೪೮೨   ಸರ್ವಾಸಾಮೇವ ಜಾತೀನಾಂ ತ್ರಿಜಾಸ್ತು ಗಣಃ ಸ್ಮೃತಃ |
ಲಕ್ಷಣಾತ್‌ಚ ವಿಜ್ಞೇಯೋ ವರ್ಧಮಾನಸ್ವರೋ ಬುಧೈಃ || ೬೨ ||

೪೮೩   ಏಕಸ್ವರೋ ದ್ವಿಸ್ವರಶ್ಚ ತ್ರಿಸ್ವರಶ್ಚ ಚತುಃಸ್ವರಃ |
ಪಂಚಸ್ವರಶ್ಚತುರ್ಧಾ ಚ ಏಕಧಾ ಸಪ್ತ ಷಟ್‌ಸ್ವರೌ || ೬೩ ||

೪೮೪ (ಅ) ಅಸ್ಯಾರ್ಥಃ-ತ್ರಿಜಾತಿಕೋ ಗಣ ಇತಿ ಸಂಖ್ಯಾನಿದರ್ಶನಂ, ತತ್ತೈಕಸ್ವರಾಂಶಾಸ್ತಿಸ್ರಃ-ಮಧ್ಯಮೋದೀಚ್ಯವಾ, ಗಾಂಧಾರಪಂಚಮೀ ನಂದಯಂತೀ ಚೇತಿ | ಪ ಪ ಪ | (ಆ) ದ್ವಿಸ್ವರಾಂಶಾಸ್ತಿಸ್ರಃ- ಧೈವತೀ ಗಾಂಧಾರೋದೀಚ್ಯವಾ ಪಂಚಮೀ ಚೇತಿ | ಧರಿ ಸಮ ಪರಿ | (ಇ) ತ್ರಿಸ್ವರಾಂಶಾಸ್ತಿಸ್ರಃ- ಆರ್ಷಭೀ ನೈಷಾದೀ ಷಡ್ಜಕೈಶಿಕೀ ಚೇತಿ | ಧನಿರಿ, ಗರಿನಿ,

ಪಾಠವಿಮರ್ಶೆ: ೪೭೭ಅ ೪೭೮ಆ,ಈ ೪೭೯ಆ-ಈ, ಅ, ಆ ೪೮೦ಅ,ಆ ೪೮೧ಆ,ಇಈ ೪೮೨ ಆ, ಇಈ

—-

೪೭೭ ಕಾರ್ಮಾರವೀ[ಜಾತಿ]ಯಲ್ಲಿ ಷಡ್ಜಗಾಂಧಾರಮಧ್ಯಮಗಳು ಅಂಶಗಳಲ್ಲದ ಸ್ವರಗಳು (ರಿಷಭಪಂಚಮಧೈವತನಿಷಾದಗಳು ಅಂಶಗಳು). (ಇದರಲ್ಲಿ) (ಸ್ವರಗಳ ಸಂ)ಪೂರ್ಣತೆ (ಯಿದೆ); ಪಂಚಮವು ನ್ಯಾಸ, ಗಾಂಧಾರದಲ್ಲಿ ಬಹುವಾದ ಸಂಚಾರವಿದೆ.         ೫೮

೪೭೮ ಕೈಶಿಕೀ(ಜಾತಿ)ಯಲ್ಲಿ ರಿಷಭವು ಅಂಶವಲ್ಲ (=ಉಳಿದ ಆರು ಸ್ವರಗಳು ಅಂಶಗಳು). ದ್ವಿಶ್ರುತಿ (=ಗಾಂಧಾರನಿಷಾದ)ಗಳು ನ್ಯಾಸಗಳೆಂದು [ಸ್ಮರಿಸಿದೆ]; ರಿಷಭಧೈವತಗಳ ಲೋಪದಿಂದ ಔಡುವಿತವೂ ಆಗುತ್ತವೆ.                                                                     ೫೯

೪೭೯ (ಅದರಲ್ಲಿ) ನಿಷಾದವೋ ಧೈವತವೋ ಅಂಶವಾಗಿರುವಾಗ ಪಂಚಮವೂ ನ್ಯಾಸವಾಗುತ್ತದೆ. ರಿಷಭವು ಅಪನ್ಯಾಸವಾಗುತ್ತದೆ. ಅಂತೆಯೇ ಅದು ಅಂಶದ ಹಾಗೆ (ಇದೆ) ಎಂದು ಕೆಲವರೆನ್ನುತ್ತಾರೆ.                                                                                       ೬೦

೪೮೦ (ಅ) ನಮ್ಮ ಗುರುಗಳ ಅಭಿಪ್ರಾಯದಲ್ಲಿ ರಿಷಭವು ಅಪನ್ಯಾಸವಾಗುತ್ತದೆ, ಏಕೆಂದರೆ ಅದು ಅಂಶವಲ್ಲ. (ಆ) ಬೇರೆಯವರು ರಿಷಭವನ್ನು ಅಂಶದಂತೆ ಅಪನ್ಯಾಸವಾಗಿಯೂ ಒಪ್ಪಿಕೊಳ್ಳುತ್ತಾರೆ.                                                                              27

೪೮೧ ಅದರಲ್ಲಿ ಪಂಚಮವೂ ಅಂತೆಯೇ ನಿಷಾದವೂ ಬಲಶಾಲಿಗಳು; ಎಲ್ಲಾ ಜಾತಿಗಳಲ್ಲಿಯೂ ಗ್ರಹವನ್ನು ಅಂಶದ ಹಾಗೆಯೇ ಎಂದು ಯಾವಾಗಲೂ ತಿಳಿದುಕೊಳ್ಳಬೇಕು. ೬೧

 

[vi ಅಂಶಗಳ ಸಂಖ್ಯೆಯಿಂದ ಜಾತಿಗಳ ಗಣಸೂಚನೆ]

೪೮೨ ಎಲ್ಲಾ ಜಾತಿಗಳಲ್ಲಿಯೂ (ಒಂದೊಂದೂ) ಗಣವನ್ನು ಮೂರು ಜಾತಿಯದೆಂದು ಸ್ಮರಿಸಿದೆ. (ಒಂದೊಂದಾಗಿ) ಹೆಚ್ಚಾಗುವ ಸ್ವರ ಎಂಬ ಲಕ್ಷಣದಿಂದ ಪಂಡಿತರು ಅದನ್ನು ತಿಳಿಯಬೇಕು.                                                                                       ೬೨

೪೮೩ ಒಂದು ಸ್ವರ, ಎರಡು ಸ್ವರ, ಮೂರು ಸ್ವರ, ನಾಲ್ಕು ಸ್ವರ (ಎಂಬ ಈ ನಾಲ್ಕರಲ್ಲಿಯೂ ಮೂರು ಮೂರು ಜಾತಿಗಳ ಗಣಗಳಿವೆ), ಐದು ಸ್ವರಗಳದ್ದರಲ್ಲಿ ನಾಲ್ಕು ಜಾತಿಗಳಿವೆ, ಆರು ಮತ್ತು ಏಳು ಸ್ವರಗಳಿರುವ ಎರಡು ಗಣಗಳಲ್ಲಿ ಒಂದೊಂದರಲ್ಲಿಯೂ ಒಂದೊಂದು ವಿಧವಿದೆ. ೬೩

೪೮೪ (ಅ) ಇದರ ಅರ್ಥವೇನೆಂದರೆ ಗಣವು ಮೂರು ಜಾತಿಗಳನ್ನುಳ್ಳದ್ದು ಎಂಬುದು ಇಲ್ಲಿ ಸಂಖ್ಯೆಯ ಸೂಚನೆ- ಅವುಗಳ ಪೈಕಿ ಒಂದೇ ಸ್ವರವು ಅಂಶವಾಗಿರುವ [ಜಾತಿಗಳು] ಮೂರು: ಧೈವತೀ ಗಾಂಧಾರೋದೀಚ್ಯವಾ, ಗಾಂಧಾರಪಂಚಮೀ ಮತ್ತು ನಂದಯಂತೀ- (ಇವುಗಳಲ್ಲಿ ಅಂಶಗಳು) ಪ-ಪ-ಪ. (ಆ) ಎರಡು ಸ್ವರಗಳು ಅಂಶಗಳಾಗಿರುವ [ಜಾತಿಗಳು] ಮೂರು: ಧೈವತೀ ಗಾಂಧಾರೋದೀಚ್ಯವಾ, ಪಂಚಮೀ; ಇವುಗಳ

೪೮೩ಈ ೪೮೪ ಆ,ಇ,ಈ,ಉ,ಊ

____

ಸಗಪ | (ಈ) ಚತುಃಸ್ವರಾಂಶಾಸ್ತಿಸ್ರಃ- ಷಡ್ಜೋದೀಚ್ಯವತ್ಯಾಂಧ್ರೀ ಕಾರ್ಮಾರವೀ ಚೇತಿ | ಸಮಧನಿ, ರಿಗಪನಿ,ಪರಿಧನಿ | (ಉ) ಪಂಚಸ್ವರಾಂಶಾಶ್ಚತಸ್ರಃ – ಷಾಡ್ಜೀ ಗಾಂಧಾರೀ ರಕ್ತಗಾಂಧಾರೀ ಮಧ್ಯಮಾ ಚೇತಿ | ಸಗಮಪಧ, ಸಗಮಪನಿ, ಸಗಮಪನಿ, ಸರಿಮಪಧ | (ಊ) ಷಟ್‌ಸ್ವರಾಂಶಾ ಕೈಶಿಕೀ-ಸಗಮಪಧನಿ | (ಋ) ಸಪ್ತಸ್ವರಾಂಶಾ ಷಡ್ಜಮಧ್ಯಮಾ ಸರಿಗಮಪಧನಿ | (ಎ) ಏವಂ ತ್ರಿಷಷ್ಟಿರಂಶಾ ವ್ಯಾಖ್ಯಾತಾಃ |   28

೪೮೫   ಮಧ್ಯಮೋದೀಚ್ಯವಾ ಚೈವ ತಥಾ ಗಾಂಧಾರಪಂಚಮೀ |
ನಂದಯಂತೀ ಚ ತಿಸ್ರಸ್ತಾಃ ಪಂಚಮೈಕಾಂಶತಃ ಸ್ಮೃತಾಃ || ೬೪ ||

೪೮೬   ಧೈವತೀಪಂಚಮೀ ಚೈವ ಜ್ಞೇಯೇ ಧರಿರಿಪಾಂಶಕೇ |
ಗಾಂಧಾರೋದೀಚ್ಯವಾ ದ್ವಾಭ್ಯಾಂ ಮಧ್ಯಮಃ ಷಡ್ಜ ಇತ್ಯಪಿ || ೬೫ ||

೪೮೭   ಆರ್ಷಭ್ಯಾಂ ನಿರಿಧಾ ಅಂಶಾ ನೈಷಾದ್ಯಾಂ ನಿರಿಗಾಸ್ತ್ರಯಃ |
ಸಗಪಾಃ ಷಡ್ಜಕೈಶಿಕ್ಯಾಂ ತಿಸ್ರಸ್ತ್ರ್ಯಂಶಾಃ ಪ್ರಕೀರ್ತಿತಾಃ || ೬೬ ||

೪೮೮   ಚತುರಂಶಾ ಸಮನಿಧೈಃ ಷಡ್ಜೋದೀಚ್ಯವತೀ ಸ್ಮೃತಾ |
ಕಾರ್ಮಾರವೀ ರಿಪನಿಧೈರಾಂಧ್ರೀ ಗರಿನಿಪೈರಪಿ || ೬೭ ||

೪೮೯   ಸಗಮಪಧೈಃ ಷಾಡ್ಜೀ ಸ್ಯಾತ್‌ಪಂಚಾಭಿಶ್ಚಾಪಿ ಮಧ್ಯಮಾ |
ಸರಿಮಪಧೈರಂಶೈಃ ಸ್ಯಾದ್‌ಗಾಂಧಾರೀ ಸಗಮನಿಪೈಃ || ೬೮ ||

೪೯೦   ತದ್ವತ್‌ಸ್ಯಾದ್‌ರಕ್ತಗಾಂಧಾರೀ ಪೂರ್ವೈರಂಶೈಶ್ಚ ಪಂಚಭಿಃ |
ಕೈಶಿಕ್ಯೇಕಾ ಷಡಂಶಾ ಸ್ಯಾತ್‌ಸಗಮಪನಿಧೈಃ ಸ್ಮೃತಾ |
ಷಡ್ಜಮಧ್ಯಾ ತು ಸಪ್ತಾಂಶಾ ತ್ರಿಷಷ್ಟಿರಿತಿ ತೇ S೦ಶಕಾಃ || ೬೯ ||

ಪಾಠವಿಮರ್ಶೆ: ೪೮೬ ಆ,ಈ ೪೮೭ ಆ,ಇ, ೪೮೮ಈ ೪೯೦ಉ

—-

ಅಂಶಗಳು(ಕ್ರಮವಾಗಿ ಯಾವುದೆಂದರೆ) ಧರಿ, ಸಮ, ಪರಿ. (ಇ) ಮೂರು ಸ್ವರಗಳು ಅಂಶಗಾಗಿರುವವು [ಜಾತಿ]ಗಳೂ ಮೂರು: ಆರ್ಷಭೀ, ನೈಷಾದೀ, ಷಡ್ಜಕೈಶಿಕೀ. (ಇವುಗಳ ಅಂಶಗಳು ಕ್ರಮವಾಗಿ ಯಾವುದೆಂದರೆ) ಧನಿರಿ, ಗರಿನಿ, ಸಗಪ. (ಈ) ನಾಲ್ಕು ಸ್ವರಗಳು ಅಂಶಗಳಾಗಿರುವ [ಜಾತಿಗಳು] ಮೂರು: ಷಡ್ಜೋದೀಚ್ಯವತೀ, ಆಂಧ್ರೀ ಮತ್ತು ಕಾರ್ಮಾರವೀ. (ಇವುಗಳ ಅಂಶಗಳು ಕ್ರಮವಾಗಿ ಯಾವುವೆಂದರೆ) ಸಮಧನಿ, ರಿಗಪನಿ, ಪರಿಧನಿ. (ಉ) ಐದು ಸ್ವರಗಳು ಅಂಶಗಳಾಗಿರುವ [ಜಾತಿಗಳು] ನಾಲ್ಕು ಷಾಡ್ಜೀ, ಗಾಂಧಾರೀ, ರಕ್ತಗಾಂಧಾರೀ ಮತ್ತು ಮಧ್ಯಮಾ. (ಇವುಗಳ ಅಂಶಗಳು ಕ್ರಮವಾಗಿ ಯಾವುವೆಂದರೆ ಸಗಮಪಧ ಸಗಮಪನಿ, ಸಗಮಪನಿ, ಸರಿಮಪಧ. (ಊ)ಆರು ಸ್ವರಗಳು ಅಂಶಗಳಾಗಿರುವುದು ಕೈಶಿಕೀ[ಜಾತಿ]. (ಇದರ ಅಂಶಗಳು ಯಾವುವೆಂದರೆ) ಸಗಮಪಧನಿ. (ಋ) ಏಳು ಸ್ವರಗಳೂ ಅಂಶಗಳಾಗಿರುವುದು ಷಡ್ಜಮಧ್ಯಮಾ[ಜಾತಿ]ಯಲ್ಲಿ. (ಇದರ ಅಂಶಗಳು ಕ್ರಮವಾಗಿ ಯಾವುವೆಂದರೆ) ಸರಿಗಮಪಧನಿ. (ೠ) ಹೀಗೆ ಅರವತ್ತುಮೂರು ಅಂಶಗಳನ್ನು ವಿವರಿಸಿದ್ದಾಯಿತು.                    28

೪೮೫ ಮಧ್ಯಮೋದೀಚ್ಯವಾ, ಹಾಗೆಯೇ ಗಾಂಧಾರಪಂಚಮೀ, ನಂದಯಂತೀ- ಈ ಮೂರರಲ್ಲಿಯೂ ಪಂಚಮ ಎಂಬ ಒಂದೇ ಅಂಶವಿದೆಯೆಂದು ಸ್ಮರಿಸಿದೆ.                                                                                                                                      ೬೪

೪೮೬ ಧೈವತೀ ಮತ್ತು ಪಂಚಮೀಗಳು ಕ್ರಮವಾಗಿ ಧರಿ-ರಿಪಗಳನ್ನು ಅಂಶಗಳನ್ನಾಗಿ ಹೊಂದಿವೆಯೆಂದು ತಿಳಿಯಬೇಕು. ಗಾಂಧಾರೋದೀಚ್ಯವಾ [ಜಾತಿಯು] ಮಧ್ಯಮ ಮತ್ತು ಷಡ್ಜ ಎಂಬ ಎರಡರಿಂದ (=ಎರಡು ಅಂಶಗಳಿಂದ) (ಆಗುತ್ತದೆ).                             ೬೫

೪೮೭ ಆರ್ಷಭೀಯಲ್ಲಿ ನಿ-ರಿ-ಧಗಳು (ಅಂಶಗಳು); ನೈಷಾದೀಯಲ್ಲಿ ನಿ-ರಿ-ಗ ಎಂಬ ಎಂಬ ಮೂರು; ಷಡ್ಜಕೈಶಿಕಿಯಲ್ಲಿ ಸ-ಗ-ಪ ಗಳು- (ಹೀಗೆ) ಮೂರು ಮೂರು ಅಂಶಗಳಿವೆ.                                                                                                             ೬೬

೪೮೮ ಷಡ್ಜೋದೀಚ್ಯವತಿಯು ಸ-ಮ-ನಿ-ಧ (ಎಂಬ ನಾಲ್ಕು ಅಂಶ)ಗಳಿಂದ ಆಗಿದೆಯೆಂದು ಸ್ಮರಿಸಿದೆ; ಕಾರ್ಮಾರವೀಯು ರಿ-ಪ-ನಿ-ಧ (ಗಳೆಂಬ ನಾಲ್ಕರಿಂದ); ಆಂಧ್ರೀಯು ಗ-ರಿ-ನಿ-ಪ (ಎಂಬ ನಾಲ್ಕರಿಂದ ಆಗಿದೆ). ೬೭

೪೮೯ ಷಾಡ್ಜೀ[ಜಾತಿ]ಯು ಸ-ಗ-ಮ-ಪ-ಧ (ಎಂಬ ಐದು ಅಂಶ)ಗಳಿಂದ ಆಗುತ್ತದೆ. ಮಧ್ಯಮಾ [ಜಾತಿಯು ಸ-ರಿ-ಮ-ಪ-ಧ ಎಂಬ (ಐದು) ಅಂಶಗಳಿಂದಾಗುತ್ತದೆ.] ಗಾಂಧಾರೀ [ಜಾತಿಯು]ಸ-ಗ-ಮ-ನಿ-ಪ ಗಳಿಂದ (ಆಗುತ್ತದೆ).                                         ೬೮

೪೯೦ ಇದೇ ರೀತಿಯಲ್ಲಿ ರಕ್ತಗಾಂಧಾರೀ [ಜಾತಿಯು] ಈ ಹಿಂದೆ ಹೇಳಿದ ಐದು ಅಂಶಗಳಿಂದ [ಆಗುತ್ತದೆ]. ಸ-ಗ-ಮ-ಪ-ನಿ-ಧ ಎಂಬ ಆರು ಅಂಶಗಳಿಂದ ಆಗುವುದು ಕೈಶಿಕೀ ಒಂದೇ [ಜಾತಿ] ಎಂದು ಸ್ಮರಿಸಿದೆ. ಷಡ್ಜಮಧ್ಯಾ(ಜಾತಿಯು ಸ-ರಿ-ಗ-ಮ-ಪ-ಧ-ನಿ ಎಂಬ) ಏಳು ಅಂಶಗಳನ್ನುಳ್ಳದ್ದು. ಹೀಗೆ ಅವು (=ಜಾತಿ)ಗಳ ಅಂಶಗಳು ಅರವತ್ತುಮೂರು.                                                ೬೯

____