ಇ) ಉಚ್ಯತೇ | (ಈ) ಅಂಶೋ ವಾದ್ಯೇವ, ಪರಂ ಗ್ರಹಸ್ತು ವಾದ್ಯಾದಿಭೇದಭಿನ್ನಶ್ಚತುರ್ವಿಧಃ | (ಉ)ಯದ್ವಾ ಪ್ರಧಾನಾಪ್ರಧಾನಕೃತೋ ಭೇದಃ | (ಊ) ಗ್ರಹೋ ಹ್ಯಪ್ರಧಾನಭೂತಃ | (ಋ) ನನು ಕಥಂ ಅಂಶಶ್ಯೈವ ಪ್ರಾಧಾನ್ಯಮ್‌ | (ಎ)ಯದ್ಯಪಿ ಸರ್ವಜಾತೀನಾಂ ಗ್ರಹೋS೦ಶಶ್ಚ ಪ್ರಧಾನೀಭೂತ ಇತ್ಯುತ್ಸರ್ಗಸಿದ್ಧಮ್‌ತಥಾಪಿ ಸಂವಾದ್ಯನುವಾದಿವಿಧಿನಾ ಚೋದ್ಯತೇ |             11

೪೨೯ (ಆ) ತಥಾ ಚಾಹ ಭರತಃ-                                                                                                           12

೪೩೦   ‘‘ಗ್ರಹಸ್ತು ಸರ್ವಜಾತೀನಾಂ ಅಂಶವತ್‌ಪರಿಕೀರ್ತಿತಃ |
ಯಶ್‌ಪ್ರವೃತ್ತಂ ಭವೇದ್‌ಗೇಯಂ ಸೋS0ಶೋ ಗ್ರಹವಿಕಲ್ಪಕಃ” || ೨೫ ||

ಪಾಠ ವಿಮರ್ಶೆ: ೪೨೫ಅ ೪೨೬, ಅಆ, ಅ ೪೨೭ಆ ೪೨೮ ಅ,ಆ,ಈ,ಎ ೪೩೦ಇ,ಆ-ಈ

—-

ಇರುವುದರಿಂದ (ಇವುಗಳು) ಜಾತಿಗಳೆನ್ನಿಸಿಕೊಳ್ಳುತ್ತವೆ. (ಉ) ಮನುಷ್ಯರಲ್ಲಿ ಬ್ರಾಹ್ಮಣ ಮುಂತಾದ (ಶುದ್ಧ ಮತ್ತು ಸಂಕರ) ಜಾತಿಗಳಿರುವಂತೆಯೇ ಈ ಜಾತಿಗಳಲ್ಲಿಯೂ (ಎರಡು ವಿಧಗಳಿವೆ). 9

[ಹೀಗೆ ಜಾತಿಗಳ ಸಾಮಾನ್ಯಲಕ್ಷಣ]

 

[iv. ಜಾತಿಗಳ ಹತ್ತು ವಿಧದ ಲಕ್ಷಣಗಳು]

೪೨೫ (ಅ) ಈಗ [ಜಾತಿಗಳ] ಹತ್ತು ವಿಧದ ಲಕ್ಷಣಗಳನ್ನು (ಗ್ರಂಥಕಾರನು) ಹೇಳುತ್ತಾನೆ-                                      10

೪೨೬ ಗ್ರಹ-ಅಂಶಗಳು, ತಾರ-ಮಂದ್ರಗಳು, ಹಾಗೆಯೇ ಷಾಡವಿತ-ಔಡುವಿತಗಳು, ಅಲ್ಪತ್ವ, ಬಹುತ್ವ, ನ್ಯಾಸ, ಅಪನ್ಯಾಸ-   ೨೩

೪೨೭ ಈ ಹತ್ತನ್ನು ಆಯಾ ಜಾತಿಗೆ ಅನುಗುಣವಾಗಿ ಜಾತಿಲಕ್ಷಣಗಳೆಂದು ಹೇಳಿದೆ. ಈ ಹತ್ತರ ಲಕ್ಷಣವನ್ನು (ಈಗ) ಸಂಕ್ಷೇಪವಾಗಿ (ಕ್ರಮವಾಗಿ) ಹೇಳಲಾಗುವುದು.                                                                                                                           ೨೪

[೧. ಗ್ರಹಲಕ್ಷಣ]

೪೨೮ (ಅ) ಇವುಗಳ ಪೈಕಿ ಮೊದಲನೆಯದಾಗಿ ಜಾತಿಯೇ ಮೊದಲಾದುದರ ಗಾಯನ/ವಾದನಪ್ರಸ್ತುತಿಯನ್ನು <ಪ್ರಯೋಗ> ಯಾವ (ಸ್ವರ)ದಿಂದ ಎತ್ತಿಕೊಳ್ಳಲಾಗುತ್ತದೋ ಅದು ಗ್ರಹ; ಅದು ಅಂಶದಂತೆಯೇ ಅರವತ್ತುಮೂರು ಭೇದಗಳಿಂದಾಗಿ ಬೇರೆ ಬೇರೆಯಾಗಿದೆಯೆಂಬುದನ್ನು ಅರಿತುಕೊಳ್ಳಬೇಕು. (ಆ) [ಆಕ್ಷೇಪ:] ಹಾಗಾದರೆ ಗ್ರಹ-ಅಂಶಗಳಲ್ಲಿ ವ್ಯತ್ಯಾಸವೇನು? (ಇ)[ಉತ್ತರವನ್ನು]ಹೇಳಲಾಗುವುದು: (ಈ)ಅಂಶವು ವಾದಿ (ಸ್ವರ)ಮಾತ್ರವೇ, ಆದರೆ ಗ್ರಹವು ವಾದಿಯೇ ಮೊದಲಾದ (=ವಾದಿ, ಸಂವಾದಿ, ಅನುವಾದಿ, ವಿವಾದಿ) ಭೇದಗಳಿಂದಾಗಿ ನಾಲ್ಕು ವಿಧವಾಗಿರುತ್ತದೆ. (ಉ)ಅಥವಾ (ಅವುಗಳಲ್ಲಿ)ಮುಖ್ಯ-ಅಮುಖ್ಯವೆಂಬ ವ್ಯತ್ಯಾಸವಿದೆ. (ಊ) ಗ್ರಹವು ಮುಖ್ಯವಲ್ಲದ್ದು. (ಋ) [ಆಕ್ಷೇಪ:] ಹಾಗಾದರೆ ಅಂಶಕ್ಕೇ ಪ್ರಾಧಾನ್ಯವನ್ನು ಹೇಗೆ (=ಏಕೆ) ಹೇಳಬಹುದು? (ೠ)ರಾಗ(ಭಾವ)ವನ್ನು ಹುಟ್ಟಿಸುವುದರಿಂದಲೂ (ರಾಗದ) ಎಲ್ಲೆಡೆಯಲ್ಲಿಯೂ ವ್ಯಾಪಿಸಿಕೊಂಡಿರುವುದರಿಂದಲೂ ಅಂಶ(ಸ್ವರ)ದ್ದೇ ಪ್ರಾಧಾನ್ಯ(ವನ್ನು ಹೇಳಿದೆ). (ಎ) ಎಲ್ಲಾ ಜಾತಿಗಳಲ್ಲಿಯೂ ಗ್ರಹವೂ ಅಂಶವೂ ಪ್ರಧಾನಭೂತವಾದದ್ದೆಂದು ಸಾಮಾನ್ಯವಿಧಿಯಿಂದ ಸಿದ್ಧವಾಗುತ್ತದೆ; ಆಧರೂ ಅಧನ್ನು ಸಂವಾದಿ ಮತ್ತು ಅನುವಾದಿಗಳನ್ನು ಪ್ರಯೋಗಿಸುವಲ್ಲಿ ವಿಧಿಸಿದೆ.                                                                                                                                       11

೪೨೯ (ಅ) [ಈ ವಿಷಯದಲ್ಲಿ] ಭರತನು ಹೀಗೆ ಹೇಳುತ್ತಾನೆ-                                                                       12

೪೩೦ ‘ಎಲ್ಲಾ ಜಾತಿಗಳಲ್ಲಿಯೂ ಗ್ರಹವು ಅಂಶದ ಹಾಗೆಯೇ ಎಂದು ಪರಿಗಣಿತವಾಗಿದೆ. ಹಾಡಬೇಕಾದುದು ಅಥವಾ ನುಡಿಸಬೇಕಾದುದು <ಗೇಯಂ> ಪ್ರಾರಂಭವಾಗುವಾಗ ಅದೇ

____

[೨. ಅಂಶಲಕ್ಷಣಮ್‌]

೪೩೧ (ಅ) ಅಥಾಂಶಃ ಕಥ್ಯತೇ- ಅಂಗವಿಭಾಗಾತ್‌ಸ ದಶವಿಧೋ ಬೋದ್ಧವ್ಯಃ | (ಆ) ಯಸ್ಮಿನ್‌ಕ್ರಿಯಾಮಾಣೇ ರಾಗಾಭಿವ್ಯಕ್ತಿರ್ಭವತಿ ಸೋS0ಶಃ [ಪ್ರಥಮಃ] | (ಇ) ಯಾಸ್ಮಾಚ್ಚಾ [SS] ರಭ್ಯಗೀತಂ ಪ್ರವರ್ತತೇ ಗ್ರಹವಿಕಲ್ಪಿತಃ ಸೋS೦ಶೋ ದ್ವಿತೀಯಃ | (ಈ) ತಾರಮಂದ್ರಾ- ಭಿವ್ಯಕ್ತಿಹೇತುಃ ಸೋ S೦ಶಸ್ತ್‌ಋತೀಯಃ | (ಉ) ಪಂಚಮಸ್ವರಾರೋಹಣಂ ತಾರಃ, ಕದಾಚಿತ್‌ಷಷ್ಠಸ್ವರಾರೋಹಣಮಪಿ ತಾರಃ, ಯಥಾ ಗಾಂಧಾರ್ಯಾಃ ಷಡ್ಜಸ್ತಾರಃ, ನಿಧ ನಿಧ ಸಾ ಇತಿ; ತಾರನಿಯಾಮಕ[:] ತಥಾ ಮಂದ್ರನಿಯಾಮ ಕಸ್ವರೋSಪ್ಯಂಶ[:] ಸಪ್ತಸ್ವರಾವರೋಹಣಾ [ತ್‌] | (ಊ)ಯಥಾ ಪಂಚಮಾಂಶಾಯಾಃ ಷಾಡ್ಜಾಃ ಸಂಸ್ಥಾನೇ ಸಾಸಾಸ್ಥಾ ಇತಿ | (ಋ)ಯಶ್ಚ ಬಹುಪ್ರಯೋಗತರಃ ಸೋSಪ್ಯಂಶಃ [ಚತುರ್ಥಃ] ಯೋ ರಾಗಸ್ಯ ವಿಷಯತ್ವೇನಾವಸ್ಥಿತಃ ಸ್ವರಃ ಸೋ Sಪ್ಯಂಶಃ [ಪಂಚಮಃ] | [ಯಶ್ಚ ಗ್ರಹಾಪನ್ಯಾಸ-ವಿನ್ಯಾಸ-ಸಂನ್ಯಾಸ- ನ್ಯಾಸಗೋಚರಃ, ಸೋSಪ್ಯಂಶಃ ಷಷ್ಠಃ, ಸಪ್ತಮಃ, ಅಷ್ಟಮಃ, ನವಮಃ, ದಶಮಶ್ಚ] |                                                                                           13

[ಅಂಶಲಕ್ಷಣಾಂತರ್ಗತಂ ಅಪನ್ಯಾಸಲಕ್ಷಣಮ್‌]

೪೩೨ (ಅ) ಯತ್ರ ಗೀತಮಿತಿ ಸಮಾಪ್ತಮಿತಿ ಸಂಭಾವ್ಯತೇ, ಸೋSಪನ್ಯಾಸಃ, ಸರ್ವವಿದಾರೀ-ಮಧ್ಯಮೋ ಭವತಿ | (ಆ) ಸಾ ಚ ವಿದಾರೀ ದ್ವಿವಿಧಾ-ಗೀತವಿದಾರೀ ಪದವಿದಾರೀ ಚೇತಿ | (ಇ)ನನು ವಿದಾರೀ ಶಬ್ದೇನ ಕಿಮುಚ್ಯತೇ? (ಈ) ಪಾದಾನಾಂ ವಿದಾರಣಂ ಖಂಡನಮಿತಿ ಯಾವತ್‌ | (ಉ) ಗೀತಪೇಶೀ ಗೀತಖಂಡಮಿತಿ ಯಾವತ್‌ |                                                                                                 14

[ಅಂಶಲಕ್ಷಣಾಂತರ್ಗತಂ ಸಂನ್ಯಾಸಲಕ್ಷಣಮ್‌]

೪೩೩ (ಅ) ಇದಾನೀಂ ಸಂನ್ಯಾಸೋ Sಭಿಧೀಯತೇ-ತತ್ರ ಪ್ರಥಮವಿದಾರೀಮಧ್ಯೇ ನ್ಯಾಸಸ್ವರಃ ಪ್ರಯುಕ್ತಃ ಸಂನ್ಯಾಸಃ ಸೋSಭಿಧೀಯತೇ | (ಆ) ಅಂಶಸ್ಯ ವಿವಾದೀ ಯೋ ನ ಭವತಿ [ಸ]

ಪಾಠ ವಿಮರ್ಶೆ: ೪೩೧ಅ,ಆ,ಇ,ಉ,ಊಈ, ಋ ೪೩೨ಈ,ಉ ೪೩೩ಅ,ಆ

—-

ಅಂಶವೇ ಸಂದರ್ಭಾನುಸಾರವಾಗಿ ಗ್ರಹವಾಗಿ ಮಾರ್ಪಡುತ್ತದೆ (ನಾಶಾ. ೨೮.೬೭:೪೪) ೨೫

[೨. ಅಂಶದ ಲಕ್ಷಣ]

೪೩೧ (ಅ) ಈಗ ಅಂಶವನ್ನು ಹೇಳಲಾಗುವುದು- (ರಾಗವನ್ನು) ಅಂಗಗಳನ್ನಾಗಿ ವಿಭಾಗಿಸುವುದರಿಂದ ಅದು ಹತ್ತು ವಿಧವಾಗಿದೆಯೆಂದು ತಿಳಿಯಬೇಕು. (ಆ) ಯಾವುದನ್ನು ಮಾಡುವುದರಿಂದ ರಾಗ(ಭಾವ)ವು ಪ್ರಕಟವಾಗುತ್ತದೋ ಅದು (ಮೊದಲನೆಯ) ಅಂಶ. (ಇ) ಯಾವುದನ್ನು ಮೊದಲುಮಾಡಿಕೊಂಡು ಹಾಡಿದ್ದು/ನುಡಿಸಿದ್ದು ಮುನ್ನಡೆದು ಗ್ರಹ(ಸ್ವರವು) (ಅಂಶ)ವಾಗಿ ವಿಕಲ್ಪಗೊಳ್ಳುತ್ತದೋ ಅದು ಎರಡನೆಯ ಅಂಶ. (ಈ) ತಾರ(ಸ್ಥಾಯಿ) ಮತ್ತು ಮಂದ್ರ(ಸ್ಥಾಯಿ)ಗಳಲ್ಲಿ (ರಾಗದ) ವ್ಯಾಪ್ತಿಯನ್ನು (ಸೂಚಿಸುವ ಸ್ವರವನ್ನು) ಪ್ರಕಟಪಡಿಸಲು ಕಾರಣವಾಗುವುದು ಮೂರನೆಯ ಅಂಶ. (ಉ) (ಅಂಶದಿಂದ) ಐದನೆಯ ಸ್ವರಕ್ಕೆ ಏರುವುದು ತಾರ, ಕೆಲವೊಮ್ಮೆ ಆರನೆಯ ಸ್ವರಕ್ಕೆ ಏರುವುದೂ ತಾರವೇ- ಹೇಗೆಂದರೆ ಗಾಂಧಾರೀ[ಜಾತಿ]ಯಲ್ಲಿ ತಾರವು ಷಡ್ಜ-ನಿಧ ನಿಧಸಾ ಎಂದು; ತಾರ (ಸ್ವರ)ವನ್ನು ನಿಯಂತ್ರಿಸುವಂತೆಯೇ ಏಳು ಸ್ವರಗಳಷ್ಟು ಇಳಿಯುವುದರ ಮೂಲಕ ಮಂದ್ರ(ಸ್ವರ)ವನ್ನು ನಿಯಂತ್ರಿಸುವುದೂ ಅಂಶವೇ. (ಊ)ಹೇಗೆಂದರೆ ಪಂಚಮವು ಅಂಶವಾಗಿರುವ ಷಾಡ್ಜೀಯಲ್ಲಿ ಷಡ್ಜದೊಡನೆ ಇದ್ದು ಕೊನೆಯಾಗುವ (ಪ್ರಾಂತ್ಯದ) <ಸಂಸ್ಥಾನೆ> (ಧೈವತದ)೦ತೆ-ಸಾಸಾಸಾಧಾ ಎಂದು. (ಋ) ಯಾವುದು (ರಾಗದಲ್ಲಿ) ಬಹುವಾಗಿ ಪ್ರಯೋಗವನ್ನು (=ಹಾಡಿನುಡಿಸುವುದನ್ನು) ಪಡೆಯುತ್ತದೋ ಅದು (ನಾಲ್ಕನೆಯ) ಅಂಶ. ಯಾವುದು ರಾಗದ ಆಸರೆಯಾಗಿ/ವ್ಯವಹಾರಕ್ಕೆ ಆಧಾರವಾಗಿ ಇರುತ್ತದೋ ಅದು (ಐದನೆಯ) ಅಂಶ. [ಯಾವುದು (ರಾಗದಲ್ಲಿ) ಗ್ರಹ, ಅಪನ್ಯಾಸ, ವಿನ್ಯಾಸ, ಸಂನ್ಯಾಸ ಮತ್ತು ನ್ಯಾಸವಾಗಿ ಗೋಚರಿಸುತ್ತದೋ ಅದು (ಕ್ರಮವಾಗಿ) ಆರನೆಯ, ಏಳನೆಯ, ಎಂಟನೆಯ, ಒಂಭತ್ತನೆಯ ಮತ್ತು ಹತ್ತನೆಯ ಅಂಶ.]                                    13

[ಅಂಶಲಕ್ಷಣದ ಒಳಗೆ ಸೇರಿಹೋಗುವ ಅಪನ್ಯಾಸದ ಲಕ್ಷಣ]

೪೩೨ (ಅ) ಯಾವುದರಲ್ಲಿ (ಯಾವ ಸ್ವರದಲ್ಲಿ) ಗೀತದ ಅಳತೆಯು (ನಿಶ್ಚಿತವಾದ) <ಗೀತಮಿತಿ> ಮುಗಿಯಿತೆಂದು ಭಾವಿಸಲಾಗುತ್ತದೋ ಅದು ಅಪನ್ಯಾಸ; (ಅದು) ಎಲ್ಲಾ ವಿದಾರೀಗಳ ಮಧ್ಯದಲ್ಲಿರುತ್ತದೆ. (ಆ) ಆ ವಿದಾರಿಯು ಗೀತವಿದಾರೀ, ಪದವಿದಾರೀ ಎಂದು ಎರಡು ವಿಧವಾಗಿದೆ. (ಇ)[ಶಂಕೆ:]ವಿದಾರೀ ಎಂಬ ಮಾತಿನ ಅರ್ಥವೇನು? (ಈ) (ಗೀತದ) ಪಾದಗಳನ್ನು (ಬೇರೆಬೇರೆಯಾಗುವಂತೆ) ಸೀಳುವುದು (ಅಥವಾ) ಹಾಡಿನ ತುಂಡು, ಅಷ್ಟೆ 14

[ಅಂಶಲಕ್ಷಣದ ಒಳಗೆ ಸೇರಿಹೋಗುವ ಸಂನ್ಯಾಸಸ್ವರದ ಲಕ್ಷಣ]

೪೩೩ (ಅ) ಈಗ ಸಂನ್ಯಾಸ(ಸ್ವರ)ವನ್ನು ನಿರೂಪಿಸಲಾಗುವುದು-ಮೊದಲನೆಯ ವಿದಾರಿಯ ಮಧ್ಯದಲ್ಲಿ ನ್ಯಾಸಸ್ವರ (ಅಂತಿಮವಾಗಿ ಮುಗಿಸುವ ಸ್ವರ)ವನ್ನು ಪ್ರಯೋಗಿಸಿದರೆ ಅದನ್ನು ಸಂನ್ಯಾಸವೆನ್ನುತ್ತಾರೆ.

____

ಪ್ರಥಮವಿದಾರ್ಯಂತೇ ಯದಿ ಪ್ರಯುಕ್ತೋ ಭವತಿ, ತದಾಸೌ ಸಂನ್ಯಾಸ ಇತ್ಯರ್ಥಃ |                                           15

[ಅಂಶಲಕ್ಷಣಾಂತರ್ಗತಂ ವಿನ್ಯಾಸಲಕ್ಷಣಮ್‌]

೪೩೪ (ಅ) ಏಷ ಏವ ತು ಸಂನ್ಯಾಸಸ್ವರಃ ಪದಾಂತೇ ವಿನ್ಯಸ್ತೋ ತದಾ ವಿನ್ಯಾಸಃ |                                             16

೪೩೫ (ಅ) ಅತ ಏವ ಏತದುಕ್ತಂ ಭವತಿ-                                                                                                 17

೧೩೬   “ರಾಗಶ್ಚ ಯಸ್ಮಿನ್‌ವಸತಿ ಯಸ್ಮಾಚ್ಛೈವ ಪ್ರವರ್ತತೇ |
ನೇತಾ ಚ ತಾರಮಂದ್ರಾಣಾಂ ಯೋSತ್ಯರ್ಥಮುಪಲಭ್ಯತೇ” || ೨೬ ||

೪೩೭   “ಗ್ರಹಾಪನ್ಯಾಸವಿನ್ಯಾಸಸಂನ್ಯಾಸನ್ಯಾಸಗೋಚರಃ |
ಅನುವೃತ್ತಶ್ಚ ಯಶ್ಚೇಹ ಸೋS೦ಶಃ ಸ್ಯಾದ್‌ದಶಲಕ್ಷಣಃ” || ೨೭ ||

[೩. ತಾರಲಕ್ಷಣಂ]

೪೩೮ (ಅ) ಇದಾನೀಂ ತಾರಲಕ್ಷಣಮುಚ್ಯತೇ-ಅಂಶಸ್ವರಪ್ರಯೋಗಾದಾರಭ್ಯ ಪಂಚಸ್ವರಪರಾ ತಾರಗತಿಃ | (ಆ) ಕಿಮುಕ್ತಂ ಭವತಿ? (ಇ) ಪಂಚಮಸ್ವರಾರೋಹಣಂ ತಾರ ಇತಿ, ಚತುಃಸ್ವರಾರೋಹಣಂ ತಾರ ಇತಿ [ವಾ]ನಂದಯಂತ್ಯಾಂ ಯಥಾ ಸಾಸಾನಿಧನಾ ಇತಿ, ಪಂಚಮಾಂಶಶ್ವಾತ್‌ಷಡ್ಜಸ್ತಾರಃ | (ಈ) ಆಪಂಚಮಾದಿತಿ ಯೋಜನಾ [ಗಾಂಧಾರ್ಯಾ]ಅಷ್ಟಮ್ಯಾ ವಿದಾರ್ಯಾ ಬೋದ್ಧವ್ಯಾ ಪಂಚಸ್ವರಂ ಯಾವತ್‌ತಾರಾವಧಿಃ | (ಉ) ಯಥಾ ಗಾಂಧಾರ್ಯಾಂ ನಿಧ ನಿಸ ಇತಿ | (ಊ) ವಾಶಬ್ದಾತ್‌ಸಪ್ತಸ್ವರವ್ಯಾಪಿ ತಾರತಾ ಭವತಿ | (ಋ) ತ್ರಿಧಾ ತಾರಗತಿಃ | (ಎ) ತಥಾ ಚಾಹ ಭರತಃ-                                                                                                                 18

ಪಾಠ ವಿಮರ್ಶೆ: ೪೩೪ಅ ೪೩೬ಆ ೪೩೬-೪೩೭ ೪೩೭ಈ ೪೩೮ಆ,ಇ,ಈ,ಊ

—-

(ಆ) ಯಾವ ಸ್ವರವು ಅಂಶಕ್ಕೆ ವಿವಾದಿಯಲ್ಲವೋ ಅದನ್ನು ಮೊದಲನೆಯ ವಿದಾರಿಯ ಕೊನೆಯಲ್ಲಿ ಪ್ರಯೋಗಿಸಿದರೆ ಆಗ ಅದು ಸಂನ್ಯಾಸವೆನ್ನಿಸಿಕೊಳ್ಳುತ್ತದೆ ಎಂಬುದು ಈ ಮಾತಿನ ಅರ್ಥ.                                                                       15

[ಅಂಶಲಕ್ಷಣದ ಒಳಗೆ ಸರಿಹೋಗುವ ವಿನ್ಯಾಸ್ವರದ ಲಕ್ಷಣ]

೪೩೪ (ಅ) ಇದೇ ಸಂನ್ಯಾಸಸ್ವರವನ್ನು [ಒಂದು] ಪದದ ಕೊನೆಯಲ್ಲಿ ನೆಲೆಗೊಳಿಸಿದರೆ ಆಗ (ಅದು) ವಿನ್ಯಾಸ[ವಾಗುತ್ತದೆ].    16

೪೩೫ (ಅ)ಆದುದರಿಂದಲೇ (ಈ ವಿಷಯದಲ್ಲಿ) ಹೀಗೆ ಹೇಳಿದೆ-                                                                    17

೪೩೬ ‘ಯಾವುದರಲ್ಲಿ ರಾಗ(ಭಾವ)ವು ನೆಲೆಸಿದೆಯೋ, ಯಾವುದರಿಂದ (ಅದು) ಮುನ್ನಡೆಯುತ್ತದೋ, ಯಾವುದು ತಾರಮಂದ್ರ(ಸ್ವರ)ಗಳ(ನ್ನು) (ನಿಯಂತ್ರಿಸುವ) ನಾಯಕನಾಗಿರುತ್ತದೋ ಯಾವುದು ಅತ್ಯಧಿಕವಾಗಿ (ರಾಗದಲ್ಲಿ) ದೊರೆಯುತ್ತದೋ-                 ೨೬

೪೩೭ ‘ಯಾವುದು ಗ್ರಹ, ಅಪನ್ಯಾಸ, ವಿನ್ಯಾಸ, ಸಂನ್ಯಾಸ ಮತ್ತು ನ್ಯಾಸ (ಸ್ವರ)ಗಳಾಗಿ ಗೋಚರಿಸುತ್ತದೋ, ಯಾವುದು ಹಿಂದೆಹಿಂದೆ ನಡೆದ ಗಾನ/ವಾದನ ಕ್ರಿಯೆಗಳನ್ನು ಸಂಬಂಧಿಸಿ ನೈರಂತರ್ಯವನ್ನು ಉಂಟುಮಾಡುತ್ತದೋ ಅದು ಇಲ್ಲಿ ಅಂಶವಾಗಿದ್ದು (ಈ) ಹತ್ತು ಲಕ್ಷಣಗಳನ್ನು ಹೊಂದಿದೆ.’ (ನಾ ಶಾ.೨೮.೬೮, ೬೯:೪೪,೪೫; ತುಲಜೇಂದ್ರನಿಂದ ಉದ್ಧೃತಿ)                                                     ೨೭

[೩. ತಾರಲಕ್ಷಣ]

೪೩೮ (ಅ) ಈಗ ತಾರ(ಸ್ವರ)ದ ಲಕ್ಷಣವನ್ನು ಹೇಳಲಾಗುವುದು: ಅಂಶಸ್ವರವನ್ನು ಪ್ರಯೋಗಿಸುವುದರಿಂದ ಮೊದಲುಮಾಡಿಕೊಂಡು ಐದನೆಯ ಸ್ವರದವರೆಗೆ ತಾರ(ಸ್ವರ)ದ ಸಂಚಾರವಿರುತ್ತದೆ. (ಆ) ಏನನ್ನು ಹೇಳಿದಂತಾಯಿತು? (=ಈ ಮಾತಿನ ಅರ್ಥವೇನು?) (ಇ) ಐದನೆಯ ಸ್ವರದ(ವರೆಗೆ) ಏರುವುದು ತಾರ ಎಂದೂ ಅಥವಾ ನಾಲ್ಕನೆಯ ಸ್ವರದ(ವರೆಗೆ) ಏರುವುದೂ ತಾರವೇ ಎಂದೂ (ಇಲ್ಲಿ ಅರ್ಥ): ಹೇಗೆಂದರೆ ನಂದಯಂತೀ[ಜಾತಿ]ಯಲ್ಲಿ ಸಾಸಾನಿಧಸಾ ಎಂದಿದೆ; (ಇಲ್ಲಿ ಪಂಚಮವು ಅಂಶವಾಗಿರುವುದರಿಂದ (ಅದರಿಂದ ನಾಲ್ಕನೆಯದಾದ ಷಡ್ಜವು ತಾರ). (ಈ) (ಅಂಶದಿಂದ) ‘ಐದನೆಯ ಸ್ವರದವರೆಗೆ’ ಎಂಬ ಪದಜೋಡಣೆಯನ್ನು-<ಯೋಜನಾ> ಗಾಂಧಾರೀಯಲ್ಲಿ [ಜಾತಿಯ] ಎಂಟನೆಯ ವಿದಾರಿಯಿಂದ (ಅಲ್ಲಿ ಐದನೆಯ ಸ್ವರವು ತಾರವಾಗಿರುವುದರಿಂದ) ಐದನೆಯ ಸ್ವರದವರೆಗೆ ತಾರದ ಅವಧಿಯಿದೆ ಎಂದು ಅರ್ಥಮಾಡಿಕೊಳ್ಳಬೇಕು. (ಉ) ಹೇಗೆಂದರೆ ಗಾಂಧಾರೀಯಲ್ಲಿ [ತಾರವು] ನಿಧನಿಸ ಎಂಬಲ್ಲಿದೆ. (ಊ) (ಭರತಮುನಿಯ ವಾಕ್ಯದಲ್ಲಿರುವ) ‘ಅಥವಾ’ ಎಂಬ ಮಾತಿನಿಂದ ಏಳು ಸ್ವರಗಳಿಗೂ (-ಗಳ ಅವಧಿಗೂ) ತಾರತ್ವವು ಉಂಟಾಗುತ್ತದೆ. (ಋ) (ಹೀಗೆ) ತಾರ[ಸ್ವರ]ದ ಸಂಚಾರಾವಧಿಯು ಮೂರು ತೆರನಾಗಿದೆ. (ಋ)ಭರತನು (ಈ ವಿಷಯದಲ್ಲಿ) ಹೀಗೆ ಹೇಳುತ್ತಾನೆ.                                                                                                                           18

____

೪೩೯   “ಅಂಶಾತ್ತಾರಗತಿಂ ವಿದ್ಯಾದಾಚತುರ್ಥಸ್ವರಾದಿಹ |
ಆಪಂಚಮಾತ್‌ಸಪ್ತಮಾದ್ವಾ ನಾತಃ ಪರಮಿಹೇಷ್ಯತೇ” || ೨೮ ||

[೪. ಮಂದ್ರಲಕ್ಷಣಮ್‌]

೪೪೦ (ಅ) ಇದಾನೀಂ ಮಂದ್ರ ಉಚ್ಯತೇ – ಮೃದುಸ್ವರೋ ಮಂದ್ರಃ | (ಆ) ಸಾ ಚ ಮಂದ್ರಗತಿಸ್ತ್ರಿಧಾ S೦ಶಪರಾ, ನ್ಯಾಸಪರಾ, ಅಪನ್ಯಾಸಪರಾ ಚೇತಿ | (ಇ) ಅಂಶಸ್ವರಃ ಪರೋಯಸ್ಮಾದಿತಿ ಬಹುವ್ರೀಹೌ | (ಈ) ತಸ್ಮಾತ್‌ಪೂರ್ವೋಯಃ ಸ್ವರಃ ಸ ಮಂದ್ರಃ | (ಊ) ಏವಮತ್ರಾಪನ್ಯಾಸ ಸ್ವರ ಇತಿ, ನ್ಯಾಸಸ್ವರೋSಪ್ಯೇವಮೇವ | 19

[೫. ಷಾಡವಲಕ್ಷಣಮ್‌]

೪೪೧ (ಅ) ಇದಾನೀಂ ಷಾಡವಮುಚ್ಯತೇ-ಷಟ್‌ಸ್ವರಂ ಷಾಡವಮಿತಿ ಚತುರ್ದಶ ಚಾತಿವಿಷಯತ್ವಾತ್‌ಚತುರ್ದಶವಿಧಂ, ಚತಸೃಣಾಂ ಜಾತೀನಾಂ ನಿತ್ಯಸಂಪೂರ್ಣತ್ವೇನ ತದಭಾವಾಜ್ಜಾತ್ಯಂಶಭೇದೇನ ತು ಸಪ್ತಚತ್ವಾರಿಂಶತ್‌ಪ್ರಕಾರಂ ಚ ತದ್‌ಭವತಿ | (ಆ) ತಥಾ ಚಾಹ ಭರತಃ-

“ಷಟ್‌ಸವರಂ ಷಾಡವಂ ಚತುದರ್ಶವಿಧಂ ಸಪ್ತಚತ್ವಾರಿಂಶತ್‌ಪ್ರಕಾರಮ್‌ |
[ಪೂರ್ವೋಕ್ತವಿಧಾನಂ ಯಥಾಜಾತ್ಯಂಶಪ್ರಕಾರಮಿತಿ|]”                                                                             20

[೬. ಔಡುವಲಕ್ಷಣಮ್‌]

೪೪೨   ………………………………………….
“[ಪಂಚಸ್ವರಮೌಡುವಿತಂ ವಿಜ್ಞೇಯಂ ದಶವಿಧಂ ಪ್ರಯೋಗಜ್ಲೈಃ |
ತ್ರಿಂಶತ್‌ಪ್ರಕಾರವಿಹಿತಂ] ಪೂರ್ವೋಕತಂ ಲಕ್ಷಣಂ ಚಾಸ್ಯ” || ೨೯ ||

ಪಾಠ ವಿಮರ್ಶೆ: ೪೩೯ಅ,ಆ ೪೪೦ಅ,ಆ,ಇ,ಊ ೪೪೧ಅ,ಆ

—-

೪೩೯ ‘ತಾರ(ಸ್ವರಸಂಚಾರ)ದ ಅವಧಿಯನ್ನು ಇಲ್ಲಿ (=ಜಾತಿಗಳಲ್ಲಿ)ಅಂಶದಿಂದ ನಾಲ್ಕನೆಯ ಸ್ವರದವರೆಗೆ, ಐದನೆಯ (ಸ್ವರದ)ವರೆಗೆ ಅಥವಾ ಏಳನೆಯದರವರೆಗೆ ಎಂದು ತಳಿಯಬೇಕು. ಅದರಿಂದ ಆಚೆಗೆ ಅದು ಅಪೇಕ್ಷಣೀಯವಲ್ಲ’. (ನಾಶಾ. ೨೮.೭೦:೪೫)       ೨೮

[೪. ಮಂದ್ರಲಕ್ಷಣ]

೪೪೦ (ಅ) ಈಗ ಮಂದ್ರ (ಸ್ವರದ ಲಕ್ಷಣ)ವನ್ನು ಹೇಳಲಾಗುವುದು-ತಗ್ಗುಸ್ವರವು <ಮೃದು> ಮಂದ್ರ ಎಂದು ತಿಳಿಯಬೇಕು. (ಆ) ಈ ಮಂದ್ರಸ್ವರಸಂಚಾರವು ಅಂಶವು (ಅದರ) ನಂತರವಿರುವುದು, ನ್ಯಾಸವು ನಂತರವಿರುವುದು, ಅಪನ್ಯಾಸವು ನಂತರವಿರುವುದು ಎಂದು ಮೂರು ವಿಧ. (ಇ) ‘ಅಂಶಸ್ವರವು ಯಾವುದರಿಂದ ನಂತರವಿದೆಯೋ ಅದು’ ಎಂದು [‘ನಂತರ’<ಪರ>ಶಬ್ದವನ್ನು] ಬಹುವ್ರೀಹಿ ಸಮಾಸದಲ್ಲಿ (ಇಲ್ಲಿ) ಪ್ರಯೋಗಿಸಿದೆ. (ಈ) ಅದರ (=ಅಂಶ, ನ್ಯಾಸ ಅಥವಾ ಅಪನ್ಯಾಸ ಸ್ವರದ) ಹಿಂದೆ ಯಾವ ಸ್ವರವಿದೆಯೇ ಅದು ಮಂದ್ರ (ಎಂದು ಅರ್ಥೈಸಬೇಕು). (ಉ) ಉದಾಹರಣೆಗೆ, ಧೈವತೀ(ಜಾತಿ)ಯಲ್ಲಿ ಧಾಧಾ ನಿಧ ಪಧ ಮಾ | ಮಾ ಮಾ ಮಾ | (ಊ) ಹೀಗೆ ಇಲ್ಲಿ ಅಪನ್ಯಾಸಸ್ವರದ ಹಿಂದೆ ಇರುವುದು ಮಂದ್ರ ಎಂದು (ತಿಳಿದುಕೊಳ್ಳಬೇಕು; ನ್ಯಾಸಸ್ವರ (ದ ಹಿಂದೆ ಇರುವ ಮಂದ್ರ)ವನ್ನೂ ಹೀಗೆಯೇ (ತಿಳಿದುಕೊಳ್ಳಬೇಕು).19

[೫. ಷಾಡವಲಕ್ಷಣ]

೪೪೧ (ಅ) ಈಗ ಷಾಡವ (ಲಕ್ಷಣ)ವನ್ನು ಹೇಳಲಾಗುವುದು-ಆರು ಸ್ವರಗಳನ್ನುಳ್ಳದ್ದು (-ನ್ನುಳ್ಳ ಪ್ರಯೋಗವು) ಷಾಡವ ಎಂದರ್ಥ. (ಅದು) ಹದಿನಾಲ್ಕು ಜಾತಿಗಳಿಗೆ ವಿಷಯ (=ವಸ್ತು)ವಾಗಿರುವುದರಿಂದಲೂ (ಉಳಿದ)ನಾಲ್ಕು ಜಾತಿಗಳಲ್ಲಿ ಯಾವಾಗಲೂ ಸಂಪೂರ್ಣತ್ವವೇ ಇರಲಾಗಿ, ಅದು (-ಷಾಡವತ್ವವು) ಇಲ್ಲದಿರುವುದರಿಂದಲೂ, [ಅದು] ಹದಿನಾಲ್ಕು ವಿಧವಾಗಿದೆ; (ಈ) ಜಾತಿಗಳ (ಲ್ಲಿರುವ) ಅಂಶಗಳ ಭೇದದಿಂದಾಗಿ ಅದು ನಲವತ್ತೇಳು ಪ್ರಕಾರವಾಗಿದೆ. (ಅ) (ಈ ವಿಷಯದಲ್ಲಿ) ಭರತನು ಹೀಗೆ ಹೇಳುತ್ತಾನೆ- ‘ಆರು ಸ್ವರಗಳು (ಇರುವ ಪ್ರಯೋಗವು ಷಾಡವ; (ಅದು) ಹದಿನಾಲ್ಕು ವಿಧವೂ ನಲವತ್ತೇಳು ಪ್ರಕಾರವೂ ಇದೆ. [ಹಿಂದೆ ಹೇಳಿದ (ನಲವತ್ತೇಳು ಪ್ರಕಾರಗಳು ಎಂಬ) ವಿಧಾನವು (ಆಯಾ ಜಾತಿಗಳಲ್ಲಿರುವ) ಅಂಶಗಳ ಪ್ರಕಾರವಾಗಿ ಆಗುತ್ತದೆ]. ನಾಶಾ. ೨೮.೭೫ ಗು:೪೯                                                                        20

[೬. ಔಡುವಲಕ್ಷಣ]

೪೪೨ …………………. [ಭರತನು (ಈ ವಿಷಯದಲ್ಲಿ) ಹೀಗೆ ಹೇಳುತ್ತಾನೆ-] [‘ಐದು ಸ್ವರಗಳು (ಇರುವ ಪ್ರಯೋಗವು)] ಔಡುವಿತವೆಂದೂ ಅದು ಹತ್ತು ವಿಧವೆಂದೂ (ಗಾಯಕವಾದಕ) ಪ್ರಯೋಕ್ತೃಗಳು ತಿಳಿದುಕೊಳ್ಳಬೇಕು. ಮೂವತ್ತು ಪ್ರಕಾರಗಳಿವೆ ವಿಹಿತವಾಗಿರುವ], ಅದರ ಲಕ್ಷಣವನ್ನು ಹಿಂದೆ ಹೇಳಿದೆ’ (ನಾಶಾ. ೨೮.೭೬:೫೦)                                                                                                   ೨೯

____

೪೪೩ (ಅ) ಚತುಃಸ್ವರಾತ್‌ಪ್ರಭೃತಿ [ದೇಶೀ], ನ ಮಾರ್ಗಂ, ಶಬರಪುಲಿಂದಕಾಂಬೋಜ ಬಂಗಕಿರಾತಬಾಹ್ಲೀಕಾಂಧ್ರದ್ರಾವಿಡವನಾದಿಷು [ಸಾ] ಪ್ರಯುಜ್ಯತೇ | (ಆ) ಅನಿಯಮಾತ್‌ಶ್ರುತಿಮಾತ್ರಮತ್ರ ಗ್ರಾಹ್ಯಮ್‌ | (ಇ) ಯದಾ ಚತುಃಸ್ವರಪ್ರಯೋಗ [ಸ್ತದಾ] ಸ್ವರಾಂತರಮಾಹ, ಅವಕೃಷ್ಟಧ್ರುವಾಸ್ವೇವ ವೇದಿತವ್ಯಂ ತಚ್ಚ ಧ್ರುವಾಮಧ್ಯ ಏವ ಸ್ಫುಟೀಕರಿಷ್ಯಾಮಃ | (ಈ) ತಥಾ ಚಾಹ ಭರತಃ –   21

೪೪೪   “ಪಟ್‌ಸ್ವರಸ್ಯ ಪ್ರಯೋಗೋSಸ್ತಿ ತಥಾ ಪಂಚಸ್ವರಸ್ಯ ಚ |
ಚತುಃಸ್ವರಪ್ರಯೋಗೋSಪಿ ಹ್ಯವಕೃಷ್ಟಧ್ರುವಾಸ್ವಿಹ” || ೩೦ ||

೪೪೫ (ಅ) ಅಪಿಶಬ್ದಾದತ್ರ ಸಂಪೂರ್ಣೋSಪಿ ಗ್ರಾಹ್ಯಃ | (ಆ) ಏವಂ ಚತುರ್ವಿಧಃ ಪ್ರಯೋಗೋ ಧ್ರುವಾಣಾಂ ವೇದಿತವ್ಯಃ | 22

[೭. ಅಲ್ಪತ್ವಲಕ್ಷಣಮ್‌]

೪೪೬ (ಅ) ಇದಾನೀಂ ಅಲ್ಪತ್ವಬಹುತ್ವೇ ಬ್ರವೀಮಿ | (ಆ) ತತ್ರ ಸ್ವರಾಣಾಮಲ್ಪಶಃ ಪ್ರಯೋಗಾದಲ್ಪತ್ವಂ, ಬಹುಶಃ ಪ್ರಯೋಗಾದ್‌ಬಹುತ್ವಮ್‌ | (ಇ) ತಥಾಲ್ಪತ್ವಂ ಬಹುತ್ವಂ ಚ ದ್ವಿವಿಧಂ ಭವೇತ್‌, ಸಂನ್ಯಾಸಾದಿಗತಂ ತಥಾಂತರಮಾರ್ಗೇಣೇತಿ | (ಈ) ಅಂತರಮಾರ್ಗಸ್ಯ ಲಕ್ಷಣಂ ಯಥಾ-ಜಾತಿಷು ಕ್ವಿಚಿದ್‌ವಾSನಂಶೋSಪಿ ನಾಲ್ಪಃ | (ಉ) ತಥಾ ಚ ಕಾರ್ಮಾರವ್ಯಾಂ ಗಾಂಧಾರಸ್ಯ ಸರ್ವಸ್ವರಸಂಗತ್ಯಾ ಬಹುತ್ವೇನಾಂತರ ಮಾರ್ಗೇ ಪ್ರಯೋಗ ಇತಿ ವಕ್ಷ್ಯತೇ-                                                                                                                    23

೪೪೭ “ಗಾಂಧಾರಸ್ಯ ವಿಶೇಷೇಣ ಸರ್ವತೋ ಗಮನಂ ಭವೇತ್‌” ಇತಿ | || ೩೧ ||

[೮. ಬಹುತ್ವಲಕ್ಷಣಮ್‌]

೪೪೮ (ಅ) ಅಥ ಬಹುತ್ವಮಾಹ-ಅಲ್ಪ(ತ್ವ)ವದತ್ರ ಬಹುತ್ವಮಿತಿ; ಲಕ್ಷಯೇದಿತಿ ವಿಶೇಷಃ | (ಆ) ಕಥಮಿತ್ಯಾಹ ಬಲವದಬಲವತೋರ್ವಿಪರ್ಯಾಸೋSಬಲಮಲ್ಪಂ ತದ್ವಿಪರ್ಯಯೇ ಬಲವದಿತಿ ಬಲವಲ್ಲಕ್ಷಣಂ ಗಮ್ಯತ ಏವ | (ಇ) ಅತ ವಿವಾಹ-            24

ಪಾಠ ವಿಮರ್ಶೆ: ೪೪೩ಆ,ಇ ೪೪೪ಈ ೪೪೬ಅ ಆ ೪೪೬ಇ,ಈ,ಇ ೪೪೮ಆ-ಇ

—-

೪೪೩ (ಅ) ನಾಲ್ಕು ಸ್ವರಗಳಿಂದ ಮೊದಲಾಗುವುದು (-ಗುವ ಪ್ರಯೋಗವು) ದೇಶೀ, ಮಾರ್ಗವಲ್ಲ; ಅದು ಶಬರ, ಪುಲಿಂದ, ಕಾಂಬೋಜ, ಬಂಗ, ಕಿರಾತ, ಬಾಹ್ಲೀಕ, ಆಂಧ್ರ ಮತ್ತು ದ್ರಾವಿಡ (ದೇಶಗಳ) ಕಾಡುಮೇಡುಗಳಲ್ಲಿ ಪ್ರಯೋಗವನ್ನು ಪಡೆದಿದೆ. (ಆ) (ದೇಶೀ ಪ್ರಯೋಗದಲ್ಲಿ) ನಿಯಮವಿಲ್ಲದ್ದರಿಂದ ಹೇಗೆ (ಮತ್ತು ಏನು) ಕೇಳಿಸುತ್ತದೋ ಅಷ್ಟನ್ನು ಮಾತ್ರ ಇಲ್ಲಿ ಇಟ್ಟುಕೊಳ್ಳಬೇಕು. (ಇ) ನಾಲ್ಕು ಸ್ವರಗಳ ಪ್ರಯೋಗವಿರುವಾಗ (ಅದನ್ನು) ಸ್ವರಾಂತರವೆಂದು (ಗ್ರಂಥಕಾರನು) ಹೇಳುತ್ತಾನೆ. (ಅದನ್ನು) ಅವಕೃಷ್ಟಧ್ರುವಾ (ಎಂಬ ಹಾಡು)ಗಳಲ್ಲಿಯೇ ತಿಳಿದುಕೊಳ್ಳಬೇಕು; ಅದನ್ನು ಧ್ರುವಾ (ಲಕ್ಷಣವನ್ನು ನಿರೂಪಿಸುವ) ಮಧ್ಯದಲ್ಲಿ ಸ್ವಷ್ಟಗೊಳಿಸುತ್ತೇವೆ. (ಈ) (ಈ ವಿಷಯದಲ್ಲಿ) ಭರತನು ಹೀಗೆ ಹೇಳುತ್ತಾನೆ-                                                                                                                                  21

೪೪೪ ‘ಇಲ್ಲಿ (=ನಾಟ್ಯಪ್ರಯೋಗದ ಧ್ರುವಾಗಾನದಲ್ಲಿ) ಆರು ಸ್ವರಗಳ ಪ್ರಯೋಗವಿದೆ; ಹಾಗೆಯೇ ಐದು ಸ್ವರಗಳ ಪ್ರಯೋಗವೂ (ಇದೆ); ಅಷ್ಟೇ ಅಲ್ಲದೆ <ಅಪಿ> ನಾಲ್ಕು ಸ್ವರಗಳ ಪ್ರಯೋಗವೂ ಅವಕೃಷ್ಟಧ್ರವಾಗಳಲ್ಲಿ ಇದೆ. (ನಾಶಾ.೨೮.೭೦:೫೦) ೩೦

೪೪೫ (ಅ)ಇಲ್ಲಿ ‘ಅಷ್ಟೇ ಅಲ್ಲದೆ’ <ಚತುಃಸ್ವರಪ್ರಯೋಗೋSಪಿ> ಎಂಬ ಮಾತಿನಿಂದ ಸಂಪೂರ್ಣ (ಸ್ವರಗಳ ಪ್ರಯೋಗ)ವನ್ನೂ ತೆಗೆದುಕೊಳ್ಳಬೇಕು. (ಆ) ಹೀಗೆ ಧ್ರುವಾಗಳಲ್ಲಿ ನಾಲ್ಕು ವಿಧದ ಪ್ರಯೋಗ(ವಿದೆ) ಎಂಬುದನ್ನು ತಿಳಿಯಬೇಕು.

[೭ ಅಲ್ಪತ್ವಲಕ್ಷಣ]

೪೪೬ (ಅ) ಈಗ ಅಲ್ಪತ್ವ-ಬಹುತ್ವಗಳನ್ನು ಹೇಳುತ್ತೇನೆ: (ಆ) ಇಲ್ಲಿ ಅಲ್ಪತ್ವವೆಂದರೆ ಸ್ವರಗಳನ್ನು ಅಲ್ಪವಾಗಿ ಪ್ರಯೋಗಿಸುವುದು, ಬಹುತ್ವವೆಂದರೆ [ಸ್ವರಗಳನ್ನು] ಬಹುವಾಗಿ ಪ್ರಯೋಗಿಸುವುದು. (ಎಂದರ್ಥ). (ಇ) ಅಲ್ಪತ್ವವೂ ಬಹುತ್ವವೂ ಸಂನ್ಯಾಸ ಮೊದಲಾದವುಗಳಲ್ಲಿ ಇರುವುದರಿಂದಲೂ ಅಂತರ ಮಾರ್ಗದಿಂದ (ಪ್ರಯುಕ್ತವಾಗುವುದರಿಂದ)ಲೂ ಎರಡು ವಿಧವಾಗಿವೆ. (ಈ) ಅಂತರಮಾರ್ಗದ ಲಕ್ಷಣವು ಹೇಗೆಂದರೆ ಕೆಲವು ವೇಳೆ ಜಾತಿಗಳಲ್ಲಿ (ಒಂದು ಸ್ವರವು) ಅಂಶವಲ್ಲದಿದ್ದರೂ ಅಲ್ಪವೂ ಆಗಿರುವುದಿಲ್ಲ. (ಉ) ಈ ರೀತಿಯಲ್ಲಿ ಕಾರ್ಮಾರವೀ (ಜಾತಿ)ಯಲ್ಲಿ ಗಾಂಧಾರವು ಎಲ್ಲಾ ಸ್ವರಗಳೊಡನೆ ಸಂಗತಿಯನ್ನು ಪಡೆದು ಬಹುತ್ವದಿಂದ ಅಂತರಮಾರ್ಗದಲ್ಲಿ ಪ್ರಯೋಗವನ್ನು ಪಡೆಯುತ್ತದೆ ಎಂದು (ಹೀಗೆ) ಹೇಳಿದೆ-                                                                                                                                        23

೪೪೭ ‘ಗಾಂಧಾರಕ್ಕೆ ವಿಶೇಷವಾಗಿ ಎಲ್ಲ ಕಡೆಯಲ್ಲೂ ಸಂಚಾರವಿರುತ್ತದೆ: (ನಾಶಾ. ೨೮.೧೩೬:೬೨)

[೮. ಬಹುತ್ವಲಕ್ಷಣ]

೪೪೮ (ಅ) ಇದರ ನಂತರ [ಗ್ರಂಥಕಾರನು] ಬಹುತ್ವವನ್ನು ನಿರೂಪಿಸುತ್ತಾನೆ: ಬಹುತ್ವವು ಅಲ್ಪತ್ವದಂತೆಯೇ (ಅಥವಾ ಅದರ ಅಳತೆ<ಮಿತಿ>ಯಂತೆಯೇ) (ಇದೆ). ಅದನ್ನು ಅನುಲಕ್ಷಿಸಬೇಕು (=ಗಮನಿಸಬೇಕು) ಎಂಬುದು (ಬಹುತ್ವವನ್ನು ಕುರಿತು ಹೇಳಿದ ಈ ಮಾತಿನ) ವಿಶೇಷವಾದ ಇಂಗಿತ, (ಆ)

—-

೪೪೯   “ಜಾತಿಸ್ವರೈಸ್ತು [ಸ್ಯಾಜ್‌] ಜಾತ್ಯಲ್ಪತ್ವಂ ದ್ವಿಧಾ ಚ ತತ್‌ |
ಸಂಚಾರೋS೦ಶಬಲಸ್ಥಾನಾಮಲ್ಪತ್ವಂ ದುರ್ಬಲಾಸು ಚ |
ನ್ಯಾಸಶ್ಚಾಂತರಮಾರ್ಗಸ್ತು ಜಾತೀನಾಂ ವ್ಯಕ್ತಿಕಾರಕಃ” || ೩೨ ||

[೯. ನ್ಯಾಸಲಕ್ಷಣಮ್‌]

೪೫೦ (ಅ) ಇದಾನೀಂ ನ್ಯಾಸಮಾಹ – ನೈಸ್ಯತೇ ತ್ಯಜ್ಯತೇ ಯಸ್ಮಿನ್‌ಯೇನ ವಾ ಗೀತಂ ತನ್ನ್ಯಾಸ ಇತಿ | (ಅ) ನ ನ್ಯಾಸ ಏಕವಿಂಶತಿಸಂಖ್ಯ ಇತಿ | (ಇ) ತದ್ಯಥಾ-ಷಡ್ಜಾಯಾ ಏಕ [:] ಷಡ್ಜೋ ನಾಮ ನ್ಯಾಸಃ | (ಈ) ಏವಮಾದಿ ಬೋದ್ಧವ್ಯಾ ಅಷ್ಟಾದಶ ಜಾತಿಷು ಚ ನ್ಯಾಸಾಃ | (ಉ) ಅಂಗಸಮಾಪ್ತೌ ಕಾರ್ಯ ಇತ್ಯರ್ಥಃ | 25

[೧೦. ಅಪನ್ಯಾಸಲಕ್ಷಣಮ್‌]

೪೫೧ (ಅ) ಇದಾನೀಂ ಅಪನ್ಯಾಸಮಾಹ – ಅಪನ್ಯಾಸೋS೦ತೇ [ನ] | (ಆ) ಪ್ರಯೋಗ (?ಗಾ) ಸಮಾಪ್ತೌ ಅಪನ್ಯಾಸಃ | (ಇ) ಸ ಚ ಷಟ್‌ಪಂಚಾಶದ್‌ಭೇದಭಿನ್ನೋ ಭವತಿ, ಗೀತಾನಾಂ ಮಧ್ಯೇ ಬೋದ್ಧವ್ಯಃ | (ಈ)ಯಥಾ ಯತ್ರ ಸಮಾಪ್ತಮಿವ ಗೀತಂ ಪ್ರತಿಭಾಸತೇ ಸೋSಪನ್ಯಾಸಃ | (ಉ) ಸ ಚ ವಿದಾರೀಮಧ್ಯೇ ಭವತಿ | (ಊ) ಗೀತರೀರಮಧ್ಯ ಇತ್ಯರ್ಥಃ | (ಋ) ಯಥಾ ಷಡ್ಜಗ್ರಾಮೇ ಷಡ್ಜಮಧ್ಯಾಯಾಃ ಸಪ್ತಾಪನ್ಯಾಸಾ ಭವಂತಿ | (ೠ)

ಪಾಠ ವಿಮರ್ಶೆ: ೪೪೯ಆ-ಊ, ಅ, ಆ, ಇ, ಊ ೪೫೦ಆ,ಈ,ಉ ೪೫೧ ಅ,ಆ-ಇ, ಊ,ಋ

—-

ಅದು ಹೇಗೆ? (ಗ್ರಂಥಕಾರನು ಈ ಸಂದರ್ಭದಲ್ಲಿ ಹೀಗೆ) ಹೇಳುತ್ತಾನೆ: ಸಬಲವಾದುದು, ದುರ್ಬಲವಾದುದು, ಎರಡರ ವಿಪರ್ಯಯದಿಂದ (=ತಿರುಗುಮುರುಗು)- ಎಂದರೆ, ದುರ್ಬಲವಾದುದು ಅಲ್ಪ (ಎಂಬುದು ನಿಯಮ). ಅದು ವಿಪರೀತವಾದರೆ (ತಿರುಗುಮುರುಗಾದರೆ)ಅದೇ ಸಬಲವಾಗುತ್ತದೆ (=ಆದುದರಿಂದ ಬಹುವಾಗುತ್ತದೆ.) [ಹೀಗೆ]ಸಬಲ[ಸ್ವರ]ದ ಲಕ್ಷಣವು ತಿಳಿಯುತ್ತದಷ್ಟೆ. (ಇ) ಆದುದರಿಂದಲೇ (ಭರತನು) ಹೀಗೆ ಹೇಳುತ್ತಾನೆ:                                                                                                                                  24

೪೪೯ ‘ಜಾತಿಗಳಲ್ಲಿ ಅಲ್ಪತ್ವವು ಯಾವಾಗಲೂ ಅವುಗಳಲ್ಲಿರುವ ಸ್ವರಗಳಿಂದ ವ್ಯಕ್ತವಾಗುತ್ತದೆ. ಅದು ಎರಡು ವಿಧವಾಗಿದೆ. ಅಂಶಗಳ ಹಾಗೂ ಸಬಲ ಸ್ವರಗಳ ನಡುವೆ ಸಂಚಾರ ವಿರುತ್ತದೆ. ದುರ್ಬಲ ಸ್ವರಗಳ ನಡುವೆ (ಸಂಚಾರವು ಇದ್ದಾಗ) ಜಾತಿಗಳಲ್ಲಿ ಅಲ್ಪತ್ವವಿರುತ್ತದೆ. ಅಂತರಮಾರ್ಗ (=ಸಬಲ-ದುರ್ಬಲಗಳ ವಿಪರ್ಯಯ)ವೂ ನ್ಯಾಸವೂ ಜಾತಿಯ ವ್ಯಕ್ತಿಯನ್ನು (=ಪ್ರಕಟವನ್ನು) ಉಂಟುಮಾಡುತ್ತವೆ.’ [ನಾಶಾ. ೨೮.೭೪,೭೫:೪೮, ೪೯; ತುಲಜೇಂದ್ರನಿಂದ ಉದ್ದೃತವಾಗಿದೆ(?) ಸಂಗೀತಸಾರಾಮೃತ (?)]                                                               ೩೨

(ಈ ಗ್ರಂಥಭಾಗಗಳ ಪಾಠವನ್ನೂ ಅವುಗಳ ಅನುವಾದವನ್ನೂ ಪಾಠವಿಮರ್ಶೆಯಲ್ಲಿ ಈ ಗ್ರಂಥಭಾಗಗಳಿಗೆ ಪರಸ್ಪರವಾಗಿ ಕೊಟ್ಟಿರುವ ಅಭಿನವಭಾರತಿಯ ಗ್ರಂಥಾಂಶ ಹಾಗೂ ಅನುವಾದಗಳೊಡನೆ ಹೋಲಿಸಿ.)

[೯. ನ್ಯಾಸಲಕ್ಷಣ]

೪೫೦ (ಅ) ಈಗ ನ್ಯಾಸ(ದ ಲಕ್ಷಣ)ವನ್ನು (ಗ್ರಂಥಕಾರನು) ನಿರೂಪಿಸುತ್ತಾನೆ. ಹಾಡಿದ್ದನ್ನು/ನುಡಿಸಿದ್ದನ್ನು <ಗೀತ>ಯಾವ ಸ್ವರದಲ್ಲಿ ಅಥವಾ ಯಾವ ಸ್ವರದಿಂದ ನ್ಯಾಸ ಮಾಡಲಾಗುವುದೋ, ಎಂದರೆ ತೊರೆಯ (=ವಿಸರ್ಜಿಸ)ಲಾಗುವುದೋ ಅದು ನ್ಯಾಸ. (ಅ) ಅಂತಹ ನ್ಯಾಸವು ಇಪ್ಪತ್ತೊಂದು ಸಂಖ್ಯೆಯಷ್ಟಿದೆ. (ಇ) ಇದು ಹೇಗೆಂದರೆ ಷಡ್ಜಾ (ಷಾಡ್ಜೀಜಾತಿ)ಯಲ್ಲಿ ಷಡ್ಜವೆಂದ ಒಂದು ನ್ಯಾಸ. (ಈ) ಹದಿನೆಂಟು ಜಾತಿಗಳಲ್ಲಿ ನ್ಯಾಸಗಳನ್ನು ಇದೇ ರೀತಿಯಲ್ಲಿ ಅರಿತುಕೊಳ್ಳಬೇಕು. (ಉ) ಗೀತಶರೀರವು ಮುಗಿಯುವಾಗ [ನ್ಯಾಸವನ್ನು] ಮಾಡಬೇಕು ಎಂಬುದು (ಇಲ್ಲಿ) ಅರ್ಥ.           25

[೧೦. ಅಪನ್ಯಾಸಲಕ್ಷಣ]

೪೫೧ (ಅ) ಈಗ (ಗ್ರಂಥಕಾರನು) ಅಪನ್ಯಾಸ(ದ ಲಕ್ಷಣ)ವನ್ನು ಹೇಳುತ್ತಾನೆ; ಅಪ(+) ನ್ಯಾಸವು (ಗೀತದ) ಕೊನೆಯಲ್ಲಿ (ಮಾಡಬೇಕಾದುದು) ಅಲ್ಲ. (ಆ) [ಗೀತ] ಪ್ರಯೋಗವು ಮುಗಿಯದೆ ಇರುವಾಗ ಅಪನ್ಯಾಸ(ವನ್ನು ಮಾಡಬೇಕು). (ಇ) ಅಲ್ಲದೆ ಇದು ಐವತ್ತಾರುಭೇದಗಳಿಂದ ಬೇರೆ ಬೇರೆಯಾಗಿದ್ದು ಗೀತಗಳ ಮಧ್ಯಮಧ್ಯದಲ್ಲಿ (ಮಾಡಬೇಕಾದವುಗಳು ಎಂದು) ತಿಳಿಯಬೇಕು. (ಈ)ಹೇಗೆಂದರೆ, ಯಾವ

____

ಷಡ್ಜೋದೀಚ್ಯವಾಯಶ್ಚ ದ್ವೌ, ಪಂಚಾನಾಂ ಪ್ರತ್ಯೇಕಂ ತ್ರಯಂ ತ್ರಯಮಿತಿ ಚತುರ್ವಿಂಶತಿಃ | (ಎ) ಶೇಷಾಸ್ತು ಮಧ್ಯಮಗ್ರಾಮೇ | (ಏ) ತಥಾ ಚಾಹ ಭರತಃ- 26

೪೫೨   “ನ್ಯಾಸೋ ಹ್ಯಂಗಸಮಾಪ್ತೌಸ ಚೈಕವಿಂಶತಿವಿಧೋ ವಿಧಾತವ್ಯಃ |
ಷಟ್‌ಪಂಚಾಶತ್‌ಸಂಖ್ಯೋ ಭವೇದಪನ್ಯಾಸಂಖ್ಯೋSಸೌ” || ೩೩ ||

|| ದಶವಿಧಜಾತಿಲಕ್ಷಣಮಿತಿ ||