[ತತ್ರ ಸಂಖ್ಯಾ ಉದ್ದೇಶಶ್ಚ]

೩೯೫ (ಅ) ಇದಾನೀಂ ಅವಸರಪ್ರಾಪ್ತಾನಾಂ ಜಾತೀನಾಂ ಉದ್ದೇಶಮಾಹ – ತತ್ರ ಜಾತಯೋSಷ್ಟಾದಶೈವ | (ಆ) ಏತಾಃ ಸರ್ವಾಂಶಭೇದೇನ ಶತಂ ಚತ್ವಾರಿಂಶದಧಿಕಂ ಸಂಖ್ಯಯಾ ಭವಂತಿ |                                                                                                 1

೩೯೬   [ಜಾತಯೋSಷ್ಟಾದಶೇತ್ಯೇವಂ ಬ್ರಹ್ಮಾಣಾಭಿಹಿತಂ ಪುರಾ |
ತಾಸ್ತ್ವಹಂ ವರ್ತಯಿಷ್ಯಾಮಿ ಗ್ರಹಾಂಶಾದಿವಿಭಾಗತಃ] || ೧ ||

[ಪಡ್ಜಗ್ರಾಮಾಶ್ರಿತಾ ಜಾತಯಃ]

೩೯೭   ಪಾಡ್ಜೀ ಚೈವಾರ್ಷಭೀ ಚೈವ ಧೈವತ್ಯಥ ನಿಷಾದಿನೀ |
ಷಡ್ಜೋದೀಚ್ಯವತೀ ಚೈವ ತಥಾ ವೈ ಷಡ್ಜಕೈಶಿಕೀ |
ಷಡ್ಜಮಧ್ಯಾ ತಥಾ ಚೈವ ಷಡ್ಜಗ್ರಾಮಸಮಾಶ್ರಯಾಃ]|| ೨ ||

[ಇತಿ ಸಪ್ತ ಷಡ್ಜಗ್ರಾಮಾಶ್ರಯಾಃ]

[ಮಧ್ಯಮಗ್ರಾಮಾಶ್ರಿತಾ ಜಾತಯಃ]

೩೯೮   ಆತ ಊರ್ಧ್ವಂ ಪ್ರವಕ್ಷ್ಯಾಮಿ ಮಧ್ಯಮಗ್ರಾಮಸಂಶ್ರಿತಾಃ |
ಗಾಂಧಾರೀ ಮಧ್ಯಮಾ ಚೈವ ಪಂಚಮೀ ತಥೈವ ಹಿ || ೩ ||

೩೯೯   ಗಾಂಧಾರೋದೀಚ್ಯವಾ ಚೈವ ತಥಾ ಗಾಂಧಾರಪಂಚಮೀ
ತತಶ್ಚ ರಕ್ತಗಾಂಧಾರೀ ಮಧ್ಯಮೋದೀಚ್ಯವಾ ತಥಾ || ೪ ||

೪೦೦   ಆಂಧ್ರೀ ಚ ನಂದಯತೀ ಚ ಕಾಮಾರವ್ಯಥ ಕೈಶಿಕೀ |
ಏವಮೇಕಾದಶ ಜ್ಞೇಯಾ ಮಧ್ಯಮಗ್ರಾಮಸಂಶ್ರಯಾಃ || ೫ ||

[ಇತ್ಯೇಕಾದರ್ಶ ಮಧ್ಯಮಗ್ರಾಮಾಶ್ರಯಾಃ]

ಪಾಠವಿಮರ್ಶೆ: ೩೯೫ಆ ೩೯೯ಈ ೪೦೦ಅಆ

—-

ಜಾತಿಗಳು

[i ಅವುಗಳ ಸಂಖ್ಯೆ, ಹೆಸರುಗಳ ಪಟ್ಟಿ ಮತ್ತು ಭೇದಗಳು]

[ಜಾತಿಗಳ ಸಂಖ್ಯೆ ಮತ್ತು ಹೆಸರುಗಳ ಪಟ್ಟಿ]

೩೯೫ (ಅ) ಈಗ ಪ್ರಸಂಗಾನುಸಾರವಾಗಿ ಬರುವ ಜಾತಿಗಳ ಹೆಸರುಗಳ ಸಂಗ್ರಹವನ್ನು [ಗ್ರಂಥಕಾರನು] ಹೇಳಿದನು (=ಹೇಳುತ್ತಾನೆ)- ಈ ಪ್ರಸಂಗದಲ್ಲಿ <ತತ್ರ>ಜಾತಿಗಳು (ಇರುವುದು) ಹದಿನೆಂಟೇ. (ಆ) ಅಂಶ(ಸ್ವರದ) ಎಲ್ಲಾ ಭೇದಗಳನ್ನೂ ಸೇರಿಸುವುದರಿಂದ ಅವು ನೂರನಲವತ್ತು ಸಂಖ್ಯೆಯಷ್ಟು ಆಗುತ್ತವೆ.                                                                                                                                        1

೩೬೯ [ಜಾತಿಗಳು ಹದಿನೆಂಟೇ (ಇವೆ) ಎಂದು ಬ್ರಹ್ಮನು ಹಿಂದೆ ಹೇಳಿದನು. ಅವುಗಳನ್ನು ಗ್ರಹ, ಅಂಶ ಎಂದು ಮುಂತಾಗಿ ವಿಂಗಡಿಸಿಕೊಂಡು ನಾನು ಈಗ ಪ್ರಚುರಪಡಿಸುತ್ತೇನೆ.] (ನಾ. ಶಾ.೨೮.೩೯:೩೫)                                                                                    ೧

[ಷಡ್ಜಗ್ರಾಮವನ್ನು ಆಶ್ರಯಿಸಿರುವ ಜಾತಿಗಳು]

೩೯೭ ಷಾಡ್ಜೀ, ಆರ್ಷಭೀ, ಧೈವತೀ, ಆಮೇಲೆ ನಿಷಾದಿನೀ, ಷಡ್ಜೋದೀಚ್ಯವತೀ, ಅಂತೆಯೇ ಷಡ್ಜಕೈಶಿಕೀ, ಷಡ್ಜಮಧ್ಯಾ ಹಾಗೆಯೇ ಷಡ್ಜಮಧ್ಯಾಗಳು ಷಡ್ಜಗ್ರಾಮವನ್ನು ಆಶ್ರಯಿಸಿವೆ. (ನಾ ಶಾ. ೨೮. ೪೦-೪೧ಅಆ : ೩೬)                                       ೨

[ಈ ಏಳೂ ಷಡ್ಜಗ್ರಾಮವನ್ನು ಆಶ್ರಯಿಸಿರುವ ಜಾತಿಗಳು]

[ಮಧ್ಯಮಗ್ರಾಮವನ್ನು ಆಶ್ರಯಿಸಿರುವ ಜಾತಿಗಳು]

೩೯೮ ಇನ್ನು ಮುಂದೆ ಮಧ್ಯಮಗ್ರಾಮವನ್ನು ಆಶ್ರಯಿಸಿರುವವು (-ವ ಜಾತಿ)ಗಳನ್ನು ಹೇಳುತ್ತೇನೆ: ಗಾಂಧಾರೀ, ಮಧ್ಯಮಾ, ಹಾಗೆಯೇ ಪಂಚಮೀ,           ೩

೩೯೯ ಗಾಂಧಾರೋದೀಚ್ಯವಾ, ಅಂತೆಯೇ ಗಾಂಧಾರಪಂಚಮೀ, ನಂತರ ರಕ್ತಗಾಂಧಾರೀ, ಹಾಗೆಯೇ ಮಧ್ಯಮೋದೀಚ್ಯವಾ, (ಹೋಲಿಸಿ:ನಾ ಶಾ. ೨೮. ೪೩:೩೬)                                                                                                                                          ೪

೪೦೦ ಆಂಧ್ರೀ, ನಂದಯಂತೀ, ಕರ್ಮಾರವೀ, ನಂತರ ಕೈಶಿಕೀ-ಹೀಗೆ ಹನ್ನೊಂದು ಜಾತಿಗಳು ಮಧ್ಯಮಗ್ರಾಮಕ್ಕೆ ಸೇರಿದವುಗಳೆಂದು ತಿಳಿಯಬೇಕು.           ೫

[ಹೀಗೆ ಮಧ್ಯಮಗ್ರಾಮವನ್ನು ಆಶ್ರಯಿಸಿರುವ ಹನ್ನೊಂದು ಜಾತಿಗಳು]

____

[ಸಾಧಾರಣಕೃತಾ ಜಾತಯಃ]

೪೦೧   ಸಾಧಾರಣಕೃತಾಸ್ತಿಸ್ರೋ ವಿಜ್ಞೇಯಾ ಜಾತಯೋ ಬುದೈಃ |
ಮಧ್ಯಮಾ ಪಂಚಮೀ ಚೈವ ತಥಾ ವೈ ಷಡ್ಜಮಧ್ಯಮಾ || ೬ ||

[ಇತಿ ಸಂಖ್ಯಾ, ಉದ್ದೇಶಶ್ಚ]