೪೪೩   ಅಂಶಾಃ ಸ್ಯುಃ ಪಂಚ ಷಡ್ಜಾಯಾ ನಿಷಾದರ್ಷಭವರ್ಜಿತಾಃ |
ಅಪನ್ಯಾಸಸ್ತು ಗಾಂಧಾರಃ ಪಂಚಮಶ್ಚಾಥ ಸಂಗತಿಃ || ೩೪ ||

೪೫೪   ಷಡ್ಜಗಾಂಧಾರಯೋಸ್ತು ಸ್ಯಾತ್‌ ಷಡ್ಜಧೈವತಯೋಸ್ತಥಾ |
ಷಾಡವಂ ಚ ನಿಷಾದೇ ಸ್ಯಾನ್ನಾಸ್ಯಾಂ ಔಡುವಿತಂ ಭವೇತ್‌ | || ೩೫ ||

೪೫೫   ಆರ್ಷಭ್ಯಾಸ್ತು ಸ್ಮೃತಾ ಅಂಶಾ ನಿಷಾದರ್ಷಭಧೈವತಾಃ |
ಷಡ್ಜಪಂಚಮಹೀನೇ ಚ ಷಾಡವೌಡುವಿತೇ ಕ್ರಮಾತ್ || ೩೬ ||

೪೫೬   ಧೈವತ್ಯಾಂ ಗುರುಭಿಃ ಪ್ರೋಕ್ತಾವಂಶಾವೃಷಭದೈವತೌ |
ಸಮಧ್ಯಮಾವಪನ್ಯಾಸೌ ಪ್ರಾಗುಕ್ತೌ ಹೀನತೋತ್ಕ್ರಮಾತ್‌ || ೩೭ ||

೪೫೭   ಅಂಶೌ ನಿಷಾದವತ್ಯಾಸ್ತು ದ್ವಿಶ್ರುತೀ ಸರ್ಷಭೌ ಸ್ಮೃತೌ |
ಧೈವತೀವದ್‌ ಭವೇಚ್ಛೇಷೋ ನ್ಯಾಸೋ ನಾಮಕೃದೇವ ತು | || ೩೮ ||

೪೫೮   ಅಂಶಾಸ್ತು ಷಡ್ಜಕೈಶಿಕ್ಯಾಂ ಷಡ್ಜಗಾಂಧಾರಪಂಚಮಾಃ |
ಸನಿಷಾದಾ ಅಗಾಂಧಾರಾ ಅಪನ್ಯಾಸಾಸ್ತ ಏವ ತು || ೩೯ ||

ಪಾಠ ವಿಮರ್ಶೆ: ೪೫೨ಅ, ೪೫೨=೪೮೧ ೪೫೩ಆ,ಇ,ಈ ೪೫೪ಆ,ಇ,ಈ ೪೫೫ಈ ೪೫೬ಇ,ಈ ೪೫೭ಅ

—-

ಸ್ವರದಲ್ಲಿ ಗೀತವು ಮುಗಿದಂತೆ ತೋರುತ್ತದೋ ಅದು ಅಪನ್ಯಾಸ. (ಉ) ಅದು ವಿದಾರಿಯ ಮಧ್ಯದಲ್ಲಿ ಇರುತ್ತದೆ. (ಊ) (‘ಮಧ್ಯದಲ್ಲಿ’ ಎಂದರೆ) ಗೀತಶರೀರದ ಮಧ್ಯದಲ್ಲಿ ಎಂದು ಅರ್ಥ. (ಋ) ಹೇಗೆಂದರೆ ಷಡ್ಜಗ್ರಾಮದ ಷಡ್ಜಮಧ್ಯಾ(ಜಾತಿ)ದಲ್ಲಿ ಏಳು ಅಪನ್ಯಾಸಗಳಿರುತ್ತವೆ; (ೠ)ಷಡ್ಜೋದೀಚ್ಯವಾ(ಜಾತಿ)ದಲ್ಲಿ ಎರಡೂ, ಉಳಿದ ಐದರಲ್ಲಿ ತಲಾ ಮೂರು ಮೂರರಂತೆಯೂ, ಹೀಗೆ ಒಟ್ಟು ಇಪ್ಪತ್ತನಾಲ್ಕು (ಅಪನ್ಯಾಸಗಳಿರುತ್ತವೆ). (ಎ) ಉಳಿದವು (ಮೂವತ್ತೆರಡು ಅಪನ್ಯಾಸ)ಗಳು ಮಧ್ಯಮಗ್ರಾಮದಲ್ಲಿರುತ್ತವೆ. (ಏ) (ಈ ವಿಷಯದಲ್ಲಿ) ಭರತನು ಹೀಗೆ ಹೇಳುತ್ತಾನೆ-                                                                                                                                  26

೪೫೨ ‘ನ್ಯಾಸ (ಸ್ವರವು) ಗೀತಶರೀರದ ಕೊನೆಯಲ್ಲಿ (ಪ್ರಯುಕ್ತವಾಗುತ್ತದೆ); ಅದನ್ನು ಇಪ್ಪತ್ತೊಂದು ವಿಧವಾಗಿ ಮಾಡಬೇಕು. ಈ (ಪ್ರಸಂಗದಲ್ಲಿ ಹೇಳಿದ) ಅಪನ್ಯಾಸವು ಐವತ್ತಾರು ಸಂಖ್ಯೆಯಷ್ಟು ಇರುತ್ತದೆ’ [ನಾಶಾ. ೨೮.೭೨:೪೬. ತುಲಜೇಂದ್ರನಿಂದ ಉದ್ಧೃತಿ (?)]      ೩೩

(ಹೀಗೆ ಹತ್ತು ವಿಧದ ಜಾತಿಲಕ್ಷಣವು ಮುಗಿಯಿತು.)

 

[V ಜಾತಿಗಳಲ್ಲಿ ಸ್ವರಗಳ ಅಂಶ ಇತ್ಯಾದಿ ನಾನಾರೂಪಗಳು]

೪೫೩ ಷಡ್ಜಾ(ಜಾತಿ=ಷಾಡ್ಜೀ)ದಲ್ಲಿ ನಿಷಾದ, ರಿಷಭಗಳನ್ನು ಬಿಟ್ಟ (ಸಗಮಪಧ ಎಂಬ) ಐದು ಅಂಶಗಳಿವೆ: (ಅದರ)ಅಪನ್ಯಾಸವು ಗಾಂಧಾರ ಮತ್ತು ಪಂಚಮ; ನಂತರ, – ಪರಸ್ಪರ ಸಂಚಾರವು                                                                                              ೩೪

೪೫೪ ಷಡ್ಜ-ಗಾಂಧಾರಗಳಲ್ಲಿಯೂ ಷಡ್ಜ-ಧೈವತಗಳಲ್ಲಿಯೂ ಇದೆ. ನಿಷಾದ (ಲೋಪ)ದಲ್ಲಿ (ಅದರ)ಷಾಡವ(ತ್ವ)ವಿದೆ; ಅದಕ್ಕೆ ಔಡುವಿತ್ವವಿಲ್ಲ.                                                                                                                            ೩೫

೪೫೫ ಆರ್ಷಭೀ(ಜಾತಿ)ಯ ಅಂಶಗಳು ನಿಷಾದ, ರಿಷಭ, ಧೈವತಗಳೆಂದು ಸ್ಮರಿಸಲಾಗಿದೆ. ಷಡ್ಜವು ಲೋಪವಾದಾಗ ಷಾಡವಿತವೂ ಷಡ್ಜಪಂಚಮಗಳು ಲೋಪವಾದಾಗ ಔಡುವಿತವೂ ಕ್ರಮವಾಗಿ (ಆಗುತ್ತವೆ).                                                                             ೩೬

೪೫೬ ಧೈವತೀ (-ಜಾತಿ-)ಯ ಋಷಭ ಧೈವತಗಳು ಅಂಶಗಳೆಂದು ಗುರುಗಳು ಹೇಳಿದ್ದಾರೆ. ಮಧ್ಯಮವನ್ನೊಡಗೂಡಿ ಅವು (ಅದರ) ಅಪನ್ಯಾಸಗಳು; (ಷಾಡವಿತ ಔಡುವಿತಗಳಲ್ಲಿನ) ಲೋಪವು ಹಿಂದೆ ಹೇಳಿದಂತೆಯೇ (ಎಂದು ತಿಳಿಯಬೇಕು).                                  ೩೭

೪೫೭ ನಿಷಾದವತೀ (-ಜಾತಿ-)ಯ ಅಂಶಗಳು ರಿಷಭಸಹಿತವಾದ ದ್ವಿಶ್ರುತಿಕ (ಸ್ವರ)ಗಳು (=ಗಾಂಧಾರನಿಷಾದಗಳು)ಎಂದು ಸ್ಮರಿಸಲಾಗಿದೆ. ಉಳಿದವು(ಲಕ್ಷಣ)ಗಳು ಧೈವತೀಯ(ಲ್ಲಿರು)ವಂತೆ. ಹೆಸರನ್ನುಂಟುಮಾಡುವ (ನಿಷಾದ)ಸ್ವರವೇ ನ್ಯಾಸ.                 ೩೮

೪೫೮ ಷಡ್ಜಕೈಶಿಕೀ (-ಜಾತಿ-)ಯಲ್ಲಿ ಷಡ್ಜಗಾಂಧಾರಪಂಚಮಗಳು ಅಂಶಗಳು; ನಿಷಾದಸಹಿತವಾಗಿಯೂ ಗಾಂಧಾರಹಿತವಾಗಿಯೂ ಅವೇ ಅಪನ್ಯಾಸಗಳೂ ಆಗಿವೆ.                                                                                                                     ೩೯

೪೫೮ಆ,ಇ

____

೪೫೯   ಋಷಭೋ Sಲ್ಪಪ್ರಯೋಗಃ ಸ್ಯಾನ್ನ್ಯಾಸೋ ಗಾಂಧಾರ ಇಷ್ಯತೇ |
ನಿತ್ಯಂ ಪೂರ್ಣಸ್ವರಾ ಚೇಯಮಾಚಾರ್ಯೈಃ ಪರಿಕೀರ್ತಿತಾ || ೪೦ ||

೪೬೦   ಸ್ಯಾತ್‌ಷಡ್ಜೋದೀಚ್ಯವತ್ಯಂಶೈಃ ಷಡ್ಜಮಧ್ಯಮಧೈವತೈಃ |
ಸನಿಷಾದೈರಪನ್ಯಾಸೌ ವಿಜ್ಞೇಯೌ ಷಡ್ಜಧೈವತೌ || ೪೧ ||

೪೬೧   ಋಷಭೇಣ ವಿಹೀನೇಯಂ ದ್ವಾಭ್ಯಾಂ ಚೇತ್‌ಪಂಚಮೇನ ಚ |
ಮಂದ್ರಗಾಂಧಾರಭೂಯಸ್ತ್ವಮಸ್ಯಾ ನ್ಯಾಸಸ್ತು ಮಧ್ಯಮಃ || ೪೨ ||

೪೬೨   ಸರ್ವಾಂಶಾ ನಾಮಕೃನ್ನ್ಯಾಸಾ ವಿಜ್ಞೇಯಾ ಷಡ್ಜಮಧ್ಯಮಾ |
ಸ್ಯಾತಾಂ ನಿಷಾದಗಾಂಧಾರಾವಸ್ಯಾಂ ಹೀನತ್ವಕಾರಿಣೌ || ೪೩ ||

೪೬೩   ಯಥೇಷ್ಟಂ ಸ್ಯಾತ್ತು ಸಂಚಾರೋ ಯಥಾ ಗ್ರಾಮಾವಿರೋಧಕೃತ್‌ |
ಷಡ್ಜಗ್ರಾಮೇ ತು ಸಪ್ತೈತಾಃ ಶೇಷಾ ಮಧ್ಯಮಜಾತಯಃ || ೪೪ ||

೪೬೪   ಗಾಂಧಾರ್ಯಾ ದ್ವಾವನಂಶೌ ಚ ಹೇಯಾವೃಷಭಧೈವತೌ |
ಕ್ರಮಾನ್ನಿತ್ಯಂ ತ್ವಪನ್ಯಾಸೌ ವಿಜ್ಞೇಯೌ ಷಡ್ಜಮಧ್ಯಮೌ || ೪೫ ||

೪೬೫   ಧೈವತಾದೃಷಭಂ ಗಚ್ಛೇದೇವಂ ಸ್ಯಾತ್‌ಸರ್ವಮೇವ ತತ್‌ |
ಪ್ರಾಯಶೋ ರಕ್ತಗಾಂಧಾರ್ಯಾಮಪನ್ಯಾಸಸ್ತು ಮಧ್ಯಮಃ || ೪೬ ||

೪೬೬   ಬಹುಪ್ರಯೋಗಃ ಕರ್ತವ್ಯೋ ಧೈವತೋSಥ ನಿಷಾದವಾನ್‌
ಷಡ್ಜಗಾಂಧಾರಸಂಚಾರಃ ಕಾರ್ಯಶ್ಚಾಸ್ಯಾಂ ಪ್ರಯೋಕ್ತೃಭಿಃ || ೪೭ ||

೪೬೭   ಗಾಂಧಾರೋದೀಚ್ಯವಾ ಪ್ರಾಯಃ ಷಡ್ಜೋದೀಚ್ಯವತೀಸಮಾ |
ಷಡ್ಜಶ್ಚ ಮಧ್ಯಮಶ್ಚಾಂಶೌ ನ ಚೌಡುವಿತಮಿಷ್ಯತೇ || ೪೮ ||

ಪಾಠ ವಿಮರ್ಶೆ: ೪೫೯ಈ ೪೬೧ಅ,ಆ,ಇ,ಈ, ೪೬೨ಅ,ಆ,ಇ ೪೬೩ಆ,ಇ ೪೬೪ಅಆ,ಇ ೪೬೫

—-

೪೫೯ ಅದರಲ್ಲಿ ರಿಷಭವು ಅಲ್ಪವಾಗಿ ಪ್ರಯೋಗವನ್ನುಳ್ಳದ್ದು. ನ್ಯಾಸವು ಗಾಂಧಾರವೆಂದು ಹೇಳಿದೆ. ಇದು ಯಾವಾಗಲೂ (ಸಂ)ಪೂರ್ಣಸ್ವರಗಳನ್ನುಳ್ಳದ್ದೆಂದು ಆಚಾರ್ಯರು ನಿರೂಪಿಸಿದ್ದಾರೆ.                                                          ೪೦

೪೬೦ ಷಡ್ಜೋದೀಚ್ಯವತೀ(-ಜಾತಿ-)ಯು ನಿಷಾದಸಹಿತವಾದ ಷಡ್ಜಮಧ್ಯಮಧೈವತಗಳೆಂಬ ಅಂಶಗಳಿಂದಾಗಿದೆ. (ಅದರಲ್ಲಿ) ಷಡ್ಜಧೈವತಗಳು ಅಪನ್ಯಾಸಗಳೆಂದು ತಿಳಿಯಬೇಕು.                                                                                                         ೪೧

೪೬೧ ಇದರಲ್ಲಿ ರಿಷಭವಿಲ್ಲ; ಎರಡು ಸ್ವರಗಳ (ಲೋಪವು) ಇದ್ದರೆ (ಎಂದರೆ ಔಡುವಿತವಿದ್ದರೆ) (ರಿಷಭದೊಡನೆ) ಪಂಚಮವೂ [ಲೋಪವಾಗುತ್ತದೆ]; ಮಂದ್ರಗಾಂಧಾರವು ಅಧಿಕವಾಗಿದೆ; ಇದರ ನ್ಯಾಸವು ಮಧ್ಯಮ.                                        ೪೨

೪೬೨ ಷಡ್ಜಮಧ್ಯಮಾ (-ಜಾತಿಯು) ಎಲ್ಲಾ ಸ್ವರಗಳನ್ನೂ ಅಂಶಗಳನ್ನಾಗಿ ಉಳ್ಳದ್ದು, (ಅದರಲ್ಲಿ) ಹೆಸರನ್ನುಂಟುಮಾಡುವ ಷಡ್ಜಮಧ್ಯಮಗಳು ನ್ಯಾಸಗಳು ಎಂದು ತಿಳಿಯತಕ್ಕದ್ದು. ನಿಷಾದಗಾಂಧಾರಗಳು ಅದರ ಹೀನತ್ವವನ್ನು (ಎಂದರೆ ನಿಷಾದಲೋಪವು ಷಾಡವಿತವನ್ನೂ ನಿಷಾದಗಾಂಧಾರಗಳು ಔಡುವಿತವನ್ನೂ) ಉಂಟುಮಾಡುವ ಕಾರಣಗಳು.                                ೪೩

೪೬೩ (ಈ ಜಾತಿಗಳಲ್ಲಿ ಸ್ವರ) ಸಂಚಾರವು ಮನಸ್ಸಿಗೆ ಬಂದಂತೆ, (ಆದರೆ) ಗ್ರಾಮ (ಲಕ್ಷಣ)ಕ್ಕೆ ವಿರೋಧವಾಗದಂತೆ, ಇರಬಹುದು. ಈ ಏಳು (ಜಾತಿಗಳು) ಷಡ್ಜಗ್ರಾಮದಲ್ಲಿವೆ. ಉಳಿದವು ಮಧ್ಯಮ(-ಗ್ರಾಮ-) ಜಾತಿಗಳು.                                                ೪೪

೪೬೪ ಗಾಂಧಾರೀ(-ಜಾತಿ-)ಯಲ್ಲಿ ರಿಷಭ-ಧೈವತಗಳು (ಯಾವಾಗಲೂ) ಅಂಶಗಳ್ಲಲದ (ಸ್ವರ)ಗಳು (ಮತ್ತು ಲೋಪವಾಗುವ ಸ್ವರಗಳು ಎಂದರೆ ರಿಷಭವು ಲೋಪದಿಂದ ಷಾಡವಿತವನ್ನೂ ರಿಷಭ-ಧೈವತಗಳು ಲೋಪದಿಂದ ಔಡುವಿತವನ್ನೂ ಉತ್ಪಾದಿಸುತ್ತವೆ); ಷಡ್ಜಮಧ್ಯಮಗಳು (ಅದರಲ್ಲಿ) ಅಪನ್ಯಾಸಗಳು.                                                                                                                               ೪೫

೪೬೫ (ಅದರಲ್ಲಿ)ಧೈವತದಿಂದ ರಿಷಭಕ್ಕೆ ಸಂಚರಿಸಬೇಕು. ಇವೆಲ್ಲವೂ ಬಹುಮಟ್ಟಿಗೆ ರಕ್ತಗಾಂಧಾರಿಯಲ್ಲಿ ಇವೆ; (ಆದರೆ ಅದರಲ್ಲಿ) ಅಪನ್ಯಾಸವು ಮಧ್ಯಮ;                                                                                                                                      ೪೬

೪೬೬ಧೈವತನಿಷಾದಗಳನ್ನು ಬಹುವಾಗಿ ಪ್ರಯೋಗಿಸಬೇಕು ಗಾಯಕವಾದಕರು ಷಡ್ಜಗಾಂಧಾರಗಳಲ್ಲಿ (ಪರಸ್ಪರ) ಸಂಚಾರವನ್ನು ಮಾಡಬೇಕು.           ೪೭

೪೬೭ ಗಾಂಧಾರೋದೀಚ್ಯವಾ(ಜಾತಿಯು) ಬಹುಮಟ್ಟಿಗೆ ಷಡ್ಜೋದೀಚ್ಯವಾಗೆ ಸಮನಾಗಿಯೇ ಇದೆ. ಷಡ್ಜಮಧ್ಯಮಗಳು (ಅದರ) ಅಂಶಗಳು; (ಅದರಲ್ಲಿ) ಔಡುವಿತವು ಇಷ್ಟವಲ್ಲ.                                                                                                  ೪೮

ಅ,ಆ,ಇ,ಈ ೪೬೬ಇ,ಈ ೪೬೭ ಆ, ಇ,ಈ

____

೪೬೮   ಪಂಚಾಂಶಾ ಮಧ್ಯಮಾಯಾಸ್ತು ಜ್ಞೇಯಾ ದ್ವಿಶ್ರುತಿವರ್ಜಿತಾಃ |
ಕ್ರಮಾತ್‌ ತಾಭ್ಯಾಂ ಚ ಹೀನತ್ವಂ ಬಹುಲೌ ಷಡ್ಜಮಧ್ಯಮೌ || ೪೯ ||

೪೬೯   ಗಾಂಧಾರೋದೀಚ್ಯವಾವತ್ತು ಮಧ್ಯಮೋದೀಚ್ಯವಾ ಭವೇತ್‌ |
ಸಾಪ್ತಸ್ವರ್ಯಂ ನಿತ್ಯಂ ಸ್ಯಾದಸ್ಯಾಮಂಶಸ್ತು ಪಂಚಮಃ || ೫೦ ||

೪೭೦   ಪಂಚಮ್ಯಾಂ ಗುರುಭಿಃ ಪೋಕ್ತಾವಂಶಾವೃಷಭಪಂಚಮೌ |
ಸನಿಷಾದಾವಪನ್ಯಾಸೌ ಮಧ್ಯಮರ್ಷಭಸಂಗತಿಃ || ೫೧ ||

೪೭೧   ಷಡ್ಜಮಧ್ಯಮಗಾಂಧಾರಾ ಅಲ್ಪಾಶ್ಚ ಪರಿಕೀರ್ತಿತಾಃ |
ಸ್ಯಾನ್ನಿಷಾದಾಚ್ಚ ಗಾಂಧಾರೋ ಮಧ್ಯಮಾವಚ್ಚ ಹೀನತಾ || ೫೨ ||

೪೭೨   ಜ್ಞೇಯೋ ಗಾಂಧಾರಪಂಚಮ್ಯಾಃ ಪಂಚಮೋS೦ಶಃ ಫ್ರಯೋಕ್ತೈಭಿಃ |
ಸರ್ಷಭಃ ಸ್ಯಾದಪನ್ಯಾಸೋ ನ್ಯಾಸೋ ಗಾಂಧಾರ ಇಷ್ಯತೇ || ೫೩ ||

೪೭೩   ಗಾಂಧಾರ್ಯಾಮಥ ಪಂಚಮ್ಯಾಂ ಯತ್‌ ಸಂಚಾರಾದಿ ಕೀರ್ತಿತಮ್‌ |
ತದಸ್ಯಾಮಪಿ ವಿಜ್ಞೇಯಂ ಕಿಂತು ಪೂರ್ಣಸ್ವರಾ ಸದಾ || ೫೪ ||

೪೭೪   ಆಂಧ್ಯಾಮನಂಶಾ ವಿಜ್ಞೇಯಾಃ ಷಡ್ಜಮಧ್ಯಮಧೈವತಾಃ |
ಷಾಡವಂ ಷಡ್ಜಹೀನಂ ಸ್ಯಾನ್ನ್ಯಾಸೋ ಗಾಂಧಾರ ಇಷ್ಯತೇ | || ೫೫ ||

೪೭೫   ನಂದಯಂತ್ಯಾಂ ಅಪನ್ಯಾಸೌ ಜ್ಞೇಯೌ ಮಧ್ಯಮಪಂಚಮೌ |
ಗ್ರಹೋ ನ್ಯಾಸಶ್ಚ ಗಾಂಧಾರಃ ಪಂಚಮೋ S೦ಶಃ ಪ್ರಕೀರ್ತಿತಃ | || ೫೬ ||

೪೭೬   ಆಂಧ್ರೀವತ್‌ ಷಾಡವಂ ಜ್ಞೇಯಮನೌಡುವಿತಮೇವ ಚ |
ಸ್ಯಾನ್ಮಂದ್ರರ್ಷಭಸಂಚಾರೋ ಲಂಘನೀಯಶ್ಚ ಸ ಕ್ವಚಿತ್‌ || ೫೭ ||

ಪಾಠ ವಿಮರ್ಶೆ: ೪೬೯ಅಆ, ಈ ೪೭೦ ಅ,ಆ,ಇ ೪೭೧ಆ,ಇ,ಈ ೪೭೨ಆ,ಇ ೪೭೩ಆ,ಅಆ, ಅ

೪೬೮ ಮಧ್ಯಮಾ (ಜಾತಿ)ಯಲ್ಲಿ ದ್ವಿಶ್ರುತಿ (=ಗಾಂಧಾರನಿಷಾದ)ಗಳನ್ನುಳಿದ (ಇತರ) ಐದು [ಸ್ವರಗಳು, ಎಂದರೆ ಸರಿಮಪಧಗಳು] ಅಂಶಗಳು. ಇವು (=ದ್ವಿಶ್ರುತಿ)ಗಳಿಂದಲೇ ಕ್ರಮವಾಗಿ ಹೀನತ್ವವು (=ಗಾಂಧಾರದ ಲೋಪದಿಂದ ಷಾಡವಿತವೂ ಗಾಂಧಾರನಿಷಾದಗಳ ಲೋಪದಿಂದ ಔಡುವಿತವೂ) ಇದೆ.          ೪೯

೪೬೯ ಮಧ್ಯಮೋದೀಚ್ಯವಾ (ಜಾತಿಯು) ಗಾಂಧಾರೋದೀಚ್ಯವಾ ಹಾಗೆಯೇ ಇದೆ. ಅದು ಯಾವಾಗಲೂ ಸಪ್ತಸ್ವರಗಳನ್ನು ಹೊಂದಿ (ಸಂಪೂರ್ಣವಾಗಿ)ದೆ. (ಅದರ) ಅಂಶವು ಪಂಚಮ.                                                                                     ೫೦

೪೭೦ ಪಂಚಮೀ (ಜಾತಿ)ಯಲ್ಲಿ ರಿಷಭಪಂಚಮಗಳು ಅಂಶಗಳೆಂದು ಗುರುಗಳು ಹೇಳಿದ್ದಾರೆ. (ರಿಷಭಪಂಚಮಗಳು) ನಿಷಾದಸಹಿತವಾಗಿ (ಅದರಲ್ಲಿ)ಅಪನ್ಯಾಸಗಳು; ಮಧ್ಯಮ-ರಿಷಭಗಳಲ್ಲಿ ಸಂಗತಿಯು (=ಪರಸ್ಪರಗಮನವು) ಇದೆ.                            ೫೧

೪೭೧ (ಅದರಲ್ಲಿ) ಷಡ್ಜ, ಮಧ್ಯಮ, ಗಾಂಧಾರಗಳು ಅಲ್ಪವಾಗಿ (ಪ್ರಯೋಗವನ್ನು ಹೊಂದಿ)ರುತ್ತವೆ, ಎಂದು ಹೇಳಿದೆ. ಮಧ್ಯಮಾ[ಜಾತಿ]ಯಲ್ಲಿರುವಂತೆಯೇ ನಿಷಾದಗಾಂಧಾರಗಳ ಹೀನತ್ವವಿದೆ (ಎಂದರೆ ಗಾಂಧಾರಲೋಪದಿಂದ ಷಾಡವಿತವೂ, ಗಾಂಧಾರನಿಷಾದಗಳ ಲೋಪದಿಂದ ಔಡುವಿತತ್ವವೂ ಏರ್ಪಡುತ್ತವೆ.)                                                                                       ೫೨

೪೭೨ ಗಾಂಧಾರಪಂಚಮೀ(ಜಾತಿ)ಯಲ್ಲಿ ಪಂಚಮವು ಅಂಶವೆಂದು ಗಾಯಕವಾದಕರು ತಿಳಿಯಬೇಕು. (ಇವೆರಡೂ) ರಿಷಭಸಹಿತವಾಗಿ ಅಪನ್ಯಾಸಗಳು; ಆದರೆ ಅದು ಯಾವಾಗಲೂ (ಸಂ)ಪೂರ್ಣ ಸ್ವರಗಳನ್ನುಳ್ಳದ್ದು.                                                                  ೫೪

೪೭೪ ಆಂಧ್ರೀ(ಜಾತಿ)ಯಲ್ಲಿ ಷಡ್ಜಮಧ್ಯಮಧೈವತಗಳು ಅಂಶಗಳಲ್ಲವೆಂಬುದನ್ನು (=ಉಳಿದ ರಿಷಭಗಾಂಧಾರಪಂಚಮನಿಷಾದಗಳು ಅಂಶಗಳೆಂಬುದನ್ನು) ತಿಳಿಯಬೇಕು. ಷಡ್ಜವು ಲೋಪವಾಗಿ (ಅದರಲ್ಲಿ) ಷಾಡವವಾಗುತ್ತದೆ; ಗಾಂಧಾರವು ನ್ಯಾಸವೆಂದು ಹೇಳಿದೆ.     ೫೫

೪೭೫ ನಂದಯಂತೀ[ಜಾತಿ]ಯಲ್ಲಿ ಮಧ್ಯಮಪಂಚಮಗಳು ಅಪನ್ಯಾಸಗಳೆಂದು ತಿಳಿಯಬೇಕು. ಗ್ರಹವೂ ನ್ಯಾಸವೂ ಅದರಲ್ಲಿ ಗಾಂಧಾರ; ಪಂಚಮವು ಅಂಶವೆಂದು ಹೇಳಿದೆ.                                                                                                                        ೫೬

೪೭೬ (ಅದರಲ್ಲಿ) ಷಾಡವವು ಆಂಧ್ರೀಯಲ್ಲಿರುವಂತೆ (ಷಡ್ಜಲೋಪದಿಂದ ಆಗುತ್ತದೆ) ಎಂದು ತಿಳಿಯಬೇಕು; (ಮತ್ತು) ಔಡುವಿತವು ಇರುವುದಿಲ್ಲ. ಮಂದ್ರರಿಷಭದಲ್ಲಿ ಸಂಚಾರವಿದೆ, (ಆದರೆ) ಕೆಲವು ವೇಳೆ ಅದು ಲೋಪವಾಗಬಹುದು.                                      ೫೭

೪೭೪ಆ,ಇಈ ೪೭೫ಅ ೪೭೬ಅ,ಆ,ಇ

____

೪೭೭   ಕಾರ್ಮಾರವ್ಯಾಮನಂಶಾಸ್ತು ಷಡ್ಜಗಾಂಧಾರಮಧ್ಯಮಾಃ |
ಪೂರ್ಣತಾ, ಪಂಚಮೋ ನ್ಯಾಸೋ ಗಾಂಧಾರಮನಂ ಬಹು || ೫೮ ||

೪೭೮   ಕೈಶಿಕ್ಯಾಂ ಱಭೋ Sನಂಶೋ ನ್ಯಾಸೌ ತು ದ್ವಿಶ್ರುತೀ [ಸ್ಮೃತೌ] |
ಋಷಭೋ ಧೈವತಶ್ಚೌವ ಹೇಯಾವಸ್ಯಾಂ ಯಥಾಕ್ರಮಮ್‌ || ೫೯ ||

೪೭೯   ಪಂಚಮೋSಪಿ ಭವೇನ್ನ್ಯಾಸೋ ನಿಷಾದೇS೦ಶೇ Sಥ ಧೈವತೇ |
ಋಷಭಃ ಸ್ಯಾದಪನ್ಯಾಸಃ ಕೈಶ್ಚಿದುಕ್ತೋS೦ಸವತ್‌ತಥಾ || ೬೦ ||

೪೮೦   (ಅ) ಅಸ್ಮದ್‌ಗುರುಮತೇ ಋಷಭಸ್ತಾವದಪನ್ಯಾಸೋ ಭವತಿ, ಅನಂಶಶ್ವಾತ್‌ |
(ಆ) ಕೃಶ್ಚಿತ್‌ಪುನಃ ಅಂಶವದ್‌ಋಷಭೋ Sಪನ್ಯಾಸಃ ಸ್ವೀಕೃತಃ |                                                       27

೪೮೧   ಪಂಚಮೋ ಬಲವಾನಸ್ಯಾಂ ಸ್ಯಾನ್ನಿಷಾದಸ್ತಧೈವ ಚ |
ಅಂಶವಚ್ಚ ಗ್ರಹಾ ಜ್ಞೇಯಾಃ ಸರ್ವಾಸಾಮೇವ ನಿತ್ಯಶಃ || ೬೧ ||