೫೨೦ ತದ್ಗ್ರ ಹಾ ತದಪನ್ಯಾಸಾ ತದಂಶಾ ಚ ಯದಾ ಭವೇತ್ |
ಮಂದ್ರನ್ಯಾಸಾ ಚ ಪೂರ್ಣಾ ಚ ಶುದ್ಧಾಜಾತಿಸ್ತದೋಚ್ಯತೇ || ೮೯ ||
[ಇತಿ ಶುದ್ಧಾಲಕ್ಷಣಮುಕ್ತಮ್]
—
[ix ಪುನಃ ಶುದ್ಧಾಜಾತಿಗಳ ಲಕ್ಷಣ]
೫೨೦ ಒಂದು ಜಾತಿಯಲ್ಲಿ ಅದೇ ಸ್ವರವು ಗ್ರಹವೂ ಅಪನ್ಯಾಸವೂ ಅಂಶವೂ ಆಗಿರುವಾಗ, ನ್ಯಾಸವು ಮಂದ್ರ[ಸ್ಥಾಯಿ]ವಾಗಿದ್ದು [ಅದು] ಸಂಪೂರ್ಣ[ವೂ]ಆಗಿದ್ದರೆ ಆಗ ಅದು ಶುದ್ಧಾಜಾತಿಯೆನ್ನಿಸಿಕೊಳ್ಳುತ್ತದೆ.
[ಹೀಗೆ ಶುದ್ಧಾಜಾತಿಯ ಲಕ್ಷಣವನ್ನು ಹೇಳಿಯಾಗಿದೆ.]
—-
Leave A Comment