೫೨೧ (ಅ) ಏತೇನ ಲಕ್ಷಣೇನೈಕೇನ ದ್ವಾಭ್ಯಾಂ [ಬಹುಭಿರ್‌]ವಾ ವಿಕೃತಾ ಭವಂತಿ | (ಆ) ಪುನರ್ನ್ಯಾಸವರ್ಜಮಿತಿ, ನ್ಯಾಸೇನ ವಿಕೃತ[ತ್ವಂ]ಚ ನಾಸ್ತಿ ನ್ಯಾಸವರ್ಜಮಿತಿ ವಚನಾತ್‌ | (ಇ)[ತತ್ರ ಷಾಡ್ಜ್ಯಾ ಉದಾಹರಣಮ್‌:]                                                           38

೫೨೨ (ಅ) ವಿಕೃತಾ ಷಾಡ್ಜೀ ದ್ವಿವಿಧಾ- ನಿತ್ಯಸಂಪೂರ್ಣಾ ಷಾಡವಾ ಚೇತಿ | (ಆ) ನಾಮಾಂಶೇನ ಷಾಡ್ಜೀ ಶುದ್ಧ [-ದ್ಧಾ] | (ಇ) ವಿಕೃತಾಷಾಡ್ಜೀ ಗಾಂಧಾರಾಂಶೇನ ಸಂಪೂರ್ಣಾ ಅಂಶಸಂವಾದ್ಯಲೋಪಾತ್‌ | (ಈ) ಮಧ್ಯಮಪಂಚಮಧೈವತಾಂಶೇ ನಿಷಾದೇನ [ಸಾ] ಷಾಡವಾ |        39

೫೨೩ (ಅ) ಯದಾ ತು ಷಾಡ್ಜೀ ಶುದ್ಧಾ ಗೀಯತೇ ತದಾ ಷಡ್ಜಸ್ಯಾಂಶತ್ವೇನ ಶೇಷಾಣಾಂ ಸ್ವರಾಣಾಂ ಬಹುತ್ವಮ್ | (ಆ)ಬಹುತ್ವೇನ ಷಡ್ಜಪಂಚಮಯೋಸ್ತ್ರಿಂಶದಂಶಾ ಭವಂತಿ | (ಇ)ಷಡ್ಭಿಶ್ಚತುದರ್ಶವಿಧಃ | (ಊ) ಮಿಲಿತ್ವಾ ಸಪ್ತಸ್ವರಾ ಅಷ್ಟಾವಿಂಶತ್ಯಧಿಕಂ ಶತಂ ಭವ[೦]ತೀತ್ಯಲಮ್‌ | 40

[x ಶುದ್ಧಾಜಾತಿಗಳ ವಿಕೃತಾವಸ್ಥೆ]

೫೨೧ (ಅ)ಈ ಲಕ್ಷಣಗಳ ಪೈಕಿ ಒಂದು, ಎರಡು ಅಥವಾ (ಅನೇಕ)ಲಕ್ಷಣಗಳ ಉಲ್ಲಂಘನೆಯಾದಾಗ-ನ್ಯಾಸದ ಹೊರತು-ಅವು ವಿಕೃತಗಳಾಗುತ್ತವೆ. (ಆ) ‘ನ್ಯಾಸದ ಹೊರತು’ ಎಂಬ ಮಾತಿಗೆ (ಇ) [ಅವುಗಳ ಪೈಕಿ ಷಾಡ್ಜೀಯ ಉದಾಹರಣೆ:]                                   38

೫೨೨ (ಅ) ವಿಕೃತಾಷಾಡ್ಜೀಯು ಯಾವಾಗಲೂ ಸಂಪೂರ್ಣ ಮತ್ತು ಷಾಡವ ಎಂದು ಎರಡುವಿಧ. (ಆ)[ತನ್ನ] ಹೆಸರನ್ನು ಉಂಟುಮಾಡುವ (ಸ್ವರವು) ಅಂಶವಾಗಿದ್ದರೆ ಷಾಡ್ಜೀಯು ಶುದ್ಧಾ ಎಂದಾಗುತ್ತದೆ. (ಇ) ವಿಕೃತಷಾಡ್ಜೀಯು ಗಾಂಧಾರವು ಅಂಶವಾಗಿರುವಲ್ಲಿ ಸಂಪೂರ್ಣವೂ ಅಂಶದ ಸಂವಾದಿಯ ಲೋಪರಾಹಿತ್ಯದಿಂದ ಷಾಡವರಹಿತವೂ (ಆಗುತ್ತದೆ). (ಈ)ಮಧ್ಯಮ, ಪಂಚಮ, ಧೈವತಗಳು ಅಂಶಗಳಾಗಿರುವಾಗ ಅದು ನಿಷಾದ [ಲೋಪ]ದಿಂದ ಷಾಡವಾಗುತ್ತದೆ.                                                                                                        39

೫೨೩ (ಅ) ಷಾಡ್ಜೀ(ಜಾತಿ)ಯನ್ನು ಶುದ್ಧವೆಂದು ಹಾಡುವಾಗ ಷಡ್ಜವು ಅಂಶವಾಗಿರುವಲ್ಲಿ ಉಳಿದ ಸ್ವರಗಳಿಗೆ ಬಹುತ್ವವಿರುತ್ತದೆ. (ಆ) ಬಹುತ್ವದಿಂದ ಷಡ್ಜಪಂಚಮಗಳಲ್ಲಿ ಮೂವತ್ತು (ಅಂಶಗಳಾಗುತ್ತವೆ.)(ಇ)ಆರರಿಂದ (?)ಅದು ಹದಿನಾಲ್ಕು ವಿಧವಾಗುತ್ತದೆ. (ಈ)ಗಾಂಧಾರವು ಹತ್ತೊಂಭತ್ತು ವಿಧ(ವಾಗುತ್ತದೆ?)(ಉ) ಮಧ್ಯಮವು ಹದಿನಾಲ್ಕು ವಿಧವಾಗುತ್ತದೆ(?)(ಊ)ಒಟ್ಟು ಸೇರಿಸಿದರೆ ಏಳು ಸ್ವರಗಳು ನೂರಿಪ್ಪತ್ತೆಂಟು (?) ಆಗುತ್ತವೆ ಎಂದರೆ ಸಾಕು.                                                                                                                 40