೪೨೩ (ಅ) ಇದಾನೀಂ [ಸಾಮಾನ್ಯ]ಲಕ್ಷಣಮಾಹ-                                                                                        8

೪೨೪ (ಆ) ಶ್ರುತಿಗ್ರಹಸ್ವರಾದಿಸಮೂಹಾಜ್ಜಾಯಂತ ಅತೋ ಜಾತಯ ಇತ್ಯುಚ್ಯಂತೇ | (ಆ)ಯಸ್ಮಾಚ್ಚಾಯತೇ ರಸಪ್ರತೀತಿರಾರಭ್ಯತೇ [ವಾ] ಇತಿ ಜಾತಯಃ | (ಇ) ಅಥವಾ ಸಕಲಸ್ಯರಾಗಾದೇರ್ಜನ್ಮಹೇತುತ್ವಾಚ್ಚಾತಯ ಇತಿ | (ಈ)ಯದ್ವಾ ಚಾತಯ ಇವ ಚಾತಯಃ | (ಉ)ಯಥಾ ನರಾಣಾಂ ಬ್ರಾಹ್ಮಣತ್ವಾದಯೋ ಚಾತಯಃ ಶುದ್ಧಾ ವಿಕೃತಾಶ್ಚೈವಮೇತಾ ಅಪೀತಿ ಚಾಶಯಃ |                                         9

ಪಾಠವಿಮರ್ಶೆ: ೪೧೭ಆ,ಈ ೪೧೮ಈ ೪೧೯ಅ-೪೨೦ಆ ೪೨೧ಆ ೪೨೨ಆ ೪೨೪ಅ-ಊ,ಆ,ಈ,ಊ

—-

೪೧೭ ನಿಷಾದವತೀ, ಆರ್ಷಭೀ, ಧೈವತೀ, ಷಡ್ಜಮಧ್ಯಮಾ ಮತ್ತು ಷಡ್ಜೋದೀಚ್ಯವತೀ ಎಂಬ (ಐದು ಸ್ವರಗಳನ್ನುಳ್ಳ) ಐದು [ಜಾತಿಗಳು] ಷಡ್ಜ[ಗ್ರಾಮ]ವನ್ನು ಆಶ್ರಯಿಸಿವೆಯೆಂದು ಸ್ಮರಿಸಲಾಗಿದೆ.                                                                         ೧೭

೪೧೮ ಗಾಂಧಾರೀ, ರಕ್ತಗಾಂಧಾರೀ, ಮಧ್ಯಮಾ, ಹಾಗೆಯೇ ಪಂಚಮೀ ಮತ್ತು ಕೈಶಿಕೀ ಎಂಬ (ಐದೈದು ಸ್ವರಗಳನ್ನುಳ್ಳ) ಈ ಐದು [ಜಾತಿಗಳು] ಮಧ್ಯಮ[ಗ್ರಾಮ]ವನ್ನು ಆಶ್ರಯಿಸಿವೆಯೆಂದು ತಿಳಿಯಬೇಕು.                                                                      ೧೮

೪೧೯ ಷಡ್ಜ ಗ್ರಾಮದಲ್ಲಿ [ಷಡ್ಜಕೈಶಿಕಿಯು ಸಂಪೂರ್ಣವೆಂದೂ ಷಾಡ್ಜೀಯು ಗಾಂಧಾರವಿರುವುದರಿಂದ (!-ವಿಲ್ಲದಿರುವುದರಿಂದ) ಆರು ಸ್ವರಗಳನ್ನುಳ್ಳದ್ದೆಂದೂ ತಿಳಿಯಬೇಕು.                                                                                                ೧೯

೪೨೦ [ಹಾಗೆಯೇ ಮಧ್ಯಗ್ರಾಮದಲ್ಲಿ ಕಾರ್ಮಾರವಿಯು ಸಂಪೂರ್ಣವೆಂದು ತಿಳಿಯಬೇಕು. ಗಾಂಧಾರಪಂಚಮೀ, ಅಂತೆಯೇ ಮಧ್ಯಮೋದೀಚ್ಯವಾ-]           ೨೦

೪೨೧ ಅಲ್ಲದೆ ಗಾಂಧಾರೋದೀಚ್ಯವಾ, ಆಂಧ್ರೀ ಮತ್ತು ನಂದಯಂತೀಗಳು (ಒಂದೊಂದೂ)[ಆರು ಸ್ವರಗಳನ್ನು ಹೊಂದಿದ್ದು] ಮಧ್ಯಮಗ್ರಾಮವನ್ನು ಆಶ್ರಯಿಸಿವೆಯೆಂದು ವಿದ್ವಾಂಸರು [ತಿಳಿಯಬೇಕು].                                                    ೨೧

೪೨೨ ಹೀಗೆ ವಿದ್ವಾಂಸರು ಇವುಗಳನ್ನು ಎರಡೂ ಗ್ರಾಮಗಳಲ್ಲಿ ವಿಂಗಡಿಸಿಕೊಂಡು, ಯಾವುವು ಸಪ್ತಸ್ವರಗಳನ್ನುಳ್ಳವುಗಳೋ ಯಾವುವು ಆರು ಸ್ವರಗಳನ್ನುಳ್ಳವುಗಳೋ ಅವುಗಳನ್ನು (ಕ್ರಮವಾಗಿ) ಕೆಲವು ವೇಳೆ ಷಾಡವಗಳನ್ನಾಗಿಯೂ ಕೆಲವು ವೇಳೆ ಔಡುವಿತಗಳನ್ನಾಗಿಯೂ ಮಾಡಲಾಗುತ್ತದೆ ಯೆಂಬುದನ್ನು ತಿಳಿದುಕೊಳ್ಳಬೇಕು.                                                                                                     ೨೨

[ಹೀಗೆ ಶುದ್ಧಾ, ವಿಕೃತಾ ಮತ್ತು ಸಂಸರ್ಗಜಾ ವಿಕೃತಜಾತಿಗಳ ನಿರೂಪಣೆಯು ಮುಗಿಯತು.]

 

[iii. ಜಾತಿಗಳ ಸಾಮಾನ್ಯಲಕ್ಷಣ]

೪೨೩ (ಅ) ಈಗ (ಜಾತಿಯ) ಸಾಮಾನ್ಯಲಕ್ಷಣವನ್ನು [ಗ್ರಂಥಕಾರನು] ಹೇಳುತ್ತಾನೆ-                                              8

೪೨೪ (ಅ) ಶ್ರುತಿ, ಗ್ರಹ, ಸ್ವರ ಮುಂತಾದವುಗಳ (ವ್ಯವಸ್ಥಿತ) ಗುಂಪಿನಿಂದ ಉದಯಿಸುವುದರಿಂದ (ಇವುಗಳನ್ನು)ಜಾತಿಗಳೆನ್ನುತ್ತಾರೆ. (ಆ) ರಸದ ಅರಿವು ಯಾವವುಗಳಿಂದ ಹುಟ್ಟುತ್ತದೋ ಅಥವಾ ಪ್ರಾರಂಭವಾಗುತ್ತದೋ ಅವು ಜಾತಿಗಳು. (ಇ) ಅಥವಾ ಎಲ್ಲಾ ರಾಗ ಇತ್ಯಾದಿಗಳ ಹುಟ್ಟಿಗೆ ಕಾರಣವಾಗಿರುವುದರಿಂದ ಜಾತಿಗಳೆಂದು (ಹೆಸರು). (ಈ) ಅಥವಾ (ಬ್ರಹ್ಮಾಣಾದಿ) ಜಾತಿಗಳಂತೆ

____

[ಇತಿ ಸಾಮಾನ್ಯಲಕ್ಷಣಂ]