೪೯೧   ಅಂಶಕೈರ್ಗ್ರಾಮರಾಗಾಂಸ್ತು ಜನಯಂತೀತಿ ಜಾತಯಃ |
ಆಸಾಂ ಪ್ರಯೋಗಕಾಲೇ ತು ಯಗ್ಮಾಯುಗ್ಮಾಶ್ರಯೋ ವಿಧಿಃ |

೪೯೨   ಮಾರ್ಗೈಸ್ತ್ರಿಭಿಃ ಪ್ರಯೋಕ್ತವ್ಯಾಶ್ಚಿತ್ರವಾರ್ತಿಕದಕ್ಷಿಣೈಃ || ೭೦ ||

೪೯೩   ಪೂರ್ವರಂಗಕೈತೇ ಶುದ್ಧಾ[:] ಕರ್ತವ್ಯಾ ಗೀತಯೋಕ್ತೃಭಿಃ |
ಆಸಾರಿತಪಾಣಿಕಾದೌ ತತೋ ಜಾತ್ಯಂಶಕಲ್ಪನಮ್‌ || ೭೧ ||

೪೯೪   ಸ್ವರಾಣಾಮಂಗಹಾರೈರ್ಯತ ಏವಾಸಾರಿತಕ್ರಮೈಃ |
ವರ್ಧಮಾನಪದೇ ತಾಸಾಂ ಕಾರ್ಯಾ ಸ್ಯಾದಂಶಕಲ್ಪನಾ || ೭೨ ||

[vii ಜಾತಿಗಳನ್ನು ‌ಪ್ರಯೋಗಿಸುವುದಕ್ಕೆ ನಿಯಮಗಳು]

೪೯೧-೪೯೨ (ತಮ್ಮ) ಅಂಶ (ಸ್ವರ)ಗಳಿಂದ ಗ್ರಾಮರಾಗಗಳನ್ನು ಉತ್ಪಾದಿಸುವುದರಿಂದ (ಅವು) ಆ (ಯಾ) ಜಾತಿಗಳು ಎನ್ನಿಸಿಕೊಳ್ಳುತ್ತವೆ. ಇವುಗಳನ್ನು ಪ್ರಯೋಗಿಸುವ ಕಾಲದಲ್ಲಿ (ಅದರ) ನಿಯಮವು (ನಾಲ್ಕು ಕಳೆಗಳ ಪ್ರಮಾಣವುಳ್ಳ ಚಚ್ಚತ್ಪುಟ ಎಂಬ ಹೆಸರಿನ) ಯುಗ್ಮ ಮತ್ತು (ಮೂರು ಕಳೆಗಳ ಪ್ರಮಾಣವುಳ್ಳ ಚಾಚಪುಟ ಎಂಬ ಹೆಸರಿನ) ಅಯುಗ್ಮ (ಎಂಬ ತಾಳ-)ಗಳನ್ನು ಅವಲಂಬಿಸುತ್ತದೆ; (ಅವುಗಳನ್ನು) ಚಿತ್ರ, ವಾರ್ತಿಕ, ದಕ್ಷಿಣ ಎಂಬ ಮಾರ್ಗಗಳಿಂದ ಪ್ರಯೋಗಿಸಬೇಕು.                                                                                      ೭೦

೪೯೩ (ನಾಟ್ಯದಲ್ಲಿ) ಪೂರ್ವರಂಗವನ್ನು ಮಾಡುವಾಗ ಗೀತಗಳನ್ನು ಪ್ರಯೋಗಿಸುವವರು ಅವುಗಳನ್ನು ಆಸಾರಿತ, ಪಾಣಿಕ ಮುಂತಾದ (ನಾಟ್ಯ-)ಗೀತಗಳಲ್ಲಿ ಮತ್ತು ಶುದ್ಧಾ (ಜಾತಿ)ಗಳಲ್ಲಿ ಹಾಡಿ/ನುಡಿಸಿ ಆಮೇಲೆ (ಆಯಾ) ಜಾತಿಗಳ ಅಂಶಗಳನ್ನು ಪ್ರಸ್ತುತಗೊಳಿಸಬೇಕು.        ೭೧

೪೯೪ (ಜ್ಯೇಷ್ಠ, ಮಧ್ಯ ಮತ್ತು ಕನಿಷ್ಠ ಎಂಬ ಮೂರು) ಆಸಾರಿತಗಳ ಕ್ರಮದಿಂದಲೂ ಅಂಗಹಾರ (ಪ್ರಯೋಗ)ಗಳಿಂದಲೂ, ವರ್ಧಮಾನ (ಎಂಬ ನಾಟ್ಯಗೀತ)ದ ಪದಗಳನ್ನು ಹಾಡುವಾಗ (ಆಯಾ ಜಾತಿಗಳ) ಸ್ವರಗಳಲ್ಲಿ (ಹಿಂದೆ ಹೇಳಿರುವಂತೆ) ಅಂಶಗಳನ್ನು ಕಲ್ಪಿಸಬೇಕು.          ೭೨