೫೨೪ (ಅ) ಇದಾನೀಂ ದಶಲಕ್ಷಣಮಧ್ಯೇ ಯದ್ಯಸ್ಯಾಂ ಜಾತೌ ಭವತಿ ತತ್ತಸ್ಯಾಂ ದರ್ಶಯತಿ- 41
—
ಪಾಠವಿಮರ್ಶೆ: ೫೨೦ಆ-ಈ, ಈ ೫೨೧ಅ,ಆ ೫೨೨ಅ ೫೨೩ಅ ೫೨೪ಅ
—-
[xi ಜಾತಿಗಳ ವಿಶೇಷಲಕ್ಷಣಗಳು]
೫೨೪ ಈಗ ಹತ್ತು ಲಕ್ಷಣಗಳ ಪೈಕಿ ಯಾವುದು ಯಾವ ಜಾತಿಯಲ್ಲಿ ಇರುತ್ತದೋ ಅದನ್ನು ಅದರಲ್ಲಿ (ಗ್ರಂಥಕಾರನು) ತೋರಿಸುತ್ತಾನೆ. 41
____
[1 ಷಾಡ್ಜೀ]
೫೨೫ (ಅ) ತತ್ರ ಷಾಡ್ಜ್ಯಾಃ ಷಡ್ಜಗ್ರಾಮಸಂಬಂಧಾಯಾ ಅಂಶಾ ಗ್ರಹಾಃ ಪಂಚ ಭವಂತಿ | (ಆ) ತದ್ಯಥಾ-ಷಡ್ಜಗಾಂಧಾರಮಧ್ಯಮಪಂಚಮಧೈವತಾ ಗ್ರಹಾ ಅಂಶಾಶ್ಚ | (ಇ) ಗಾಂಧಾರಪಂಚಮಾವಪನ್ಯಾಸೌ, ನಿಷಾದಹೀನಾ ಷಾಡವಾ, ಷಡ್ಜೋ ನ್ಯಾಸಃ | (ಈ) ಷಡ್ಜಗಾಂಧಾರಯೋಃ ಷಡ್ಜಧೈವತಯೋಶ್ಚ ಸಂಗತಿಃ | (ಉ) ಗಾಂಧಾರೋSತಿಬಹುಲೋ ವಿವಾದಿತ್ವೇSಪಿ | (ಊ) ಪರಸ್ಪರಗಮನಂ ಚ ಸಂಗತಿಃ | (ಋ) ಪಂಚಮಸ್ವರಪರಾ ತಾರಗತಿಃ, ಷಡ್ಜಸ್ವರಪರಾ ಮಂದ್ರಗತಿಃ, ಔಡುವಿತತ್ವಂ ಚ ಸರ್ವಥೈವ ನಾಸ್ತಿ | (ೠ) ಸಂಪೂರ್ಣಾ ಷಾಡವಾ [ಚ] | (ಎ)ಯದಾ ಸಂಪೂರ್ಣಾ ಗೀಯತೇ ತದಾ ಋಷಭಪಂಚಯೋ ರ್ನಿಷಾದಪಂಚಮಯೋಶ್ಚಾಲ್ಪತ್ವಂ ಕಾರ್ಯಮ್ | (ಏ) ಕುತಃ? 42
೫೨೬ “ಯಂ ವಿನಾ ಹೀನತಾ ಯಸ್ಯಾಂ ಸ್ಯಾಚ್ಚೇತ್ತಸ್ಯಾಂ ತು ಸೋSಲ್ಪಕಃ” || ೯೦ ||
೫೨೭ ಇತಿ ವಚನಾತ್ | (ಅ) ಯದಾ ಷಾಡವಾ ಗೀಯತೇ ತದಾ ಋಷಭಸ್ಯಾಲ್ಪತ್ವಂ ಕಾರ್ಯಂ, ಶೇಷಾಣಾಂ ಸ್ವರಾಣಾಂ ಬಹುತ್ವಮ್ | 43
೫೨೮ (ಅ) ಅಸ್ಯಾಶ್ಚ ದಶಾಂಶಕಾಃ | (ಆ) ತದ್ಯಥಾ-ಶುದ್ಧಃ, ವಿಕೃತಾಶ್ಚ ಪಂಚ ಪೂರ್ಣಾಶ್ಚತ್ವಾರಃ, ಷಾವಾಃ ಗಾಂಧಾರೇS೦ಶೇ ಷಾಡವಾಪವಾದಾತ್ | (ಇ) ಯೇನಾಂಶಾಃ ಸ್ಫುಟಯಂತೇ ತೇನ ಲಿಖಿತಾಃ |
(ಈ) ಷಡ್ಜಾಂಶೇನ ಶುದ್ಧತ್ವಂ ಷಡ್ಜಶ್ಚಾಪನ್ಯಾಸಃ | (ಉ) ಸಂಪೂರ್ಣಾವಸ್ಥಾಯಾಂ ಅಷ್ಟವಿಧ ಲಕ್ಷಣಮ್ | (ಊ) ಷಾಡವಾವಸ್ಥಾಯಾಂ ನವವಿಧತ್ವಮ್ | (ಋ) ಶುದ್ಧಾಂ ಪರಿತ್ಯಜ್ಯ ಚತುರ್ವಿಧಾ ಷಾಡ್ಜೀ ವಿಕೃತಾ ಬೋದ್ಧವ್ಯಾ |
(ೠ) ಅಸ್ಯಾಶ್ಚ ಧೈವತಾದಿಮೂರ್ಛನಾ | (ಎ) ಪಂಚಪಾಣಿರೇಕಕಲಶ್ಚಿತ್ರೇ ಮಾರ್ಗೇ ಮಾಗಧೀ ಗೀತಿಃ | (ಏ) ಪಂಚಪಾಣಿರ್ದ್ವಿಕಲೋ ವಾರ್ತಿಕಮಾರ್ಗೇ ಸಂಭಾವಿತಾ ಗೀತಿಶ್ಚತುಷ್ಕಲಃ ಪಂಚಪಾಣಿರ್ದಕ್ಷಿಣೇ ಮಾರ್ಗೇ ಪೃಥುಲಾಗೀತಿಃ | (ಐ) ಅನೇನ ಕ್ರಮೇಣ ಸರ್ವಾಸಾಂ ಜಾತೀನಾಂ ಬೋದ್ಧವ್ಯಮ್ | (ಒ) ವೀರರೌದ್ರಾದ್ಭುತರಸಾಃ ಕಾರ್ಯಾಃ | (ಓ)ಪ್ರಥಮೇ ಪ್ರೇಕ್ಷಣಕೇ ಧ್ರುವಾಗಾನೇ ವಿನಿಯೋಗಃ | 44
—
ಪಾಠವಿಮರ್ಶೆ: ೫೨೫ಇ,ಉ,ಋ,ಎ ೫೨೬ಅ ೫೨೭ಅ ೫೨೮ಆ,ಇ,ಈ,ಊ,ಋ,ಎ,ಏ,ಐ
—-
[1 ಷಾಡ್ಜೀ]
೫೨೫ (ಅ) ಅವುಗಳ ಪೈಕಿ ಷಡ್ಜಗ್ರಾಮದ ಸಂಬಂಧದಿಂದಾಗಿ ಷಾಡ್ಜೀಯಲ್ಲಿ ಅಂಶಗಳೂ ಗ್ರಹಗಳೂ ಐದು ಇರುತ್ತವೆ. (ಆ) ಅದು ಹೇಗೆಂದರೆ-ಷಡ್ಜಗಾಂಧಾರಮಧ್ಯಮಪಂಚಮಧೈವತಗಳು ಗ್ರಹಗಳೂ ಅಂಶಗಳೂ (ಆಗಿವೆ). (ಇ) ಗಾಂಧಾರಪಂಚಮಗಳು ಅಪನ್ಯಾಸಗಳು; ನಿಷಾದಲೋಪದಿಂದ ಷಾಡವ (ವಾಗುತ್ತದೆ); ಷಡ್ಜವು ನ್ಯಾಸ. (ಈ) ಷಡ್ಜ-ಗಾಂಧಾರಗಳಲ್ಲಿಯೂ ಷಡ್ಜ-ಧೈವತಗಳಲ್ಲಿಯೂ ಪರಸ್ಪರ ಸಂಗವಿರುತ್ತದೆ. (ಉ)ಗಾಂಧಾರಕ್ಕೆ ವಿವಾದಿತ್ವವಿದ್ದರೂ ಬಹುಲತ್ವವೂ ಇದೆ. (ಊ)ಸಂಗತಿಯೆಂದರೆ ಪರಸ್ಪರವಾಗಿ ಒಂದು ಇನ್ನೊಂದಕ್ಕೆ ಸಂಚರಿಸುವುದು. (ಋ)ತಾರ(ಸ್ಥಾಯಿಯಲ್ಲಿ) ಸಂಚಾರವು (ಅಂಶದಿಂದ) ಐದು ಸ್ವರಗಳವರೆಗೆ (ಇರುತ್ತದೆ); ಮಂದ್ರ (ಸ್ಥಾಯಿಯಲ್ಲಿ) ಸಂಚಾರವು (ಅಂಶದಿಂದ) ಐದು ಸ್ವರಗಳವರೆಗೆ (ಇರುತ್ತದೆ); ಮಂದ್ರ (ಸ್ಥಾಯಿಯಲ್ಲಿ) ಸಂಚಾರವು ಷಡ್ಜ ಸ್ವರದವರೆಗೆ (ಇರುತ್ತದೆ); ಔಡುವಿತತ್ವವು ಯಾವಾಗಲೂ ಇಲ್ಲ. (ೠ) (ಈ ಜಾತಿಗೆ) ಸಂಪೂರ್ಣ ಮತ್ತು ಷಾಡವ ರೂಪಗಳು (ಮಾತ್ರ ಇರುತ್ತವೆ.) (ಎ) ಅದನ್ನು ಸಂಪೂರ್ಣರೂಪದಲ್ಲಿ ಹಾಡುವಾಗ ರಿಷಭ-ಪಂಚಮಗಳಲ್ಲಿಯೂ ನಿಷಾದ-ಪಂಚಮಗಳಲ್ಲಿಯೂ ಅಲ್ಪತ್ವವನ್ನು ಮಾಡಬೇಕು (ಏ)ಏಕೆ? 42
೫೨೬ ‘ಯಾವ ಸ್ವರದ ಲೋಪದಿಂದ ಯಾವುದರಲ್ಲಿ (=ಯಾವ ಜಾತಿಯಲ್ಲಿ) ಅಪೂರ್ಣತೆಯು ಉಂಟಾಗುತ್ತದೋ ಅದರಲ್ಲಿ ಅದು ಅಲ್ಪವಾಗಿರುತ್ತದೆ. (ದತ್ತಿಲಂ:೬೧) ೯೦
೫೨೭ ಎಂಬ ಮಾತಿನಿಂದ (ಈ ಅಲ್ಪತ್ವಗಳು ಸಿದ್ಧವಾಗುತ್ತವೆ.) (ಐ)(ಈ ಜಾತಿಯನ್ನು) ಷಾಡವವಾಗಿ ಹಾಡುವಾಗ ರಿಷಭದಲ್ಲಿ ಅಲ್ಪತ್ವವನ್ನು ಮಾಡಬೇಕು, ಉಳಿದ ಸ್ವರಗಳಲ್ಲಿ ಬಹುತ್ವವನ್ನು (ಮಾಡಬೇಕು). 43
೫೨೮ (ಅ) ಇದರ ಅಂಶಗಳು ಹತ್ತು (ಇವೆ). (ಆ) ಅದು ಹೇಗೆಂದರೆ ಶುದ್ಧಾ (ಜಾತಿಯದು)ಒಂದು, ವಿಕೃತ(ಅವಸ್ಥೆಯಲ್ಲಿ ಸಂ)ಪೂರ್ಣ (ಜಾತಿ)ಗಳು ಐದು, ಷಾಡವಗಳು ನಾಲ್ಕು-ಏಕೆಂದರೆ ಗಾಂಧಾರವು ಅಂಶವಾಗಿರುವಾಗ ಷಾಡವ(ತ್ವ)ವಿಲ್ಲ. (ಇ) ಯಾವ ರೀತಿಯಿಂದ (ಬರೆದರೆ) ಅಂಶಗಳು ಸ್ಪಷ್ಟವಾಗಿ ತಿಳಿಯುತ್ತವೋ ಹಾಗೆ (ಈಗ) ಬರೆದಿದೆ (=ಬರೆಯಲಾಗುವುದು).
(ಈ) ಷಡ್ಜವು ಅಂಶವಾಗಿರುವಾಗ (ಷಾಡ್ಜೀಯಲ್ಲಿ) ಶುದ್ಧತ್ವವೂ ಅಪನ್ಯಾಸವು ಷಡ್ಜವೂ (ಆಗಿರುತ್ತವೆ). (ಉ) ಅದು ಸಂಪೂರ್ಣವಾಗಿರುವಾಗ ಎಂಟು ವಿಧದ ಲಕ್ಷಣಗಳಿರುತ್ತವೆ. (ಆಗ ಷಾಡವಿತ-ಔಡುವಿತಗಳ ಪ್ರಸಕ್ತಿಯಿರುವುದಿಲ್ಲ.) (ಊ) ಷಾಡವವಾಗಿರುವಾಗ (ಅದು) ಒಂಭತ್ತು ವಿಧವಾಗಿರುತ್ತದೆ. (ಋ) ಶುದ್ಧಷಾಡ್ಜೀಯನ್ನು ಬಿಟ್ಟರೆ ಷಾಡ್ಜೀಯಲ್ಲಿ ನಾಲ್ಕು ವಿಕೃತ (ರೂಪಗಳಿವೆ) ಎಂದು ತಿಳಿಯಬೇಕು. (ೠ) ಇದರದು ಧೈವತದಿಂದ ಮೊದಲಾಗುವ ಮೂರ್ಛನೆ. (ಎ) (ಇದರ ಹಾಡುವ ಪ್ರಯೋಗಕ್ಕೆ) ಒಂದು ಕಲೆಯ ಪಂಚಪಾಣಿ (=ಪಟ್ಪಿತಾಪುತ್ರ, ಉತ್ತರ)ತಾಳ; ಚಿತ್ರಮಾರ್ಗ, ಮಾಗಧೀ ಎಂಬ (ಬಗೆಯ)ಗೀತಿ. (ಏ) ವಾರ್ತಿಕಮಾರ್ಗದಲ್ಲಿ ಎರಡು ಕಲೆಯ ಪಂಚಪಾಣಿ (ತಾಳ); ಸಂಭಾವಿತಾ ಗೀತಿ; ದಕ್ಷಿಣಮಾರ್ಗದಲ್ಲಿ ನಾಲ್ಕು ಕಲೆಯ ಪಂಚಪಾಣಿ (ತಾಳ); ಪೃಥುಲಾ ಗೀತಿ. (ಐ) ಇದೇ ಕ್ರಮದಲ್ಲಿಯೇ ಎಲ್ಲಾ ಜಾತಿಗಳ (ಪ್ರಯೋಗಗಳ)ನ್ನು ತಿಳಿದುಕೊಳ್ಳಬೇಕು. (ಒ) (ಷಾಡ್ಜೀಜಾತಿಯನ್ನು) ವೀರ,ರೌದ್ರ ಮತ್ತು ಅದ್ಭುತರಸಗಳಲ್ಲಿ ಪ್ರಯೋಗಿಸಬೇಕು. (ಓ) ಇದನ್ನು ಮೊದಲನೆಯ ದೃಶ್ಯದ ಧ್ರುವಾಗಾನದಲ್ಲಿ ವಿನಿಯೋಗಿಸಬೇಕು. 44
____
[2 ಆರ್ಷಭೀ]
೫೨೯ (ಅ) [ಆರ್ಷಭ್ಯಾಂ] ಋಷಭಧೈವತನಿಷಾದಾ ಗ್ರಹಾಃ ಸ್ವಯಮೇವಾಂಶಾಃ, ತ ಏವಾಪನ್ಯಾಸಾಃ, ಪಂಚಸ್ವರಪರಸ್ತಾರೋ ನಿಷಾದಃ(?) | (ಆ) ಋಷಭೋ ನ್ಯಾಸಃ | (ಇ) ನ್ಯಾಸಪರಸ್ತತ್ಪರೋ ವಾ ಮಂದ್ರಃ | (ಈ) ಷಡ್ಜಧೈವಯೋಋಷಭಗಾಂಧಾರಯೋಶ್ಚ ಸಂಗತಿಃ | (ಉ) ಷಡ್ಜಹೀನಂ ಷಾಡವಮ್, ಷಡ್ಜಪಂಚಮಹೀನಂ ಔಡುವಿತಮ್ | (ಊ)ಪೂರ್ಣಾವಸ್ಥಾಯಾಂ ಷಡ್ಜಗಾಂಧಾರಪಂಚಮಾನಾಮಲ್ಪತ್ವಮ್, ಔಡುವಿತೇ ಗಾಂಧಾರಮಧ್ಯಮಯೋರಲ್ಪತ್ವಂ, ಶೇಷಾಣಾಂ ಚ ಬಹುತ್ವಮ್ | 45
೫೩೦ (ಅ) ದಶವಿಧತ್ವಂ ಚಾಸ್ಯಾಃ | (ಆ) ದಶಾಂಶಾಃ, ಶುದ್ಧಃ, ವಿಕೃತಾಃ ಪೂರ್ಣಾಸ್ತ್ರಯಃ, ತ್ರಯಃ ಷಾಡವಾಃ, ತ್ರಯ ಔಡುವಾಶ್ಚೇತಿ | (ಇ) ಪಂಚಮಾದಿಮೂರ್ಛನಾ, ಚಚ್ಚತ್ಪುಟಸ್ತಾಲಃ | (ಈ) ಏಕಕಲೇನ ಚಿತ್ರೇಣ ಮಾಗಧೀ, ದವಿಕಲೇನ ವಾರ್ತಿಕೇನ ಸಂಭಾವಿತಾ, ಚತುಷ್ಕಲೇನ ದಕ್ಷಿಣೇನ ಪೃಥುಲಾ | (ಉ) ವೀರರೌದ್ರಾದ್ಭುತರಸಾಃ | (ಊ) ಪ್ರಥಮಪ್ರೇಕ್ಷಣಕೇ ಐಷ್ಕ್ರಾಮಿಕೀಧ್ರುವಾಗಾನೇ ವಿನಿಯೋಗಃ | 46
[3 ಧೈವತೀ]
೫೩೧ (ಅ) ಧೈವತ್ಯಾ ಧೈವತರ್ಷಭೌ ಗ್ರಹಾವಂಶೌ ಚ | (ಆ) ಶುದ್ಧಾವಸ್ಥಾಯಾಂ ಧೈವತ ಏವಾಪನ್ಯಾಸಃ, ವಿಕೃತಾವಸ್ಥಾಯಾಂ ಚ ಧೈವತರ್ಷಭಮಧ್ಯಮಾ ಅಪನ್ಯಾಸಾಃ | , (ಇ) ಧೈವತೋ ನ್ಯಾಸಃ | (ಈ) ಪಂಚಮಹೀನಂ ಷಾಡವಂ, ಪಂಚಮಷಡ್ಜಹೀನಮೌಡುವಿತಂ, ತಾವೇವ ಷಡ್ಜಪಂಚಮಸ್ವರೌ ದುರ್ಬಲೌ ಕರ್ತವ್ಯೌ ಕ್ವಚಿಲ್ಲಂಫನೀಯೌ | (ಉ) ಪಂಚಸ್ವರಪರಸ್ತಾರಃ | (ಊ) ನ್ಯಾಸಪರಸ್ತತ್ಪರೋ ವಾ ಮಂದ್ರಃ | 47
೫೩೨ (ಅ) ಸಪ್ತವಿಧತ್ವಮಸ್ಯಾಃ | (ಆ)ಸಪ್ತಾಂಶಕಾಃ – ಶುದ್ಧೋ ವಿಕೃತಪೂರ್ಣೌ | (ಇ) [ದ್ವೌದ್ವೌ ಷಾಡವೌಡುವಿತೌ ಚ|] (ಈ) ಋಷಭಾದಿಮೂರ್ಛನಾ | (ಉ)ತಾಲಃ ಪಂಚಪಾಣಿಃ, ಏಕಕಲಶ್ಚಿತ್ರೋ ಮಾರ್ಗಃ, ಮಾಗಧೀ ಗೀತಿಃ | (ಊ)ದ್ವಿಕಲೋ ವಾರ್ತಿಕಃ ಸಂಭಾವಿತಾ |
—
ಪಾಠವಿಮರ್ಶೆ: ೫೨೯ಆ,ಈ ೫೩೦ಆ,ಈಊ ೫೩೧ ಅ,ಆ,ಈ,ಊ ೫೩೨ ಆ,ಊ
—-
[2 ಆರ್ಷಭೀಜಾತಿ]
೫೨೯ (ಅ) [ಆರ್ಷಭೀ ಜಾತಿಯಲ್ಲಿ] ರಿಷಭ, ಧೈವತ, ನಿಷಾದಗಳು ಗ್ರಹಗಳು, ಅವೇ ಅಂಶಗಳು, ಅವೇ ಅಪನ್ಯಾಸಗಳು; (ಅಂಶದಿಂದ) ಐದುಸ್ವರಗಳ ನಂತರದ ನಿಷಾದವು ತಾರ(ಸ್ವರ)(ಆ) ರಿಷಭವು ನ್ಯಾಸ. (ಇ) ಮಂದ್ರವು ನ್ಯಾಸದ ಹಿಂದಿನಸ್ವರದವರೆಗೆ ಅಥವಾ ಅದರ ಹಿಂದಿನ ಸ್ವರದವರೆಗೆ (ಇರುತ್ತದೆ). (ಈ) ಷಡ್ಜಧೈವತಗಳಲ್ಲಿಯೂ ರಿಷಭಗಾಂಧಾರಗಳಲ್ಲಿಯೂ (ಪರಸ್ಪರ) ಸಂಗ(ವಿದೆ). (ಉ)ಷಡ್ಜಲೋಪದಿಂದ ಪಾಡವ(ವಾಗುತ್ತದೆ); ಷಡ್ಜಪಂಚಮಗಳ ಲೋಪದಿಂದ (ಷಾಡ್ಜೀಯು) ಔಡುವವಾಗುತ್ತದೆ. (ಊ) (ಅದು) ಸಂಪೂರ್ಣವಾಗಿರುವಾಗ ಷಡ್ಜಗಾಂಧಾರಪಂಚಮಗಳಲ್ಲಿ ಅಲ್ಪತ್ವವಿದೆ, ಔಡುವವಾಗಿರುವಾಗ ಗಾಂಧಾರಮಧ್ಯಮಗಳಲ್ಲಿ ಅಲ್ಪತ್ವವಿದೆ; ಉಳಿದವು (ಸ್ವರ)ಗಳಲ್ಲಿ ಬಹುತ್ವವಿದೆ. 45
೫೩೦ (ಅ) ಇದು ಹತ್ತು ಬಗೆಯದಾಗಿರುತ್ತದೆ: (ಎಂದರೆ) ಹತ್ತು ಅಂಶಗಳಿರುತ್ತವೆ: (ಆ)ಶುದ್ಧರೂಪದಲ್ಲಿ (ಒಂದು), ವಿಕೃತವಾದಾಗ ಪೂರ್ಣ (ಜಾತಿಗಳು) ಮೂರು, ಮೂರು ಷಾಡವಗಳು, ಮೂರು ಔಡುವಗಳು, ಹೀಗೆ (ಹತ್ತು ವಿಧಗಳು). (ಇ) ಇದರ ಮೂರ್ಛನೆಯು ಪಂಚಮದಿಂದ ಮೊದಲಾಗುತ್ತದೆ, ತಾಳವು ಚಚ್ಚತ್ಪುಟ. (ಈ) ಏಕಕಲೆಯ (ತಾಳದಲ್ಲಿ) ಚಿತ್ರ[ಮಾರ್ಗ]ದಿಂದ ಮಾಗಧೀಗಿತಿ(ಯನ್ನು ಪ್ರಯೋಗಿಸಬೇಕು. ಎರಡು ಕಲೆಯ (ತಾಳದಲ್ಲಿ) ವಾರ್ತಿಕ [ಮಾರ್ಗ]ದಿಂದ ಸಂಭಾವಿತಾ (ಗೀತಿಯನ್ನು ಪ್ರಯೋಗಿಸಬೇಕು.) (ಉ) ನಾಲ್ಕು ಕಲೆಯ (ತಾಳದಲ್ಲಿ) ದಕ್ಷಿಣ [ಮಾರ್ಗ]ದಿಂದ ಪೃಥುಲಾ (ಗೀತಿಯನ್ನು ಪ್ರಯೋಗಿಸಬೇಕು.) (ಉ) ಇಲ್ಲಿ (ಪ್ರತೀತಿಗೊಳ್ಳಬೇಕಾದ) ರಸಗಳು ವೀರ, ರೌದ್ರ, ಅದ್ಭುತ. (ಊ) ಇದರ ವಿನಿಯೋಗವು ಮೊದಲನೆಯ ದೃಶ್ಯದ ನಿಷ್ಕ್ರಾಮದ (=ಪಾತ್ರಗಳು ರಂಗದಿಂದ ಹೊರಟುಹೋಗುವ ಸಂದರ್ಭದ) ಧ್ರುವಾಗಾನದಲ್ಲಿ (ಇರುತ್ತದೆ). 46
[3. ಧೈವತೀಜಾತಿ]
೫೩೧ (ಅ) ಧೈವತೀ(ಜಾತಿ)ಯಲ್ಲಿ ಧೈವತರಿಷಭಗಳು ಗ್ರಹಗಳೂ ಅಂಶಗಳೂ ಆಗಿವೆ. (ಆ) ಅದು ಶುದ್ಧವಾಗಿರುವಾಗ ಧೈವತವೊಂದೇ ಅಪನ್ಯಾಸ; ವಿಕೃತವಾಗಿರುವಾಗ ಧೈವತ, ರಿಷಭ, ಮಧ್ಯಮಗಳು ಅಪನ್ಯಾಸಗಳು. (ಇ) ಧೈವತವು ನ್ಯಾಸ. (ಈ) ಪಂಚಮಲೋಪದಿಂದ (ಈ ಜಾತಿಯ)ಷಾಡವ (ವಾಗುತ್ತದೆ),ಪಂಚಮ-ಷಡ್ಜಗಳ ಲೋಪದಿಂದ ಔಡುವಿತವಾಗುತ್ತದೆ; ಇದೇ ಷಡ್ಜಪಂಚಮಸ್ವರಗಳನ್ನು ದುರ್ಬಲಗಳನ್ನಾಗಿ (ಅಲ್ಪತ್ವದಿಂದ) ಪ್ರಯೋಗಿಸಬೇಕು; ಕೆಲವು ವೇಳೆ (ಅವುಗಳನ್ನು) ಹಾರಿಸಿ (=ಲೋಪಿಸಿ) ಬಿಡಬೇಕು. (ಉ)ಅಂಶದಿಂದ ಐದನೆಯ ಸ್ವರದವರೆಗೆ ತಾರ(ಗತಿ); (ಊ)ಇದರ ನ್ಯಾಸಸ್ವರದ ಹಿಂದಿನದಾಗಿಯೇ ಅಥವಾ ಅದರ ಹಿಂದಿನದಾಗಿ ಮಂದ್ರ(ಸ್ವರ)ವಾಗುತ್ತದೆ. 47
೫೩೨ (ಅ) ಇದರ ಏಳು ವಿಧಗಳಿವೆ. (ಆ) (ಎಂದರೆ) ಏಳು ಅಂಶಗಳಿರುತ್ತವೆ- (ಹೇಗೆಂದರೆ) ಶುದ್ಧ (ರೂಪದ) ಒಂದು, ವಿಕೃತರೂಪದ, ಪೂರ್ಣಾವಸ್ಥೆಯ ಎರಡು. [(ಇ) ಷಾಡವಿತ, ಔಡುವಿತಗಳು ಎರಡೆರಡು.] (ಈ) (ಇದರ) ಮೂರ್ಛನೆಯು ರಿಷಭದಿಂದ ಮೊದಲಾಗುತ್ತದೆ. (ಉ) ತಾಳವು ಒಂದು
____
(ಋ) ಚತುಷ್ಕಲೋ ದಕ್ಷಿಣಃ, ಪ್ರಥುಲಾ | (ೠ) ಕಲಾಶ್ಚಿತ್ರೇ ದ್ವಾದರ್ಶ, ವಾರ್ತಿಕೇ ಚತುರ್ವಿಂಶತಿರ್ದಕ್ಷಿಣೇ Sಷ್ಟಚತ್ವಾರಿಂಶಚ್ಚ | (ಎ) ರಸಾ ವೀರಬೀಭತ್ಸಭಯಾನಕಾಃ | (ಏ) ಧ್ರುವಾಗಾನೇ ಪ್ರಥಮೇ ಪ್ರೇಕ್ಷಣಕೇ ವಿನಿಯೋಗಃ | 48
[4 ನೈಷಾದೀ]
೫೩೩ (ಅ) ನಿಷಾದವತ್ಯಾ ನಿಷಾದರ್ಷಭಗಾಂಧಾರಾ ಗ್ರಹಾ ಅಂಶಾಶ್ಚ | (ಆ) ಅಪನ್ಯಾಸಾಶ್ಚ ನಿಷಾದಗಾಂಧಾರರ್ಷಭಾಃ | (ಇ) ನಿಷಾದ ಏವ ನ್ಯಾಸಃ | (ಈ) ಪಂಚಮಹೀನಂ ಷಾಡವವಮ್, ಪಂಚಮಷಡ್ಜಹೀನಮೌಡುವಿತಮ್ | (ಉ) ಪೂರ್ಣಾವಸ್ಥಾಯಾಂ ಷಡ್ಜಮಧ್ಯಮಪಂಚಮಧೈವತಾನಾಮಲ್ಪತ್ವಮ್ (ಊ) [ಷಾಡವೇ ಷಡ್ಜಮಧ್ಯಮಧೈವ ತಾನಾಮಲ್ಪತ್ವಮ್] (ಋ) ಔಡುವಿತೇ ಮಧ್ಯಮ ಧೈವತಯೋರಲ್ಪತ್ವಮ್ | (ೠ) ಪಂಚಸ್ವರಪರಾ ತಾರಗತಿಃ | (ಎ) ನ್ಯಾಸಪರಸ್ತತ್ಪರೋ ವಾ ಮಂದ್ರಃ | 49
೫೩೪ (ಅ) ಗಾಂಧಾರಾದಿಮೂರ್ಛನಾ | (ಆ) ತಾಲಶ್ಚಚ್ಚತ್ಪುಟಃ | (ಇ) ದಕ್ಷಿಣೇ ಕಲಾ ದ್ವಾತ್ರಿಂಶತ್ | (ಈ) [ವಾರ್ತಿಕೇ ಷೋಡಶ|] (ಉ) ಚಿತ್ರೇ Sಷ್ಟೌ | (ಊ) ದಶವಿಧತ್ವಂ ಚಾಸ್ಯಾ | (ಋ) ದಶಾಂಶಾಃ – ಶುದ್ಧಃ ತ್ರಯೋ ವಿಕೃತಾ: ಪೂರ್ಣಾ [:, ತ್ರಯಃ ಷಾಡವಾಃ, ತ,ಯ ಔಡುವಿಶಶ್ಚೇತಿ | (ೠ) ರಸಶ್ಚ ಕರುಣಃ | (ಎ) ಧ್ರುವಾಗಾನೇ ಪ್ರಥಮಪ್ರೇಕ್ಷಣಕೇ] ವಿನಿಯೋಗಃ | 50
[5. ಷಡ್ಜಕೈಶಿಕೀ]
೫೩೫ (ಅ) ಷಡ್ಜಕೈಶಿಕ್ಯಾ[:] ಷಡ್ಜಗಾಂಧಾರಪಂಚಮೀ ಗ್ರಹಾ ಅಂಶಾಶ್ಚ | (ಆ) ಪಂಚಸ್ವರಪರಸ್ತಾರಃ | (ಇ) ನ್ಯಾಸಪರಸ್ತತ್ಪರೋ ವಾ ಮಂದ್ರಃ, ನಿತ್ಯಸಂಪೂರ್ಣಾ | (ಈ) ಧೈವತನಿಷಾದಮಧ್ಯಮಾನಮಲ್ಪತ್ವಮ್(ಉ) ಋಷಭಸ್ಯಾಲ್ಪತರತ್ವಂ, ಶೇಪಾಣಾಂ ಬಹುತ್ವಂ, ನ್ಯಾಸಸ್ತು ಗಾಂಧಾರಃ | (ಊ) ಷಡ್ಜನಿಷಾದಪಂಚಮಾ ಅಪನ್ಯಾಸಾಶ್ಚ | 51
—
ಪಾಠವಿಮರ್ಶೆ: ೫೩೨ ಋ ೫೩೩ಆ,ಇ,ಉ ೫೩೪ ಇ,ಋ ೫೩೫ ಆ, ಈ, ಉ,ಊ
—-
ಕಲೆಯ ಪಂಚಪಾಣಿ, ಮಾರ್ಗವು ಚಿತ್ರ, ಗೀತಿಯು ಮಾಗಧೀ. (ಊ) (ಅದೇ ತಾಳದ) ದ್ವಿಕಲೆಯಲ್ಲಿ (ವಾರ್ತಿಕ)ಮಾರ್ಗ, ಸಂಭಾವಿತಾ (ಗೀತಿ). (ೠ)ಚಿತ್ರ (ಮಾರ್ಗ)ದಲ್ಲಿ ಹನ್ನೆರಡು ಕಲೆಗಳು, ವಾರ್ತಿಕ (ಮಾರ್ಗ)ದಲ್ಲಿ ಇಪ್ಪತ್ತನಾಲ್ಕು, ದಕ್ಷಿಣ (ಮಾರ್ಗ)ದಲ್ಲಿ ನಲವತ್ತೆಂಟು (ಕಲೆಗಳು). (ಎ) (ಇದರಲ್ಲಿ ಪ್ರತೀತವಾಗಬೇಕಾದ) ರಸಗಳು ವೀರ, ಬೀಭತ್ಸ (ಮತ್ತು), ಭಯಾನಕಗಳು. (ಏ) ಮೊದಲನೆಯ ದೃಶ್ಯದ ಧ್ರುವಾಗಾನದಲ್ಲಿ (ಇದರ) ವಿನಿಯೋಗವಾಗಬೇಕು. 48
[4 ನೈಷಾದೀ]
೫೩೩ (ಅ) ನಿಷಾದವತೀ(ಜಾತಿ)ಯಲ್ಲಿ ನಿಷಾದ, ರಿಷಭ, ಗಾಂಧಾರಗಳು ಗ್ರಹಗಳೂ ಅಂಶಗಳೂ (ಆಗಿವೆ). (ಆ) ನಿಷಾದ, ಗಾಂಧಾರ, ರಿಷಭಗಳು ಅಪನ್ಯಾಸಗಳು. (ಇ) ನಿಷಾದವೇ ನ್ಯಾಸ. (ಈ) ಪಂಚಲೋಪ(ದಿಂದ) ಷಾಡವವೂ ಪಂಚಮಷಡ್ಜಗಳ ಲೋಪದಿಂದ ಔಡುವಿತವೂ (ಆಗುತ್ತವೆ). (ಉ) ಪೂರ್ಣಾವಸ್ಥೆಯಲ್ಲಿ ಷಡ್ಜಮಧ್ಯಮಪಂಚಮಧೈವತಗಳಿಗೆ ಅಲ್ಪತ್ವವಿದೆ. (ಊ) [ಅದು ಷಾಡವವಾಗಿರುವಾಗ ಷಡ್ಜಮಧ್ಯಮಧೈವತಗಳಲ್ಲಿ ಅಲ್ಪತ್ವವಿದೆ].(ಋ) (ಅದು) ಔಡುವಿತವಾದಾಗ ಮಧ್ಯಮಧೈವತಗಳಲ್ಲಿ ಅಲ್ಪತ್ವವಿದೆ. (ೠ) (ಅಂಶದಿಂದ)ಐದು ಸ್ವರಗಳವರೆಗೆ ತಾರ(ಸ್ವರ)ಸಂಚಾರ (ವಿರುತ್ತದೆ). (ಎ) ನ್ಯಾಸದ ಹಿಂದಿನ ಸ್ವರದವರೆಗೆ ಅಥವಾ ಅದರ ಹಿಂದಿನ ಸ್ವರದವರೆಗೆ ಮಂದ್ರ (ಸ್ವರ) ಸಂಚಾರವಿರುತ್ತದೆ. 49
೫೩೪ (ಅ) (ಇದರ) ಮೂರ್ಛನೆಯು ಗಾಂಧಾರದಿಂದ ಮೊದಲಾಗುತ್ತದೆ. (ಅ) ತಾಳವು ಚಚ್ಚತ್ಪುಟ; (ಇ) ದಕ್ಷಿಣ (ಮಾರ್ಗ)ದಲ್ಲಿ ಮೂವತ್ತೆರಡು ಕಲೆಗಳು (ಇದರ ಪ್ರಮಾಣ). (ಈ)ವಾರ್ತಿಕಮಾರ್ಗದಲ್ಲಿ ಹದಿನಾರು (ಕಲೆಗಳು.) (ಉ) ಚಿತ್ರ (ಮಾರ್ಗ)ದಲ್ಲಿ ಎಂಟು (ಕಲೆಗಳ ಪ್ರಮಾಣ). (ಊ) ಇದರ ಹತ್ತುವಿಧ(ಗಳಿವೆ)-ಶುದ್ಧಾ(ಜಾತಿಯು ಒಂದು), ಮೂರು ವಿಕೃತಗಳು, (ಸಂ)ಪೂರ್ಣಗಳು (ಮೂರು, ಷಾಡವಗಳು ಮೂರು, ಔಡುವಿತಗಳು ಮೂರು-ಹೀಗೆ ಒಟ್ಟು ಹತ್ತು ವಿಧಗಳು). (ೠ) (ಇದರಲ್ಲಿ ಪ್ರತೀತವಾಗಬೇಕಾದ) ರಸವು ಕರುಣ. (ಎ) ಮೊದಲನೆಯ ದೃಶ್ಯದ ಧ್ರುವಾಗಾನದಲ್ಲಿ (ಇದರ) ವಿನಿಯೋಗ(ವಿದೆ). 50
[5 ಷಡ್ಜಕೈಶಿಕೀ]
೫೩೫ (ಅ) ಷಡ್ಜಕೈಶಿಕೀ (ಜಾತಿ)ಯಲ್ಲಿ ಷಡ್ಜಗಾಂಧಾರಪಂಚಮಗಳು ಗ್ರಹಗಳೂ ಅಂಶಗಳೂ (ಆಗಿವೆ). (ಆ) ತಾರ (ಸ್ವರವು) (ಅಂಶದಿಂದ) ಐದು ಸ್ವರದವರೆಗೆ (ಇರುತ್ತದೆ). (ಇ) ಮಂದ್ರವು ನ್ಯಾಸ(ಸ್ವರ)ದ ಹಿಂದಿನ ಸ್ವರದವರೆಗೆ ಅಥವಾ ಒಂದು ಹಿಂದಿನದರ-(=ಸ್ವರದ)ವರೆಗೆ; ಯಾವಾಗಲೂ ಸಂಪೂರ್ಣವೇ(ಆಗಿರುತ್ತದೆ). (ಈ) ಧೈವತ, ನಿಷಾದ, ಮಧ್ಯಮಗಳಲ್ಲಿ ಅಲ್ಪ (ಪ್ರಯೋಗ)ವಿರುತ್ತದೆ. (ಉ) ರಿಷಭವು (ಅವುಗಳಿಗಿಂತಲೂ) ಹೆಚ್ಚಾಗಿ ಅಲ್ಪ(ವಾಗಿರುತ್ತದೆ), ಉಳಿದವು (=ಸ್ವರ)ಗಳಿಗೆ ಬಹುತ್ವ(ವಿರುತ್ತದೆ); ಗಾಂಧಾರವು ನ್ಯಾಸ. (ಊ) ಷಡ್ಜನಿಷಾದಪಂಚಮಗಳು (ಇದರ) ಅಪನ್ಯಾಸಗಳು. 51
____
೫೩೬ (ಅ) ನಾಸ್ಯಾಃ ಶುದ್ಧತ್ವಂ, ಅಂಶಕಾಃ ಪೂರ್ಣಾಸ್ತ್ರಯಃ | (ಆ) ಚಚ್ಚತ್ಪುಟಸ್ತಾಲಃ | (ಇ) ಏಕಕಲೇ ಚಿತ್ರೇ ಮಾಗಧೀಗೀತಿಃ ದ್ವಿಕಲೇ ವಾರ್ತಿಕೇ ಸಂಭಾವಿತಾ, ಚತುಷ್ಕಲೇ ದಕ್ಷಿಣೇಪೃಥುಲಾ | (ಈ) ರಸಶ್ಚ ಕರುಣ: | (ಉ)ಪ್ರಥಮಪ್ರವೇಶಗೀತೇ ದ್ವಿತೀಯ ಪ್ರೇಕ್ಷಣಕೇ ವಿನಿಯೋಗಃ 52
[6. ಷಡ್ಜೋದೀಚ್ಯವಾ]
೫೩೭ (ಅ) ಷಡ್ಜೋದೀಚ್ಯವಾಯಾಃ ಷಡ್ಜಮಧ್ಯಮಮಧೈವತನಿಷಾದಾ ಗ್ರಹಾ ಅಂಶಾಶ್ಚ | (ಆ) ಪಂಚಸ್ವರಪರಸ್ತಾರಃ | (ಇ) ನ್ಯಾಸಪರಸ್ತತ್ಪರೋ ವಾ ಮಂದ್ರಃ | (ಈ) ಋಷಭಹೀನಂ ಷಾಡವಂ ಋಷಭಪಂಚಮಹೀನಮೌಡುವಮ್ | (ಉ) ಪೂರ್ಣಾವಸ್ಥಾಯಾಂ ಋಷಭಪಂಚಮಯೋರಲ್ಪತ್ವಮ್ | (ಊ) ಗಾಂಧಾರಸ್ಯಾಂಶತ್ವೇ [S] ಷ್ರಾಪ್ತೇ [Sಪಿ] ಬಾಹುಲ್ಯಮ್ | (ಋ) ಷಾಡವೇ ಪಂಚಮಸ್ಯಾಲ್ಪತ್ವಂ, ಔಡುವಿತೇ ಕಸ್ಯಾಪ್ಯಲ್ಪತ್ವಮಶೇಷಾಣಾಂ ಬಹುತ್ವಂ | (ೠ) ಮಧ್ಯಮೋ ನ್ಯಾಸಃ | (ಎ) ಋಷಭಧೈವತಾವಪನ್ಯಾಸೌ | (ಏ) ಅಂಶಾನಾಂ ಪರಸ್ಪರಗಮನಮ್ | 53
೫೩೮ (ಅ) ಏಕಾದಶವಿಧತ್ವಮಸ್ಯಾಃ | (ಆ) ಏಕಾದಶಾಂಶಕಾಃ- ಪೂರ್ಣಾಶ್ಚತ್ವಾರಃ, ಷಾಡವಾಸ್ತ್ರಯೋ ಧೈವತಾಂಶೇ ತದಪವಾದಾದ್ಔಡುವಿತಾಶ್ಚತ್ವಾರಃ | (ಇ) ಶುದ್ಧಸ್ತು ನಾಸ್ತಿ | (ಈ) ಗಾಂಧಾರಾ[-ರಾದಿ] ಮೂರ್ಛನಾ | (ಉ)ತಾಲಃ ಪಂಚಪಾಣಿಃ | (ಊ) ಏಕಕಲೇನ ಚಿತ್ರೇಣ ಮಾಗಧೀ, ದ್ವಿಕಲೇನ ವಾರ್ತಿಕೇನ ಸಂಭಾವಿತಾ, ಚತುಷ್ಕಲೇನ ಪೃಥುಲಾ | (ಋ)ರಸೌ ಶೃಂಗಾರಹಾಸ್ಯೌ | (ೠ) ಧ್ರುವಾಗಾನೇ ದ್ವಿತೀಯಪ್ರೇಕ್ಷಣಕೇ ವಿನಿಯೋಗಃ | 54
[7 ಷಡ್ಜಮಧ್ಯಮಾ]
೫೩೯ (ಅ) ಷಡ್ಜಮಧ್ಯಮಾಯಾ ಗ್ರಹಾ ಅಂಶಾಶ್ಚ ಸಪ್ತೈವ ಸ್ವರಾಃ (ಆ) ಪಂಚಸ್ವರಪರಸ್ತಾರಃ | (ಇ) ನ್ಯಾಸಪರಸ್ತತ್ಪರೋ ವಾ ಮಂದ್ರಃ | (ಈ) ನಿಷಾದಹೀನಾ ಷಾಡವಾ |
—
ಪಾಠವಿಮರ್ಶೆ: ೫೩೬ ಅ ೫೩೭ ಅ ೫೩೭ಆ,ಉ,ಊ ೫೩೮ ಅ ೫೩೯ಆ,ಏ
—-
೫೩೬ (ಅ) (ಇದಕ್ಕೆ) ಶುದ್ಧಾವಸ್ಥೆಯಿಲ್ಲ; ಪೂರ್ಣಾವಸ್ಥೆಯ ಮೂರು ಅಂಶಗಳಿವೆ. (ಆ) ತಾಳವು ಚಚ್ಚತ್ಪುಟ. (ಇ) (ಈ ತಾಳದ) ಒಂದು ಕಲೆಯಲ್ಲಿ, ಚಿತ್ರ(ಮಾರ್ಗ)ದಲ್ಲಿ ಮಾಗಧಿಗೀತಿಯು (ಪ್ರಯುಕ್ತವಾಗಬೇಕು); (ಅದರ) ಎರಡು ಕಲೆಯಲ್ಲಿ, ವಾರ್ತಿಕ (ಮಾರ್ಗ)ದಲ್ಲಿ ಪೃಥುಲಾ (ಗೀತಿಯಿರಬೇಕು). (ಈ) (ಈ ಗೀತಿಯಲ್ಲಿ ಪ್ರತೀತವಾಗಬೇಕಾದ) ರಸವು ಕರುಣ. (ಉ) ಎರಡನೆಯ ದೃಶ್ಯದ ಮೊದಲನೆಯ ಪ್ರವೇಶಗೀತದಲ್ಲಿ (ಈ ಹಾಡನ್ನು) ವಿನಿಯೋಗಿಸಬೇಕು. 52
[6. ಷಡ್ಜೋದೀಚ್ಯವಾ]
೫೩೭ (ಅ) ಷಡ್ಜೋದೀಚ್ಯವಾ(ಜಾತಿ)ಯಲ್ಲಿ ಷಡ್ಜಮಧ್ಯಮಧೈವತನಿಷಾದಗಳು ಗ್ರಹಗಳೂ ಅಂಶಗಳೂ(ಆಗಿವೆ). (ಅ) (ಅಂಶದಿಂದ)ಐದು ಸ್ವರಗಳವರೆಗೆ ತಾ(ಸ್ವರಸಂಚಾರ)ವಿರುತ್ತದೆ. (ಇ)ಮಂದ್ರ(ಸ್ವರ ಸಂಚಾರ)ವು ನ್ಯಾಸದ ಹಿಂದಿನ ಸ್ವರದವರೆಗೆ ಅಥವಾ ಅದರ ಹಿಂದಿನ ಸ್ವರದವರೆಗೆ (ಇರುತ್ತದೆ). (ಈ) ರಿಷಭದ ಲೋಪದಿಂದ ಷಾಡವ; ರಿಷಭಪಂಚಮಗಳ ಲೋಪದಿಂದ ಔಡುವ. (ಉ) ಅದರ ಪೂರ್ಣಾವಸ್ಥೆಯಲ್ಲಿ ರಿಷಭಪಂಚಮಗಳಲ್ಲಿ ಅಲ್ಪತ್ವವಿರುತ್ತದೆ. (ಊ) ಗಾಂಧಾರದಲ್ಲಿ ಅಂಶತ್ವವಿಲ್ಲದಿದ್ದರೂ ಬಾಹುಲ್ಯವಿದೆ. (ಋ) ಷಾಡವವಾದಾಗ ಪಂಚಮದಲ್ಲಿ ಅಲ್ಪತ್ವವಿರುತ್ತದೆ; ಔಡುವಿತದಲ್ಲಿ ಯಾವುದರದೂ ಅಲ್ಪತ್ವವಿಲ್ಲ; ಎಲ್ಲಾ ಸ್ವರಗಳಲ್ಲಿಯೂ ಬಹುತ್ವವಿದೆ. (ೠ) (ಇದರಲ್ಲಿ)ಮಧ್ಯಮವು ನ್ಯಾಸ(ಸ್ವರ). (ಎ) ರಿಷಭಧೈವತಗಳು ಅಪನ್ಯಾಸಗಳು. (ಏ) ಅಂಶಸ್ವರಗಳಲ್ಲಿ (=ಷಡ್ಜಮಧ್ಯಮವತನಿಷಾದಗಳಲ್ಲಿ) ಪರಸ್ಪರ ಸಂಚಾರವಿದೆ.
೫೩೮ (ಅ) ಇದರ ಹನ್ನೊಂದು ವಿಧಗಳಿವೆ. (ಆ) (ಇದರಲ್ಲಿ) ಹನ್ನೊಂದು ಅಂಶಗಳಿರುತ್ತವೆ. – ನಾಲ್ಕು ಪೂರ್ಣ(ಜಾತಿ)ಗಳು, ಷಾಡವಗಳು ಮೂರು, ಧೈವತವು ಅಂಶವಾಗಿರುವಾಗ (ಷಾಡವತ್ವದ) ಅಪವಾದವಿದೆ; ಔಡುವಿತಗಳು ನಾಲ್ಕು. (ಇ) ಶುದ್ಧ(ರೂಪ)ವು (ಇದಕ್ಕೆ) ಇಲ್ಲ. (ಈ) (ಅದರ) ಮೂರ್ಛನೆಯು ಗಾಂಧಾರದಿಂದ ಮೊದಲಾಗುತ್ತದೆ. (ಉ) (ಅದರ) ತಾಳವು ಪಂಚಪಾಣಿ. (ಊ) (ಈ ತಾಳದ) ಒಂದು ಏಕಕಲೆಯಲ್ಲಿ ಚಿತ್ರ(ಮಾರ್ಗ)ದಿಂದ ಮಾಗೀ(ಗೀತಿ)ಯನ್ನು (ಈ ಜಾತಿಯಲ್ಲಿ ಹಾಡಬೇಕು); (ಅದರ) ಎರಡು ಕಲೆಯಲ್ಲಿ ವಾರ್ತಿಕ (ಮಾರ್ಗ)ದಿಂದ ಸಂಭಾವಿತಾ (ಗೀತಿಯನ್ನೂ), ನಾಲ್ಕು ಕಲೆಯ (ಈ ತಾಳದ)ಲ್ಲಿ ದಕ್ಷಿಣ (ಮಾರ್ಗ)ದಿಂದ ಪೃಥುಲಾ(ಗೀತಿಯನ್ನೂ ಹಾಡಬೇಕು). (ಋ) (ಈ ಗೀತಿಯಲ್ಲಿ) ಶೃಂಗಾರಹಾಸ್ಯರಸಗಳೆರಡೂ (ಪ್ರತೀತವಾಗಬೇಕು) (ೠ) (ಈ ಗೀತಿಯನ್ನು) ಎರಡನೆಯ ದೃಶ್ಯದ ಧ್ರುವಾಗಾನದಲ್ಲಿ ವಿನಿಯೋಗಿಸಬೇಕು. 54
[7 ಷಡ್ಜಮಧ್ಯಮಾ]
೫೩೯(ಅ) ಷಡ್ಜಮಧ್ಯಮಾ(ಜಾತಿ)ಯಲ್ಲಿ ಏಳೂ ಸ್ವರಗಳು ಗ್ರಹಗಳೂ (ಆಗಿವೆ). (ಅ) (ಅಂಶದಿಂದ) ಐದನೆಯ ಸ್ವರದವರೆಗೆ ತಾರ(ಸ್ವರಸಂಚಾರ)ವಿದೆ. (ಇ) ಮಂದ್ರವು ನ್ಯಾಸದ ಹಿಂದಿನ ಸ್ವರದವರೆಗೆ
____
(ಉ)ನಿಷಾದಗಾಂಧಾರಹೀನಾ ಔಡುವಿತಾ | (ಊ) ಗ್ರಾಮಾವಿರೋಧೇನ ಯಥೇಷ್ಟಂ ಸಂಚಾರಃ | (ಋ) ಪೂರ್ಣಾವಸ್ಥಾಯಾಂ ನಿಷಾದಗಾಂಧಾರಯೋರಲ್ಪತ್ವಮ್ | (ೠ) ಷಡ್ಜಮಧ್ಯಮೌ ನ್ಯಾಸೌ | (ಎ) ಸಪ್ತಸ್ವರಾ ಅಪನ್ಯಾಸಾಃ | 55
೫೪೦ (ಅ) ಸಪ್ತದಶವಿಧತ್ವಮಸ್ಯಾಃ | (ಆ) ಸಪ್ತದಶಾಂಶಕಾಃ – ತತ್ರ ಸಪ್ತ ಪೂರ್ಣಾಃ ಪಂಚ ಷಾಡವಾಃ ಪಂಚ ಔಡುವಿತಶ್ಚೇತಿ ಶುದ್ಧತ್ವಂ ನಾಸ್ತಿ | (ಇ) ಮಧ್ಯಮಾದಿಮೂರ್ಛನಾ | (ಈ) ತಾಲಃ ಪಂಚಪಾಣಿಃ | (ಉ) ಏಕಕಲೇನ ಚಿತ್ರೇಣ ಮಾಗಧೀ, ದ್ವಿಕಲೇನ ವಾರ್ತಿಕೇನ ಸಂಭಾವಿತಾ, ಚತುಷ್ಕಲೇನ ದಕ್ಷಿಣೇನ ಪೃಥುಲಾ | (ಊ) ಸರ್ವರಸಾತ್ಮಿಕಾ, ಧ್ರುವಾಗಾನೇ ದ್ವಿತೀಯೇ ಪ್ರೇಕ್ಷಣಕೇ ವಿನಿಯೋಗಃ | 56
|| [ಇತಿ] ಏತಾಃ ಷಡ್ಜಗ್ರಾಮಸಂಬಂಧಾಃ ಸಪ್ತ ಜಾತಯಃ ||
೫೪೧ (ಅ) ಇದಾನೀಂ ಮಧ್ಯ[ಮ]ಗ್ರಾಮಸಂಬಂಧಾ ಜಾತಯ ಉಚ್ಯಂತೇ- 57
[8 ಗಾಂಧಾರೀ]
೫೪೨ (ಅ) ತತ್ರ ಗಾಂಧಾರ್ಯಾ ಗಾಂಧಾರಷಡ್ಜಮಧ್ಯಮಪಂಚಮನಿಷಾದಾ ಗ್ರಹಾಃ, ತ ಏವಾಂಶಾಃ | (ಆ) ಪಂಚಸ್ವರಪರಸ್ತಾರೋ ನ್ಯಾಸಪರಸ್ತತ್ಪರೋ ವಾ ಮಂದ್ರಃ | (ಇ) ಋಷಭಹೀನಂ ಷಾಡವಂ, ಋಷಭಧೈವತಹೀನಮೌಡುವಿತಮ್ | (ಈ) ಪೂರ್ಣಾವಸ್ಥಾಯಾಂ ಋಷಭಧೈವತಯೋರಲ್ಪತ್ವಂ, ಶೇಷಾಣಾಂ ಬಹುತ್ವಮ್ | (ಉ) ಸ್ವರಜಾತಿತ್ವಾದ್ಗಾಂಧಾರೋ ನ್ಯಾಸಃ ಷಡ್ಜಪಂಚಮಾಪನ್ಯಾಸೌ ಧೈವತರ್ಷಭಯೋಃ ಸಂಗತಿಃ | (ಊ) ತದ್ಯಥಾ-ಗಾಂಧಾರೀ ಯದಾ ಸಂಪೂರ್ಣಾ ಗೀಯತೇ ತದಾ ಮಾಧಾರಿಗಾ ಇತಿ ಪ್ರಯೋಗಃ ಸ್ಯಾತ್ | (ಋ) ಯದಾ ಋಷಭಹೀನಾ ಗೀಯತೇ [ತದಾS]ಧರ ಸ್ವಪ್ರವೇಶನೇ ಮಾಧಾಧಾಗಾ ಇತಿ ಪ್ರಯೋಗಃ ಸ್ಯಾತ್ | (ೠ)ಯದಾ ಔಡುವಿತಾ ಗೀಯತೇ ತದಾ ಉತ್ತರಸ್ವರಪ್ರವೇಶೇ ಮಾಗಾಗಾ ಇತಿ ಪ್ರಯೋಗಃ ಸ್ಯಾತ್, ಮಾಪಾರಿಧ ಇತಿ ಪ್ರಯೋಗಃ ಕದಾಚಿದಪಿ ನ ಸ್ಯಾತ್ | 58
—
ಪಾಠವಿಮರ್ಶೆ: ೫೪೦ಅ,ಆ, ಆ,ಉ ೫೪೨ ಆ,ಉ,ಊ,ಋ ಋ
—-
ಅಥವಾ ಅದರ ಹಿಂದಿನ ಸ್ವರದವರೆಗೆ ಇರುತ್ತದೆ. (ಈ) ನಿಷಾದಲೋಪದಿಂದ ಷಾಡವ(ವಾಗುತ್ತದೆ.) (ಉ) ನಿಷಾದಗಾಂಧಾರಗಳ ಲೋಪದಿಂದ ಔಡುವಿತ(ವಾಗುತ್ತದೆ). (ಊ) ಗ್ರಾಮ(ಲಕ್ಷಣ)ಕ್ಕೆ ವಿರೋಧವಿಲ್ಲದಂತೆ (ಸ್ವರಗಳು) ಇಷ್ಟಬಂದ ಹಾಗೆ ಸಂಚರಿಸಬಹುದು. (ಋ) (ಈ ಜಾತಿಯು) ಪೂರ್ಣವಾಗಿರುವಾಗ ನಿಷಾದಗಾಂಧಾರಗಳಲ್ಲಿ ಅಲ್ಪತ್ವವಿದೆ. (ೠ) ಷಡ್ಜಮಧ್ಯಮಗಳೆರಡೂ ನ್ಯಾಸಗಳು. (ಎ) ಏಳು ಸ್ವರಗಳೂ ಅಪನ್ಯಾಸಗಳು. 55
೫೪೦ (ಅ) (ಅದರ) ಹದಿನೇಳು ವಿಧಗಳಿವೆ. (ಆ) ಹದಿನೇಳು ಅಂಶಗಳಿವೆ: ಅವುಗಳ ಪೈಕಿ (ಸಂ)ಪೂರ್ಣವಾದವುಗಳು ಏಳು, ಐದು ಷಾಡವಗಳು, ಐದು ಔಡುಮಿತಗಳು-ಹೀಗೆ (ಹದಿನೇಳು ರೂಪಗಳು). (ಅದಕ್ಕೆ) ಶುದ್ಧತ್ವವಿಲ್ಲ. (ಇ) (ಅದರ) ಮೂರ್ಛನೆಯು ಮಧ್ಯಮದಿಂದ ಮೊದಲಾಗುತ್ತದೆ. (ಈ) ತಾಳವು ಪಂಚಪಾಣಿ. (ಉ) ಅದರ ಒಂದು ಕಲೆಯ (ಪ್ರಮಾಣದ)ಲ್ಲಿ ಚಿತ್ರ (ಮಾರ್ಗ)ದಿಂದ ಮಾಗಧೀ(ಗೀತಿಯನ್ನೂ), ಎರಡು ಕಲೆಯ (ತಾಳದ)ಲ್ಲಿ ವಾರ್ತಿಕ(ಮಾರ್ಗ)ದಲ್ಲಿ ಸಂಭಾವಿತಾ (ಗೀತಿಯನ್ನೂ), ನಾಲ್ಕು ಕಲೆಯ (ತಾಳದ)ಲ್ಲಿ ದಕ್ಷಿಣ(ಮಾರ್ಗ)ದಲ್ಲಿ ಪ್ರಥುಲಾ(ಗೀತಿಯನ್ನೂ ಹಾಡಬೇಕು). (ಊ) (ಈ ಗೀತಿಯು) ಎಲ್ಲಾ ರಸಗಳನ್ನೂ ಒಳಗೊಂಡಿರುತ್ತದೆ; ಎರಡನೆಯ ದೃಶ್ಯದ ಧ್ರುವಾಗಾನದಲ್ಲಿ (ಈ ಗೀತಿಯನ್ನು) ವಿನಿಯೋಗಿಸಬೇಕು. 56
[ಹೀಗೆ ಷಡ್ಜಗ್ರಾಮಕ್ಕೆ ಸಂಬಂಧಿಸಿದ ಏಳು ಜಾತಿಗಳ ವಿಶೇಷಲಕ್ಷಣವು ಮುಗಿಯಿತು.]
೫೪೧ (ಅ) ಈಗ ಮಧ್ಯ[ಮ]ಗ್ರಾಮವನ್ನು ಸಂಬಂಧಿಸಿದ ಜಾತಿಗಳನ್ನು ನಿರೂಪಿಸಲಾಗುವುದು. 57
[8 ಗಾಂಧಾರೀ]
೫೪೨ (ಅ) ಅವುಗಳ ಪೈಕಿ ಗಾಂಧಾರೀ(ಜಾತಿ)ಯಲ್ಲಿ ಗಾಂಧಾರಷಡ್ಜಮಧ್ಯಮಪಂಚಮನಿಷಾದಗಳು ಗ್ರಹಗಳು; ಅವೇ ಅಂಶಗಳೂ ಹೌದು. (ಆ) (ಅಂಶದಿಂದ) ಐದನೆಯ ಸ್ವರದವರೆಗೆ ತಾರ(ಸ್ವರ)ವಿದೆ; ನ್ಯಾಸದವರೆಗೆ ಅಥವಾ ಅದರ ಹಿಂದಿನ ಸ್ವರದವರೆಗೆ ಮಂದ್ರ(ಸ್ವರ)ವಿದೆ. (ಇ) ರಿಷಭಲೋಪದಿಂದ ಷಾಡವವೂ ರಿಷಭಧೈವತಗಳ ಲೋಪದಿಂದ ಔಡುವಿತವೂ (ಆಗುತ್ತವೆ). (ಆ) (ಅದು) ಪೂರ್ಣವಾಗಿರುವಾಗ ರಿಷಭಧೈವತಗಳಲ್ಲಿ ಅಲ್ಪತ್ವವೂ ಉಳಿದವು(ಸ್ವರ)ಗಳಲ್ಲಿ ಬಹುತ್ವವೂ ಇರುತ್ತವೆ. (ಉ) ಸ್ವರದ (ಹೆಸರನ್ನು ಪಡೆದಿರುವ) ಜಾತಿಯಾಗಿರುವದರಿಂದ ಗಾಂಧಾರವು ನ್ಯಾಸ; ಷಡ್ಜಪಂಚಮಗಳು ಅಪನ್ಯಾಸಗಳು, ಧೈವತರಿಷಭಗಳಲ್ಲಿ (ಪರಸ್ಪರ)ಸಂಗವಿದೆ. (ಊ)ಅದು ಹೇಗೆಂದರೆ-ಗಾಂಧಾರಿಯನ್ನು ಸಂಪೂರ್ಣವಾಗಿ ಹಾಡುವಾಗ ಮಾಧಾರಿಗಾ ಎಂಬ ಪ್ರಯೋಗವಿದೆ. (ಋ) (ಅದನ್ನು) ರಿಷಭವಿಲ್ಲದೆ ಹಾಡುವಲ್ಲಿ (ಅದರ) ಕೆಳಗಿರುವ ಸ್ವರದ ಪ್ರವೇಶಮಾಡುವಾಗ ಮಾಧಾಧಾಗಾ ಎಂಬ ಪ್ರಯೋಗವಿದೆ. (ೠ) (ಅದನ್ನು) ಔಡುವಿತವನ್ನಾಗಿ ಹಾಡುವಾಗ ಮೇಲಿನ ಸ್ವರವನ್ನು ಹೋಗುವಲ್ಲಿ ಮಾಗಾಗಾ ಎಂಬ ಪ್ರಯೋಗವುಂಟು; ಮಾಪಾರಿಧ ಎಂಬ ಪ್ರಯೋಗವು ಎಂದಿಗೂ ಇರುವುದಿಲ್ಲ. 58
____
೫೪೩ (ಅ) [ಏಕಾ] ದಶ ವಿಧತ್ವಮಸ್ಯಾಃ | (ಆ) ಏಕಾದಶಾಂಶಕಾಃ- ಶುದ್ಧಃ, ವಿಕೃತಾಃ ಪೂರ್ಣಾಃ ಪಂಚ, ಚತ್ವಾರಃ ಷಾಡವಾಃ, ಔಡುವಿತ ಏಕಃ | (ಇ) ಮೂರ್ಛನಾ ಧೈವತಾದಿಃ | (ಈ) ಚಚ್ಚತ್ಪುಟಸ್ತಾಲಃ ಏಕಕಲವಿಧೌ ಚಿತ್ರಮಾರ್ಗೇ ಮಾಗಧೀ, ದ್ವಿಕಲೇ ವಾರ್ತಿಕೇ ಸಂಭಾವಿತಾ, ಚತುಷ್ಕಲೇ ದಕ್ಷಿಣೇ ಪೃಥುಲಾ | (ಉ) ರಸಃ ಕರುಣಃ | (ಊ) ಧ್ರುವಾಗಾನೇ ತೃತೀಯಪ್ರೇಕ್ಷಣಕೇ ವಿನಿಯೋಗಃ | 59
[೯. ರಕ್ತಗಾಂಧಾರೀ]
(ಅ) ರಕ್ತಗಾಂಧಾರ್ಯಾಃ ಷಡ್ಜಮಧ್ಯಮಪಂಚಮಗಾಂಧಾರನಿಷಾಧಾ ಗ್ರಹಾ ಅಂಶಾಶ್ಚ | (ಆ) ಪಂಚಸ್ವರಪರಸ್ತಾರಃ | (ಇ) ನ್ಯಾಸಪರಸ್ತತ್ ಪರೋ ವಾ ಮಂದ್ರಃ | (ಈ) ಋಷಭಹೀನಂ ಷಾಡವಂ ಋಷಭಧೈವತಹೀನಮೌಡುವಿತಮ್ | (ಉ) ಪೂರ್ಣಾವಸ್ಥಾಯಾಂ ಋಷಭಧೈವತಯೋರಲ್ಪತ್ವಂ, ಶೇಷಾಣಾಂ ಬಾಹುಲ್ಯಮ್ | (ಊ) ನಿಷಾದಸ್ಯಾಂಶತ್ವಾದ್ ಬಹುತ್ವೇ ಪ್ರಾಪ್ತೇ ವಚನಾದಬಹುತ್ವಂ, ಧೈವತಸ್ಯಾನಂಶತ್ವಾದಲ್ಪತ್ವೇ ವಚನಾದ್ ಬಾಹುಲ್ಯಮ್ | (ಋ) ಷಾಡವೇ ಧೈವತಸ್ಯಾಬಾಹುಲ್ಯಂ, ಋಷಭಸ್ಯ ನ ಕದಾಚಿದಪಿ | (ೠ) ಔಡುವಿತೇ ಸರ್ವೇಷಾಮಂಶತ್ವಾನ್ನ ಕಸ್ಯಾಪ್ಯಲ್ಪತ್ವಮ್ | (ಎ) ಉಕ್ತಭಂಗ್ಯಾ [S] ಶೇಷಾಣಾಂ ಬಾಹುಲ್ಯಮ್ | (ಏ) ನ್ಯಾಸೋ ಗಾಂಧಾರ ಏವ | (ಐ) ಅಪನ್ಯಾಸಸ್ತು ಮಧ್ಯಮ ಏವ | (ಒ) ಷಡ್ಜಗಾಂಧಾರಯೋಸ್ತು ಸಂಚಾರಃ | 60
೫೪೫ (ಅ) ದಶವಿಧತ್ವಮಸ್ಯಾಃ | (ಆ) ದಶಾಂಶಕಾಃ- ಪೂರ್ಣಾಃ ಪಂಚ, ಚತ್ವಾರಃ ಷಾಡವಾಃ, ಪಂಚಮೇsಪವಾತ್ [ಔಡುವಿತ ಏಕಃ] | (ಇ) ಋಷಭಾದಿಮೂರ್ಛನಾ | (ಈ) ಕರುಣೋ ರಸಃ | (ಉ) ತಾಲಃ ಪಂಚಪಾಣಿಃ | (ಊ) ಏಕಕಲೇ ಚಿತ್ರೇ ಮಾಗಧೀ | (ಋ)
—
ಪಾಠ ವಿಮರ್ಶೆ: ೫೪೩, ಅ, ಊ, ೫೪೫, ಅ ಋ
—-
೫೪೩ (ಅ) (ಇದರಲ್ಲಿ) ಹನ್ನೊಂದು ವಿಧಗಳಿವೆ. (ಆ) (ಮತ್ತು) ಹನ್ನೊಂದು ಅಂಶಗಳಿವೆ-ಶುದ್ಧಾ (ಜಾತಿಯ ಒಂದು), ವಿಕೃತವಾದ ಪೂರ್ಣ (ಜಾತಿ)ಗಳು ಐದು, ಣಾಲ್ಕು ಷಾಡವಗಳು, ಔಡುವಿತವಾದ ಒಂದು (ಹೀಗೆ ಒಟ್ಟು ಹನ್ನೊಂದು ವಿಧಗಳು) (ಇ) (ಈ ಜಾತಿಯ) ಮೂರ್ಛನೆಯು ಧೈವತದಿಂದ ಮೊದಲಾಗುತ್ತದೆ. (ಈ) (ಇದರ ಗೀತಿಯ) ತಾಲವು ಒಂದು ಕಲಾ (ಪ್ರಮಾಣದ) ಚಚ್ಚುತ್ಪುಟ; ಚಿತ್ರ (ಮಾರ್ಗ) ದಿಂದ ಮಾಗಧೀ (ಗೀತಿಯನ್ನೂ), ಎರಡು ಕಲೆಯ (ಪ್ರಮಾಣದ ಅದೇ ತಾಳದ) ವಾರ್ತಿಕ (ಮಾರ್ಗ)ದಿಂದ ಸಂಭಾವಿತಾ (ಗೀತಿಯನ್ನೂ), ನಾಲ್ಕು ಕಲೆಯ (ಪ್ರಮಾಣದ ಅದೇ ತಾಳದ) ದಕ್ಷಿಣ (ಮಾರ್ಗ)ದಿಂದ) ಪೃಥುಲಾ (ಗೀತಿಯನ್ನೂ) ಹಾಡಬೇಕು. (ಉ) (ಈ ಗೀತಿಯಲ್ಲಿ ಪ್ರಕಟವಾಗಬೇಕಾದ) ರಸವು ಕರುಣ. (ಊ) ಮೂರನೆಯ ದೃಶ್ಯ ಧ್ರುವಾಗಾನದಲ್ಲಿ (ಇದರ) ವಿನಿಯೋಗವಿದೆ.
[೯. ರಕ್ತಗಾಂಧಾರೀ)
೫೪೪ (ಅ) ರಕ್ತಗಾಂಧಾರೀ (ಜಾತಿ) ಯಲ್ಲಿ ಪಡ್ಜಮಧ್ಯಮ ಪಂಚಮಗಾಂಧಾರ ನಿಷಾದಗಳು ಗ್ರಹಗಳೂ ಅಂಶಗಳೂ (ಆಗಿವೆ). (ಆ) (ಅಂಶದಿಂದ) ಐದು ಸ್ವರಗಳವರೆಗೆ ತಾರ (ಸ್ವರ ಸಂಚಾರ)ವಿದೆ. (ಇ) ನ್ಯಾಸದ ವರೆಗೆ ಅಥವಾ ಅದರ ಹಿಂದಿನ ಸ್ವರದವರೆಗೆ ಮಂದ್ರ (ಸ್ವರದ ಸಂಚಾರ)ವಿದೆ. (ಈ) (ಇದರಲ್ಲಿ) ರಿಷಭಲೋಪದಿಂದ ಷಾಡವವಾಗುತ್ತದೆ; ರಿಷಭಧೈವತಗಳ ಲೋಪದಿಂದ ಔಡುವಿತವಾಗುತ್ತದೆ. (ಉ) (ಈ ಜಾತಿಯು) ಪೂರ್ಣವಾಗಿರುವಾಗ ರಿಷಭದೈವತಗಳಲ್ಲಿ ಅಲ್ಪತ್ವವಿದೆ; ಉಳಿದವು (ಸ್ವರ)ಗಳಲ್ಲಿ ಬಹುಲ ಪ್ರಯೋಗವಿದೆ. (ಊ) ನಿಷಾದವು ಅಂಶವಾಗಿರುವಾಗ ಅದಕ್ಕೆ ಬಹುತ್ವವು (ಸ್ವಾಭಾವಿಕವಾಗಿಯೇ) ಇದ್ದರೂ (ಮೇಲೆ ಹೇಳಿರುವ) ವಿಶೇಷವಿಧಿಯಿಂದಾಗಿ ಅಲ್ಪತ್ವವೇ ಸಿದ್ಧಿಸುತ್ತದೆ; ಧೈವತವು ಅಂಶವಲ್ಲದುದರಿಂದ ಅದಕ್ಕೆ ಅಲ್ಪತ್ವವು ಬಂದೊದಗಿದರೂ (ಮೇಲೆ ಹೇಳಿದ) (ವಿಶೇಷ) ವಚನದಿಂದಾಗಿ ಅದಕ್ಕೆ ಬಹುತ್ವವೇ ಸಿದ್ಧಿ ಸುತ್ತದೆ.) (ಋ) ಷಾಡವವಾಗಿರುವಾಗಿ ಧೈವತವು ಬಹುಲವಾಗಿರುವುದಿಲ್ಲ; ಆದರೆ ರಿಷಭದ ವಿಷಯದಲ್ಲಿ ಎಂದಿಗೂ (ಬಾಹುಲ್ಯವು) ಇಲ್ಲಿದೆ ಇರುವುದಿಲ್ಲ. (ೠ) (ಈ ಜಾತಿಯು) ಔಡುವಿತವಾಗಿರುವಾಗ ಎಲ್ಲಾ ಸ್ವರಗಳೂ ಅಂಶವಾಗಿರುವುದರಿಂದ ಅವುಗಳಲ್ಲಿ ಯಾವುದಕ್ಕೂ ಅಲ್ಪತ್ವವಿರುವುದಿಲ್ಲ. (ಎ) (ಈ) ಮಾತಿನ (ಇನ್ನೊಂದು) ಭಂಗಿಯಲ್ಲಿ ಎಲ್ಲಾ ಸ್ವರಗಳಿಗೂ ಬಾಹುಲ್ಯವಿದೆ (ಎಂದಾಗುತ್ತದೆ). (ಏ) ಗಾಂಧಾರವೇ ( ಈ ಜಾತಿಯ) ನ್ಯಾಸ. (ಐ) ಅಪನ್ಯಾಸವು ಮಧ್ಯಮವೇ. (ಒ) ಪಡ್ಜಗಾಂಧಾರಗಳಲ್ಲಿ (ಪರಸ್ಪರ) ಸಂಚಾರವಿದೆ. 60
೫೪೫ (ಅ) ಇದರ ಹತ್ತು ವಿಧಗಳಿವೆ. (ಆ) (ಇದರಲ್ಲಿ) ಹತ್ತು ಅಂಶಗಳಿವೆ- ಪೂರ್ಣ (ರೂಪ)ದ ಐದು (ಜಾತಿಗಳು), ಪಂಚಮವು ಅಂಶವಾಗಿರುವಾಗ ಷಾಡವದ ವಿಷಯದಲ್ಲಿ ಅಪವಾದವಿರುವದಿರಂದ, ನಾಲ್ಕು ಷಾಡವಗಳು (ಮಾತ್ರ), [ಔಡುವಿತವಾದ ಒಂದು ಜಾತಿ]:- (ಹೀಗೆ ಒಟ್ಟು ಹತ್ತು).(ಇ) (ಇದರ) ಮೂರ್ಛೆನೆಯು ರಿಷಭದಿಂದಮೊದಲಾಗುತ್ತದೆ. (ಈ) (ಇದರ ಗೀತಿಯಲ್ಲಿ ಪ್ರಕಟವಾಗಬೇಕಾದುದು) ಕರುಣರಸ. (ಉ) (ಈ ಗೀತಿಗೆ ಅನ್ವಯಸಬೇಕಾದ) ತಾಳವು ಪಂಚಪಾಣಿ. (ಊ) (ಈ ತಾಳದ) ಒಂದು
____
ದ್ವಿಕಲೇ ವಾರ್ತಿಕೇ ಸಂಭಾವಿತಾ, [ಚತುಷ್ಕಲೇ ಪೃದುಲಾ | (ೠ) ಧ್ರುವಾಗಾನೇ ತೃತೀಯ ಪ್ರೇಕ್ಷಣಕೇ ವಿನಿಯೋಗಃ|]
[ಪ್ರಕ್ಷಿಪ್ತಾಂಶೇ ನವಜಾತಿ ಲಕ್ಷಣಂ]
[1 ಷಡ್ಜಮಧ್ಯಮಾ]
೫೪೬ ಅಂಶಾಃ ಸಪ್ತಸ್ವರಾಃ ಷಡ್ಜಮಧ್ಯಮಾಯಾಃ ಮಿಥಶ್ಚ ತೇ |
ಸಂಗಚ್ಛೇಂತೇ, ನಿರಲ್ಪೋS೦ಶಾದ್ ಗಾದೃತೇ ವಾದಿತಾಂ ವಿನಾ || ೯೧ ||
೫೪೭ ನಿಲೋಪೇ ನಿಗಲೋಪೇ ಷ ಷಾಡವೌಡುವಿತೇ ಮತೇ |
ಷಾಡವೌಡುವಯೋಃ ಸ್ಯಾತಾಂ ದ್ವಿಶ್ರುತೀ ತು ವಿರೋಧಿನೌ || ೯೨ ||
೫೪೮ ಗೀತಿ ತಾಲಕಲಾದೀನಿ ಷಾಡ್ಜೀವನ್ ಮೂರ್ಛನಾ ಪುನಃ |
ಮಧ್ಯಮಾದಿರಿಹ ಜ್ಞೇಯಾ ಪೂರ್ವವದ್ ವಿನಿಯೋಜನಮ್ || ೯೩ ||
೫೪೯ (ಅ) ಅಸ್ಯಾಂ ಷಡ್ಜಮಧ್ಯಮೌ ನ್ಯಾಸೌ | (ಆ) ಸಪ್ತಸ್ವರಾ ಅಒಪನ್ಯಾಸಾಃ | (ಇ) ಪ್ರಸ್ತಾರಃ- 62
ಮಾ ಗಾ ಸಗ ಪಾ ಧಪ ಮಾ ನಿಧ ನಿಮ i
ಮಾ ಮಾ ಸಾ ರಿಗ ಮಗ ನಿಗ ಪಧ ಪಾ ii
ಮಾ ಗಾ ರೀ ಗಾ ಮಾ ಮಾ ಸಾ ಸಾ iii
[ಮಾ ಮಗಮ ಮಾ ಮಾ ನಿಧ ಪಧ ಪಮ ಗಮಮ]iv
ಧಾ ಪಧ ಪರಿ ರಿಗ ಗರಿ ಗಸ ಧಸ ಧಾ v
ನಿಧ ಸಾ ರೀ ಮಗಮ ಮಾ ಮಾ ಮಾ ಮಾ vi
ಮಾ ಮಾ ಮಗಮ ಮಧ ಧಪ ಪಧ ಪಮ ಮಗಗ vii
—
ಪಾಠವಿಮರ್ಶೆ: ೫೪೬, ಅ, ಆ, ಈ, ೫೪೭, ಅ ೫೪೮, ಈ ೫೪೯, ಅ, ಆ
—-
ಕಲಾ (ಪ್ರಮಾಣ)ದಲ್ಲಿ ಚಿತ್ರ (ಮಾರ್ಗ)ದಿಂದ ಮಾಗಧೀ (ಗೀತಿಯನ್ನು ಪ್ರಯೋಗಿಸಬೇಕು). (ಋ) ಈ ತಾಳದ ಎರಡು ಕಲಾ(ಪ್ರಮಾಣ)ದಲ್ಲಿ ವಾರ್ತಿಕ (ಮಾರ್ಗ)ದಿಂದ ಸಂಭಾವಿತಾ(ಗೀತಿಯನ್ನೂ) [ನಾಲ್ಕು ಕಲಾ ಪ್ರಮಾಣದಲ್ಲಿ ದಕ್ಷಿಣ (ಮಾರ್ಗ)ದಿಂದ ಪೃಥುಲಾ ಗೀತಿಯನ್ನೂ ಪ್ರಯೋಗಿಸಬೇಕು.) (ೠ) ಮೂರನೆಯ ದೃಶ್ಯದ ಧ್ರುವಾಗಾನದಲ್ಲಿ] (ಈ ಗೀತಿಯನ್ನು) ವಿನಿಯೋಗಿಸಬೇಕು. 61
[ಉಳಿದ ಒಂಭತ್ತು ಜಾತಿಗಳ ಲಕ್ಷಣಕ್ಕೆ ಪ್ರಕ್ಷಿಪ್ತವಾಗಿರು ಅಂಶ]
[1 ಷಡ್ಜಮಧ್ಯಮಾ]
೫೪೬ ಷಡ್ಜಮಧ್ಯಾದಲ್ಲಿ ಏಳೂ ಸ್ವರಗಳು ಅಂಶಗಳು; ಅವು ಪರಸ್ಪರವಾಗಿ ಸೇರಿಕೊಳ್ಳುತ್ತವೆ. ಗಾಂಧಾರವಾದಿತ್ವವಿಲ್ಲದಿದ್ದಾಗ (ಎಂದರೆ) ಅಂಶತ್ವವಿಲ್ಲದಿದ್ದಾಗ ನಿಷಾದವು ಅಲ್ಪವಾಗಿದೆ. ೯೧
೫೪೭ ನಿಲೋಪದಿಂದಲೂ ನಿಗ-ಗಳ ಲೋಪದಿಂದಲೂ ಕ್ರಮವಾಗಿ ಷಾಡನವೂ ಔಡುವಿತವೂ ಆಗುತ್ತದೆ ಎಂದು ಸಮ್ಮತಿಸಿದೆ. ಷಾಡವ, ಔಡುವಿತಗಳನ್ನು ಮಾಡುವಲ್ಲಿ ದ್ವಿಶ್ರುತಿ (ಸ್ವರಗಳಾದ ಗಾಂಧಾರನಿಷಾದ)ಗಳು ಅಪವಾದಗಳನ್ನು (ಉಂಟುಮಾಡುತ್ತವೆ). ೯೨
೫೪೮ ಗೀತಿ, ತಾಲ, ಕಲಾ ಮುಂತಾದವುಗಳು ಷಾಡ್ಜೀ (ಜಾತಿ) ಯಲ್ಲಿರುವಂತೆ; ಅಲ್ಲದೆ, (ಅದರ) ಮೂರ್ಛನೆಯು ಮಧ್ಯಮದಿಂದ ಮೊದಲಾಗುತ್ತದೆ ಎಂದು ಇಲ್ಲಿ ತಿಳಿಯಬೇಕು. ಅದರ ವಿನಿಯೋಗವು ಹಿಂದೆ (ಷಾಡ್ಜೀಯಲ್ಲಿ) ಹೇಳಿರುವಂತೆ. ೯೩
೫೪೯ (ಅ) ಇದರ ನ್ಯಾಸಗಳು ಷಡ್ಜಮಧ್ಯಮಗಳು. (ಅ) ಏಳು ಸ್ವರಗಳೂ (ಇದರ) ಅಪನ್ಯಾಸಗಳು. (ಇ) (ಈ ಜಾತಿಯ) ಪ್ರಸ್ತಾರವು ಹೀಗಿದೆ: 62
ಮಾ ಗಾ ಸಗ ಪಾ ಧಪ ಮಾ ನಿಧ ನಿಮ i
ಮಾ ಮಾ ಸಾ ರಿಗ ಮಗ ನಿಗ ಪಧ ಪಾ ii
ಮಾ ಗಾ ರೀ ಗಾ ಮಾ ಮಾ ಸಾ ಸಾ iii
[ಮಾ ಮಗಮ ಮಾ ಮಾ ನಿಧ ಪಧ ಪಮ ಗಮಮ]iv
ಧಾ ಪಧ ಪರಿ ರಿಗ ಗರಿ ಗಸ ಧಸ ಧಾ v
ನಿಧ ಸಾ ರೀ ಮಗಮ ಮಾ ಮಾ ಮಾ ಮಾ vi
ಮಾ ಮಾ ಮಗಮ ಮಧ ಧಪ ಪಧ ಪಮ ಮಗಗ vii
____
ಧಾ ಪಧ ಪರಿ ರಿಗ ಮಗ ರಿಗ ಸಧಸ ಸಾ viii
ಮಾ ಮಾ ಧನಿ ಧಸ ಧಪ ಪಮ ಪಾ ಪಾ ix
ಧಾ ಪಧ ಪರಿ ರಿಮ ಮಗ ರಿಗ ಸಧಸ ಸಾ xi
ನಿಧ ಸಾ ರೀ ಮಗಮ ಮಾ ಮಾ ಮಾ ಮಾ xii
[ಇತಿ] ಷಡ್ಜಮಧ್ಯಮಾ
[೨ ಗಾಂಧಾರೋದೀಚ್ಯವಾ]
೫೫೦ ಗಾಂಧಾರೋದೀಚ್ಯವಾಯಾಂ ತು ದ್ವಾವಂಶೌ ಷಡ್ಜಮಧ್ಯಮೌ |
ರಿಲೋಪಾತ್ ಷಾಡವಂ ಜ್ಞೇಯಂ ಪೂರ್ಣತ್ವೇS೦ಶೇತರಾಲ್ಪತಾ || ೯೪ ||
೫೫೧ ಅಲ್ಪಾ ನಿಧಪಗಾಂಧಾರಾಃ ಷಾಡವತ್ವೇ ಪ್ರಕೀರ್ತಿತಾಃ |
ರಿಧಯೋಃ ಸಂಗತಿರ್ಜ್ಞೇಯಾ ಧೈವತಾದಿಶ್ಚ ಮೂರ್ಛನಾ || ೯೫ ||
೫೫೨ ತಾಲಶ್ಚಚ್ಚತ್ಪುಟೋ ಜ್ಞೇಯಃ ಕಲಾಃ ಷೋಡಶ ಕೀರ್ತಿತಾಃ |
ವಿನಿಯೋಗೋ ಧ್ರುವಾಗಾನೇ ಚತುರ್ಥಪ್ರೇಕ್ಷಣೇ ಮತಃ || ೬೯ ||
೫೫೩ (ಅ) ಅಸ್ಯಾಂ ಮಧ್ಯಮೊ ನ್ಯಾಸಃ | (ಆ) ಷಡ್ಜದೈವತಾವಪನ್ಯಾಸೌ | (ಇ) ಪ್ರಸ್ತಾರಃ- 62
ಸಾ ಸಾ ಪಾ ಮಾ ಪಾ ಧಪ ಪಾ ಮಾ i
ಧಾ ಪಾ ಮಾ ಮಾ ಸಾ ಸಾ ಸಾ ಸಾ ii
ಧಾ ನೀ ಸಾ ಸಾ ಮಾ ಮಾ ಪಾ ಪಾ iii
ನೀ ನೀ ನೀ ನೀ ನೀ ನೀ ನೀ ನೀ iv
ಮಾ ಮಾ ಧಾ ನಿಸ ನೀ ನೀ ನೀ ನೀ v
—
ಪಾಠ ವಿಮರ್ಶೆ: ೫೪೯ xii ೫೫೦ ಈ ೫೫೧ ಇ
—-
ಧಾ ಪಧ ಪರಿ ರಿಗ ಮಗ ರಿಗ ಸಧಸ ಸಾ viii
ಮಾ ಮಾ ಧನಿ ಧಸ ಧಪ ಪಮ ಪಾ ಪಾ ix
ಧಾ ಪಧ ಪರಿ ರಿಮ ಮಗ ರಿಗ ಸಧಸ ಸಾ xi
ನಿಧ ಸಾ ರೀ ಮಗಮ ಮಾ ಮಾ ಮಾ ಮಾ xii
[ಹೀಗೆ] ಷಡ್ಜಮಧ್ಯಮಾ
[2 ಗಾಂಧಾರೋದೀಚ್ಯವಾ]
೫೫೦ ಗಾಂಧಾರೋದೀಚ್ಯವಾದಲ್ಲಿ ಷಡ್ಜಮಧ್ಯಮಗಳು ಎರಡು ಅಂಶಗಳು. ರಿಷಭಲೋಪದಿಂದ (ಇದರಲ್ಲಿ) ಷಾಡವವು (ಹುಟ್ಟುತ್ತವೆ) ಎಂದು ತಿಳಿಯಬೇಕು. ಅದು (ಸಂ)ಪೂರ್ಣವಾಗಿರುವಾಗ ಅಂಶಗಳಲ್ಲದ ಇತರ ಸ್ವರಗಳು ಅಲ್ಪವಾಗಿರುತ್ತವೆ. ೯೪
೫೫೧ (ಈ ಜಾತಿಯು) ಷಾಡವವಾಗಿರುವಾಗ ನಿಷಾದ-ಧೈವತ-ಪಂಚಮ-ಗಾಂಧಾರಗಳು ಅಲ್ಪವಾಗಿರುತ್ತವೆಂದು ಹೇಳಿದೆ. ರಿಧ-ಗಳಲ್ಲಿ (ಪರಸ್ಪರ) ಸಂಗವಿದೆಯೆಂದು ತಿಳಿಯಬೇಕು; ಇದರ ಮೂರ್ಛನೆಯು ಧೈವತದಿಂದ ಮೊದಲಾಗುತ್ತದೆ. ೯೫
೫೫೨ (ಇದರ ಗೀತಿಯಲ್ಲಿ ಪ್ರಯೋಗಿಸಬೇಕಾದ) ತಾಲವು ಚಚ್ಚತ್ಪುಟವೆಂದು ತಿಳಿಯಬೇಕು; (ಅದರಲ್ಲಿ (ಪ್ರಮಾಣವು) ಹದಿನಾರು ಕಲೆಗಳೆಂದು ಹೇಳಿದೆ. (ಈ ಗೀತಿಯನ್ನು) ನಾಲ್ಕನೆಯ ದೃಶ್ಯದ ಧ್ರವಾಗಾನದಲ್ಲಿ ವಿನಿಯೋಗಿಸಬೇಕೆಂದು ಸಮ್ಮತಿಸಿದೆ. ೯೬
೫೫೩ (ಅ) ಅದರ ನ್ಯಾಸವು ಮಧ್ಯಮ. (ಆ) ಷಡ್ಜಧೈವತಗಳೆರಡೂ ಅಪನ್ಯಾಸಗಳು. (ಇ) [ಇದರ] ಪ್ರಸ್ತಾರವು [ಹೀಗಿದೆ]: 62
ಸಾ ಸಾ ಪಾ ಮಾ ಪಾ ಧಪ ಪಾ ಮಾ i
ಧಾ ಪಾ ಮಾ ಮಾ ಸಾ ಸಾ ಸಾ ಸಾ ii
ಧಾ ನೀ ಸಾ ಸಾ ಮಾ ಮಾ ಪಾ ಪಾ iii
ನೀ ನೀ ನೀ ನೀ ನೀ ನೀ ನೀ ನೀ iv
ಮಾ ಮಾ ಧಾ ನಿಸ ನೀ ನೀ ನೀ ನೀ v
____
ಮಾ ಪಾ ಮಾ ಪರಿ ಗಾ ಗಾ ಸಾ ಸಾ vi
ಗಾ ಗಮ ಪಾ ಪಧ ಮಾ ಧನಿ ಪಾ ಪಾ vii
ರೀ ಗಾ ಸಾ ಸಧ ನೀ ನೀ ಧಾ ಧಾ viii
ಗಾ ರಿಗ ಸಾ ಸನಿ ಗಾ ರಿಗ ಸಾ ಸಾ ix
ಸಾ ಸಾ ಸಾ ಮಾ ಮನಿ ಧನಿ ನೀ ನೀ x
ಮಾ ಮಾ ಮಾ ಪರಿಗ ಗಾ ಗಾ ಸಾ ಸಾ xi
ಗಾ ಸಾ ಗಾ ಸಾ ಮಾ ಪಾ ಮಾ ಪರಿಗ xii
ಗಾ ಗಾ ಗಾ ಗಾ ಗಾ ಗಾ ಸಾ ಸಾ xiii
ನೀ ನೀ ಪಾ ಧಾ ನೀ ಗಾ ಗಾ ಗಾ xiv
ನೀ ನೀ ಧಾ ಪಾ ಧಾ ಪಾ ಮಾ ಪಾ xv
ಧಾ ಪಾ ಮಾ ಮಾ ಮಾ ಮಾ ಮಾ ಮಾ xvi
[ಇತಿ] ಗಾಂಧಾರೋದಿಚ್ಯವತೀ
[3 ರಕ್ತಗಾಂಧಾರೀ]
೫೫೪ ಅಂಶಾಃ ಸ್ಯೂ ರಕ್ತಗಾಂಧಾರ್ಯಾಂ ಪಂಚ ಧರ್ಷಭವರ್ಜಿತಾಃ |
ರಿಮತಿಕ್ರಮ್ಯ ಸಗಯೋಃ ಕಾರ್ಯೇ ಸನ್ನಿಧಿಮೇಲನೇ || ೯೭ ||
೫೫೫ ರಿಲೋಪರಿಧಲೋಪಾಭ್ಯಾಂ ಷಾಡವೌಡುವಮಿಷ್ಯತೇ |
ಬಹುತ್ವಂ ನಿಧಯೋರಂಶಃ ಪಂಚಮೋ ದ್ವೇಷ್ಟಿಷಾಡವಮ್ || ೯೮ ||
೫೫೬ ದ್ವಿಷಂತ್ಯೌಡುವಿತಂ ಷಡ್ಜನಿಮಪಾಃ ಸಂಗತೌ ಸಗೌ |
ಪಂಚಪಾಣ್ಯಾದಿ ಷಾಡ್ಜೀವದ್ ಋಷಭಾದಿಸ್ತು ಮೂರ್ಛನಾ |
ತೃತೀಯಪ್ರೇಕ್ಷಣಗತಂ ಧ್ರುವಾಯಾಂ ವಿನಿಯೋಜನಮ್ || ೯೯ ||
—
ಪಾಠವಿಮರ್ಶೆ: ೫೫೩ vi vii ix xiii xiv ೫೫೪ ಅ, ಇ, ೫೫೬ ಅ, ಉಊ
—-
ಮಾ ಪಾ ಮಾ ಪರಿ ಗಾ ಗಾ ಸಾ ಸಾ vi
ಗಾ ಗಮ ಪಾ ಪಧ ಮಾ ಧನಿ ಪಾ ಪಾ vii
ರೀ ಗಾ ಸಾ ಸಧ ನೀ ನೀ ಧಾ ಧಾ viii
ಗಾ ರಿಗ ಸಾ ಸನಿ ಗಾ ರಿಗ ಸಾ ಸಾ ix
ಸಾ ಸಾ ಸಾ ಮಾ ಮನಿ ಧನಿ ನೀ ನೀ x
ಮಾ ಮಾ ಮಾ ಪರಿಗ ಗಾ ಗಾ ಸಾ ಸಾ xi
ಗಾ ಸಾ ಗಾ ಸಾ ಮಾ ಪಾ ಮಾ ಪರಿಗ xii
ಗಾ ಗಾ ಗಾ ಗಾ ಗಾ ಗಾ ಸಾ ಸಾ xiii
ನೀ ನೀ ಪಾ ಧಾ ನೀ ಗಾ ಗಾ ಗಾ xiv
ನೀ ನೀ ಧಾ ಪಾ ಧಾ ಪಾ ಮಾ ಪಾ xv
ಧಾ ಪಾ ಮಾ ಮಾ ಮಾ ಮಾ ಮಾ ಮಾ xvi
[ಹೀಗೆ] ಗಾಂಧಾರೋದೀಚ್ಯವತೀ
[3 ರಕ್ತಗಾಂಧಾರೀ]
೫೫೪ ರಕ್ತಗಾಂಧಾರೀ (ಜಾತಿ) ಯಲ್ಲಿ ಧೈವತ-ರಿಷಭಗಳನ್ನು ಬಿಟ್ಟ [=ಉಳಿದ] ಐದು (ಸ್ವರಗಳು) ಅಂಶಗಳು. ರಿಷಭವನ್ನು ಬಿಟ್ಟ ಇತರ ಸ್ವರಗಳಲ್ಲಿ ಷಡ್ಜಗಾಂಧಾರಗಳು (ಪರಸ್ಪರ) ಸನ್ನಿಧಿ ಮತ್ತು ಮೇಲನಗಳನ್ನು ಉಂಟುಮಾಡಬೇಕು. ೯೭
(ಸನ್ನಿಧಿ= ಬೇರೆಬೇರೆ ಲಘುಕಾಲ ಪ್ರಮಾಣಗಳಿರುವ ಸ್ವರಗಳಲ್ಲಿ ನೈರಂತರ್ಯವಿರುವುದು. ಮೇಲನ= ಒಂದು, ಎರಡು, ಮೂರು ಲಘುಕಾಲಪ್ರಮಾಣಗಳಿರುವ ಸ್ವರಾಂತರಗಳು ನಿರಂತವಾಗಿರುವುದು.)
೫೫೫ ರಿ-ಲೋಪದಿಂದಲೂ ಧರಿ-ಲೋಪದಿಂದಲೂ (ಈ ಜಾತಿಯು) (ಕ್ರಮವಾಗಿ) ಷಾಡವ (ಮತ್ತು) ಔಡುವಗಳನ್ನು ಅಪೇಕ್ಷಿಸುತ್ತದೆ. ನಿಷಾದ-ಧೈವತಗಳಲ್ಲಿ ಬಹುತ್ವ (ವಿದೆ). ಪಂಚಮವು ಅಂಶ (ವಾದಾಗ) (ಈ ಜಾತಿಯು) ಷಾಡವರಹಿತವಾಗಿದೆ. ೯೮
೫೫೬ ಷಡ್ಚನಿಷಾದಮಧ್ಯಮಪಂಚಮಗಳು ಅಂಶವಾಗಿರುವಾಗ (ಅವು ಈ ಜಾತಿಯಲ್ಲಿ) ಔಡುವಿತವನ್ನು ಧ್ವೇಷಿಸುತ್ತವೆ (=ಬಿಡಿಸುತ್ತವೆ)<ದ್ವಿಷಂತಿ> ಷಡ್ಜಗಾಂಧಾರಗಳಲ್ಲಿ ಪರಸ್ಪರ ಸಂಗವಿದೆ. ಪಂಚಪಾಣಿಯು (ತಾಳ್) ಇತ್ಯಾದಿ (ಇತರವಿವರಗಳು) ಷಾಡ್ಜೀ (ಜಾತಿ)ಯಲ್ಲಿರುವಂತೆ. (ಇದರ)ರ್ಮೂನೆಯು
____
೫೫೭ (ಅ) ಅಸ್ಯಾಂ ಗಾಂಧಾರೋ ನ್ಯಾಸಃ (ಆ) ಮಧ್ಯಮೋ Sಪನ್ಯಾಸಃ (ಇ) ಪ್ರಸ್ತಾರಃ- 64
ಪಾ ನೀ ಸಾ ಸಾ ಗಾ ಸಾ ಪಾ ನೀ i
ಸಾ ಸಾ ಪಾ ಪಾ ಮಾ ಮಾ ಗಾ ಗಾ ii
ಮಾ ಪಾ ಧಾ ಪಾ ಮಾ ಪಾ ಧಪ ಮಗ iii
ಮಾ ಮಾ ಮಾ ಮಾ ಮಾ ಮಾ ಮಾ ಮಾ iv
ಧಾ ನೀ ಪಾ ಮಪ ಧಾ ನೀ ಪಾ ಪಾ v
ಮಾ ಪಾ ಮಾ ಧನಿ ಪಾ ಪಾ ಪಾ ಪಾ vi
ರೀ ಗಾ ಮಾ ಪಾ ಪಾ ಪಾ ಮಾ ಪಾ vii
ರೀ ಗಾ ಮಾ ಪಾ ಪಾ ಪಾ ಮಾ ಪಾ viii
ಪಾ ಪಾ ಪಾ ಪಾ ಪಾ ಪಾ ಪಾ ಪಾ ix
ರೀ ಗಾ ಸಾ ಸಾ ರೀ ಗಾ ಗಾ ಗಾ x
ಮಾ ಗಾ ಪಾ ಧಮ ಧಾ ನಿಧ ಪಾ ಪಾ xi
ಮಾ ಪಾ ಮಾ ಪರಿಗ ಗಾ ಗಾ ಗಾ ಗಾ xii
[4 ಕೈಶಿಕೀ]
೫೫೮ ಕೈಶಿಕ್ಯಾಂ ಋಷಭಾನ್ಯೋ Sಶಾ, ನಿಧಾವಂಶೌ ಯದಾ ತದಾ |
ನ್ಯಾಸಃ ಪಂಚಮ ಏವ ಸ್ಯಾದನ್ಯದಾ ದ್ವಿಶ್ರುತೀ ಮತೌ ೧೦೦
೫೫೬ ಅನ್ಯೇ ತು ನಿಗಪನ್ಯಾಸಾನ್ನಿಧಯೋರಂಶಯೋರ್ವಿದುಃ |
ರಿಲೋಪರಿಧಲೋಪೇನ ಷಾಡವೌಡುವಿತಂ ಮತಮ್ ೧೦೧
—
ಪಾಠವಿಮರ್ಶೆ: ೫೫೭ ಅ, ಆ, ೫೫೭-xi, ೫೫೮ ಅ, ಈ ೫೫೯, ಅಆ
—-
ರಿಷಭದಿಂದ ಮೊದಲಾಗುತ್ತವೆ. [ಇದನ್ನು] ಮೂರನೆಯ ದೃಶ್ಯದಲ್ಲಿರುವ ಧ್ರುವಾ[ಗಾನ]ದಲ್ಲಿ ವಿನಿಯೋಗಿಸಬೇಕು. ೯೯
೫೫೭ (ಅ) ಇದರ ನ್ಯಾಸವು ಗಾಂಧಾರ. (ಆ) ಅಪನ್ಯಾಸವು ಮಧ್ಯಮ. (ಉ) [ಇದರ] ಪ್ರಸ್ತಾರವು [ಹೀಗಿದೆ]-
ಪಾ ನೀ ಸಾ ಸಾ ಗಾ ಸಾ ಪಾ ನೀ i
ಸಾ ಸಾ ಪಾ ಪಾ ಮಾ ಮಾ ಗಾ ಗಾ ii
ಮಾ ಪಾ ಧಾ ಪಾ ಮಾ ಪಾ ಧಪ ಮಗ iii
ಮಾ ಮಾ ಮಾ ಮಾ ಮಾ ಮಾ ಮಾ ಮಾ iv
ಧಾ ನೀ ಪಾ ಮಪ ಧಾ ನೀ ಪಾ ಪಾ v
ಮಾ ಪಾ ಮಾ ಧನಿ ಪಾ ಪಾ ಪಾ ಪಾ vi
ರೀ ಗಾ ಮಾ ಪಾ ಪಾ ಪಾ ಮಾ ಪಾ vii
ರೀ ಗಾ ಮಾ ಪಾ ಪಾ ಪಾ ಮಾ ಪಾ viii
ಪಾ ಪಾ ಪಾ ಪಾ ಪಾ ಪಾ ಪಾ ಪಾ ix
ರೀ ಗಾ ಸಾ ಸಾ ರೀ ಗಾ ಗಾ ಗಾ x
ಮಾ ಗಾ ಪಾ ಧಮ ಧಾ ನಿಧ ಪಾ ಪಾ xi
ಮಾ ಪಾ ಮಾ ಪರಿಗ ಗಾ ಗಾ ಗಾ ಗಾ xii
[4. ಕೈಶಿಕೀ]
೫೫೮ ಕೈಶಿಕೀ(ಜಾತಿ)ಯಲ್ಲಿ ರಿಷಭವಲ್ಲದ ಬೇರೆ (ಸ್ವರಗಳು) ಅಂಶಗಳು; ನಿಷಾದಧೈವತಗಳು ಅಂಶಗಳಾದಾಗ ಪಂಚಮವೇ ನ್ಯಾಸವಾಗುತ್ತದೆ. ಇತರ ಸಮಯಗಳಲ್ಲಿ ದ್ವಿಶ್ರುತಿ (ಗಳಾದ ಗಾಂಧಾರನಿಷಾದಗಳು ನ್ಯಾಸಗಳು) ಎಂದು ಸಮ್ಮತಿಸಿದೆ. ೧೦೦
೫೫೯ ನಿಷಾದಧೈವತಗಳು ಅಂಶಗಳಾಗಿ ನಿಷಾದಗಾಂಧಾರಪಂಚಮಗಳು ನ್ಯಾಸಗಳೆಂದು ಬೇರೆಯವರು ತಿಳಿಯುತ್ತಾರೆ. ರಿಷಭಲೋಪ-ರಿಷಭಧೈವತಲೋಪಗಳಿಂದ (ಕ್ರಮವಾಗಿ) ಷಾಡುವ ಮತ್ತು ಔಡುವಿತಗಳು (ಆಗುತ್ತವೆ) ಎಂದು ಸಮ್ಮತಿಸಿದೆ. ೧೦೧
____
೫೬೦ ರಿರಲ್ಪೋ ನಿಪಬಾಹುಲ್ಯಮಂಶಾನಾಂ ಸಂಗತಿರ್ಮಿಥಃ |
ಷಾಡವೌಡುವಿತೇ ದ್ವಿಷ್ಟಃ ಕ್ರಮಾತ್ ಪಂಚಮಧೈವತೌ ೧೦೨
೫೬೧ ಷಾಡ್ಜೀವತ್ ಪಂಚಪಾಣ್ಯಾದಿ ಗಾಂಧಾರಾದಿಸ್ತು ಮೂರ್ಛನಾ |
ಪಂಚಮಪ್ರೇಕ್ಷಣಗತಂ ಧ್ರುವಾಯಾಂ ವಿನಿಯೋಜನಮ್ ೧೦೩
೫೬೨ (ಅ) ಅಸ್ಯಾಂ ಗಾಂಧಾರಪಂಚಮನಿಷಾದಾ ನ್ಯಾಸಾಃ (ಆ) ರಿವರ್ಜ್ಯಾಃ ಷಟ್ ಸಪ್ತ ವಾ ಸ್ವರಾ ಅಪನ್ಯಾಸಾಃ | (ಇ) ಪ್ರಸ್ತಾರಃ- 65
ಪಾ ಧನಿ ಪಾ ಧನಿ ಗಾ ಗಾ ಗಾ ಗಾ i
ಪಾ ಪಾ ಮಾ ನಿಧ ನಿಧ ಪಾ ಪಾ ಪಾ ii
ಧಾ ನೀ ಸಾ ಸಾ ರೀ ರೀ ರೀ ರೀ iii
ಸಾ ಸಾ ಸಾ ರೀ ಗಾ ಮಾ ಮಾ ಮಾ iv
ಮಾ ಧಾ ನೀ ಧಾ ಮಾ ಧಾ ಮಾ ಪಾ v
ಗಾ ರೀ ಸಾ ಧನಿ ರೀ ರೀ ರೀ ರೀ vi
ಗಾ ರೀ ಸಾ ಸಾ ಪಾ ಧಾ ಮಾ ಮಾ vii
ಗಾ ಗಾ ಗಾ ಮಾ ಪಾ ನಿಧನಿ ನೀ ನೀ viii
ಗಾ ಗಾ ನೀ ನೀ ಗಾ ಗಾ ಗಾ ಗಾ ix
ಗಾ ಗಾ ನೀ ನೀ ನಿಧ ಪಾ ಪಾ ಪಾ x
ಮಾ ಪಾ ಮಾ ಪಾ ಪಾ ಪಾ ಮಾ ಮಾ xi
ಸಾ ಮಾ ಗಾ ನಿಧ ನೀ ನೀ ಗಾ ಗಾ xii
[ಇತಿ] ಕೈಶಿಕೀ
—
ಪಾಠ ವಿಮರ್ಶೆ: ೫೬೦ಇ೫೬೧ ಇ೫೬೨ ಅ, ಇ, ೫೬೨, iii, iv, vii, xii
—-
೫೬೦ (ಈ ಜಾತಿಯಲ್ಲಿ) ರಿಷಭವು ಅಲ್ಪ(ವಾಗಿದೆ); ನಿಷಾದಪಂಚಮಗಳಲ್ಲಿ ಬಹುತ್ವವಿದೆ. ಅಂಶ(ಸ್ವರ)ಗಳಲ್ಲಿ ಪರಸ್ಪರಸಂಗವಿದೆ. (ಈ ಜಾತಿಯಲ್ಲಿ) ಷಂಚಮ ಧೈವತಗಳು ಕ್ರಮವಾಗಿ ಷಾಡವಿತ-ಔಡುವಿತಗಳನ್ನು ದ್ವೇಷಿಸುತ್ತವೆ (=ಬಿಡಿಸುತ್ತವೆ). ೧೦೨
೫೬೧ ಪಂಚಪಾಣಿ (ತಾಳ) ಮುಂತಾದವು (ವಿವರಗಳು) ಷಾಡ್ಜೀ[ಜಾತಿ]ಯಲ್ಲಿರುವಂತೆಯೇ (ಎಂದು ತಿಳಿಯಬೇಕು). (ಇದರ) ಮೂರ್ಛನೆಯು ಗಾಂಧಾರದಿಂದ ಮೊದಲಾಗುತ್ತದೆ. [ಇದರ] ವಿನಿಯೋಗವು ಐದನೆಯ ದೃಶ್ಯದ ಧ್ರುವಾ[ಗಾನ]ದಲ್ಲಿ (ಇರುತ್ತದೆ). ೧೦೩
೫೬೨ (ಅ) ಇದರಲ್ಲಿ ನ್ಯಾಸಗಳು ಗಾಂಧಾರಪಂಚಮನಿಷಾದಗಳು. (ಆ) ರಿಷಭವನ್ನು ಬಿಟ್ಟು ಆರು ಸ್ವರಗಳು ಅಥವಾ ಏಳೂ ಸ್ವರಗಳು ಇದರ(ಲ್ಲಿ) ಅಪನ್ಯಾಸಗಳು. (ಇ) ಇದರ ಪ್ರಸ್ತಾರವು (ಹೀಗಿದೆ)-
ಪಾ ಧನಿ ಪಾ ಧನಿ ಗಾ ಗಾ ಗಾ ಗಾ i
ಪಾ ಪಾ ಮಾ ನಿಧ ನಿಧ ಪಾ ಪಾ ಪಾ ii
ಧಾ ನೀ ಸಾ ಸಾ ರೀ ರೀ ರೀ ರೀ iii
ಸಾ ಸಾ ಸಾ ರೀ ಗಾ ಮಾ ಮಾ ಮಾ iv
ಮಾ ಧಾ ನೀ ಧಾ ಮಾ ಧಾ ಮಾ ಪಾ v
ಗಾ ರೀ ಸಾ ಧನಿ ರೀ ರೀ ರೀ ರೀ vi
ಗಾ ರೀ ಸಾ ಸಾ ಪಾ ಧಾ ಮಾ ಮಾ vii
ಗಾ ಗಾ ಗಾ ಮಾ ಪಾ ನಿಧನಿ ನೀ ನೀ viii
ಗಾ ಗಾ ನೀ ನೀ ಗಾ ಗಾ ಗಾ ಗಾ ix
ಗಾ ಗಾ ನೀ ನೀ ನಿಧ ಪಾ ಪಾ ಪಾ x
ಮಾ ಪಾ ಮಾ ಪಾ ಪಾ ಪಾ ಮಾ ಮಾ xi
ಸಾ ಮಾ ಗಾ ನಿಧ ನೀ ನೀ ಗಾ ಗಾ xii
[ಹೀಗೆ] ಕೈಶಿಕೀ [ಜಾತಿ]
____
[5. ಮಧ್ಯಮೋದೀಚ್ಯವಾ]
೫೬೩ ಪಂಚಮಾಂಶಾ ಸದಾ ಪೂರ್ಣಾ ಮಧ್ಯಮೋದೀಚ್ಯವಾ ಮತಾ |
ಲಕ್ಷ್ಮ ಶೇಷಂ ವಿಜಾನೀಯಾದ್ ಗಾಂಧಾರೋದೀಚ್ಯವಾಗತಮ್ ೧೦೪
೫೬೪ ಮಧ್ಯಮಾದಿರ್ಮೂರ್ಛನಾ ಸ್ಯಾತ್ ತಾಲಶ್ಚಚ್ಚತ್ಪುಟೋ ಮತಃ |
ಚತುರ್ಥಸ್ಯ ಪ್ರೇಕ್ಷಣಸ್ಯ ಧ್ರುವಾಯಾಂ ವಿನಿಯೋಜನಮ್ ೧೦೫
೫೬೫ (ಅ) ಅಸ್ಯಾಂ ಮಧ್ಯಮೋ ನ್ಯಾಸಃ | (ಆ) ಷಡ್ಜಧೈವತಾವಪನ್ಯಾಸೌ | (ಇ) ಪ್ರಸ್ತಾರಃ- 66
ಪಾ ಧನಿ ನೀ ನೀ ಮಾ ಮಾ ನೀ ಪಾ i
ರೀ ರೀ ರೀ ಗಾ ಸಾ ರಿಗ ಗಾ ಗಾ ii
ನೀ ನೀ ನೀ ನೀ ನೀ ನೀ ನೀ ನೀ iii
ನೀ ನೀ ಧಪ ಮಾ ನಿಧ ನಿಧ ಪಾ ಪಾ iv
ಪಾ ಪಾ ರೀ ರೀ ರೀ ರೀ ರೀ ರೀ v
ಮಾ ರಿಗ ಸಾ ಸಧ ನೀ ನೀ ನೀ ನೀ vi
ಸಾ ಪಾ ನೀ ಮಾ ಪಾ ಪಾ ಗಾ ಗಾ vii
ಮಾ ಪಾ ಮಾ ನಿಧ ನೀ ನೀ ಸಾ ಸಾ viii
ಪಾ ಪಾ ಮಾ ಧನಿ ಪಾ ಪಾ ಪಾ ಪಾ ix
ಮಾ ಪಾ ಮಾ ರಿಗ ಗಾ ಗಾ ಗಾ ಗಾ x
ಗಾ ಪಾ ಮಾ ಪಾ ನೀ ನೀ ನೀ ನೀ xi
ಮಾ ಪಾ ಮಾ ಪರಿ ಗಾ ಗಾ ಗಾ ಗಾ xii
ಗಾ ಗಾ ಗಾ ಮಾ ಮಾ ನಿಧ ನೀ ನೀ xiii
ನೀ ನೀ ಧಪ ಮಾ ನಿಧ ನಿಧ ಪಾ ಪಾ xiv
—
ಪಾಠ ವಿಮರ್ಶೆ: ೫೬೩ ಅ, ಆ, ೫೬೪ ಅ, ಇ, ೫೬೫ ಅ, ಇ, ೫೬೫ i, vii, viii, xii, xiii
—-
[5. ಮಧ್ಯಮೋದೀಚ್ಯವಾ ಜಾತಿ]
೫೬೩ ಮಧ್ಯಮೋದೀಚ್ಯವಾ(ಜಾತಿ)ಯಲ್ಲಿ ಪಂಚಮವು ಅಂಶ, ಅದು ಯಾವಾಗಲೂ (ಸಂ)ಪೂರ್ಣ, ಎಂದು ಸಮ್ಮತಿಸಿದೆ. ಉಳಿದ ಲಕ್ಷಣಗಳು ಗಾಂಧಾರೋದೀಚ್ಯವಾದಲ್ಲಿರುವಂತೆಯೇ ಎಂದು ತಿಳಿದುಕೊಳ್ಳೇಕು. ೧೦೪
೫೬೪ ಇದರ ಮೂರ್ಛನೆಯು ಮಧ್ಯದಿಂದ ಮೊದಲಾಗುತ್ತದೆ. ಚಚ್ಚತ್ಪುಟವು [ಇದರ ಗೀತಿಯ] ತಾಲವೆಂದು ಸಮ್ಮತಿಸಿದೆ. (ಇದರ) ವಿನಿಯೋಗವು ನಾಲ್ಕನೆಯ ದೃಶ್ಯದ ಧ್ರುವಾ[ಗಾನ]ದಲ್ಲಿದೆ. ೧೦೫
೫೬೫ (ಅ) ಇದರ ನ್ಯಾಸವು ಮಧ್ಯಮ. (ಆ) ಅಪನ್ಯಾಸಗಳು ಷಡ್ಜದೈವತಗಳು. (ಇ) [ಇದರ] ಪ್ರಸ್ತಾರವು [ಹೀಗಿದೆ]- 66
ಪಾ ಧನಿ ನೀ ನೀ ಮಾ ಮಾ ನೀ ಪಾ i
ರೀ ರೀ ರೀ ಗಾ ಸಾ ರಿಗ ಗಾ ಗಾ ii
ನೀ ನೀ ನೀ ನೀ ನೀ ನೀ ನೀ ನೀ iii
ನೀ ನೀ ಧಪ ಮಾ ನಿಧ ನಿಧ ಪಾ ಪಾ iv
ಪಾ ಪಾ ರೀ ರೀ ರೀ ರೀ ರೀ ರೀ v
ಮಾ ರಿಗ ಸಾ ಸಧ ನೀ ನೀ ನೀ ನೀ vi
ಸಾ ಪಾ ನೀ ಮಾ ಪಾ ಪಾ ಗಾ ಗಾ vii
ಮಾ ಪಾ ಮಾ ನಿಧ ನೀ ನೀ ಸಾ ಸಾ viii
ಪಾ ಪಾ ಮಾ ಧನಿ ಪಾ ಪಾ ಪಾ ಪಾ ix
ಮಾ ಪಾ ಮಾ ರಿಗ ಗಾ ಗಾ ಗಾ ಗಾ x
ಗಾ ಪಾ ಮಾ ಪಾ ನೀ ನೀ ನೀ ನೀ xi
ಮಾ ಪಾ ಮಾ ಪರಿ ಗಾ ಗಾ ಗಾ ಗಾ xii
ಗಾ ಗಾ ಗಾ ಮಾ ಮಾ ನಿಧ ನೀ ನೀ xiii
ನೀ ನೀ ಧಪ ಮಾ ನಿಧ ನಿಧ ಪಾ ಪಾ xiv
____
ರೀ ಗಾ ಸಾ ಸಾ ಮಾ ನೀ ನೀ ನೀ xv
ನೀ ನೀ ಧಾ ಪಾ ಧಾ ಪಾ ಮಾ ಮಾ xvi
[ಇತಿ] ಮಧ್ಯಮೋದೀಚ್ಯವಾ
[6. ಕಾರ್ಮಾರವೀ]
೫೬೬ ಕಾರ್ಮಾರವ್ಯಾಂ ಭವಂತ್ಯಂಶಾ ನಿಷಾದರಿಪಧೈವತಾಃ |
ಬಹವೋ S೦ತರಮಾರ್ಗತ್ವಾದನಂಶಾಃ ಪರಿಕೀರ್ತಿತಾಃ ೧೦೬
೫೬ ಗಾಂಧಾರೋ sತ್ಯಂತಬಹುಲಃ ಸರ್ವಾಂಶಸ್ವರಗಂಗತಿಃ |
ಚಚ್ಚತ್ಪುಟಃ ಷೋಡಶಾತ್ರ ಕಾಲಾಃ ಷಡ್ಜಾದಿಮೂರ್ಛನಾ |
ಪಂಚಮಸ್ಯ ಪ್ರೇಕ್ಷಣಸ್ಯ ಧ್ರುವಾಯಾಂ ವಿನಿಯೋಜನಮ್ ೧೦೭
೫೬೮ (ಅ) ಅಸ್ಯಾಂ ಪಂಚಮೋ ನ್ಯಾಸಃ | (ಆ) ಅಂಶಾ ಏವಾಪನ್ಯಾಸಾಃ (ಇ) ಪ್ರಸ್ತಾರಃ – 67
ರೀ ರೀ ರೀ ರೀ ರೀ ರೀ ರೀ ರೀ i
ಮಾ ಗಾ ಸಾ ಗಾ ಸಾ ನೀ ನೀ ನೀ ii
ನೀ ಮಾ ನೀ ಮಾ ಪಾ ಪಾ ಗಾ ಗಾ iii
ಗಾ ಪಾ ಮಾ ಪಾ ನೀ ನೀ ನೀ ನೀ iv
ರೀ ಗಾ ಸಾ ನೀ ರೀ ಗಾ ರೀ ಗಾ v
ರೀ ಗಾ ರೀ ಸಾ ನಿಧ ನೀ ಪಾ ಪಾ vi
ಮಾ ಪಾ ಮಾ ಪರಿ ಗಾ ಗಾ ಗಾ ಗಾ vii
ರೀ ರೀ ಗಾ ಸಮ ಮಾ ಮಾ ಪಾ ಪಾ viii
ಮಾ ಪಾ ಮಾ ಪರಿ ಗಾ ಗಾ ಗಾ ಗಾ ix
ಧಾ ನೀ ಪಾ ಮಾ ಧಾ ನೀ ಸಾ ಸಾ x
ನೀ ನೀ ನೀ ನೀ ನೀ ನೀ ನೀ ನೀ xi
ಮಾ ಮಾ ಧಾ ನೀ ನೀ ಧಾ ಪಾ ಪಾ xii
—
ಪಾಠವಿಮರ್ಶೆ: ೫೬೫-xv, xvi ೫೬೭ ಅ, ಈ, ೫೬೮, ಅ, ಆ, ೫೬೮, ii, iii, v, vi, vii
—-
ರೀ ಗಾ ಸಾ ಸಾ ಮಾ ನೀ ನೀ ನೀ xv
ನೀ ನೀ ಧಾ ಪಾ ಧಾ ಪಾ ಮಾ ಮಾ xvi
[ಹೀಗೆ] ಮಧ್ಯಮೋದೀಚ್ಯವಾ [ಜಾತಿ]
[6. ಕಾರ್ಮಾರವೀಜಾತಿ]
೫೬೬ ಕಾರ್ಮಾರವೀ(ಜಾತಿ)ಯಲ್ಲಿ ನಿಷಾದರಿಷಭಪಂಚಮಧೈವತಗಳು ಅಂಶಗಳಾಗುತ್ತವೆ. (ಇದರಲ್ಲಿ) ಅಂತರಮಾರ್ಗದಿಂದಾಗಿ ಬಹಳ ಸ್ವರಗಳು ಅಂಶಗಳಾಗಿರುವುದಿಲ್ಲವೆಂದು ಹೇಳಿದೆ. ೧೦೬
೫೬೭ ಗಾಂಧಾರವು ಅತ್ಯಂದ ಬಹುಲವಾದ ಪ್ರಯೋಗವನ್ನು ಪಡೆಯುತ್ತದೆ. ಎಲ್ಲಾ ಅಂಶಸ್ವರಗಳಲ್ಲಿಯೂ (ಪರಸ್ಪರ) ಸಂಗವಿದೆ. (ಇದರ ತಾಲವು) ಚಚ್ಚುತ್ಪುಟ; (ಇದರ ಪ್ರಮಾಣವು) ಹದಿನಾರು ಕಲೆಗಳು; (ಇದರ) ಮೂರ್ಛನೆಯು ಷಡ್ಜದಿಂದ ಮೊದಲಾಗುತ್ತದೆ. ಐದನೆಯ ದೃಶ್ಯದ ಧ್ರುವಾ [ಗಾನಾ]ದಲ್ಲಿ [ಇದನ್ನು] ವಿನಿಯೋಗಿಸಬೇಕು. ೧೦೭
೫೬೮ (ಅ) ಇದರ ನ್ಯಾಸವು ಪಂಚಮ. (ಆ) ಅಂಶಗಳೇ ಅಪನ್ಯಾಸಗಳು. (ಇ) [ಇದರ] ಪ್ರಸ್ತಾರವು [ಹೀಗಿದೆ]- 67
ರೀ ರೀ ರೀ ರೀ ರೀ ರೀ ರೀ ರೀ i
ಮಾ ಗಾ ಸಾ ಗಾ ಸಾ ನೀ ನೀ ನೀ ii
ನೀ ಮಾ ನೀ ಮಾ ಪಾ ಪಾ ಗಾ ಗಾ iii
ಗಾ ಪಾ ಮಾ ಪಾ ನೀ ನೀ ನೀ ನೀ iv
ರೀ ಗಾ ಸಾ ನೀ ರೀ ಗಾ ರೀ ಗಾ v
ರೀ ಗಾ ರೀ ಸಾ ನಿಧ ನೀ ಪಾ ಪಾ vi
ಮಾ ಪಾ ಮಾ ಪರಿ ಗಾ ಗಾ ಗಾ ಗಾ vii
ರೀ ರೀ ಗಾ ಸಮ ಮಾ ಮಾ ಪಾ ಪಾ viii
ಮಾ ಪಾ ಮಾ ಪರಿ ಗಾ ಗಾ ಗಾ ಗಾ ix
ಧಾ ನೀ ಪಾ ಮಾ ಧಾ ನೀ ಸಾ ಸಾ x
ನೀ ನೀ ನೀ ನೀ ನೀ ನೀ ನೀ ನೀ xi
ಮಾ ಮಾ ಧಾ ನೀ ನೀ ಧಾ ಪಾ ಪಾ xii
____
ಮಾ ಪಾ ಮಾ ಪರಿ ಗಾ ಗಾ ಗಾ ಗಾ xiii
ನೀ ನೀ ಪಾ ಧನಿ ಗಾ ಗಾ ಗಾ ಗಾ xiv
ಸಾ ರೀ ಗಾ ಸಾ ನೀ ನೀ ನೀ ನೀ xv
ನೀ ನೀ ಧಾ ಪಾ ಪಾ ಪಾ ಪಾ ಪಾ xvi
[ಇತಿ] ಕಾರ್ಮಾರವೀ
[7. ಗಾಂಧಾರಪಂಚಮಿ]
೫೬೯ ಅಂಶೋ ಗಾಂಧಾರಪಂಚಮ್ಯಾಂ ಪಂಚಮಃ, ಸಂಗತಿಃ ಪುನಃ |
ಕರ್ತವ್ಯಾ Sತ್ರಾಪಿ ಗಾಂಧಾರೀ ಪಂಚವ್ಯೋರಿವ ಸೂರಿಭಿಃ ೧೦೮
೫೭೦ ಚಚ್ಚುತ್ಪುಟಃ ಷೋಡಶಾತ್ರ ಕಲಾ ಗಾದಿಶ್ಚಮೂರ್ಛನಾ |
ತುರ್ಯಪ್ರೇಕ್ಷಣಸಂಬಂಧಿಧ್ರುವಾಗಾನೇ ನಿಯೋಜನಮ್ ೧೦೯
೫೭೧ (ಅ) ಅಸ್ಯಾಂ ಗಾಂಧಾರೋ ನ್ಯಾಸಃ | (ಆ) ಋಷಭಪಂಚಮಾವಪನ್ಯಾಸೌ | (ಇ) ಪ್ರಸ್ತಾರಃ- 68
ಮಾ ಮಾ ಪಮ ಧನಿ ಧಪ ಮಾ ಧಾ ನೀ i
ಸನಿ ಧಾ ಪಾ ಪಾ ಪಾ ಪಾ ಪಾ ಪಾ ii
ಧಾ ನೀ ಸಾ ಸಾ ಮಾ ಮಾ ಪಾ ಪಾ iii
ನೀ ನೀ ನೀ ನೀ ನೀ ನೀ ನೀ ನೀ iv
ನೀ ನೀ ಧಪ ಮಾ ನಿಧ ನಿಧ ಪಾ ಪಾ v
ಪಾ ಪಾ ರೀ ರೀ ರೀ ರೀ ಪಾ ಪಾ vi
ಮಾ ರಿಗ ಸಾ ಸಧ ನೀ ನೀ ನೀ ನೀ vii
ನೀ ರೀ ಸಾ ರಿಸ ರೀ ರೀ ರೀ ರೀ viii
ನೀ ಗಾ ಸಾ ನಿಗ ಸಾ ನೀ ನೀ ನೀ ix
ನೀ ಮಾ ನೀ ಮಾ ಪಾ ಪಾ ಗಾ ಗಾ x
—
ಪಾಠವಿಮರ್ಶೆ: ೫೬೮-xv, xvi, ೫೬೯, ಈ ೫೭೧ ಅ, ಆ, ೫೭೧, i, ii, viii, ix, x
—-
ಮಾ ಪಾ ಮಾ ಪರಿ ಗಾ ಗಾ ಗಾ ಗಾ xiii
ನೀ ನೀ ಪಾ ಧನಿ ಗಾ ಗಾ ಗಾ ಗಾ xiv
ಸಾ ರೀ ಗಾ ಸಾ ನೀ ನೀ ನೀ ನೀ xv
ನೀ ನೀ ಧಾ ಪಾ ಪಾ ಪಾ ಪಾ ಪಾ xvi
[ಹೀಗೆ] ಕಾರ್ಮಾರವೀ [ಜಾತಿ]
[7. ಗಾಂಧಾರಪಂಚಮಿ]
೫೬೯ ಗಾಂಧಾರಪಂಚಮಿ [ಜಾತಿ]ಯಲ್ಲಿ ಅಂಶವು ಪಂಚಮ, ಇಲ್ಲಿಯೂ (ಸ್ವರ) ಸಂಗಗಳನ್ನು ಗಾಂಧಾರೀ ಮತ್ತು ಪಂಚಮಿಗಳಲ್ಲಿರುವ ಹಾಗೆ ವಿದ್ವಾಂಸರು ಮಾಡಬೇಕು. ೧೦೮
೫೭೦ (ಇದರಲ್ಲಿ) ಚಚ್ಚತ್ಪುಟವು (ತಾಳ). ಅದರಲ್ಲಿ ಹದಿನಾರು ಕಲೆಗಳ ಪ್ರಮಾಣ (ವಿದೆ). (ಇದರ) ಮೂರ್ಛನೆಯು ಗಾಂಧಾರದಿಂದ ಮೊದಲಾಗುತ್ತದೆ. ನಾಲ್ಕನೆಯ ದೃಶ್ಯವನ್ನುಸ ಬಂಧಿಸುವ ಧ್ರುವಾಗಾನದಲ್ಲಿ (ಇದನ್ನು) ನಿಯೋಜಿಸಬೇಕು. ೧೦೯
೫೭೧ (ಅ) ಇದರಲ್ಲಿ ಗಾಂಧಾರವು ನ್ಯಾಸ. (ಆ)ರಿಷ ಭಪಂಚಮಗಳು ಅಪನ್ಯಾಸಗಳು. (ಇ) [ಇದರ] ಪ್ರಸ್ತಾರವು [ಹೀಗಿದೆ]-
ಮಾ ಮಾ ಪಮ ಧನಿ ಧಪ ಮಾ ಧಾ ನೀ i
ಸನಿ ಧಾ ಪಾ ಪಾ ಪಾ ಪಾ ಪಾ ಪಾ ii
ಧಾ ನೀ ಸಾ ಸಾ ಮಾ ಮಾ ಪಾ ಪಾ iii
ನೀ ನೀ ನೀ ನೀ ನೀ ನೀ ನೀ ನೀ iv
ನೀ ನೀ ಧಪ ಮಾ ನಿಧ ನಿಧ ಪಾ ಪಾ v
ಪಾ ಪಾ ರೀ ರೀ ರೀ ರೀ ಪಾ ಪಾ vi
ಮಾ ರಿಗ ಸಾ ಸಧ ನೀ ನೀ ನೀ ನೀ vii
ನೀ ರೀ ಸಾ ರಿಸ ರೀ ರೀ ರೀ ರೀ viii
ನೀ ಗಾ ಸಾ ನಿಗ ಸಾ ನೀ ನೀ ನೀ ix
ನೀ ಮಾ ನೀ ಮಾ ಪಾ ಪಾ ಗಾ ಗಾ x
____
ಗಾ ಪಾ ಮಾ ಪಾ ನೀ ನೀ ನೀ ನೀ xi
ಮಾ ಪಾ ಮಾ ಪರಿ ಗಾ ಗಾ ಗಾ ಗಾ xii
ನೀ ನೀ ಪಾ ಧಾ ನೀ ಗಾ ಗಾ ಗಾ xiii
ನೀ ನೀ ನೀ ನೀ ನೀ ನೀ ನೀ ನೀ xiv
ಮಾ ಮಾ ಧಾ ನೀ ಸನಿ ಧಾ ಪಾ ಪಾ xv
ಮಾ ಪಾ ಮಾ ಪರಿಗ ಗಾ ಗಾ ಗಾ ಗಾ xvi
[ಇತಿ] ಗಾಂಧಾರಪಂಚಮಿ
(8. ಆಂಧ್ರೀ)
೫೭೨ ಆಂದ್ರ್ಯಾಂ ಅಂಶಾ ನಿರಿಗಪಾ ರಿಗಯೋರ್ನಿಧಯೋಸ್ತಥಾ |
ಸಂಗತಿರ್ನ್ಯಾಸಪರ್ಯಂತಮಂ ಶಾನುಕ್ರಮತೋ ವ್ರಜೇತ್ ೧೧೦
೫೭೩ ಷಾಡವಂ ಷಡ್ಜಲೋಪೇನ ಮಧ್ಯಮಾದಿಶ್ಚ ಮೂರ್ಛನಾ |
ಪೂರ್ವವತ್ತು ಕಲಾತಾಲವಿನಿಯೋಗಾಃ ಪ್ರಕೀರ್ತಿತಾಃ ೧೧೧
೫೭೪ (ಅ) ಅಸ್ಯಾಮಾಂಧ್ರ್ಯಾಂ ಗಾಂಧಾರೋ ನ್ಯಾಸಃ | (ಆ) ಅಂಶಾ ಏವಾಪನ್ಯಾಸಾಃ | (ಇ) ಪ್ರಸ್ತಾರಃ- 69
ಗಾ ರೀ ರೀ ರೀ ರೀ ರೀ ರೀ ರೀ i
ರೀ ಗಾ ರೀ ಗಾ ರೀ ರೀ ರೀ ರೀ ii
ರೀ ರೀ ಗಾ ಗಾ ರೀ ರೀ ಮಾ ಮಾ iii
ರೀ ಗಾ ಸಾ ಧನಿ ನೀ ನೀ ನೀ ನೀ iv
ನೀ ರೀ ನೀ ರೀ ಧನಿ ಧನಿ ಪಾ ಪಾ v
ಮಾ ಪಾ ಮಾ ರಿಗ ಗಾ ಗಾ ಗಾ ಗಾ vi
ರೀ ರೀ ಗಾ ಸಮ ಮಾ ಮಾ ಪಾ ಪಾ vii
ಮಾ ಪಾ ಮಾ ರಿಗ ಗಾ ಗಾ ಗಾ ಗಾ viii
—
ಪಾಠ ವಿಮರ್ಶೆ: ೫೭೨ ಅಆ ೫೭೩ ಅ, ಇ, ೫೭೪, ಅ, ಇ, ೫೭೪-iv
—-
ಗಾ ಪಾ ಮಾ ಪಾ ನೀ ನೀ ನೀ ನೀ xi
ಮಾ ಪಾ ಮಾ ಪರಿ ಗಾ ಗಾ ಗಾ ಗಾ xii
ನೀ ನೀ ಪಾ ಧಾ ನೀ ಗಾ ಗಾ ಗಾ xiii
ನೀ ನೀ ನೀ ನೀ ನೀ ನೀ ನೀ ನೀ xiv
ಮಾ ಮಾ ಧಾ ನೀ ಸನಿ ಧಾ ಪಾ ಪಾ xv
ಮಾ ಪಾ ಮಾ ಪರಿಗ ಗಾ ಗಾ ಗಾ ಗಾ xvi
[ಹೀಗೆ] ಗಾಂಧಾರಪಂಚಮಿ
(8. ಆಂಧ್ರೀ)
೫೭೨ ಆಂಧ್ರೀ[ಜಾತಿ]ಯಲ್ಲಿ ನಿಷಾದರಿಷಭಗಾಂಧಾರಪಂಚಮಗಳು ಅಂಶಗಳು. ರಿಷಭ ಗಾಂಧಾರಗಳಲ್ಲಿ ಹಾಗೆಯೇ ನಿಷಾದಧೈವತಗಳಲ್ಲಿ (ಪರಸ್ಪರ) ಸಂಗವಿದೆ. ಅಂಶಗಳ ಅನುಕ್ರಮದಲ್ಲಿ ನ್ಯಾಸ[ಸ್ವರ] ದವರೆಗೆ ಸಂಚರಿಸಬೇಕು. ೧೧೦
೫೭೩ (ಈ ಜಾತಿಯಲ್ಲಿ) ಷಡ್ಜವನ್ನು ಲೋಪಮಾಡುವುದರಿಂಧ ಷಾಡವವಾಗುತ್ತದೆ. (ಇದರ) ಮೂರ್ಛನೆಯು ಮಧ್ಯಮದಿಂದ ಮೊದಲಾಗುತ್ತದೆ. ಇದರ ಕಲಾ, ತಾಲ ಮತ್ತು ವಿನಿಯೋಗಗಳು ಹಿಂದಿನದರಂತೆಯೇ (=ಗಾಂಧಾರಪಂಚಮಿಯಲ್ಲಿರುವಂತೆಯೇ) ಎಂದು ಹೇಳಿದೆ. ೧೧೧
೫೭೪ (ಅ) ಈ ಆಂಧ್ರೀಯಲ್ಲಿ ಗಾಂಧಾರವು ನ್ಯಾಸವಾಗಿದೆ. (ಆ) ಅಂಶಗಳೇ ಅಪನ್ಯಾಸಗಳೂ ಆಗಿವೆ. (ಇ) [ಇದರ] ಪ್ರಸ್ತಾರವು [ಹೀಗಿದೆ] 69
ಗಾ ರೀ ರೀ ರೀ ರೀ ರೀ ರೀ ರೀ i
ರೀ ಗಾ ರೀ ಗಾ ರೀ ರೀ ರೀ ರೀ ii
ರೀ ರೀ ಗಾ ಗಾ ರೀ ರೀ ಮಾ ಮಾ iii
ರೀ ಗಾ ಸಾ ಧನಿ ನೀ ನೀ ನೀ ನೀ iv
ನೀ ರೀ ನೀ ರೀ ಧನಿ ಧನಿ ಪಾ ಪಾ v
ಮಾ ಪಾ ಮಾ ರಿಗ ಗಾ ಗಾ ಗಾ ಗಾ vi
ರೀ ರೀ ಗಾ ಸಮ ಮಾ ಮಾ ಪಾ ಪಾ vii
ಮಾ ಪಾ ಮಾ ರಿಗ ಗಾ ಗಾ ಗಾ ಗಾ viii
____
ಧಾ ನೀ ಗಾ ಗಾ ಗಾ ಗಾ ಗಾ ಗಾ ix
ಪಾ ಪಾ ಮಾ ರಿಗ ಗಾ ಗಾ ಗಾ ಗಾ x
ನೀ ನೀ ನೀ ನೀ ರೀ ರೀ ರೀ ರೀ xi
ರೀ ರೀ ಮಾ ನೀ ಸಾ ಸಾ ನೀ ನೀ xii
ಪಾ ಪಾ ಮಾ ಗರಿ ಗಾ ಗಾ ಗಾ ಗಾ xiii
ರೀ ರೀ ಗಾ ಸಮ ಮಾ ಮಾ ಪಾ ಪಾ xiv
ಮಾ ಮಾ ನೀ ನೀ ಸಾ ರೀ ಗಾ ಪಾ xv
ರಿಗ ಗಾ ಗಾ ಗಾ ಗಾ ಗಾ ಗಾ ಗಾ xvi
[ಇತ್ಯಾಂಧ್ರೀ]
(9. ನಂದಯಂತೀ)
೫೭೫ ನಂದಯಂತ್ಯಾಂ ಪಂಚಮೋ S೦ಶೋ ಗಾಂಧಾರಸ್ತು ಗ್ರಹಃ ಸ್ಮೃತಃ |
ಕೈಶ್ಚಿತ್ತು ಪಂಚಮಃ ಪ್ರೋಕ್ತೋ ಗ್ರಹೋ Sಸ್ಯಾಂ ಗೀತವೇದಿಭಿಃ|| ೧೧೨ ||
೫೭೬ ಮಂದ್ರರ್ಷಭಸ್ಯ ಬಾಹುಲ್ಯಃ ಷಾಡವಂ ಷಡ್ಜಲೋಪತಃ |
ಹೃಷ್ಯಕಾಮೂರ್ಛನಾ ತಾಲಃ ಪೂರ್ವವದ್ ದ್ವಿಗುಣಾಃ ಕಲಾಃ |
ವಿನಿಯೋಗೋ ಧ್ರುವಾಗಾನೇ ಪ್ರಥಮಪ್ರೇಕ್ಷಣೇ ಭವೇತ್ || ೧೧೩ ||
೫೭೭ (ಅ) ಅಸ್ಯಾಂ ಗಾಂಧಾರೋ ನ್ಯಾಸಃ | (ಆ) ಮಧ್ಯಮಪಂಚಮಾವಪನ್ಯಾಸೌ | (ಇ) ಪ್ರಸ್ತಾರಃ:- 70
ಗಾ ಗಾ ಗಾ ಗಾ ಪಾ ಪಾ ಧಪ ಮಾ i
ಧಾ ಧಾ ಧಾ ಧಾ ಧಾ ನೀ ಸನಿ ಧಾ ii
ಪಾ ಪಾ ಪಾ ಪಾ ಪಾ ಪಾ ಪಾ ಪಾ iii
ಧಾ ನೀ ಮಾ ಪಾ ಗಾ ಗಾ ಗಾ ಗಾ iv
ಮಾ ರೀ ಗಾ ಗಾ ಗಾ ಗಾ ಗಾ ಗಾ v
ಮಾ ಪಾ ಮಾ ಪಾ ಧಾ ಧನಿ ಪಾ ಪಾ vi
—
ಪಾಠವಿಮರ್ಶೆ: ೫೭೪-xii, xiii, xiv, xv, xvi, ೫೭೬, ಅ, ಇ, ಈ, ೫೭೭, ಅ, ಇ, ೫೭೭
—-
ಧಾ ನೀ ಗಾ ಗಾ ಗಾ ಗಾ ಗಾ ಗಾ ix
ಪಾ ಪಾ ಮಾ ರಿಗ ಗಾ ಗಾ ಗಾ ಗಾ x
ನೀ ನೀ ನೀ ನೀ ರೀ ರೀ ರೀ ರೀ xi
ರೀ ರೀ ಮಾ ನೀ ಸಾ ಸಾ ನೀ ನೀ xii
ಪಾ ಪಾ ಮಾ ಗರಿ ಗಾ ಗಾ ಗಾ ಗಾ xiii
ರೀ ರೀ ಗಾ ಸಮ ಮಾ ಮಾ ಪಾ ಪಾ xiv
ಮಾ ಮಾ ನೀ ನೀ ಸಾ ರೀ ಗಾ ಪಾ xv
ರಿಗ ಗಾ ಗಾ ಗಾ ಗಾ ಗಾ ಗಾ ಗಾ xvi
[ಹೀಗೆ] ಆಂಧ್ರೀ
(9. ನಂದಯಂತೀ)
೫೭೫ ನಂದಯಂತೀ[ಜಾತಿ]ಯಲ್ಲಿ ಪಂಚಮವು ಅಂಶ, ಗಾಂಧಾರವು ಗ್ರಹವೆಂದು ಸ್ಮರಿಸಲಾಗಿದೆ. ಹಾಡುಗಳಲ್ಲಿ ಪಂಡಿತರಾದ ಕೆಲವರು ಇದರ ಗ್ರಹವು ಪಂಚಮವೆಂದು ಹೇಳುತ್ತಾರೆ. ೧೧೨
೫೭೬ (ಇದರಲ್ಲಿ) ಮಂದ್ರರಿಷಭದ ಪ್ರಯೋಗವು ಬಹುವಾಗಿದೆ; ಷಡ್ಜವನ್ನು ಲೋಪಮಾಡುವುದರಿಂದ ಷಾಡವವಾಗುತ್ತದೆ. ಇದರ ಮೂರ್ಛನೆಯು ಹೃಷ್ಯಕಾ. ತಾಳವು ಹಿಂದೆ ಹೇಳಿರುವಂತೆ, ಎರಡರಷ್ಟು ಕಲೆಗಳನ್ನುಳ್ಳದ್ದು. ಮೊದಲನೆಯ ದೃಶ್ಯದ ಧ್ರುವಾಗಾನದಲ್ಲಿ (ಇದನ್ನು) ವಿನಿಯೋಗಿಸಬೇಕು. ೧೧೩
೫೭೭ (ಅ) ಇದರ ನ್ಯಾಸವು ಗಾಂಧಾರ. (ಆ) ಇದರ ಅಪನ್ಯಾಸಗಳು ಮಧ್ಯಮಪಂಚಮಗಳು. (ಇ) [ಇದರ] ಪ್ರಸ್ತಾರವು [ಹೀಗಿದೆ]- 70
ಗಾ ಗಾ ಗಾ ಗಾ ಪಾ ಪಾ ಧಪ ಮಾ i
ಧಾ ಧಾ ಧಾ ಧಾ ಧಾ ನೀ ಸನಿ ಧಾ ii
ಪಾ ಪಾ ಪಾ ಪಾ ಪಾ ಪಾ ಪಾ ಪಾ iii
ಧಾ ನೀ ಮಾ ಪಾ ಗಾ ಗಾ ಗಾ ಗಾ iv
ಮಾ ರೀ ಗಾ ಗಾ ಗಾ ಗಾ ಗಾ ಗಾ v
ಮಾ ಪಾ ಮಾ ಪಾ ಧಾ ಧನಿ ಪಾ ಪಾ vi
—
ii, iii, iv, vi
____
ಧಾ ನೀ ಮಾ ಪಾ ಗಾ ಗಾ ಗಾ ಗಾ vii
ಗಮ ಪಾ ಪಾ ಪಾ ಮಾ ಮಾ ಗಾ ಗಾ viii
ಧಾ ನೀ ಮಾ ಪಾ ಗಾ ಗಾ ಗಾ ಗಾ ix
ಮಾ ಮಾ ಮಾ ಮಾ ಮಾ ಮಾ ಮಾ ಮಾ x
ರೀ ಗಾ ಮಾ ಪಾ ಪಮ ಪಾ ಪಾ ನೀ xi
ರೀ ರೀ ರೀ ರೀ ಪಾ ಪಾ ಮಾ ಮಾ xii
ಧಾ ನೀ ಸನಿ ಧಾ ಪಾ ಪಾ ಪಾ ಪಾ xiii
ಧಾ ನೀ ಮಾ ಪಾ ಗಾ ಗಾ ಗಾ ಗಾ xiv
ಗಾ ಪಾ ಪಾ ಪಾ ಧಾ ಮಾ ಗಾ ಮಾ xv
ಧಾ ಧಾ ನೀ ಧಾ ಪಾ ಪಾ ಪಾ ಪಾ xvi
ರೀ ಗಾ ಮಾ ಪಾ ಪಮ ಪಾ ಪಾ ನೀ xvii
ರೀ ರೀ ರೀ ರೀ ಪಾ ಪಾ ಪಾ ಪಾ xviii
ಪಾ ಪಾ ಪಾ ಪಾ ಧಾ ಮಾ ಮಾ ಮಾ xix
ನೀ ಪಾ ಮಾ ಗಮ ಗಾ ಗಾ ಗಾ ಗಾ xx
ರೀ ರೀ ಗಾ ಗಾ ಮಾ ಮಾ ಮಾ ಮಾ xxi
ನೀ ಪಾ ನೀ ಮಾ ನೀ ಧಾ ಪಾ ಪಾ xxii
ಸಾ ಸಾ ಧನಿ ಧಾ ಪಾ ಪಾ ಪಾ ಪಾ xxiii
ಮಾ ಪಾ ಮಾ ಪರಗ ಗಾ ಗಾ ಸಾ ಸಾ xxvi
ರೀ ರೀ ಗಾ ಗಾ ಮಾ ಮಾ ಪಾ ಮಾ xxv
ರೀ ರೀ ರೀ ಗಾ ಮಾ ರಿಗ ಮಾ ಮಾ xxvi
ಮಾ ನೀ ಪಾ ನೀ ಗಾ ಗಾ ಗಾ ಗಾ xxvii
ಮಾ ಮಾ ಪಾ ಪಾ ಧಾ ಧನಿ ನಿಧ ಮಾ xxviii
—
ಪಾಠವಿಮರ್ಶೆ:
—-
ಧಾ ನೀ ಮಾ ಪಾ ಗಾ ಗಾ ಗಾ ಗಾ vii
ಗಮ ಪಾ ಪಾ ಪಾ ಮಾ ಮಾ ಗಾ ಗಾ viii
ಧಾ ನೀ ಮಾ ಪಾ ಗಾ ಗಾ ಗಾ ಗಾ ix
ಮಾ ಮಾ ಮಾ ಮಾ ಮಾ ಮಾ ಮಾ ಮಾ x
ರೀ ಗಾ ಮಾ ಪಾ ಪಮ ಪಾ ಪಾ ನೀ xi
ರೀ ರೀ ರೀ ರೀ ಪಾ ಪಾ ಮಾ ಮಾ xii
ಧಾ ನೀ ಸನಿ ಧಾ ಪಾ ಪಾ ಪಾ ಪಾ xiii
ಧಾ ನೀ ಮಾ ಪಾ ಗಾ ಗಾ ಗಾ ಗಾ xiv
ಗಾ ಪಾ ಪಾ ಪಾ ಧಾ ಮಾ ಗಾ ಮಾ xv
ಧಾ ಧಾ ನೀ ಧಾ ಪಾ ಪಾ ಪಾ ಪಾ xvi
ರೀ ಗಾ ಮಾ ಪಾ ಪಮ ಪಾ ಪಾ ನೀ xvii
ರೀ ರೀ ರೀ ರೀ ಪಾ ಪಾ ಪಾ ಪಾ xviii
ಪಾ ಪಾ ಪಾ ಪಾ ಧಾ ಮಾ ಮಾ ಮಾ xix
ನೀ ಪಾ ಮಾ ಗಮ ಗಾ ಗಾ ಗಾ ಗಾ xx
ರೀ ರೀ ಗಾ ಗಾ ಮಾ ಮಾ ಮಾ ಮಾ xxi
ನೀ ಪಾ ನೀ ಮಾ ನೀ ಧಾ ಪಾ ಪಾ xxii
ಸಾ ಸಾ ಧನಿ ಧಾ ಪಾ ಪಾ ಪಾ ಪಾ xxiii
ಮಾ ಪಾ ಮಾ ಪರಗ ಗಾ ಗಾ ಸಾ ಸಾ xxvi
ರೀ ರೀ ಗಾ ಗಾ ಮಾ ಮಾ ಪಾ ಮಾ xxv
ರೀ ರೀ ರೀ ಗಾ ಮಾ ರಿಗ ಮಾ ಮಾ xxvi
ಮಾ ನೀ ಪಾ ನೀ ಗಾ ಗಾ ಗಾ ಗಾ xxvii
ಮಾ ಮಾ ಪಾ ಪಾ ಧಾ ಧನಿ ನಿಧ ಮಾ xxviii
____
ಧಾ ಧಾ ಸಾ ನೀ ಧಾ ನೀ ಪಾ ಪಾ xxix
ರೀ ರೀ ರೀ ರೀ ಮಾ ಪಾ ಧಾ ಮಾ xxx
ನೀ ನೀ ನೀ ನೀ ಧಾ ಪಾ ಮಾ ಮಾ xxxi
ಮಾ ಪರಿ ಗಾ ಗಾ ಗಾ ಗಾ ಗಾ ಗಾ xxxii
[ಇತಿ] ನಂದಯಂತೀ
ಮತಂಗಮುನಿವಿರಚಿತ ಬೃಹದ್ದೇಶ್ಯಾಂ
[ಇತಿ ಜಾತಿರ್ನಾಮ ದ್ವಿತೀಯೋ Sಧ್ಯಾಯಃ ||]
—-
ಧಾ ಧಾ ಸಾ ನೀ ಧಾ ನೀ ಪಾ ಪಾ xxix
ರೀ ರೀ ರೀ ರೀ ಮಾ ಪಾ ಧಾ ಮಾ xxx
ನೀ ನೀ ನೀ ನೀ ಧಾ ಪಾ ಮಾ ಮಾ xxxi
ಮಾ ಪರಿ ಗಾ ಗಾ ಗಾ ಗಾ ಗಾ ಗಾ xxxii
[ಹೀಗೆ] ನಂದಯಂತೀ
[ಮತಂಗಮಿನಿವಿರಚಿತ ಬೃಹದ್ದೇಶಿಯಲ್ಲಿ]
[ಜಾತಿ ಎಂಬ ಹೆಸರಿನ ಎರಡನೆಯ ಅಧ್ಯಾಯವು ಮುಗಿಯಿತು.]
Leave A Comment