೫೯೩   ಇದಾನೀಂ ಸಂಪ್ರವಕ್ಷ್ಯಾಮಿ ಗೀತಿಲಕ್ಷಣಮುತ್ತಮಮ್                                                               || ೧೬ ||

[೧. ಶುದ್ಧಾಗೀತಿ:]

೫೯೪   ಮಂದ್ರಾಮಂದ್ರೈಶ್ಚ ತಾರಯಶ್ಚ ಋಜುಭಿರ್ಲಲಿತೈಃ ಸಮೈಃ |
ಸ್ವರೈಶ್ಚ ಶ್ರುತಿಭಿಃ ಪೂರ್ಣಾ ಚೋಕ್ಷಾಗೀತಿರುದಾಹೃತಾ                                                          || ೧೭ ||

[೨. ಭಿನ್ನಾಗೀತಿ:]

೫೯೫   ಸೂಕ್ಷೈಶ್ಚ ಪ್ರಚಲೈರ್ವಕ್ರೈರುಲ್ಲಸಿತಪ್ರಸಾರಿತೈಃ |
ಲಲಿತೈಸ್ತಾರಮಂದ್ರೈಶ್ಚ ಭಿನ್ನಾಗೀತಿರುದಾಹೃತಾ                                                                          || ೧೮ ||

[೩. ಗೌಡೀಗೀತಿಃ ತದ್ಗತಾ ಓಹಾಟೀ ಚ]

೫೯೬   ಓಹಾಟೀಲಲಿತಾಶ್ಚಾಪಿ ಸ್ವರಾ ಗೌಡ್ಯಾಶ್ಚ ಶೋಭನಾಃ |
ಹಕಾರೌಕಾರಯೋರ್ಯೋಗಾದೋಹಾಟೀ ಪರಿಕೀರ್ತಿತಾ                                                           || ೧೯ ||

೫೯೭   ಚಿಬುಕಂ ಹೃದಯೇ ನ್ಯಸ್ಯ ಓಹಾಟೀ ಮಂದ್ರಜಾ ಭವೇತ್ |
ದ್ರುತಾ ದ್ರುತತರಾ ಕಾರ್ಯಾ ಸ್ವರಕಂಪೇನ ಪೀಡಿತಾ                                                               || ೨೦ ||

೫೯೮   ಓಹಾಟೀ ಲಲಿತಾ ಚಾಪಿ ದೃಷ್ಟಾದೃಷ್ಟೇನ ಕರ್ಮಣಾ |
ತ್ರಿಸ್ಥಾನಕರಣೈರ್ಯುಕ್ತಾ ತ್ರಿಸ್ಥಾನಚಲನಾಕುಲಾ                                                                   || ೨೧ ||

ಪಾಠವಿಮರ್ಶೆ: ೫೯೨ಆ ೫೯೩ ಆ ೫೯೪ಇಈ ೫೯೫ ಅ-ಈ ೫೯೬ಅ, ಇಈ ೫೯೭ಅಆ, ಇ,ಈ ೫೯೮ ಅ,ಆ,ಇ

—-

(ಕಶ್ಯಪ ಮತ್ತು ಶಾರ್ದೂಲರ ಮತಗಳು)

೫೯೨   ಭಾಷಾಗೀತಿ ಮತ್ತು ವಿಭಾಷಾ (ಗೀತಿ) (ಎಂಬ ಎರಡೇ ವಿಧ)ಗಳನ್ನು ಕಶ್ಯಪನು ನಿರೂಪಿಸಿದನು. ಅಂತೆಯೇ ಭಾಷಾ ಗೀತಿಯು ಒಂದೇ (ಗೀತವಿಧ) ಎಂಬುದು ಶಾರ್ದೂಲಮತಕ್ಕೆ ಸಮ್ಮತವಾಗಿದೆ.

[ಹೀಗೆ ಕಶ್ಯಪ ಮತ್ತು ಶಾರ್ದೂಲರ ಮತಗಳು]

 

[ii ಗೀತಿಗಳ ಲಕ್ಷಣಗಳು]

೫೯೩   ಮಂದ್ರ(ಸ್ಥಾಯಿಯ), ಮಂದ್ರವಲ್ಲದ (=ಮಧ್ಯಸ್ಥಾಯಿಯ), ತಾರದ (-ಸ್ಥಾಯಿಯ), ನೇರವಾದ, ಆಕರ್ಷಕವಾದ ಸ್ವರಗಳಿಂದಲೂ ಶ್ರುತಿಗಳಿಂದಲೂ ತುಂಬಿರುವುದು ಚೋಕ್ಷಾ (=ಶುದ್ಧಾ) ಗೀತಿ ಎಂದು ಹೇಳಿದೆ.                                                  ೧೭

[೨. ಭಿನ್ನಾಗೀತಿ]

೫೯೫   ಸೂಕ್ಷ್ಮವಾದ (=ನವೀರಾದ, ಅಲ್ಪವಾದ), ಚಲನಶೀಲವಾದ, ವಕ್ರವಾದ (ಬಾಗಿದ?) ಕಾಂತಿಯುಕ್ತವಾಗಿದ್ದು ಹರ್ಷದಾಯಕವಾದ, ಹರಡಿಕೊಳ್ಳುವ, ಆಕರ್ಷಕವಾದ, ತಾರ ಮತ್ತು ಮಂದ್ರ(ಸ್ಥಾಯಿ)ಗಳಲ್ಲಿರುವ (ಸ್ವರಗಳಿಂದಲೂ ಶ್ರುತಿಗಳಿಂದಲೂ) ಭಿನ್ನಾಗೀತಿಯು (ಆಗುತ್ತದೆ) ಎಂದು ನಿರೂಪಿತವಾಗಿದೆ.                                                                                                                   ೧೮

[೩.  ಗೌಡೀಗೀತಿ ಮತ್ತು ಅದರಲ್ಲಿರುವ ಓಹಾಟೀಗೀತಿ]

೫೯೬   ಗೌಡೀ(ಗೀತಿ)ಯಲ್ಲಿ ಸ್ವರಗಳು ಓಹಾಟೀಯಿಂದ ಆಕರ್ಷಕವಾಗಿ ಶೋಭಿಸುತ್ತವೆ. (ಸ್ವರಗಳಲ್ಲಿ) ಹಕಾರ ಮತ್ತು ಓಕಾರಗಳು (ಉಚ್ಚಾರದಲ್ಲಿ) ಸೇರುವುದು ಓಹಾಟೀ ಎಂದು ಹೇಳಿದೆ.                                                                         ೧೯.

೫೯೭   ಗದ್ದವನ್ನು ಎದೆಯಲ್ಲಿಟ್ಟು (ಹಾಡುವುದರಿಂದ) ಓಹಾಟೀ ಮಂದ್ರ(ಸ್ಥಾಯಿ)ದಲ್ಲಿ ಹುಟ್ಟುತ್ತದೆ. (ಅದನ್ನು) ವೇಗವಾಗಿಯೂ ಇನ್ನೂ ಹೆಚ್ಚು ವೇಗವಾಗಿಯೂ ಸ್ವರಗಳನ್ನು ಒತ್ತಿ ಕಂಪಿಸಿಯೂ ಪ್ರಯೋಗಿಸಬೇಕು.                                                  ೨೦

೫೯೮   ಓಹಾಟಿಯ ಗೋಚರಿಸುವ ಮತ್ತು ಗೋಚರಿಸದಿರುವ, ಮೂರು ಸ್ಥಾನಗಳಲ್ಲಿ ಹರಡಿರುವ (ಗಾನ) ಕರ್ಮಗಳಿಂದ, ಮೂರು ಸ್ಥಾನಗಳಲ್ಲಿ ಚೆದರಿ ಹರಡಿಹೋಗಿರುವ [ಸ್ವರಗಳಿಂದ] ಆಕರ್ಷಕವಾಗಿರುತ್ತದೆ.

____

೫೯೯   ಚತುರ್ವಿಧಾ ತಥೌಹಾಟೀ ಕರ್ತವ್ಯಾ ಗೀತವೇದಿಭಿಃ |
ಸಮಾಕ್ಷರಾ (S?)ಸಮಾ ಚೈವ ಕಾರ್ಯಾರೋಹಾವರೋಹಿಣೀ                                                || ೨೨ ||

೬೦೦   [ಓಹಾಟೀ ಮಂದ್ರಜೋಪಾತ್ತಾ ಪ್ರಯೋಗೇ ಧ್ವನಿಕಂಪಿತೈಃ |
ಅವಿಶ್ರಾಮೇಣ ತ್ರಿಸ್ಥಾನೇ ಗೌಡೀ ಗೀತಿರುದಾಹೃತಾ                                                               || ೨೩ ||

[೪. ರಾಗಗೀತಿಃ]

೬೦೧   ಲಲಿತೈರ್ಗಮಕೈಶ್ಚಿತ್ರೈಃ ಪ್ರಸನ್ನೈರೌರಸೈಃ ಸಮೈಃ |
ರಂಜಕೈಃ ಸ್ವರಸಂದರ್ಭೈ ರಾಗಗೀತಿರುದಾಹೃತಾ                                                                   || ೨೪ ||

೬೦೨   ಚತುರ್ಣಾಮಪಿ ವರ್ಣಾನಾಂ ಯೋ ರಾಗಃ ಶೋಭನೋ ಭವೇತ್ |
ಸ ಸರ್ವೋ ದೃಶ್ಯತೇ ಯೇಷು ತೇನ ರಾಗಾ ಇತಿ ಸ್ಮೃತಾಃ                                                          || ೨೫ ||

[೫. ಸಾಧಾರಣೀಗೀತಿಃ]

೬೦೩   ಋಜುಭಿರ್ಲಲಿತೈಃ ಕಿಂಚಿತ್ ಸೂಕ್ಷ್ಮಾ ಸೂಕ್ಷ್ಮೈಶ್ಚ ಸುಶ್ರವೈಃ |
ಈಷದ್ ದ್ರುತೈಶ್ಚ ಕರ್ತವ್ಯಾ ಮೃದುಭಿರ್ಲಲಿತೈಸ್ತಥಾ                                                           || ೨೬ ||

೬೦೪   ಪ್ರಯೋಗೈರ್ಮಸೃಣೈಃ ಸೂಕ್ಷ್ಮಕಾಕುಭಿಶ್ಚ ಸುಯೋಜಿತೈಃ |
ಏವಂ ಸಾಧಾರಣೀ ಜ್ಞೇಯಾ ಸರ್ವಗೀತಿಸಮಾಶ್ರಯಾ                                                               || ೨೭ ||

[೬. ಭಾಷಾಗೀತಿಃ]

೬೦೫   ಪ್ರಯೋಗೈರ್ಗಾತ್ರಜೈಃ ಶ್ಲಕ್ಷ್ಣೈಃ ಕಾಕುರಕ್ತೈಃ ಸುಯೋಜಿತೈಃ |
ಕಂಪಿತೈಃ ಕೋಮಲೈರ್ದಿಪ್ತೈರ್ಮಾಲವೀಕಾಕುನಾನ್ವಿತೈಃ                                                         || ೨೮ ||

೬೦೬   ಲಲಿತೈಃ ಸುಕುಮಾರೈಶ್ಚ ಪ್ರಯೋಗೈಶ್ಚ ಸುಸಂಯತೈಃ |
ಭಾಷಾಗೀತಿಃ ಸಮಾಖ್ಯಾತಾ ಏಷಾ ಗೀತಿವಿಚಕ್ಷಣೈಃ |
ಯಥಾ ವೈ ರಜ್ಯತೇ ಲೋಕಸ್ತಥಾ ವೈ ಸಂಪ್ರಯುಜ್ಯತೇ                                                         || ೨೯ ||

ಪಾಠವಿಮರ್ಶೆ : ೫೯೯ಅ,ಈ ೬೦೦ಅಆ, ಇಈ ೬೦೧ಅ-ಈ ೬೦೨ಅ-ಈ ೬೦೪ಅಆ, ಇಈ ೬೦೬ಆ

—-

೫೯೯   ಹಾಡುವಿಕೆಯನ್ನು ಬಲ್ಲವರು ಓಹಾಟಿಯನ್ನು ಇದೇ ರೀತಿಯಲ್ಲಿ ಅಕ್ಷರಗಳಲ್ಲಿ ಸಮನಾಗಿರುವಂತೆಯೂ, (ಏರುಪೇರುಗಳಿಲ್ಲದೆ) ನಯವಾಗಿರುವಂತೆಯೂ <ಸಮಾ> (?ಅಕ್ಷರಗಳಲ್ಲಿ ವಿಷಮವಾಗಿರುವಂತೆಯೂ – < ಅಸಮಾ > ಆರೋಹಣದಲ್ಲಿಯೂ ಅವರೋಹಣದಲ್ಲಿಯೂ – ಹೀಗೆ ನಾಲ್ಕು ವಿಧಗಳಲ್ಲಿ ಪ್ರಯೋಗಿಸಬೇಕು.                                                                                      ೨೨

೬೦೦   [ಓಹಾಟಿಯು ಧ್ವನಿಕಂಪನಗಳಿರುವ ಪ್ರಯೋಗಗಳಿಂದ ಮಂದ್ರಸ್ಥಾಯಿಯಲ್ಲಿ ದೊರೆಯುತ್ತದೆ]. ಗೌಡೀಗೀತಿಯು (ಎಲ್ಲಿಯೂ) ನಿಲ್ಲದೆ ಮೂರು ಸ್ಥಾನಗಳಲ್ಲಿ (ಸಂಚರಿಸುತ್ತ) ಇರುತ್ತದೆ.                                                                                    ೨೩

೬೦೧   ಆಕರ್ಷಕವೂ ಸುಂದರವೂ ಆಗಿರುವ ಗಮಕಗಳಿಂದಲೂ, ಸ್ಫುಟವೂ ಎದೆಯಲ್ಲಿ ಹುಟ್ಟುವ (=ಮಂದ್ರಸ್ಥಾಯಿಯ), ಸಮತಟ್ಟಾದ, ರಂಜಿಸುವ ಸ್ವರಗಳ ಮೇಲನಗಳಿಂದಲೂ ರಾಗ ಗೀತಿ(ಯಾಗುತ್ತದೆ) ಎಂದು ಹೇಳಿದೆ.                                         ೨೪

೬೦೨   (ಸ್ಥಾಯಿ, ಆರೋಹೀ, ಅವರೋಹೀ ಮತ್ತು ಸಂಚಾರಿ ಎಂಬ) ನಾಲ್ಕು ವರ್ಣಗಳಲ್ಲಿ ರಾಗವು (ಚಿತ್ತಕ್ಕೆ ಬಣ್ಣಗೊಡುವುದು, ಆಸ್ವಾದ್ಯವಾಗುವುದು, ರುಚಿಯಾಗುವುದು) ಎಲ್ಲಿ ಶೋಭಿಸುತ್ತದೋ, ಅದೆಲ್ಲವೂ ಯಾವವುಗಳಲ್ಲಿ ಕಂಡುಬರುತ್ತದೋ, ಅವುಗಳನ್ನು (ಆದುದರಿಂದ) ರಾಗ(ಗೀತಿ)ಗಳೆಂದು ಸ್ಮರಿಸಲಾಗಿದೆ.                                                                                 ೨೫

[೫. ಸಾಧಾರಣೀಗೀತಿ]

೬೦೩   (ಸಾಧಾರಣೀಗೀತಿಯನ್ನು) ನೇರವಾದ, ಆಕರ್ಷಕವಾದ, ಸ್ವಲ್ಪ ಸೂಕ್ಷ್ಮವೂ, ಸೂಕ್ಷ್ಮವಲ್ಲದುದೂ ಆಗಿರುವ, ಚೆನ್ನಾಗಿ ಕೇಳಿಸುವ, ಸ್ವಲ್ಪ ವೇಗವುಳ್ಳ (ಸ್ವರಸಂದರ್ಭಗಳಿಂದ) ರಚಿಸಬೇಕು\ ಹಾಡಬೇಕು. ಹಾಗೆಯೇ, ಮೃದುವೂ ಆಕರ್ಷಕವೂ-

೬೦೪   ನಯವೂ ಆಗಿರುವ ಆಲಾಪನೆಗಳಿಂದ <ಪ್ರಯೋಗ>, ನವಿರಾದ ಕಾಕುಗಳಿಂದ ಕೂಡಿದ (ಸ್ವರಸಂದರ್ಭಗಳಿಂದಲೂ ರಚಿಸಬೇಕು\ಹಾಡಬೇಕು). ಹೀಗಿರುವ ಸಾಧಾರಣೀ(ಗೀತಿಯು) (ಉಳಿದ) ಎಲ್ಲ ಗೀತಿಗಳಿಗೂ ನೆಲೆಯಾಗಿರುತ್ತದೆಂದು ತಿಳಿಯಬೇಕು.                 ೨೭

[೬. ಭಾಷಾಗೀತಿ]

೬೦೫   ಶರೀರದಿಂದ (=ಶಾರೀರದಿಂದ) ಹುಟ್ಟಿದ ಆಲಾಪಗಳಿಂದಲೂ <ಪ್ರಯೋಗ>, ನುಣುಪಾಗಿರುವ, ಕಾಕುಗಳಿಂದ ರಂಜಿತವಾದ, ಚೆನ್ನಾಗಿ ಹೆಣೆದ, ಕಂಪನಗಳನ್ನುಳ್ಳ, ಕೋಮಲವಾದ, ತೀವ್ರವಾದ, ಮಾಲವೀಕಾಕುವನ್ನುಳ್ಳ [ಪ್ರಯೋಗಗಳಿಂದಲೂ]                      ೨೮

೬೦೬   ಆಕರ್ಷಕವಾದ ಬಹಳ ಮೃದುವಾದ ಪ್ರಯೋಗಗಳಿಂದಲೂ ಆಗುವ ಇದು ಭಾಷಾಗೀತಿ ಎಂದು ಗೀತಿಗಳಲ್ಲಿ ವಿಚಕ್ಷಣರಾದವರು ಹೆಸರಿಸುತ್ತಾರೆ. ಜನರಿಗೆ ಹೇಗೆ ರುಚಿಸುತ್ತದೋ (=ರಂಜಿಸುತ್ತದೋ) ಹಾಗೆ ಅದನ್ನು ಪ್ರಯೋಗಿಸಬೇಕು.                ೨೯

____

[೭. ವಿಭಾಷಾಗೀತಿಃ]

೬೦೭   ಲಲಿತೈರ್ಬಹುಭಿರ್ದೀಪ್ತೈಃ ಕಂಪಿತೈರೌರಸೈಃ ಸಮೈಃ |
ತಾರಾತಿತಾರೈರ್ಮಸೃಣೈರ್ಮಧ್ಯೇ ಮಧ್ಯಮದೀಪಿತೈಃ                                                           || ೩೦ ||

೬೦೮   ಗಮಕೈಃ ಶ್ರೋತೃಸುಖದೈರ್ಲಲಿತೈಸ್ತು ಯದೃಚ್ಛಯಾ |
ವಿಭಾಷಾಗೀತಿಸ್ತು ಸಂಯೋಜ್ಯಾ ಯಥಾ ಲೋಕೋ sನುರಜ್ಯತೇ

[ವಿಭಾಷಾಗೀತಿಸ್ತು ಯೋಜ್ಯಾ? ವಿಭಾಷಾಗೀತಿಃ ಸಂಯೋಜ್ಯಾ?]                                               || ೩೧ ||

[ಇತಿ ಗೀತಿಲಕ್ಷಣಮ್]