[ತತ್ರ ವರ್ಣಾಃ]

೨೭೦   ಅತಃ ಪರ ಪ್ರದರ್ಶ್ಯಂತೇ ವರ್ಣಾಶ್ಚತ್ವಾರ ಏವ ಹಿ |
ಸ್ಥಾಯಿಸಂಚಾರಿಣೌ ಚೈವ ತಥಾ ssರೋಹ್ಯವರೋಹಿಣೌ || ೧ ||

೨೭೧ (ಅ) ನನು ವರ್ಣಶಬ್ದೇನ ಕಿಮುಚ್ಯತೇ? (ಆ) ವರ್ಣಶಬ್ದೇನ ಗಾನಮಭಿಧೀಯತೇ | (ಇ) ಯತ್ರ ಸಮಾಃ ಸ್ವರಾ ಅನುಪಹಿತರೂಪಾಸ್ತಿಷ್ಠಂತಿ ತೇಭ್ಯೋ ಯದ್‌ಗೀತಂ ವರ್ಣಾಭಿವ್ಯಕ್ತಿಕೃದ್‌ಯತ್ರ ಪದೇ ಸ ವರ್ಣಃ ಸ್ಥಾಯಿತ್ಯುಚ್ಯತೇ | 1

೨೭೨ (ಅ) ಯಥಾ-

ಷಾಡ್ಜ್ಯಾಂ ಸಾಸಾಸಾಸಾ, ಮಧ್ಯಮಾಯಾಂ ತು ಮಾಮಾಮಾಮಾ ಇತಿ | 2

ಪಾಠವಿಮರ್ಶೆ : ೨೭೧ಇ ೨೭೨ಅ

—-

೨೬೯ ನಿ ಸ ರಿ ಗ ಮ ಪ ಧ ನಿ ಸ ರಿ ಗ ಮ | ಸೌವೀರೀ (೧)

ಸ ರಿ ಗ ಮ ಪ ಧ ನಿ ಸ ರಿ ಗ ಮ ಪ | ಹರಿಣಾಶ್ವಾ (೨)

ರಿ ಗ ಮ ಪ ಧ ನಿ ಸ ರಿ ಗ ಮ ಪ ಧ | ಕಲೋಪನತಾ (೩)

ಗ ಮ ಪ ಧ ನಿ ಸ ರಿ ಗ ಮ ಪ ಧ ನಿ | ಶುದ್ಧಮಧ್ಯಾ (೪)

ಮ ಪ ಧ ನಿ ಸ ರಿ ಗ ಮ ಪ ಧ ನಿ ಸ | ಮಾರ್ಗೀ (೫)

ಪ ಧ ನಿ ಸ ರಿ ಗ ಮ ಪ ಧ ನಿ ಸ ರಿ | ಪೌರವೀ (೬)

ಧ ನಿ ಸ ರಿ ಗ ಮ ಪ ಧ ನಿ ಸ ರಿ ಗ | ಹೃಷ್ಯಕಾ (೭)

ಹೀಗೆ ಮಧ್ಯಮಗ್ರಾಮದಲ್ಲಿ (ಹನ್ನೆರಡು ಮೂರ್ಛನೆಗಳಿವೆ.) 52

(ಇಂತು ಗ್ರಾಮಮೂರ್ಛನಾತಾನಪ್ರಕರಣವು ಮುಗಿಯಿತು.)

 

[vi. ವರ್ಣಾಲಂಕಾರಪ್ರಕರಣಮ್‌]

(ವರ್ಣಗಳು)

೨೭೦ ಇನ್ನು ಮುಂದೆ ಸ್ಥಾಯಿ (ನಿಂತಲ್ಲಿ ನಿಲ್ಲುವ) -ಸಂಚಾರೀ (ಏರುವುದರ, ಇಳಿಯುವುದರ ಬೆರಕೆಯಲ್ಲಿ ಚಲಿಸುವ), ಅಂತೆಯೇ ಆರೋಹೀ (ಏರುವ) ಮತ್ತು ಅವರೋಹೀ (ಇಳಿಯುವ) – ಎಂದಿರುವ ನಾಲ್ಕೇ ವರ್ಣ(=ಗಾನಕ್ರಿಯೆಯ ಸ್ವರಸಂಚಾರ ಮಾದರಿ)ಗಳನ್ನು ತೋರಿಸಲಾಗುವುದು.           ೧

೨೭೧ (ಅ) ಹಾಗಾದರೆ ವರ್ಣ ಎಂಬ ಶಬ್ದದಿಂದ ಏನನ್ನು (ಕುರಿತು) ಹೇಳಿದೆ? (ಆ) ವರ್ಣವೆಂಬ ಶಬ್ದದಿಂದ ಗಾನವನ್ನು ಹೇಳಿದೆ. (ಇ) ಎಲ್ಲಿ ಸರಿಸಮಾನವಾದ (ಒಂದೇ ರೀತಿಯ) ಸ್ವರಗಳು ಅಡೆತಡೆಯಿಲ್ಲದೆ (=ಮಧ್ಯಮಧ್ಯದಲ್ಲಿ ನಿಲ್ಲದೆ) ಮತ್ತೆ ಮತ್ತೆ ಹೊಸದಾಗಿ ಉಚ್ಚಾರಿತವಾಗಿ ನೆಲೆಸಿರುತ್ತವೋ <ತಿಷ್ಠಂತಿ>, ಅವುಗಳಲ್ಲಿ ಹಾಡಿದ್ದು (ಆಯಾ) ಮಾತಿನಲ್ಲಿ ಗಾನಕ್ರಿಯೆಯನ್ನು ಪ್ರಕಟಮಾಡುತ್ತದೋ ಆ ವರ್ಣವನ್ನು ಸ್ಥಾಯಿ ಎನ್ನುತ್ತಾರೆ.                                                                                                                                     1

೨೭೨ (ಅ) ಹೇಗೆಂದರೆ-
ಷಾಡ್ಜೀ (ಜಾತಿ) ಯಲ್ಲಿ ಸಾ ಸಾ ಸಾ ಸಾ, ಮಧ್ಯಮಾ (ಜಾತಿ) ದಲ್ಲಾದರೆ ಮಾ ಮಾ ಮಾ ಮಾ.                            2

____

 

—-

೨೭೩ (ಅ) ಹಾಡುವಾಗ ಎಲ್ಲಿ ಸ್ವರಗಳು ಒಂದೊಂದಾಗಿ, ಅಥವಾ ಎರಡೆರಡಾಗಿ ಪರಸ್ಪರವಾಗಿ (ಆಯಾ ಸ್ವರಸಮುಚ್ಚಯಗಳ) ಕೊನೆಗಳನ್ನು ಕೂಡಿಸಿಕೊಂಡು (ಅವಿಚ್ಛಿನ್ನವಾಗಿ) ಸಂಚರಿಸುತ್ತವೋ ಅದನ್ನು ಸಂಚಾರೀವರ್ಣವೆನ್ನುತ್ತಾರೆ.                                ೨

೨೭೪ ಹೇಗೆಂದರೆ ಮಾಲವಕ್ಯೆಶಿಕದಲ್ಲಿ – ಸಾ ಸಾ ಸನಿ[ಪ] ಪನಿ ನಿಪ ನಿಸಾ [ಸಾ] ಧರೀಪಾ ಪನೀನಿನೀ – ಹೀಗೆಯೇ ಇಂತಹ ಪ್ರಕಾರಗಳಲ್ಲಿ ಪರಸ್ಪರವಾದ (ದಿಕ್ಕುಗಳಲ್ಲಿ) ಸಂಚರಿಸುವುದರಿಂದ (ಸಂಚಾರೀ) (ವರ್ಣವಾಗುತ್ತದೆ).                                         3

೨೭೫ (ಅ) ಎಲ್ಲಿ ಹಾಡಲಾದ ಸ್ವರಗಳು ಒಂದೊಂದಾಗಿ ಅಥವಾ ನಡುವೆ ಅಂತರವನ್ನು ಬಿಟ್ಟು ಏರುತ್ತವೆಯೋ ಆ ವರ್ಣವನ್ನು ಆರೋಹೀ ಎನ್ನುತ್ತಾರೆ. (ಆ) ಹೇಗೆಂದರೆ ಮಾಲವಪಂಚಮದಲ್ಲಿ – ಪಾಪಸ ಧರೀ ಸಮ ರಿಪಮ ಮಪ ಮಪಧ ಮಾಮಾ ಪಸಾರಿ ಸಾಸಮ ಮಾಪಾ ರಿಗಾ ಸಾ ರಿಗಾ ಸಾ ಧನಿ ಪಾರಿ ಮಮ ಧನೀ ನೀನೀ ಪಾರಿ ಮಮ ಧನೀ ಪಾಧನಿ ರಿರಿಪಾ. ಹೀಗೆ ಪರಸ್ಪರವಾಗಿ ನಡುವೆ ಒಂದು (ಸ್ವರದ) ಅಥವಾ ಎರಡು (ಸ್ವರಗಳ) ಅಂತರವಿರುವಂತೆ ಸ್ವರಗಳು ಏರುವುದರಿಂದ ಇದು ಆರೋಹಿ (ವರ್ಣವಾಗುತ್ತದೆ)(-ವಾಗಿದೆ).                  4

೨೭೬ ಎಲ್ಲಿ ಸ್ವರಗಳು ಒಂದೇ (ರೀತಿಯ) ಕ್ರಮದಲ್ಲಿ, ಸಮನಾಗಿ (=ನಡುವೆ ಅಂತರವಿಲ್ಲದಂತೆ) ಅಥವಾ ನಡುವೆ (ಸ್ವರದಸ್ವರಗಳ) ಅಂತರವಿದ್ದು ಇತಿಯುತ್ತವೋ ಅದು ಅವರೋಹೀ ವರ್ಣವೆಂಬ ಸಂಜ್ಞೆಯನ್ನು ಪಡೆದಿದೆ.                                                         ೩

೨೭೭ (ಅ) ಪಾಮಾ ಮಮಗಾ ಗಗ ಮಮ ಮರಿ ರಿರಿ ರಿ ಪಾ ಮಾ ಮಮ ಪಪಾ ಪಪ ಪ ಮಾಮಮ ನಿನಿ ಧಧ ಪಪ ಮಮ ಗಗಾ ರಿರಿ ನಿನಿಧ ಪಾಪಾ – ಹೀಗೆ ಪರಸ್ವರವಾಗಿ (ನಡುವೆ) ಒಂದು (ಸ್ವರದ) ಅಂತರ ಅಥವಾ ಎರಡು (ಸ್ವರಗಳ) ಅಂತರವಿರುವ ಸ್ವರಗಳು ಇಳಿಯುವುದರಿಂದ ಅವರೋಹೀ (ವರ್ಣವಾಗುತ್ತದೆ). (ಆ) ಆದುದರಿಂದಲೇ [ಹೀಗೆ] ಹೇಳಲಾಗಿದೆ-                                                                    5

೨೭೮ ಮಾನವ ಶಾರೀರದಲ್ಲಿ ಹುಟ್ಟಿ ಮೂರೂ ಸ್ಥಾನಗಳಲ್ಲಿ ಮತ್ತೆ ಮತ್ತೆ (ಅಥವಾ ಮೂರು ಸ್ಥಾನಗಳ) ಗುಣಗಳೊಡನೆ (ಪ್ರಯುಕ್ತವಾಗಿ) ಶೋಭಿಸುವ ಈ ವರ್ಣಗಳನ್ನು ಅಲಂಕಾರ(ಗಳ ವಿನ್ಯಾಸ) ಮುಂತಾದವುಗಳು ಕ್ಯೆಗೂಡುವುದಕ್ಕಾಗಿ ಅರಿತುಕೊಳ್ಳಬೇಕು. ೪

೨೭೯ (ಅ) ಹಾಗಾದರೆ ವರ್ಣ (ಶಬ್ದವು ಹೇಗೆ ಉತ್ಪನ್ನವಾಗುತ್ತದೆ? (ಆ) (ಅದನ್ನು) ಹೇಳಲಾಗುವುದು -ಸ್ವರಗಳು (ಮಾತಿನಲ್ಲಿರುವ) ವರ್ಣ (=ಅಕ್ಷರ)ವನ್ನು ಹಾಡಿಗೋಸ್ಕರವಾಗಿ ಎಳೆದು<ಕರ್ಷ>ನಿಲ್ಲುವುದರಿಂದಲೂ, (ಬಗೆಬಗೆಯಾಗಿ) ಸಂಚರಿಸುವುದರಿಂದಲೂ, ಏರುವಿಕೆಯಂದಲೂ, ಇಳಿಯುವಿಕೆಯಿಂದಲೂ ಆಕರ್ಷಕವನ್ನಾಗಿ (=ರಂಜನಾಸ್ಪದವನ್ನಾಗಿ) ಮಾಡುವುದರಿಂದ ವರ್ಣವು ಹುಟ್ಟುತ್ತದೆ. (ಇ) ಹೇಗೆಂದರೆ- ಷಾಡ್ಜೀ (ಜಾತಿ)ಯಲ್ಲಿ ಸ್ಥಾಯಿ ವರ್ಣವು ಸಾಸಾಸಾ. (ಈ) ಸಂಚಾರಿಯೂ ಹೇಗೆಂದರೆ ಧ್ಯೆವತೀ (ಜಾತಿ)ಯಲ್ಲಿ ಧಾ ಧ ನೀ ನೀಪ ಧಾ (ಉ) ಆರೋಹಿಯು (ಹೇಗೆಂದರೆ) ನಂದಯಂತೀ

____

೨೮೦ (ಅ) ಪಾಪಾಪಾಪಾಪಾಪಾಪಾಪಾ ಧಾ ನೀ ಮಾ ಪಾ ಗಾ ಗಾ ಗಾ ಗಾ ಗಾ ಗಾ[….] ದಾರವ್ಯಾಂ ಭವಂತಿ | [….] (ಆ) ಯದರ್ಥಮುಕ್ತಂ ಯಥಾ ಏವಮೇತೇ ತಥಾ ಪ್ರವರ್ತಯಂತೀತ್ಯರ್ಥಃ ಶಾರೀರಸ್ವರೇ | (ಇ) [ತದುಕ್ತಮ್‌] 7

(ಈ) ಏತೇ ವರ್ಣಾಸ್ತು ವಿಜ್ಞೇಯಾಶ್ಚತ್ವಾರೋ ಗೀತಯೋಜಕಾಃ || ೫ ||

[ಇತಿ ವರ್ಣಾಃ]

[ಅಥಾಲಂಕಾರಾಃ]

೨೮೧ (ಅ) ಇದಾನೀಂ ಸುಪ್ರಸಿದ್ಧಾಸ್ತ್ರಯಸ್ತ್ರಿಂಶದಲಂಕಾರಾ ನಾಮತಃ ಪ್ರಯೋಗತಶ್ಚ ಕಥ್ಯಂತೇ? (ಆ) ತತ್ರಾಲಂಕಾರಶಬ್ದೇನ ಕಿಮುಚ್ಯತೇ ? [(ಇ) ವ್ಯುತ್ಪತ್ತಿರ್ವಾ ತಸ್ಯ ಕೀದೃಶೀ? (ಈ) ಉಚ್ಯತೇ -] (ಉ) ಅಲಂಕಾರಶಬ್ದೇನ ಮಂಡನಮುಚ್ಯತೇ? (ಊ) ಯಥಾ ಕಟಕಕೇಯೂರಾದಿನಾಲಂಕಾರೇಣ ನಾರೀ ಪುರುಷೋ ವಾ ಮಂಡಿತಃ ಶೋಭಾಮಾವಹೇತ್‌ತಥಾ ಏತೈರಲಂಕಾರೈಃ ಪ್ರಸನ್ನಾದ್ಯಾದಿಭಿರಲಂಕೃತಾ ವರ್ಣಾಶ್ರಯಾ ಗೀತಿರ್ಗಾತೃಶ್ರೋತೃಣಾಂ ಸುಖಾವಹಾ ಭವತೀತಿ | (ಋ) ವ್ಯುತ್ಪತ್ತಿಶ್ಚ ಯಥಾ – ‘ಡುಕೃಞ್‌ ಕರಣೇ’ ಧಾತುರಲಂಶಬ್ದಪೂರ್ವೋsಲಂಕರೋತೀತ್ಯಲಂಕಾರಃ | (ೠ) ಘಞಂತೋsಯಮಲಂಕಾರಶಬ್ದ ಇತಿ |                 8

೨೮೨ (ಅ) ತತ್ರಾಲಂಕಾರಾಣಾಂ ನಾಮಾನಿ ಕಥ್ಯಂತೇ –
i. ಪ್ರಸನ್ನಾದಿಃ ii. ಪ್ರಸನ್ನಾಂತಃ iii. ಪ್ರಸನ್ನಾದ್ಯಂತಃ iv. ಪ್ರಸನ್ನಮಧ್ಯಃ v. ಸಮಃ vi. ಬಿಂದುಃ vii. ನಿವೃತ್ತಪ್ರವೃತ್ತಃ viii. ವೇಣುಃ ix. ಕಂಪಿತಃ x. ಕುಹರಿತಃ xi. ರೇಚಿತಃ xii. ಪ್ರೇಂಖೋಲಿತಃ xiii. ತಾರಮಂದ್ರಪ್ರ[ಸನ್ನಃ] xiv. ಮಂದ್ರತಾರಪ್ರಸನ್ನಃ xv. ಪ್ರಸ್ತಾರಃ xvi. ಪ್ರಸಾದಃ xvii. ಉದ್ವಾಹಿತಃ xviii. ಉಪಲೋಲಕಃ xix. ಕ್ರಮಃ xx. ನಿಷ್ಕೂಜಿತಃ xxi. ಹ್ರಾದಮಾನಃ xxii. ರಂಜಿತಃ xxiii. ಆವರ್ತಕಃ xxiv. ಪರಿವರ್ತಕಃ xxv. ಉದ್ಛಟ್ಟಿತಃ xxvi. ಆಕ್ಷಿಪ್ತಕಃ xxvii. ಸಂಪ್ರದಾನಃ xxviii.ಹಸಿತಃ xxix. ಹುಂಕಾರಃ xxx. ಸಂಧಿಪ್ರಚ್ಛಾದನಃ xxxi. ವಿಧುತಃ xxxii. ಉದ್ಗೀತಃ xxxiii. ಗಾತ್ರವರ್ಣಶ್ಚೇತಿ |                                                                                                                  9

ಪಾಠವಿಮರ್ಶೆ : ೨೮೦ ಅ,ಆ,ಈ ೨೮೧ಅ,ಆ,ಇ,ಉ,ಊ,ಋ,ೠ ೨೮೨ xiv,xv,xxi,xxxi

—-

(ಜಾತಿ)ಯಲ್ಲಿ ಗಾ ಗಾ ಗಾ ಗಾ ಪಾ ಪಾ ಧ ಪ ಮಾ ರಿರಿ ರಿರಿ ಪನಿ ಸಧಾ ನಿನಿಧಾ. (ಊ) ಅವರೋಹಿಯು (ಹೇಗೆಂದರೆ) ಅದರಲ್ಲೇ ಅಂತರವಿಲ್ಲದ, ಅಂತರವಿರುವ ಸ್ವರಗಳಿಂದ –                                                                                                                6

೨೮೦ ಪಾಪಾಪಾಪಾಪಾಪಾಪಾಪಾ ಧಾ ನೀ ಮಾ ಪಾ ಗಾ ಗಾ ಗಾ ಗಾ ಗಾ ಗಾ [—–] ಆದುದರಿಂದಲೇ (ಇವು (ಶರೀರವೀಣೆಯಲ್ಲಿ ಇರುವಂತೆಯೇ) ಮರದ ವೀಣೆಯಲ್ಲಿಯೂ ಪ್ರಕಾಶಿಸುತ್ತವೆ ಎಂದು ಹೇಳಿದೆ. (ಆ) ಮೇಲೆ (ಭರತನಿಂದ ಉದ್ದರಿಸಿಕೂಂಡಿರುವ ಶ್ಲೋಕದಲ್ಲಿ [(೨೭೮)] ಹೇಳಿರುವ ಶಾರೀರಸ್ವರ ಎಂಬುದರ ಅರ್ಥವು ಇದು. (ಇ) [ಈ ಮಾತನ್ನು ಹೀಗೆ ಹೇಳಿದೆ:]                                                    7

(ಈ) ಈ ನಾಲ್ಕು ವರ್ಣಗಳು ಹಾಡಿದುದನ್ನು (=ಗೇಯಾರ್ಥವನ್ನು) ಒಟ್ಟುಗೂಡಿಸುವವುಗಳು ಎಂದು ತಿಳಿಯಬೇಕು. ೫

(ಹೀಗೆ ವರ್ಣಗಳ ನಿರೂಪಣೆಯು ಮುಗಿಯಿತು.)

(ಈಗ ಅಲಂಕಾರಗಳು)

೨೮೧ (ಅ) ಈಗ ಚೆನ್ನಾಗಿ ಪ್ರಸಿದ್ಧವಾಗಿರುವ ಮೂವತ್ತಮೂರು ಅಲಂಕಾರಗಳನ್ನು (ಅವುಗಳ) ಹೆಸರುಗಳಿಂದಲೂ ಪ್ರಯೋಗದಿಂದಲೂ ನಿರೂಪಿಸಲಾಗುವುದು. (ಆ) ಈ ಸಂಬಂಧದಲ್ಲಿ ಅಲಂಕಾರವೆಂಬ ಪದದಿಂದ ಏನನ್ನು (ಕುರಿತು) ಹೇಳಿದೆ? (ಇ) [ಅದರ] ವ್ಯುತ್ಪತ್ತಿಯು ಯಾವ ತೆರನಾದುದು? (ಈ) (ಉತ್ತರವನ್ನು) ಹೇಳಲಾಗುವುದು – ] (ಉ) ಅಲಂಕಾರ ಎಂಬ ಶಬ್ದಕ್ಕೆ ಆಭರಣವೆಂಬ ಅರ್ಥವೆಂದು ಹೇಳಿದೆ. (ಊ) ಹೇಗೆಂದರೆ ಬಳೆ, ವಂಕಿ ಇತ್ಯಾದಿ ಒಡವೆಗಳನ್ನು ಹೆಂಗಸರು ಅಥವಾ ಗಂಡಸರು ಇಟ್ಟುಕೊಂಡು ಸೊಬಗನ್ನು ಪಡೆಯುತ್ತಾರೋ ಅಂತೆಯೇ ವರ್ಣಗಳಲ್ಲಿ ನೆಲೆಸಿರುವ ಪ್ರಸನ್ನಾದಿ ಮುಂತಾದ ಅಲಂಕಾರಗಳಿಂದ ಸಿಂಗರಿಸಲ್ಪಟ್ಟ ಹಾಡು ಹಾಡುವವರಿಗೂ ಕೇಳುವವರಿಗೂ ಸುಖವನ್ನುಂಟುಮಾಡುತ್ತದೆ. (ಋ) (ಅಲಂಕಾರ ಶಬ್ದದ) ವ್ಯುತ್ಪತ್ತಿಯು ಹೇಗೆಂದರೆ – ‘ಡುಕೃಞ್‌ಕರಣೇ’ ಎಂಬ (ವ್ಯಾಕರಣಸೂತ್ರದ ಪ್ರಕಾರ ‘ಕೃ’ ಎಂಬ) ಧಾತುವು ‘ಅಲಂ’ ಎಂಬ ಶಬ್ದವನ್ನು ಹಿಂದೆ ಕೂಡಿಸಿಕೊಂಡು ಅಲಂಕಾರವೆಂದಾಗಿದೆ. (ೠ) ಈ ಅಲಂಕಾರ ಶಬ್ದವು ‘ಕೃ’ ಧಾತುವು ಘಞ್‌ಪ್ರತ್ಯಯದಲ್ಲಿ ಮುಗಿದಿರುವುದರಿಮದ ಆಗಿದೆ.                                                                                                              8

೨೮೨ (ಅ) ಇದಕ್ಕೆ ಸಂಬಂಧಿಸಿದಂತೆ ಅಲಂಕಾರಗಳ ಹೆಸರುಗಳನ್ನು ಹೇಳಲಾಗುವುದು – i. ಪ್ರಸನ್ನಾದಿ ii. ಪ್ರಸನ್ನಾಂತ iii. ಪ್ರಸನ್ನಾದ್ಯಂತ iv. ಪ್ರಸನ್ನಮಧ್ಯ v. ಸಮ vi. ಬಿಂದು vii. ನಿವೃತ್ತಪ್ರವೃತ್ತ viii. ವೇಣು ix. ಕಂಪಿತ x. ಕುಹರಿತ xi. ರೇಚಿತ xii. ಪ್ರೇಂಖೋಲಿತ xiii. ತಾರಮಂದ್ರಪ್ರಸನ್ನ xiv. ಮಂದ್ರತಾರಪ್ರಸನ್ನ xv. ಪ್ರಸ್ತಾರ xvi. ಪ್ರಸಾದ xvii. ಉದ್ವಾಹಿತ xviii. ಉಪಲೋಲಕ xix. ಕ್ರಮ xx. ನಿಷ್ಕೂಜಿತ xxi. ಹ್ರಾದಮಾನ xxii. ರಂಜಿತ xxiii. ಆವರ್ತಕ xxiv. ಪರಿವರ್ತಕ xxv. ಉದ್ಛಟ್ಟಿತ xxvi. ಆಕ್ಷಿಪ್ತಕ xxvii. ಸಂಪ್ರದಾನ xxviii.ಹಸಿತ xxix. ಹುಂಕಾರ xxx. ಸಂಧಿಪ್ರಚ್ಛಾದನ xxxi. ವಿಧುತ xxxii. ಉದ್ಗೀತ xxxiii. ಗಾತ್ರವರ್ಣ                                      9

____

೨೮೩ (ಅ) ಇದಾನೀಮೇತೇಷಾಮಲಂಕಾರಾಣಾಂ ಲಕ್ಷಣಮುಚ್ಯತೇ | (ಆ) ತದ್ಯಥಾ – ಮಂದ್ರಾದಾರಭ್ಯ [ಕ್ರ]ಮೇಣಾರೋಹಣಂ ತಾರಗತಿಂ ಯಾವದಸೌ ಪ್ರಸನ್ನಾದಿಃ | (ಇ) ಮಂದ್ರಶಬ್ದೇನ ಪ್ರಸನ್ನಧ್ವನಿರುಚ್ಯತೇ | ಯಥಾ – ಸಾ ರೀ ಗಾ ಮಾ ಪಾ ಧಾ ನೀ ಸಾ ಇತಿ ಪ್ರಸನ್ನಾದಿಃ (i)     10

೨೮೪ (ಅ) ತಾರಾದಾರಭ್ಯಾವರೋಹಕ್ರಮೇಣ [ಮಂದ್ರಪರ್ಯಂತಂ] ಪ್ರಸನ್ನಾಂತಃ | (ಆ) ಯಥಾ – ಸಾ ನೀ ಧಾ ಪಾ ಮಾ ಗಾ ರೀ ಸಾ ಇತಿ ಪ್ರಸನ್ನಾಂತಃ | (ii)                                                                                                                        11

೨೮೫ (ಅ) ಯತ್ರಾದ್ಯಂತಯೋಃ ಪ್ರಸನ್ನಃ, ಮಧ್ಯೇ ಚ ತಾರಃ ಸ ಪ್ರಸನ್ನಾದ್ಯಂತಃ ಯಥಾ – ಸಾ ರೀ ಗಾ ಮಾ ಪಾ ಧಾ ನೀ ಸಾ- ಸಾ ನೀ ಧಾ ಪಾ ಮಾ ಗಾ ರೀ ಸಾ – ಇತಿ ಪ್ರಸನ್ನಾದ್ಯಂತಃ (iii)                                                                                              12

೨೮೬ (ಅ) ಯತ್ರ ಮಂದ್ರೋ ಮಧ್ಯಂ ಆದ್ಯಂತಯೋಶ್ಚ ತಾರಃ ಸ ಪ್ರಸನ್ನಮಧ್ಯಃ | (ಆ) ಯಥಾ – ಸಾ ನೀ ಧಾ ಪಾ ಮಾ ಗಾ ರೀ ಸಾ ಸಾ ರೀ ಗಾ ಮಾ ಪಾ ಧಾ ನೀ ಸಾ – ಇತಿ ಪ್ರಸನ್ನಮಧ್ಯಃ | (iv)                                                                                        13

೨೮೭ (ಅ) ಸ್ಥಾನತ್ರಯೇsಪಿ ಸದೃಶಧ್ವನಿಃ ಸಪ್ತಸ್ವರೋಚ್ಚಾರಣಃ ಸಮಃ | (ಆ) ಏತದುಕ್ತಂ ಭವತಿ – ಯಸ್ಯ ಯಾವತ್ಯಃ ಶ್ರುತಯಃ ಸ ಸ್ಥಾನತ್ರಿತಯೇಷು ತಾವಚ್ಛ್ರುತಿಕ ಏವ ಕಾರ್ಯಃ | (ಇ) ಯಥಾ ಸರಿಗಮಪಧನೀತಿ [ಅಥವಾ] ದ್ವಯೋರ್ದ್ವಯೋಃ ಸ್ವರಯೋಃ ಸಂವಾದಿ ನೋರುಚ್ಚಾರಣಾತ್‌ಸಮಃ | (ಈ) ತದ್ಯಥಾ – ಸಮ ಸಪ ರಿಧ ಗನಿ (ಉ) ಗ್ರಾಮಭೇದೇ ತು ಸಮ ರಿಪ ಗನೀತಿ ವಿಶೇಷಃ | ಇತಿ ಸಮಃ | (v)         14

೨೮೮ (ಅ) ಚಿರಮೇಕಸ್ಮಿನ್‌ಸ್ವರೇ ಷಡ್ಜಾದಿರೂಪೇ ಸ್ಥಿತ್ವಾ ತದೀಯತಾರಮಗ್ನಿವತ್‌ಸ್ಪೃಷ್ಟ್ವಾ ಕಲಾಮೇಕಾಂ ಚ ಸ್ಥಿತ್ವಾ ಯತ್ರ ಪುನರಪಿ ಸಹಸಾ ಮಂದ್ರ ಆಗಮ್ಯತೇ ಸ ಬಿಂದುಃ | (ಆ) ಯಥಾ ಸಾ [ಸ] ಸಾ ಇತಿ ಬಿಂದುಃ | (vi)                                                15

೨೮೯ (ಅ) ಏಕಕಲಾಂತರಂ ಸ್ಪೃಷ್ಟ್ವಾ ಬಿಂದೋರೇವ ವಿಪರ್ಯಯೋಚ್ಚಾರಣಾ[ತ್‌] ಪ್ರವೃತ್ತತ್ವಾನ್ನಿವೃತ್ತಪ್ರವೃತ್ತಾಖ್ಯಃ | (ಆ) ಯಥಾ ಸ ಸಾ ಸ (ಇತಿ) ನಿವೃತ್ತಪ್ರವೃತ್ತಃ | (vii)                                                                                                        16

ಪಾಠವಿಮರ್ಶೆ : ೨೮೩ಆ ೨೮೪ಅ ೨೮೫ಅ ೨೮೬ಅ ೨೮೭ಅ,ಉ ೨೮೮ಅ ೨೮೯,ಆ

—-

೨೮೩ (ಅ) ಈಗ ಈ ಅಲಂಕಾರಗಳ ಲಕ್ಷಣಗಳನ್ನು ಹೇಳಲಾಗುವುದು. (ಆ) ಅದು ಹೇಗೆಂದರೆ – ಮಂದ್ರ (=ನೀಚಸ್ವರ) ದಿಂದ ಮೊದಲುಮಾಡಿಕೊಂಡು ತಾರ (=ಉಚ್ಚಸ್ವರ) ದೆಡೆಗೆ ಕ್ರಮವಾಗಿ ಏರುವುದು ಯಾವುದೋ ಅದು ಪ್ರಸನ್ನಾದಿ. (ಇ) ಮಂದ್ರವೆಂಬ ಪದದಿಂದ ಪ್ರಸನ್ನಧ್ವನಿಯನ್ನು (-ನಿಯೆಂದು) ಹೇಳಲಾಗುತ್ತದೆ. ಹೇಗೆಂದರೆ – ಸಾ ರೀ ಗಾ ಮಾ ಪಾ ಧಾ ನೀ ಸಾ- ಪ್ರಸನ್ನಾದಿ (i)                            10

೨೮೪ (ಅ) ತಾರ (ಸ್ವರ) ದಿಂದ ಮೊದಲು ಮಾಡಿಕೊಂಡು (ಮಂದ್ರಸ್ವರದವರಗೆ) ಕ್ರಮವಾಗಿ ಇಳಿಯುವುದು ಪ್ರಸನ್ನಾಂತ. (ಅ) ಹೇಗೆಂದರೆ – ಸಾ ನೀ ಧಾ ಪಾ ಮಾ ಗಾ ರೀ ಸಾ – ಪ್ರಸನ್ನಾಂತ(ii)                                                                                          11

೨೮೫ (ಅ) ಯಾವುದರ ಮೊದಲು ಕೊನೆಗಳಲ್ಲಿ ಪ್ರಸನ್ನ (ಸ್ವರ)ವೂ ಮಧ್ಯಮದಲ್ಲಿ ತಾರ (ಸ್ವರ) ವೂ ಇರುತ್ತದೋ ಅದು ಪ್ರಸನ್ನಾದ್ಯಂತ ಹೇಗೆಂದರೆ ಸಾ ರೀ ಗಾ ಮಾ ಪಾ ಧಾ ನೀ ಸಾ – ಸಾನೀಧಾಪಾಮಾಗಾರೀಸಾ – ಪ್ರಸನ್ನಾದ್ಯಂತ (iii)                      12

೨೮೬ (ಅ) ಯಾವುದರಲ್ಲಿ ಮಂದ್ರ (ಸ್ವರ) ವು ಮಧ್ಯಮದಲ್ಲಿಯೂ ತಾರ (ಸ್ವರ) ವು ಮೊದಲು ಮತ್ತು ಕೊನೆಗಳಲ್ಲಿಯೂ ಇರುತ್ತದೆಯೋ ಅದು ಪ್ರಸನ್ನಮಧ್ಯ. (vi)                                                                                                                       13

೨೮೭ (ಅ) ಮೂರು ಸ್ಥಾನಗಳಲ್ಲಿಯೂ ಸಪ್ತಸ್ವರಗಳನ್ನು ಸದೃಶವಾದ ಧ್ವನಿಯಲ್ಲಿ ಉಚ್ಚರಿಸು (=ಹಾಡಿನುಡಿಸು) ವುದು ಸಮ (ವೆಂಬ ಹೆಸರಿನ ಅಲಂಕಾರ). (ಆ) ಇದರ ತಾತ್ಫರ್ಯವು [ಹೀಗಿದೆ] :(ಸ್ವದೃಶವೆಂದರೆ) ಯಾವ ಸ್ವರದ ಎಷ್ಟನೆಯ ಶ್ರುತಿಯಲ್ಲೆ ಇತರ ಸ್ಥಾನಗಳಲ್ಲಿಯೂ ಉಚ್ಚರಿಸುವುದು. (ಇ) ಹೇಗೆಂದರೆ – ಸ ರಿ ಗ ಮ ಪ ಧ ನಿ (ಅಥವಾ) ಎರೆಡೆರಡು ಸ್ವರಗಳಲ್ಲಿ ಪರಸ್ಪರವಾಗಿ ಸಂವಾದಿಗಳಾಗಿರುವಂತೆ ಉಚ್ಚರಿಸುವುದರಿಂದ ಸಮ (ಅಲಂಕಾರ)ವಾಗುತ್ತದೆ. (ಈ) ಅದು ಹೇಗೆಂದರೆ – ಸಮ ಸಪ ರಿಧ ಗನಿ ಎಂದು; (ಅಥವಾ) ಗ್ರಾಮಭೇದ (=ಮಧ್ಯಮಗ್ರಾಮ) ವಾದರೆ ಸಮ ರಿಪ ಗನಿ ಎಂದು ವಿಶೇಷ(ವಾಗಿ ಗಮನಿಸಬೇಕು) – ಸಮ (v)                            14

೨೮೮ (ಅ) ಯಾವುದರಲ್ಲಿ ಷಡ್ಜವೇ ಮೊದಲಾದ ಸ್ವರಗಳ ಪೈಕಿ ಬಂದರಲ್ಲಿ ದೀರ್ಘವಾಗಿ ನಿಂತು ಅದರದೇ ತಾರ (ಸ್ವರವನ್ನು) ಬೆಂಕಿಯನ್ನೆಂಬಂತೆ ಮುಟ್ಟಿ, ಅದರಲ್ಲಿ (ಒಂದೇ) ಒಂದು ಕಲೆಯಷ್ಟು (ಕ್ಷಣ) ಕಾಲ ಇದ್ದು, ಇದಕ್ಕಿದ್ದಂತೆ ಮಂದ್ರ (ಸ್ವರಕ್ಕೆ) ಬಂದು ಸೇರಿದರೆ ಅದು ಬಿಂದು (ವೆನ್ನಿಸಿಕೊಳ್ಳುತ್ತದೆ). (ಆ) ಹೇಗೆಂದರೆ ಸಾ (ಸ) ಸಾ – ಬಿಂದು (vi)                                                                        15

೨೮೯ (ಅ) ಒಂದು ಕಲೆಯ (ಕ್ಷಣ) ದಷ್ಟು ಅಂತರವನ್ನು ಮುಟ್ಟಿ ಬಿಂದುವನ್ನೇ ತಿರುಗುಮುರುಗಾಗಿ ಉಚ್ಚರಿಸುವುದರಿಮದ ಪ್ರವೃತ್ತವಾದುದು (=ಪ್ರಾರಂಭವಾದುದು, ತೊಡಗಿರುವುದು) ವಿನಿವೃತ್ತವಾಗುತ್ತದೆ (=ಹಿಂತಿರುಗುತ್ತದೆ) ಯಾದುದರಿಂದ ನಿವೃತ್ತಪ್ರವೃತ್ತವೆಂಬ ಹೆಸರಿನದು (ಆಗುತ್ತದೆ). (ಅ) ಹೇಗೆಂದರೆ – ಸಾ (ತಾರ) ಸ (ಮಂದ್ರ) ಸಾ (ತಾರ) – ನಿವೃತ್ತಪ್ರವೃತ್ತ (vii)                            16

____

೨೯೦ (ಅ) ಆಕ್ರೀಡಿತವದಾರೋಹಾವರೋಹಕ್ರಮೇಣ ಸಪ್ತಕಲೋ ವೇಣುಃ | (ಆ) ಯಥಾ ಸರಿಗಮಪಧನಿ ನಿಧಪಮಗರಿಸ | (ಇತಿ) ವೇಣುಃ | (viii)           17

೨೯೧ (ಅ) ಮಂದ್ರಸಪ್ತಕಮಧ್ಯೇ ಪವನನಿರೋಧೇನ ತ್ರಿಶ್ರುತೇಃ ಕಂಪನಾತ್‌ಕಂಪಿತಸ್ತ್ರಿಕಲಃ | (ಆ) ಯಥಾ – ಸರಿಗಮಪಧನಿಸ (ಇತಿ) ಕಂಪಿತಃ (ix)           18

೨೯೨ (ಅ) ಮಧ್ಯಮಸಪ್ತಕೇ ತ್ರಿಶ್ರುತೇಃ ಕಂಪನಾತ್‌ತ್ರಿಕಾಲಃ ಕುಹರಿತಃ | ಯಥಾ – ಸರಿಗಮಪಧನಿಸ (ಇತಿ) ಕುಹರಿತಃ | (x)   19

೨೯೩ (ಅ) ತಾರಸಪ್ತಕೇ ತ್ರಿಶ್ರುತೇಃ ಕಂಪನಾತ್‌ತ್ರಿಕಲೋ ರೇಚಿತಃ | (ಆ) (ಯಥಾ) ಸರಿಗಮಪಧನಿಸ (ಇತಿ) ರೇಚಿತಃ | (xi)     20

೨೯೪ (ಅ) ದ್ವಯೋಃ ಸ್ವರಯೋರ್ಬಹೂನಾಂ ಸ್ವರಾಣಾಂ ಸಮಕಲಗಮಾಗಮಾಚ್ಚತುರ್ದಶಕಲಃ ಪ್ರೇಂಖೋಲಿತಃ | (ಆ) ಯಥಾ – ಸರಿ ರಿಸ ರಿಗ ಗರಿ ಗಮ ಮಗ ಮಪ ಪಮ ಪಧ ಧಪ ಧನಿ ನಿಧ ನಿಸ ಸನಿ (ಇತಿ) ಪ್ರೇಂಖೋಲಿತಃ | (xii)                                                 21

೨೯೫ (ಅ) ಅಂಶಾಚ್ಛತುರ್ಥಂ ಪಂಚಮಂ ಸ್ವರಂ ವಾ ಗತ್ವಾ ಯತ್ರ ಮಂದ್ರೇ ಪುನರಾಗಮ್ಯತೇ [ಸ] ತಾರಮಂದ್ರಪ್ರಸನ್ನಃ | (ಆ) ಯಥಾ – ಸರಿಗಮಪಸ, ರಿಗಮಪಧರಿ, ಗಮಪಧನಿಗ, ಮಪಧನಿಸಮ | (ಇ) ಅಥವಾ ಮಂದ್ರಸ್ವರಾತ್‌ತಾರಂ ಗತ್ವಾ ಪುನಃ ಸಹಸಾ ಮಂದ್ರವಶಾದಾಗಮ್ಯತೇ ಸ ತಾರಮಂದ್ರಪ್ರಸನ್ನಃ | (xiii)                                                                                                          22

೨೯೬ (ಅ) ಸಹಸಾ ತಾರಂ ಪ್ರಾಪ್ಯ ಮಂದ್ರತ್ವೇನ ಕ್ರಮೇಣಾವರೋ ಹಾನ್ಮಂದ್ರತಾರಪ್ರಸನ್ನಃ | (ಆ) [ಯಥಾ -] ಸಪಮಗರಿಸ ರಿಧಪಮಗರಿ ಗನಿಧಪಮಗ ಮಸನಿಧಪಮ | (xiii)                                                                                                     23

೨೯೭ (ಅ) ಅಥವಾ ಮಂದ್ರಸ್ವರಾತ್‌ತಾರಸ್ವರಮುಚ್ಚಾರ್ಯ ಕ್ರಮೇಣಾವರುಹ್ಯ ಮಂದ್ರ ಏವಾವಗಮ್ಯತೇ [ಸ] ಮಂದ್ರತಾರಪ್ರಸನ್ನಃ | (ಆ) ಯಥಾ – ಸಸನಿಧಪಮಗರಿಸ [ಇತಿ] ಮಂದ್ರತಾರಪ್ರಸನ್ನಃ | (xiv)                                                                        24

ಪಾಠವಿಮರ್ಶೆ : ೨೯೦ಅ ೨೯೧ಅ ೨೯೨ಆ ೨೯೪ಅ,ಆ ೨೯೪ಅಇ ೨೯೬ಅ

—-

೨೯೦ (ಅ) ಆಕ್ರೀಡಿತ (? ಆಟಿಕೆ?) ದ ಹಾಗೆ ಆರೋಹಣ – ಅವರೋಹಣಗಳರೆಡರಲ್ಲೂ ಏಳು ಸ್ವರಸಮುಚ್ಚಯ (=ಕಲಾ) ಗಳಿರುವುದು ವೇಣು. (ಆ) ಹೇಗೆಂದರೆ ಸರಿಗಮಪಧನಿ – ನಿಧಪಮಗರಿಸ – ವೇಣು (viii)                                                                17

೨೯೧ (ಅ) ಮಂದ್ರ (ಸ್ಥಾನ)ದ ಏಳು ಸ್ವರಗಳ ನಡುವೆ ಮೂರು ಶ್ರುತಿಗಳುಳ್ಳವುಗಳನ್ನು (ಉದಾ.ರಿ, ಧ). ಉಸಿರುಕಟ್ಟಿ ಕಂಪಿಸುವುದರಿಂದ, ಮೂರು ಕಲೆಗಳಲ್ಲಿ ಕಂಪಿತ(ವಾಗುತ್ತದೆ). (ಆ) ಹೇಗೆಂದರೆ ಸರಿಗಮಪಧನಿಸ – ಕಂಪಿತ (xi) 18

೨೯೨ (ಅ) ಮಧ್ಯ(ಸ್ಥಾನ)ದ ಏಳು ಸ್ವರಗಳ ನಡುವೆ ಮೂರು ಶ್ರುತಿಗಳನ್ನುಳ್ಳವುಗಳನ್ನು (ಉದಾ. ರಿ,ಧ) ಮೂರು ಕಲೆಗಳಲ್ಲಿ ಕಂಪಿಸುವುದು ಕುಹರಿತ. (ಆ) ಹೇಗೆಂದರೆ – ಸರಿಗಮಪಧನಿಸ – ಕುಹರಿತ (x)                                                                      19

೨೯೩ (ಅ) ತಾರ (ಸ್ಥಾನ)ದ ಏಳು ಸ್ವರಗಳ ನಡುವೆ ಮೂರು ಶ್ರುತಿಗಳನ್ನುಳ್ಳವುಗಳನ್ನು (ಉದಾ.ರಿ, ಧ) ಮೂರು ಕಲೆಗಳಲ್ಲಿ ಕಂಪಿಸುವುದು ರೇಚಿತ. (ಆ) ಹೇಗೆಂದರೆ- ಸರಿಗಮಪಧನಿಸ – ರೇಚಿತ (xi)                                                                                    20

೨೯೪ (ಅ) ಎರಡರೆಡು ಸ್ವರಗಳ ಜೋಡಿಗಳಲ್ಲಿ ಒಂದು ಹೋಗಿ (=ಏರಿ) (ಇನ್ನೊಂದು) ಬರು (=ಇಳಿಯು)ವುದರಿಂದ, ಬಹು ಸ್ವರಗಳಲ್ಲಿ ಹದಿನಾಲ್ಕು ಕಲೆಗಳಾಗುವುದು ಪ್ರೇಂಖೋಲಿತ. (ಆ) ಹೇಗೆಂದರೆ ಸರಿ ರಿಸ ರಿಗ ಗರಿ ಗಮ ಮಗ ಮಪ ಪಧ ಧಪ ಧನಿ ನಿಧ ನಿಸ ಸನಿ (xii) ಪ್ರೇಂಖೋಲಿತ                                                                                                                             21

೨೯೫ (ಅ) (ಆಯಾ ರಾಗದ) ಅಂಶ(ಸ್ವರ) ದಿಂದ ನಾಲ್ಕನೆಯ ಸ್ವರಕ್ಕೋ ಐದನೆಯದಕ್ಕೋ (ಕ್ರಮವಾಗಿ) ಹೋಗಿ ಪುನಃ ಮಂದ್ರ (ಸ್ವರ)ಕ್ಕೇ ಯಾವುದರಲ್ಲಿ ಹಿಂತಿರುಗುತ್ತಾರೋ (ಅದು) ತಾರಮಂದ್ರಪ್ರಸನ್ನ. (ಆ) ಹೇಗೆಂದರೆ- ಸರಿಗಮಪಸ ರಿಗಮಪಧರಿ ಗಮಪಧನಿಗ ಮಪಧನಿಸಮ. (ಇ) ಅಥವಾ ಮಂದ್ರಸ್ವರದಿಂದ ತಾರ (ಸ್ವರ)ಕ್ಕೆ ಹೋಗಿ ಪುನಃ ಇದ್ದಕ್ಕಿದ್ದಂತೆ ಮಂದ್ರ (ಸ್ವರ)ದ ವರಗೆ ಬರುವುದು (ಯಾವುದರಲ್ಲಿದೆಯೋ) ಅದು ತಾರಮಂದ್ರಪ್ರಸನ್ನ (xiii) 22

೨೯೬ (ಅ) ಮಂದ್ರ(ಸ್ವರ)ದಿಂದ ಇದಕ್ಕಿದ್ದಂತೆ ತಾರ(ಸ್ವರ)ವನ್ನು ಮುಟ್ಟಿ ಮಂದ್ರ(ಸ್ವರ)ಕ್ಕೇ ಕ್ರಮವಾಗಿ ಇಳಿಯುವುದರಿಂದ ಮಂದ್ರತಾರಪ್ರಸನ್ನ(ವಾಗುತ್ತದೆ) (ಆ) (ಹೇಗೆಂದರೆ-) ಸಪಮಗರಿಸ ರಿಧಪಮಗರಿ ಗನಿಧಪಮಗ ಮಸನಿಧಪಮ. (xiii) 23

೨೯೭ (ಅ) ಅಥವಾ ಮಂದ್ರಸ್ವರದಿಂದ (ನೇರವಾಗಿ) ತಾರಸ್ವರವನ್ನು ಉಚ್ಚರಿಸಿ ಕ್ರಮವಾಗಿ ಇಳಿದು ಪುನಃ ಮಂದ್ರ(ಸ್ವರ)ಕ್ಕೆ (ಯಾವುದರಲ್ಲಿ) ಬರುವುದಿದೆಯೋ (ಅದು) ಮಂದ್ರತಾರಪ್ರಸನ್ನ. (ಆ) ಹೇಗೆಂದರೆ – ಸಸನಿಧಪಮಗರಿಸ ಮಂದ್ರತಾರಪ್ರಸನ್ನ (xiv) 24

____

೨೯೮ (ಅ) ದ್ವಿರೂಪಶ್ಚ ಪ್ರಸ್ತಾರಃ ಸ್ಥಾಯಿನ್ಯಾರೋಹಿಣಿ ಚ | (ಆ) ತತ್ರ ಸ್ಥಾಯಿನ್ಯೇಕಸ್ವರಃ ಸ್ವಸ್ಮಾತ್ ಕ್ರಮಶಸ್ತಾರಮಂದ್ರಾ [ರೋಹ] ವರೋಹಣೇನ [ಆರೋಹಿಣಿ ಚ] ಮಂದ್ರತಾರಾ ರೋಹಣೇನ [ -ನಾವರೋಹೇಣ] ಸ್ವರೇಣ (?) ಪ್ರಸ್ತಾರಃ | (ಇ) [ಯಥಾ] ಸರಿರಿಸ ಸರಿಗಗರಿಸ [ಸರಿಗಮಮಗರಿಸ] ಸರಿಗಮಪಪಮಗರಿಸ ಸರಿಗಮಪಧಧಪಮಗರಿಸ ಸರಿಗಮಪಧನಿನಿಧಪಮಗರಿಸ ಸರಿಗಮಪಧನಿಸಸನಿಧಪಮಗರಿಸ ಅಥವಾ ಸರಿರಿಸ ರಿಗಗರಿ ಗಮಮಗ ಮಪಪಮ ಪಧಧಪ ಧನಿನಿಧ ನಿಸಸನಿ (ಇತಿ) ಪ್ರಸ್ತಾರಃ | (xv)                                            25

೨೯೯ (ಅ) ಪ್ರಸ್ತಾರವಿಪರೀತಃ ಪ್ರಸಾದಃ ಯಥಾ- ಸನಿನಿಸ ಸನಿಧಧನಿಸ ಸನಿ[ಧ] ಪಪಧನಿಸ ಸನಿಧಪಮಮಪಧನಿಸ ಸನಿಧಪಮಗಗಮಪಧನಿಸ ಸನಿಧಪಮಗರಿರಿಗಮಪಧನಿಸ ಸನಿಧಪಮಗರಿಸಸರಿಗಮಪಧನಿಸ ಅಥವಾ – ಸನಿನಿಸ ನಿಧಧನಿ ಧಪಪಧ ಪಮಮಪ ಮಗಗಮ ಗರಿರಿಗ ರಿಸಸರಿ [ಇತಿ] ಪ್ರಸಾದಃ | (xvi)                                                                                                                           26

೩೦೦ (ಅ) ದ್ವೌ ದ್ವೌ ಸ್ವರೌ ದ್ವಿಕಲೌ ಸಂಚರಂತಾವಾರೋಹ
ಕ್ರಮೇಣಾವರೋಹಚ್ಚೋದ್ವಾಹಿತಃ |
(ಆ) (ಯಥಾ – )
ಸರಿ ರಿಗ ಗಮ ಮಪ ಪಧ ಧನಿ ನಿಸ ಸನಿ ನಿಧ ಧಪ ಪಮ ಮಗ ಗರಿ ರಿಸ (ಇತಿ) ಉದ್ವಾಹಿತಃ | (xvii)                    27

೩೦೧ (ಅ) ಅಯಮೇವ ದ್ವಿರಭ್ಯಸ್ತೈರುಪಲೋಲಕಃ | (ಆ) ಯಥಾ ಸರಿಸರಿ ರಿಗರಿಗ ಗಮಗಮ ಮಪಮಪ ಪಧಪಧ ಧನಿಧನಿ ನಿಸನಿಸ ಸನಿಸನಿ ನಿಧನಿಧ ಧಪಧಪ ಪಮಪಮ ಮಗಮಗ ಗರಿಗರಿ ರಿಸರಿಸ (ಇತಿ) ಉಪಲೋಲಕಃ | (xviii)                                            28

೩೦೨ (ಅ) ಏಕಾದಿಕ್ರಮೇಣಾಂತರಸ್ವರೇಷ್ವಾರುಹ್ಯ ಪುನರವರೋಹಣಕ್ರಮೇಣ ಸ್ಥಾಯಿನಂ ಸ್ವರಂ ಗತ್ವಾ ಪ್ರಸ್ತಾರಕ್ರಮೇಣೈವ ಏಕೈಕಾಭಿವೃದ್ಧ್ಯಾ ಯತ್ರ ಸ್ವರಾ ಉಚ್ಚಾರ್ಯಂತೇ ತತ್ರ ಸ ಕ್ರಮಃ | (ಆ) ಅಯಮೇಕರೂಪತ್ವಾತ್‌ಪ್ರಸ್ತಾರೇಣ ನ ಭಿದ್ಯತೇ | (ಇ) [ಯಥಾ] ಸರಿರಿಸ ಸರಿಗಗರಿಸ ಸರಿಗಮಮಗರಿಸ ಸರಿಗಮಪಪಮಗರಿಸ ಸರಿಗಮಪಧಧಪಮಗರಿಸ ಸರಿಗಮಪಧನಿನಿಧಪಮಗರಿಸ ಸರಿಗಮಪ ಧನಿಸಸನಿಧಪಮಗರಿಸ [ಇತಿ] ಕ್ರಮಃ | (xix)

(ಈ) ಅಥವಾs೦ತರಸ್ವರಮಾರುಹ್ಯ ಕಾಕಲೀಂ ಗತ್ವಾ ತೇನೈವ ಕ್ರಮೇಣಾವರುಹ್ಯ ಸ್ಥಾಯಿನ್ಯಾಗಮ್ಯತೇ ಸ ಕ್ರಮಃ [ಯಥಾ -] ಸಗನಿ-ನಿಗಸ ಇತಿ ಕ್ರಮಃ | (xix)                                                                                                                               29

ಪಾಠವಿಮರ್ಶೆ : ೨೯೮ಅ; ಉದಾ, ೧, ೨, ೩, ೪, ೫ ೩೦೦ಅ ೩೦೨ಅ,ಇ,ಈ

—-

೨೯೮ (ಅ) ಪ್ರಸ್ತಾರವು ಸ್ಥಾಯಿನಿ ಮತ್ತು ಆರೋಹಿಣಿ ಎಂದು ಎರಡು ರೂಪಗಳಲ್ಲಿದೆ. (ಆ) ಅವುಗಳ ಪ್ಯೆಕಿ ಸ್ಥಾಯಿನಿಯಲ್ಲಿ ಒಂದು ಸ್ವರವು ತನ್ನಿಂದ ಕ್ರಮವಾಗಿ ತಾರ-ಮಂದ್ರ ಸ್ವರಗಳಿಗೆ ಏರಿ ಇಳಿಯುವುದರಿಂದ (ಆಗುತ್ತದೆ). ಆರೋಹಿಣಿಯಲ್ಲಿ ಒಂದು ಸ್ವರವು ತನ್ನಿಂದ ಕ್ರಮವಾಗಿ ಮಂದ್ರ-ತಾರಸ್ವರಗಳಿಗೆ ಏರಿ ಇಳಿಯುವುದರಿಂದ (? ಇಳಿದು ಏರುವುದರಿಂದ) (ಅಗುತ್ತದೆ) (ಇ) (ಹೇಗೆಂದರೆ) ಸರಿರಿಸ ಸರಿಗಗರಿಸ (ಸರಿಗಮಮಗರಿಸ) ಸರಿಗಮಪಪಮಗರಿಸ ಸರಿಗಮಪಧ-, ಧಪಮಗರಿಸ ಸರಿಗಮಪಧನಿನಿಧಪಮಗರಿಸ ಸರಿಗಮಪಧನಿಸಸನಿಧಪಮಗರಿಸ ಅಥವಾ ಸರಿರಿಸ ರಿಗಗರಿ ಗಮಮಗ ಮಪಪಮ ಪಧಧಪ ಧನಿನಿಧ ನಿಸಸನಿ. ಪ್ರಸ್ತಾರ (xv)                                                                 25

೨೯೯ (ಅ) ಪ್ರಸ್ತಾರವು ತಿರುಗುಮುರುಗಾದಲ್ಲಿ ಪ್ರಸಾದ (ವೆನ್ನೆಸಿಕೊಳ್ಳುತ್ತದೆ). ಹೇಗೆಂದರೆ – ಸನಿನಿಸ ಸನಿಧಧನಿಸ ಸ1ನಿ(ಧ)ಪಪಧನಿಸ2 ಸನಿಧಪಮಮಪಧನಿಸ3 ಸನಿಧಪಮಗಗಮಪಧನಿಸ4 ಸನಿಧಪಮಗರಿರಿಗಮಪಧನಿಸ5 ಸನಿಧಪಮಗರಿಸಸರಿಗಮಪಧನಿಸ6 ಅಥವಾ ಸನಿನಿಸ ನಿಧಧನಿ ಧಪಪಧ ಪಮಮಪ ಮಗಗಮ ಗರಿರಿಗ ರಿಸಸರಿ. ಪ್ರಸಾದ (xvi)                                                                  26

೩೦೦ (ಅ) ಎರಡೆರಡು ಸ್ವರಗಳ ಜೋಡಿಗಳು ಒಂದೊಂದು ಕಲೆಯಾಗಿ ಅರೋಹಣ ಅವರೋಹಣ ಕ್ರಮದಿಂದ (ಹಿಂದಕ್ಕೂ ಮುಂದಕ್ಕೂ) ಚಲಿಸುವುದು ಉದ್ವಾಹಿತ (ವೆನ್ನಿಸುತ್ತದೆ). (ಆ) (ಹೇಗೆಂದರೆ-) ಸರಿ ರಿಗ ಗಮ ಮಪ ಪಧ ಧನಿ ನಿಸ ಸನಿ ನಿಧ ಧಪ ಪಮ ಮಗ ಗರಿ ರಿಸ. ಉದ್ವಾಹಿತ (xvii)                                                                                                                                          27

೩೦೧ (ಅ) ಇದನ್ನೇ ಎರಡೆರಡು ಸಲ ಪುನರುಚ್ಚರಿಸಿದರೆ ಉಪಲೋಲಕ(ವಾಗುತ್ತದೆ). (ಆ) ಹೇಗೆಂದರೆ – ಸರಿಸರಿ ರಿಗರಿಗ ಗಮಗಮ ಮಪಮಪ ಪಧಪಧ ಧನಿಧನಿ ನಿಸನಿಸ ಸನಿಸನಿ ನಿಧನಿಧ ಧಪಧಪ ಪಮಪಮ ಮಗಮಗ ಗರಿಗರಿ ರಿಸರಿಸ. ಉಪಲೋಲಕ (xviii) 28

೩೦೨ (ಅ) ಯಾವುದರಲ್ಲಿ ಸ್ವರಗಳು ಒಂದರಿಂದ ಪ್ರಾರಂಭಿಸಿ ಒಂದಾದ ಮೇಲೊಂದರಂತೆ ಮಧ್ಯದ ಸ್ವರಗಳಿಂದ ಏರಿ, ಪುನಃ ಅವರೋಹಣ ಕ್ರಮದಲ್ಲಿ (ಇಳಿದು) ಸ್ಥಾಯಿ(ಸ್ವರ)ಯನ್ನು ತಲುಪಿ ಪ್ರಸ್ತಾರದ ಕ್ರಮದಂತೆಯೇ (ಮುಂದುಮುಂದಿನ ಕಲೆಗಳಲ್ಲಿ) ಒಂದೊಂದು ಸ್ವರವನ್ನಾಗಿ ಹೆಚ್ಚಿಸಿಕೊಂಡು ಹೋಗುವುದಿದೆಯೋ ಅದು ಕ್ರಮ (ವೆಂಬ ಅಲಂಕಾರವಾಗುತ್ತದೆ). (ಆ) ಇದು ಪ್ರಸ್ತಾರ(ವೆಂಬ ಅಲಂಕಾರ) ದೊಡನೆ ಒಂದೇ ರೂಪವಿರುವುದರಿಂದ, (ಅದರಿಂದ) ಬೇರೆಯಲ್ಲ. (ಇ) (ಹೇಗೆಂದರೆ-) ಸರಿರಿಸ ಸರಿಗಗರಿಸ ಸರಿಗಗರಿಸ ಸರಿಗಮಮಗರಿಸ ಸರಿಗಮಪಪಮಗರಿಸ ಸರಿಗಮಪಧ-, ಪದಪಮಗರಿಸ ಸರಿಗಮಪಧನಿನಿಧಪಮಗರಿಸ ಸರಿಗಮಪಧನಿಸಸನಿಧಪಮಗರಿಸ. ಕ್ರಮ (xix)

(ಈ) ಅಥವಾ ಅಂತರ (ಗಾಂಧಾರ)ಸ್ವರಕ್ಕೆ ಏರಿ ಅದರಿಂದ ಕಾಕಲಿ (ನಿಷಾದ)ಗೆ ಹೋಗಿ ಅದರಿಂದಲೇ ಕ್ರಮವಾಗಿ ಇಳಿದು ಸ್ಥಾಯಿ(ಸ್ವರ)ಗೆ ಹಿಂತಿರುಗುವುದು (ಯಾವುದರಲ್ಲಿದೆಯೋ) ಅದು ಕ್ರಮ (ವೆಂಬ ಅಲಂಕಾರ). (ಹೇಗೆಂದರೆ-) ಸಗನಿ ನಿಗಸ. ಕ್ರಮ (xix) 29

____

೩೦೩ (ಅ) ಆದ್ಯಂ ತೃತೀಯಂ ತತೋ ದ್ವಿತೀಯಂ ತತಶ್ಚ ಚತುರ್ಥಮನೇನೈವ ಕ್ರಮೇಣಾನ್ಯಾನಪ್ಯಾರುಹ್ಯ ಮಂದ್ರಾನ್ನಿಷ್ಕೂಜಿತಃ | (ಆ) ಕೋಹಲಮತೇ ಚ ಏಕಾಂತರಸ್ವರಾರೋಹಾನ್ನಿಷ್ಕೂಜಿತಃ | (ಇ) [ಯಥಾ] ಸಗ ರಿಮ ಗಪ ಮಧ ಪನಿ ಧಸ [ಇತಿ ನಿಷ್ಕೂಜಿತಃ |] (xx)            30

೩೦೪ (ಅ) ತಾರಾದೇಕಾಂತರಸ್ವರಾವರೋಹಾತ್‌ತ್ರಿರಾವೃತ್ತ್ಯಾ ಕಲಾತ್ರಯಕರಣಾತ್‌ಸರ್ವೇಷಾಂ ಹ್ರಾದಮಾನಃ | (ಆ) ಯಥಾ – ಸಧ ಸಧ ಸಧ, ನಿಪ ನಿಪ ನಿಪ, ಧಮ ಧಮ ಧಮ, ಪಗ ಪಗ ಪಗ, ಮರಿ ಮರಿ ಮರಿ, ಗಸ ಗಸ ಗಸ [ಇತಿ] ಹ್ರಾದಮಾನಃ | (xxi)             31

೩೦೫ (ಅ) ಸಮನಂತರಸ್ವರಮಾರುಹ್ಯ ದ್ವೇ ಕಲೇ ಸ್ಥಿತ್ವಾ ಪುನಃ ಸ್ವರೋs೦ತರೇ ಅರ್ಧಕಲಾಮಾರೋಹತಿ ಪುನಶ್ಚಾನಂತರಮೇವಾರ್ಧಕಲಾಮವರೋಹತಿ ಸ ರಂಜಿತಃ | (ಆ) [ಯಥಾ-] ಸರೀ ಮಗ, ರಿಗಾ ಪಮ, ಗಮಾ ಧಪ ಮಸಾ ನಿಧ, ಪಧಾ ಸನಿ [ಇತಿ] ರಂಜಿತಃ | (xxii)                                                                                                                           32

೩೦೬ (ಅ) ಅರೋಹಾವರೋಹಾಭ್ಯಾಮಷ್ಟೌ ಸ್ವರಾನುಚ್ಚಾರ್ಯ ಪ್ರಾಕ್‌ಸ್ವರೋಚ್ಚಾರ ಣಾಂತೇ ಕ್ರಮಶೋ sಷ್ಟಕಲ ಆವರ್ತಕಃ | (ಆ) ಅಥವಾ(?) ಸಗ ಗಪ ಪನಿ ಧಸ ಸಧ ನಿಪ ಪಗ ಗಸ [ಇತಿ] ಆವರ್ತಕಃ | (xxiii)                                                               33

೩೦೭ (ಅ) [ಅನಂತರಂ ತ್ರಿಸ್ವರಾನುರುಹ್ಯ] ಪುನರೇಕಸ್ವರಂ ಚತುರ್ಥಂ ಲಂಘ್ವಾ ಪಂಚಮಂ ಸ್ವರಂ ಪ್ರಾಪ್ಯ ಪುನರಪ್ಯ[ನ]೦ತರಾನ್ ತ್ರಿಸ್ವರಾನವರೋಹನ್ ಚತುರ್ಥಂ ಲಂಘಯನ್ನಾದ್ಯಂ ಸ್ವರಂ ಷಡ್ಜಂ ಗಚ್ಛೇತ್‌ | (ಆ) ಆರೋಹವಾರೋಹಾಭ್ಯಾಂ ಕಲಾಷ್ಟಕೇನ ತಥೈವ ತಾರಾದಾರಭ್ಯ ಸರ್ವಸ್ವರಾಣಾಮಾರೋಹಾವರೋಹಣಮ್‌ ಷೋಡಶಕಲಃ ಪರಿಪರ್ತಕಃ | (ಇ) ಸ ಚ ಲೋಕೇ ಓಹಾಡೀತ್ಯುಚ್ಯತೇ |

(ಈ) ಯಥಾ – ಸರಿಗಪ ಪಮಗಸ ರಿಗಮಧ ಧಪಮರಿ, ಗಮಪನಿ ನಿಧಪಗ, ಮಪಧಸ ಸನಿಧಮ, ಸನಿಧಮ ಮಪಧಸ ನಿಧಪಗ ಗಮಪನಿ, ಧಪಮರಿ ರಿಗಮಧ, ಪಮಗಸ ಸರಿಗಪ ಇತಿ ಪರಿವರ್ತಕಃ | (xxiv)                                                                            34

೩೦೮ (ಅ) ಸ್ವರದ್ವಯೇ ಹ್ಯೇಕಕಲಯಾ ಅರೋಹಕ್ರಮೇಣ ತೃತೀಯಸ್ವರಂ ಪರಿಹರನ್ನಾರೋಹಕ್ರಮೇಣೈವೋಪರಿತನಸ್ಥಸ್ವರದ್ವಯಮಾಕ್ರಾಮನ್ನನೇನೈವ ಕ್ರಮೇಣಾವರೋಹಃ | (ಆ) ಶೇಷಾನಪಿ ಸ್ವರಾನನೇನೈವ ಕ್ರಮೇಣಾರೋಹನ್ನಷ್ಟಾದಶಕಲ

ಪಾಠವಿಮರ್ಶೆ : ೩೦೩ಅ ೩೦೪ಅ ೩೦೫ಅ ೩೦೬ಅ,ಆ ೩೦೭ಅ, ಆ,ಇ,ಈ ೩೦೮ಅ,ಆ

—-

೩೦೩ (ಅ) ಮೊದಲನೆಯದನ್ನು, ಮೂರನೆಯದನ್ನು, ಆಮೇಲೆ ಎರಡನೆಯದನ್ನು, ನಾಲ್ಕನೆಯದನ್ನು – ಇದೇ ಕ್ರಮದಲ್ಲಿ ಬೇರೆಯವು (ಸ್ವರ)ಗಳನ್ನು ಮಂದ್ರದಿಂದ ಏರಿದರೆ ಅದು ನಿಷ್ಕೂಜಿತ. (ಆ) ಕೋಹಲನ ಮತದಲ್ಲಿ ಒಂದೊಂದು ಸ್ವರವನ್ನು ಬಿಟ್ಟು ಏರುವುದು ನಿಷ್ಕೂಜಿತ (ಇ) (ಹೇಗೆಂದರೆ-) ಸಗ ರಿಮ ಗಪ ಮಧ ಪನಿ ಧಸ. (ನಿಷ್ಕೂಜಿತ) (xx)                                                               30

೩೦೪ (ಅ) ತಾರ (ಸ್ವರದಿಂದ) ಒಂದೊಂದನ್ನು ಬಿಟ್ಟು ಇಳಿದು ಎಲ್ಲವನ್ನೂ ಮೂರು ಸಲ ಪುನರುಚ್ಚರಿಸಿ ಮೂರು ಕಲೆಗಳನ್ನು ರಚಿಸುವುದರಿಂದ ಹ್ರಾದಮಾನ (ವಾಗುತ್ತದೆ) (ಆ) ಹೇಗೆಂದರೆ- ಸಧ ಸಧ ಸಧ, ನಿಪ ನಿಪ ನಿಪ, ಧಮ ಧಮ ಧಮ, ಪಗ ಪಗ ಪಗ, ಮರಿ ಮರಿ ಮರಿ, ಗಸ ಗಸ ಗಸ ಹ್ರಾದಮಾನ (xxi)                                                                                                                        31

೩೦೫ (ಅ) ಯಾವುದರಲ್ಲಿ) (ನಡುವೆ ಅಂತರವಿಲ್ಲದೆ ) ಒಂದು ಸ್ವರವನ್ನೇರಿ, ಅಲ್ಲಿ ಎರಡು ಕಲೆಗಳಷ್ಟು ಕಾಲ ನಿಂತು, ಸ್ವರವು ಒಂದು ಸ್ವರವನ್ನು ನಡುವೆ ಬಿಟ್ಟು ಅರ್ಧಕಲೆಯಷ್ಟು ಕಾಲ ಏರುತ್ತದೋ, ನಂತರ ಪುನಃ ಅಂತರವನ್ನು ಬಿಡದೆ ಅರ್ಧಕಿಲೆಯಷ್ಟು ಕಾಲ (ಮುಂದಿನ ಸ್ವರಕ್ಕೆ) ಇಳಿಯುತ್ತದೋ ಅದು ರಂಜಿತ. (ಆ) (ಹೇಗೆಂದರೆ-) ಸರೀ ಮಗ, ರಿಗಾ ಪಮ, ಗಮಾ ಧಪ, ಮಪಾ ನಿಧ, ಪಧಾ ಸನಿ. ರಂಜಿತ (xxii)    32

೩೦೬ (ಅ) ಆರೋಹಣ-ಅವರೋಹಣಗಳೆರಡರಲ್ಲೂ ಎಂಟು ಸ್ವರಗಳನ್ನು ಉಚ್ಚರಿಸಿ ಹಿಂದಿನ ಸ್ವರದ ಉಚ್ಚಾರಣದ ಕೊನೆಯಲ್ಲಿ ಎಂಟು ಕಲೆಗಳನ್ನು ರಚಿಸುವುದು ಆವರ್ತಕ. ಅಥವಾ(?) ಸಗ ಗಪ ಪನಿ ಧಸ ಸಧ ನಿಪ ಪಗ ಗಸ ಆವರ್ತಕ (xxiii)               33

೩೦೭ (ಅ) ನಡುವೆ ಅಂತರವನ್ನು ಬಿಡದೆ ಮೂರು ಸ್ವರಗಳನ್ನೇರಿ ನಂತರ ನಾಲ್ಕನೆಯದನ್ನು ಎಗರಿ (=ಬಿಟ್ಟು) ಐದನೆಯ ಸ್ವರವನ್ನು ಪಡೆದು, ಮತ್ತು (ನಡುವೆ) ಅಂತರವಿಲ್ಲದ ಮೂರು ಸ್ವರಗಳನ್ನು ಇಳಿದು ನಾಲ್ಕನೆಯದನ್ನು ಎಗರಿಸಿ (=ಬಿಟ್ಟು) ಆರೋಹಣ – ಅವರೋಹಣಗಳಿಂದ ಎಂಟು ಕಲೆಗಳಲ್ಲಿ ಮೊದಲನೆಯ ಸ್ವರವಾದ ಷಡ್ಜವನ್ನು ತಲುಪಬೇಕು. ಇದೇ ರೀತಿಯಲ್ಲಿ ತಾರಸ್ವರದಿಂದ ಮೊದಲುಮಾಡಿಕೊಂಡು ಎಲ್ಲ ಸ್ವರಗಳಲ್ಲಿಯೂ (ಕಲೆಗಳನ್ನು ರಚಿಸಬೇಕು). (ಹೀಗೆ) ಪರಿವರ್ತಕದಲ್ಲಿ (ಒಟ್ಟು) ಹದಿನಾರು ಕಲೆಗಳಿರುತ್ತವೆ. (ಇ) ಇದನ್ನು ಲೋಕದಲ್ಲಿ ಓಹಾಡೀ ಎನ್ನುತ್ತಾರೆ. (ಈ) ಹೇಗೆಂದರೆ – ಸರಿಗಪ ಪಮಗಸ, ರಿಗಮಧ ಧಪಮರಿ, ಗಮಪನಿ ನಿಧಪಗ, ಮಪಧಸ ಪನಿಧಮ, ಸನಿಧಮ ಮಪಧಸ, ನಿಧಪಗ ಗಮಪನಿ, ಧಪಮರಿ ರಿಗಮಧ, ಪಮಗಸ ಸರಿಗಪ. ಪರಿವರ್ತಕ (xxiv)                                               34

೩೦೮ (ಅ) ಎರಡು ಸ್ವರಗಳ ಒಂದು ಕಲೆಯಿಂದ ಆರೋಹಣ ಕ್ರಮದಲ್ಲಿ ಮೂರನೆಯ ಸ್ವರವನ್ನು ವರ್ಜಿಸಿ, ಆರೋಹಣ ಕ್ರಮದಲ್ಲಿಯೇ ಮೇಲುಗಡೆ ಇರುವ ಎರಡು (ನಂತರದ) ಸ್ವರಗಳನ್ನು ಆಕ್ರಮಿಸಿ, ಇದೇ ಕ್ರಮದಲ್ಲಿ ಇಳಿಯಬೇಕು. (ಆ) ಉಳಿದ ಸ್ವರಗಳನ್ನು ಇದೇ ಕ್ರಮದಲ್ಲಿ ಏರಿದರೆ ಹದಿನೆಂಟು ಕಲೆಗಳ

____

ಉದ್ಘಟಿತಃ (xxv)

(ಇ) ಸರಿಮಪ ಪಮರಿಸ, ರಿಗಪಥ ಧಮಗರಿ, ಗಮಧನಿ ನಿಧಮಗ, ಮಪನಿಸ ಸನಿಪಮ, ಪಧನಿಸ, ಸನಿಪಮ ಮಪನಿಸ, ನಿಧಮಗ ಗಮಧನಿ, ಧಪಗರಿ ರಿಗಮಧ, ಪಮರಿಸ ಮರಿಪಮ, ಸರಿಮಪ ಮಗರಿಸ ಉದ್ಘಟಿತಃ (xxv) 35

೩೦೯. (ಅ) ತ್ರಿಭಿಃ ಸ್ವರೈರಾರೋಹಕ್ರಮೇಣ ವಾ ಏಶಕಲಾದಾರಭ್ಯ ಯಾವತ್‌ಷಟ್‌ಕಲಮಿತ್ಯೇವಂ ಕಲಾಮಾನಾದಾಕ್ಷಿಪ್ತಕಃ | (ಆ) [ಯಥಾ -] ಸರಿಗಾ ನು ರಿಗಮಾ ನು ಗಮಪಾ ನು ಮಪಧಾ ನು ಪಧನೀ ನು ಧನಿಸಾ ನು ಸನಿಧಾ ನು ನಿಧಪಾ ನು ನಿಧಪಾ ನು ಧಪಮಾ ನು ಪಮಗಾ ನು ಮಗರೀ ನು ಗರಿಸಾ ನು ಇತ್ಯಾಕ್ಷಿಪ್ತಕಃ (xxvi) 36

೩೧೦. (ಅ) ಪ್ರಥಮಾತ್‌ಸ್ವರಾ[ದ]ನಂತರಂ ಪರಿತ್ಯಜ್ಯ ಸ್ವರದ್ವಯೇ ಚ ಗತ್ವಾ ತೇನೈವ ಕ್ರಮೇಣಾವರೋಹಣಾದೇಕಕಲಾದವರೋಹಣೇsಪಿ ಚೈಕಕಲ ಇತಿ ದ್ವಕಲಸಂಪ್ರದಾನಶ್ಚ ದ್ವಾವಿಂಶತಿಕಲಃ | (ಯಥಾ -)                                                        37

೩೧೧. (ಅ) ಸಗಮಾ ಮರಿಸಾ, ರಿಮಪಾ ಪಗರೀ, ಗಪಧಾ ಧಮಗಾ, ಮಧನೀ ನಿಪಮಾ, ಪನಿಸಾ, ಸಧಪಾ, ಧನಿಸಾ ಸಧಪಾ, ಪನಿಸಾ ನಿಪಮಾ ಮಧನೀ, ಧಮಗಾ ಗಪಧಾ ಪಗರೀ ರಿಮಪಾ, ಮರಿಸಾ ಸಗಮಾ ಗರಿಸಾ ಸಂಪ್ರದಾನಃ (xxvii)                        

(ಆ) ಅಥವಾ ಸಗಮಾ ಮಗಸಾ, ರಿಮಪಾ ಪಮರೀ, ಗಪಧಾ ಧಪಗಾ, ಮಧನೀ ನಿಧಮಾ, ಪನಿಸಾ, ಸನಿಪಾ, ಧನಿಸಾ | ಸಧಪಾ ಪಧಸಾ, ನಿಪಮಾ ಮಪನೀ, ಧಮಗಾ ಗಮಧಾ, ಪಗರೀ ರಿಗಪಾ, ಮರಿಸಾ ಸರಿಮಾ, ಗರಿಸಾ ಇತಿ ಸಂಪ್ರದಾನಃ (xxvii)               38

೩೧೨. (ಅ) ಸಂಪ್ರದಾನಸ್ಮೈವ ದ್ವಿಕಲಯೋಗೇನ ಹಸನಾದ್ಭಸಿತಃ | (ಆ) (ಯಥಾ -) ಸಗ ಮಮ ರಿಸ, ರಿಮ ಪಪ ಗರಿ, ಗಪ ಧಧ ಮಗ, ಮಧ ನಿನಿ ಪಮ, ಪನಿ ಸಸ ಧಪ, ಧನಿಸ ಸಧ ಪಪ ನಿಸ, ನಿಪ ಮಮ ಧನಿ, ಧಮ ಗಗ ಪಧ, ಪಗ ರಿರಿ ಮಪರಿ ಸಸ ಗಮ, ಗರಿಸ ಇತಿ ಹಸಿತಃ (xxvii)        39

೩೧೩. (ಅ) ಹಸಿತವತ್‌ಸ್ವರತ್ರಯಾರೋಹಣೇನ ಚತುಷ್ಟಯಾರೋಹಣೇನ ವಾ ಉಭಯಥಾsಪ್ಯೇಕಕಲೋ ಹುಂಕಾರಃ | (ಆ) [ಯಥಾ -] ಸರಿಗಾ ಗರಿಸಾ, ರಿಗಮಾ

ಪಾಠವಿಮರ್ಶೆ : ೩೦೮ ಅ, ಆ, ಇ ೩೦೯ ಆ

—-

ಉದ್ಘಟಿತವು ಉಂಟಾಗುತ್ತದೆ. (ಇ)(ಹೇಗೆಂದರೆ-) ಸರಿಮಪ ಪಮರಿಸ, ರಿಗಪಥ ಧಮಗರಿ, ಗಮಧನಿ ನಿಧಮಗ, ಮಪನಿಸ ಸನಿಪಮ, ಪಧನಿಸ, ಸನಿಪಮ ಮಪನಿಸ, ನಿಧಮಗ ಗಮಧನಿ, ಧಪಗರಿ ರಿಗಮಧ, ಪಮರಿಸ ಮರಿಪಮ, ಸರಿಮಪ ಮಗರಿಸ ಉದ್ಘಟಿತಃ (xxv) 35

೩೦೯. (ಅ) ಮೂರು ಸ್ವರಗಳಿಂದ ಆರೋಹಣ ಕ್ರಮದಲ್ಲಿ ಒಂದು ಕಲೆಯಿಂದ ಮೊದಲು ಮಾಡಿಕೊಂಡು ಆರು ಕಲೆಗಳವರೆಗೆ ಕ್ರಮವಾಗಿ ಹೆಚ್ಚಿಸುವುದರಿಂದ ಆಕ್ಷಿಪ್ತಕ(ವಾಗುತ್ತದೆ) – ಸರಿಗಾ ನು ರಿಗಮಾ ನು ಗಮಪಾ ನು ಮಪಧಾ ನು ಪಧನೀ ನು ಧನಿಸಾ ನು ಸನಿಧಾ ನು ನಿಧಪಾ ನು ನಿಧಪಾ ನು ಧಪಮಾ ನು ಪಮಗಾ ನು ಮಗರೀ ನು ಗರಿಸಾ ನು ಆಕ್ಷಿಪ್ತಕಃ (xxvi)                                  36

(ಸರಿಗಾ ಸರಿಗಾರಿಗಮಾ ಸರಿಗಾರಿಗಮಾಗಮಪಾ ಸರಿಗಾರಿಗಮಾಗಮಪಾಮಪಧಾ…. ಸರಿಗಾ…. ಧನಿಸಾ; ಸನಿಧಾ ಸನಿಧಾನಿಧಪಾ ಸನಿಧಾನಿದಪಾಧಪಮಾ …ಸನಿಧಾ …ಗರಿಸಾ ಎಂದಿರಬಹುದೇ?)

೩೧೦. (ಅ) ಮೊದಲನೆಯ ಸ್ವರದಿಂದ (ಮೊದಲುಮಾಡಿ) (ಅದರ) ನಂತರದ್ದನ್ನು ಬಿಟ್ಟು (ಮುಂದಿನ) ಎರಡು ಸ್ವರಗಳಿಗೆ ಹೋಗಿ ಅಲ್ಲಿಂದಲೇ ಕ್ರಮವಾಗಿ ಒಂದು ಕಲೆಯಷ್ಟಿದ್ದು ಇಳಿಯುವುದರಿಂದ ಒಂದು ಕಲೆಯಾಗುತ್ತದೆ. (ಏರುವುದು ಮತ್ತು ಇಳಿಯುವುದು, ಇದರಿಂದ ಒಂದೊಂದು ಕಲೆಯಾಗಿ, ಇಂತಹ) ಇಪ್ಪತ್ತೆರಡು ಕಲೆಗಳಿಂದ ಸಂಪ್ರದಾನ (ಅಲಂಕಾರ)ವಾಗುತ್ತದೆ. (ಆ) ಹೇಗೆಂದರೆ-               37

೩೧೧. (ಅ) ಸಗಮಾ ಮರಿಸಾ, ರಿಮಪಾ ಪಗರೀ, ಗಪಧಾ ಧಮಗಾ, ಮಧನೀ ನಿಪಮಾ, ಪನಿಸಾ, ಸಧಪಾ, ಧನಿಸಾ ಸಧಪಾ, ಪನಿಸಾ ನಿಪಮಾ ಮಧನೀ, ಧಮಗಾ ಗಪಧಾ ಪಗರೀ ರಿಮಪಾ, ಮರಿಸಾ ಸಗಮಾ ಗರಿಸಾ ಸಂಪ್ರದಾನಃ (xxvii)                     38

(ಆ) ಅಥವಾ ಸಗಮಾ ಮಗಸಾ, ರಿಮಪಾ ಪಮರೀ, ಗಪಧಾ ಧಪಗಾ, ಮಧನೀ ನಿಧಮಾ, ಪನಿಸಾ, ಸನಿಪಾ, ಧನಿಸಾ | ಸಧಪಾ ಪಧಸಾ, ನಿಪಮಾ ಮಪನೀ, ಧಮಗಾ ಗಮಧಾ, ಪಗರೀ ರಿಗಪಾ, ಮರಿಸಾ ಸರಿಮಾ, ಗರಿಸಾ ಇತಿ ಸಂಪ್ರದಾನಃ (xxvii)               38

೩೧೨. (ಅ) ಸಂಪ್ರದಾನದ್ದೇ ಎರಡು ಕಲಗಳು ಸೇರಿ ವಿಸ್ತಾರವಾಗುವುದರಿಂದ ಹಸಿತ(ವೆಂಬ ಅಲಂಕಾರವಾಗುತ್ತದೆ) (ಆ) ಹೇಗೆಂದರೆ – ಸಗ ಮಮ ರಿಸ, ರಿಮ ಪಪ ಗರಿ, ಗಪ ಧಧ ಮಗ, ಮಧ ನಿನಿ ಪಮ, ಪನಿ ಸಸ ಧಪ, ಧನಿಸ ಸಧ ಪಪ ನಿಸ, ನಿಪ ಮಮ ಧನಿ, ಧಮ ಗಗ ಪಧ, ಪಗ ರಿರಿ ಮಪರಿ ಸಸ ಗಮ, ಗರಿಸ ಹಸಿತಃ (xxvii)                                                                                      39

೩೧೩. (ಅ) ಹಸಿತದ ಹಾಗೆ ಮೂರು ಸ್ವರಗಳನ್ನು ಏರುವುದರಿಂದ ಅಥವಾ ನಾಲ್ಕು ಸ್ವರಗಳನ್ನು ಏರುವುದರಿಂದ ಎರಡು ರೀತಿಯಲ್ಲಿ ಒಂದೇ ಕಲೆಯು ರಚಿತವಾದರೆ ಹುಂಕಾರ(ವಾಗುತ್ತದೆ).

____

ಮಗರೀ, ಗಮಪಾ ಪಮಗಾ, ಮಪಧಾ ಧಪಮಾ, ಪಧನೀ ನಿಧಪಾ, ಧನಿಸಾ, ಸನಿಧಾ, ಪಧನೀ ನಿಧಪಾ, ಮಪಧಾ ಧಪಮಾ, ಗಮಪಾ ಪಮಗಾ, ರಿಗಮಾ ಮಗರೀ, ಸರಿಗಾ ಗರಿಸಾ ಇತಿ ಹುಂಕಾರಃ | (xxix)                                                        40

೩೧೪. (ಆ) ಅಥವಾ – ಸರಿಗಮ ಮಗರಿಸ, ರಿಗಮಪ ಪಮಗರಿ, ಗಮಪಧ ಧಪಮಗ, ಮಪಧನಿ ನಿಧಪಮ, ಪಧನಿಸ ಸನಿಧಪ, ಮಪಧನಿ ನಿಧಪಮ, ಗಮಪಧ ಧಪಮಗ, ರಿಗಮಪ ಪಮಗರಿ, ಸರಿಗಮ ಮಗರಿಸ [ಇತಿ] ಆಷ್ಟಾದಶಕಲೋ ಹುಂಕಾರಃ | (xxix)        41

೩೧೫. (ಅ) ತಾರಾತ್‌ಸಪ್ತಮಂ ಸ್ವರಂ ಗತ್ವಾ ಪುನಸ್ತತ್ರೈವಾಗತ್ಯಾವರೋಹಕ್ರಮೇಣ ಸ್ವರದ್ವಯೋಚ್ಚಾರಣೇನ ಕಲಾಚತುಷ್ಟಯಕರಣಾತ್‌ಸಂಧಿಪ್ರಚ್ಛಾದನಃ | (xxx)                                                                                         42

(ಆ) ಯಥಾ -ಸನಿ ಸನಿ ಸನಿ ಸನಿ ಸನಿ, ನಿಧ ನಿಧ ನಿಧ ನಿಧ, ಧಪ ಧಪ ಧಪ ಧಪ ಧಪ, ಪಮ ಪಮ ಮಗ ಮಗ ಮಗ ಮಗ, ಗರಿ ಗರಿ ಗರಿ ಗರಿ, ರಿಸ ರಿಸ ರಿಸ ರಿಸ || ರಿಸ ರಿಸ ರಿಸ ರಿಸ ಗರಿ ಗರಿ ಗರಿ ಗರಿ, ಮಗ ಮಗ ಮಗ ಮಗ, ಪಮ ಪಮ ಪಮ ಪಮ, ಧಪ ಧಪ ಧಪ ಧಪ, ನಿಧ ನಿಧ ನಿಧ ನಿಧ, ಸನಿ ಸನಿ ಸನಿ ಸನಿ | ಇತಿ | ಸಂಧಿಪ್ರಚ್ಛಾದನಃ || (XXX)                                                                 43

೩೧೬. (ಅ) ಅಂಶಸ್ವರಂ ಚತುರುಚ್ಚಾರ್ಯ ತದನಂತರಸ್ವರದ್ವಯಸ್ಯ ದ್ರುತೋಚ್ಚಾರಣಾದನೇನೈವ ಕ್ರಮೇಣಾರೋಹಣಾದೇಕಕಲೋ ವಿಧುತಃ | (ಆ) (ಯಥಾ) ಸಸಸಸ ರಿಗ, ರಿರಿರಿರಿ ಗಮ, ಗಗಗಗ ಮಪ, ಮಮಮಮ ಪಧ, ಪಪಪಪ ಧನಿ, ಧಧಧಧ ನಿಸ [ಇತಿ] ವಿಧುತಃ || (XXX)        44

೩೧೭. (ಅ) ತಾರಾದೇಕಾಂತರಸ್ವರಾವರೋಹಾತ್‌ಕ್ರಮೇಣೋದ್ಗಿತಃ | (ಆ) [ಯಥಾ] ಸಧ ನಿಪ ಧಮ ಪಗ ಮರಿ ಗಸ [ಇತಿ] ಉದ್ಗೀತಃ || (xxxii)                                                                                                           44

೩೧೮. (ಅ) ಹುಂಕಾರವತ್‌ ಸಮ[ನ]೦ತರಂ ಸಂಯುಕ್ತಂ ತ್ರಿಸ್ವರಾಕ್ಷರಮಾರೋಹೇತ್‌ ತತೋ ದ್ವೌದ್ವೌ ಸ್ವ [ರೌ] ಕಂಪನಯುಕ್ತೌ ಕಲಾಂತರಯೋಗಾದೇವ ಪ್ರಸನ್ನೌ ಮಂದ್ರೌ ಕಾರ್ಯೌ | (ಆ) ಇತ್ಯೇಕಕಲಸ್ವರಯೋಗಾದ್‌ಗಾತ್ರವರರ್ಣಃ | (ಇ) [ ಯಥಾ – ] ಧನಿಸ ನಿನಿ ಧಧ, ಪಧನಿ ಧಧ ಪಪ ಮಪಧ ಪಪ, ಮಮ, ಗಮಪ ಮಮ ಗಗ, ರಿಗಮ ಗಗ ರಿರಿ, ಸರಿಗ ರಿರಿ ಸಸ ಇತಿ ಗಾತ್ರವರ್ಣಾಃ | (xxxiiI) 45

ಪಾಠವಿಮರ್ಶೆ : ೩೧೫ಅ, ಆ ೩೧೬ಅ ೩೧೭ಅ ೩೧೮ಅ, ಆ, ಇ

—-

(ಆ) ಹೇಗೆಂದರೆ – ಸರಿಗಾ ಗರಿಸಾ, ರಿಗಮಾ ಮಗರೀ, ಗಮಪಾ ಪಮಗಾ, ಮಪಧಾ ಧಪಮಾ, ಪಧನೀ ನಿಧಪಾ, ಧನಿಸಾ, ಸನಿಧಾ, ಪಧನೀ ನಿಧಪಾ, ಮಪಧಾ ಧಪಮಾ, ಗಮಪಾ ಪಮಗಾ, ರಿಗಮಾ ಮಗರೀ, ಸರಿಗಾ ಗರಿಸಾ ಹುಂಕಾರ (xxix)                            41

೩೧೪. (ಆ) ಅಥವಾ – ಸರಿಗಮ ಮಗರಿಸ, ರಿಗಮಪ ಪಮಗರಿ, ಗಮಪಧ ಧಪಮಗ, ಮಪಧನಿ ನಿಧಪಮ, ಪಧನಿಸ ಸನಿಧಪ, ಮಪಧನಿ ನಿಧಪಮ, ಗಮಪಧ ಧಪಮಗ, ರಿಗಮಪ ಪಮಗರಿ, ಸರಿಗಮ ಮಗರಿಸ. ಹದಿನೆಂಟು ಕಲೆಗಳ ಹುಂಕಾರ (xxix)               41

೩೧೫. (ಅ) ತಾರ (ಸ್ವರ)ದಿಂದ ಏಳನೆಯದಕ್ಕೆ (=ನಿಷಾದಕ್ಕೆ) ಹೋಗಿ ಪುನಃ ಅಲ್ಲಿಗೇ ಬಂದು ಅವರೋಹಣ ಕ್ರಮದಲ್ಲಿ ಎರಡು ಸ್ವರಗಳನ್ನು ಉಚ್ಚರಿಸಿ ನಾಲ್ಕು ಕಲೆಗಳನ್ನು ರಚಿಸುವುದರಿಂದ ಸಂಧಿಪ್ರಚ್ಛಾದನ(ವಾಗುತ್ತದೆ).                                   42

(ಆ) ಹೇಗೆಂದರೆ -ಸನಿ ಸನಿ ಸನಿ ಸನಿ ಸನಿ, ನಿಧ ನಿಧ ನಿಧ ನಿಧ, ಧಪ ಧಪ ಧಪ ಧಪ ಧಪ, ಪಮ ಪಮ ಮಗ ಮಗ ಮಗ ಮಗ, ಗರಿ ಗರಿ ಗರಿ ಗರಿ, ರಿಸ ರಿಸ ರಿಸ ರಿಸ || ರಿಸ ರಿಸ ರಿಸ ರಿಸ ಗರಿ ಗರಿ ಗರಿ ಗರಿ, ಮಗ ಮಗ ಮಗ ಮಗ, ಪಮ ಪಮ ಪಮ ಪಮ, ಧಪ ಧಪ ಧಪ ಧಪ, ನಿಧ ನಿಧ ನಿಧ ನಿಧ, ಸನಿ ಸನಿ ಸನಿ ಸನಿ. ಸಂಧಿಪ್ರಚ್ಛಾದನ (XXX)                                                                         43

೩೧೬. (ಅ) (ಆಯಾ ರಾಗದ) ಅಂಶಸ್ವರವನ್ನು ನಾಲ್ಕು ಬಾರಿ ಉಚ್ಚರಿಸಿ ಅದರ ನಂತರದ ಎರಡು ಸ್ವರಗಳನ್ನು ದ್ರುತ(ಗತಿ)ದಲ್ಲಿ ಉಚ್ಚರಿಸಿ, ಇದೇ ಕ್ರಮದಲ್ಲಿ ಏರುವುದರಿಂದ ಒಂದು ಕಲೆ(ಯ ವಿನ್ಯಾಸ) ಯಾಗುವು ವಿಧುತ(ವೆಂಬ ಆಲಂಕಾರವಾಗುತ್ತದೆ) (ಆ) (ಹೇಗೆಂದರೆ – ) ಸಸಸಸ ರಿಗ, ರಿರಿರಿರಿ ಗಮ, ಗಗಗಗ ಮಪ, ಮಮಮಮ ಪಧ, ಪಪಪಪ ಧನಿ, ಧಧಧಧ ನಿಸ. ವಿಧುತ (XXX)                   44

೩೧೭. (ಅ) ತಾರಸ್ವರದಿಂದ ನಡುವೆ ಒಂದು ಸ್ವರದ ಅಂತರವನ್ನು ಬಿಟ್ಟು ಕ್ರಮವಾಗಿ ಇಳಿಯುವುದರಿಂದ ಉದ್ಗೀತ(ವಾಗುತ್ತದೆ). (ಆ) (ಹೇಗೆಂದರೆ – ) ಸಧ ನಿಪ ಧಮ ಪಗ ಮರಿ ಗಸ. ಉದ್ಗೀತ (xxxii)                                                44

೩೧೮. (ಅ) ಹುಂಕಾರದ(ಲ್ಲಿರುವ)ಂತೆ ನಡುವೆ ಎಡೆಬಿಡದಂತೆ ಮೂರು ಸ್ವರಾಕ್ಷರಗಳನ್ನು ಕೂಡಿಸಿ ಏರಬೇಕು. ನಂತರ ಎರಡೆರಡು ಸ್ವರಗಳನ್ನು ಕಂಪನವುಳ್ಳದ್ದಾಗಿಯೂ ಇನ್ನೊಂದು ಕಲೆಯನ್ನು ಕೂಡಿಕೊಂಡಿರುವಂತೆಯೂ ಪ್ರಸನ್ನಗಳನ್ನಾಗಿಯೂ ಮಂದ್ರಗಳನ್ನಾಗಿಯೂ ಇರುವಂತೆ ಮಾಡಬೇಕು. (ಆ) ಹೀಗೆ ಒಂದು ಕಲೆಯ ಸ್ವವನ್ನು ಕೂಡಿಸುವುದರಿಂದ ಗಾತ್ರವರ್ಣವಾಗುತ್ತದೆ. (ಇ) (ಹೇಗೆಂದರೆ -) ಧನಿಸ ನಿನಿ ಧಧ, ಪಧನಿ ಧಧ ಪಪ ಮಪಧ ಪಪ, ಮಮ, ಗಮಪ ಮಮ ಗಗ, ರಿಗಮ ಗಗ ರಿರಿ, ಸರಿಗ ರಿರಿ ಸಸ. ಗಾತ್ರವರ್ಣಾ (xxxiiI)          45

____

[ಭರತಮತೇನಾಲಂಕಾರನಿರೂಪಣಮ್‌ |]

೩೧೯.ಯಸ್ಮಿನ್‌ವರ್ಣೇ ಸ್ಥಿತಾ ಯೇ ಚ ಅಲಂಕಾರಾ ಮನೋಹರಾಃ |
ತಾನಿದಾನೀಂ ಪ್ರವಕ್ಷ್ಯಾಮಿ ಭರತೋಕ್ತವಿಧಾನತಃ || ೦೬ ||

೩೨೦.ಪ್ರಸನ್ನಾದಿಃ ಪ್ರಸನ್ನಾಂತಃ ಪ್ರಸನ್ನಾದ್ಯಂತ ಏವ ಚ |
ತಥಾ ಪ್ರಸನ್ನಮಧ್ಯಸ್ತು ಸಮೋ ರೇಚಿತ ಏವ ಚ || ೦೭ ||

೩೨೧.ಪ್ರಸ್ತಾರಶ್ಚ ಪ್ರಸಾದಶ್ಚ ಸ್ಥಾಯಿವರ್ಣಸಮಾಶ್ರಯಾಃ |
ಜ್ಞೇಯಾ ಹ್ಯೇತೇ ತ್ವಲಂಕಾರಾ ಯಥಾಲಕ್ಷಣಲಕ್ಷಿತಾಃ || ೦೮ ||

೩೨೨.ಅಥ ಸಂಚಾರಿಜಾನ್‌ಭೂಯಃ ಕೀರ್ತ್ಯಮಾನಾನ್‌ನಿಬೋಧತ |
ಮಂದ್ರತಾರಪ್ರಸನ್ನಶ್ಚ ಬಿಂದುಃ ಪ್ರೇಂಖೋಲಿತಸ್ತಥಾ || ೦೯ ||

೩೨೩.[ತಾರಮಂದ್ರಪ್ರಸನ್ನಶ್ಚ ಸ್ಯಾನ್ನಿವೃತ್ತಪ್ರವೃತ್ತಕಃ |]
ಕುಹರಶ್ಚೈವ ವೇಣುಶ್ಚ ರಂಜಿತಶ್ಚೋಪಲೋಲಕಃ || ೧೦ ||

೩೨೪.ಆವರ್ತಕಃ ಪರಾವರ್ತ ಇತಿ ಸಂಚಾರಿಸಂಭವಾಃ |
ಅಲಂಕಾರಸ್ತು ವಿಜ್ಞೇಯಾ ಏಕಾದಶ ಮನೋಹರಾಃ || ೧೧ ||

೩೨೫.ನಿಷ್ಕೂಜಿತಶ್ಚ ಕುಹರೋ ಹಸಿತೋ ಬಿಂದುರೇವ ಚ |
ಪ್ರೇಂಖೋಲಿತಸ್ತಥಾssಕ್ಷಿಪ್ತೋ ವಿಧುತೋದ್ವಾಹಿತೌ ತಥಾ || ೧೨ ||

೩೨೬.ಹ್ರಾದಮಾನಃ ಸಂಪ್ರದಾನಃ ಸಂಧಿಪ್ರಚ್ಛಾದನಸ್ತಥಾ |
ಪ್ರಸನ್ನಾದಿಃ ಪ್ರಸನ್ನಾಂತ ಆರೋಹಿಣಿ ತ್ರಯೋದಶ || ೧೩ ||

೩೨೭.ವಿಧುತೋ ಗಾತ್ರವರ್ಣಶ್ಚ ಉದ್ಗೀತೋದ್ವಾಹಿತೌ ವೇಣುಃ |
ಪಂಚೈತೇ ಚಾಪ್ಯಲಂಕಾರಾ ವಿಜ್ಞೇಯಾಶ್ಚಾವರೋಹಿಣಿ || ೧೪ ||

೩೨೮.ಪ್ರಸನ್ನಾದಿಃ ಪ್ರಸನ್ನಾಂತೋ ಬಿಂದುಃ ಕಂಪಿತರೇಚಿತೌ |
ಪ್ರೇಂಖೋಲಿತಸ್ತಾರಮಂದ್ರೋ ಮಂದ್ರತಾರಸ್ಸಮಸ್ತಥಾ || ೧೫ ||

೩೨೯. ಸನ್ನಿವೃತ್ತಪ್ರವೃತ್ತಶ್ಚ ಉಪಲೋಲಕವೇಣುಕೌ |
ದ್ವಾದಶೈತೇsಪ್ಯಲಂಕಾರಾಃ ಸರ್ವವಣಾಶ್ರಯಾಃ ಸ್ಮೃತಾಃ || ೧೬ ||

ಪಾಠವಿಮರ್ಶೆ : ೩೨೧ ಅ, ಆ, ಇ, ಈ, ೩೨೨ ಅ ಆ, ೩೨೩ ಅ, ಆ, ಇ, ಈ, ೩೨೫ ಅ, ಆ, ೩೨೬ ಅ, ಈ

—-

[ಭರತಮತದ ಅನುಸಾರವಾಗಿ ಅಲಂಕಾರಗಳ ನಿರೂಪಣೆ]

೩೧೯. (ಯಾವ) ಯಾವ ವರ್ಣದಲ್ಲಿ ಮನೋಹರವಾದ ಅಲಂಕಾರಗಳಿವೆಯೋ ಅವುಗಳನ್ನು ಈಗ ಭರತನು ಹೇಳಿರುವ ವಿಧಾನದಂತೆ ಹೇಳುತ್ತೇನೆ.           06

೩೨೦. ಪ್ರಸನ್ನಾದಿ, ಪ್ರಸನ್ನಾಂತ, ಪ್ರಸನ್ನಾದ್ಯಂತ, ಹಾಗೆಯೇ ಪ್ರಸನ್ನಮಧ್ಯೆ, ಸಮ, ರೇಚಿತ,                             07

೩೨೧. ಪ್ರಸ್ತಾರ, ಪ್ರಸಾದ, -(ಇವು)ಗಳು ಸ್ಥಾಯಿವರ್ಣದಲ್ಲಿ ನೆಲೆಸಿವೆ. ಈ ಅಲಂಕಾರಗಳನ್ನು ಅವುಗಳ ಆಯಾ ಲಕ್ಷಣಗಳ ಅನುಸಾರವಾಗಿ ತಿಳಿದುಕೊಳ್ಳಬೇಕು.                                                                                                                         08

೩೨೨. ನಂತರ ಅತಿಶಯವಾಗಿ ವರ್ಣಿತವಾಗಿರುವ ಸಂಚಾರಿ (ವರ್ಣ)ದಲ್ಲಿ ಹುಟ್ಟಿದವುಗಳನ್ನು ಅರಿತುಕೋ. ಮಂದ್ರತಾರಪ್ರಸನ್ನ, ಬಿಂದು, ಹಾಗೆಯೇ ಪ್ರೇಂಖೋಲಿತ,                                                                                                                09

೩೨೩. [ತಾರಮಂದ್ರಪ್ರಸನ್ನ, ನಿವೃತ್ತಪ್ರವೃತ್ತವೆಂಬುದಿದೆ], ಕುಹರ, ವೇಣು, ರಂಜಿತ, ಉಪಲೋಲಕ,                   10

೩೨೪ ಆವರ್ತಕ, ಪರಾವರ್ತ – ಈ ಹನ್ನೊಂದು ಮನೋಹರವಾದ ಅಲಂಕಾರಗಳು ಸಂಚಾರಿ(ವರ್ಣ) ಯಲ್ಲಿ ಹುಟ್ಟಿದವುಗಳೆಂದು ತಿಳುದುಕೊಳ್ಳಬೇಕು.                                                                                                                       11

೩೨೫. ನಿಷ್ಕೂಜಿತ, ಕುಹರ, ಹಸಿತ, ಅಂತೆಯೇ ಬಿಂದು, ಹಾಗೆಯೇ ಪ್ರೇಂಖೋಲಿತ, ಆಕ್ಷಿಪ್ತ, ಇದೇ ರೀತಿಯಲ್ಲಿ ವಿಧುತ – ಉದ್ವಾಹಿತಗಳು,    12

೩೨೬. ಹ್ರಾದಮಾನ, ಸಂಪ್ರದಾನ, ಅಂತೆಯೇ ಸಂಧಿಪ್ರಚ್ಚಾದನ, ಪ್ರಸನ್ನಾದಿ, ಪರಸನ್ನಾಂತ – [ಈ] ಹದಿಮೂರು ಆರೋಹಿ (ವರ್ಣದಲ್ಲಿವೆ).   13

೩೨೭. ವಿಧುತ, ಗಾತ್ರವರ್ಣ, ಉದ್ಗೀತ – ಉದ್ವಾಹಿತಗಳು, ವೇಣು – ಈ ಐದು ಅಲಂಕಾರಗಳು ಅವರೋಹಿ (ವರ್ಣ) ಯವುಗಳೆಂದು ತಿಳಿಯಬೇಕು.           14

೩೨೮. ಪ್ರಸನ್ನಾದಿ, ಪ್ರಸನ್ನಾಂತ, ಬಿಂದು, ಕಂಪಿತ – ರೇಚಿತಗಳು, ಪ್ರೇಂಖೋಲಿತ, ತಾರಮಂದ್ರ, ಅಂತೆಯೇ ಮಂದ್ರತಾರ, ಸಮ,        15

೩೨೯. ಸನ್ನಿವೃತ್ತಪ್ರವೃತ್ತ, ಉಪಲೋಲಕ – ವೇಣುಗಳು – ಈ ಹನ್ನೆರಡು ಅಲಂಕಾರಗಳು ಎಲ್ಲಾ ವರ್ಣಗಳಲ್ಲಿಯೂ ನೆಲೆಸಿವೆಯೆಂದು ಸ್ಮೃತವಾಗಿವೆ.                                                                                                                                16

೩೨೭, ಅ, ಆ, ಈ ೩೨೮ ಆ, ಈ ೩೨೯ ಆ

____

೩೩೦.ಮಂದ್ರೋ ಮಧ್ಯಶ್ಚ ತಾರಶ್ಚ ಅವಲೋಕಿತ ಏವ ಚ |
ಅಪಾಂಗಾಖ್ಯಸ್ತಥೋರ್ಮಿಶ್ಚ ಸರ್ವವರ್ಣಗತಾಃ ಸ್ಮೃತಾಃ || ೧೭ ||

೩೩೧.ಸಪ್ತರೂಪಗತಾ ಜ್ಞೇಯಾ ಅಲಂಕಾರಾ ಬುಧೈರಿಮೇ |
ನೈತೇ ಸರ್ವೇ ಧ್ರುವಾಸ್ವಿಷ್ಟಾ ಅತಿವರ್ಣಪ್ರಕರ್ಷಣಾತ್‌ || ೧೮ ||

೩೩೨.ನ ಹಿ ವರ್ಣಪ್ರಕರ್ಷಸ್ತು ಧ್ರುವಾಣಾಂ ಸಂಪ್ರಶಸ್ಯತೇ |
ಶ್ಯೇನೋ ವಾ sವ್ಯಥವಾ ವಿಂದುರ್ಯೇ ಚಾನ್ಯೇ ಪ್ರತಿಕರ್ಷಣಾಃ || ೧೯ ||

೩೩೩.ತೇ ಧ್ರುವಾಣಾಂ ಪ್ರಯೋಗೇಷು ನ ಕಾರ್ಯಾಃ ಸ್ವಪ್ರಮಾಣಾತಃ |
ಧ್ರುವಾಣಾಂ ಚ ಪ್ರಯೋಗೇ ತು ಕಾರ್ಯಾಶ್ಚಾರೋಹಿಣಃ ಸ್ವರಾಃ || ೨೦ ||

೩೩೪.ಯಸ್ಮಾದರ್ಥಾನುರೂಪಾ ಹಿ ಧ್ರುವಾ ಕಾರ್ಯಾರ್ಥದರ್ಶಿಕಾ |
ವರ್ಣಾನಾಂ ತು ಪುನಃ ಕಾರ್ಯಂ ಕೃಶತ್ವಂ ಚ ಧ್ರುವಾಸ್ವಲಮ್‌ || ೨೧ ||

೩೩೫.ಯೇsತ್ರ ಪ್ರಯೋಗಂ ಗಚ್ಛಂತಿ ತಾಂಶ್ಚ ವರ್ಣಾನ್‌ನಿಬೋಧತ |
ಸ್ಥಾಯಿವರ್ಣಾದ್ಬತೇ ಚೈಷಾಂ ಸಂಪ್ರವಕ್ಷ್ಯಾಮಿ ಲಕ್ಷಣಮ್‌ || ೨೨ ||

೩೩೬.ಕ್ರಮಶೋ ದೀಪ್ಯತೇ ಯಸ್ತು ಪ್ರಸನ್ನಾದಿಃ ಸಕಥ್ಯತೇ |
ವ್ಯಸ್ತೋಚ್ಚಾರಿತ ಏವೈಷ ಪ್ರಸನ್ನಾಂತೋsಭಿಧೀಯತೇ || ೨೩ ||

೩೩೭.ಆದ್ಯಂತಯೋಃ ಪ್ರಸನ್ನತ್ವಾತ್‌ಪ್ರಸನ್ನಾದ್ಯಂತ ಇಷ್ಯತೇ |
ಪ್ರಸನ್ನಮಧ್ಯೋ ಮಧ್ಯೇ ತು ಪ್ರಸನ್ನತ್ವಾದುದಾಹೃತಃ || ೨೪ ||

೩೩೮.ಸರ್ವಸಾಮ್ಯಾತ್‌ಸಮೋ ಜ್ಞೇಯಃ ಸ್ಥಿತಶ್ಚೈಕಸ್ಟರೋsಪಿ ಹಿ |
ಬಿಂದುರೇಕಕಲಂ ತಾರಂ ಸ್ವೃಷ್ಟ್ವಾ ತು ಪುನರಾಗತಃ || ೨೫ ||

೩೩೯.ಸ್ಯಾನ್ನಿವೃತ್ತಪ್ರವೃತ್ತಶ್ಚ ಮಂದ್ರ ಗತ್ವಾ ಸಮಾಗತಃ |
ಆಕ್ರಿಡಿತಲಯೋ ಯಸ್ತು ಸ ಚ ವೇಣುಃ ಪ್ರಕೀರ್ತಿತಃ || ೨೬ ||

ಪಾಠವಿಮರ್ಶೆ: ೩೩೦ಅ, ಆ, ಇ, ಈ. ೩೩೧ಅ, ಆ, ಈ, ಇ, ಈ. ೩೩೨ಅ, ೩೩೩ಅ, ಇ. ೩೩೪, ಇ ಈ

—-

೩೩೦. ಮಂದ್ರ, ಮಧ್ಯ, ತಾರ, ಅವಲೋಕಿತ, ಅಪಾಂಗವೆಂಬುದು, ಹಾಗೆಯೇ ಊರ್ಮಿ ಎಲ್ಲ ವರ್ಣಗಳಲ್ಲಿವೆಯೆಂದು ಸ್ಮೃತವಾಗಿವೆ.           17

೩೩೧. ಈ ಅಲಂಕಾರಗಳು ಏಳು (ಗೀತಿಗಳ) ರೂಪಗಳಲ್ಲಿವೆಯೆಂದು ವಿದ್ವಾಂಸರು ತಿಳಿಯಬೇಕು. ಅಕ್ಷರಗಳನ್ನು ಅತಿಯಾಗಿ ಎಳೆದಾಡಬೇಕಾಗುವುದರಿಂದ ಇವುಗಳನ್ನು ಎಲ್ಲಾ ಧ್ರುವಾಗಳಲ್ಲಿ (ಪ್ರಯೋಗಿಸುವುದನ್ನು) (ಗಾಯಕರು) ಇಷ್ಟಪಡುವುದಿಲ್ಲ.        18

೩೩೨. ಧ್ರುವಾಗಳಲ್ಲಿ (ಮಾತು) ವರ್ಣಗಳನ್ನು ಎಳೆಯುವುದು ಪ್ರಶಸ್ತವಲ್ಲ. ಶ್ಯೇನ ಅಥವಾ ಬಿಂದು ಮತ್ತಿತರ (ಅಲಂಕಾರ)ಗಳಲ್ಲಿ ಅತಿಯಾಗಿ ಎಳೆಯುವುದು ಎಲ್ಲಿದೆಯೋ                                                                                                              19

೩೩೩. ಅವುಗಳನ್ನು ತಮ್ಮ ತಮ್ಮ ಸ್ವಂತ (ಕಾಲ) ಪ್ರಮಾಣದಲ್ಲಿರುವಂತೆ ಧ್ರುವಾಗಳಲ್ಲಿ ಬಳಸಬಾರದು. ಧ್ರುವಾಗಳ ಪ್ರಯೋಗದಲ್ಲಿ ಏರುವ ಸ್ವರಗಳನ್ನು(ನ್ನೇ) ಬಳಸಬೇಕು.                                                                                                         20

೩೩೪. ಧ್ರುವಾ (ಹಾಡು)ಗಳು, (ಉದ್ದೇಶಿಸಿರುವ) ಅರ್ಥಕ್ಕೆ ಅನುರೂಪವಾಗಿಯೇ ಇರುವುದರಿಂದ ಅವನ್ನು (ಆ) ಅರ್ಥವನ್ನು ತೋರಿಸುವಂತೆಯೇ ಪ್ರಯೋಗಿಸಬೇಕು. ಆದುದರಿಂದ ಧ್ರುವಾಗಳಲ್ಲಿ (ಗಾನಕ್ರಿಯೆಯೆಂಬ, ಸ್ಥಾಯಿಯೇ ಮೊದಲಾದ) ವರ್ಣವನ್ನು ತೆಳು (=ಸ್ವಲ್ಪ)ವಾಗಿರುವಂತೆ ರಚಿಸಬೇಕು.                                                                                                                                   21

೩೩೫. ಇಲ್ಲಿ (=ಧ್ರುವಾಗಳಲ್ಲಿ) ಉಪಯೋಗವಾಗುವ ವರ್ಣಗಳನ್ನು (=ಗಳಲ್ಲಿ ನೆಲೆಸಿರುವ ಅಲಂಕಾರಗಳನ್ನು) ಗೊತ್ತುಮಾಡಿಕೋ, ಸ್ಥಾಯಿವರ್ಣ (ದಲ್ಲಿರುವ ಅಲಂಕಾರ)ಗಳನ್ನು ಬಿಟ್ಟು ಉಳಿದವುಗಳ ನಿರೂಪಿಸುತ್ತೇನೆ.                                    22

೩೩೬. ಯಾವುದು ಕ್ರಮವಾಗಿ ಉಚ್ಚವಾಗುತ್ತದೋ <ದೀಪ್ಯತೇ> ಅದನ್ನು ಪ್ರಸನ್ನಾದಿಯೆನ್ನುತ್ತಾರೆ. ಇದೇ ತಿರುಗುಮುರುಗಾದರೆ ಪ್ರಸನ್ನಾಂತವೆಂಬ ಹೆಸರಿನದಾಗುತ್ತದೆ.                                                                                                23

೩೩೭. ಮೊದಲು ಕೊನೆಗಳಲ್ಲಿ (ಸ್ವರಗಳು) ತಗ್ಗಾಗಿ <ಪ್ರಸನ್ನ> ಇರುವುದರಿಂದ ಪ್ರಸನ್ನಾದ್ಯಂತವೆಂಬ ಹೆಸರು ಅಪೇಕ್ಷಣೀಯವಾಗಿದೆ. ಮಧ್ಯದಲ್ಲಿ (ಸ್ವರವು) ತಗ್ಗಾಗಿ <ಪ್ರಸನ್ನ> ಇರುವುದರಿಂದ ಪ್ರಸನ್ನಮಧ್ಯವೆಂದು ಹೇಳಿದೆ.                                              24

೩೩೮. (ಏರಿಳಿತಗಳಿಲ್ಲದೆ) ಸಮವಾಗಿರುವುದರಿಂದ, (ಒಂದೆಡೆಯಲ್ಲೇ) ನಿಂತ ಒಂದೇ ಸ್ವರವಾಗಿರುವುದರಿಂದ ಸಮ(ವೆಂಬ ಅಲಂಕಾರ)ವೆಂದು ತಿಳಿಯಬೇಕು. ಬಿಂದು(ವಿನಲ್ಲಿ ಸ್ವರವು) ಒಂದು ಕಲೆಯಷ್ಟು (ಕಾಲ) ಮಾತ್ರ ತಾರ (ಸ್ವರವನ್ನು) ಮುಟ್ಟಿ ಪುನಃ ಹಿಂತಿರುಗುತ್ತದೆ.    25

೩೩೯. (ಸ್ವರವು) ಮಂದ್ರವನ್ನು ಮುಟ್ಟಿ ಹಿಂತಿರುಗುವುದು ನಿವೃತ್ತಪ್ರವೃತ್ತ. ಯಾವುದರಲ್ಲಿ ಲಯವು ಲೀಲಾಮಯ (=ಸರಸ)ವಾಗಿ <ಆಕ್ರೀಡಿತ> ಇರುತ್ತದೋ ಅದು ವೇಣು ಎಂದು ಪ್ರಸಿದ್ಧವಾಗಿದೆ.                                                              26

೩೩೪ಅ, ಆ, ಇ ೩೩೫ಅ ೩೩೬ಇ ೩೩೭ಅ ೩೩೮ಅ,ಆ ೩೩೯ಅ, ಆ, ಇ, ಈ

____

೩೪೦.ಉರೋಗತಃ ಕಂಪಿತಃ ಸ್ಯಾತ್‌ಕಂಪನಾಚ್ಚ ಕಲಾತ್ರಯಮ್‌ |
ಕಂಠೇ ನಿರುದ್ಧಪವನಃ ಕುಹರೋ ನಾಮ ಜಾಯತೇ || ೨೭ ||

೩೪೧.ತ್ರಿಕಲಾ[ತ್‌] ಕಂಪಾನಾ[ತ್‌] ತದ್ವದ್ರೇಚಿತಾಖ್ಯಃ ಶಿರೋಗತಃ |
ಗತಾಗತಪ್ರವೃತ್ತೋ ಯಃ ಸ ಪ್ರೇಂಖೋಲಿತ ಉಚ್ಯತೇ || ೨೮ ||

೩೪೨.[ಯಸ್ತು ಕಂಠಸ್ವರೋsಧಸ್ತಾತ್‌ಸ ತು ತಾರಃ ಪ್ರಕೀರ್ತಿತಃ |
ಉರೋಗತಸ್ತಥಾ ಮಂದ್ರೋ ಮೂರ್ದ್ನಿ ತಾರತರಃ ಸ್ಮೃತಃ] || ೨೯ ||

೩೪೩.ಕ್ರಮಾಗತಸ್ತು ಯಸ್ತಾರಶ್ಚತುರ್ಥಃ ಪಂಚಮೋsಪಿ ವಾ |
ತಾರಮಂದ್ರಪ್ರಸನ್ನಸ್ತು ಜ್ಞೇಯೋ ಮಂದ್ರಗತೋ ಬುಧೈಃ || ೩೦ ||

೩೪೪.ಲಂಘಯಿತ್ವಾ ಪರಾನ್‌ಮಂದ್ರಾತ್‌ಕ್ರಮಾತ್‌ತಾರಗತಿಂ ಗತಃ |
ಮಂದ್ರತಾರಪ್ರಸನ್ನಸ್ತು ಜ್ಞೇಯೋ ಹ್ಯಾರೋಹಣಾದ್‌ಬುಧೈಃ || ೩೧ ||

೩೪೫.ಏಕಸ್ವರಾಧಿರೂಢಃ ಕ್ರಮಶಃ ಪ್ರಸ್ತಾರಸಂಜ್ಞಕೇ ಜ್ಞೇಯಃ |
[ಪ್ರಸ್ತಾರಸ್ತು ನಿವೃತ್ತಃ ಶನೈಃ ಪ್ರಸನ್ನಃ ಪ್ರಸಾದಃ ಸ್ವಾತ್‌] || ೩೨ ||

೩೪೬.ಸಮನಂತರೌ ಸ್ವರೌ ದ್ವೌ ವಿಚರತ್ಯುದ್ವಾಹಿತೋ ದ್ವಿಕಲ ಏವ |
ಆರೋಹತ್ಯೇಕಕಲಾಂ ಪುನರೇಕಕಲಾಂ ಪ್ರಸಾದಯತಿ || ೩೩ ||

೩೪೭.ಉದ್ವಾಹಿತ ಏವ ಸ್ಯಾದುಪಲೋಲಕಸಂಜ್ಞತೋ ದ್ವಿರಭ್ಯಸ್ತಃ |
ಏಕಂ ದ್ವೌ ತ್ರೀನ್‌ಗಚ್ಛನ್‌ಸ್ವರಾನ್‌ಕ್ರಮೇಣ ಸ ಕ್ರಮೋ ಜ್ಞೇಯಃ || ೩೪ ||

೩೪೮.ಏಕಾಂತರಮಾರುಹ್ಯ ಪ್ರತ್ಯೇಕಾಂತರಂ ಸ್ವರಂ ಯಸ್ತು |
ನಿಷ್ಕೂಚಿತಸಂಜ್ಞಕೋ sಸೌ ಜ್ಞೇಯಃ ಸೂರಿಭಿರಲಂಕಾರಃ || ೩೫ ||

೩೪೯.ಕ್ರಮಯೋಗೇನಾನೇನ ತು ಸಂಚಾರ್ಯೇಕಾಂತರಸ್ವರೋ ದ್ವಿಕಲಃ |
ದ್ವೈವರಃ ಷಟ್‌ಪರ ಏವಂ ಹ್ಯಾರೋಹೀ ಹ್ರಾದಮಾನಃ ಸ್ಯಾತ್‌ || ೩೬ ||

ಪಾಠವಿಮರ್ಶೆ : ೩೪೦ಇ ೩೪೧ಆ,ಈ ೨೪೨ಅ-ಈ,ಅ,ಈ ೩೪೩ಆ,ಇ ೨೪೪ಆ,ಇ,ಈ ೩೪೬ಅಆ,ಈ

—-

೩೪೦. ಎದೆಯಲ್ಲಿ (=ಮಂದ್ರಸ್ಥಾನದಲ್ಲಿ) ಮೂರು ಕಲೆಗಳಷ್ಟು (ಕಾಲ) ಕಂಪಿಸುವುದರಿಂದ ಕಂಪಿತ (ವೆನಿಸಿಕೊಳ್ಳುತ್ತದೆ)
ಕಂಠದಲ್ಲಿ (=ಮಧ್ಯಸ್ಥಾನದಲ್ಲಿ) ತಡೆಹಿಡಿದ ಗಾಳಿಯಿಂದ ಕುಹರವೆಂಬುದು ಹುಟ್ಟುತ್ತದೆ.                              27

೩೪೧. ಹೀಗೆಯೇ ಕಲೆಯಲ್ಲಿ (ತಾರಸ್ಥಾನದಲ್ಲಿ) ಮೂರು ಕಲೆಗಳು(=ಳಷ್ಟುಕಾಲ) ಕಂಪಿಸುವುದರಿಂದ ರೇಚಿತವಾಗುತ್ತದೆ ಹಿಂದಕ್ಕೆ ಮುಂದಕ್ಕೆ (ತೂಗಾಡುತ್ತ) ಯಾವುದು ಚಲನೆಯಲ್ಲಿ ತೊಡಗುತ್ತದೋ ಅದನ್ನು ಪ್ರೇಂಖೋಲಿತವೆನ್ನುತ್ತಾರೆ.                     28

೩೪೨. ಯಾವ ಕಂಠಸ್ವರವು (ನೆತ್ತಿಯ?) ಕೆಳಗೆ ಇದೆಯೋ ಅದು ತಾರವೆಂದು ಪ್ರಸಿದ್ದವಾಗಿದೆ. ಇದೇ ರೀತಿಯಲ್ಲಿ ಯಾವುದು (ಅಲಂಕಾರವು) ಎದೆಯಲ್ಲಿ (=ಮಂದ್ರಸ್ಥಾನದಲ್ಲಿ) ಇದೆಯೋ ಅದನ್ನು ಮಂದ್ರವೆಂದೂ ನೆತ್ತಿಯಲ್ಲಿರುವುದನ್ನು ತಾರತರವೆಂದೂ ಸ್ಮರಿಸಿದೆ.        29

೩೪೩. ಕ್ರಮವಾಗಿ ಇಳಿದು ಬಂದ ನಾಲ್ಕನೆಯ ಅಥವಾ ಐದನೆಯ ತಾರಸ್ವರವು ತಾರಮಂದ್ರಪ್ರಸನ್ನವೆಂದೂ ಅದು ಮಂದ್ರಸ್ಥಾಯಿಯಲ್ಲಿದೆಯೆಂದೂ ವಿದ್ವಾಂಸರು ತಿಳಿದುಕೊಳ್ಳಬೇಕು.                                             30

೩೪೪. ಮಂದ್ರ(ಸ್ವರ)ದಿಂದ ಅದರ ಮುಂದೆ ಇರುವವುಗಳನ್ನು ಎಗರಿ(ಸಿ)ಕೊಂಡು ತಾರ(ಸ್ವರ)ವನ್ನು ಕ್ರಮೇಣ ತಲುಬುವುದನ್ನು ವಿದ್ವಾಂಸರು
ಮಂದ್ರತಾರಪ್ರಸನ್ನವೆಂದು ತಿಳಿಯಬೇಕು.                                                                         31

೩೪೫. ಕ್ರಮವಾಗಿ ಒಂದೊಂದು ಸ್ವರವಾಗಿ ಏರುವುದು ಪ್ರಸ್ತಾರವೆಂದು ಹೆಸರಿನದೆಂದು ತಿಳಿಯಬೇಕು. ಪ್ರಸ್ತಾರವು ಸ್ವಲ್ಪ ಸ್ವಲ್ಪವಾಗಿ ಹಿಂತಿರುಗಿ(ಇಳಿ)ದರೆ ಪ್ರಸ್ತಾರವೇ ಪ್ರಸಾದ(ವೆಂಬ ಅಲಂಕಾರ)ವಾಗುತ್ತದೆ                                                       32

೩೪೬. ನಡುವೆ ಅಂತರವಿಲ್ಲದ ಎರಡು ಸ್ವರಗಳಿಂದ (ಒಂದೊಂದು ಕಲೆಯನ್ನಾಗಿಸಿಕೊಂಡು) ಎರಡೆರಡು ಕಲೆಗಳಲ್ಲಿ ಮುನ್ನಡೆದು, ಒಂದು ಕಲೆಯನ್ನು ಏರಿ ಪುನಃ ಒಂದು ಕಲೆಯನ್ನು (ಪ್ರಸಾದಾಲಂಕಾರದ ಹಾಗೆ) ಇಳಿಯುವುದು ದ್ವಾಹಿತ(ವಾಗುತ್ತದೆ).     33

೩೪೭. ಉದ್ವಾಹಿತವೇ (ಅದರ ಕಲೆಗಳನ್ನು) ಎರಡೆರಡು ಸಲ ಉಚ್ಚರಿಸಿದರೆ ಉಪಲೋಲಕವೆಂಬ ಹೆಸರಿನದಾಗುತ್ತದೆ. ಅದೇ ಕ್ರಮವಾಗಿ ಒಂದು, ಎರಡು, ಮೂರು ಸ್ವರಗಳಿಂದ ಮುನ್ನಡೆದರೆ ಕ್ರಮ(ವೆಂಬ ಅಲಂಕಾರವಾಗುತ್ತದೆ) ಎಂದು ತಿಳಿಯಬೇಕು.                34

೩೪೮. ಒಂದು ಸ್ವರದ ಅಂತರವಿರುವ ಸ್ವರವನ್ನೇರಿ ಒಂದೊಂದು ಅಂತರವಿರುವ ಪ್ರತಿಯೊಂದು ಸ್ವರವನ್ನು ಏರಿದರೆ ಆಗುವ ಅಲಂಕಾವನ್ನು ನಿಷ್ಕೂಚಿತವೆಂಬ ಹೆಸರಿನದೆಂದು ತಿಳಿಯಬೇಕು.                                                                                     35

೩೪೯. ಇದೇ ಕ್ರಮವನ್ನು ಯೋಜಿಸಿಕೊಂಡು ಒಂದೊಂದು ಸ್ವರದ ಅಂತರದಿಂದ ಎರಡು ಕಲೆಗಳಲ್ಲಿ ಅವರೋಹಿಸಿ ಕನಿಷ್ಠ ಎರಡರಿಂದ ಆರರವರೆಗೆ ಹೀಗೆಯೇ ಏರುವ ಹ್ರಾದಮಾನವಾಗುತ್ತದೆ.                                                                       36

೩೪೭ಇ

____

೩೫೦.ಅಥ ರಂಜಿತಸ್ತು ಸಮನಂತರಸ್ವರೇ ದ್ವೇ ಕಲೇ ಪುನಃ ಸ್ಥಿತ್ವಾ |
ಅರ್ಧಕಲಾಸಮಾರೋಹೀ ಪುನರೇವ ತಥಾವರೋಹೀ ಸ್ವಾತ್‌ || ೩೭ ||

೩೫೧.ಆವರ್ತಕಶ್ಚತುರ್ಷು ಸ್ವರೇಷು ಸಮನಂತರೇಷು ಸಂಭವತಿ |
ಆರೋಹಣಾವರೋಹಣವಿಧಿನಾ ಚೈಕಾಂತರೇಷ್ವಪಿ ವಾ || ೩೮ ||

೩೫೨.ಜ್ಞೇಯಾ ನಿರಂತರಕೃತಸ್ತ್ವಷ್ಟಕಲಃ ಸಾಂತರಸ್ತಥಾ ಕಾರ್ಯಃ |
ತಜ್ಞೈಃ ಕಲಾಶ್ಚತಸ್ರಸ್ತ್ವಾವೃತ್ತ್ಯಾ[ss]ವರ್ತಕೋ ಭವತಿ || ೩೯ ||

೩೫೩.ಅಧಿರುಹ್ಯ ಸ್ವರಾಂಸ್ತ್ರೀನ್‌ಸ್ವರಾಂತರಂ ಲಂಘಯತಿ ನಿವೃತ್ತೌ |
ಪುನರಪಿ ಚ ಪರಾವೃತ್ತ್ಯಾ ಪರಿವತರ್ಕಕೋsಷ್ಟಕಲೋ ಜ್ಞೇಯಃ || ೪೦ ||

೩೫೪.ಯಸ್ಯ ಸ್ವರಾವತೀತೌ ತಥಾ ಪರಂ ಹ್ಯಂತರಸ್ವರೋ ಭವತಿ |
ಏಕಕಲಶ್ಚ ತಥಾ ಭವೇತ್‌ತದುದ್ಘಟ್ಟಿತೋ ನಿತ್ಯಮ್‌ || ೪೧ ||

೩೫೫.ಅಕ್ಷಿಪ್ತಕಸ್ತ್ರಿಸ್ವರಜಃ ಕರ್ತವ್ಯಃ ಷಡ್‌ವಿಧಃ ಕಲಾಮಾನಃ |
ಏಕಕಲಸ್ತೈಧರಃ ಸ್ಯಾತ್‌ಷಟ್‌ಕಲಿಕೋ ವಾಪರೋ ಜ್ಞೇಯಃ || ೪೨ ||

೩೫೬.ಅಕ್ಷಿಪ್ತವಚ್ಚತುರ್ಭಿಃ ಸ್ವರೈಸ್ತು ಕಾಲೇ ಕಲಾಂತರೋಪೇತೈಃ |
ಏಕಾಂತರಸ್ವರಕ್ರಮ ಇಹ ಗದಿತಃ ಸಂಪ್ರದಾನಸ್ತು || ೪೩ ||

೩೫೭.ದ್ವಿರಪಿ ಗದಿತಂ ಹಸಿತಮಿವೋಚ್ಚಾರಿತಂ ತಥಾ ಹಸಿತಮ್ |
ಸಮನಂತರಸ್ವರಕೃತಂ ಚಾಕ್ಷಿಪ್ತಕಮಿವ ಬುದೈರ್ಜ್ಞೇಯಮ್‌ || ೪೪ ||

ಪಾಠವಿಮರ್ಶೆ :-

—-

೩೫೦. ಆಮೇಲೆ, ಎರಡು (ಅಂತರರಹಿತ) ಸ್ವರಗಳಲ್ಲಿ ಎರಡು ಕಲೆಗಳಷ್ಟು (ಕಾಲ) ನಿಂತು ಅರ್ಧಕಲೆಯಷ್ಟು (ಕಾಲ) ಆರೋಹಿಸಿ ಹಾಗೆಯೇ (ಅರ್ಧಕಲೆಯಷ್ಟು ಕಾಲ) ಅವರೋಹಿಸುವುದು ರಂಜಿತ(ವೆನ್ನಿಸಿಕೊಳ್ಳುತ್ತದೆ.)                                               37

೩೫೧. ಆವರ್ತಕ(ವೆಂಬ ಅಲಂಕಾರ)ವು ಅಂತರವಿಲ್ಲದ ನಾಲ್ಕು ಸ್ವರಗಳಿಂದಲೋ ಒಂದು ಅಂತರವಿರುವ ಸ್ವರದಿಂದಲೋ ಆರೋಹಣ – ಅವರೋಹಣಗಳನ್ನು ಮಾಡುವುದರಿಂದ ಹುಟ್ಟುತ್ತದೆ.                                                                            38

೩೫೨. ಅಥವಾ ಅಂತರವಿಲ್ಲದ ಸ್ವರಗಳಿಂದ ಎಂಟು ಕಲೆಗಳಲ್ಲಿಯಾ ಅಥವಾ ಒಂದೊಂದು ಅಂತರವಿರುವ ಸ್ವರಗಳಿಂದ ನಾಲ್ಕು ಕಲೆಗಳಲ್ಲಿಯೂ ಆವರ್ತಕವು ಹುಟ್ಟುತ್ತದೆ. ಹೀಗೆ (ಪುನಃ ಪುನಃ) ಆವೃತ್ತಿಯಾಗುವುದರಿಂದ (ಇದು) ಆವರ್ತಕ(ವೆಂಬ ಹೆಸರಿನದು) ಎಂದು ತಿಳಿಯಬೇಕು.           39

೩೫೩. ಮೂರು ಸ್ವರಗಳನ್ನು (ಅಂತರವಿಲ್ಲದೆ) ಏರಿ ಮುಂದಿನ ಒಂದು ಸ್ವರವನ್ನು ಎಗರಿ, ಹಿಂತಿರುಗುವಾಗ (ಅವರೋಹಣದಲ್ಲಿ, ವಿನಿಮಯ ಮಾಡಿಕೊಂಡು, ಎಂದರೆ ಆರೊಹಣದ ನಾಲ್ಕನೆಯದನ್ನು ಅವರೋಹಣದ ನಾಲ್ಕನೆಯದಕ್ಕೆ ಅದಲು ಬದಲು ಮಾಡಿಕೊಂಡು), ಪರಿವತವು ಎಂಟು ಕಲೆಗಳಲ್ಲಿ ಆಗುತ್ತದೆಂದು ತಿಳಿಯಬೇಕು.                                                                                              40

೩೫೪. ಎರಡು ಸ್ವರಗಳಾದ ಮೇಲೆ ಒಂದು ಸ್ವರವು ಬಿಟ್ಟು ಹೋಗಿ ಒಂದು ಕಲೆಯ (ಅಲಂಕಾರವಾದರೆ) ಅದು ಯಾವಾಗಲೂ ಉಘಟ್ಟಿತೋವಾಗುತ್ತದೆ.                                                                                                               41

೩೫೫. ಅಕ್ಷಿಪ್ತಕವನ್ನು ಪ್ರತಿಯೊಂದು ಕಲೆಯಲ್ಲೂ ಮೂರು (ಮೂರು) ಸ್ವರಗಳಿಂದ ಹುಟ್ಟುವಂತೆ ರಚಿಸಬೇಕು. ಕಲೆ (ಎಂಬ ಕಾಲದ) ಅಳತೆಯಿಂದಾಗಿ ಅದು ಆರು ವಿಧವಾಗಿದೆ. (ಅವುಗಳಲ್ಲಿ) ಒಂದು ಕಲೆಯಿರುವುದು ಕಡಿಮೆಯದು, ಆರು ಕಲೆಗಳಿರುವುದು ಹೆಚ್ಚಿನದು ಎಂದು ತಿಳಿಯಬೇಕು                                                                                                                                  42

೩೫೬. ಅಕ್ಷಿಪ್ತದ ಹಾಗೆ ಕಾಲ(ಮಾನ)ದಲ್ಲಿ ಬೇರೆ ಕಲೆಗಳನ್ನೊಡಗೂಡಿದ ನಾಲ್ಕು ಸ್ವರಗಳಿಂದ ಒಂದೊಂದು ಸ್ವರವನ್ನು ನಡುವೆ ಬಿಟ್ಟು ನಡೆಯುವದರಿಂದ ಸಂಪ್ರದಾನವಾಗುತ್ತದೆಂದು ಇಲ್ಲಿ ಹೇಳಿದೆ.                                                     43

೩೫೭. ಎರಡು ಸಲ ಎರಡು ಕಲೆಗಳನ್ನು ನಗುವ (?ವಿಸ್ತಾರವಾಗುವ?) ಹಾಗೆ ಉಚ್ಚರಿಸುವುದರಿಂದ ಇದೇ ರೀತಿಯಲ್ಲಿ (ಆಕ್ಷಿಪ್ತಕ, ಆವರ್ತಕ ಎಂಬಂತಹ ಅನ್ವರ್ಥನಾಮಗಳಲ್ಲಿ) ಹಸಿತವೆಂಬುದಾಗುತ್ತದೆ. ಒಂದೊಂದು ಸ್ವರಗಳ ಅಂತರದಿಂದಾಗಿ ಇದು ಆಕ್ಷಿಪ್ತದ ಹಾಗೆ ಇರುತ್ತದೆಂದು ವಿದ್ವಾಂಸರು ತಿಳಿಯಬೇಕು.                                                                                                             44

____

೩೫೮.ಸಮನಂತರಸ್ವರೇಷುಹಸಿತವತ್‌ತ್ರಿಸ್ವರೈಶ್ಚತುಃಸ್ವರೈರ್ವಾಪಿ |
ಆರೋಹತೈಕಕಲೋ ಹುಂಕಾರಾಖ್ಯಃ ಸ ವಿಜ್ಞೇಯಃ || ೪೫ ||

೩೫೯.ಸ್ಥಾನಾಂತರಮಾರುಹ್ಯ ಪ್ರತ್ಯೇತಿ ದ್ವಯಂ ಚತುಷ್ಕಲೇ ಜ್ಞೇಯಃ |
ಕ್ರಮೇಣೋರ್ಧ್ವಪರಿಕ್ಷೇಪಃ ಸ್ವಾತ್‌ಸಂಧಿಪ್ರಚ್ಛಾದನೋ ನಾಮ || ೪೬ ||

೩೬೦.ಆದೌ ಪದಮುಚ್ಚಾರ್ಯ [ತು] ಯತ್ರ ಸ್ಯಾದ್‌ದ್ವಿಸ್ವರೋ ಲಘುವರ್ಣಃ |
ಸಮನಂತರಮಾರೋಹತ್ಯಕಕಲಾಂ ತದ್‌ವಿಧುತಂ ತು || ೪೭ ||

೩೬೧.ಆದಾವಾರೋಹೀ ಸ್ಯಾತ್‌ಪ್ರಸ್ತಾರೋಂsತೇsವರೋಹತೇ ಯತ್ರ |
ಪ್ರಮಾಣತಶ್ಚ ಕಲಾಸು ವದ್ಯಂತಲಂಕಾರಮುದ್ಗೀತಮ್‌ || ೪೮ ||

೩೬೨.ಹುಂಕಾರವದಾರೋಹೇದನಂತರಾಂಸ್ತು ಸ್ವರಾನ್‌ಕಲಾಂತರಯೋಃ |
ದ್ವೌ ದ್ವೌ ಪ್ರಕಂಪಮಾನೌ ತತಶ್ಚ ಪ್ರಸನ್ನೌ ದ್ವೌ || ೪೯ ||

೩೬೩.ವರ್ಣಾಲಂಕಾರವಿಧೌ ವಿಜ್ಞೇಯೋ ಗಾತ್ರವರ್ಣ ಇತ್ಯೇವಮ್‌ |
ಆಕಾರೋಕಾರತಯಾ ದೀರ್ಘಾಕ್ಷರಮನ್ಯದಪಿ ಯೋಜ್ಯಮ್‌ || ೫೦ ||

೩೬೪.ಗೀತಾಲಂಕಾರಣಾ[ಮಲ]ಂಕರಣವಿಧಿರಯಂ ಸಮುದ್ದಿಷ್ಟಃ |
ಏಭಿರಲಂಕರ್ತವ್ಯಾ ಗೀತಿರ್ವರ್ಣಾವಿರೋಧೇನ || ೫೧ ||

೩೬೫.ಸ್ಥಾನೇ ಚಾಲಂಕಾರಂ ಕುರ್ಯಾನ್‌ದ್ಯುರಸಿ ಕಾಂಚಿಂ ಬದ್ನೀಯಾತ್‌ |
ಬಹವೋsಲಂಕಾರಾಃ ಸ್ಯುರ್ವರ್ಣವಿಹೀನಾ [ನ] ಪ್ರಯೋಕ್ತವ್ಯಾಃ || ೫೨ ||

೩೬೬.ಶಶಿವಿರಹಿತೇವ ರಜನೀ ವಿಜಲೇವ ನದೀ ಲತಾ ಹ್ಯಪುಷ್ಟೇವ |
ಅನಲಂಕೃತೇವ ನಾರೀ ಗೀತಿರಲಂಕಾರಹೀನಾ ಸ್ಯಾತ್‌ || ೫೩ ||

೩೬೭.ಅಲಂಕಾರಾಸ್ತ್ರಯಸ್ತ್ರಿಂಶದೇವಮೇತೇ ಮಯೋದಿತಾಃ |
ನೋದಿತಾ ಯೇ ತು ಶೇsಪ್ಯತ್ರ ಪ್ರತ್ಯೇತವ್ಯಾ ಮನೀಷಿಭಿಃ || ೫೪ ||

ಪಾಠವಿಮರ್ಶೆ: ೩೬೫ಆ, ೩೬೬ಈ, ೩೬೭ಇ

—-

೩೫೮. ನಡುವೆ ಅಂತರವಿಲ್ಲದ ಮೂರು ಸ್ವರಗಳಿಂದಲೋ ನಾಲ್ಕು ಸ್ವರಗಳಿಂದಲೋ ಹಸಿತದ ಹಾಗೆ ಒಂದು ಕಲೆಯನ್ನು ನಿರ್ಮಿಸಿಕೊಂಡು ಹುಂಕಾರವೆಂಬ ಹೆಸರಿನದು ಏರುತ್ತದೆ ಎಂದು ತಿಳಿಯಬೇಕು.                                                                     45

೩೫೯. ಸಂಧಿಪ್ರಚ್ಛಾದವು [ನಿರ್ಧಿಷ್ಟ] ಕ್ರಮದಲ್ಲಿ ಸ್ವರಗಳನ್ನು ಎಸೆಯುವುದರಿಂದಾಗುತ್ತದೆ. ಅದು ನಾಲ್ಕು ಕಲೆಗಳದ್ದಾಗಿದ್ದು. ಬೇರೆ ಸ್ಥಾನವನ್ನು ತಲುಪಿ ಎರಡು ಸ್ವರಗಳಿಂದ ಹಿಂತಿರುಗುತ್ತದೆ.                                                                       46

೩೬೦. ಮೊದಲು ಲಘುವರ್ಣ (=ಹ್ರಸ್ವಾಕ್ಷರೋಚ್ಚಾರ)ವಿರುವ ಒಂದು ಪದವನ್ನು ಎರಡು ಸ್ವರಗಳಿರುವಂತೆ ಉಚ್ಚರಿಸಿ ಅಂತರವಿಲ್ಲದಿರುವ (ಸ್ವರವನ್ನು) ಏರಿ (ಅದರಿಂದ) ಒಂದು ಕಲೆಯಾಗುವುದು ವಿಧುತ                                                                47

೩೬೧. ಮೊದಲಲ್ಲಿ ಆರೋಹಿವರ್ಣವಿರುತ್ತದೆ, ಪ್ರಸ್ತಾರದಂತೆ [ನಿಶ್ಚಿತ] ಪ್ರಮಾಣದಿಂದ ಕಲೆಗಳಲ್ಲಿ ನುಡಿಯುವ ಅವರೋಹಣವಿರುತ್ತದೆ; ಇದನ್ನು ಉದ್ಗೀತವೆಂಬ ಅಲಂಕಾರವೆಂದು ಹೇಳಿದೆ.                                                                         48

೩೬೨. ಹುಂಕಾರದಂತೆ ಅಂತರವಿಲ್ಲದ ಸ್ವರಗಳಿಂದ ಏರುತ್ತಿರುವಲ್ಲಿ ಇನ್ನೆರಡು ಕಲೆಗಳಲ್ಲಿ ಪ್ರತಿಯೊಂದೂ ಕಂಪಿಸುತ್ತಿರುವ ಎರಡು ಸ್ವರಗಳಿವೆ. ನಂತರ (ಇದರ) ಕೆಳಗೆ ಬೇರೆ ಎರಡು ಸ್ವರಗಳಿರುತ್ತವೆ.                                                                               49

೩೬೩. ವರ್ಣಾಲಂಕಾರಗಳ ವಿಧಿ(=ಲಕ್ಷಣ)ಯಲ್ಲಿ ಗಾತ್ರವರ್ಣವನ್ನು ಹೀಗೆ ತಿಳಿದುಕೊಳ್ಳಬೇಕು. ಬೇರೆ ಇತರ ದೀರ್ಘಾಕ್ಷರಗಳನ್ನೂ ಆಕಾರ – ಉ(ಓ?)ಕಾರಗಳನ್ನೂ (ಗಾಯನದಲ್ಲಿ) ಸಂಯೋಜಿಸಿಕೊಳ್ಳಬೇಕು.                                                              50

೩೬೪. ಗೀತಾಲಂಕಾರಗಳಲ್ಲಿ ಈ ಸಿಂಗರಿಸುವ (ಪುಷ್ಟಿಗೊಳಿಸುವ) ವಿಧಿಯನ್ನು ವಿವರಿಸಿದ್ದಾಗಿದೆ. ಗೀತೆಯನ್ನು ಇವುಗಳಿಂದ (=ವರ್ಣಾಲಂಕಾರಗಳಿಮದ) ಅದರ (ಮಾತುವಿನ) ವರ್ಣಕ್ಕೆ ವಿರೋಧವಿಲ್ಲದಂತೆ ಸಿಂಗರಿಸಬೇಕು (=ಪುಷ್ಟಿಗೊಳಿಸಬೇಕು).    51

೩೬೫. ಅಲಂಕಾರವನ್ನು (ಅದಕ್ಕೆ ಉಚಿತವಾದ) ಸ್ಥಾನದಲ್ಲಿ(ಯೇ) ಮಾಡ(=ಹಾಡ)ಬೇಕು. ಡಾಬನ್ನು ಎದೆಗೆ ಕಟ್ಟಿಕೊಲ್ಳಬಾರದು. ಅಲಂಕಾರಗಳು ಬಹಳವಾಗಿವೆ. ಆದರೆ ಅವುಗಳನ್ನು ವರ್ಣವಿಲ್ಲದೆ (ಮಾತಿನ ಅಕ್ಷರಾಂಶವಿಲ್ಲದೆ ಅಥವಾ ನಿಯತವಾದ ಗಾನಕ್ರಿಯೆಯ ಮಾದರಿಯಿಲ್ಲದೆ) ಪ್ರಯೋಗಿಸಕೂಡದು.                                                                                                                       52

೩೬೬. (ವರ್ಣ=) ಅಲಂಕಾರವಿಲ್ಲದ ಹಾಡು ಚಂದ್ರನಿಲ್ಲದ ರಾತ್ರಿಯಂತೆ, ನೀರಿಲ್ಲದ ನದಿಯಂತೆ, ಹೂವಿಲ್ಲದ ಬಳ್ಳಿಯಂತೆ, ಸಿಂಗಾರವಿಲ್ಲದ ಹೆಂಗಸಿನಂತೆ.                                                                                                                                  53

೩೬೭. ಈ ಮೂವತ್ತಮೂರು ಅಲಂಕಾರಗಳನ್ನು ನಾನು ಹೀಗೆ ನಿರೂಪಿಸಿದ್ದೇನೆ. ಇಲ್ಲಿ ಹೇಳದೆ ಬಿಟ್ಟವುಗಳನ್ನು ಬುದ್ಧಿವಂತರು (ಲಕ್ಷ್ಯದಿಂದ ಅಥವಾ ಊಹಿಸಿ) ತಿಳಿದುಕೊಳ್ಳಬೇಕು.                                                                                                 54

____

೩೬೮. (ಅ) ತತ್ರ ಪ್ರಸ್ತಾರಾ ಯಥಾ ಷಡ್ಜಾದಿಷು :-                                                                                46

ಸರಿಗಮಪಧನಿಸ                                                                                                        ಪ್ರಸನ್ನಾದಿಃ    (೧)

ಸನಿಧಪಮಗರಿಸ                                                                                                      ಪ್ರಸನ್ನಾಂತಃ    (೨)

ಸರಿಗಮಪಧನಿಸಸನಿಧಪಮಗರಿಸ                                                                             ಪ್ರಸನ್ನಾದ್ಯಂತಃ    (೩)

ಸನಿಧಪಮಗರಿಸ ಸರಿಗಮಪಧನಿಸ                                                                              ಪ್ರಸನ್ನಮಧ್ಯಃ    (೪)

ಸಾ ರೀ ಗಾ ಮಾ ಪಾ ಧಾ ನೀ ಸಾ                                                                                             ಸಮಃ    (೫)

ಸ ಸ ಸ                                                                                                                          ಬಿಂದುಃ    (೬)

ಸ ಸ ಸ                                                                                                            ನಿವೃತ್ತಪ್ರವೃತ್ತಃ    (೭)

ಸರಿಗಮಪಧನಿ ನಿಧಪಮಗರಿಸ                                                                                             ವೇಣುಃ    (೮)

ಸರಿಗಮಪಧನಿಸ                                                                                                              ಕಂಪಿತಃ    (೯)

ಸರಿಗಮಪಧನಿಸ                                                                                                            ಕುಹರಿತಃ  (೧೦)

ಸರಿಗಮಪಧನಿಸ                                                                                                              ರೇಚಿತಃ  (೧೧)

ಸರೀರಿಸಾ, ರಿಗಾಗರೀ, ಗಮಾಮಗಾ, ಮಪಾಪಮಾ, ಪಧಾಧಪಾ, ಧನೀನಿಧಾ, ನಿಸಾಸನೀ          ಪ್ರೇಂಖೋಲಿತಃ(೧೨)

ಸರಿಗಮಪಸ ರಿಗಮಪಧರಿ ಗಮಪಧನಿಗ ಮಪಧನಿಸಮ                                           ತಾರಮಂದ್ರಪ್ರಸನ್ನಃ  (೧೩)

ಸಪಮಗರಿಸ ರಿಧಪಮಗರಿ ಗನಿಧಪಮಗ ಮಸನಿಧಪಮ                                           ಮಂದ್ರತಾರಪ್ರಸನ್ನಃ  (೧೪)

ಸರಿರಿಸ ಸರಿಗಗರಿಸ ಸರಿಗಮಮಗರಿಸ ಸರಿಗಮಪಪಮಗರಿಸ ಸರಿಗಮಪಧಧಪಮಗರಿಸ ಸರಿಗಮಪಧನಿನಿಧಪಮಗರಿಸ ಸರಿಗಮಪಧನಿಸಸನಿಧಪಮಗರಿಸ                                                                                       ಪ್ರಸ್ತಾರಃ (೧೫)

ಪಾಠವಿಮರ್ಶೆ: ೩೬೮ ಅ, (೫), (೬), (೭), (೧೦), (೧೨), (೧೪), (೧೫),

—-

೩೬೮. (ಅ) ಈ ಸಂದರ್ಭದಲ್ಲಿ (ಮೇಲೆ ಹೇಳಿರುವ ವರ್ಣಾಲಂಕಾರಗಳ) ಪ್ರಸ್ತಾರವು ಷಡ್ಜದಿಂದ ಮೊದಲಾಗುವಂತಹವು ಇತ್ಯಾದಿಗಳಲ್ಲಿ ಹೇಗಿದೆಯೆಂದರೆ :-                                                                                                                          46

ಸರಿಗಮಪಧನಿಸ                                                                                                         ಪ್ರಸನ್ನಾದಿ    (೧)

ಸನಿಧಪಮಗರಿಸ                                                                                                        ಪ್ರಸನ್ನಾಂತ    (೨)

ಸರಿಗಮಪಧನಿಸಸನಿಧಪಮಗರಿಸ                                                                              ಪ್ರಸನ್ನಾದ್ಯಂತ    (೩)

ಸನಿಧಪಮಗರಿಸ ಸರಿಗಮಪಧನಿಸ                                                                               ಪ್ರಸನ್ನಮಧ್ಯ    (೪)

ಸಾ ರೀ ಗಾ ಮಾ ಪಾ ಧಾ ನೀ ಸಾ                                                                                              ಸಮ    (೫)

ಸ ಸ ಸ                                                                                                                           ಬಿಂದು    (೬)

ಸ ಸ ಸ                                                                                                              ನಿವೃತ್ತಪ್ರವೃತ್ತ    (೭)

ಸರಿಗಮಪಧನಿ ನಿಧಪಮಗರಿಸ                                                                                              ವೇಣು    (೮)

ಸರಿಗಮಪಧನಿಸ                                                                                                                ಕಂಪಿತ    (೯)

ಸರಿಗಮಪಧನಿಸ                                                                                                             ಕುಹರಿತ  (೧೦)

ಸರಿಗಮಪಧನಿಸ                                                                                                               ರೇಚಿತ  (೧೧)

ಸರೀರಿಸಾ, ರಿಗಾಗರೀ, ಗಮಾಮಗಾ, ಮಪಾಪಮಾ, ಪಧಾಧಪಾ, ಧನೀನಿಧಾ, ನಿಸಾಸನೀ           ಪ್ರೇಂಖೋಲಿತ(೧೨)

ಸರಿಗಮಪಸ ರಿಗಮಪಧರಿ ಗಮಪಧನಿಗ ಮಪಧನಿಸಮ                                            ತಾರಮಂದ್ರಪ್ರಸನ್ನ  (೧೩)

ಸಪಮಗರಿಸ ರಿಧಪಮಗರಿ ಗನಿಧಪಮಗ ಮಸನಿಧಪಮ                                            ಮಂದ್ರತಾರಪ್ರಸನ್ನ  (೧೪)

ಸರಿರಿಸ ಸರಿಗಗರಿಸ ಸರಿಗಮಮಗರಿಸ ಸರಿಗಮಪಪಮಗರಿಸ ಸರಿಗಮಪಧಧಪಮಗರಿಸ ಸರಿಗಮಪಧನಿನಿಧಪಮಗರಿಸ ಸರಿಗಮಪಧನಿಸಸನಿಧಪಮಗರಿಸ                                                                                        ಪ್ರಸ್ತಾರ (೧೫)

____

ಸನಿನಿಸ ಸನಿಧಧನಿಸ ಸನಿಧಪಪಧನಿಸ ಸನಿಧಪಮಮಪಧನಿಸ
[ಸನಿಧಪಮಗಗಮಪಧನಿಸ] ಸನಿಧಪಮಗರಿರಿಗಮಪಧನಿಸ
ಸನಿಧಪಮಗರಿಸಸರಿಗಮಪಧನಿಸ                                                                                        ಪ್ರಸಾದಃ(೧೬)

ಸರಿ ರಿಗ ಗಮ ಮಪ ಪಧ ಧನಿ ನಿಸ ಸನಿ ನಿಧ ಧಪ ಪಮ ಮಗ ಗರಿ ರಿಸ                                     ಉದ್ವಾಹಿತಃ(೧೭)

ಸರಿಸರಿ ರಿಗರಿಗ ಗಮಗಮ ಮಪಮಪ ಪಧಪಧ ಧನಿಧನಿ
ನಿಸನಿಸ ಸನಿಸನಿ ನಿಧನಿಧ ಧಪಧಪ ಪಮಪಮ ಮಗಮಗ
ಗರಿಗರಿ ರಿಸರಿಸ                                                                                                      ಉಪಲೋಲಕಃ(೧೮)

ಸರಿರಿಸ ಸರಿಗಗರಿಸ ಸರಿಗಮಮಗರಿಸ ಸರಿಗಮಪಪಮಗರಿಸ
ಸರಿಗಮಪಧಧಪಮಗರಿಸ ಸರಿಗಮಪಧನಿನಿಧಪಮಗರಿಸ
ಸರಿಗಮಪಧನಿಸಸನಿಧಪಮಗರಿಸ                                                                                            ಕ್ರಮಃ(೧೯)

ಸಗ ರಿಮ ಗಪ ಮಧ ಪನಿ ಧಸ                                                                                       ನಿಷ್ಕೂಜಿತಃ(೨೦)

ಸಧಸಧ ನಿಪನಿಪ ಧಮಧಮ ಪಗಪಗ ಮರಿಮರಿ ಗಸಗಸ                                                     ಹ್ರಾದಮಾನಃ(೨೧)

ಸಾರೀಗರಿ ರೀಗಾಮಗ ಗಾಮಾಪಮ ಮಾಪಾಧಪ ಪಾಧಾನಿಧ ಧಾನೀಸನಿ                                        ರಂಜಿತಃ(೨೨)

ಸರಿಗಮಪಧನಿಸ ಸನಿಧಪಮಗರಿಸ                                                                                      ಆವರ್ತಕಃ(೨೩)

ಸರಿಗಪಪಮಗರಿಸ ರಿಗಮಧಧಪಮರಿ ಗಮಪನಿನಿಧಪಗ
ಮಪಧಸಸನಿಪಮ (ಸನಿಧಮಮಪಧಸ) ನಿಧಪಗಗಮಪನಿ
ಧಪಮರಿರಿಗಮಧ ಪಮಗಸಸರಿಗಪ                                                                                 ಪರಿವರ್ತಕಃ(೨೧)

ಸರಿಮಪಪಮರಿಸ ರಿಗಪಧಧಪಗರಿ ಗಮಧನಿನಿಧಮಗ
ಮಪನಿಸಸನಿಪಮ ಸನಿಪಮಮಪನಿಸ ನಿಧಮಗಗಮಧನಿ
ಧಪಗರಿರಿಪಧ ಪಮರಿಸಸರಿಮಪ                                                                                  ಉದ್ಘಟ್ಟಿತಃ(೨೫)

ಪಾಠವಿಮರ್ಶೆ: ೩೬೮ (೧೬), (೧೯), (೨೦), ೨೪)

—-

ಸನಿನಿಸ ಸನಿಧಧನಿಸ ಸನಿಧಪಪಧನಿಸ ಸನಿಧಪಮಮಪಧನಿಸ
(ಸನಿಧಪಮಗಗಮಪಧನಿಸ) ಸನಿಧಪಮಗರಿರಿಗಮಪಧನಿಸ
ಸನಿಧಪಮಗರಿಸಸರಿಗಮಪಧನಿಸ                                                                                         ಪ್ರಸಾದ(೧೬)

ಸರಿ ರಿಗ ಗಮ ಮಪ ಪಧ ಧನಿ ನಿಸ ಸನಿ ನಿಧ ಧಪ ಪಮ ಮಗ ಗರಿ ರಿಸ                                      ಉದ್ವಾಹಿತ(೧೭)

ಸರಿಸರಿ ರಿಗರಿಗ ಗಮಗಮ ಮಪಮಪ ಪಧಪಧ ಧನಿಧನಿ ನಿಸನಿಸ
ಸನಿಸನಿ ನಿಧನಿಧ ಧಪಧಪ ಪಮಪಮ ಮಗಮಗ
ಗರಿಗರಿ ರಿಸರಿಸ                                                                                                       ಉಪಲೋಲಕ(೧೮)

ಸರಿರಿಸ ಸರಿಗಗರಿಸ ಸರಿಗಮಮಗರಿಸ ಸರಿಗಮಪಪಮಗರಿಸ ಸರಿಗಮಪಧ
ಧಪಮಗರಿಸ ಸರಿಗಮಪಧನಿನಿಧಪಮಗರಿಸ ಸರಿಗಮಪಧನಿಸ
ಸನಿಧಪಮಗರಿಸ                                                                                                                  ಕ್ರಮ(೧೯)

ಸಗ ರಿಮ ಗಪ ಮಧ ಪನಿ ಧಸ                                                                                         ನಿಷ್ಕೂಜಿತ(೨೦)

ಸಧಸಧ ನಿಪನಿಪ ಧಮಧಮ ಪಗಪಗ ಮರಿಮರಿ ಗಸಗಸ                                                      ಹ್ರಾದಮಾನ(೨೧)

ಸಾರೀಗರಿ ರೀಗಾಮಗ ಗಾಮಾಪಮ ಮಾಪಾಧಪ ಪಾಧಾನಿಧ ಧಾನೀಸನಿ                                          ರಂಜಿತ(೨೨)

ಸರಿಗಮಪಧನಿಸ ಸನಿಧಪಮಗರಿಸ                                                                                       ಆವರ್ತಕ(೨೩)

ಸರಿಗಪಪಮಗರಿಸ ರಿಗಮಧಧಪಮರಿ ಗಮಪನಿನಿಧಪಗ
ಮಪಧಸಸನಿಪಮ (ಸನಿಧಮಮಪಧಸ) ನಿಧಪಗಗಮಪನಿ
ಧಪಮರಿರಿಗಮಧ ಪಮಗಸಸರಿಗಪ                                                                                  ಪರಿವರ್ತಕ(೨೧)

ಸರಿಮಪಪಮರಿಸ ರಿಗಪಧಧಪಗರಿ ಗಮಧನಿನಿಧಮಗ ಮಪನಿಸಸನಿಪಮ
ಸನಿಪಮಮಪನಿಸ ನಿಧಮಗಗಮಧನಿ ಧಪಗರಿರಿಪಧ
ಪಮರಿಸಸರಿಮಪ                                                                                                      ಉದ್ಘಟ್ಟಿತ(೨೫)

____

ಸರಿಗ ರಿಗಮ ಗಮಪ ಮಪಧ ಪಧನಿ ಧನಿಸ ಸನಿದ ನಿಧಪ ಧಪಮ ಪಮಗ ಮಗರಿ ಗರಿಸ                 (ಆಕ್ಷಿಪ್ತಕಃ)(೨೬)

ಸಗಮಾ ಮರಿಸಾ, ರಿಮಪಾ ಪಗರೀ, ಗಪಧಾ ಧಮಗಾ, ಮಧನೀ ನಿಪಮಾ, ಪನಿಸಾ ಸಧಪಾ ಧನಿಸಾ | ಸಧಪಾ ಸಧಪಾ ಪನಿಸಾ ನಿಪಮಾ ಮಧನೀ, ಧಮಗಾ ಗಪಧಾ, ಪಗರೀ ರಿಮಪಾ, ಮರಿಸಾ ಸಗಮಾ, ಗರಿಸಾ |                                  ಸಂಪ್ರದಾನಃ | (೨೭)

ಸಗಮ ಮರಿಸ ರಿಮಪ ಪಗರಿ ………..                                                                                      (೨೮)

[ಇತಿ ವರ್ಣಾಲಂಕಾರಪ್ರಕರಣಮ್]