೬೦೯   ಗೀತೀನಾಂ ಲಕ್ಷಣಂ ಪ್ರೋಕ್ತಂ, ರಾಗಸಂಖ್ಯೋಚ್ಯತೇ sಧುನಾ |
          ಪಂಚ ಚೋಕ್ಷಾಃ ಸಮಾಖ್ಯಾತಾಸ್ತತ್ ಪ್ರಮಾಣಾಶ್ಚ ಭಿನ್ನಕಾಃ                                                   || ೩೨ ||

೬೧೦   ಗೌಡಾಸ್ತ್ರಯಸ್ತು ಕಥಿತಾ ರಾಗಾಶ್ಚಾಷ್ಟೌ ಪ್ರಕೀರ್ತಿತಾಃ |
ಸಪ್ತ ಸಾಧಾರಣಾಃ ಪ್ರೋಕ್ತಾ ಭಾಷಾಶ್ಚೈವಾತ್ರ ಷೋಡಶ                                                        || ೩೩ ||

೬೧೧   ದ್ವಾದಶೈವ ವಿಭಾಷಾಶ್ಚ ಸ್ಯುರ್ನಾಮಾನಿ ಚ ನಿಬೋಧತ |
ಷಾಡವಃ ಪಂಚಮಶ್ಚೈವ ತಥಾ ಕೈಶಿಕಮಧ್ಯಮಃ                                                                   || ೩೪ ||

೬೧೨   ಚೋಕ್ಷಸಾಧಾರಿತಶ್ಚೈವ ಚೋಕ್ಷಕೈಶಿಕ ಇತ್ಯಪಿ |
ಏತೇ ಚೋಕ್ಷಾಸ್ತು ವಿಜ್ಞೇಯಾ, ಭಿನ್ನಕಾನ್ ಸಾಂಪ್ರತಂ ಶ್ರುಣು                                                    || ೩೫ ||

೬೧೩   ಭಿನ್ನಷಡ್ಜಶ್ಚ ತಾನಶ್ಚ ಭಿನ್ನಕೈಶಿಕಮಧ್ಯಮಃ |
ಭಿನ್ನಪಂಚಮಸಂಜ್ಞಶ್ಚ ಪಂಚಮೋ ಭಿನ್ನಕೈಶಿಕಃ                                                                    || ೩೬ ||

೬೧೪   ಗೌಡಪಂಚಮ ಇತ್ಯೇಕೋ ಗೌಡಕೈಶಿಕ ಇತ್ಯಪಿ |
ಗೌಡಕೈಶಿಕಮಧ್ಯಮಸ್ತ್ರಯೋ ಗೌಡಾಃ ಪ್ರಕೀರ್ತಿತಾಃ                                                                || ೩೭ ||

ಪಾಠವಿಮರ್ಶೆ : ೬೦೭ಆ ೬೦೯ಅ ೬೧೩ ಇಈ

—-

[೭. ವಿಭಾಷಾಗೀತಿ]

೬೦೭   (ವಿಭಾಷಾ ಗೀತಿಯನ್ನು) ಆಕರ್ಷಕವೂ, ಬಹುಳವೂ, ತೀವ್ರವಾಗಿ ಹೊಣೆಯುವುದೂ ಕಂಪನವುಳ್ಳದ್ದೂ ಎದೆಯ(=ಮಂದ್ರ) ಸ್ಥಾನದಲ್ಲಿ ಹುಟ್ಟುವಂತಹದೂ, ತಾರಸ್ಥಾಯಿ ಹಾಗೂ ಅತಿತಾರಸ್ಥಾಯಿಗಳಲ್ಲಿ ನುಣುಪಾಗಿಯೂ, ನಡುನಡುವೆ ಮಧ್ಯಮ(ಸ್ಥಾನದಲ್ಲಿ) ಹೊಳೆಯುವ (ಸ್ವರಗಳಿಂದಲೂ ಹಾಡಬೇಕು).

೬೦೮   ಕೇಳುವವರಿಗೆ ಹಿತವನ್ನುಂಟುಮಾಡುವ, ಆಕರ್ಷಕವಾದ ಗಮಕಗಳಿಂದಲೂ, ಹೇಗೆಂದರೆ ಹಾಗೆಯೂ ಜನಗಳಿಗೆ ರುಚಿಸುತ್ತದೋ ಅಂತೆಯೂ ವಿಭಾಷಾಗೀತಿಯನ್ನು ವ್ಯವಸ್ಥೆಗೊಳಿಸಬೇಕು.

[ಹೀಗೆ ಗೀತಿಲಕ್ಷಣವು ಮುಗಿಯಿತು.]

 

[iii.ರಾಗಗಳ ಸಂಖ್ಯೆ ಮತ್ತು ನಾಮಸಂಗ್ರಹ]

೬೦೯   ಗೀತಿಗಳ ಲಕ್ಷಣವನ್ನು (ಇದುವರೆಗೆ) ಹೇಳಿದ್ದಾಗಿದೆ. ಈಗ ರಾಗಗಳ ಸಂಖ್ಯೆಯನ್ನು ಹೇಳಲಾಗುವುದು. ಚೋಕ್ಷ(=ಶುದ್ಧ)[ರಾಗ]ಗಳು ಐದು ಎಂದು ಹೇಳಿದೆ; ಅಷ್ಟೇ ಪ್ರಮಾಣದ್ದು ಭಿನ್ನ[ರಾಗ]ಗಳು.

೬೧೦   ಗೌಡ[ರಾಗ]ಗಳು ಮೂರೆಂದು ಹೇಳಿದೆ ; ರಾಗಗಳು ಎಂಟೆಂಬುದು ಚೆನ್ನಾಗಿ ತಿಳಿದಿದೆ; ಸಾಧಾರಣ[ರಾಗ]ಗಳು ಏಳೆಂದು ಹೇಳಿದೆ; ಇಲ್ಲಿ (=ಈ ಮತದಲ್ಲಿ) ಭಾಷಾ [ರಾಗ]ಗಳು ಹದಿನಾರೇ.                                                                                           ೩೩

೬೧೧   ವಿಭಾಷಾ[ರಾಗ]ಗಳು ಹನ್ನೆರಡೇ ಇರುತ್ತವೆ ; (ಈಗ ಅವುಗಳ) ಹೆಸರುಗಳನ್ನು ತಿಳಿದುಕೋ. ಷಾಡವ, ಪಂಚಮ, ಹಾಗೆಯೇ ಕೈಶಿಕಮಧ್ಯಮ,          ೩೪

೬೧೨   ಚೋಕ್ಷಸಾಧಾರಿತ, ಮತ್ತೆ ಚೋಕ್ಷಕೈಶಿಕ ಎಂಬುದು – ಇವುಗಳು ಚೋಕ್ಷ(=ಶುದ್ಧ) ರಾಗಗಳೆಂದು ತಿಳಿಯಬೇಕು. ಈಗ ಭಿನ್ನ[ರಾಗ]ಗಳ (ಹೆಸರುಗಳ)ನ್ನು ಕೇಳು.                                                                                                                   ೩೫.

೬೧೩.    ಭಿನ್ನಷಡ್ಜ, [ಭಿನ್ನ]ತಾನ, ಭಿನ್ನಕೈಶಿಕಮಧ್ಯಮ, ಭಿನ್ನಪಂಚಮ ಎಂಬ ಹೆಸರಿನದು, ಭಿನ್ನಕೈಶಿಕಪಂಚಮ (-ಇವು ಭಿನ್ನರಾಗಗಳು).                                                                                                                  ೩೬

೬೧೪   ಗೌಡಪಂಚಮ ಎಂಬುದೊಂದು, ಗೌಡಕೈಶಿಕ, ಗೌಡಕೈಶಿಕಮಧ್ಯಮ. ಈ ಮೂರೂ ಗೌಡ[ರಾಗ]ಗಳೆಂದು ಪ್ರಸಿದ್ಧವಾಗಿವೆ.

____

೬೧೫   ಟಕ್ಕರಾಗಶ್ಚ ಸೌವೀರಸ್ತಥಾ ಮಾಲವಪಂಚಮಃ |
ಷಾಡವೋ ಬೋಟ್ಟರಾಗಶ್ಚ ತಥಾ ಹಿಂದೋಲಕಃ ಪರಃ                                                             || ೩೮ ||

೬೧೬   ಟಕ[-ಕ್ಕ]ಕೈಶಿಕ ಇತ್ಯಕ್ತಸ್ತಥಾ ಮಾಲವಕೈಶಿಕಃ |
ಏತೇ ರಾಗಾಃ ಸಮಾಖ್ಯಾತಾ ನಾಮತೋ ಮುನಿಪುಂಗವೈಃ                                                          || ೩೯ ||

೬೧೭   ನರ್ತಃ ಶಕಾಖ್ಯಃ ಕಕುಭಸ್ತಥಾ ಭಮ್ಮಾಣಪಂಚಮಃ |
ಷಡ್ಜಕೈಶಿಕಸಂಜ್ಞಶ್ಚ ಸಪ್ತ ಸಾಧಾರಣಾಃ ಸ್ಮೃತಾಃ                                                                    || ೪೦ ||

[ಇತಿ ರಾಗಸಂಖ್ಯಾ ಉದ್ದೇಶಶ್ಚ]