[ತತ್ರ ಸ್ವರಲಕ್ಷಣಮ್]

೯೪     ಇದಾನೀಂ ಸಂಪ್ರವಕ್ಷ್ಯಾಮಿ ಸ್ವರಾಣಾಂ ಚ ವಿನಿಶ್ಚಯಮ್ |
ತತ್ರಾದೌ ಸ್ವರಶಬ್ದಸ್ಯ ವ್ಯುತ್ಪತ್ತಿರಿಹ ಕಥ್ಯತೇ || ೧ ||

೯೫     ರಾಜೃದೀಪ್ತಾವಿತಿ ಧಾತೋಃ ಸ್ವಶಬ್ದಪೂರ್ವಕಸ್ಯ ಚ |
ಸ್ವಯಂ ಯೋ ರಾಜತೇ ಯಸ್ಮಾತ್‌ತಸ್ಮಾದೇಷ ಸ್ವರಃ ಸ್ಮೃತಃ || ೨ ||

೯೬     (ಅ) ನನು ಸ್ವರ ಇತಿ ಕಿಮ್? (ಆ) ಉಚ್ಯತೇ – (ಇ) ರಾಗಜನಕೋ ಧ್ವನಿಃ ಸ್ವರ ಇತಿ |
(ಈ) ತಥಾ ಚಾಹ ಕೋಹಲಃ – 1

೯೭     ಆತ್ಮೇಚ್ಛಯಾ ಮಹೀತಲಾದ್ ವಾಯುರುದ್ಯನ್ ನಿಧಾರ್ಯತೇ |
ನಾಡೀಭಿತ್ತೌ ತಥಾssಕಾಶೇ ಧ್ವನೀ ರಕ್ತಃ ಸ್ವರಃ ಸ್ಮೃತಃ || ೩ ||

೯೮     (ಅ) ನನು ಸ್ವರ ಏವಂ ಸ್ಯಾದೇಕೋsನೇಕೋ ವಾ ವ್ಯಾಪಕೋsವ್ಯಾಪಕೋ ವಾ, ನಿತೋsನಿತ್ಯೋ ವಾ ಸ್ಯಾತ್‌ | (ಆ) ಅತ್ರೋಚ್ಯತೇ – ಏಕೋsನೇಕೋ ವ್ಯಾಪಕೋ ನಿತ್ಯಶ್ಚೇತಿ | (ಇ) ತತ್ರ ನಿಷ್ಕಲರೂಪೇಣೈಕಃ ಸ್ವರಃ ಷಡ್ಜಾದಿರೂಪೇಣಾನೇಕಃ ಸ್ವರಃ |
(ಈ) ತಥಾ ಚಾಹ ಕೋಹಲಃ –                                                                               2

ಪಾಠವಿಮರ್ಶೆ : ೯೨ಇ ೯೫ಅಆ, ಆ, ಈ ೯೬ಅ ೯೭ಅ, ಈ ೯೮ಅ

—-

೯೨ (ಅ) ಭರತನಾದರೋ ಪುನಃ ಋಷಭವೇ ಮೊದಲಾದ ಶ್ರುತಿಮಂಡಲಗಳನ್ನು (ಷಡ್ಜಗ್ರಾಮದಲ್ಲಿ) ತೋರಿಸುತ್ತಾನೆ. (ಆ) ಇದಕ್ಕೇನು ಕಾರಣ? (ಇ) (ಕಾರಣವನ್ನು) ಹೇಳಲಾಗುವುದು. (ಈ) (ಏಕೆಂದರೆ) ಎರಡು ಗ್ರಾಮಗಳಲ್ಲಿಯೂ ಅಂತರ (ಗಾಂಧಾರ ಮತ್ತು ಕಾಕಲೀನಿಷಾದಗಳನ್ನುಳ್ಳ) ಮೂರ್ಛನೆಗಳನ್ನು ಪ್ರತಿಪಾದಿಸಲೆಂದು (ಹೀಗೆ ಮಾಡಿದ್ದಾನೆ), ಅಥವಾ ಎರಡು ಗ್ರಾಮಗಳಲ್ಲಿಯೂ ಕ್ರಮವಾಗಿ ಷಡ್ಜ (ಮತ್ತು) ಮಧ್ಯಮಸ್ವರಗಳು ಗ್ರಾಮಧಿಪತಿಗಳಾಗಿ ಇರುತ್ತವೆ; ಉಳಿದ ಸ್ವರಗಳು (ಅವುಗಳ) ಮುಂದೆ (ನಂತರ) ಚಲಿಸುತ್ತವೆ (ಎಂಬ ಕಾರಣಕ್ಕಾಗಿ ಹೀಗೆ ಮಾಡಿದ್ದಾನೆ).          24

೯೩ ಗ್ರಾಮಗಳಲ್ಲಿ ನೆಲೆಸಿರುವ ಶ್ರುತಿಗಳನ್ನು ಇಷ್ಟರವರೆಗೆ ನಾನು ಹೇಳಿದ್ದೇನೆ                                                ೪೩

[ಹೀಗೆ ಶ್ರುತಿಪ್ರಕರಣವು ಮುಗಿಯಿತು.]

 

[iv ಸ್ವರಪ್ರಕರಣಮ್]

[ಸ್ವರದ ಲಕ್ಷಣ]

೯೪ ಈಗ ಸ್ವರಗಳ ನಿರ್ಣಯವನ್ನು ಹೇಳುತ್ತೇನೆ. ಈ ವಿಷಯದಲ್ಲಿ ‘ಸ್ವರ’ ಎಂಬ ಶಬ್ದದ ವ್ಯುತ್ಪತ್ತಿಯನ್ನು ಈ ಶಾಸ್ತ್ರದಲ್ಲಿ <ಇಹ> ಹೇಳಲಾಗುವುದು.                                                                                                                              ೧

೯೪ [‘ಸ್ವರ’ ಎಂಬ ಶಬ್ದವು] ‘ಪ್ರಕಾಶಿಸು’ ಎಂಬ ಅರ್ಥವಿರುವ ‘ರಾಜೃ’ ಎಂಬ ಧಾತುವಿಗೆ ಮೊದಲು ‘ಸ್ವ’ (ಉಪಸರ್ಗವು) ಸೇರಿಕೊಂಡು ಆಗಿದೆ. ತನ್ನಿಂದ ತಾನೇ ಪ್ರಕಾಶಿಸುವುದು ಎಂಬ ಅರ್ಥವಿರುವುದರಿಂದ ಇದು ಸ್ವರ (ವೆಂಬ ಸಂಜ್ಞೆಯನ್ನುಳ್ಳದ್ದು) ಎಂದು ಸ್ಮೃತವಾಗಿದೆ.         ೨

೯೬ (ಅ) ಹಾಗಾದರೆ ಸ್ವರ ಎಂದರೇನು? (ಆ) ಹೇಳಲಾಗುವುದು: (ಇ) ರಾಗವನ್ನು ಹುಟ್ಟಿಸುವ ಧ್ವನಿಯೇ ಸ್ವರ.
(ಈ) ಕೋಹಲನು ಹೀಗೆ ಹೇಳಿದ್ದಾನೆ-                                                                                                   1

೯೭ ಆತ್ಮನ ಇಚ್ಛೆಯಿಂದಾಗಿ (ಪ್ರಾಣ)ವಾಯುವು ಹೊಕ್ಕುಳಿತ ಬುಡದಿಂದ <ಮಹೀತಲಾದ್> (ಮೇಲು) ಮೇಲಕ್ಕೆ ಚಲಿಸಿ (ಅಲ್ಲಿರುವ) (ಯೋಗ) ನಾಡಿಗಳ ಗೋಡೆಗಳ ಮೇಲೂ (ನಾಡಿಗಳಲ್ಲಿರುವ) ಆಕಾಶದಲ್ಲಿಯೂ ನೆಲೆಸಿದಾಗ ರಂಜನೆಯನ್ನುಂಟುಮಾಡುವ ಧ್ವನಿಯು (ಉದಯಿಸಿ ಅದು) ಸ್ವರ ಎಂದು ಸ್ಮ್ರತವಾಗಿದೆ.                                                                                                                  ೩

೯೮ (ಅ) ಸ್ವರವು ಹೀಗಿರುವಲ್ಲಿ ಅದು ಒಂದೋ, ಅನೇಕವೋ, ವ್ಯಾಪಕವೋ, ವ್ಯಾಪಕವಲ್ಲವೋ, ಶಾಶ್ವತವೋ, ಅಶಾಶ್ವತವೋ? (ಆ) ಈ ಸಂದರ್ಭದಲ್ಲಿ [ಹೀಗೆ] ಹೇಳಲಾಗುವುದು-ಅದು ಒಂದೂ ಹೌದು, ಅನೇಕವೂ ಹೌದು; ವ್ಯಾಪಕವೂ ಶಾಶ್ವತವೂ (ಆಗಿದೆ). (ಇ) ಕಲೆ (=ಸಾಪೇಕ್ಷವಾದ ಅವಯವ)ಗಳು ಇಲ್ಲದಿರುವಾಗ ಸ್ವರವು ಒಂದೇ; ಷಡ್ಜವೇ ಮೊದಲಾದ ರೂಪಗಳಿಂದ ಅದು ಅನೇಕ.
(ಈ) ಕೋಹಲನು ಹೀಗೆ ಹೇಳಿದ್ದಾನೆ-

____

೯೯     ಜಾತಿಭಾಷಾದಿಸಂಯೋಗಾದನಂತಃ ಕೀರ್ತಿತಃ ಸ್ವರಃ |
ಪದೈರ್ಯುಕ್ತಸ್ತ್ವಲಮಿತಿ ಕೃತೌ ಯೋಜ್ಯೋ ರಸೇಷ್ವಪಿ || ೪ ||

೧೦೦   (ಅ) ನಿತ್ಯೋsವಿನಾಶೀ | (ಆ) ವ್ಯಾಪಕಃ ಸರ್ವಗತಃ (ಇ) ತಥಾ ಚಾಹ ಕೋಹಲಃ-                                       3

೧೦೧   ಊರ್ಧ್ವನಾಡೀಪಯತ್ನೇನ ಸರ್ವಭಿತ್ತಿನಿಘಟ್ಟನಾತ್‌ |
ಮೂರ್ಛಿತೋ ಧ್ವನಿರಾಮೂರ್ಧ್ನಃ ಸ್ವರೋsಸೌ ವ್ಯಾಪಕಃ ಪರಃ || ೫ ||

೧೦೨   (ಅ) ಅನಿತ್ಯೋsವ್ಯಾಪಕಶ್ಚಾಸೌ ತಥಾ ಚಾರ್ಹತಮೇವ (ಚಾರ್ವಾಕಮತೇ? ಬಾರ್ಹತಮತೇ? ಚಾರ್ಹಂತಮತೇ?) (ಆ) ವಿವರ್ಜಿತ (ವಿವಕ್ಷಿತ?) ಪ್ರದೇಶಾತ್‌ಪ್ರದೇಶಾಂತರೇ ಶ್ರವಣಾಭಾವಾತ್‌ಅವ್ಯಾಪಕತ್ವಮೇವ ಸ್ವರಸ್ಯ, ನೋ ಚೇತ್‌ದೇಶಾಂತರೇsಪಿ (ಸ್ವರ) ಶ್ರವಣಂ ಸ್ಯಾತ್‌ | (ಇ) ನ ಚ ತಥಾ ಲೋಕೇsಸ್ತಿ | (ಈ) ಇಚ್ಛಾಪ್ರಯತ್ನಪೂರ್ವಕತ್ವೇನೋತ್ಪನ್ನಸ್ವರಕಾಲೇ ಯಥಾ ಸ್ವರಸ್ಯ ಶವಣಂ, ತಥಾ ಕಾಲಾಂತರೇ ಶ್ರವಣಾಭಾವಾತ್‌ನಾಸ್ತಿ ನಿತ್ಯತ್ವಮ್‌ | (ಉ) ನೋ ಚೇತ್‌ಕಾಲಾಂತರೇsಪಿ ಶ್ರವಣಂ ಸ್ಯಾತ್‌ | (ಊ) ನ ಚ ತಥಾಸ್ತಿ ಲೋಕೇ | (ಋ) ತಸ್ಮಾತ್ಸ್ವ್‌ರೋsವ್ಯಾಪಕೋsನಿತ್ಯಶ್ಚ |                                                                           4

೧೦೩   (ಅ) ನನು ಷಡ್ಜಾದೀನಾ ಕಥಂ ಸ್ವರತ್ವಂ, ವ್ಯಂಜನತ್ವಾತ್‌? (ಆ) ಯದಿ ವ್ಯಂಜನಾನಾಂ ಸ್ವರತ್ವಮಭಿಧೀಯತೇ ತದಾನೀಂ ಕಾದೀನಾಮೇವಾಸ್ತು ಸ್ವರತ್ವಮ್‌ |                                                                                              5

೧೦೪   (ಅ) ಅತ್ರೋಚ್ಯತೇ- (ಆ) ಅಸಾಧಾರಣತ್ವಾತ್‌ಷಡ್ಜಾದೀನಾಮೇವ ಸ್ವರತ್ವಂ ನ ಕಾದೀನಾಮಿತಿ | (ಇ) ನನು ಷಡ್ಜಾದೀನಾಮಸಾಧಾರಣತ್ವಂ ಕಥಮ್‌? (ಈ) ಆಪ್ತೋಪದೇಶಾತ್‌ಷಡ್ಜಾದೀನಾಮಸಾಧಾರಣತ್ವಮ್‌ | (ಉ) ತಥಾ ಚಾಹ ಕೋಹಲೇ ಮಹೇಶ್ವರಃ –     6

ಪಾಠವಿಮರ್ಶೆ : ೯೮ಇ ೯೯ಆ,ಇ ೧೦೧ಆ,ಇ ೧೦೨ ೧೦೨ಅ,ಆ,ಊ,ಋ ೧೦೩ಆ ೧೦೪ಆ,ಇ,ಉ

—-

೯೯ ಜಾತಿ, ಭಾಷಾ(ರಾಗ) ಮುಂತಾದವುಗಳಲ್ಲಿ (ವಿವಿಧ ರೀತಿಗಳಿಂದ) ಸಂಯೋಗವಾಗುವದರಿಂದಲೂ ಪದ(=ಸಾರ್ಥಕ ಅಥವಾ ನಿರರ್ಥಕವಾದ ಅಕ್ಷರ ಸಮುಚ್ಚಯ)ಗಳೊಡನೆ (ಬೇರೆ ಬೇರೆ ರೀತಿಗಳಲ್ಲಿ) ಕೂಡಿಕೊಳ್ಳುವುದರಿಂದಲೂ ಅಲಂಕಾರಗಳಲ್ಲಿಯೂ ರಸಗಳಲ್ಲಿಯೂ (ನಾನಾ ಬಗೆಗಳಲ್ಲಿ) ಪ್ರಯೋಗವಾಗುವುದರಿಂದಲೂ ಸ್ವರವು ಅನಂತವೆಂದು ಹೇಳಿದೆ.                                                                     ೪

೧೦೦ (ಅ) ನಿತ್ಯವೆಂದರೆ ನಾಶವಿಲ್ಲದ್ದು. (ಆ) ವ್ಯಾಪಕವೆಂದರೆ ಎಲ್ಲೆಲ್ಲೂ ಇರುವುದು. (ಇ) ಕೋಹಲನು (ಈ ವಿಷಯದಲ್ಲಿ) ಹೀಗೆ ಹೇಳಿದ್ದಾನೆ –        3

೧೦೧ ಮೇಲಿನ ನಾಡಿಗಳಲ್ಲಿನ ಪ್ರಯತ್ನದಿಂದಲೂ ಎಲ್ಲಾ (ನಾಡಿಗಳ) ಗೋಡೆಗಳನ್ನು ಸಂಘರ್ಷಿಸುವುದರಿಂದಲೂ ಧ್ವನಿಯು ನೆತ್ತಿಯವರೆಗೆ ಏರುತ್ತದೆ; ಈ ಸ್ವರವು (ಆದುದರಿಂದ) ವ್ಯಾಪಕವೂ (ನೆತ್ತಿಯನ್ನು ಮಿರಿರುವುದೂ [ಆಗಿದೆ].                                   ೫

೧೦೨ (ಅ) ಇದು (= ಈ ಮತದಂತೆಸ್ವರವು) ಚಾರ್ವಾಕ(ಬಾರ್ಹತ? ಅರ್ಹಂತ?) ಶಾಶ್ವತವಲ್ಲದ್ದೂ ವ್ಯಾಪಕವಲ್ಲದ್ದೂ [ಹೌದು]. (ಆ) (ಸ್ವರವನ್ನು ಅಭಿವ್ಯಕ್ತಿಪಡಿಸಲು) ಇಚ್ಛಿಸಿದ ಸ್ಥಳವಲ್ಲದೆ ಬೇರೆ ಸ್ಥಳದಲ್ಲಿ ಕೇಳಿಸದೆ ಇರುವುದರಿಂದ ಸ್ವರದ ಅವ್ಯಾಪಕತ್ವವೇ (ಸಿದ್ಧವಾಗುತ್ತದೆ); ಹಾಗಿಲ್ಲದಿದ್ದರೆ ಬೇರೆ ಬೇರೆ ಸ್ಥಳಗಳಲ್ಲಿ (ಸ್ವರವು) ಕೇಳಿಸಬೇಕಾಗಿತ್ತು. (ಇ) (ಆದರೆ) ಲೋಕದಲ್ಲಿ ಹಾಗಿಲ್ಲ. (ಈ) ಇಚ್ಛೆ ಮತ್ತು ಪ್ರಯತ್ನಗಳಿಂದ ಸ್ವರವು ಹುಟ್ಟಿದ ಕಾಲದಲ್ಲಿ (ಮಾತ್ರ) ಅದು ಹೆಗೆ ಕೇಳಿಸುತ್ತದೋ ಹಾಗೆಯೇ ಬೇರೆ ಕಾಲದಲ್ಲಿ ಅದು ಕೇಳಿಸದೆ ಇರುವುದರಿಂದ ಸ್ವರಕ್ಕೆ ಶಾಶ್ವತತ್ವವೂ ಇಲ್ಲ. (ಉ) ಹಾಗಿರದಿದ್ದರೆ ಬೇರೆ ಕಾಲದಲ್ಲೂ ಅದು ಕೇಳಿಸಬೇಕಾಗಿತ್ತು. (ಊ)(ಆದರೆ) ಲೋಕದಲ್ಲಿ ಹಾಗಿಲ್ಲ. (ಋ) ಆದುದರಿಂದ ಸ್ವರವು ವ್ಯಾಪಕವಲ್ಲದ್ದು, ಶಾಶ್ವತವಲ್ಲದ್ದು.                                                                     4

೧೦೩ (ಅ) ಹಾಗಾದರೆ ಷಡ್ಜವೇ ಮೊದಲಾದವುಗಳಿಗೆ ಸ್ವರತ್ವವು ಹೇಗೆ (ಉಂಟಾಗುತ್ತದೆ)? ಅವು ವ್ಯಂಜನಗಳಾಗಿರುವುದಿಂದ (ಈ ಶಂಕೆಯು ಹುಟ್ಟುತ್ತದೆ). (ಆ) ವ್ಯಂಜನಗಳಿಗೂ ಸ್ವರತ್ವವನ್ನೇ ಹೇಳುವುದಾದರೆ ಆಗ ಕ ಇತ್ಯಾದಿಗಳಲ್ಲೂ ಸ್ವರತ್ವವು ಇರಲಿ!   5

೧೦೪ (ಅ) ಈ ಸಂದರ್ಭದಲ್ಲಿ [ಸಮಾಧಾನವನ್ನು] ಹೇಳಲಾಗುವುದು: (ಆ) (ಪಡ್ಜವೇ ಮೊದಲಾದವುಗಳಲ್ಲಿ) ಅಸಾಧಾರಣತ್ವವು ಇರುವುದರಿಂದ ಷಡ್ಜಾದಿಗಳಲ್ಲಿಯೇ ಸ್ವರತ್ವವಿದೆ, ಕ ಮುಂತಾದವುಗಳಲ್ಲಲ್ಲ. (ಇ) ಹಾಗಾದರೆ ಷಡ್ಜವೇ ಮೊದಲಾದವುಗಳಲ್ಲಿ ಅಸಾಧಾರಣತ್ವವು ಹೇಗೆ [ಉಂಟಾಗುತ್ತದೆ]? (ಈ) ಆಪ್ತ(ರಾದ ಹಿರಿಯ)ರು ಹೀಗೆ ಉಪದೇಶಿಸಿರುವುದರಿಂದ ಷಡ್ಜ ಮೊದಲಾದವುಗಳಲ್ಲಿ ಅಸಾಧಾರಣತ್ವವು [ಇದೆ]. (ಉ)(ಈ ವಿಷಯದಲ್ಲಿ) ಕೋಹಲ[ಗ್ರಂಥ] ದಲ್ಲಿ ಮಹೇಶ್ವರನು ಹೀಗೆ ಹೇಳಿದ್ದಾನೆ-                                                   6

____

೧೦೫   ಷಡ್ಜಂ ವದತಿ ಮಯೂರ ಋಷಭಂ ಚಾತಕೋ ವದೇತ್‌ |
ಅಜಾ ವದತಿ ಗಾಂಧಾರಂ ಕ್ರೌಂಚೋ ವದತಿ ಮಧ್ಯಮಮ್ || ೬ ||

೧೦೬   ಪುಷ್ಪಸಾಧಾರಣೇ ಕಾಲೇ ಕೋಕಿಲಃ ಪಂಚಮಂ ವದೇತ್‌ |
ಪ್ರವೃಟ್‌ಕಾಲೇ ತು ಸಂಪ್ರಾಪ್ತೇ ಧೈವತಂ ದರ್ದುರೋ ವದೇತ್‌ ||
ಸರ್ವದಾ ಚ ತಥಾ ದೇವಿ ನಿಷಾದಂ ವದತೇ ಗಜಃ || ೭ ||

೧೦೭   (ಅ) ಯದ್ವಾ ಊರ್ಧ್ವಧ್ವನಿಗಾಮಿತ್ವೇನ ಷಡ್ಜಾದೀನಾಮೇವಾಸಾಧಾರಣತ್ವಮಿತಿ, ಅಥವಾ ಷಡ್ಜಾದಯಃ ಸ್ವರಾ ನ ಭವಂತಿ, ಅಕಾರಾದಯ ಏವ ಸ್ವರಾಃ | (ಆ) ಷಡ್ಜಾದಯಸ್ತು ತೇಷಾಮಾಕಾರಾದೀನಾಮುಚ್ಚಾರಣಾರ್ಥಮಿತಿ |            7

೧೦೮   (ಅ) ನನು ಚತುರ್ದಶಾನಾಂ ಸ್ವರಾಣಾಂ ಮಧ್ಯೇ ಅಕಾರಾದೀನಾಂ ಕಥಂ ಗ್ರಹಣಮ್‌? (ಆ) ಸತ್ಯಮುಕ್ತಮ್‌ | (ಇ) ಏತೇಷಾಮಸಾಧಾರಣತ್ವೇನ ಗ್ರಹಣಂ ಕೃತಮ್‌ | (ಈ) ಅಸಾಧಾರಣತ್ವಂ ಚೈತೇಷಾಮೂರ್ಧ್ವಧ್ವನಿಗಾಮಿತ್ವೇನ | (ಉ) ಯದ್ವಾ ಷಡ್ಜಾದೀನಾಂ ವ್ಯಂಜನಾನಾಂ ಸ್ವರತ್ವಮುಕ್ತಮ್‌ |                                                                          8

೧೦೯   (ಅ) ನನು ಷಡ್ಜಾದೀನಾಮಸಾಧಾರಣತ್ವಂ ಕಥಮುಚ್ಯತೇ? (ಆ) ಆಪ್ತೋಪದೇ ಮತ್ತು ಅದರ

೧೦೯ (ಅ) ನನು ಷಡ್ಜಾದೀನಾಮಸಾಧಾರಣತ್ವಂ ಕಥಮುಚ್ಯತೇ? (ಆ) ಆಪ್ತೋಪದೇಶತ್ವಾದಿತಿ ಕೇಚಿತ್ | (ಇ) ಸಂಕೇತಮಾತ್ರಮಿತ್ಯಪರೇ | (ಈ) ಆಚಾರ್ಯಾಣಾಂ ಪರಿಭಾಷೇತಿ ಕೇಚಿತ್‌ | (ಉ) ಅತಃ ಅಹಮೇವ ವದಾಮಿ | (ಊ) ಮಂದ್ರಾದಿ ಸಪ್ತಸ್ವರಾಣಾಂ ಉಚ್ಚಾರಣೋ ವ್ಯಕ್ತತ್ವಾತ್‌ಸರಿಗಮಪಧನಿನಾಮೇವ ಸ್ವರತ್ವಮಿತಿ ಸಿದ್ಧಮ್‌ | (ಋ) ತಥೈವ ಲೋಕೇ ದೃಶ್ಯತೇ | (ಋ) ನಿಃಸಾಣಡಮರುಕಾಣಾಂಚ ವಾದನೇ ಪರಿದೃಶ್ಯತೇ ಡಬಡಬೇತಿ ವರ್ಣವ್ಯಕ್ತಿಃ |                                                                             9

[ವಾದ್ಯಾದಿಭೇದೇನ ಸ್ವರಾಣಾಂ ಚಾತುರ್ವಿಧ್ಯಮ್‌]

೧೧೦   (ಅ) ಇದಾನೀಮವಸರಪ್ರಾಪ್ತಂ ಚಾತುರ್ವಿಧ್ಯಂ ಸ್ವರಾಣಾಂ ದರ್ಶಯಾಮಿ | (ಆ) ತದ್ಯಥಾ -(ಇ) ವದನಾದ್‌ವಾದೀ ಸ್ವಾಮಿವತ್‌ | (ಈ) ಸಂವದನಾತ್‌ಸಂವಾದೀ ಅಮಾತ್ಯವತ್‌ | (ಉ) ಅನುವದನಾದನುವಾದೀ ಪರಿಜನವತ್ | (ಊ) ವಿವದನಾದ್‌ವಿವಾದೀ ಶತ್ರುವತ್‌ |     10

ಪಾಠವಿಮರ್ಶೆ : ೧೦೫ಇ ೧೦೭ಅಆ ೧೦೮ಇಊ ೧೦೯ ಇ,ಉ,ಊ,ಋ,ಋ ೧೧೦ಅ

—-

೧೦೫ ನವಿಲು ಷಡ್ಜವನ್ನು ನುಡಿಯುತ್ತದೆ; ಋಷಭವನ್ನು ಚಾತಕ [ಪಕ್ಷಿ] ಹೇಳುತ್ತದೆ. ಮೇಕೆಯು ಗಾಂಧಾರವನ್ನು ನುಡಿಯುತ್ತದೆ; ಕ್ರೌಂಚ (ಪಕ್ಷಿ) ಮಧ್ಯಮವನ್ನು ಹೇಳುತ್ತದೆ.                                                                                                                ೬

೧೦೬ ಹೂಗಳಿಗೆಲ್ಲ [ಅರಳುವ] ಸಾಧಾರಣ ಕಾಲದಲ್ಲಿ (=ಕಾಲವಾಗಿರುವ ವಸಂತಋತುವಿನಲ್ಲಿ) ಕೋಗಿಲೆಯು ಪಂಚಮವನ್ನು ನುಡಿಯುತ್ತದೆ. ಮಳೆಗಾಲವು ಬರಲಾಗಿ ಧೈವತವನ್ನು ಕಪ್ಪೆಯು ನುಡಿಯುತ್ತದೆ. ದೇವಿಯೆ, ಇದೇ ರೀತಿಯಲ್ಲಿ ಯಾವಾಗಲೂ ಆನೆಯು ನಿಷಾದವನ್ನು ಹೇಳುತ್ತದೆ.          ೭

೧೦೭ (ಅ) ಅಥವಾ ಧ್ವನಿಯು (ಇವುಗಳಲ್ಲಿ) ಮೇಲುಮುಖವಾಗಿ ಚಲಿಸು(ವ ಪ್ರವೃತ್ತಿಯುಳ್ಳದ್ದಾಗಿರು) ವುದರಿಂದ ಷಡ್ಜ ಮುಂತಾದವುಗಳಲ್ಲಿಯೇ ಅಸಾಧಾರಣತ್ವವಿದೆ; ಅಥವಾ ಷಡ್ಜ ಮೊದಲಾದವುಗಳು ಸ್ವರಗಳಲ್ಲ, [ಅವುಗಳ ಉಚ್ಚಾರಣೆಯಲ್ಲಿರುವ] ಅಕಾರಾದಿಗಳೇ ಸ್ವರಗಳು. (ಆ) ಷಡ್ಜ ಮುಂತಾದವುಗಳು ಅವುಗಳ(ಲ್ಲಿರುವ) ಅಕಾರಾದಿಗಳನ್ನು ಉಚ್ಚರಿಸುವುದಕ್ಕಾಗಿ ಮಾತ್ರ [ಇವೆ].          7

೧೦೮ (ಅ) ಆದರೆ ಹದಿನಾಲ್ಕು ಸ್ವರಗಳ ನಡುವೆ ಅಕಾರ ಇತ್ಯಾದಿಗಳನ್ನು [ಮಾತ್ರ] ಏಕೆ ತೆಗೆದು ಕೊಂಡಿದೆ? (ಆ) ನಿಜವನ್ನೇ ಹೇಳಿದೆ. (ಇ) ಅವುಗಳಲ್ಲಿ ಅಸಾಧಾರಣತ್ವ (ವಿರುವುದು)ರಿಂದ (ಹೀಗೆ) ತೆಗೆದುಕೊಂಡಿದೆ. (ಈ) (ಅವುಗಳ) ಅಸಾಧಾರಣತ್ವವು ಮೇಲುಮುಖವಾದ ಚಲನೆಯಿಂದ (=ಚಲನೆಯ ಪ್ರವೃತ್ತಿಯನ್ನುಳ್ಳದ್ದಾಗಿರುವುದರಿಂದ) (ಉಂಟಾಗಿದೆ). (ಉ) ಅಥವಾ, ಷಡ್ಜ ಮೊದಲಾದ ವ್ಯಂಜನಗಳಿಗೇ ಇಲ್ಲಿ ಸ್ವರತ್ವನ್ನು ಹೇಳಿದೆ.                                                                                                                                           8

೧೦೯ (ಅ) ಹಾಗಾದರೆ ಷಡ್ಜವೇ ಮೊದಲಾದವುಗಳ ಅಸಾಧಾರಣತ್ವನ್ನು ಹೇಗೆ ಹೇಳಬೇಕು? (ಆ) ಆಪ್ತರು (ಹೀಗೆ) ಉಪದೇಶಿಸಿರುವುದರಿಂದ [ಹೇಳಬೆಕು] ಎಂದು ಕೆಲವರು (ಅಭಿಪ್ರಾಯಪಡುತ್ತಾರೆ). (ಇ) [ಸರಿಗ ಇತ್ಯಾದಿಗಳು] ಕೇವಲ ಸಂಕೇತಮಾತ್ರ (ಗಳು) ಎಂದು ಬೇರೆಯವರು (ಹೇಳುತ್ತಾರೆ) (ಈ) [ಇನ್ನು] ಕೆಲವರು (ಇವುಗಳು) ಆಚಾರ್ಯರು ಬಳಸುವ [ಸಂಗೀತ] ಶಾಸ್ತ್ರೀಯ ಸಂಜ್ಞೆಗಳು (ಎನ್ನುತ್ತಾರೆ). (ಉ) ಆದುದರಿಂದ (ಈ ವಿಷಯವನ್ನು ಕುರಿತು) ನಾನೇ (ಹೀಗೆ) ಹೇಳುತ್ತೇನೆ : (ಊ) ಮಂದ್ರ ಇತ್ಯಾದಿ [ಸ್ಥಾನಗಳಲ್ಲಿರುವ] ಏಳು ಸ್ವರಗಳ ಉಚ್ಚಾರಣೆಯು [ಸ್ಫುಟವಾಗಿ] ವ್ಯಕ್ತವಾಗುವುದಕ್ಕಾಗಿ ಸರಿಗಮಪಧನಿಗಳಿಗೇ ಸ್ವರತ್ವವು ಸಿದ್ಧಿಸುತ್ತದೆ. (ಋ) ಲೋಕದಲ್ಲಿ ಹೀಗೆಯೇ [ಇರುವುದು] ಕಂಡುಬರುತ್ತದೆ. (ೠ) (ಇದಕ್ಕೆ ವಿರುದ್ಧವಾಗಿ) ನಿಸ್ಸಾಣ, ಡಮರುಗಳನ್ನು ನುಡಿಸುವಲ್ಲಿ ಡಬಡಬ ಎಂಬ ವರ್ಣಗಳು ಪ್ರಕಟವಾಗುವುದು [ಮಾತ್ರ] ಕಂಡುಬರುತ್ತದೆ.   9

[ಸ್ವರಗಳ ವಾದಿಯೇ ಮೊದಲಾದ ನಾಲ್ಕು ವಿಧಗಳು]

೧೧೦ (ಅ) [ತಕ್ಕ] ಸಂದರ್ಭವು ಒದಗಿರಲಾಗಿ, ಈಗ ಸ್ವರಗಳ ನಾಲ್ಕು ವಿಧಗಳನ್ನು ತೋರಿಸುತ್ತೇನೆ. (ಆ) ಅದು ಹೇಗೆಂದರೆ-(ಇ) ನುಡಿಯುವುದರಿಂದ ವಾದಿ (ಸ್ವರ; ಇದು) ಯಜಮಾನನಂತೆ; (ಈ) ಸಂವಾದದಲ್ಲಿ ನುಡಿಯುವುದರಿಂದ ಸಂವಾದಿ (ಸ್ವರ;ಇದು) ಮಂತ್ರಿಯಂತೆ ; (ಉ) ಅನುಸರಿಸಿ ನುಡಿಯುವುದರಿಂದ ಅನುವಾದಿ (ಸ್ವರ; ಇದು) ಸೇವಕನಂತೆ; (ಊ) ವಿವಾದದಲ್ಲಿ (=ವಿರುದ್ಧವಾಗಿ) ನುಡಿಯುವುದರಿಂದ ವಿವಾದಿ (ಸ್ವರ; ಇದು) ಶತ್ರುವಿನ ಹಾಗೆ.                                                                                                                              10

____

೧೧೧ (ಅ) ನನು ವದನಾದಿಕಃ ಪ್ರಾಣಿಧರ್ಮಃ ಕಥಮಚೇತನಾನಾಂ ಸ್ವರಾಣಾಂ ಸಂಭವತಿ? (ಆ) ಸತ್ಯಮುಕ್ತಮ್‌(ಇ) ವದನಂ ಹಿ ನಾಮಾತ್ರ [ರಾಗ] ಮಾತ್ರ ಪ್ರತಿಪಾದಕತ್ವಂ ವಿವಕ್ಷಿತಂ, ನ ವಚನಮಿತಿ | (ಈ) ಕಿಂ ತತ್‌ಪ್ರತಿಪಾದಯತಿ? (ಉ) ರಾಗಸ್ಯ ರಾಗತ್ವಂ ಜನಯತಿ | (ಊ) ತೇ ಚ ವಾದಿನಃ ಸ್ವರಾಃ ಸಪ್ತೈವ | (ಋ) ಸ ಚ ವಾದ್ಯಂಶವದ್‌ ದಶವಿಧೋ ಭೋದ್ಧವ್ಯಃ |                                                     11

೧೧೨ (ಅ) ವಾದಿಮಂಡಲಂ ಯಥಾ –

ಸ ರಿ ಗ ಮ ಪ ಧ ನಿ 12

೧೧೩ (ಅ) ಸಂವಾದಿನಸ್ತು ಪುನಃ ಸಮಶ್ರುತಿಕತ್ವೇ ಸತಿ ತ್ರಯೋದಶ ನವಾಂತರತ್ವೇ (!-೦ತತ್ವೇ) ನಾವಬೋದ್ಧವ್ಯಾಃ | 12

೧೧೪ (ಅ) ಕಿಂ ತತ್‌ಸಂವಾದಿತ್ವಂ ನಾಮ? (ಆ) ಯದ್‌ವಾದಿಸ್ವರೇಣ ರಾಗಸ್ಯ ರಾಗತ್ವಂ ಜನಿತಂ ತನ್ನಿರ್ವಾಹಕತ್ವಂ ನಾಮ ಸಂವಾದಿತ್ವಮ್ | (ಇ) ಸಂವಾದಿಮಂಡಲಂ ಯಥಾ- 14

03_3_SMVB-KUH ಕೋಷ್ಠಕಮ್‌೫. ಇತಿ ಷಡ್ಜಗ್ರಾಮೇ ಸಂವಾದಿಮಂಡಲಮ್‌

ಪಾಠವಿಮರ್ಶೆ : ೧೧೧ಇ,ಊ ೧೧೩ಅ ೧೧೪ಅ

____

೧೧೧ (ಅ) ಆದರೆ ನುಡಿಯುವುದು ಮುಂತಾದುದು ಪ್ರಾಣಿಗಳ ಸ್ವಭಾವ;(ಅದು) ಚೇತನವಿಲ್ಲದ ಸ್ವರಗಳಲ್ಲಿ ಹೇಗೆ ಉಂಟಾಗುತ್ತದೆ? (ಆ) ನಿಜವನ್ನು ಹೇಳಿದೆ. (ಇ) ನುಡಿಯುವುದು ಎಂಬುದನ್ನು ಇಲ್ಲಿ (=ಈ ಶಾಸ್ತ್ರದಲ್ಲಿ) ರಾಗವನ್ನು ಪ್ರತಿಪಾದಿಸುವುದು ಎಂಬ ಅರ್ಥದಲ್ಲಿ ಮಾತ್ರ ಉದ್ದೇಶಿಸಿ ಹೆಳಿದೆ, ಮಾತ್ರ (ಎಂಬ ಅರ್ಥದಲ್ಲಿ) ಅಲ್ಲಿ. ( ಈ ಅದು ಏನನ್ನು ಪ್ರತಿಪಾದಿಸುತ್ತದೆ? (ಉ) (ಅದು) ರಾಗದ ರಾಗತ್ವ (=ರಾಗದ ಸ್ವಭಾವ, ಗುಣ, ಧರ್ಮ)ವನ್ನು ಹುಟ್ಟಿಸುತ್ತದೆ. (ಊ) ಆ ವಾದಿಸ್ವರಗಳು ಏಳೇ; (ಋ) ಆ ವಾದಿಯು ಅಂಶದ ಹಾಗೆ ಹತ್ತು ವಿಧವೆಂದು ತಿಳಿಯಬೇಕು.                                                                                                                                 11

೧೧೨ (ಅ) ವಾದಿಮಂಡಲವು ಹೀಗಿದೆ –

ಸ ರಿ ಗ ಮ ಪ ಧ ನಿ                                                                                                                          12

೧೧೩ (ಅ) ಅಷ್ಟೇ ಅಲ್ಲದೆ ಸಂವಾದಿಸ್ವರಗಳು (ಪರಸ್ವರ) ಸಮ (ಸಂಖ್ಯೆಯ) ಶ್ರುತಿಗಳನ್ನು ಪಡೆದಿರುವುದರ ಜೊತೆಗೆ ಹದಿಮೂರು (ಅಥವಾ) ಒಂಬತ್ತು (ಶ್ರುತಿಗಳ) ಅಂತರಗಳಲ್ಲಿ (!-ಶ್ರುತಿಗಳಲ್ಲಿ ಕೊನೆಯದಾಗಿ) ಇರತಕ್ಕವುಗಳು ಎಂದು ತಿಳಿದುಕೊಳ್ಳಬೇಕು.   ೧೩

೧೧೪ (ಅ) ಸವಾದಿತ್ವವೆಂದರೆ ಏನು? (ಆ) ವಾದಿಸ್ವರದಿಂದ (ಆಯಾ) ರಾಗದ ಯಾವ ರಾಗತ್ವವು ಹುಟ್ಟುತ್ತದೋ ಅದನ್ನು ನಿರ್ವಾಹ ಮಾಡುವುದಕ್ಕೆ ಸಂವಾದಿತ್ವ(ವೆಂದು ಹೆಸರು). (ಇ) ಸಂವಾದಿಮಂಡಲವು ಹೇಗಿದೆಯೆಂದರೆ-                                 14

3.1_3_SMVB-KUH ಕೋಷ್ಠಕ ೪. ಷಡ್ಜಗ್ರಾಮದಲ್ಲಿ ಸಂವಾದಿಮಂಡಲ

____

೧೧೫ (ಅ) ಸಂವಾದಿಪ್ರಯೋಗೋ ಯಥಾ –
(ಆ) ಯಸ್ಮಿನ್‌ಗೀತೇ ಯೋs೦ಶತ್ವೇನ ಪರಿಕಲ್ಪಿತಃ ಷಡ್ಜಸ್ತಸ್ಯ ಸ್ಥಾನೇ ಮಧ್ಯಮಃ ಕ್ರಿಯಮಾಣೋ ರಾಗಹಾ ನ ಭವೇತ್‌ | (ಇ) ಯಸ್ಮಿನ್‌ಸ್ಥಾನೇ ಮೂರ್ಛನಾವಶಾನ್ಮಧ್ಯಮಃ ಪ್ರಯುಕ್ತಸ್ಮಿನ್‌ಸ್ಥಾನೇ ಕ್ರಿಯಮಾಣಃ ಷಡ್ಜೋ ಜಾತಿರಾಗಹಾ ನ ಭವೇತ್‌ | 15

೧೧೬ (ಅ) ಷಡ್ಜಪಂಚಮಯೋಃ ಸ್ಥಾನೇ ಪಂಚಮಷಡ್ಜೌ ಪ್ರಯುಜ್ಯಮಾನೌ ಜಾತಿರಾಗಹಾನಿಕರೌ ನ ಭವತಃ | (ಆ) ಏವಂ ಋಷಭಧೈವತಯೋಃ ಸ್ಥಾನೇ ಧೈವತರ್ಷಭೌ ಪ್ರಯುಜ್ಯಮಾನೌ ಜಾತಿರಾಗವಿನಾಶಕರೌ ನ ಭವತಃ | (ಇ) ಏವಂ ಗಾಂಧಾರನಿಷಾದಯೋಃ ಸ್ಥಾನೇ ನಿಷಾದಗಾಂಧಾರೌ [ಪ್ರಯುಜ್ಯಮಾನೌ ಜಾತಿರಾಗಹಾನಿಂ ನ ಕುರುತಃ] 16

೧೧೭ (ಅ) ಕಕುಭಸ್ಯ ಧೈವತಾಂಶತ್ವೇನ ರೇವಗುಪ್ತಸ್ಯ ಋಷಭಾಂಶತ್ವೇನ ತದುಭಯರಾಗ ಜನನ್ಯಾಂಶ್ಚಾರ್ಷಭೀಜಾತೇ ಋಷಭಾಂಶಪರಿಗ್ರಹಾತ್‌ಪರಸ್ಪರಸಂಬದ್ಧೌ ಚ ಪ್ರಯುಜ್ಯಮಾನೌ ಜಾತಿರಾಗವಿನಾಶಕರೌ ನ ಭವತಃ |                   17

೧೧೮ (ಅ) ಅನುವಾದಿತ್ವಂ ಚ ಪುನರೇಕಶ್ರುತ್ಯಂತರಹೀನತ್ವೇನ ಸ್ಯಾತ್‌ | (ಆ) ನನು, ಕಿಂ ತದನುವಾದಿತ್ವಮ್‌? 18

೧೧೯. (ಅ) ಯತ್‌ ಸಂವಾದಿನಾ ರಾಗಸ್ಯ ರಾಗತ್ವಂ ಸಂಪಾದಿತಂ ತತ್ಪ್ರತಿಪಾದಕತ್ವಂ ನಾಮಾನುವಾದಿತ್ವಮ್‌ | (ಆ) ಅನುವಾದಿಮಂಡಲಂ ಯಥಾ-           19

04_3_SMVB-KUH ಕೋಷ್ಠಕಮ್ ೫ : [ಇತಿ ಷಡ್ಜಗ್ರಾಮೇ] ಅನುವಾದಿಮಂಡಲಮ್‌

ಪಾಠವಿಮರ್ಶೆ : ೧೧೫ಇ, ೧೧೬ಇ ೧೧೭ಅ,ಆ, ೧೧೯ಅ,ಆ

—-

೧೧೫ (ಅ) ಸಂವಾದಿ (ಸ್ವರಗಳನ್ನು ) ಪ್ರಯೋಗಿಸುವುದು ಹೇಗೆಂದರೆ- (ಆ) ಯಾವ (ದೇ) ಹಾಡಿನಲ್ಲಿ ಷಡ್ಜವನ್ನು ಅಂಶವೆಂದು ಗೊತ್ತುಮಾಡಿದೆಯೋ ಅದರ ಜಾಗದಲ್ಲಿ ಮಧ್ಯಮವನ್ನು [ಗಾಯನ/ವಾದನ] ಮಾಡಿದರೆ ರಾಗ(ತ್ವ)ದ ಹಾನಿಯು ಉಂಟಾಗುವುದಿಲ್ಲ. (ಇ) ಯಾವ ಜಾಗದಲ್ಲಿ (ಆಯಾ) ಮೂರ್ಛನೆಯನ್ನು ಅನುಸರಿಸಿ ಮಧ್ಯಮವನ್ನು ಪ್ರಯೋಗಿಸಿದೆಯೋ ಅಲ್ಲಿ ಷಡ್ಜವನ್ನು [ಗಾಯನ/ವಾದನ] ಮಾಡಿದರೆ [ಆಯಾ] ಜಾತಿ [ಯ ಮತ್ತು] ರಾಗ [ತ್ವ]ದ ನಾಶವು ಉಂಟಾಗುವುದಿಲ್ಲ.                                                        15

೧೧೬ (ಅ) ಷಡ್ಜ-ಪಂಚಮಗಳ ಎಡೆಗಳಲ್ಲಿ ಪಂಚಮ- ಪಡ್ಜಗಳನ್ನು (ಕ್ರಮವಾಗಿ) ಬಳಸಿದರೆ [ಅವು] ಜಾತಿ [ಮತ್ತು] ರಾಗ (ತ್ವ)ಗಳ ಹಾನಿಯನ್ನು ಉಂಟುಮಾಡುವುದಿಲ್ಲ. (ಆ) ಇದೇ ರೀತಿಯಲ್ಲಿ ಋಷಭಧೈವತಗಳ ಎಡೆಗಳಲ್ಲಿ ಧೈವತ (ಮತ್ತು) ಋಷಭಗಳನ್ನು ಕ್ರಮವಾಗಿ ಪ್ರಯೋಗಿಸಿದರೆ ಜಾತಿ (ಮತ್ತು) ರಾಗ(ತ್ವ)ಗಳ ಭಂಗವು ಉಂಟಾಗುವುದಿಲ್ಲ. (ಇ) ಹೀಗೆಯೇ ಗಾಂಧಾರ ಮತ್ತು ನಿಷಾದಗಳ ಎಡೆಗಳಲ್ಲಿ ನಿಷಾದ ಮತ್ತು ಗಾಂಧಾರಗಳನ್ನು (ಕ್ರಮವಾಗಿ) ಬಳಸಿದರೆ ಜಾತಿ [ಯ ಮತ್ತು] ರಾಗ (ತ್ವ)ಗಳ ಹಾನಿಯನ್ನು ಮಾಡುವುದಿಲ್ಲ.         16

೧೧೭ (ಅ) ಕಕುಭ (ರಾಗ)ದ ಅಂಶವು ಧೈವತವಾಗಿರುವಲ್ಲಿ, ರೇವಗುಪ್ತ(ರಾಗ)ದ ಅಂಶವು ರಿಷಭವಾಗಿರುವಲ್ಲಿ, ಅವೆರಡಕ್ಕೆ (=ಈ ರಾಗಗಳಿಗೆ) ತಾಯಿಯಾದ ಆರ್ಷಭೀ ಜಾತಿಯು ಋಷಭವನ್ನು ಅಂಶವನ್ನಾಗಿ ಗ್ರಹಿಸಿರುವುದರಿಂದ, ಈ (ರಿಷಭಧೈವತಸ್ವರಗಳೆಂಬ) ಎರಡನ್ನು ಒಂದರ ಬದಲು ಇನ್ನೊಂದನ್ನು ಬಳಸಿದಾಗ ಜಾತಿ (ಯ ಮತ್ತು) ರಾಗ (ತ್ವ) ದ ಭಂಗವನ್ನು ಉಂಟುಮಾಡುವುದಿಲ್ಲ.                    17

೧೧೮ (ಅ) ಮತ್ತೇನೆಂದರೆ, (ಎರಡು ಸ್ವರಗಳಲ್ಲಿ) ಅನುವಾದಿತ್ವವು (ಒಂದಕ್ಕಿಂತ ಇನ್ನೊಂದು) ಒಂದು ಶ್ರುತಿಯಷ್ಟು ಅಂತರವಿಲ್ಲದಿರುವುದರಿಂದ ಉಂಟಾಗುತ್ತದೆ. (ಆ) ಅನುವಾದಿತ್ವವೆಂದರೇನು?                                                                                    18

೧೧೯ (ಅ) ಸಂವಾದಿ (ಸ್ವರ)ದಿಂದ ರಾಗದ ಯಾವ ರಾಗತ್ವವನ್ನು ಸಂಪಾದಿಸಿದೆಯೋ ಅದನ್ನು ಪ್ರತಿಪಾದಿಸುವುದಕ್ಕೆ ಅನುವಾದಿತ್ವವೆಂದು ಹೆಸರು. (ಆ) ಅನುವಾದಿಮಂಡಲವು ಹೇಗಿದೆಯೆಂದರೆ –                                                                                        19

4.1_3_SMVB-KUH ಕೋಷ್ಠಕ ೫ : [ಷಡ್ಜಗ್ರಾಮದಲ್ಲಿ] ಅನುವಾದಿಮಂಡಲ

____

೧೨೦ (ಅ) ಅನುವಾದಿಪ್ರಯೋಗೋ ಯಥಾ- ಷಡ್ಜಸ್ಥಾನೇ ಋಷಭ ಋಷಭಸ್ಥಾನೇ ಷಡ್ಜಃ ಪ್ರಯುಜ್ಯಮಾನಃ ಸ್ವರೂಪಃ ಭಜನ್‌ಜಾತಿರಾಗಹಾ ನ ಭವತಿ | (ಆ) ಪಂಚಮಸ್ಯ ಸ್ಥಾನೇ ಧೈವತಃ ಪ್ರಯುಜ್ಯಮಾನೋ ಧೈವತಸ್ಯ ಸ್ಥಾನೇ ಪಂಚಮಃ ಪ್ರಯುಜ್ಯಮಾನೋ [ಜಾತಿ] ರಾಗಹಾ ನ ಭವೇತ್‌ | (ಇ) ಷಡ್ಜಸ್ಥಾನೇ ಧೈವತಃ ಪ್ರಯುಜ್ಯಮಾನೋ ಧೈವತಸ್ಥಾನೇ ಷಡ್ಜಃ ಪ್ರಯುಜ್ಯಮಾನೋ ಜಾತಿರಾಗ ವಿನಾಶಕರೋ ನ ಭವತಿ | (ಈ) ಪಂಚಮಸ್ಥಾನೇ ಋಷಭಃ ಪ್ರಯುಜ್ಯಮನ ಋಷಭಸ್ಥಾನೇ ಪಂಚಮಃ ಪ್ರಯುಜ್ಯಮಾನೋ ಜಾತಿರಾಗಹಾ ನ ಭವೇತ್‌ | [(ಉ) ಮಧ್ಯಮಸ್ಥಾನೇ ಋಷಭ ಋಷಭಸ್ಥಾನೇ ಚ ಮಧ್ಯಮಸ್ತಥಾ ಧೈವತಸ್ಥಾನೇ ಮಧ್ಯಮೋ ಮಧ್ಯಮಸ್ಥಾನೇ ಚ ಧೈವತಃ ಪ್ರಯುಜ್ಯಮಾನೋ ಜಾತಿರಾಗನಾಶಕೋ ನ ಭವತಿ |]                                                                                                                                        20

೧೨೧ (ಅ) ಇದಾನೀಂ ಗಾಂಧಾರನಿಷಾದಯೋರೇಕಶ್ರುತ್ಯಂತರಹೀನತ್ವೇನ ಅನುವಾದಿತ್ವೇ ಪ್ರಾಪ್ತೇ ದ್ವ್ಯಂತರತ್ವಾದ್‌ವಿವಾದಿತ್ವಮುಕ್ತಮ್‌ | (ಆ) ಕಿಂ ತದ್‌ವಿವಾದಿತ್ವಂ ನಾಮ? (ಇ) ವಾದ್ಯಾದಿಭಿಃ ಸ್ವರೈರ್ಯದ್‌ರಾಗಸ್ಯ ವಾದಿತ್ವಂ ಸಂವಾದಿತ್ವಮನುವಾದಿತ್ವಂ ಪ್ರಾಪ್ತಂ, ತದ್‌ವಿನಾಶಕತ್ವಂ ನಾಮ ವಿವಾದಿತ್ವಮ್‌ | (ಈ) ವಿವಾದಿಮಂಡಲಂ ಯಥಾ –                                                                         21

05_3_SMVB-KUH ಕೋಷ್ಠಕಮ್ ೬ : [ಇತಿ ಷಡ್ಜಗ್ರಾಮೇ] ವಿವಾದಿಮಂಡಲಮ್‌

ಪಾಠವಿಮರ್ಶೆ : ೧೨೦ ಅ,ಉ

—-

೧೨೦ (ಅ) ಅನುವಾದಿ(ಸ್ವರ)ಗಳನ್ನು ಪ್ರಯೋಗಿಸುವುದು ಹೇಗೆಂದರೆ ಷಡ್ಜದ ಸ್ಥಾನದಲ್ಲಿ ಋಷಭವನ್ನೂ ಋಷಭವ ಸ್ಥಾನದಲ್ಲಿ ಷಡ್ಜವನ್ನೂ [ಅವವುಗಳ] ಸ್ವರೂಪವು ಹಾಗೆಯೇ ಉಳಿದುಕೊಂಡಿರುವಂತೆ ಬಳಸಿದರೆ ಜಾತಿ(ಯ ಮತ್ತು) ರಾಗ(ತ್ವ)ದ ಹಾನಿಯು ಉಂಟಾಗುವುದಿಲ್ಲ. (ಆ) ಪಂಚಮದ ಸ್ಥಾನದಲ್ಲಿಧೈವತವನ್ನೂ ಧೈವತದ ಸ್ಥಾನದಲ್ಲಿ ಷಂಚಮವನ್ನೂ ಪ್ರಯೋಗಿಸಿದರೆ ಜಾತಿ (ಯ ಮತ್ತು) ರಾಗ (ತ್ವ) ದ ನಾಶವಾಗುವುದಿಲ್ಲ. (ಇ) ಷಡ್ಜದ ಸ್ಥಾನದಲ್ಲಿ ಧೈವತವನ್ನೂ ಧೈವತದ ಸ್ಥಾನದಲ್ಲಿ ಷಡ್ಜವನ್ನೂ ಪ್ರಯೋಗಮಾಡಿದರೆ ಅದು ಜಾತಿಯ ಮತ್ತು ರಾಗ (ತ್ವ)ದ ನಾಶವನ್ನುಂಟುಮಾಡುವುದಿಲ್ಲ. (ಈ) ಪಂಚಮದ ಸ್ಥಾನದಲ್ಲಿ ಋಷಭವನ್ನು ಬಳಸಿದರೆ (ಮತ್ತು) ಋಷಭದ ಸ್ಥಾನದಲ್ಲಿ ಪಂಚಮವನ್ನು ಬಳಸಿದರೆ ಜಾತಿ(ಯ ಮತ್ತು) ರಾಗ (ತ್ವ) ದ ಹಾನಿಯಾಗುವುದಿಲ್ಲ. (ಉ) ಮಧ್ಯಮದ ಸ್ಥಾನದಲ್ಲಿ ಋಷಭವನ್ನೂ ಋಷಭದ ಸ್ಥಾನದಲ್ಲಿ ಮಧ್ಯಮವನ್ನೂ ಹಾಗೆಯೇ ಧೈವತದ ಸ್ಥಾನದಲ್ಲಿ ಮಧ್ಯಮವನ್ನೂ ಮಧ್ಯಮದ ಸ್ಥಾನದಲ್ಲಿಧೈವತವನ್ನೂ ಪ್ರಯೋಗಿಸಿದರೆ (ಅವು) ಜಾತಿ ಮತ್ತು ರಾಗ (ತ್ವ) ದ ನಾಶವನ್ನು ಉಂಟುಮಾಡುವುದಿಲ್ಲ.

೧೨೧ (ಅ) ಈಗ ಗಾಂಧಾರನಿಷಾದಗಳಲ್ಲಿ (ಕ್ರಮವಾಗಿ ರಿಷಭಧೈವತಗಳಿಗಿಂತ) ಒಂದು ಶ್ರುತಿಯ ಅಂತರವು ಇಲ್ಲದಿರುವುದರಿಂದ ಅನುವಾದಿತ್ವವು ಒದಗಿದ್ದರೂ, ಎರಡು [ಶ್ರುತಿಗಳ] ಅಂತರವಿರುವುದಿರಂದ [ಅವುಗಳಲ್ಲಿ] ವಿವಾದಿತ್ವವನ್ನು ಹೇಳಿದೆ. (ಆ) ವಿವಾದಿತ್ವವೆಂಬ ಇದು ಏನು? (ಇ) ವಾದಿಯೇ ಮೊದಲಾದ ಸ್ವರಗಳಿಂದ ಈಗ [ಆಯಾ] ರಾಗಕ್ಕೆ ಯಾವ ವಾದಿತ್ವ ಸಂವಾದಿತ್ವ [ಮತ್ತು] ಅನುವಾದಿತ್ವಗಳು ದೊರೆತವೋ ಅವುಗಳನ್ನು ವಿನಾಶಮಾಡುವುದೆಂಬುದೇ ವಿವಾದಿತ್ವ (ಈ) ವಿವಾದಿಮಂಡಲವು ಹೇಗಿದೆಯೆಂದರೆ –

5.1_3_SMVB-KUH ಕೋಷ್ಟಕ ೬ : [ಷಡ್ಜಗ್ರಾಮದಲ್ಲಿ] ವಿವಾದಿಮಂಡಲ

____

೧೨೨ (ಅ) ವಿವಾದಿಪ್ರಯೋಗೋ ಯಥಾ – ಋಷಭಸ್ಥಾನೇ ಗಾಂಧಾರಃ ಪ್ರಯುಜ್ಯಮಾನೋ ಗಾಂಧಾರಸ್ಥಾನ ಋಷಭಃ ಪ್ರಯುಜ್ಯಮಾನೋ ಜಾತಿರಾಗಹಾನಿಕರೋ ಭವೇತ್‌ | (ಆ) ಧೈವತಸ್ಥಾನೇ ನಿಷಾದಃ ಪ್ರಯುಜ್ಯಮಾನೋ [ನಿಷಾದಸ್ಥಾನೇ ಧೈವತಃ ಪ್ರಯುಜ್ಯಮಾನೋ] ಜಾತಿರಾಗ ಹಾನಿಕರೋ ಭವೇತ್‌ | ಇತಿ ಷಡ್ಜಗ್ರಾಮೇ ||                                                                                           22

೧೨೩ (ಅ) ಇದಾನೀಂ ಮಧ್ಯಮಗ್ರಾಮೇ ವಾದಿತ್ವಂ ಸಂವಾದಿತ್ವಮನುವಾದಿತ್ವಂ [ವಿವಾದಿತ್ವಂ] ಚ ಪ್ರದರ್ಶ್ಯತೇ | (ಆ) ತತ್ರ ವಾದಿನೋ ಮಧ್ಯಮಾದಿಸ್ವರಾಃ ಸಪ್ತ | (ಇ) ನವತ್ರಯೋದಶಾಂತಾಃ ಸಂವಾದಿನಃ | (ಈ) ಏಕಶ್ರುತ್ಯಂತರಹೀನತ್ವಾದನುವಾದಿನಃ | (ಉ) ದ್ವ್ಯಂತರೌ ತು ಸ್ವರೌ ವಿವಾದಿನೌ |                                                                                                                                   23

೧೨೪ (ಅ) ಮಧ್ಯಮಗ್ರಾಮೇ ವಾದಿಮಂಡಲಂ [ಯಥಾ] ಮ ಪ ಧ ನಿ ಸ ರಿ ಗ

(ಆ) ಮಧ್ಯಮಗ್ರಾಮೇ ಸಂವಾದಿಮಂಡಲಂ [ಯಥಾ] :-                                                                              24

06_3_SMVB-KUH ಕೋಷ್ಠಕಮ್‌೭ : ಮಧ್ಯಮಗ್ರಾಮೇ ಸಂವಾದಿಮಂಡಲಮ್‌

ಪಾಠವಿಮರ್ಶೆ : ೧೨೨ಆ ೧೨೩ ಆ,ಈ

—-

೧೨೨ (ಅ) ವಿವಾದಿ [ಸ್ವರಗಳನ್ನು] ಪ್ರಯೋಗ (ಮಾಡುವ ವಿಧಾನ)ವು ಹೇಗೆಂದರೆ – ರಿಷಭದ ಸ್ಥಾನದಲ್ಲಿ ಪ್ರಯೋಗಿಸಿದ ಗಾಂಧಾರವೂ ಗಾಂಧಾರದ ಸ್ಥಾನದಲ್ಲಿ ಪ್ರಯೋಗಿಸಿದ ಋಷಭವೂ ಜಾತಿ (ಯ ಮತ್ತು) ರಾಗ (ತ್ವ) ದ ಹಾನಿಯನ್ನು ಉಂಟುಮಾಡುತ್ತವೆ. (ಅ) ಧೈವತದ ಸ್ಥಾನದಲ್ಲಿ ಪ್ರಯೋಗಿಸಿದ ನಿಷಾದವೂ [ನಿಷಾದದ ಸ್ಥಾನದಲ್ಲಿ ಪ್ರಯೋಗಿಸಿದ ಧೈವತವೂ] ಜಾತಿ (ಯ ಮತ್ತು) ರಾಗ (ತ್ವ)ದ ಹಾನಿಯನ್ನು ಉಂಟುಮಾಡುತ್ತವೆ. ಹೀಗೆ ಷಡ್ಜಗ್ರಾಮದಲ್ಲಿ [ವಾದಿ ಸಂವಾದಿ ಅನುವಾದಿ ವಿವಾದಿಗಳನ್ನು ನಿರೂಪಿಸಲಾಯಿತು.   22

೧೨೩ (ಅ) ಈಗ ಮಧ್ಯಮಗ್ರಾಮದಲ್ಲಿ ವಾದಿತ್ವ, ಸಂವಾದಿತ್ವ, ಅನುವಾದಿತ್ವ [ಮತ್ತು ವಿವಾದಿತ್ವ]ಗಳನ್ನು ತೋರಿಸಲಾಗುವುದು. (ಆ) ಅದರಲ್ಲಿ ವಾದಿಯು ಮಧ್ಯಮವೇ ಮೊದಲಾದ ಏಳು ಸ್ವರಗಳು. (ಇ) ಒಂಬತ್ತು [ಮತ್ತು] ಹದಿಮೂರು (ಶ್ರುತಿಗಳಲ್ಲಿ) ಕೊನೆಯಾಗುವ (ಸ್ವರಗಳು ಪರಸ್ಪರ) ಸಂವಾದಿಗಳು. (ಈ) (ಎರಡು ಸ್ವರಗಳಲ್ಲಿ ಒಂದಕ್ಕಿಂತ ಇನ್ನೊಂದರಲ್ಲಿ) ಒಂದು ಶ್ರುತಿಯ ಅಂತರವು ಇಲ್ಲದಿರುವುದರಿಂದ [ಅವು] ಅನುವಾದಿಗಳು. (ಉ) ಎರಡು (ಶ್ರುತಿಗಳ) ಅಂತರವಿರುವ ಸ್ವರಜೋಡಿಗಳು ವಿವಾದಿಗಳು.                                                       23

೧೨೪ (ಅ) ಮಧ್ಯಮಗ್ರಾಮದಲ್ಲಿ ವಾದಿಮಂಡಲವು (ಹೇಗಿದೆಯೆಂದರೆ-)
ಮ ಪ ಧ ನಿ ಸ ರಿ ಗ

(ಆ) [ಮಧ್ಯಮಗ್ರಾಮದಲ್ಲಿ] ಸಂವಾದಿಮಂಡಲವು ಹೇಗೆಂದರೆ –                                                                  24

6.1_3_SMVB-KUH ಕೋಷ್ಠಕ ೭ : ಮಧ್ಯಮಗ್ರಾಮದಲ್ಲಿ ಸಂವಾದಿಮಂಡಲ

____

೧೨೫. (ಅ) ಮಧ್ಯಮಗ್ರಾಮೇ ಅನುವಾದಿಮಂಡಲಂ ಯಥಾ –                                                                     25

07_3_SMVB-KUH ಕೋಷ್ಠಕಮ್‌೮ : ಮಧ್ಯಮಗ್ರಾಮೇ ಅನುವಾದಿಮಂಡಲಮ್‌

೧೨೬ (ಅ) ಮಧ್ಯಮಗ್ರಾಮೇ ವಿವಾದಿಮಂಡಲಂ ಯಥಾ –                                                                          26

08_3_SMVB-KUH ಕೋಷ್ಠಕಮ್‌೯ ಮಧ್ಯಮಗ್ರಾಮೇ ವಿವಾದಿಮಂಡಲಮ್‌

[ಅರ್ಚಿಕಾದಿಭೇದೇನ ಸಪ್ತಸ್ವರಯೋಗಃ |]

೧೨೭ (ಅ) ಇದಾನೀಂ ಸಪ್ತವಿಧಸ್ವರಯೋಗಸ್ಯ ನಾಮಾನಿ ಕಥ್ಯಂತೇ – (ಆ) ಆರ್ಚಿಕಂ, ಗಾಥಿಕಂ, ಸಾಮಿಕಂ, ಸ್ವರಾಂತರಂ, ಔಡುವಂ, ಷಾಡವಂ, ಸಂಪೂರ್ಣಂ ಚೇತಿ | (ಇ) ತಥಾ ಚಾಹಾ ನಾರದ :-                                                                  27

೧೨೮ ಆರ್ಚಿಕೋ ಗಾಥಿಕಶ್ಚೈವ ಸಾಮಿಕಶ್ಚ ಸ್ವರಾಂತರಃ |
ಔಡುವಃ ಷಾಡವಶ್ಚೈವ ಸಂಪೂರ್ಣಶ್ಚೇತಿ ಸಪ್ತಮಃ || ೮ ||

ಪಾಠವಿಮರ್ಶೆ : ೧೨೮ ಅ

—-

೧೨೫ (ಅ) ಮಧ್ಯಮಗ್ರಾಮದಲ್ಲಿ ಅನುವಾದಿಮಂಡಲವು ಹೇಗಿದೆಯೆಂದರೆ –                                                   25

7.1_3_SMVB-KUH ಕೋಷ್ಠಕ ೮ : ಮಧ್ಯಮಗ್ರಾಮದಲ್ಲಿ ಅನುವಾದಿಮಂಡಲ

೧೨೬ (ಅ) ಮಧ್ಯಮಗ್ರಾಮದಲ್ಲಿ ವಿವಾದಿಮಂಡಲವು ಹೇಗಿದೆಯೆಂದರೆ-                                                        26

8.1_3_SMVB-KUH ಕೋಷ್ಠಕ ೯ : ಮಧ್ಯಮಗ್ರಾಮದಲ್ಲಿ ವಿವಾದಿಮಂಡಲ

[ಅರ್ಚಿಕ ಮೊದಲಾದ ಭೇದಗಳಿಂದ ಸ್ವರಗಳ ಸಂಯೋಗ]

೧೨೭ (ಅ) ಈಗ ಏಳು ಬಗೆಯ ಸ್ವರಸಂಯೋಜನೆಗಳ ಹೆಸರುಗಳನ್ನು ಹೇಳಲಾಗುವುದು- (ಆ) ಆರ್ಚಿಕ, ಗಾಥಿಕ, ಸಾಮಿಕ, ಸ್ವರಾಂತರ, ಔಡುವ, ಷಾಡವ ಮತ್ತು ಸಂಪೂರ್ಣ (ಈ) ನಾರದನು ಹೀಗೆ ಹೇಳಿದ್ದಾನೆ-                                                                 27

೧೨೮ ಆರ್ಚಿಕ, ಹಾಗೆಯೇ ಗಾಥಿಕ, ಸಾಮಿಕ, ಸ್ವರಾಂತರ, ಔಡುವ, ಅಂತೆಯೇ ಷಾಡವ ಮತ್ತು ಸಂಪೂರ್ಣವೆಂಬುದು ಏಳನೆಯದು.      ೮

____

೧೨೯   ಏಕಸ್ವರಪ್ರಯೋಗೋ ಯ ಆರ್ಚಿಕಃ ಸೋsಭಿಧೀಯತೇ |
ಗಾಥಿಕೋ ದ್ವಿಸ್ವರೋ ಜ್ಞೇಯಸ್ತ್ರಿಸ್ವರಶ್ಚೈವ ಸಾಮಿಕಃ || ೯ ||

೧೩೦   ಚತುಃಸ್ವರಪ್ರಯೋಗೋ ಹಿ ಕಥಿತಸ್ತು ಸ್ವರಾಂತರಃ |
ಔಡುವಃ [ಪಂಚಭಿಶ್ಚೈವ ಷಾಡವಃ ಷಟ್‌ಸ್ವರೋ ಭವೇತ್‌ |
ಸಂಪೂರ್ಣಃ ಸಪ್ತಭಿಶ್ಚೈವ ವಿಜ್ಞೇಯೋ ಗೀತಯೋಕ್ತೈಭಿಃ] || ೧೦ ||

[ಸ್ವರಸಂಜ್ಞಾನಿರುಕ್ತಿಃ]

೧೩೧   ಷಣ್ಣಾಂ ಸ್ವರಾಣಾಂ ಜನಕಃ ಷಡ್ಭಿರ್ವಾ ಜನ್ಯತೇ ಸ್ವರೈಃ |
ಷಡ್‌ಭ್ಯೋ ವಾ ಜನ್ಯತೇs೦ಗೇಭ್ಯಃ ಷಡ್ಜ ಇತ್ಯಭಿಧೀಯತೇ || ೧೧ ||

೧೩೨   ಪ್ರಾಪ್ನೋತಿ ಹೃದಯಂ ಶೀಘ್ರಮನ್ಯಸ್ಮಾದ್‌ ಋಷಭಃ ಸ್ಮೃತಃ |
ಸ್ತ್ರೀಗವೀಷು ಯಥಾ ತಿಷ್ಠನ್ ವಿಭಾತಿ ಋಷಭೋ ಮಹಾನ್ || ೧೨ ||

೧೩೩   ಸ್ವರಗ್ರಾಮೇ ಸಮುತ್ಪನ್ನಃ ಸ್ವರೋsಯಮೃಷಭಸ್ತಥಾ |
ವಾಚಃ ಗಾನಾತ್ಮಿಕಾಂ ಧತ್ತ ಇತಿ ಗಾಂಧಾರಸಂಜ್ಞಕಃ || ೧೩ ||

೧೩೪   ಸ್ವರಾಣಾಂ ಮಧ್ಯಮತ್ವಾಚ್ಚ ಮಧ್ಯಮಃ ಸ್ವರ ಇಷ್ಯತೇ |
ಸ್ವರಾಂತರಾಣಾಂ ಯೋ ಮಿಮಿತೇ ಸ ಪಂಚಮಃ || ೧೪ ||

೧೩೫   ಪಾಠಕ್ರಮೇಣ ಗಣನೇ ಸಂಖ್ಯಯಾ ಪಂಚಮೋsಥವಾ |
ಥೀರಸ್ಯಾಸ್ತೀತಿ ಧೀಮಾಂಸ್ತತ್‌ಸಂಬಂಧೀ ಧೈವತಃ ಸ್ಮೃತಃ || ೧೫ ||

೧೩೬ (ಅ) ಯದ್ವಾ –

೧೩೭   ಷಷ್ಠಸ್ಥಾನೇ ಧೃತೋ ಯಸ್ಮಾತೇನಾಸೌ ಧೈವತೋ ಮತಃ || ೧೬ ||
ಯದ್ವಾ-

೧೩೮   (ಅ) ಲಲಾಟೇ ಧೈವತ ಇತ್ಯರ್ಥಃ | 28

೧೩೯   ನಿಷೀದಂತ ಸ್ವರಾಃ ಸರ್ವೇ ನಿಷಾದಸ್ತೇನ ಕಥ್ಯತೇ || ೧೭ ||

ಪಾಠವಿಮರ್ಶೆ : ೧೨೯ಅ ೧೩೦ಇ ೧೩೧-೧೩೬ ೧೩೭ಅಆ, ಅ,ಆ

—-

೧೨೯ [ಒಂದೇ] ಒಂದು ಸ್ವರದ ಪ್ರಯೋಗವು ಯಾವುದಿದೆಯೋ ಅದಕ್ಕೆ ಆರ್ಚಿಕವೆಂಬ ಹೆಸರಿದೆ. ಗಾಥಿಕವನ್ನು ಎರಡು ಸ್ವರಗಳ (ಸಂಯೋಜನೆ) ಎಂದು ತಿಳಿಯಬೇಕು; ಅಂತೆಯೇ ಮೂರು ಸ್ವರಗಳದ್ದು (ಸಂಯೋಜನೆಯು) ಸಾಮಿಕ.                                         ೯

೧೩೦ ನಾಲ್ಕು ಸ್ವರಗಳ ಪ್ರಯೋಗವನ್ನು ಸ್ವರಾಂತರವೆಂದು ಹೇಳಿದೆ. ಅಂತೆಯೇ ಔಡುವವು [ಐದು ಸ್ವರಗಳ ಪ್ರಯೋಗ; ಷಾಡವವು ಆರು ಸ್ವರಗಳ ಸಂಯೋಗವಾಗಿದೆ. ಸಂಪೂರ್ಣವು ಏಳು ಸ್ವರಗಳಿಂದ (ಆದ ಸಂಯೋಗ) ಎಂದು ಹಾಡನ್ನು ಪ್ರಯೋಗಮಾಡುವವರು ತಿಳಿಯಬೇಕು.]         ೧೦

[ಸ್ವರಗಳ ಹೆಸರುಗಳ ನಿಷ್ಪತ್ಪಿ]

೧೩೧ ಆರು ಸ್ವರಗಳನ್ನು (ತಾನೇ) ಉತ್ಪಾದಿಸುವ ಅಥವಾ ಆರು (ಸ್ವರೋದ್ಬವಸ್ಥಾನಗಳಾದ) ಅಂಗಗಳಿಂದ ಉತ್ಪನ್ನವಾಗುವ ಸ್ವರವನ್ನು ಷಡ್ಜವೆಂದು ಹೆಸರಿಸಲಾಗಿದೆ.                                                                                                             ೧೧

೧೩೨ ಬೇರೆ ಸ್ವರದಿಂದ ಬೇಗ ಹೃದಯವನ್ನು ತಲುಪುವ ಸ್ವರವು ಋಷಭವೆಂದು ಸ್ಮೃತವಾಗಿದೆ. ಹೆಣ್ಣುದನಗಳ ಮಧ್ಯದ (=ಮಂದೆಯ)ಲ್ಲಿ ದೊಡ್ಡ ಗೂಳಿಯು ಹೇಗೆ ಪ್ರಕಾಶಿಸುತ್ತದೋ                                                                                          ೧೨

೧೩೩ ಸ್ವರಸಮೂಹದ ಮಧ್ಯದಲ್ಲಿ ಈ ಋಷಭಸ್ವರವು ಹಾಗೆಯೇ ಉದ್ಭವಿಸುತ್ತದೆ. ಗಾನಸ್ವರೂಪದ ವಾಕ್ಕನ್ನು ಧರಿಸುತ್ತದೆ ಎಂಬುದರಿಂದ ಗಾಂಧಾರವೆಂದು ಹೆಸರು (ಬಂದಿದೆ)                                                                                                      ೧೩

೧೩೪ (ಏಳು) ಸ್ವರಗಳ ಮಧ್ಯಸ್ಥಾನದಲ್ಲಿ (ನಾಲ್ಕನೆಯದಾಗಿ) ಇರುವುದರಿಂದ (ಈ) ಸ್ವರವು ಮಧ್ಯಮ ಎಂದು ಹೇಳಿದೆ;
ಸ್ವರಗಳ ಅಂತರಗಳನ್ನು ಯಾವುದು ಅಳೆಯುತ್ತದೋ ಅದು (ಆ ಕಾರಣದಿಂದ) ಪಂಚಮವೆನ್ನಿಸಿಕೊಂಡಿದೆ;

೧೩೫ ಅಥವಾ ಬೋಧನೆಯ (ಅಥವಾ ಉಚ್ಚಾರದ) ಕ್ರಮದಲ್ಲಿ ಎಣಿಸುವಾಗಲೂ ಅದು ಐದನೆಯ ಸಂಖ್ಯೆಯದೇ ಆಗಿದೆ.
ಪಂಡಿತನೆಂದರೆ ಜ್ಞಾನ(ಬುದ್ಧಿ, ಪ್ರಜ್ಞೆ) <ಧೀ> ಉಳ್ಳವನು. ಧೈವತವು ಅವನನ್ನು ಸಂಬಂಧಿಸಿದ್ದೆಂದು ಸ್ಮೃತವಾಗಿದೆ. ೧೫

೧೩೬ (ಅ) ಅಥವಾ

೧೩೭ (ಇದನ್ನು) ಆರನೆಯ ಸ್ಥಾನದಲ್ಲಿ ಧರಿಸಲಾಗಿರುವುದರಿಂದ ಧೈವತ (ವೆಂಬ ಹೆಸರಿನದು) ಎಂದು ಅಭಿಪ್ರಾಯಪಡಲಾಗಿದೆ.        ೧೬

೧೩೮ (ಆರನೆಯ ಸ್ಥಾನವಾದ) ಹಣೆಯಲ್ಲಿ ಧೈವತವು (ಹುಟ್ಟಿದೆ) ಎಂದು (ಇದರ) ಅರ್ಥ.                                 28

೧೩೯ (ಉಳಿದ) ಎಲ್ಲಾ ಸ್ವರಗಳು (ಇದರಲ್ಲಿ) ವಿರಮಿಸುವುದರಿಂದ ನಿಷಾದವೆಂದು ಕರೆಯುತ್ತಾರೆ.                       ೧೭

____

[ಸ್ವರಾಣಾಂ ಸಪ್ತಸಂಖ್ಯಾನಿಯಮಃ]

೧೪೦   (ಅ) ನನು ಕಥಂ ಸಪ್ತಸ್ವರಾ ಇತಿ ನಿಯಮಃ? (ಆ) ಉಚ್ಯತೇ – ಯಥಾ ಸಪ್ತಧಾತ್ವಾಶ್ರಿತತ್ವೇನ ಸಪ್ತೈವ ಧಾತವೋ ರಸಾದಯೋ ಜ್ಞೇಯಾಃ | (ಇ) ತಥಾ ಚಾಹ ಸುಶ್ರುತಃ- 29

೧೪೧   ತ್ವಗಸೃಙ್‌ಮಾಂಸಮೆದೋsಸ್ಥಿಮಜ್ಜಾಶುಕ್ರಾಣಿ ಧಾತವಃ -ಇತಿ || ೧೮ ||

೧೪೨   (ಅ) ತಥಾ ಸಪ್ತಚಕ್ರಾಶ್ರಿತತ್ವೇನ ಸಪ್ತದ್ವೀಪಾಶ್ರಿತತ್ವೇನ ವಾ ಸಪ್ತೈವ ಸ್ವರಾ [ಇತಿ] 30

[ಸ್ವರಜಾತಯಃ]

೧೪೩   ಚತುಃಶ್ರುತಿಸ್ವರಾ ವಿಪ್ರಾಸ್ತ್ರಿಶ್ರುತೀ ಕ್ಷತ್ರಿಯೌ ಮತೌ |
ವೈಶ್ಯೌ ದ್ವಿಶ್ರುತಿಕೌ ಜ್ಞೇಯೌ ಶೂದ್ರೌ ಚಾಂತರಕೌ ಸ್ವರೌ || ೧೯ ||

[ಆಗಮಸ್ಥಃ ಸ್ವರೋದ್ಧಾರಃ |]

೧೪೪   ವರ್ಗಾಷ್ಚಕಂ ತು ಸಂಪ್ರಾಪ್ಯ ಅಕಾರಾದಿಯಶಾಂತಕಮ್‌|
ವರ್ಣಮಾತ್ರಾಸಮಾಯುಕ್ತಮುದ್ಧರೇತ್‌ ಸ್ವರಸಪ್ತಕಮ್‌|| ೨೦ ||

೧೪೫   ಅಷ್ಟಮಸ್ಯ ತೃತೀಯಂ ತು ಹರಿಬೀಜಸಮನ್ವಿತಮ್‌ |
ಆದ್ಯಂ ಸ್ವರಂ ಸ್ವರಜ್ಞಸ್ತು ಉದ್ಧರೇತ್‌ಸಪ್ರಯತ್ನತಃ || ೨೧ ||

೧೪೬   ಸಪ್ತಮಸ್ಯ ದ್ವಿತೀಯಂ ತು ಕಾಮಬೀಜಸಮನ್ವಿತಮ್‌ |
ದ್ವಿತೀಯಂ ತು ಸ್ವರಂ ವಿದ್ಧಿ ಬ್ರಹ್ಮಸ್ಥಾನಸಮುದ್ಭವಾತ್‌ || ೨೨ ||

೧೪೭   ದ್ವಿತೀಯಸ್ಯಾಪಿ ವರ್ಗಸ್ಯ ತೃತೀಯಂ ವಿಷ್ಣುಸಂಯುತಮ್‌ |
ಉದ್ಧರೇಚ್ಚ ಸ್ವರಂ ನಿತ್ಯಂ ಸ್ವರಭೇದಮನೋಹರಮ್‌ || ೨೩ ||

ಪಾಠವಿಮರ್ಶೆ : ೧೪೩ ಅ-ಈ ೧೪೫ ಈ

—-

೧೪೦ (ಅ) ಆದರೆ ಸ್ವರಗಳು ಏಳೇ ಎಂಬ ನಿಯಮವು ಏಕೆ? (ಆ) ಹೇಳಲಾಗುವುದು-ಹೇಗೆ ಏಳು (ಪಂಚಮಹಾಭೂತಗಳು ಮತ್ತು ಮಹತ್‌, ಅವ್ಯಕ್ತ) ಧಾತುಗಳನ್ನಾಕ್ರಮಿಸಿರುವುದರಿಂದ (ರಸ, ರಕ್ತ ಇತ್ಯಾದಿ) ಏಳೇ ಧಾತುಗಳು (ಶರೀರದಲ್ಲಿವೆಯೋ, ಅಂತೆಯೇ ಗೀತಶರೀರದಲ್ಲಿಯೂ ಏಳು ಸ್ವರಗಳಿವೆ) ಎಂದು ತಿಳಿದುಕೊಳ್ಳಬೇಕು. (ಇ) ಸುಶ್ರುತನು ಹೀಗೆ ಹೇಳಿದ್ದಾನೆ-                                               29

೧೪೧ ‘ಚರ್ಮ, ರಕ್ತ, ಮಾಂಸ, ಕೊಬ್ಬು, ಎಲುಬು, ಎಲುಬಿನೊಳಗಿನ ನೆಣ <ಮಜ್ಜಾ>, ರೇತಸ್ಸು ಇವು (ಏಳು) ಧಾತುಗಳು’. ೧೮

೧೪೨ (ಅ) ಇದೇ ರೀತಿಯಲ್ಲಿ ಏಳು (ನಾಡೀ) ಚಕ್ರಗಳಲ್ಲಿ ನೆಲೆಸಿರುವುದರಿಂದಲೂ ಅಥವಾ ಏಳು ದ್ವೀಪಗಳಲ್ಲಿ ನೆಲೆಸಿರುವುದರಿಂದಲೂ ಸ್ವರಗಳು ಏಳೇ (ಇವೆ) ಎಂದು ತಿಳಿಯಬೇಕು.                                                                                                        30

[ಸ್ವರಗಳ ಜಾತಿಗಳು]

೧೪೩ ನಾಲ್ಕು ಶ್ರುತಿಗಳನ್ನುಳ್ಳ (ಷಡ್ಜ, ಮಧ್ಯಮ ಮತ್ತು ಪಂಚಮ) ಸ್ವರಗಳು ಬ್ರಾಹ್ಮಣ (ಜಾತಿಯವು); ಮೂರು ಶ್ರುತಿಗಳನ್ನುಳ್ಳವು (ಋಷಭ, ಧೈವತ)ಗಳು ಕ್ಷತಿಯ (ಜಾತಿಯವು) ಎಂದು ಸಮ್ಮತಿಸಿದೆ. ಎರಡು ಶ್ರುತಿಗಳನ್ನುಳ್ಳವು (ಗಾಂಧಾರ, ನಿಷಾದ)ಗಳು ವೈಶ್ಯ (ಜಾತಿಯವು) ಎಂದು ತಿಳಿಯಬೇಕು. ಅಂತರ (ಗಾಂಧಾರ, ಕಾಕಲೀನಿಷಾದ) ಸ್ವರಗಳು ಶೂದ್ರ (ಜಾತಿಯವು).                                        ೧೯

[ಆಗಮದಲ್ಲಿ ಸ್ವರಗಳನ್ನು ಎತ್ತಿಕೊಂಡಿರುವ ರೀತಿ]

೧೪೪ ಅಕಾರದಿಂದ ಮೊದಲಾಗಿ ಯ-ಶ (ವರ್ಗಗಳಲ್ಲಿ) ಮುಗಿಯುವ ಎಂಟು ವರ್ಗಗಳನ್ನಿಟ್ಟುಕೊಂಡು (ಸ್‌, ರ್, ಗ್‌ ಇತ್ಯಾದಿ) ವರ್ಣಗಳು (ಅ, ಇ, ಎಂಬ) ಮಾತ್ರೆಗಳು ಕೂಡಿಕೊಂಡಿರುವ ಸಪ್ತಸ್ವರ (ಸಂಜ್ಞೆ)ಗಳನ್ನು ಎತ್ತಿಕೊಳ್ಳಬೇಕು.                                          ೨೦

೧೪೫ ಎಂಟನೆಯ (ಶ-) ವರ್ಗದ ಮೂರನೆಯ (=ಸ್‌) ವರ್ಣವನ್ನು ಹರಿಬೀಜ (ಮಂತ್ರವಾದ ‘ಅ’) ದೊಡನೆ ಸೇರಿಸಿ ಮೊದಲನೆಯ (=ಸ) ಸ್ವರವನ್ನು ಸ್ವರಗಳನ್ನು ಬಲ್ಲವರು ಸರ್ವಪ್ರಯತ್ನದಿಂದ ಉದ್ಧರಿಸಿಕೊಳ್ಳಬೇಕು.                                                     ೨೧

೧೪೬ ಏಳನೆಯ (ಯ-) ವರ್ಗದ ಎರಡನೆಯ (=ರ್) ವರ್ಣವನ್ನು ಕಾಮಬೀಜ (ಮಂತ್ರವಾದ ‘ಇ’) ದೊಡನೆ ಸೇರಿಸಿ ಬ್ರಹ್ಮಗ್ರಂಥಿ (=ಹೊಕ್ಕುಳುಗೆಡ್ಡೆ) ಯಲ್ಲಿ ಹುಟ್ಟುವ ಎರಡನೆಯ (=ರಿ) ಸ್ವರವನ್ನು ತಿಳಿದುಕೋ.                                                                   ೨೨

೧೪೭ ಎರಡನೆಯ (=ಕ) ವರ್ಗದ ಮೂರನೆಯ (=ಗ್‌) ವರ್ಣವನ್ನು ವಿಷ್ಣುಬೀಜ (=ಅ) ದೊಡನೆ ಸೇರಿಸಿ ಸ್ವರಭೇದಗಳಲ್ಲಿ ಮನೋಹರವಾದ (ಮೂರನೆಯ ‘ಗ’) ಸ್ವರವನ್ನ ಯಾವಾಗಲೂ ಉದ್ಧರಿಸಿಕೊಳ್ಳಬೇಕು.                                                           ೨೩

____

೧೪೮   ಷಷ್ಠಸ್ಯಾಪಿ ಹಿ ವರ್ಗಸ್ಯ ಅಂತಿಮಂ ಚಾದಿಸಂಯುತಮ್‌ |
ಅವಿನಷ್ಟಂ ವಿಜಾನೀಯಾನ್ಮಧ್ಯಮಂ ಸ್ವರಸತ್ತಮಮ್‌ || ೨೪ ||

೧೪೯   ತದಾದಿ ಪ್ರಥಮೋಪೇತಂ ಸ್ವರಂ ಸಂವಿದ್ಧಿ ಶೋಭನಮ್‌ |
ವ್ಯೋಮಸಂಖ್ಯಾಸಮಾಯುಕ್ತಮೋಷ್ಠಸ್ಥಾನಸಮುದ್ಭವಮ್‌ || ೨೫ ||

೧೫೦   ಪಂಚಮಸ್ಯಾಪಿ ವರ್ಗಸ್ಯ ಚತುರ್ಥಂ ಚಾದಿಸಂಯುತಮ್‌ |
ಕೋದಂಡದ್ವಯಸಂಭೂತಮುದ್ಧರೇತ್‌ಸ್ವರಮುತ್ತಮಮ್‌ || ೨೬ ||

೧೫೧   ಅಕಾರಾನ್ಯಾಂತಸಂಭಿನ್ನಂ ಪಂಚಮಾಂತಂ ಸಮುದ್ಧರೇತ್‌ |
ಬ್ರಹ್ಮಸ್ಥಾನಸಮುದ್ಭೂತಂ ಸುತಾರಧ್ವನಿಸಂಯುತಮ್‌ |
ಆಗಮಸ್ಥಃ ಸ್ವರೋದ್ಧಾರ ಇತಿ ತಾವತ್‌ ಪ್ರದರ್ಶಿತಃ || ೨೭ ||

[ಸ್ವರಾಣಾಂ ಕುಲವರ್ಣಾದಿನಿರ್ಣಯಃ]

೧೫೨   ಅಧುನಾ ಸಂಪ್ರವಕ್ಷ್ಯಾಮಿ ಕುಲವರ್ಣಾದಿನಿರ್ಣಯಮ್‌ |
ದೇವಕುಲಸಮುತ್ಪನ್ನಾಃ ಷಡ್ಜಗಾಂಧಾರಮಧ್ಯಮಾಃ || ೨೮ ||

೧೫೩   ಪಿತೃವಂಶಸಮುತ್ಪನ್ನಃ ಸ್ವರೋsಸೌ ಪಂಚಮಃ ಕಿಲ |
ಋಷಿವಂಶಸಮುತ್ಪನ್ನೌ ಸ್ವರಾವೃಷಭಧೈವತೌ || ೨೯ ||

೧೫೪   ಅಸುರಾಣಾಂ ಕುಲೇ ಜಾತೋ ನಿಷಾದಃ ಸ ನಿಸಂಜ್ಞಿತಃ |
ಪದ್ಮಪತ್ರಪ್ರಭಃ ಷಡ್ಜ ಋಷಭಃ ಶುಕವರ್ಣಕಃ || ೩೦ ||

೧೫೫   ಕನಕಾಭಾಸ್ತು ಗಾಂಧಾರೋ ಮಧ್ಯಮಃ ಕುಂದಸನ್ನಿಭಃ |
ಪಂಚಮಸ್ತು ಭವೇತ್‌ ಕೃಷ್ಣಃ ಪೀತವರ್ಣಸ್ತು ಧೈವತಃ ||
ನಿಷಾಧಃ ಸರ್ವವರ್ಣೋsಯಂ ವಿಜ್ಞೇಯಾಃ ಸರ್ವವರ್ಣಕಾಃ || ೩೧ ||

೧೫೬   ಷಡ್ಜಸ್ಯ ದೈವತಃ ಬ್ರಹ್ಮಾ ಋಷಭೋ ವಹ್ನಿದೈವತಃ |
ಗಾಂಧಾರೋ ಭಾರತೀದೇವೋ ಮಧ್ಯಮೋ ಹರದೈವತಃ || ೩೨ ||

ಪಾಠವಿಮರ್ಶೆ : ೧೪೮ ಆ,ಈ ೧೪೯ ಅಆ,ಅ ೧೫೦ಆ ೧೫೧ಅ ೧೫೨ಇಈ ೧೫೪ಆ, ಇಈ, ಈ

—-

೧೪೮ ಆರನೆಯ (ಪ) ವರ್ಗದಲ್ಲಿ ಕೊನೆಯ (=ಮ್‌) ವರ್ಣವು ‘ಅ’ ಕಾರವನ್ನು ಕೂಡಿಕೊಂಡು ಆಗುವ ಮಧ್ಯಮವು ಸ್ವರಗಳಲ್ಲಿ ಶ್ರೇಷ್ಠವೂ ನಾಶವಿಲ್ಲದುದೂ ಎಂದು ತಿಳಿದುಕೊಳ್ಳಬೇಕು.                                                                                       ೨೪

೧೪೯ ಅದರದೇ (ಆದನೆಯ) ವರ್ಗದ ಮೊದಲನೆಯ ವರ್ಣ(ಪ್)ವನ್ನು ಮೊದಲನೆಯ ಅಕ್ಷರ (=ಆ)ವು ಕೂಡಿಕೊಂಡು ಆಕಾಶಸಂಖ್ಯೆ (=ಐದನೆಯದಾದ) (ಪಂಚಮಸ್ವರವು) ತುಟಿಗಳಲ್ಲಿ ಹುಟ್ಟುವುದೆಂದು (ತಿಳಿಯಬೇಕು.)                                    ೨೫

೧೫೦ ಐದನೆಯ (ತ) ವರ್ಗದ ನಾಲ್ಕನೆಯ (ವರ್ಣ)ವು (=ಧ್‌)ಮೊದಲನೆಯ ಅಕ್ಷರ (=ಅ) ವನ್ನು ಸೇರಿಕೊಂಡು ಎರಡು ಬಿಲ್ಲುಗಳ ಆಕಾರದಿಂದ ಹುಟ್ಟುವ, ಉತ್ತಮಸ್ವರ (=ಧೈವತ)ವನ್ನು ಉದ್ಧರಿಸಬೇಕು.                                                                    ೨೬

೧೫೧ (ಅದೇ ವರ್ಗದ) ಐದನೆಯ ವರ್ಣ (=ನ್‌)ವು ಅಕಾರವಲ್ಲದ (=ಇ) (ಮಾತ್ರೆಯನ್ನು) ಕೂಡಿಕೊಂಡು ಬ್ರಹ್ಮಸ್ಥಾನದಲ್ಲಿ ಹುಟ್ಟುವ (ಬ್ರಹ್ಮರಂಧ್ರದಲ್ಲಿ=ನೆತ್ತಿಯಲ್ಲಿ, ಗೋಚರವಾಗುವ), ಉಚ್ಚಧ್ವನಿಯಿಂದ ಹುಟ್ಟುವ (ಏಳನೆಯ ಸ್ವರವನ್ನು) ಉದ್ಧರಿಸಬೇಕು. ಇಷ್ಟರವರೆಗೆ ಆಗಮದಲ್ಲಿ (ಹೇಳಿ)ರುವ ಸ್ವರಗಳ ಉದ್ಧಾರ (ಕ್ರಮ)ವನ್ನು ತೋರಿಸಿದ್ದಾಯಿತು.                                          ೨೭

[ಸ್ವರಗಳ ಕುಲ, ವರ್ಣ ಇತ್ಯಾದಿಗಳ ನಿರ್ಣಯ]

೧೫೨ ಈಗ [ಸ್ವರಗಳ] ಕುಲ, ವರ್ಣ ಇತ್ಯಾದಿಗಳ ನಿರ್ಣಯವನ್ನು ಹೇಳುತ್ತೇನೆ: ಷಡ್ಜ, ಗಾಂಧಾರ (ಮತ್ತು) ಮಧ್ಯಮಗಳು ದೇವಕುಲದಲ್ಲಿ ಹುಟ್ಟಿದವುಗಳು.                                                                                                                             ೨೮

೧೫೩ ಈ ಪಂಚಮಸ್ವರವು ಪಿತೃವಂಶದಲ್ಲಿ ಹುಟ್ಟಿದೆ. ಋಷಭಧೈವತಸ್ವರಗಳು ಋಷಿಗಳ ವಂಶದಲ್ಲಿ ಉತ್ಪತ್ತಿಯಾಗಿವೆ. ೨೯

೧೫೪ ನಿ ಎಂಬ ಸಂಜ್ಞೆಯುಳ್ಳ ನಿಷಾದವು ಅಸುರರ ಕುಲದಲ್ಲಿ ಹುಟ್ಟಿದೆ.
ಷಡ್ಜವು ತಾವರೆ ಎಸಳಿನ (=ಕೆಂಪು) ಬಣ್ಣದ್ದಾಗಿದೆ. ಋಷಭವು ಗಿಳಿಯ (-ಹಸಿರು) ಬಣ್ಣದ್ದು.                            ೩೦

೧೫೫ ಗಾಂಧಾರವು ಬಂಗಾರದ (=ಕೆಂಪು ಮಿಶ್ರಿತ ಹಳದಿ) ಬಣ್ಣದ್ದು. ಮಧ್ಯಮವು ಮಲ್ಲಿಗೆಯಂತಹ (=ಬಿಳಿಯ) ಬಣ್ಣದ್ದು. ಪಂಚಮವು ಕಪ್ಪಾಗಿದೆ; ಧೈವತವಾದರೋ ಹಳದಿಬಣ್ಣದ್ದಾಗಿದೆ.
ಈ ನಿಷಾದವು ಎಲ್ಲಾ ಬಣ್ಣಗಳದ್ದಾಗಿದೆ. ಹೀಗೆ (ಎಲ್ಲಾ ಸ್ವರಗಳ) ಎಲ್ಲಾ ಬಣ್ಣಗಳನ್ನೂ ತಿಳಿದುಕೊಳ್ಳಬೇಕು.    ೩೧

೧೫೬ ಷಡ್ಜದ ಅಧಿದೇವತೆಯು ಬ್ರಹ್ಮ; ಋಷಭವು ಅಗ್ನಿಯನ್ನು ಆಧಿದೈವವನ್ನಾಗಿ ಹೊಂದಿದೆ. ಗಾಂಧಾರವು ಭಾರತೀದೇವತೆಯನ್ನುಳ್ಳದ್ದು. ಮಧ್ಯಮವು ಹರನನ್ನು ದೇವತೆಯಾಗಿ ಹೊಂದಿದೆ.                                                                                    ೩೨

____

೧೫೭   ಪಂಚಮಃ ಶತಯಜ್ಞಸ್ತು ಧೈವತೋ ಗಣನಾಯಕಃ |
ನಿಷಾದೋ ಭಾನುದೇವಸ್ತು ಇತ್ಯೇತೇ ಸ್ವರದೇವತಾಃ || ೩೩ ||

೧೫೮   ಅಗ್ನಿಗೀತಃ ಸ್ವರಃ ಷಡ್ಜ ಋಷಭೋ ಬ್ರಹ್ಮಣೋದಿತಃ |
ಸೋಮೇನ ಗೀತೋ ಗಾಂಧಾರೋ ವಿಷ್ಣುನಾ ಮಧ್ಯಮಃ ಸ್ವರಃ || ೩೪ ||

೧೫೯   ಪಂಚಮಸ್ತು ಸ್ವರೋ ಗೀತೋ ನಾರದೇನ ಮಹಾತ್ಮನಾ |
ಧೈವತಶ್ಚ ನಿಷಾದಶ್ಚ ಗೀತೌ ತುಂಬುರುಣಾ ಸ್ವರೌ || ೩೫ ||

೧೬೦   ಹಾಸ್ಯಶೃಂಗಾರಯೋಃ ಕಾರ್ಯೌ ಸ್ವರೌ ಮಧ್ಯಮಪಂಚಮೌ |
ಪಡ್ಜರ್ಷಭೌ ತಥಾ ಜ್ಞೇಯೌ ವೀರರೌದ್ರಾದ್ಭುತೇಷು ಚ || ೩೬ ||

೧೬೧   ಗಾಂಧಾರಶ್ಚ ನಿಷಾದಶ್ಚ ಕರ್ತವ್ಯೌ ಕುರುಣೇ ರಸೇ |
ಧೈವತಶ್ಚಾಪಿ ಕರ್ತವ್ಯೋ ಬೀಭತ್ಸೇ ಸಭಯಾನಕೇ || ೩೭ ||

೧೬೨   ಕಂಠಾದುತ್ತಿಷ್ಠತೇ ಷಡ್ಜ ಋಷಭಃ ಶಿರಸಃ ಸ್ಮೃತಃ |
ನಾಸಾಯಾಶ್ಚೈವ ಗಾಂಧಾರ ಉರಸೋ ಮಧ್ಯಮಃ ಸ್ವರಃ || ೩೮ ||

೧೬೩   ಉರಸಃ ಶಿರಸಃ ಕಂಠಾದುಸ್ಥಿತಃ ಪಂಚಮಃ ಸ್ವರಃ |
ತಾಲುದೇಶಾತ್ ಸಮುತ್ಪನ್ನೋ ಧೈವತಸ್ತು ಯಶಸ್ವನಿ |
ನಿಷಾದಸ್ತು ಸಮುತ್ಪನ್ನೋ ವಿಜ್ಞೇಯಃ ಸರ್ವಸಂಧಿತಃ || ೩೯ ||

೧೬೪   ಏವಂ ಸ್ವರಾನ್ ವಿಜಾನೀಯಾದುತ್ಪನ್ನಾನ್ ಗೀತಸಾಗರೇ |
ಮಹಾದೇವಮುಖ್ಯೋದ್ಭೂತಾನ್ ದೇಶೀಮಾರ್ಗೇ ಚ ಸಂಸ್ಥಿತಾನ್ || ೪೦ ||

 || ಇತಿಸ್ವರಪ್ರಕರಣಮ್‌ ||