೪೦೨ (ಅ) ಆಭ್ಯೋSಷ್ಟಾದಶಜಾತಿಭ್ಯಃ ಸಪ್ತಸ್ವರಾಖ್ಯಾಶ್ಚೋಕ್ತಾ ದ್ವಿಧಾ ಶುದ್ಧಾ ವಿಕೃತಾಶ್ಚೇತಿ | (ಆ) ತತ್ರ ಶುದ್ಧಾ ಅನ್ಯೂನಸ್ವರಾಃ ಸ್ವಸ್ವರಾಂಶಗ್ರಹನ್ಯಾಸಾಪನ್ಯಾಸಾಶ್ಚ | (ಇ) ಏಭ್ಯೋ ಲಕ್ಷಣೇಭ್ಯೋSನ್ಯತಮೇನ ದ್ವಾಭ್ಯಾಂ ಬಹುಭಿರ್ವಾ ಲಕ್ಷಣೈರ್ವಿಕೃತಿಮುಪಾಗತಾ ನ್ಯಾಸವರ್ಜಂ ವಿಕೃತಸಂಜ್ಞಾ ಭವಂತಿ | 2
೪೦೩ (ಅ) ತತ್ರ ನ್ಯಾಸವಿಧಿಮಾಹ-ತತ್ರ ನ್ಯಾಸವಿಧೌ ಯಾ ಜಾತಯಃ ಶುದ್ಧಾಃ, ತಾಸು ನಾಮಕಾರೀ ಯೋ ನ್ಯಾಸಃ [ಸ] ನಿಯಮೇನ ಮಂದ್ರೋ ಭವತಿ | (ಆ) ವಿಕೃತಾಸು ಚ ನಾಮಕಾರೀ [ನ್ಯಾಸಃ] ತಾರೋ ವಾ ಮಂದ್ರೋ ವಾ ಭವತೀತ್ಯನಿಯಮಃ 3
೪೦೪ (ಅ) ತತ್ರ ಶುದ್ಧಾನಾಂ ಜಾತೀನಾಂ ಶುದ್ಧತ್ವಂ ವಿಕೃತತ್ವಂ ಚ ರೂಪದ್ವಯಮಸ್ತಿ | (ಆ) ಏಕಾದಶಾನಾಂ ಜಾತೀನಾಂ ವಿಕೃತೋದ್ಭವತ್ವಾದ್ ವಿಕೃತತ್ವಮೇವ ರೂಪಂ ಭವತಿ, ನ ತು ಶುದ್ಧಮಿತಿ | ಕುತ ಏತತ್? (ಇ) ತಾ ಹಿ ಪರಸ್ಪರಸಂಸರ್ಗಾಜ್ಜಾಯಂತೇ | (ಈ)ತಥಾ ಚಾಹ ಭರತಃ- 4
೪೦೫ “ಶುದ್ಧಾ ವಿಕೃತಾಶ್ಚೈವ ಹಿ ಸಮವಾಯಾಜ್ಜಾತಯಸ್ತು ಜಾಯಂತೇ |
ಪುನರೇವಾಶುದ್ಧಕೃತಾ ಭವಂತ್ಯಥೈಕಾದರ್ಶ ಪರಾಸ್ತು” 5
೪೦೬ ತಾಸಾಂ ಯಾಸ್ತು ನಿರ್ವೃತ್ತಾಃ ಸ್ವರೇಷ್ವಥಾಂಶೇಷು ಹಾನಿಷು ಚ |
ಜಾತೀಸ್ತಾ ವಕ್ಷ್ಯಾಮಃ ಸಂಕ್ಷೇಪೇಣ ಕ್ರಮೇಣ ಚೈವಾತ್ರ || ೭||
—
ಪಾಠ ವಿಮರ್ಶೆ: ೪೦೧ಇ ೪೦೨ಆ ಇ ೪೦೪ಆ, ಅ-ಈ ೪೦೫ಆಇ ೪೦೬ಅಆ
—-
[ಸಾಧಾರಣವನ್ನಾಗಿ ಮಾಡಿದ ಜಾತಿಗಳು]
೪೦೧ ಮಧ್ಯಮಾ, ಪಂಚಮೀ, ಹಾಗೆಯೇ ಷಡ್ಜಮಧ್ಯಮಾ – ಈ ಮೂರೂ ಸಾಧಾರಣವನ್ನಾಗಿ ಮಾಡಿದ ಜಾತಿಗಳು ಎಂದು ವಿದ್ವಾಂಸರು ತಿಳಿಯಬೇಕು. (ಹೋಲಿಸಿ: ನಾಶಾ.೨೮.೩೭:೩೫) ೬
[ಹೀಗೆ ಜಾತಿಗಳ ಸಂಖ್ಯೆ ಮತ್ತು ಹೆಸರುಗಳ ಪಟ್ಟಿ]
[ii ಶುದ್ಧ, ವಿಕೃತ ಮತ್ತು ಬೆರಕೆಯಿಂದ ವಿಕೃತವಾದ ಜಾತಿಗಳು]
೪೦೨ (ಅ) ಈ ಹದಿನೆಂಟು ಜಾತಿಗಳ ಪೈಕಿ ಏಳೂ ಸ್ವರಗಳ ಹೆಸರುಗಳನ್ನುಳ್ಳವುಗಳು ಶುದ್ಧ, ವಿಕೃತವೆಂದು ಎರಡು ಬಗೆ. (ಆ) ಅವುಗಳಲ್ಲಿ ಶುದ್ಧ (ಜಾತಿ)ಗಳು ಯಾವುದೂ ಲೋಪವಿಲ್ಲದಿರುವ (=ಪೂರ್ಣವಾಗಿರುವ)ಸ್ವರಗಳನ್ನುಳ್ಳವುಗಳು; ತನ್ನದೇ (ಹೆಸರಿನ) ಸ್ವರವನ್ನು ಗ್ರಹ, ನ್ಯಾಸ ಮತ್ತು ಅಪನ್ಯಾಸಗಳನ್ನಾಗಿ ಹೊಂದಿರುವುಗಳು. (ಇ) ಈ (ಅನೇಕ) ಲಕ್ಷಣಗಳಲ್ಲಿ ಯಾವುದಾದರೂ ಎರಡು ಅಥವಾ ಹೆಚ್ಚು ಲಕ್ಷಣಗಳಲ್ಲಿ-ನ್ಯಾಸ (ಲಕ್ಷಣ)ವೊಂದರ ಹೊರತು-ವಿಕೃತಿಯನ್ನು ಪಡೆದರೆ (ಅಂತಹ ಜಾತಿಗಳು) ವಿಕೃತವೆಂಬ ಹೆಸರನ್ನು ಪಡೆಯುತ್ತವೆ. 2
೪೦೩ (ಅ) ಈ ಸಂದರ್ಭದಲ್ಲಿ (ಗ್ರಂಥಕಾರನು) ನ್ಯಾಸವಿಧಿಯನ್ನು ಹೇಳಿದನು (=ಹೇಳುತ್ತಾನೆ)-ನ್ಯಾಸವನ್ನು ವಿಧಿಸುವೆಡೆಯಲ್ಲಿ ಯಾವ ಜಾತಿಗಳು ಶುದ್ಧವಾಗಿವೆಯೋ ಅವುಗಳಲ್ಲಿ (ಆಯಾ) ಹೆಸರನ್ನು ಉಂಟುಮಾಡುವುದು ಯಾವಸ್ವರವೋ ನ್ಯಾಸ; (ಅದು) ಮಂದ್ರ [ಸ್ವರ]ವೂ ಆಗಿರುತ್ತದೆಂಬುದು ನಿಯಮ. (ಆ) ವಿಕೃತ (-ಜಾತಿ-)ಗಳಲ್ಲಿ (ಆಯಾ) ಹೆಸರನ್ನುಂಟು ಮಾಡುವುದು (-ವ ಸ್ವರವು) ತಾರ (-ಸ್ಥಾಯಿಸ್ವರ-) ವೋ ಅಥವಾ ಮಂದ್ರ (-ಸ್ಥಾಯಿಸ್ವರ-) ವೋ ಆಗಿರಬೇಕು ಎಂಬ ನಿಯಮವಿಲ್ಲ. 3
೪೦೪ (ಅ) ಇವುಗಳ ಪೈಕಿ ಶುದ್ಧಾಜಾತಿಗಳಲ್ಲಿ ರೂಪವು ಬದಲಾಗದೆ (=ತಾನು ಇದ್ದಂತೆಯೇ) ಇರುವುದು (ಶುದ್ಧ); ಬದಲಾಗಿರುವುದು <ವಿಕೃತ> ಎಂದು ಎರಡು ವಿಧವುಂಟು. (ಆ) ಹನ್ನೊಂದು ಜಾತಿಗಳು (ಶುದ್ಧಜಾತಿಗಳ) ವಿಕೃತ (ರೂಪ)ಗಳಿಂದ ಹುಟ್ಟಿರುವ ಕಾರಣ ಅವುಗಳ ರೂಪವು ಬದಲಾಯಿಸಿದ್ದೇ ಆಗಿರುತ್ತದೆ, ಶುದ್ಧವಾದದ್ದಲ್ಲ. ಇದು ಏಕೆ (=ಹೀಗೆ)? ಅವು ಒಂದರಲ್ಲೊಂದು ಕಲಬೆರಕೆಯಾಗಿರುತ್ತವೆ. (ಈ ವಿಷಯದಲ್ಲಿ) ಭರತನು ಹೀಗೆ ಹೇಳುತ್ತಾನೆ- 4
೪೦೫ ‘ಶುದ್ಧ(ದ) ವಿಕೃತ ಜಾತಿಗಳು ಪರಸ್ಪರ ಕೂಡಿಕೊಂಡೇ (ಬೆರಕೆಯಾಗಿ ಇರುವದರಿಂದ, ನಿತ್ಯಸಂಬಂಧದಿಂದ, ಎಂದರೆ ನಾಮಸ್ವರಗಳಲ್ಲದವುಗಳು ಗ್ರಹ, ಅಂಶ, ನ್ಯಾಸಗಳಾಗುವುದರಿಂದ) ಹುಟ್ಟುತ್ತವೆ. ಇವಲ್ಲದೆ ಮತ್ತೆ ಬೇರೆ ಹನ್ನೊಂದು (ಜಾತಿಗಳು) ವಿಕೃತವಾಗಿ ಮಾಡಲ್ಪಟ್ಟು (ಯಾವಾಗಲೂ) ವಿಕೃತ (ರೂಪ)ವಾಗಿಯೇ ಇರುತ್ತವೆ. (ನಾಶಾ. ೨೮. ೪೬: ೩೭) 5
೪೦೬ ಆ ಜಾತಿಗಳಲ್ಲಿ ಯಾವುವು ಅಂಶಸ್ವರಗಳಲ್ಲಿ ಮತ್ತು ಲೋಪವಾಗಬೇಕಾದವುಗಳಲ್ಲಿ (ಇತ್ಯಾದಿಗಳಿಂದ) ರೂಪಸಿದ್ಧಿಯನ್ನು ಪಡೆದಿವೆಯೋ <ನಿರ್ವೃತ್ತಾಃ> ಅವುಗಳನ್ನು ಈಗ ಕ್ರಮವಾಗಿಯೂ ಸಂಕ್ಷೇಪವಾಗಿಯೂ ಇಲ್ಲಿ ಹೇಳುತ್ತೇವೆ. ೭
____
೪೦೭ ಷಡ್ಜಾಯಾ ಮಧ್ಯಮಾಯಾಶ್ಚ ಸಂಸರ್ಗಾತ್ಷಡ್ಜಮಧ್ಯಮಾ |
ಷಾಡ್ಜಯಾಶ್ಚೈವ ಗಾಂಧಾರ್ಯಾ ಜಾಯತೇ ಷಡ್ಜಕೈಶಿಕೀ || ೮ ||
೪೦೮ ತಯೋರೇವ ಸಧೈವತ್ಯೋಃ ಷಡ್ಜೋದೀಚ್ಯವತೀ ಭವೇತ್ |
ಆಸಾಂ ಸಮಧ್ಯಮಾನಾಂ ತು ಗಾಂಧಾರೋದೀಚ್ಯವಾ ಭವೇತ್ | || ೯ ||
೪೦೯ ಗಾಂಧಾರ್ಯಾ ಮಧ್ಯಮಾಯಾಶ್ಚ ಪಂಚಮ್ಯಾಶ್ಚೈವ ಸಂಕರಾತ್ || ೧೦ ||
ಸಧೈವತೀನಾಮಾಸಾಂ ತು ಮಧ್ಯಮೋದೀಚ್ಯವಾ ಭವೇತ್ |
ಆಸಾಂ ಸ್ಯಾದ್ರಕ್ತಗಾಂಧಾರೀ ನೈಷಾದೀ ಚೇಚ್ಛತುರ್ಥಿಕಾ || ೧೧ ||
೪೧೦ ಆರ್ಷಭ್ಯಾಸ್ತು ಭವೇದಾಂಧ್ರೀ ಗಾಂಧಾರ್ಯಾಶ್ವೈವ ಸಂಕರಾತ್ |
ಅನಯೋಸ್ತು ಸಪಂಚಮ್ಯೋರ್ನಂದಯಂತೀ ಪ್ರಜಾಯತೇ || ೧೨ ||
೪೧೧ ಸನಿಷಾದಾಸ್ತ್ವಗಾಂಧಾರ್ಯಾಃ ಕುರ್ಯುಃ ಕಾರ್ಮಾರವೀಂ ಇಮಾಃ |
ಗಾಂಧಾರೀ ಪಂಚಮೀ ಚೈವ ತಾಭ್ಯಾಂ ಗಾಂಧಾರಪಂಚಮೀ ||
ಆರ್ಷಭೀದೈವತೀವರ್ಜ್ಯಾಃ ಕೈಶಿಕೀಮಿತಿ ಸಂಕರಾಃ || ೧೩ ||
೪೧೨ ಇದಾನೀಂ ವಿಭಾಗಮಾಹುಃ – 6
೪೧೩ ಚತಸ್ರೋ ಜಾತಯೋ ನಿತ್ಯಂ ಜ್ಞೇಯಾಃ ಸಪ್ತಸ್ವರಾ ಬುಧೈಃ |
ಚತಸ್ರಃ ಷಟ್ಸ್ವರಾಶ್ಚಾನ್ಯಾ ಪಂಚಸ್ವರಾಃ ಸ್ಮೃತಾಃ || ೧೪ ||
೪೧೪ ಏಕದೇವ ಸ್ಫುಟಂ ಭವತಿ- 7
೪೧೫ ಮಧ್ಯಮೋದೀಚ್ಯವಾ ಚೈವ ತಥಾ ವೈ ಷಡ್ಜಕೈಶಿಕೀ |
ಕಾರ್ಮಾರವೀ ಚ ಸಂಪೂರ್ಣಾ ತಥಾ ಗಾಂಧಾರಪಂಚಮೀ || ೧೫ ||
೪೧೬ ಷಾಡ್ಚಾಂಧ್ರೀ ನಂದಯಂತೀ ಚ ಗಾಂಧಾರೋದೀಚ್ಯವಾ ತಥಾ |
ಚತಸ್ರಃ ಷಟ್ಸ್ವರಾ ಹ್ಯೇತಾ ಜ್ಞೇಯಾಃ ಪಂಚಸ್ವರಾಃ ಪರಾಃ || ೧೬ ||
—
ಪಾಠ ವಿಮರ್ಶೆ: ೪೦೭ಅ ೪೧೧ಊ ೪೦೭ಇ ೪೦೮ಅ ೪೦೯ಆ ೪೧೦ಅ ೪೧೧ಅಈ ೪೧೩ಆ ೪೧೬ಆ,ಈ
—-
೪೦೭ ಷಡ್ಜಾದ(=ಷಾಡ್ಜೀಯ) ಮತ್ತು ಮಧ್ಯಮಾ (ಜಾತಿ)ದ ನಿಕಟ ಸಮ್ಮಿಶ್ರದಿಂದ ಷಡ್ಜಮಧ್ಯಮಾ (ಜಾತಿಯು ಹುಟ್ಟುತ್ತದೆ). ಷಡ್ಜಾದ (=ಪಾಡ್ಜೀಯ) ಮತ್ತು ಗಾಂಧಾರೀಯ [-ಜಾತೀಯ ಸಮ್ಮಿಶ್ರಣದಿಂದ] ಷಡ್ಜಕೈಶಿಕೀ (ಜಾತಿಯು) ಹುಟ್ಟುತ್ತದೆ. ೮
೪೦೮ ಧೈವತೀಯನ್ನು ಕೂಡಿಕೊಂಡ ಅವುಗಳಿಂದಲೇ ಗಾಂಧಾರೋದೀಚ್ಯವಾ ಆಗುತ್ತದೆ.
ಮಧ್ಯಮಸಹಿತವಾದ ಅವುಗಳಿಂದಲೇ ಗಾಂಧಾರೋದೀಚ್ಯವಾ ಆಗುತ್ತದೆ. ೯
೪೦೯ ಗಾಂಧಾರಿಯ, ಮಧ್ಯಮಾದ, ಪಂಚಮೀಯ ಧೈವತೀಸಹಿತವಾದ, (ಇವುಗಳ) ಕಲಬೆರಕೆಯಿಂದ ಮಧ್ಯಮೋದೀಚ್ಯವಾ ಆಗುತ್ತದೆ. ೧೦
(ಗಾಂಧಾರೀ, ಮಧ್ಯಮಾ, ಪಂಚಮೀ) ಇವುಗಳಿಂದಲೇ, ನಿಷಾದಿನಿಯು ನಾಲ್ಕನೆಯದಾಗಿ ಕೂಡಿಕೊಂಡರೆ ರಕ್ತಗಾಂಧಾರೀ ಆಗುತ್ತದೆ. ೧೧
೪೧೦ ಆರ್ಷಭೀಯ ಮತ್ತು ಗಾಂಧಾರೀಯ ಕಲಬೆರಕೆಯಿಂದ ಆಂಧ್ರೀ ಹುಟ್ಟುತ್ತದೆ. (ಆರ್ಷಭೀ ಮತ್ತು ಗಾಂಧಾರೀ ಎಂಬ)ಇವೆರಡೇ ಪಂಚಮೀಯನ್ನು (ಕೂಡಿಕೊಂಡರೆ) ನಂದಯಂತೀ ಹುಟ್ಟುತ್ತದೆ. ೧೨
೪೧೧ (ಆರ್ಷಭೀ ಮತ್ತು ಗಾಂಧಾರೀ ಎಂಬ) ಇವೆರಡೇ ಗಾಂಧಾರಿಯನ್ನು ಬಿಟ್ಟು, ನಿಷಾದಾ (=ನಿಷಾದಿನೀ, ನೈಷಾದೀ)ವನ್ನು ಕೂಡಿಕೊಂಡು ಕಾರ್ಮಾರವೀಯನ್ನು ನಿರ್ಮಿಸುತ್ತವೆ; ಗಾಂಧಾರೀ, ಪಂಚಮೀಗಳೆರಡರಿಂದಲೇ ಗಾಂಧಾರಪಂಚಮೀ (ಆಗುತ್ತದೆ). (ನಾಮಸ್ವರಕಗಳಾದ ಏಳು ಶುದ್ಧಾಜಾತಿಗಳ ಪೈಕಿ) ಆರ್ಷಭೀ, ಧೈವತೀಗಳನ್ನು ಬಿಟ್ಟು (ಉಳಿದ ಐದು) ಕೈಶಿಕೀಯನ್ನು (ನಿರ್ಮಿಸುತ್ತವೆ). ಹೀಗೆ ಸಂಕರ (ಜಾತಿ)ಗಳು (-ಗಳನ್ನು ನಿರೂಪಿಸಲಾಯಿತು) ೧೩
೪೧೨ ಈಗ ಇವುಗಳ ವಿಭಾಗಗಳನ್ನು (ಗ್ರಂಥಕಾರರು) ಹೇಳುತ್ತಾರೆ- 6
೪೧೩ ನಾಲ್ಕು ಜಾತಿಗಳು ಯಾವಾಗಲೂ ಏಳು ಸ್ವರಗಳನ್ನುಳ್ಳವು (-ಸಂಪೂರ್ಣ)ಗಳೆಂದು ವಿದ್ವಾಂಸರು ತಿಳಿಯಬೇಕು. ನಾಲ್ಕು [ಜಾತಿಗಳು] (ಪ್ರತಿಯೊಂದೂ) ಆರು ಸ್ವರಗಳನ್ನುಳ್ಳವುಗಳೆಂದೂ ಉಳಿದವು ಹತ್ತು (ಪ್ರತಿಯೊಂದೂ) ಐದು ಸ್ವರಗಳನ್ನುಳ್ಳವುಗಳೆಂದೂ ಸ್ಮರಿಸಲಾಗಿದೆ. ೧೪
೪೧೪ ಇದೇ (ಈಗ ಇನ್ನಷ್ಟು) ಸ್ಪಷ್ಟವಾಗಲಿದೆ- 7
೪೧೫ ಮಧ್ಯಮೋದೀಚ್ಯವಾ, ಹಾಗೆಯೇ ಷಡ್ಜಾಕೈಶಿಕೀ ಮತ್ತು ಕಾರ್ಮಾರವೀ, ಅಂತೆಯೇ ಗಾಂಧಾರಪಂಚಮೀಗಳು ಸಂಪೂರ್ಣ [ಜಾತಿ]ಗಳು. ೧೫
೪೧೬ ಷಾಡ್ಜೀ, ಆಂಧ್ರೀ, ನಂದಯಂತೀ, ಹಾಗೆಯೇ ಗಾಂಧಾರೋದೀಚ್ಯವಾ – ಈ ನಾಲ್ಕೂ (ಆರು)ಆರು ಸ್ವರಗಳನ್ನುಳ್ಳವುಗಳೆಂದು ತಿಳಿಯಬೇಕು. ಉಳಿದವುಗಳು ಐದು ಸ್ವರಗಳನ್ನುಳ್ಳವುಗಳು. ೧೬
—
೪೧೮ಈ ೪೧೩ಇ, ಇಈ
____
೪೧೭ ನಿಷಾದವತ್ಯಾರ್ಷಭೀ ಚ ಧೈವತೀ ಷಡ್ಜಮಧ್ಯಮಾ |
ಷಡ್ಜೋದೀಚ್ಯವತೀ ಚೈವ ಪಂಚ ಷಡ್ಜಾಶ್ರಿತಾಃ ಸ್ಮೃತಾಃ || ೧೭ ||
೪೧೮ ಗಾಂಧಾರೀ ರಕ್ತಗಾಂಧಾರೀ ಮಧ್ಯಮಾ ಪಂಚಮೀ ತಥಾ |
ಕೈಶಿಕೀ ಚೇತಿ ವಿಜ್ಞೇಯಾಃ ಪಂಚೈತಾ ಮಧ್ಯಮಾಶ್ರಿತಾಃ || ೧೮ ||
೪೧೯ ಷಡ್ಜಗ್ರಾಮೇ ತು ವಿಜ್ಞೇಯಾ [ಸಂಪೂರ್ಣಾ ಷಡ್ಜಕೈಶಿಕೀ |
ಷಟ್ಸ್ವರಾ ಚೈವ ವಿಜ್ಞೇಯಾ ಷಾಡ್ಜೀ ಗಾಂಧಾರ(!ರಾ-) ಯೋಗತಃ || ೧೯ ||
೪೨೦ ಸಂಪೂರ್ಣಾ ಮಧ್ಯಮಗ್ರಾಮೇ ಜ್ಞೇಯಾ ಕಾರ್ಮಾರವೀ ತಥಾ |
ಗಾಂಧಾರಪಂಚಮೀ ಚೈವ ಮಧ್ಯಮೋದೀಚ್ಯವಾ ತಥಾ || ೨೦ ||
೪೨೧ ಪುನಶ್ಚ ಷಟ್ಸ್ವರಾ ಜ್ಞೇಯಾ] ಗಾಂಧಾರೋದೀಚ್ಯವಾ ಬುಧೈಃ |
ಆಂಧ್ರೀ ಚ ನಂದಯಂತೀ ಚ ಮಧ್ಯಮಗ್ರಾಮಸಂಶ್ರಯಾಃ || ೨೧ ||
೪೨೨ ಏವಮೇತೇ ಬುಧೈರ್ಜ್ಞೇಯಾ ದ್ವೈಗ್ರಾಮಿಕ್ಯೋ ವಿಭಾಗತಃ |
ಯಾಸ್ತಾಃ ಸಪ್ತಸ್ವರಾ ಜ್ಞೇಯಾ ಯಾಶ್ಚೈತಾಃ ಷಟ್ಸ್ವರಾಃ ಸ್ಮೃತಾಃ ||
ಕ್ವಚಿತ್ಷಾಡವಿತಾಸ್ತಾಸು ಪಕ್ಷೇ ಚೌಡುವಿತೀಕೃತಾಃ || ೨೨ ||
[ಇತಿ ಶುದ್ಧಾಃ ವಿಕೃತಾಃ ಸಂಸರ್ಗಜಾ ವಿಕೃತಾಶ್ಚ ||]
Leave A Comment