೪೯೫   ಇತಿ ತ್ರಿಷಷ್ಟಿರಂಶಾ ಯೇ ತೇಷಾಮೇಕೈಕಶೋS೦ಶತಾಮ್‌ |
ವಿಕಲ್ಪ್ಯಾಷಾಡವಿತತ್ವಮೌಡುವಿತಂ ಕ್ವಚಿತ್‌ || ೭೩ ||

೪೯೬ (ಅ) ತ್ರಿಷಷ್ಟಿರಂಶಾ ಯೇ ಉಕ್ತಾಸ್ತೇಷಾಂ ಮಧ್ಯೇ ಪ್ರತ್ಯೇಕಮಂಶಾನಾಂ [ಅಂಶತಾಂ] ಪರಿಕಲ್ಪ್ಯ ಷಾಡವಿತತ್ವಮೌಡುವಿತತ್ವಂ ಪ್ರಾಪ್ತಂ ಕ್ವಚಿದಿತಿ ಜಾತಿವಿಷಯಃ ಅಪೋಹ್ಯತೇ | (ಆ) ಏತದೇವ ಸ್ಫುಟಯತಿ-                                                            29

೪೯೭   ಅಷಾಡವಾ ನಿಷಾದೇS೦ಶೇ ಸತಿ ಸ್ಯಾತ್‌ಷಡ್ಜಮಧ್ಯಮಾ |
ಗಾಂಧಾರೇ ಚ ಯತೋ ಲೋಪೋ ನಾಂಶಸಂವಾದಿನೋ ಮತಃ || ೭೪ ||

ಪಾಠವಿಮರ್ಶೆ: ೪೯೧ಅಆ, ಅ-೪೯೩ಆ,ಇ,ಈ ೪೯೫ಅಆ, ಇ,ಈ ೪೯೬-೫೦೫ ೪೯೬ಅ ೪೯೭ಈ

—-

[viii ಜಾತಿಗಳನ್ನು ಷಾಡವ-ಔಡುವಗಳನ್ನಾಗಿ ಮಾಡುವ ನಿಯಮಗಳು]

೪೯೫ ಹೀಗೆ (ಮೇಲೆ) ಹೇಳಿರುವ ಅರವತ್ತುಮೂರು ಅಂಶಗಳಲ್ಲಿ ಒಂದೊಂದಕ್ಕೆ (ಸಂದರ್ಭಾನುಸಾರವಾಗಿ) ಅಂಶತ್ವವನ್ನು (ಆಯಾ ಗೇಯಭಾಗದಲ್ಲಿ) ಕಲ್ಪಿಸಿ, ಅದರಿಂದ ಏರ್ಪಡುವ ಷಾಡವ, ಔಡುವ (ರೂಪಗಳನ್ನು) ಒಮ್ಮೊಮ್ಮೆ ಬಿಟ್ಟುಬಿಡಲಾಗುತ್ತದೆ.             ೭೩

೪೯೬ (ಅ) (ಈಗಾಗಲೇ) ಹೇಳಿರುವ ಅರವತ್ತುಮೂರು ಅಂಶಗಳ ಪೈಕಿ ಪ್ರತಿಯೊಂದಕ್ಕೂ (ಸಂದರ್ಭಾನುಸಾರವಾಗಿ ಅಂಶತತ್ವವನ್ನು ಆಯಾ ಗೇಯಭಾಗದಲ್ಲಿ) ಉಂಟುಮಾಡಿ (ಅದರಿಂದ) ದೊರೆಯುವ [ಜಾತಿಯನ್ನು] ಷಾಡವಿತವನ್ನಾಗಿಯೂ ಔಡುವಿತವನ್ನಾಗಿಯೂ ಮಾಡುವುದನ್ನು ಜಾತಿ(ಪ್ರಯೋಗದ) ವಿಷಯದಲ್ಲಿ ಕೆಲವೊಮ್ಮೆ ಕೈಬಿಡಲಾಗುತ್ತದೆ. (ಆ) ಇದನ್ನೇ (ಗ್ರಂಥಕರ್ತನು) ಹೀಗೆ ಸ್ಪಷ್ಟಗೊಳಿಸುತ್ತಾನೆ-       29

೪೯೭ ಷಡ್ಜಮಧ್ಯಮಾದಲ್ಲಿ ನಿಷಾದವು ಅಂಶವಾದಾಗ ಅದು ಷಾಡವವಿಲ್ಲದೆಯೇ ಹೋಗುತ್ತದೆ. (ಹೀಗಾಗಿ) ಅಂಶಕ್ಕೆ ಸಂವಾದಿಯಾದ ಗಾಂಧಾರವೂ ಲೋಪವಾಗುವುದಿಲ್ಲ (ಎಂದರೆ ಔಡುವವೂ ಇರುವುದಿಲ್ಲ) ಎಂದು ಅಭಿಪ್ರಾಯವಿದೆ.                              ೭೪

____

೪೯೮ (ಅ) ಅಸ್ಯಾರ್ಥಃ – ನಿಷಾದೇS೦ಶೇ ಷಡ್ಜಮಧ್ಯಾಜಾತಿರಷಾಡವಾ ಕಥಮ್‌? (ಆ) ಷಡ್ಜಗ್ರಾಮೇ ಷಾಡವವಿಧೌ ಗಾಂಧಾರಸ್ಯ ಲೋಪೋ ನಾಸ್ತಿ | (ಇ) ಗಾಂಧಾರೇS೦ಶೇ ನಿಷಾದೇನ ಅಷಾಡವಾ ಬೋದ್ಧವ್ಯಾ ಅಂಶಸಂವಾದಿನೋ ಲೋಪಾಭಾವಾತ್‌ |               30

೪೯೯   ಕೈಶಿಕೀ ರಕ್ತಗಾಂಧಾರೀ ಗಾಂಧಾರೀ ಚೈವ ಪಂಚಮೇ |
ತಥಾ ಷಾಡ್ಜೀ ತು ಗಾಂಧಾರೇ ಧೈವತೇ ತದುದೀಚ್ಯವಾ || ೭೫ ||

೫೦೦ (ಅ) [ಅಸ್ಯಾರ್ಥಃ – ಕೈಶಿಕೀರಕ್ತಗಾಂಧಾರೀಗಾಂಧಾರೀ ಇತ್ಯೇತಾಸ್ತಿಸ್ರೋ ಜಾತಯಃ ಪಂಚಮೇS೦ಶೇ, ಋಷಭೇಣಾಷಾಡವಾ ಅಂಶಸಂವಾದಿನೋ ಲೋಪಾಭಾವಾತ್‌ | (ಆ) ಏವಮೇವ ನಿಷಾದೇನ ಷಾಡ್ಜೀ ಗಾಂಧಾರೇSಶೇ ಆಷಾಡವಾ] ಋಷಭೇಣ ಷಡ್ಜೋದೀಚ್ಯವಾ ಧೈವತೇSಶೇ ಅಷಾಡವಾ ವಿಜ್ಞೇಯಾ | (ಇ) ಇದಾನೀಮೌಡುವಿತಂ ಪ್ರಾಪ್ತಮಪೋಹ್ಯತೇ |                                 31

೫೦೧   ಗಾಂಧಾರೀರಕ್ತಗಾಂಧಾರ್ಯೋಃ ಷಡ್ಜಮಧ್ಯಮಪಂಚಮಾಃ |
ಸನಿಷಾದಾಃ ಸ್ಮೃತಾ ಅಂಶಾ ಅನೌಡುವಿತಭಾಗಿನಃ || ೭೬ ||

೫೦೨ (ಅ) ಏತಾಚ್ಚಾಸಂಗತಂ, ಔಡುವಿತಪ್ರಾಪ್ತೇರಭಾವಾತ್‌ | (ಆ) ಸತ್ಯಮುಕ್ತಂ, ಔಡುವಿತನಿಷೇಧವಚನಾದ್‌ಹಿ ವಿಧೇಶ್ಚ ಪ್ರಾಪ್ತಮೇವೌಡುವಿತತ್ವಂ ನಿಷಿಧ್ಯತೇ |                                                                                                 32

೫೦೩   ಷಡ್ಜಮಧ್ಯಮಜಾತೌ ತು ಗಾಂಧಾರೋSಥ ನಿಷಾದವಾನ್‌ |
ಕೈಶಿಕ್ಯಾಮಥ ಪಂಚಮ್ಯಾಂ ಕ್ರಮಾಚ್ಚಧೈವತರ್ಷಭೌ || ೭೭ ||

೫೦೪ (ಅ) [ಅಸ್ಯಾರ್ಥ – ಷಡ್ಜಮಧ್ಯಮಾಯಾಂ] ಗಾಂಧಾರೋSಥ ನಿಷಾದವಾ[ನ್‌] ನೌಡುವಿತಭಾಗೀ, ಕೈಶಿಕ್ಯಾಂ ಧೈವತಃ ಪಂಚಮ್ಯಾಂ ಋಷಭಶ್ಚಾನೌಡುವಿತಭಾಗೀ ಸ್ಯಾತ್‌ | (ಆ) ತತ್ರ ಪ್ರಾಪ್ತಮೇವೌಡುವಿತತ್ವಂ ನಿಷಿದ್ಧ್ಯತೇ ಅಂಶತಾ ಚಾಪ್ರಾಪ್ರೈವ ಕಲ್ಪ್ಯತೇ |

ಪಾಠ ವಿಮರ್ಶೆ: ೪೯೮ಇ ೪೯೯ಈ ೫೦೦ಅ,ಆ ೫೦೨ಆ ೫೦೩ಈ ೫೦೪ಅ,ಆ,ಇ

—-

೪೯೮ (ಅ) ಇದರ ಅರ್ಥವು (ಏನೆಂದರೆ)- ನಿಷಾದವು ಅಂಶವಾಗಿರಲಾಗಿ ಷಡ್ಜಮಧ್ಯಾ ಜಾತಿಯು ಷಾಡವರಹಿತವಾಗುವುದು ಹೇಗೆ? (ಆ) ಷಡ್ಜಗ್ರಾಮದಲ್ಲಿ ಷಾಡವ(ಗಳನ್ನು ಕಲ್ಪಿಸುವ) ನಿಯಮಗಳ ಪ್ರಕಾರ ಗಾಂಧಾರವನ್ನು ಲೋಪಮಾಡಕೂಡದು. (ಇ) ಗಾಂಧಾರವು ಅಂಶವಾಗಿರುವಾಗ, ಅಂಶದ ಸಂವಾದಿಯ (ಎಂದರೆ ನಿಷಾದದ) ಲೋಪವಿಲ್ಲದಿರುವುದರಿಂದ ನಿಷಾದದ ಕಾರಣದಿಂದ (ಈ ಜಾತಿಯು) ಷಾಡವರಹಿತವಾಗಿರುತ್ತದೆಂದು ತಿಳಿಯಬೇಕು.                                                                                        30

೪೯೯ ಕೈಶಿಕೀ, ರಕ್ತಗಾಂಧಾರೀ ಮತ್ತು ಗಾಂಧಾರೀ (ಈ ಮೂರು ಜಾತಿಗಳು) ಪಂಚಮವು (ಅಂಶವಾಗಿರುವಾಗಲೂ) ಷಡ್ಜೋದೀಚ್ಯವಾ[ಜಾತಿ]ಯು ಧೈವತವು (ಅಂಶವಾಗಿರುವಾಗಲೂ) (ಷಾಡವವಿಲ್ಲದೆ ಹೋಗುತ್ತವೆ.)                                                          ೭೫

೫೦೦ (ಅ) (ಇದರ ಅರ್ಥವು ಏನೆಂದರೆ : ಕೈಶಿಕೀ ರಕ್ತಗಾಂಧಾರೀ ಗಾಂಧಾರೀ ಎಂಬ ಈ ಮೂರು ಜಾತಿಗಳಲ್ಲಿ ಪಂಚಮವು ಅಂಶವಾಗಿರುವಾಗ ಅಂಶದ ಸಂವಾದಿಯಾದ ರಿಷಭವು ಲೋಪವಾಗದೆ ಇರುವುದರಿಂದ ಷಾಡವರಹಿತವಾಗುತ್ತವೆ. (ಆ) ಇದೇ ರೀತಿಯಲ್ಲಿ ಷಾಡ್ಜೀಜಾತಿಯಲ್ಲಿ ಗಾಂಧಾರವು ಅಂಶವಾಗಿರುವಾಗ (ಅದರ ಸಂವಾದಿಯಾದ) ನಿಷಾದ(ದ ಅಲೋಪ)ದಿಂದ (ಅದು) ಷಾಡವರಹಿತವಾಗುತ್ತದೆ. ಷಡ್ಜೋದೀಚ್ಯವತೀಯಲ್ಲಿ ಧೈವತವು ಅಂಶವಾಗಿರುವಾಗ (ಅದರ ಸಂವಾದಿಯಾದ) ರಿಷಭ(ದ ಅಲೋಪ)ದಿಂದ (ಅದು) ಷಾಡವಾಗುತ್ತದೆ ಎಂದು ತಿಳಿಯಬೇಕು. (ಇ) ಹೀಗೆ ನಿಯಮಗಳ ಪ್ರಕಾರ ಉಂಟಾಗುವ ಔಡುವಿತಗಳನ್ನು ವರ್ಜಿಸಲಾಗುತ್ತದೆ.                                                       31

೫೦೧ ಗಾಂಧಾರೀ, ರಕ್ತಗಾಂಧಾರೀ[ಜಾತಿ]ಗಳಲ್ಲಿ ನಿಷಾದಸಹಿತವಾದ ಷಡ್ಜಮಧ್ಯಮ ಪಂಚಮಗಳು ಅಂಶಗಳೆಂದು ಸ್ಮರಿಸಲಾಗಿದೆ (ಮತ್ತು ಅವುಗಳು) ಔಡುವರಹಿತಗಳಾಗಿರುತ್ತವೆ.                                                                                                ೭೬

೫೦೨ (ಅ) [ಆಕ್ಷೇಪ:] ಇದು ಸಮಂಜಸವಲ್ಲ, ಏಕೆಂದರೆ ಔಡುವಗಳು ದೊರೆಯುವುದಿಲ್ಲ. (ಆ) [ಸಮಾಧಾನ:] ನಿಜವನ್ನೇ ಹೇಳಿದೆ; ಔಡುವಿತತ್ವವು ಕೂಡದೆಂದು ಹೇಳುವ ಮಾತಿನಿಂದಲೇ (=ವಿಧಿಯಿಂದ ಮಾತ್ರವೇ) ಪ್ರಾಪ್ತವಾದ ಔಡುವಗಳನ್ನು ನಿಷೇಧಿಸಲಾಗಿದೆ.    32

೫೦೩ (ಇದೇ ರೀತಿಯಲ್ಲಿ) ಷಡ್ಜಮಧ್ಯಮಾಜಾತಿಯಲ್ಲಿ ಗಾಂಧಾರನಿಷಾದಗಳೂ, ಕೈಶಿಕಿಯಲ್ಲಿಯೂ ಪಂಚಮೀಯಲ್ಲಿಯೂ ಕ್ರಮವಾಗಿ ಧೈವತ-ರಿಷಭಗಳು ಅಂಶಗಳಾಗಿರುವಾಗ ಅವುಗಳಲ್ಲಿ ಔಡುವಗಳಿರುವುದಿಲ್ಲ.                                                           ೭೭

೫೦೪ (ಅ) [ಇದರ ಅರ್ಥವು ಏನೆಂದರೆ ಷಡ್ಜಮಧ್ಯಮಾದಲ್ಲಿ] ಗಾಂಧಾರವೂ ನಂತರ ನಿಷಾದವೂ ಔಡುವಿತಗಳನ್ನು ರಚಿಸಲು ಅರ್ಹವಲ್ಲ. ಕೈಶಿಕಿಯಲ್ಲಿ ಧೈವತವೂ ಪಂಚಮೀಯಲ್ಲಿ ರಿಷಭವೂ ಔಡುವಿತಗಳನ್ನು ರಚಿಸಲು ಅರ್ಹವಲ್ಲ. (ಆ) ವಿಧಿಯಿಂದ ದೊರೆಯುವ ಔಡುವಿತಗಳಿಗೆ ಮಾತ್ರ ಈ ನಿಷೇಧವಿದೆ.

____

ಇದಾನೀಂ ಯೇ ಅ[ನ]ಪವಾದಿಭೂತಾಃ ಸ್ವರಾಃ ಷಾಡವೌಡುವಿತವಿಧೌ ತಾನುದಸ್ಯತಿ-                                         33

೫೦೫ ಯೋಜ್ಯಾಃ ಸಪ್ತಾಧಿಕಾಶ್ಚೈವ ಚತ್ವಾರಿಂಶಚ್ಚ ಷಾಡವೇ || ೭೮ ||

೫೦೬ (ಅ) ಅಸ್ಯಾರ್ಥಃ – ಷಾಡವೇ ವಿಧೌ ಕ್ರಿಯಾಮಾಣೇ ಸಪ್ತಾಧಿಕಚತ್ವಾರಿಂಶದಂಶಕಾ ಅಪವಾದಸ್ವರರಹಿತಾ ಯೋಜನೀಯಾ ಇತ್ಯರ್ಥಃ | (ಆ) ಚತಸೃಣಾಂ ಜಾತೀನಾಂ ನಿತ್ಯಸಂಪೂರ್ಣಾನಾಂ ನಾವಾಂಶಾಃ ಪಾತನೀಯಾಃ ತ್ರಿಷಷ್ಟಿಮಧ್ಯೇ | (ಇ) ತದ್ಯಥಾ – ಪಸಗಪ ರಿಪಧನಿಪ | (ಈ) ಏಷು ನವಾಂಶೇಷು ಪಾತಿತೇಷು ಚತುಷ್ಟಂಚಾಶದಂಶಾ ಅವಶಿಷ್ಯತೇ | (ಉ) ತತ್ರಾಪಿ ಷಡ್ಜಮಧ್ಯಮಾ-ಷಡ್ಜೋದೀಚ್ಯವಾ-ಕೈಶಿಕೀ-ಗಾಂಧಾರೀ-ರಕ್ತಗಾಂಧಾರೀ ಷಾಡ್ಜೀತ್ಯಾಸಾಂ ಷಡ್‌ ಜಾತೀನಾಂ ಸಪ್ತಾಂಶಾಃ ಪಾತನೀಯಾಃ | (ಊ) ತೇಷು ಸಪ್ತಾಂಶೇಷು ಪಾತಿತೇಪು ಸಪ್ತಚತ್ವಾರಿಂಶದಂಶಾ ಭವಂತಿ | (ಋ) ತದ್ಯಥಾ-                                                                                                                  34

೫೦೭   ಮಧ್ಯಮೋದೀಚ್ಯವಾ ಪೇನ ತಥಾ ಗಾಂಧಾರಪಂಚಮೀ |
ಕಾರ್ಮಾರವೀ ರಿಪನಿಧೈಃ ಸಗಪೈಃ ಷಡ್ಜಕೈಶಿಕೀ || ೭೯ ||

೫೦೮ (ಅ) […..ಅಸ್ಯಾರ್ಥಃ-]ತೇಷು [ಸಪ್ತ] ಚತ್ವಾರಿಂಶದಂಶೇಷೂಕ್ತಸ್ವರೈಃ ಷಾಡವವಿಧಿಃ ಕರ್ತವ್ಯಃ | (ಆ)ಇದಾನೀಮೌಡುವಿತವಿಧೌ ಯೇ ತು ಅನಪವಾದಿನಃ ಸ್ವರಾಸ್ತಾನ್‌ದರ್ಶಯತಿ | 35

೫೦೯ ತಥಾSಪವಾದನಿರ್ಮುಕ್ತಾಸ್ತ್ರಿಂಶದೌಡುವಿತಾಸ್ತು ತೇ || ೮೦ ||

೫೧೦ (ಅ) ಅಸ್ಯಾರ್ಥಃ – ತಥಾ ತೇನ ಪ್ರಕಾರೇಣ ಅಪವಾದನಿರ್ಮುಕ್ತಾಸ್ತ್ರಿಂಶತ್‌ಪ್ರಕಾರಾ ಬೋದ್ಧವ್ಯಾಃ | (ಆ) ತದ್ಯಥಾ – ತ್ರಿಷಷ್ಟಿಮಧ್ಯೇ ನಿತ್ಯಸಂಪೂರ್ಣಾನಾಂ ಚತಸೃಣಾಂ ಜಾತೀನಾಂ ನವಾಂಶಾಃ ಪಾತನೀಯಾಃ | (ಇ) ತೇಷು ಪಾತಿತೇಷು ಚತುಷ್ಪಂಚಾಶದಂಶಾಸ್ತತ್ರಾವಶಿಷ್ಯಂತೇ ತತ್ರಾಪಿ ಚತುಷ್ಪಂಚಾಶನ್ಮಧ್ಯೇ ಚತಸೃಣಾಂ ಜಾತೀನಾಂ ನಿತ್ಯಸಂಪೂರ್ಣಷಾಡವಾನಾಂ ದ್ವಾದಶಾಂಶಾಃ ಪಾತನೀಯಾಃ | (ಈ) ತೇಷು ಪಾತಿತೇಷು ದ್ವಿಚತ್ವಾರಿಂಶದಂಶೇ[ಪು] ಗಾಂಧಾರೀರಕ್ತಗಾಂಧಾರೀಷಡ್ಜಮಧ್ಯಮಾಕೈಶಿಕೀಪಂಚಮೀ ತ್ಯಾಸಾಂ ಪಂಚಚಾತೀನಾಮೌಡುವಿತ(?ತಾ)ಭಾಗಿನೋ ದ್ವಾದಶಾಂಶಾಃ ಪಾತನೀಯಾ | (ಉ) ತೇಷು ಪಾತಿತೇಷು [ತ್ರಿಂಶದಂಶೇ] ಷೂಕ್ತ ಸ್ವರೈರೌಡುವಿತವಿಧಿರ್ಭವತೀತಿ | (ಊ)ತಥಾ ಚಾಹ ಭರತಃ –           36

ಪಾಠ ವಿಮರ್ಶೆ: ೫೦೫ಅ ೫೦೬ಅ,ಆ,ಇ,ಈ ೫೦೭ ಅ,ಈ ೫೦೮ ಆಇ ೫೦೯ಆ ೫೧೦ಆ,ಇ

—-

ಸ್ವರಗಳ) ಅಂಶತ್ವವನ್ನು (ಅವು ಪ್ರಾಪ್ತವಲ್ಲದಿದ್ದರೂ) ಕಲ್ಪಿಸಲಾಗಿದೆ (?ಅವುಗಳ ಅಂಶತ್ವವು ಅಪ್ರಾಪ್ತವೆಂದು ಕಲ್ಪಿಸಲಾಗಿದೆ?) (ಇ) ಈಗ (ಗ್ರಂಥಕರ್ತನು) ಷಾಡವಿತ-ಔಡುವಿತಗಳ(ನ್ನು ಪಡೆಯುವ) ವಿಧಿಯಲ್ಲಿ ಅಪವಾದರೂಪಗಳಲ್ಲದ ಸ್ವರಗಳನ್ನು ಹೇಳುತ್ತಾ ಮುಂದುವರಿಸುತ್ತಾನೆ <ಉದಸ್ಯತಿ>.                                                                                                                                 33

೫೦೬ (ಅ) ಇದರ ಅರ್ಥವೇನೆಂದರೆ-ಷಾಡವ (ರಚನಾ)ವಿಧಿಯನ್ನು ಅನ್ವಯಿಸುತ್ತಿರುವಾಗ ಅಪವಾದರೂಪವಾದ ಸ್ವರಗಳನ್ನು ಬಿಟ್ಟು ನಲವತ್ತೇಳು ಅಂಶಗಳನ್ನು ಸೇರಿಸಬೇಕು ಎಂದು ಅರ್ಥ. (ಆ) ಅರವತ್ತಮೂರು (ಅಂಶಗಳಿಂದ) ಯಾವಾಗಲೂ ಸಂಪೂರ್ಣವೇ ಆಗಿರುವ ನಾಲ್ಕು ಜಾತಿಗಳ ಒಂಭತ್ತು ಅಂಶಗಳನ್ನು ಕಳೆದಾಗ ಐವತ್ತನಾಲ್ಕು ಅಂಶಗಳು ಉಳಿಯುತ್ತವೆ. (ಉ) ಇವುಗಳಲ್ಲಿಯೂ ಸಹ ಷಡ್ಜಮಧ್ಯಮಾ-ಷಡ್ಜೋದೀಚ್ಯವಾ- ಕೈಶಿಕೀ-ಗಾಂಧಾರೀ-ರಕ್ತಗಾಂಧಾರೀ-ಷಾಡ್ಜೀ ಎಂಬೀ ಆರು ಜಾತಿಗಳ ಏಳು ಅಂಶಗಳನ್ನು ಕಳೆಯಬೇಕು. (ಊ) ಈ ಏಳು ಅಂಶಗಳನ್ನು ಕಳೆದರೆ ನಲವತ್ತೇಳು ಅಂಶಗಳಾಗುತ್ತವೆ. (ಋ) ಅದು ಹೇಗೆಂದರೆ-                                                                                            34

೫೦೭ ಅಂತೆಯೇ ಮಧ್ಯಮೋದೀಚ್ಯವಾ ಪಂಚಮ (ಲೋಪರಾಹಿತ್ಯ)ದಿಂದಲೂ ಗಾಂಧಾರ-ಪಂಚಮೀ ಕಾರ್ಮಾರವೀಗಳು ರಿ-ಪ-ನಿ-ಧ(ಗಳ ಲೋಪರಾಹಿತ್ಯ)ದಿಂದಲೂ ಷಡ್ಜಕೈಶಿಕಿಯು ಸ-ಗ-ಪ(ಗಳ ಲೋಪರಾಹಿತ್ಯ)ದಿಂದಲೂ (ಷಾಡವರಹಿತಗಳಾಗುತ್ತವೆ.) ೭೯

೫೦೮ (ಅ)[ಇದರ ಅರ್ಥವೇನೆಂದರೆ]-ಈ ನಲವ[ತ್ತೇಳು] ಸ್ವರಗಳಲ್ಲಿ ಷಾಡವವಿಧಿಯನ್ನು ಮಾಡಬೇಕು. (ಆ) ಈಗ [ಜಾತಿಗಳನ್ನು] ಔಡುವಿತಗಳನ್ನಾಗಿ ಮಾಡುವ ವಿಧಿಯಲ್ಲಿ ಅಪವಾದಗಳಲ್ಲದ ಸ್ವರಗಳನ್ನು [ಗ್ರಂಥಕರ್ತನು] ತೋರಿಸುತ್ತಾನೆ.     35

೫೦೯ ಇದೇ ರೀತಿಯಲ್ಲಿ ಅಪವಾದವಿಲ್ಲದ ಔಡುವಿತ(ಸ್ವರ)ಗಳು ಮೂವತ್ತು (ಇವೆ).                                       ೮೦

೫೧೦ (ಅ) ಇದರ ಅರ್ಥವೇನೆಂದರೆ]- ಇದೇ ರೀತಿಯಲ್ಲಿ ಅಪವಾದಗಳಲ್ಲದ ಮೂವತ್ತು ವಿಧದಲ್ಲಿ (ಔಡುವಿತವನ್ನು ಉಂಟುಮಾಡುವ ಸ್ವರಗಳು) ಇವೆಯೆಂದು ತಿಳಿಯಬೇಕು. (ಆ) ಅದು ಹೇಗೆಂದರೆ- ಅರವತ್ತಮೂರರಲ್ಲಿ (-ಅಂಶಗಳಲ್ಲಿ) ಯಾವಾಗಲೂ ಸಂಪೂರ್ಣವಾಗಿರುವ (ಎಂದರೆ ಷಾಡವಿತ- ಔಡುವಿತಗಳಿಲ್ಲದ) ನಾಲ್ಕು ಜಾತಿಗಳ ಒಂಭತ್ತು ಅಂಶಗಳನ್ನು ಕಳೆಯಬೇಕು. (ಇ) ಹೀಗೆ ಕಳೆದ ಮೇಲೆ ಐವತ್ತನಾಲ್ಕರಷ್ಟು ಅಂಶಗಳು ಉಳಿಯುತ್ತವೆ; ಈ ಐವತ್ತನಾಲ್ಕರಲ್ಲಿಯೂ ನಿತ್ಯಸಂಪೂರ್ಣವೂ ಷಾಡವೂ ಆಗಿರುವ ನಾಲ್ಕು ಜಾತಿಗಳ ಹನ್ನೆರಡು ಅಂಶಗಳನ್ನು ಕಳೆಯಬೇಕು. (ಈ) ಹೀಗೆ ಕಳೆದುಳಿದ ನಲವತ್ತೆರಡು ಅಂಶ(ಗಳಲ್ಲಿ) ಗಾಂಧಾರೀ ರಕ್ತಗಾಂಧಾರೀ ಷಡ್ಜಮಧ್ಯಮಾ ಕೈಶಿಕೀ ಪಂಚಮೀ ಎಂಬ ಈ ಐದು ಜಾತಿಗಳಲ್ಲಿ ಔಡುವಿತಗಳನ್ನುಂಟುಮಾಡಲು ಅರ್ಹವಾದ (!ಅನರ್ಹವಾದ) ಹನ್ನೆರಡು ಅಂಶಗಳನ್ನು ಕಳೆಯಬೇಕು. (ಉ) ಹೀಗೆ ಕಳೆದುಳಿದ ಮೂವತ್ತು ಅಂಶಗಳಲ್ಲಿ ಮೇಲೆ ಹೇಳಿರುವ ಸ್ವರಗಳಿಂದ ಔಡುವಗಳನ್ನು ಮಾಡುವ ನಿಯಮವಿದೆ ಎಂಬುದು (ಭರತನಮಾತಿನ)ಅರ್ಥ (ಊ)ಭರತನು (ಈ ವಿಷಯದಲ್ಲಿ) ಹೀಗೆ ಹೇಳುತ್ತಾನೆ-                                                                                                      36

____

೫೧೧   “ಷಟ್‌ಸ್ವರಾ ಸಪ್ತಮೇ ತ್ವಂಶೇ ನೇಷ್ಯತೇ ಷಡ್ಜಮಧ್ಯಮಾ |
ಸಂವಾದ್ಯಲೋಪಾದ್‌ ಗಾಂಧಾರೇ ತತ್ವದೇವ ಹಿ ನೇಷ್ಯತೇ” || ೮೧ ||

೫೧೨   ಗಾಂಧಾರೀರಕ್ತಗಾಂಧಾರೀಕೈಶಿಕೀನಾಂ ಚ ಪಂಚಮಮ್ |
ಷಡ್ಜಾಯಾಶ್ಚೈವ ಗಾಂಧಾರಮಂಶಕಂ ವಿದ್ಧ್ಯಷಾಡವಮ್‌ || ೮೨ ||

೫೧೩   ಷಾಡವಂ ಧೈವತೇ ನಾಸ್ತಿ ಷಡ್ಜೋದೀಚ್ಯ[ಚ್ಯಾಂ]ಶಕೇ ದ್ವಿಜಾಃ |
[ಸಂವಾದ್ಯಲೋಪಾದ್‌ ಸಪ್ತೈತಾಃ ಷಾಟ್‌ಸ್ವರ್ಯೇಣ ವಿವರ್ಜಿತಾಃ] || ೮೩ ||

೫೧೪   ಗಾಂಧಾರೀರಕ್ತಗಾಂಧಾರ್ಯೋಃ ಷಡ್ಜಮಧ್ಯಮಪಂಚಮೀಃ |
ಸಪ್ತಮಶ್ಚೈವ ವಿಜ್ಞೇಯಾ ಯೈಸ್ತ್ವನೌಡುವಿತಂ ಭವೇತ್‌ || ೮೪ ||

೫೧೫   ದ್ವೌಷಡ್ಜಮ್ಯಮಾಂಶಾ [?ಶೌ]ತು ಗಾಂಧಾರಃ ಸನಿಷಾದವಾನ್‌ |
ಋಷಭಶ್ಚೈವ ಪಂಚಮ್ಯಾಂ ಕೈಶಿಕ್ಯಾಂ ಧೈವತಸ್ತಥಾ || ೮೫ ||

೫೧೬   ಏವಂ ಚ ದ್ವಾದಶೈವೈತೇ ವರ್ಜ್ಯಾಃ ಪಂಚಸ್ವರೇ ಸದಾ |
[ತಾಸ್ತ್ವನೌಡುವಿತಾ ನಿತ್ಯಂ ಕರ್ತವ್ಯಾ ಹಿ ಸ್ವರಾಶ್ರಯಾಃ] || ೮೬ ||

೫೧೭   ಸರ್ವಸ್ವರಾಣಾಂ ನಾಶೋSತ್ರ ವಿಹಿತಃ ಸರ್ವಜಾತಿಷು |
ನ ಮಧ್ಯಮಸ್ಯ ಲೋಪೋ ಹಿ ಕರ್ತವ್ಯೋ ಕದಾಚನ || ೮೭ ||

೫೧೮   ಸರ್ವಸ್ವರಾಣಾಂ ಪ್ರವರೋ ಹ್ಯನಾಶೀ ಮಧ್ಯಮಸ್ವರಃ |
ಗಾಂಧರ್ವಕಲ್ಪೇ ವಿಹಿತಃ ಸಾಮಸ್ವಪಿ ಚ ಮಧ್ಯಮಃ” || ೮೮ ||

೫೧೯ (ಅ) ಇದಾನೀಂ ಷಾಡವೌಡುವಿತವಿಧಿರುತ್ಸರ್ಗಾಪವಾದವಿಧಿಶ್ಚ ವಿಕೃತಾಸ್ವೇವ ಜಾತಿಷು ಬೋದ್ಧವ್ಯಃ, ನ ತು ಶುದ್ಧಾಸು ಜಾತಿಷು, ತಾಸಾಂ ಶುದ್ಧಾನಾಮನ್ಯಜಾತ್ಯುತ್ಪತ್ತೌ ಮೂಲತ್ವಾತ್‌ | (ಆ) ಏತಾ ಏವ ಶುದ್ಧಾ ವಿಕೃತಾ ಭವಂತಿ | (ಇ) ಕಥಮ್‌?           37

ಪಾಠವಿಮರ್ಶೆ: ೫೧೧ಆ,ಇಈ,ಈ ೫೧೨ ಆ,ಇ,ಈ ೫೧೩ಅ,ಆ,ಇ,ಈ, ೫೧೪ ಆ,ಇ,ಈ ೫೧೫ಅ,ಆ,ಈ

—-

೫೧೧ ‘ಷಡ್ಜಮಧ್ಯಮಾ (ಜಾತಿಯು) ನಿಷಾದವು ಅಂಶವಾಗಿರುವ ಷಾಡವವಾಗುವುದನ್ನು ಅಪೇಕ್ಷಿಸುವುದಿಲ್ಲ. [ನಿಷಾದದ] ಸಂವಾದಿಯಾದ ಗಾಂಧಾರವು ಲೋಪವಾಗದಿರುವುದರಿಂದ) ಷಾಡವವಾಗುವುದನ್ನು ಅಪೇಕ್ಷಿಸುವುದಿಲ್ಲ; ಗಾಂಧಾರವು ಅಂಶವಾಗಿರುವಾಗಲೂ ಹಾಗೆಯೇ (ಅದು ಷಾಡವವಾಗುವುದನ್ನು) ಅಪೇಕ್ಷಿಸುವುದಿಲ್ಲ.’                                                                                         ೮೧

೫೧೨ ‘(ಇದೇ ರೀತಿಯಲ್ಲಿ) ಗಾಂಧಾರೀ, ರಕ್ತಗಾಂಧಾರೀ, ಕೈಶಿಕೀಗಳಲ್ಲಿ ಪಂಚಮವು (ಅಂಶವಾಗಿರುವಾಗಲೂ) ಷಾಡ್ಜೀಯಲ್ಲಿ ಗಾಂಧಾರವು ಅಂಶವಾಗಿರುವಾಗ(-ಲೂ) (ಅವುಗಳು) ಷಾಡವರಹಿತಗಳೆಂದು ತಿಳಿಯಬೇಕು.’                                                  ೮೨

೫೧೩ ‘ಎಲೈ ಬ್ರಾಹ್ಮಣರಾದ ಮುನಿಗಳೆ, ಷಡ್ಜೋದೀಚ್ಯವಾದಲ್ಲಿ ಧೈವತವು ಅಂಶವಾಗಿರುವಾಗ (ಅದರಲ್ಲಿ) ಷಾಡವವಿಲ್ಲ. (ಹೀಗೆ) ಅಂಶದ ಸಂವಾದಿಯು ಲೋಪವಾಗದಿರುವುದರಿಂದ ಈ ಏಳೂ ಷಾಡವತ್ವವನ್ನು ಬಿಟ್ಟಿವೆ.’ ೮೨

೫೧೪ ‘ಗಾಂಧಾರೀರಕ್ತಗಾಂಧಾರೀಗಳಲ್ಲಿ ಷಡ್ಜಮಧ್ಯಮಪಂಚಮಗಳೂ ಏಳನೆಯ (ಯದಾದ ನಿಷಾದವೂ) ಔಡುವಿತಗಳನ್ನು ಉಂಟುಮಾಡದಿರುವ ಸ್ವರಗಳು.’                                                                                                                                    ೮೪

೫೧೫ ‘ಷಡ್ಜಮಧ್ಯಾದಲ್ಲಿ ನಿಷಾದಸಹಿತವಾದ ಗಾಂಧಾರ ಎಂಬೆರಡು ಅಂಶಗಳು, ರಿಷಭ[ವೆಂಬ ಅಂಶ]ವು ಪಂಚಮೀಯಲ್ಲಿ, ಅಂತೆಯೇ ಕೈಶಿಕೀಯಲ್ಲಿ ಧೈವತ-’                                                                                                                    ೮೫

೫೧೬ ‘ಈ ಹನ್ನೆರಡು ಅಂಶಗಳನ್ನು ಪಂಚಸ್ವರ(ಪ್ರಯೋಗವುಳ್ಳ ಔಡುವ)ಗಳಲ್ಲಿ ಯಾವಾಗಲೂ ಬಿಟ್ಟುಬಿಡಬೇಕು. [ಈ ಸ್ವರಗಳನ್ನು ಅಂಶಗಳಾಗಿ] ಆಶ್ರಯಿಸಿರುವ ಈ ಜಾತಿಗಳನ್ನು ಯಾವಾಗಲೂ ಔಡುವರಹಿತಗಳನ್ನಾಗಿಯೇ ಮಾಡಬೇಕು.’                              ೮೬

೫೧೭ ‘ಎಲ್ಲಾ ಜಾತಿಗಳಲ್ಲಿಯೂ (ಸಂದರ್ಭಾನುಸಾರವಾಗಿ) ಎಲ್ಲಾ ಸ್ವರಗಳನ್ನು ಲೋಪಮಾಡುವುದು (ಸಂಗೀತಶಾಸ್ತ್ರ ಮತ್ತು ಪ್ರಯೋಗಗಳಿಗೆ) ವಿಹಿತವಾಗಿದೆ. (ಆದರೆ) ಮಧ್ಯಮ (ಸ್ವರ)ದ ಲೋಪವನ್ನು ಯಾವಾಗಲೂ ವಿಹಿತವಾಗಿದೆ.’                                ೮೭

೫೧೮ ‘ಎಲ್ಲ ಸ್ವರಗಳಲ್ಲಿಯೂ ಮಧ್ಯಮಸ್ವರವು ಮುಖ್ಯವೂ ನಾಶವಿಲ್ಲದುದೂ ಆಗಿದೆ. ಗಾಂಧರ್ವ ಕಲ್ಪ (ಶಾಸ್ತ್ರ ಮತ್ತು ಪ್ರಯೋಗ)ದಲ್ಲಿಯೂ ಸಾಮ[ಗಾಯನ]ದಲ್ಲಿಯೂ ಮಧ್ಯಮ(ದ ಅವಿನಾಶಿತ್ವವು) ವಿಹಿತವಾಗಿದೆ.’                                                    ೮೮

೫೧೯ (ಅ) ಈ ಸಂದರ್ಭದಲ್ಲಿ <ಇದಾನೀಂ>ಷಾಡವಿತ ಔಡುವಿತಗಳನ್ನು ಮಾಡುವ ವಿಧಿಯ ಸಾಮಾನ್ಯ ನಿಯಮವೂ ಅಪವಾದದ ನಿಯಮವೂ ಕೇವಲ ವಿಕೃತ ಜಾತಿಗಳಲ್ಲಿ ಮಾತ್ರ ಪಾಲಿಸಬೇಕಾದವುಗಳು, ಶುದ್ಧಜಾತಿಗಳಲ್ಲಲ್ಲ, ಎಂದು ತಿಳಿಯಬೇಕು, ಏಕೆಂದರೆ ಶುದ್ಧ [ಜಾತಿ]ಗಳು ಬೇರೆ ಜಾತಿಗಳ ಹುಟ್ಟಿಗೆ ಕಾರಣವಾಗಿವೆ. (ಆ) ಈ ಶುದ್ಧಗಳೇ ವಿಕೃತಗಳಾಗುತ್ತವೆ. (ಇ) ಹೇಗೆ?                                  37

೫೧೬ಅ,ಆ,ಇಈ ೫೧೭ಅಆ,ಇಈ ೫೧೮ಅ ಆ,ಆ,ಇ, ೫೧೯ಅ

____