[ಮಂಗಲಾಚರಣಮ್]
೫೭೮ ಭಂ ಜ್ಯೋತಿಸ್ತದ್ರತೋ ಹಂಸಸ್ತಸ್ಮಾತ್ ತಂ ಭರತಂ ವಿದುಃ |
ತದ್ಭವಂ ಭರತಜ್ಞಾನಂ ತದ್ಭವಾ ಭಾರತೀ ಶುಭಾ || ೧ ||
[ರಾಗಲಕ್ಷಣಂ, ರಾಗಶಬ್ದವ್ಯುತ್ಪತ್ತಿಶ್ಚ]
[ನಾರದ ಉವಾಚ]-
೫೭೯ ಕಿಮುಚ್ಯತೇ ರಾಗಶಭ್ದೇನ ಕಿಂ ವಾ ರಾಗಸ್ಯ ಲಕ್ಷಣಮ್ |
ವ್ಯುತ್ಪತ್ತಿಲಕ್ಷಣಂ ತಸ್ಯ ರಥಾವದ್ ವಕ್ತುಮರ್ಹಸಿ || ೨ ||
ಮತಂಗ ಉವಾಚ-
೫೮೦ ರಾಗಮಾರ್ಗಸ್ಯ ಯದ್ರೂಪಂ ಯನ್ನೋಕ್ತಂ ಭರತಾದಿಭಿಃ |
ನಿರೂಪ್ಯತೇ ತದಸ್ಮಾಭಿರ್ಲಕ್ಷಣಸಂಯುತಮ್ || ೩ ||
ತತ್ರಾದೌ –
೫೮೧ ಸ್ವರವರ್ಣವಿಶೇಷೇಣ ಧ್ವನಿಭೇದೇನ ವಾ ಪುನಃ |
ರಜ್ಯತೇ ಯೇನ ಸಚ್ಚಿತ್ತಂ ಸ ರಾಗಃ ಸಮ್ಮತಃ ಸತಾಮ್ || ೪ ||
ಅಥವಾ –
೫೮೨ ಯೋsಸೌ ಧ್ವನಿವಿಶೇಷಸ್ತು ಸ್ವರವರ್ಣವಿಭೂಷಿತಃ |
ರಂಜಕೋ ಜನಚಿತ್ತಾನಾಂ ಸ ಚ ರಾಗ ಉದಾಹೃತಃ || ೫ ||
೫೮೩ ಸಾಮಾನ್ಯಂ ಚ ವಿಶೇಷಂ ಚ ಲಕ್ಷಣಂ ದ್ವಿವಿಧಂ ಮತಮ್ |
ಚತುವಿಧಂ ತು ಸಾಮಾನ್ಯಂ ವಿಶೇಷಂ ಚಾಂಶಾದಿಕಮ್ || ೬ ||
೫೮೪ ರಂಜನಾಚ್ಚಾಯತೇ ರಾಗೋ ವ್ಯುತ್ಪತ್ತಿಃ ಸಮುದಾಹೃತಾ |
ಇತ್ಯೇವಂ ರಾಗಶಬ್ಧಸ್ಯ ವ್ಯುತ್ಪತ್ತಿರಭಿಧೀಯತೆ || ೭ ||
—
ಪಾಠವಿಮರ್ಶೆ : ೫೮೫ಆ,ಇ ೫೮೬ ಆ,ಇ ೫೮೭ಈ ೫೮೮ಇ ೫೮೯ಈ ೫೯೦ ಅ-ಈ
—-
[i ರಾಗಲಕ್ಷಣ]
[ಮಂಗಲಾಚರಣ]
೫೭೮ ‘ಭಂ’ ಎಂದರೆ ಬೆಳಕು. ಅದರಲ್ಲಿ ರಮಿಸುವವನು ಹಂಸ (=ಪರಮಾತ್ಮ). ಆದುದರಿಂದ ಅವನನ್ನು ಭರತನೆಂದು ತಿಳಿಯುತ್ತಾರೆ. ಅವನಿಂದ ಲುಟ್ಟಿದ್ದು ಭರತಜ್ಞಾನ; ಅದರಿಂದ ಹುಟ್ಟಿದ್ದು ಶುಭದಾಯಕಳಾದ ಭಾರತೀ. ೧
[ಭಾರತ ಲಕ್ಷಣ, ರಾಗಶಬ್ಧದ ವ್ಯುತ್ಪತ್ತಿ]
ನಾರದನು ಹೇ(=ಕೇ)ಳಿದನು (?)-
೫೭೯ ರಾಗವೆಂದರೆ ಏನು? ಅಲ್ಲದೆ ರಾಗದ ಲಕ್ಷಣವೇನು? ಅದರ ವ್ಯುತ್ಪತ್ತಿಯನ್ನೂ ಲಕ್ಷಣವನ್ನೂ ಸರಿಯಾಗಿ (=ಅದು ಹೇಗಿದೆಯೋ ಹಾಗೆಯೇ) ಹೇಳಲು ನೀನು (ಒಬ್ಬನೇ) ಅರ್ಹನಾಗಿದ್ದೀಯೆ. ೨
ಮತಂಗನು ಹೇಳಿದನು –
೫೮೦ ಭರತನೇ ಮೊದಲಾದವರು (ಸಹ) ಹೇಳದೆ ಇರುವ, ಲಕ್ಷ್ಯ ಲಕ್ಷಣಗಳೆರಡನ್ನೂ ಒಳಗೊಂಡ ರಾಗಮಾರ್ಗದ ಸ್ವರೂಪವನ್ನು ನಾವು (ಈಗ) ನಿರೂಪಿಸುತ್ತೇವೆ. ೩
ಅದರ ಪೈಕಿ ಮೊದಲು –
೫೮೧ ವಿಶೇಷವಾದ ಸ್ವರದಿಂದಲೂ ವರ್ಣ (=ಗಾನಕ್ರಿಯೆ)ದಿಂದಲೂ, ಬೇರೆ ಬೇರೆ ಧ್ವನಿಯಿಂದಲೂ ಯಾವುದು ಸಜ್ಜನರ ಮನಸ್ಸನ್ನು ರಂಜಿಸುತ್ತದೋ ಅದು ರಾಗ ಎಂದು ಪಂಡಿತಗರಿಗೆ ಸಮ್ಮತವಾಗಿದೆ. ೪
ಅಥವಾ
೫೮೨ ಯಾವ ವಿಶೇಷಧ್ವನಿಯು ಸ್ವರದಿಂದಲೂ ವರ್ಣ (=ಗಾನಕ್ರಿಯೆ)ದಿಂದಲೂ ಸಿಂಗಾರಗೊಂಡು ಜನರ ಮನಸ್ಸನ್ನು ರಂಜಿಸುತ್ತದೋ ಅದನ್ನು ರಾಗವೆಂದು ನಿರೂಪಿಸಿದೆ. ೫
೫೮೩ (ರಾಗದ) ಲಕ್ಷಣವು ಸಾಮಾನ್ಯ ಮತ್ತು ವಿಶೇಷವೆಂದು ಎರಡು ವಿಧವಾಗಿದೆ. ಸಾಮಾನ್ಯ (ಲಕ್ಷಣ)ವು ನಾಲ್ಕು ವಿಧವಾಗಿದೆ; ವಿಶೇಷ (ಲಕ್ಷಣ(ವು ಅಂಶ ಮೊದಲಾದದ್ದು. ೬
೫೮೪ ರಂಜಿಸುವುದರಿಂದ ರಾಗ(ವೆನ್ನಿಸಿಕೊಳ್ಳುತ್ತದೆ) ಎಂದು (‘ರಾಗ’ ಶಬ್ದದ) ವ್ಯುತ್ಪತ್ತಿಯನ್ನು ಹೇಳಿದೆ. ಹೀಗೆ ರಾಗಶಬ್ದದ ವ್ಯುತ್ಪತ್ತಿಯನ್ನು ನಿರೂಪಿಸಲಾಗುತ್ತದೆ.
____
೫೮೫ ಅಶ್ವಕಣಾದಿವದ್ ರೂಢೋ ಯೌಗಿಕೋ ಮಂಡಪಾದಿವತ್ |
ಯೋಗರೂಢೋ sಥ ವಾ ರಾಗೋ ಜ್ಞೇಯಃ ಪಂಕಜಶಬ್ದವತ್ || ೮ ||
(ಗೀತೆಭೇದಾಃ)
(ತತ್ರ ಮತಂಗಮತಂ)
೫೮೬ ಇದಾನೀಂ ಸಂಪ್ರವಕ್ಷ್ಯಾಮಿ ಸಪ್ತಗೀತಿರ್ಮನೋಹರಾಃ |
ಪ್ರಥಮಾ ಶುದ್ಧಗೀತಿಃ ಸ್ಯಾದ್ ದ್ವಿತೀಯಾ ಭಿನ್ನಕಾ ಭವೇತ್ || ೯ ||
೫೮೭ ತೃತೀಯಾ ಗೌಡಿಕಾ ಚೈವ ರಾಗಗೀತಿಶ್ಚತುರ್ಥಿಕಾ |
ಸಾಧಾರಣೀ ತು ವಿಜ್ಞೇಯಾ ಗೀತಜ್ಞಃ ಪಂಚಮೀ ತಥಾ || ೧೦ ||
೫೮೮ ಭಾಷಾಗೀತಿಸ್ತು ಷಷ್ಠೀ ಸ್ಯಾದ್ ವಿಭಾಷಾ ಚೈವ ಸಪ್ತಮೀ |
ಗೀತಯಃ ಸಪ್ತ ಹಿ ಪ್ರೋಕ್ತಾ ಇದಾನೀ ಭೇದ ಉಚ್ಯತೇ || ೧೧ ||
(ಇತಿ ಮತಂಗಮತಮ್)
(ದುರ್ಗಶಕ್ತಿಮತಂ)
೫೮೯ ಗೀತಯಃ ಪಂಚ ವಿಜ್ಞೇಯಾಃ ಶುದ್ದಾ ಭಿನ್ನಾ sಥ ವೇಸರಾ |
ಗೌಡೀ ಸಾಧಾರಿತಾ ಪ್ರೋಕ್ತಾ ದುರ್ಗಾಮತಮಿದಂ ಮತಮ್ || ೧೨ ||
(ಇತಿ ದುರ್ಗಾಶಕ್ತಿಮತಮ್)
(ಭರತಮತಮ್ )
೫೯೦ ಪ್ರಥಮಾ ಮಾಗಧೀ ಜ್ಞೇಯಾ ದ್ವಿತೀಯಾ ಚಾರ್ಧಮಾಗಧೀ |
ಸಂಭಾವಿತಾ ತೃತೀಯಾ ಚ ಚತುರ್ಥೀ ಪೃಥುಲಾ ಸ್ಮೃತಾ || ೧೩ ||
(ಇತಿ ಭರತಮತಂ)
(ಯಾಷ್ಟಿಕಮತಂ)
೫೯೧ ಭಾಷಾ ಚೈವ ವಿಭಾಷಾ ಚ ತಥಾ ಚಾಂತರಭಾಷಿಕಾ |
ತಿಸ್ರಸ್ತು ಗೀತಯಃ ಪ್ರೋಕ್ತಾ ಯಾಷ್ಟಿಕೇನ ಮಹಾತ್ಮನಾ || ೧೪ ||
(ಇತಿ ಯಾಷ್ಟಿಕಮತಮ್)
—
ಪಾಠವಿಮರ್ಶೆ: ೫೮೫ಆ,ಇ ೫೮೬ ಆ,ಇ ೫೮೭ಈ ೫೮೮ಇ ೫೮೯ಈ ೫೯೦ ಅ-ಈ
—-
೫೮೫ (ರಾಗ ಶಬ್ದವು) ಅಶ್ವಕರ್ಣ ಎಂಬಂತೆ ರೂಢ(ನಾಮವಾಗಿದೆ) ; ಮಂಡಪ ಎಂಬಂತೆ ಅವಯವಾರ್ಥವನ್ನು ಹೊಂದಿದೆ <ಯೌಗಿಕ> ಅಥವಾ ಪಂಕಜ ಶಬ್ದದ ಹಾಗೆ ಯೋಗ ಮತ್ತು ರೂಢ ಅರ್ಥಗಳನ್ನು ಹೊಂದಿದೆ ಎಂದು ತಿಳಿಯಬೇಕು. ೮
(ಗೀತೆಯ ಭೇದಗಳು)
(ಅವುಗಳ ಪೈಕಿ ಮತಂಗನ ಮತ)
೫೮೬ ಈಗ ಮನಸ್ಸನ್ನು ರಂಜಿಸುವ ಏಳು ಗೀತಿಗಳ (ಹೆಸರು ಮತ್ತು ಲಕ್ಷಣಗಳ)ನ್ನು ಹೇಳುತ್ತೇನೆ. ಮೊದಲನೆಯದು ಶುದ್ಧಗೀತಿ ಎಂಬುದು ; ಭಿನ್ನ (ಗೀತಿಯು) ಎರಡನೆಯದಾಗುತ್ತದೆ. ೯
೫೮೭ ಮೂರನೆಯದು ಗೌಡೀ; ನಾಲ್ಕನೆಯದು ರಾಗಗೀತಿ; ಐದನೆಯದು ಸಾಧಾರಣೀ (ಗೀತಿ) ಏಳು ಗೀತಿಗಳನ್ನು ಹೇಳಲಾಯಿತು. ಈಗ (ಅವುಗಳಲ್ಲಿ) (ಮತ)ಭೇದಗಳನ್ನು ಹೇಳಲಾಗುವುದು. ೧೦
(ಹೀಗೆ ಮತಂಗಮತ)
(ದುರ್ಗಾಶಕ್ತಿಯ ಮತ)
೫೮೯ ಗೀತಿಗಳು ಐದು (ವಿಧ) ಎಂದು ತಿಳಿಯಬೇಕು. ಶುದ್ಧಾ, ಭಿನ್ನಾ, ನಂತರ ವೇಸರಾ, ಗೌಡೀ, ಸಾಧಾರಿತ ಎಂದು ಈ ದುರ್ಗಾ(ಶಕ್ತಿ) ಮತವನ್ನು ಹೇಳಿದೆ.
(ಹೀಗೆ ದುರ್ಗಾಶಕ್ತಿಯ ಮತ)
(ಭರತಮತ)
೫೯೦ (ಗೀತಿಗಳಲ್ಲಿ) ಮೊದಲನೆಯದು ಮಾಗಧೀ ಎಂದು ತಿಳಿಯಬೇಕು; ಎರಡನೆಯದು ಅರ್ಧ ಮಾಗಧೀ; ಮೂರನೆಯದು ಸಂಭಾವಿತಾ; ನಾಲ್ಕನೆಯದು ಪೃಥುಲಾ ಎಂದು ಸ್ಮರಿಸಿದೆ. ೧೩
(ಹೀಗೆ ಭರತಮತ)
(ಯಾಷ್ಟಿಕಮತ)
೫೯೧ ಭಾಷಾ ಮತ್ತು ವಿಭಾಷಾ, ಹಾಗೆಯೇ ಅಂತರಭಾಷಾ – ಗೀತಿಗಳು ಈ ಮೂರು ಎಂದು ಮಹಾತ್ಮನಾದ ಯಾಷ್ಟಿಕನು ಹೇಳಿದನು. ೧೪
(ಹೀಗೆ ಯಾಷ್ಟಿಕಮತ)
____
(ಕಶ್ಯಪಮತಂ – ಶಾರ್ದೂಲಮತಮ್)
೫೯೨ ಭಾಷಾಗೀತಿರ್ವಿಭಾಷಾ ಚ ಕಶ್ಯಪೇನಾಪ್ಯುದಾಹೃತಾ |
ಭಾಷಾಗೀತಿಸ್ತಥೈಕೈವ ಶಾರ್ದೂಲಮತಸಮ್ಮತಾ || ೧೫ ||
(ಇತಿ ಕಶ್ಯಪಮತಂ – ಶಾರ್ದೂಲಮತಮ್)
Leave A Comment