೩೬೯.ಅಲಂಕಾರಾ ಮಯಾ ಪ್ರೋಕ್ತಾ ಯಥಾವನ್ಮುನಿಸತ್ತಮ |
ಅಥ ಗೀತಿಂ ಪ್ರವಕ್ಷ್ಯಾಮಿ ಛಂದೋsಕ್ಷರಸಮನ್ವಿತಾಮ್ || ೧ ||
೩೭೦.ಪ್ರಥಮಾ ಮಾಗಧೀ ಜ್ಞೇಯಾ ದ್ವಿತೀಯಾ ಚಾರ್ಧಮಾಗಧೀ |
ಸಂಭಾವಿತಾ ತೃತೀಯಾ ಚ ಚರುರ್ಥೀ ಪೃಥುಲಾ ಸ್ಮೃತಾ || ೨ ||
೩೭೧.ತ್ರಿರ್ನಿವೃತ್ತಾ ಚ ಯಾ ಗೀತಿಃ ಸಾ ಗೀತಿರ್ಮಾಗಧೀ ಸ್ಮೃತಾ |
ಅರ್ಧಕಾಲನಿವೃತ್ತಾ ಚ ವಿಜ್ಞೇಯಾ ತ್ವರ್ಧಮಾಗಧೀ || ೩ ||
೩೭೨.ಸಂಭಾವಿತಾ ಚ ವಿಜ್ಞೇಯಾ ಗುರ್ವಕ್ಷರಸಮನ್ವಿತಾ
ಪೃಥುಲಾಖ್ಯಾ ಚ ವಿಜ್ಞೇಯಾ ಲಘ್ವುಕ್ಷರಸಮನ್ವಿತಾ || ೪ ||
೩೭೩.(ಅ) ದಕ್ಷಿಣೇ ಮಾರ್ಗೇ ಪೃಥುಲಾ ಗೀತಿ[ಃ], ವಾರ್ತ್ತಿಕೇ ಮಾರ್ಗೇ ಸಂಭಾವಿತಾ, ಚಿತ್ರೇ
ಮಾರ್ಗೇ ಮಾಗಧೀ | (ಆ) ಅಷ್ಟೌ ಮಾತ್ರಾ [ದಕ್ಷಿಣ ಮಾರ್ಗೇ ಚತಸ್ರೋ ಮಾತ್ರಾ
ವಾರ್ತಿಕಮಾರ್ಗೇ, ದ್ವೇ ಮಾತ್ರೇ ಚಿತ್ರಮಾರ್ಗೇ | ಕಲಾಪ್ರಯೋಗಕ್ರಮೇಣ |
—
ಪಾಠವಿಮರ್ಶೆ: ೩೬೮ (೨೭), (೨೮) ೩೬೮-೩೭೨, ೩೭೩ಅ, ಆ, ಇ
—-
ಸರಿಗ ರಿಗಮ ಗಮಪ ಮಪಧ ಪಧನಿ ಧನಿಸ
ಸನಿದ ನಿಧಪ ಧಪಮ ಪಮಗ ಮಗರಿ ಗರಿಸ (ಆಕ್ಷಿಪ್ತಕ)(೨೬)
ಸಗಮಾ ಮರಿಸಾ, ರಿಮಪಾ ಪಗರೀ, ಗಪಧಾ ಧಮಗಾ, ಮಧನೀ ನಿಪಮಾ,
ಪನಿಸಾ ಸಧಪಾ ಧನಿಸಾ | ಸಧಪಾ ಸಧಪಾ ಪನಿಸಾ ನಿಪಮಾ ಮಧನೀ,
ಧಮಗಾ ಗಪಧಾ, ಪಗರೀ ರಿಮಪಾ, ಮರಿಸಾ ಸಗಮಾ, ಗರಿಸಾ | ಸಂಪ್ರದಾನ | (೨೭)
ಸಗಮ ಮರಿಸ ರಿಮಪ ಪಗರಿ ……….. (೨೮)
[ವರ್ಣಾಲಂಕಾರಪ್ರಕರಣವು ಮುಗಿಯಿತು.]
[vii. ಪದಗೀತಿಪ್ರಕರಣ]
೩೬೯. ಮುನಿಶ್ರೇಷ್ಠನೆ (ಇದುವರೆಗೆ) ಅಲಂಕಾರಗಳನ್ನು ಹೇಗಿವೆಯೋ ಹಾಗೆಯೇ ನಾನು ಹೇಳಿದ್ದಾಯಿತು. ಈಗ ಛಂದಸ್ಸು ಮತ್ತು ಅಕ್ಷರಗಳಿಂದೊಡಗೂಡಿದ ಗೀತಿಯನ್ನು ನಿರೂಪಿಸುತ್ತೇನೆ. ೧
೩೭೦. ಮೊದಲನೆಯ (ಗೀತಿಯು) ಮಾಗಧೀ ಎಂದು ತಿಳಿಯಬೇಕು; ಎರಡನೆಯದು ಅರ್ಧಮಾಗಧೀ, ಮೂರನೆಯದು ಸಂಭಾವಿತಾ, ನಾಲ್ಕನೆಯದು ಪೃಥುಲಾ ಎಂದು ಸ್ಮೃತವಾಗಿದೆ. ೨
೩೭೧. ಯಾವ ಗೀತಿಯು ಮೂರು ಬಾರಿ ಹಿಂತಿರುಗಿ ಬರುತ್ತದೋ (=ಪುನರಾವರ್ತಿತವಾಗುತ್ತದೋ) ಅದು ಮಾಗಧೀ ಗೀತಿಯೆಂದು ಸ್ಮೃತವಾಗಿದೆ. (ಮಾಗಧೀ ಗೀತಿಯ) ಕಾಲದ ಅರ್ಧದಷ್ಟರಲ್ಲಿಯೇ ಮುಗಿಯುವುದನ್ನು ಅರ್ಧಮಾಗಧೀ ಎಂದು ತಿಳಿಯಬೇಕು. ೩
೩೭೨. ಸಂ ಭಾವಿತಾ ಗೀತಿಯು ಗುರು ಕ್ಷರಗಳಿಂದ ರಚಿತವಾಗಿದೆಯೆಂದು ತಿಳಿಯಬೇಕು. ಪೃಥುಲಾ ಎಂಬ ಗೀತಿಯು ಲಘು ಅಕ್ಷರಗಳಿಂದ ರಚಿತವಾಗಿದೆಯೆಂದು ತಿಳಿಯಬೇಕು. ೪
೩೭೩. (ಅ) ಪೃಧುಲಾಗೀತಿಯನ್ನು ದಕ್ಷಿಣಮಾರ್ಗದಲ್ಲಿ (ಪ್ರಯೋಗಿಸಬೇಕು); ಸಂಭಾವಿತಾಗೀತಿಯು ವಾರ್ತಿಕಮಾರ್ಗದಲ್ಲಿ (ಪ್ರಯೋಗಿಸಲು ತಕ್ಕುದು); ಮಾಗಧಿಯು ಚಿತ್ರಾ ಮಾರ್ಗದಲ್ಲಿ ಪ್ರಯೋಗಿಸಲು ಅರ್ಹವಾಗಿದೆ.) (ಆ) ಎಂಟು ಮಾತ್ರೆಗಳು (ದಕ್ಷಿಣ ಮಾರ್ಗದಲ್ಲಿ, ನಾಲ್ಕು ಮಾತ್ರೆಗಳು ವಾರ್ತಿಕಮಾರ್ಗದಲ್ಲಿ ಎರಡು ಮಾತ್ರೆಗಳು ಚಿತ್ರಾಮಾರ್ಗದಲ್ಲಿ) ಕಲೆಗಳನ್ನು ಬಳಸುವ ಕ್ರಮದಲ್ಲಿ (ಇರುತ್ತವೆ). 1
____
೩೭೪ ಚಿತ್ರೇ ಚೈಕಕಲೇ ತಾಲೇ ವಿಜ್ಞೇಯಾ ಗೀತಿರ್ಮಾಗಧೀ |
ವಾರ್ತಿಕೇ ದ್ವಿಕಲೇ ಜ್ಞೇಯಾ ಗೀತೀ ಸಂಭಾವಿತಾ ಬುಧೈಃ || ೫ ||
೩೭೫ ದಕ್ಷಿಣೇ ಪೃಥುಲಾ ಗೀತಿಸ್ತಾಲೇ ಜ್ಞೇಯಾ ಚತುಷ್ಕಲೇ |
ಅನೇನೈವ ವಿಧಾನೇನ ಗಾತವ್ಯಾ ಗೀತಯೋ ಬುಧೈಃ || ೬ ||
೩೭೬.(ಅ) ಚಿತ್ರೇ ಚೈಕಕಲ ಏವ ತಾಲೋ ದ್ವಿಮಾತ್ರಕ ಪ್ರಯೋಗಾತ್ | (ಅ) ವಾರ್ತಿಕೇ ದ್ವಿಕಲ ಏವ ತಾಲಶ್ಚತುರ್ಮಾತ್ರಿಕಪ್ರಯೋಗಾದ್ | (ಇ) ದಕ್ಷಿಣೇ ಚತುಷ್ಕಲ ಏವ ತಾಲೋsಷ್ಟಮಾತ್ರಿಕಪ್ರಯೋಗಾತ್ | ೨
೩೭೭.ದ್ವಿಗುರುರ್ದ್ವಿನಿವೃತ್ತಾ ಚ ಚಿತ್ರೆ ಗೀತಿಸ್ತು ಮಾಗಧೀ |
ಲಘುಫ್ಲು ತಕೃತಾ ಚೈವ ತದರ್ಧೇ ಚಾರ್ಧಮಾಗಧೀ |
ಸಂಭಾವಿತಾ ಗುರುರ್ವೃತ್ತೌ ಪೃಥುಲಾ ದಕ್ಷಿಣೇ ಲಘು [ಃ] || ೭ ||
೩೭೮.ಯಥಾ –
(ಅ) ಮಾಗಧೀ [………………]
(ಆ) ಅರ್ಧಮಾಗಧೀ [………….]
(ಇ) ಸಂಭಾವಿತಾ [ …………..]
(ಈ)ಪೃಥುಲಾ […………]
(ಉ) ವಾರ್ತಿಕೇ ಸಮಗ್ರಹೋ ದಕ್ಷಿಣೇsತೀತಃ | (ಊ) [ಚಿತ್ರೇ] [sನಾ-] ಗತಃ | (ಋ)
ಮಾತ್ರಾಪ್ರಯೋಗಾ ಮಾರ್ಗಾಣಾಂ ಹಿ ಕಥಿತಾಃ | ಯಥಾ -ದಕ್ಷಿಣೋ ವೃತ್ತಿಶ್ಚಿತ್ರ
ಇತಿ | (ಎ) ಮಾತ್ರಾ ಅಷ್ಟೌ ಚತುರ್ದ್ವೇ ಕ್ರಮೇಣ | ಯಥಾ –
೩೭೯.ಧ್ರುವಕಾ ಸರ್ಪಿಣೀ ಕೃಷ್ಣಾ ವರ್ತಿನ್ಯಥ ವಿಸರ್ಜಿತಾ |
ವಿಕ್ಷಿಪ್ತಾ ಚ ಪತಾಕಾ ಚ ಪತಿತಾ ಚಾಷ್ಟಮಿ ಸ್ಮೃತಾ || ೮ ||
—
ಪಾಠವಿಮರ್ಶೆ : ೩೭೪ಇ ೩೭೫ಆ ೩೭೬ಅ, ಆ,ಇ ೩೭೭ಅ, ಆ, ಈ ೩೭೮ ಉ, ಋ,ೠ,ಎ ೩೭೯ಅ, ಆ
—-
೩೭೪. ಮಾಗಧೀಗೀತಿಯು ಚಿತ್ರಾ (ಮಾರ್ಗ) ದಲ್ಲಿ ಒಂದು ಕಲೆಯ ತಾಳದಲ್ಲಿ (ಇರುತ್ತದೆ) ಎಂದು ತಿಳಿಯಬೇಕು. ಸಂಭಾವಿತಾ ಗೀತಿಯು ವಾರ್ತಿಕ (ಮಾರ್ಗ) ದಲ್ಲಿ ಎರಡು ಕಲೆಗಳ ತಾಳದಲ್ಲಿ ಇರುವಂತಹುದು) ಎಂದು ವಿದ್ವಾಂಸರು ತಿಳಿಯಬೇಕು. ೫
೩೭೫. ಪೃಥುಲಾಗೀತಿಯು ದಕ್ಷಿಣ (ಮಾರ್ಗ) ದಲ್ಲಿ ನಾಲ್ಕು ಕಲೆಗಳ ತಾಳದಲ್ಲಿ (ಇರುವುದು) ಎಂದು ತಿಳಿಯಬೇಕು. ಗೀತೆಗಳನ್ನು ಇದೇ ವಿಧಾನದಲ್ಲಿ ಹಾಡಬೇಕು. ೬
೩೭೬. (ಅ) ಚಿತ್ರಾ (ಮಾರ್ಗ) ದಲ್ಲಿ ಎರಡು ಮಾತ್ರೆಗಳನ್ನು ಪ್ರಯೋಗಿಸುವುದರಿಂದ ಕಾಲವು ಏಕಕಲೆಯದೇ (ಒಂದೇ ಕಲೆಯ ಪ್ರಮಾಣದ್ದೇ) ಆಗಿರುತ್ತದೆ. (ಆ) ವಾರ್ತಿಕ (ಮಾರ್ಗ) ದಲ್ಲಿ ನಾಲ್ಕು ಮಾತ್ರೆಗಳನ್ನು ಪ್ರಯೋಗಿಸುವುದರಿಂದ ತಾಲವು ದ್ವಿಕಲೆ (=ಎರಡು ಕಲೆ) ಯದೇ (ಆಗಿರುತ್ತದೆ). (ಇ) ದಕ್ಷಿಣಮಾರ್ಗದಲ್ಲಿ ಎಂಟು ಮಾತ್ರೆಗಳ ಪ್ರಯೋಗವಿರುವುದರಿಂದ ತಾಲವು ಚತುಷ್ಕಲೆ (=ನಾಲ್ಕು ಕಲೆ)ಯದೇ (ಆಗಿರುತ್ತದೆ). 2
೩೭೭. ಮಾಗಧೀ ಗೀತಿಯು ಚಿತ್ರಾ (ಮಾರ್ಗ)ದಲ್ಲಿ (ತಾಳದ) ಎರಡು ಗುರುಗಳಲ್ಲಿ ಮತ್ತು ಒಂದು ಲಘು ಹಾಗೂ ಒಂದು ಫ್ಲುತದಲ್ಲಿ (= ಚಚ್ಚತ್ಟುಟತಾಳದಲ್ಲಿ ರಚಿತವಾಗಿದ್ದು) (ತಾಳಾವರ್ತದಲ್ಲಿ) ಎರಡು ಸಲ ಪುನಾರಾವರ್ತಿತವಾಗುತ್ತದೆ. ಅರ್ಧಮಾಗಧಿಯ ಇದರ ಅರ್ಧದಷ್ಟರಲ್ಲಿ (ಮುಗಿಯುತ್ತದೆ). ೭
೩೭೮. (ಇದು) ಹೇಗೆಂದರೆ-
(ಅ) ಮಾಗಧೀ (……………..)
(ಆ) ಅರ್ಧಮಾಗಧೀ (………..)
(ಇ) ಸಂಭವಿತಾ (……………)
(ಈ) ಪೃತುಲಾ (……………)
(ಊ) ವಾರ್ತಿಕ ಮಾರ್ಗದಲ್ಲಿ ಸಮಗ್ರವೂ,ದಕ್ಷಿಣಾದಲ್ಲಿ ಆತೀತ [ಗ್ರಹ] ವೂ (ಇರುತ್ತವೆ). (ಊ) (ಚಿತ್ರಮಾರ್ಗದಲ್ಲಿ) ಅ(ನಾ) ಗತ [ಗ್ರಹ]ವಿರುತ್ತದೆ. (ಋ) ಮಾತ್ರಾ ಪ್ರಯೋಗವನ್ನು ಮಾರ್ಗಗಳಲ್ಲಿ ಮಾತ್ರ ವಿಧಿಸಿದೆ. (ೠ) ಹೇಗೆಂದರೆ -ದಕ್ಷಿಣಾ, ವೃತ್ತಿ (= ವಾರ್ತಿಕ), ಚಿತ್ರಾ (ಇವುಗಳು ಮಾರ್ಗಗಳು). (ಎ) (ಇವುಗಳಲ್ಲಿ) ಕ್ರಮವಾಗಿ ಎಂಟು, ನಾಲ್ಕು ಮತ್ತು ಎರಡು ಮಾತ್ರೆಗಳು (ಇರುತ್ತವೆ). ಹೇಗೆಂದರೆ – 3
೩೭೯ ಧುವಕಾ, ಸರ್ಪಿಣೀ, ಕೃಷ್ಣಾ, ವರ್ತಿನೀ, ಆಮೇಲೆ ವಿಸರ್ಜಿತಾ, ವಿಕ್ಷಿಪ್ತಾ ಮತ್ತು ಪತಾಕಾ ಹಾಗೂ ಪತಿತಾ (ಎಂಬುದು) ಎಂಟನೆಯದು (-ಹೀಗೆ) (ತಾಲಕ್ರಿಯೆಗಳು) ಸ್ಮೃತವಾಗಿದೆ. (-ವೆ). ೮
____
೩೮೦.ತತ್ರ ಧ್ರುವಾ ಸಶಬ್ದಾ ಸ್ಯಾತ್ಸರ್ಪಿಣೀ ವಾಮಗಾ ಭವೇತ್ |
ಕೃಷ್ಣಾ ದಕ್ಷಿಣತೋ ಯತಾ ವರ್ತಿನೀ ಚಾಪ್ಯಧೋಗತಾ || ೯ ||
೩೮೧.ವಿಸರ್ಜಿತಾ ಬಹಿರ್ಯಾತಾ ವಿಕ್ಷಿಪ್ತಾ ಕುಂಚಿತಾ ಭವೇತ್
ಪತಾಕಾ ಚೋರ್ಧ್ವಗಾ ಜ್ಞೇಯಾ ಪತಿತಾ ಭೂಮಿಗಾ ಭವೇತ್೬ || ೧೦ ||
೩೮೨.ಧ್ರುವಕಾ ಸರ್ಪಿಣೀ ಚಿತ್ರೇ ವಾರ್ತಿಕೇ ಚ ಪರೇ sಪಿ ದ್ವೇ |
ಕೃಷ್ಣಾಪದ್ಮಿನೀನಾಮ್ನ್ಯಶ್ಚ ದಕ್ಷಿಣೇ sಷ್ಟೌ ಸ್ಮೃತಾ ಮಾತ್ರಾಃ || ೧೧ ||
೩೮೩. (ಅ) ದಕ್ಷಿಣಾವೃತ್ತಿಶ್ಚಿತ್ರೇತಿ ವೃತ್ತಯೋ ಗೀತೋಭಯವಾದ್ಯಪ್ರಾಧಾನ್ಯವಶಾತ್ಪ್ರತೀತಾಃ |
(ಆ) ಗೀತಪ್ರಧಾನಾ ದಕ್ಷಿಣಾ ವೃತ್ತಿಃ ಉಭಯಪ್ರಧಾನಾ ವೃತ್ತಿರ್ವೃತ್ತಿಃ ವಾದ್ಯಪ್ರಧಾನಾ ಚಿತ್ರಾ ವೃತ್ತಿಃ | ೪
೩೮೪. (ಅ) ಇದಾನೀಂ ಪ್ರಾಧಾನ್ಯಂ ಜ್ಞಾಪಯತಿ ಪಾಣಿಕೃತಾ ವಿವರ್ತಿತಮ್ | (ಆ) ತದುಕ್ತಮ್– ೫
೩೮೫. (ಅ) ತಾಲ [ಗೀತಿಲಯ-] ಯತಿಮಾರ್ಗಪ್ರಾಧಾನ್ಯಾನ್ಯಾಸಾಂ ಯಥಾಸ್ವಂ ವ್ಯಂಜಕಾನಿ ಭವಂತಿ | (ಆ) ಚಿತ್ರೇ ಸಮಾ ಯತಿಃ ದ್ರುತೋಲಯಃ ಉಪರಿಪಾಣಿಃ ಮಾಗಧೀಗೀತಿರೋ ಘೋsವಯವಃ | (ಇ) ವಾರ್ತಿಕೇ ಸ್ರೋತೋಗತಾ ಯತಿರ್ಮಧ್ಯೋ ಲಯಃ ಸಮಪಾಣಿಃ, ಸಂಭಾವಿತಾ ಗೀತಿರನುಗತಂ ಚಾವಯವಃ | (ಈ) ತದ್ವದ್ದಕ್ಷಿಣೇ ಗೋಪುಚ್ಛಾ ಯತಿರ್ವಿಲಂಬಿತೋ ಲಯಃ ಅವಪಾಣಿಃ, ಪೃಥುಲಾಗೀತಿಸ್ತತ್ತ್ವಂ ಚಾವಯವಃ | ೬
೩೮೬. (ಅ) ವೃತ್ತೀನಾಂ ಚ ವಾದ್ಯಂ ಸಮಾನಾಗತಾತೀತಗ್ರಹೈಃ ಕಾರ್ಯಮ್ | (ಆ) ತತ್ರ ಚಿತ್ರಾಯಾಮನಾಗತೋ ಗ್ರಹಃ | (ಇ) ವೃತ್ತೌ ಸಮಗ್ರಹಃ ದಕ್ಷಿಣಾಯಾಂ ಚಾತೀತಗ್ರಹಃ | (ಈ) ಗೀತಪ್ರಯೋಗಸ್ಯಾದೌ ಕಲಾಚತುಷ್ಟಯೇ ವಾದ್ಯಗ್ರಹಯೋಗ ಉಪರಿ ಪಾಣಿರುಚ್ಯತೇ | (ಉ) ಗೀತಪ್ರಯೋಗಸ್ಯ ಸಮ] ಮಭೀಕ್ಷ್ದಂ [ವಾ] ವಾದ್ಯಗ್ರಹಯೋಗಃ [ಸಮಪಾಣಿರುಚ್ಯತೇ | ಗೀತಪ್ರಯೋಗಸ್ಯ] ಪಶ್ಚಾತ್ಕಲಾಚತುಷ್ಟಯೇsತೀತೇ | ಸತಿ ವಾದ್ಯಗ್ರಹಯೋಗಃ ಸೋsಧಃ ಪಾಣಿರುಚ್ಯತೇ | ೭
—
ಪಾಠವಿಮರ್ಶೆ : ೩೮೦ಅ,ಇ,ಈ ೩೮೧ಆ,ಇ,ಈ, ಇ-ಈ, ಆ-ಈ ೩೮೧-೩೯೩, ೮೨-ಅ-ಈ, ಅಆ, ಇ
—-
೩೮೦ ಇವುಗಳ ಪೈಕಿ <ತತ್ರ> ಧುವಾ ಶಬ್ಧಸಹಿತವಾ(ದ ಕ್ರಿಯೆಯಾ) ಗಿದೆ. ಸರ್ಪಿಣಿಯು ಎಡಗಡೆಗೆ ಚಲಿಸುತ್ತದೆ, ಕೃಷ್ಣ ಬಲಗಡೆಗೆ ಹೋಗುತ್ತದೆ ವರ್ತಿನಿಯಾದರೋ ಕೆಳಮುಖವಾಗಿ ಹೋಗುತ್ತದೆ. ೯
೩೮೧ ವಿಸರ್ಜಿತಾ ಹೊರಮುಖವಾಗಿ ಹೋಗುತ್ತದೆ. ವಿಕ್ಷಿಪ್ತಾ ಬಾಗಿರುತ್ತದೆ. ಪತಾಕಾ ಮೇಲು ಮುಖವಾಗಿ ಚಲಿಸುತ್ತದೆಂದು ತಿಳಿಯಬೇಕು. ಪತಿತಾ ನೆಲವನ್ನು ಮುಟ್ಟುತ್ತದೆ. ೧೦
೩೮೨ ಧ್ರುವಕಾ, ಸರ್ಪಿಣಿಗಳು ಚಿತ್ರಾ (ಮಾರ್ಗ) ದಲ್ಲಿ ಪ್ರಯುಕ್ತವಾಗುತ್ತವೆ; ವಾರ್ತಿಕದಲ್ಲಿ ಕೃಷ್ಣಾ, ಪದ್ಮಿನೀ (ವರ್ತಿನಿ?) ಎಂಬ ಮುಂದಿನ ಎರಡು; ದಕ್ಷಿಣಾದಲ್ಲಿ ಎಂಟೂ (ಕ್ರಿಯೆಗಳು ಇರುತ್ತವೆ) ಎಂದು ಸ್ಮರಿಸಿದೆ. ೧೧
೩೮೩ (ಅ) ದಕ್ಷಿಣಾ, ವೃತ್ತಿ (ಮತ್ತು ) ಚಿತ್ರಾಗಳೆಂಬ ವೃತ್ತಿಗಳು (ಕ್ರಮಾವಾಗಿ)ಗೀತದ, ವಾದ್ಯದ [ಮತ್ತು] ಇವೆರಡರ ಪ್ರಾಧಾನ್ಯವನ್ನು ಅನುಸರಿಸಿ ಪ್ರಕಟವಾಗುತ್ತವೆ. (ಆ) ದಕ್ಷಿಣಾ ವೃತ್ತಿಯಲ್ಲಿ ಗೀತವು ಪ್ರಧಾನ, ವೃತ್ತಿ (= ವಾರ್ತಿಕಮಾರ್ಗ)ಯಲ್ಲಿ (ಗೀತವಾದ್ಯಗಳು) ಎರಡೂ ಪ್ರಧಾನ (ವಾಗಿರುತ್ತವೆ); ಚಿತ್ರಾವೃತ್ತಿಯು ವಾದ್ಯಪ್ರಧಾನ (ವಾಗಿರುತ್ತದೆ). 4
೩೮೪. (ಅ) ಈಗ ಪಾಣಿ (=ತಾಲಗ್ರಹ ) ಗಳಿಂದ ಈ ಮೂರು ವೃತ್ತಿ(=ಮಾರ್ಗ)ಗಳಲ್ಲಿರುವ ಕಾಲಮಾನದ ಅಂಗಗಳು ಬದಲಾಗುವ ಪ್ರಾಧ್ಯಾನವನ್ನು ಕುರಿತು (ಗ್ರಂಥಕಾರನು) ಹೇಳುತ್ತಾನೆ. (ಆ) ಈ ವಿಷಯದಲ್ಲಿ ಹೀಗೆ ಹೇಳಿದೆ– 5
೩೮೫. (ಅ) ತಾಲ (ಗೀತಿ, ಲಯ) ಯತಿ (ಮತ್ತು) ಮಾರ್ಗಗಳ ಪ್ರಾಧಾನ್ಯಗಳು ತಮಗೆ ಅನೂರೂಪವಾಗಿ ಪ್ರಕಟಗೊಳ್ಳುತ್ತವೆ. (ಆ) ಚಿತ್ರಾ (ಮಾರ್ಗ) ದಲಿ ಯತಿಯು ಸಮ, ಲಯವು ದ್ರುತ, ಪಾಣಿಯು ಉಪರಿ, ಗೀತಿಯು ಮಾಗಧೀ ಮತ್ತು ಅವಯವವು ಓಘ. (ಇ) ವಾರ್ತಿಕ (ಮಾರ್ಗ) ದಲ್ಲಿ ಯತಿಯು ಸ್ರೋತೋಗತಾ, ಲಯವು ಮಧ್ಯ, ಪಾಣಿಯು ಸಮ, ಗೀತಿಯು ಸಂಭಾವಿತಾ, ಮತ್ತು ಅವಯವವು ಅನುಗತ. (ಈ) ಅಂತೆಯೇ ದಕ್ಷಿಣ (ಮಾರ್ಗ) ದಲ್ಲಿ ಯತಿಯು ಗೋಪುಚ್ಛ, ಲಯವು ವಿಲಂಬಿತ, ಪಾಣಿಯು ಅವಪಾಣಿ, ಗೀತಿಯು ಪೃಥುಲಾ ಮತ್ತು ಅವಯವವು ತತ್ತ್ವ. 6
೩೮೬ (ಅ) ವೃತ್ತಿಗಳ ನುಡಿಸಾಣಿಕೆಯನ್ನು ಸಮ, ಅನಾಗತ ಮತ್ತು ಅತೀತಗ್ರಹಗಳಿಂದ ಮಡಬೇಕು. (ಆ) ಇವುಗಳ ಪೈಕಿ ಚಿತ್ರಾವೃತ್ತಿಯಲ್ಲಿ ಅನಾಗತ ಗ್ರಹ. (ಇ) ವಾರ್ತಿಕದಲ್ಲಿಸಮಗ್ರಹ,ಮತ್ತು ದಕ್ಷಿಣಾದಲ್ಲಿ ಅತೀತಗ್ರಹ. (ಈ) ಹಾಡಿನ ಪ್ರಯೋಗಕ್ಕೆ ಮೊದಲು ನಾಲ್ಕು ಕಲೆಗಳಷ್ಟು ಕಾಲ (ವಾದ್ಯಗಳ) ನುಡಿಸಾಣಿಕೆಯನು ಎತ್ತಿಕೊಳ್ಳುವುದನ್ನು ಉಪರಿಪಣಿಯೆನ್ನುತ್ತಾರೆ. (ಉ) ಹಾಡಿನ ಪ್ರಯೋಗದ ಸಮಕ್ಕೆ, ಅದಕ್ಕೆ ಅಂತರವಿಲ್ಲಂತೆ (ವಾದ್ಯಗಳ) ನುಡಿಸುವಿಕೆಯನ್ನು ಸಂಯೋಜಿಸುವುದಕ್ಕೆ ಸಮಪಾಣಿಯೆನ್ನುತ್ತಾರೆ. (ಊ) ಗೀತವನ್ನು ಪ್ರಯೋಗಿಸಿದ (= ಪ್ರಾರಂಭದ) ನಂತರ ನಾಲ್ಕು ಕಲೆಗಳು ಕಳೆದ ಮೇಲೆ (ವಾದ್ಯಗಳ) ನುಡಿಸಾಣಿಕೆಯನ್ನು ಸಂಯೋಜಿಸುವುದಕ್ಕೆ ಅವಪಾಣಿಯೆನ್ನುತ್ತಾರೆ. 7
—
೩೮೪ಅ ೩೮೫ಅ, ಆ, ಇ, ಈ ೩೮೬ಅ, ಆ, ಉ
____
೩೮೭. (ಅ) ತತ್ರ [ದಕ್ಷಿಣಾಯಾಂ] ಮಾಗಧೀ ನಾಮ ಗೀತಿರ್ವಿಪರೀತಯೋಜನಯಾ ದೃಶ್ಯತೇ | (ಆ) ತದ್ಯಥಾ ದಕ್ಷಿಣೇ ಮಾರ್ಗೇ ಪ್ರವೃತ್ತಾ ಗೀತಿರ್ಯದಾ ಚಿತ್ರೇ ಪ್ರಯುಜ್ಯತೇ ತದಾ ಪೃಥುಲಾಗೀತಿರ್ಮಾಗಧೀತ್ಯುಚ್ಯತೇ (ಇ) [ವೃತ್ತೌ] ವೃತ್ತಿಮಾರ್ಗೇ ಚ [ಪ್ರವೃತ್ತಾ ಗೀತಿರ್ಯದಾ] ಚಿತ್ರೇ ಪ್ರಯುಜ್ಯತೇ ತದಾ ಸಾ ಸಂಭಾವಿತಾ ಮಾಗಧೀಶಬ್ಧವಾಚ್ಯಾ ದ್ವಿಃ ಪರಿವೃತ್ತಕ್ರಮೇಣ ಯೋಜ್ಯತೇ | (ಈ) ಯಾವದ್ದಕ್ಷಿಣೇ [ವಾರ್ತಿಕೇ] ಚ ಚಿತ್ರೇ ಮಾರ್ಗೇ ಪ್ರಯುಜ್ಯತೇ | (ಉ) ಆವಾಪಾದಿಕ್ರಮೇಣಾಷ್ಟಧಾ ಚತುರ್ಧಾ [ದ್ವಿಧಾ] ಚೇತಿ | 8
೩೮೮ (ಅ) ಏವಮುಕ್ತಂ ಭವತಿ – (ಆ) ಚಿತ್ರೇ ಚ ದ್ವಿಮಾತ್ರಾ ಕಲಾ | (ಇ) [ತದ್ಗತಾ ಚ ಮಾಗಧೀ |] (ಈ) ಸೈವ ಮಾಗಧೀ ಗೀತಿಃ [ಯಥಾ] ಸಂಭಾವಿತಯಾ ಗೀತ್ಯಾ ಪ್ರಯುಜ್ಯತೇ ತದಾ ಚರುರ್ಮಾತ್ರಿಕವೃತ್ತಿ[ಮಾರ್ಗ] ಶಬ್ಧೇನೋಚ್ಯತೇ | (ಉ) ಯದಾ ತು [ವೃತ್ತಿ ಮಾರ್ಗಗತಾ] ಸಂಭಾವಿತಾಶಬ್ಧವಾಚ್ಯಾ ಮಾಗಧೀ ಗೀತಿಃ ದ್ವಿಗುಣಿತಾ ಅಷ್ಟಮಾತ್ರಾ [ಭವತಿ ತದಾ] ಪೃಥುಲಾ ಶಬ್ಧವಾಚ್ಯಾ ದಕ್ಷಿಣಮಾರ್ಗೇ ಭವತಿ | (ಊ) ತ್ರಿಸ್ತ್ರೀರ್ನಿವೃತ್ತಿಸ್ತ್ರಿರಾವೃತ್ತಿರ್ಮಾಗಧೀ (ಋ) ಯಥಾ ದೇವಮಿತಿ ಪದಂ ಗೀತ್ವಾ ಪ್ರಥಮಾಂ ಕಲಾಂ ನಿರ್ವಾಹ್ಯ ವಿಲಂಬಿತಲಯೇನ
ಯದಾ ದ್ವಿತೀಯಾಂ ಕಲಾಂ ಮಧ್ಯಮಲಯೇನ ದೇವಮಿತ್ಯನೇನ ಪದೇನ ಶರ್ವಮಿತಿ
ಸಹಿತೇನ ಗಾಯತಿ, ತತ್ರಾಪಿ ಚ ತೃತೀಯಾಂ ಕಲಾಂ ದ್ರುತಲಯೇನ
ಶರ್ವಮಿತಿ ಪದದ್ವಯೇನ ವಂದೇ ಇತಿ ಪದಾಂತಸಹಿತೇನ ನಿರ್ವಾಹಯತೀತಿ
ಕಾಲತ್ರಯವ್ಯಾಪನಮ್ | ಯಥಾ –
ಮಾ ಮಾ ಸಾ ಸಾ
[ದೇ – ವಂ -]
ಮಾ ಸಾ ಸಾ ಮಾ
[ದೇ ವಂ ಶ ರ್ವಂ]
ಸ ಸ ಮ ಸ ಮ ಮ ರಿ ರಿ
[ದೇ ವಂ ಶ ರ್ವಂ ವಂ – ದೇ – ] 9
—
ಪಾಠವಿಮರ್ಶೆ : ೩೮೭ ಅ, ಆ, ಇ, ಈ ೩೮೮ಅ, ಉ, ಊ, ಋ
—-
೩೮೭ (ಅ) ಈ ಸಂದರ್ಭದಲ್ಲಿ, ದಕ್ಷಿಣಾ (ಮಾರ್ಗ) ದಲ್ಲಿರುವ ಮಾಗಧೀ ಎಂಬ ಗೀತಿಯು ತಿರುಗುಮುರುಗಾಗಿರುವ ಯೋಜನೆಯಲ್ಲಿರು (ಪ್ರಯೋಗವಾಗು)ವುದು ಕಂಡುಬರುತ್ತದೆ. (ಆ) ಅದು ಹೇಗೆಂದರೆ – ದಕ್ಷಿಣಾ (ಮಾರ್ಗ) ದಲ್ಲಿ ತೊಡಗಿರುವ ಗೀತಿಯನ್ನು ಚಿತ್ರಾ (ಮಾರ್ಗ) ದಲ್ಲಿ ಪ್ರಯೋಗಿಸಿದರೆ ಆಗ ಪೃಥುಲಾ ಗೀತಿಯು ವೃತ್ತಿಯಲ್ಲಿ ಮಾಗಧೀ ಎನ್ನಿಸುತ್ತದೆ. ವೃತ್ತಿ (=ವಾರ್ತಿಕ) ಮಾರ್ಗದಲ್ಲಿ ತೊಡಗಿರುವ ಗೀತಿಯನ್ನು ಚಿತ್ರಾ ಮಾರ್ಗದಲ್ಲಿ ಪ್ರಯೋಗಿಸಿದರೆ ಆಗ ಸಂಭಾವಿತಾ ಗೀತಿಯು ಮಾಗಧೀ ಎಂಬ ಹೆಸರನ್ನು ಪಡೆದು ಎರಡು ಬಾರಿ ಪುನರಾವರ್ತಿತವಾಗಿ ಪ್ರಯೋಗವನ್ನು ಹೊಂದುತ್ತದೆ. (ಉ) ಆದುದರಿಂದ ದಕ್ಷಿಣಾ[ ವಾರ್ತಿಕಾ] ಮತ್ತು ಚಿತ್ರಾ ಮಾರ್ಗದಲ್ಲಿ (ಅದು)ಪ್ರಯುಕ್ತವಾಗುತ್ತದೆ. (ಊ) ಆವಾಪವೇ ಮೊದಲಾದ ಕ್ರಮದಲ್ಲಿ (ಕಲೆಯ ಪ್ರಮಾಣವು) ಎಂಟರಷ್ಟು (=ಎಂಟು ಮಾತ್ರೆಗಳಷ್ಟು), ನಾಲ್ಕರಷ್ಟು (=ನಾಲ್ಕು ಮಾತ್ರೆಗಳಷ್ಟು) ಮತ್ತು [ಎರಡರಷ್ಟು] (ಇರುತ್ತದೆ). 8
೩೮೮. (ಅ) (ಈ ವಿಷಯದಲ್ಲಿ ) ಹೀಗೆ ಹೇಳಿದೆ –(ಆ) ಚಿತ್ರಾದಲ್ಲಿ ಎರಡು ಕಲೆಯಿರುತ್ತದೆ. (ಇ) ಆದರಲ್ಲಿ ಮಾಗಧೀ ಇರುತ್ತದೆ). (ಈ) ಅದೇ ಮಾಗಧೀ (ಗೀತಿ) ಯನ್ನು ಸಂಭಾವಿತಾ ಗೀತಿಯಲ್ಲಿ (- ತಿಯೊಡನೆ) ಪ್ರಯೋಗಿಸಿದರೆ ಆಗ ನಾಲ್ಕು ಮಾತ್ರೆಗಳ ವಾರ್ತಿಕಮಾರ್ಗವೆಂಬ ಮಾತಿನಿಂದ ಕರೆಯಲಾಗುತ್ತದೆ (ಉ) ಯಾವಾಗ ವಾರ್ತಿಕ ಮಾರ್ಗದಲ್ಲಿ ನೆಲೆಸಿರುವ ಸಂಭಾವಿತಾ ಎಂಬ ಹೆಸರಿನಿಂದ ಕರೆಯಲಾಗುವ ಮಾಗಧೀ ಗೀತಿಯು ಎರಡಷ್ಟಾಗಿ ಎಂಟು ಮಾತ್ರೆಗಳ (ಕಲೆಯ ಪ್ರಮಾಣ)ದ್ದಾಗಿರುತ್ತದೋ ಆಗ (ಅದು) ಪೃಥುಲಾ ಎಂಬ ಹೆಸರಿನಿಂದ ದಕ್ಷಿಣಾಮಾರ್ಗದಲ್ಲಿ ನೆಲೆಸುತ್ತದೆ. (ಊ) ಮಾಗಧೀಯು ಮೂರು ಮೂರು ಸಲ ಹಿಂತಿರುಗುವಂತಹದು, (ಆದುದರಿಂದ) ಮೂರು ಸಲ ಪುನರಾವೃತ್ತಿಗೊಳ್ಳಬೇಕು. (ಋ) ಹೇಗೆಂದರೆ – (ದೇವಂ ಶರ್ವಂ ವಂದೇ ಎಂಬ ಗೀತಿಯಲ್ಲಿ) ದೇವಂ ಎಂಬ ಪದವನ್ನು ಹಾಡಿ, ಮೊದಲನೆಯ ಕಲೆಯನ್ನು (ಅದರಲ್ಲಿ) ವಿಲಂಬಲಯದಲ್ಲಿ ನಿರ್ವಹಿಸಿ ಎರಡನೆಯ ಕಲೆಯನ್ನು ಮಧ್ಯಮಲಯದಲ್ಲಿ ದೇವಂ ಎಂಬುದನ್ನು ಶರ್ವಂ ಎಂಬುದರೊಡನೆ ನಿರ್ವಹಿಸಿ, ಮೂರನೆಯ ಕಲೆಯನ್ನು ದ್ರುತಲಯದಲ್ಲಿ ದೇವಂ ಶರ್ವಂ ಎಂಬೆರಡು ಪದಗಳನ್ನು ವಂದೇ ಎಂಬ ಪದದೊಡನೆ ನಿರ್ವಹಿಸಬೇಕು. ಹೀಗೆ ಮೂರು ಕಾಲಗಳೂ ( ಈ ಗೀತೆಯಲ್ಲಿ) ವ್ಯಾಪಿಸಿರುತ್ತವೆ. ಹೇಗೆಂದರೆ –
ಮಾ ಮಾ ಸಾ ಸಾ
[ದೇ – ವಂ –]
ಮಾ ಸಾ ಸಾ ಮಾ
[ದೇ ವಂ ಶ ರ್ವಂ]
ಸ ಸ ಮ ಸ ಮ ಮ ರಿ ರಿ
[ದೇ ವಂ ಶ ರ್ವಂ ವಂ – ದೇ –] 9
____
೩೮೯ (ಅ) ಮಗಧದೇಶೋದ್ಭವತ್ವಾನ್ಮಾಗಧೀ | (ಆ) ಅನ್ಯೇ ತು ದ್ವಿರ್ನಿವೃತ್ತಾಂ ಮಾಗಧೀಂ ಪಠಂತೀ | (ಇ) ಅರ್ಧನಿವೃತ್ತಾವರ್ಥಃ ಪ್ರವೃತ್ತಿನಿವೃತ್ತಿಗೋ ಹೇತುರ್ಮಂತವ್ಯಃ | ಯತಃ ಸಾಮವೇದೇ ಗೀತಪ್ರಧಾನೇ ಆವೃತ್ತಿಷ್ವರ್ಥೋ ನಾದ್ರಿಯತ ಇತಿ | (ಉ) ತದುಕ್ತಂ -ಯ ಆವೃತ್ತ್ಯಾತ್ಮಾ ಜಾತವೇದಸಮಿತಿ [ಶಬ್ಧಃ]
೩೯೦ (ಅ) ಅತ್ರ ವೇದಶಬ್ಧಪರ್ಯವಸಿತಾ ಸಂಭಾವಿತಾ, ಲಘುಪ್ರಾಯತ್ವೇ ಚ ಪೃಥುಲಾ, ಭೂಯಸ್ತ್ಯಾತ್ಪದಗ್ರಾಮಸ್ಯ ಪೃಥುಲೇತ್ಯುಕ್ತಾ |
[ಇತಿ ಮಾರ್ಗಲಯಾಃ |]
೩೯೧. (ಅ) ಮಾರ್ಗತ್ರಯೇ ಗೀತಿವಿಧೌ ಲಯಪ್ರಯೋಗೋ ನವಧಾ ದ್ರಷ್ಟವ್ಯಃ | (ಆ) ಲಯಸಂಪ್ರಯೋಗಂ ದರ್ಶಯತಿ-ದಕ್ಷಿಣೋ ಮಾರ್ಗೋ, ವಾರ್ತಿಕೋ ಮಾರ್ಗಶ್ಚಿತ್ರಮಾರ್ಗ ಇತಿ ದಕ್ಷಿಣ[ಮಾರ್ಗ] ಪ್ರವೃತ್ತೌ ಲಯತ್ರಯಮ್ | (ಇ) ವಾರ್ತಿಕಮಾರ್ಗಶ್ಚಿತ್ರಮಾರ್ಗೋ ಧ್ರುವಮಾರ್ಗಶ್ಚೇತಿ ವೃತ್ತಿಮಾರ್ಗಪ್ರವೃತ್ತೌ ಲಯತ್ರಯಮ್ | (ಈ) ಚಿತ್ರಮಾರ್ಗೋ ಧ್ರುವಮಾರ್ಗಃ ಶೂನ್ಯಮಾರ್ಗಶ್ಚೇತಿ ಚಿತ್ರ [ಮಾರ್ಗಪ್ರವೃತ್ತೌ] ಲಯತ್ರಯಮ್ |
೩೯೨. (ಅ) ಇತಿ ಗೀತ್ಯದ್ಯಾಯೇ ಪ್ರತಿಪಾದಿತಮ್ | (ಆ) ಯಥಾ – [ದಕ್ಷಿಣೇ ಚತ್ವಾರೋ ಗುರವಃ, ದ್ವೌ ಗುರೂ ಏಕೋ ಗುರುಃ | (ಇ) ವಾರ್ತಿಕೇ ದ್ವೌ ಗುರೂ, ಏಕೋ ಗುರುಃ ಏಕೋ ಲಘುಃ|] (ಈ) ಚಿತ್ರ ಏಕೋ ಗುರುಃ ಏಕೋ ಲಘುಃ, ಏಕೋ ದ್ರುತಃ | ೧೩
೩೯೩. [ಧ್ರುವೇ ಶೂನ್ಯಾದ್ದ್ವಿಗುಣಃ ಸ್ಯಾಚ್ಚಿತ್ರೇ ಸ್ಯಾದ್ದ್ವಿಗುಣೋ ಧ್ರುವಾತ್ |]
ಚಿತ್ರದ್ವಿಗುಣೋ ವೃತ್ತೌತದ್ದ್ವಿಗುಣೋ ದಕ್ಷಿಣೇ ತಥಾ || ೧೨ ||
—
ಪಾಠವಿಮರ್ಶೆ : ೩೮೯ ಅ, ಇ, ಈ, ಉ, ಊ ೩೯೦ಅ ೩೯೧ಅ ೩೯೧ಅ, ಆ, ಈ ೩೯೨ಈ
—-
೩೮೯. (ಅ) ಮಗಧದೇಶದಲ್ಲಿ ಹುಟ್ಟಿದ್ದರಿಂದ (ಈ ಗೀತಿಗೆ) ಮಾಗಧೀ (ಎಂಬ ಹೆಸರಿದೆ). (ಆ) ಇತರರು ಮಾಗಧೀಯನ್ನು ಎರಡು ಸಲ ಹಿಂತಿರುಗುವಂತಹದು (=ಎರಡು ಸಲ ಆ ವೃತ್ತಿಗೊಳ್ಳುವುದು) ಎಂದು (ಈ ಶಬ್ದವನ್ನು) ಓದಿಕೊಳ್ಳುತ್ತಾರೆ. (ಇ) ಅರ್ಥ ಎಂಬುದು ಪದಕ್ಕೆ ಸಂಬಂಧಿಸಿರುವುದರಿಂದ ಅರ್ಧಮಾಗಧೀ (ಎಂಬ ಹೆಸರು ಬಂದಿದೆ). (ಈ) ಪದದ ಅರ್ಥವನ್ನು ಆವೃತ್ತಿಗೊಳಿಸುವಲ್ಲಿ ಅದರ ಅರ್ಥವು ಹಾಡಿನ ಮುಂಚಲನೆಯನ್ನು <ಪ್ರವೃತ್ತಿ> (ಅಥವಾ ಸ್ವೀಕೃತಿಯನ್ನು) ಮತ್ತು ಹಿಂತಿರುಗಿಸುವಲ್ಲಿ <ನಿವೃತ್ತಿ> (ಅಥವಾ ಮರಳುವುದನ್ನು) ನಿರ್ಣಯಿಸುವುದಕ್ಕೆ ಹೇತುವೆಂದು ತಿಳಿಯಬಾರದು. ಏಕೆಂದರೆ ಗೇಯತೆಯೇ (=ಗೀತವು) ಪ್ರಧಾನವಾಗಿರುವ ಸಾಮವೇದದಲ್ಲಿ ಪುನರಾವೃತ್ತಿಯನ್ನು ಮಾಡುವಾಗ (ಪದಗಳ) ಅರ್ಥವನ್ನು ಆದರಿಸುವುದಿಲ್ಲ. (ಉ) ಈ ಸಂಬಂಧದಲ್ಲಿ (ಉದಾಹರಣೆಯಾಗಿ) ಹೀಗೆ ಹೇಳಿದೆ– ಆವೃತ್ತಿಯಾಗುವ ‘ಜಾತವೇದಸಂ’ ಎಂಬ ಶಬ್ಧ. 10
೩೯೦. (ಅ) ಈ ಸಂದರ್ಭದಲ್ಲಿ (‘ಜಾತವೇದ’ ಎಂಬ) ವೇದಶಬ್ಧದಿಂದ ಸಂಭಾವಿತಾ (ಗೀತಿಯು) ಮುಗಿಯುತ್ತದೆ; ಆದರೆ ಪೃಥುಲಾಗೀತಿಯು ಲಘುಗಳ ಹೆಚ್ಚಳದಲ್ಲಿ (ಆಗುವುದರಿಂದ), ಪದಸಮೂಹದ ಬಾಹುಳ್ಳದಿಂದ ಪೃಥುಲಾ ಎಂಬ ಹೆಸರಿನದಾಗಿದೆ. 11
[ಹೀಗೆ, ಮಾರ್ಗ-ಲಯಗಳು ಮುಗಿದವು.]
೩೯೧. (ಅ) ಮೂರು ಮಾರ್ಗಗಳಲ್ಲಿ, ಗೀತಗಳನ್ನು ಕಲ್ಪಿಸುವಾಗ (ಅಥವಾ ನಿಯಮಗಳನ್ನು ಕಟ್ಟಳೆಮಾಡುವಲ್ಲಿ) ಲಯದ ಪ್ರಯೋಗವು ಒಂಬತ್ತು ವಿಧವೆಂಬುದನ್ನು ಗಮನಿಸಬೇಕು. (ಆ) [ಈ] ಲಯಪ್ರಯೋಗವು (ಹೇಗಿರಬೇಕು) ಎಂಬುದನ್ನು (ಗ್ರಂಥಕಾರನು) ತೋರಿಸಿಕೊಡುತ್ತಾನೆ: ದಕ್ಷಿಣಾ (ಮಾರ್ಗ) ದ ವ್ಯವಹಾರ (=ನಡೆ) ದಲ್ಲಿ <ಪ್ರವೃತ್ತಿ> ದಕ್ಷಿಣಾಮಾರ್ಗ, ವಾರ್ತಿಕಮಾರ್ಗ, ಚಿತ್ರಮಾರ್ಗ ಎಂಬ ಮೂರು ಲಯಗಳು (ಇವೆ). ವೃತ್ತಿ (=ವಾರ್ತಿಕ) ಮಾರ್ಗವು ತೊಡಗಿರುವಾಗ <ಪ್ರವೃತ್ತಾ> ವಾರ್ತಿಕಮಾರ್ಗ, ಚಿತ್ರಾಮಾರ್ಗ ಧ್ರುವಾಮಾರ್ಗವೆಂಬ ಮೂರು ಲಯಗಳು (ಇವೆ). (ಈ) ಚಿತ್ರಾ (ಮಾರ್ಗವು ನಡೆಯುತ್ತಿರುವಾಗ) ಚಿತ್ರಾಮಾರ್ಗ, ಧ್ರುವಾಮಾರ್ಗ, ಶೂನ್ಯಮಾರ್ಗ ಎಂಬ ಮೂರು ಲಯಗಳು (ಇವೆ.) 12
೩೯೨. (ಅ) (ನಾಟ್ಯಶಾಸ್ತ್ರದ?) ಗೀತಾಧ್ಯಾಯದಲ್ಲಿ (ಇದನ್ನು) ತೋರಿಸಿಕೊಟ್ಟಿದೆ. (ಆ) ಹೇಗೆಂದರೆ- ದಕ್ಷಿಣಾ (ಮಾರ್ಗ) ದಲ್ಲಿ ನಾಲ್ಕು ಗುರುಗಳು, ಎರಡು ಗುರುಗಳು ಮತ್ತು ಒಂದು ಗುರು. (ಇ) ವಾರ್ತಿಕ (ಮಾರ್ಗ) ದಲ್ಲಿ ಎರಡು ಗುರುಗಳು ಒಂದು ಗುರು ಮತ್ತು ಒಂದು ಲಘು. (ಈ) ಚಿತ್ರಾ (ಮಾರ್ಗ) ದಲ್ಲಿ ಒಂದು ಗುರು, ಒಂದು ಲಘು, ಒಂದು ದ್ರುತ. 13
೩೯೩. [ಧ್ರುವಾಮಾರ್ಗದಲ್ಲಿ (ಪ್ರತಿಯೊಂದು ಘಟಕದ ಕಾಲಪ್ರಮಾಣವು) ಶೂನ್ಯದ (ಮಾರ್ಗದ)ಲ್ಲಿರುವುದರ ಎರಡರಷ್ಟು ಚಿತ್ರಾ (ಮಾರ್ಗ) ದಲ್ಲಿ ಧ್ರುವಾ (ಮಾರ್ಗ) ದಲ್ಲಿರುವುದರ ಎರಡರಷ್ಟು). ಚಿತ್ರಾದಲ್ಲಿರುವುದರ ಎರಡರಷ್ಟು ವೃತ್ತಿ (ಮಾರ್ಗ) ಯಲ್ಲಿ; ಇದೇ ರೀತಿಯಲ್ಲಿ ಅದರ (=ವೃತ್ತಿಮಾರ್ಗದ)ಲ್ಲಿರುವುದರ ಎರಡರಷ್ಟು ದಕ್ಷಿಣಾಮಾರ್ಗ[ದಲ್ಲಿ] ಇರುತ್ತದೆ. ೧೨
____
೩೯೪.[ಅರ್ಧಮಾತ್ರಾ ಕಲಾ ಶೂನ್ಯೇ ಏಕಮಾತ್ರಾ ಧ್ರುವೇ ಭವೇತ್ |]
ದ್ವಿಮಾತ್ರಾ ಸ್ಯಾತ್ಕಲಾ ಚಿತ್ರೇ ಚತುರ್ಮಾತ್ರಾ ತು ವಾರ್ತಿಕೇ |
ಅಷ್ಟಮಾತ್ರಾ ತು ವಿದ್ವದ್ಭಿರ್ದಕ್ಷಿಣೇ ಸಮುದಾಹೃತಾ || ೧೩ ||
[ಇತಿ ಪದಗೀತಯಃ]
[ಇತಿ ಪ್ರಥಮೋ ಸ್ವರಗತಾಧ್ಯಾಯಃ]
—
ಪಾಠವಿಮರ್ಶೆ : ೩೯೪ ಊ; ಉಪಾಂತ್ಯ ಸಮಾಪ್ತಿವಾಕ್ಯ
—-
೩೯೪. [ಶೂನ್ಯಮಾರ್ಗದಲ್ಲಿ ಕಲೆಯು ಅರ್ಧಮಾತ್ರೆಯಷ್ಟೂ ಧ್ರುವಾಮಾರ್ಗದಲ್ಲಿ ಒಂದು ಮಾತ್ರೆಯಷ್ಟೂ ಇರುತ್ತದೆ: ಚಿತ್ರಾಮಾರ್ಗದಲ್ಲಿ ಕಲೆಯು ಎರಡು ಮಾತ್ರೆಗಳಷ್ಟೂ] ವಾರ್ತಿಕದಲ್ಲಿ ನಾಲ್ಕು ಮಾತ್ರೆಗಳಷ್ಟೂ ಇರುತ್ತದೆ, ದಕ್ಷಿಣಾದಲ್ಲಿ (ಕಲೆಯು) ಎಂಟು ಮಾತ್ರೆಗಳಷ್ಟು ಇರುತ್ತದೆಂದು ವಿದ್ವಾಂಸರು ವಿವರಿಸಿದ್ದಾರೆ. ೧೩
[ಹೀಗೆ ಪದ-ಗೀತಿಗಳ ವರ್ಣನೆಯು ಮುಗಿಯಿತು.]
[ಹೀಗೆ ಮೊದಲನೆಯ ಅಧ್ಯಾಯವು ಮುಗಿಯಿತು.]
Leave A Comment