[ಯಾಷ್ಟಿಕ ಉವಾಚ]

೭೩೮   ಗ್ರಾಮರಾಗಾ ಮಯಾ ಸರ್ವೇ ಕಥಿತಾ ಲಕ್ಷಣಾನ್ವಿತಾಃ |
ಭಾಷಾಣಾಂ ತು ಪ್ರವಕ್ಷ್ಯಾಮಿ ಲಕ್ಷಣಂ ಚ ತತಃ ಶೃಣು                                                                || ||

೭೩೯   ಭಾಷಾ[ಶ್] ಚತುರ್ವಿಧಾ ಪ್ರೋಕ್ತಾ ಮೂಲಸಂಕೀರ್ಣದೇಶಚಾಃ |
ಛಾಯಾಮಾತ್ರಾಶ್ರಯಾಃ ಪ್ರೋಕ್ತಾ ಗ್ರಾಮರಾಗೇ ವ್ಯವಸ್ಥಿತಾಃ                                                    || ||

[ಕಾಶ್ಯಪ ಉವಾಚ]

೭೪೦   ಕೀದೃಶೀ ತು ಭವೇದ್ ಭಾಷಾ ಸಂಕೀರ್ಣಾ ದೇಶಜಾ ತಥಾ |
ಛಾಯಾಮಾತ್ರಾನುಗಾಃ ಪ್ರೋಕ್ತಾ ಗ್ರಹಾಂಶನ್ಯಾಸಸಂಯುತಾಃ                                                     || ||

೭೪೧   ಕತಮಾ ಷಾಡವಾ ತತ್ರ ಕತಮೌಡುವಿತಾ ಭವೇತ್ |
ಪೂರ್ಣಾ ತು ಕತಮಾ ಜ್ಞೇಯಾ ಸಾಧಾರಣಕೃತಾ ತು ಸಾ                                                             || ||

೭೪೨   ಗ್ರಾಮರಾಗೇಷು ಕಾ ಕುತ್ರ ಕೀದೃಶೀ ಗೀಯತೇ ಜನೈಃ |
ಕತಮಾ ಪ್ರಾಪ್ಯತೇ ಭಾಷಾ ವಿಭಾಷಾ ಕತಮಾ ಭವೇತ್                                                              || ||

೭೪೩   ಕತಮಾ ಅಂತರಭಾಷಾ ವೈ ಕತಮಾ ವೈ ಸ್ಯಾದನುಕ್ರಮಾತ್ |
ಏತನ್ಮೇ ಬ್ರೂಹಿ ತತ್ತ್ವೇನ ಮಹತ್ ಕೌತೂಹಲಂ ಹಿ ಮೇ                                                           || ||

[ಯಾಷ್ಟಿಕ ಉವಾಚ]

೭೪೪   ಶೃಣುಷ್ವಾವಹಿತೋ ಭೂತ್ವಾ ಭಾಷಾಲಕ್ಷಣಮುತ್ತಮಮ್ |
ಯತ್ ಪೃಥಿವ್ಯಾಂ ಪ್ರಯತ್ನೇನ ಗೀಯತೇ ಗೀತವೇದಿಭಿಃ                                                            || ||

೭೪೫   ಪ್ರಕಾಶಂ ನ ಚ ಲಕ್ಷ್ಯಂತೇ ಯತ್ನಹೀನೈಸ್ತು ಗಾಯಕೈಃ |
ಪ್ರಗೀತಾಸ್ತು ಪ್ರಸಿದ್ಧ್ಯಂತಿ ಸುಸ್ವರಾಣಾಂ ವಿಶೇಷತಃ                                                                 || ||

ಪಾಠವಿಮರ್ಶೆ : ೭೪೦ಆ ೭೪೨ಆ

—-

ಈಗ ಭಾಷಾಲಕ್ಷಣ

[ಕ. ಯಾಷ್ಟಿಕನ ಮತದಲ್ಲಿ ಭಾಷಾಲಕ್ಷಣ]

[ಯಾಷ್ಟಿಕನು ಹೇಳುತ್ತಾನೆ-]

೭೩೮   ಲಕ್ಷಣಗಳಿಂದ ಕೂಡಿದ ಎಲ್ಲಾ ಗ್ರಾಮರಾಗಗಳನ್ನೂ ನಾನು (ಇದೀಗ) ಹೇಳಿಯಾಯಿತು. ನಂತರ ಭಾಷಾ[ರಾಗ]ಗಳ ಲಕ್ಷಣವನ್ನು ಹೇಳುತ್ತೇನೆ, ಕೇಳು.  ೧

೭೩೯   ಭಾಷಾ[ರಾಗ]ಗಳು ಮೂಲಾ, ಸಂಕೀರ್ಣಾ, ದೇಶಜಾ ಮತ್ತು ಛಾಯಾಮಾತ್ರವನ್ನು ಆಶ್ರಯಿಸಿರುವವುಗಳು ಎಂಬ ನಾಲ್ಕು ವಿಧವೆಂದು ಹೇಳಿದೆ. (ಅವುಗಳೆಲ್ಲವೂ) ಗ್ರಾಮರಾಗಗಳಲ್ಲಿ ವ್ಯವಸ್ಥೆಗೊಂಡಿವೆಯೆಂದು ಹೇಳಲಾಗಿದೆ.                                                ೨

[ಕಾಶ್ಯಪನು ಹೇಳುತ್ತಾನೆ-]

೭೪೦   ಗ್ರಹ, ಅಂಶ ಮತ್ತು ನ್ಯಾಸಗಳನ್ನೊಡಗೂಡಿದ ಸಂಕೀರ್ಣಾ, ದೇಶಜಾ ಮತ್ತು ಛಾಯಾ ಮಾತ್ರಾಶ್ರಿತಾ ಎಂಬ ಬಗೆಯ ಭಾಷಾ[ರಾಗ]ವು ಎಂತಹದು?                                                                                                                                     ೩

೭೪೧   ಅವುಗಳ ಪೈಕಿ ಷಾಡವವು ಯಾವುದು ? ಯಾವುದು ಔಡುವಿತವಾಗುತ್ತದೆ? ಯಾವುದನ್ನು ಪೂರ್ಣವೆಂದು ತಿಳಿಯಬೇಕು? ಸಾಧಾರಣವನ್ನಾಗಿ ಮಾಡಿದ್ದು ಯಾವುದು?                                                                                                                     ೪

೭೪೨   ಗ್ರಾಮರಾಗಗಳಲ್ಲಿ ಯಾವ(ಭಾಷಾ ರಾಗ)ದನ್ನು ಯಾವ ಸಂದರ್ಭದಲ್ಲಿ ಹೇಗೆ ಜನರು ಹಾಡುತ್ತಾರೆ? ಭಾಷಾಗಳು ಯಾವವು, ವಿಭಾಷಾಗಳು ಯಾವವಾಗುತ್ತವೆ? ಯಾವುದನ್ನು ಭಾಷಾ[ರಾಗ]ವಾಗಿ ಪಡೆಯಲಾಗುತ್ತದೆ? ವಿಭಾಷಾ ಯಾವುದಾಗುತ್ತದೆ?             ೫

೭೪೩   ಯಾವುದು ಅಂತರಭಾಷಾ (ಆಗುತ್ತದೆ) ? ಯಾವುದು (ಇಂತಹದೇ ಎಂಬ) ಅನುಕ್ರಮದಲ್ಲಿ (ಹಾಡಿ ನುಡಿಸಬೇಕಾಗಿ) ಇದೆ ? ಇದನ್ನು ನನಗೆ ಸಾರವತ್ತಾಗಿ ಹೇಳು. (ಏಕೆಂದರೆ ಈ ವಿಷಯದಲ್ಲಿ) ನನಗೆ ಬಹಳವಾದ ಕುತೂಹಲವಿದೆ.                                       ೬

(ಯಾಷ್ಟಿಕನು ಹೇಳುತ್ತಾನೆ-)

೭೪೪   ಹಾಡಿನಲ್ಲಿ ಪಂಡಿತರಾದವರು (ವಿಶೇಷವೂ ಪೂರ್ಣವೂ ಆದ) ಪ್ರಯತ್ನದಿಂದ (ಈ) ಭೂಲೋಕದಲ್ಲಿ ಹಾಡುವ ಶ್ರೇಷ್ಠವಾದ ಭಾಷಾ(ರಾಗಗಳ) ಲಕ್ಷಣವನ್ನು (ಹೇಳುತ್ತೇನೆ), ಗಮನವಿಟ್ಟು ಆಲಿಸು.                                                            ೭

೭೪೫   (ಸರಿಯಾಗಿ) ಪ್ರಯತ್ನವನ್ನು ಮಾಡದ ಗಾಯಕರಿಂದ (ಈ ಭಾಷಾಗಳು) ಸ್ಪಷ್ಟವಾಗಿ ಲಕ್ಷಿತವಾಗುವುದಿಲ್ಲ. ಸುಸ್ವರಗಳಿಂದ ಕೂಡಿ ಹಾಡಿದರೆ (ಮಾತ್ರ) ಅವು ವಿಶೇಷವಾಗಿ ಸಿದ್ಧಿಸುತ್ತವೆ. <ಪ್ರಸಿದ್ಧ್ಯಂತೇ>                                                                        ೮

____

೭೪೬   ಅಹಂ ತೇ ಕಥಯಿಷ್ಯಾಮಿ ಸರ್ವಂ ತತ್ತ್ವೇನ ಲಕ್ಷಣಮ್ |
ಪೂರ್ವಂ ಗ್ರಾಮದ್ವಯಂ ಪ್ರೋಕ್ತಂ ಗ್ರಾಮರಾಗಾಸ್ತದುದ್ಭವಾಃ                                                   || ||

೭೪೭   ಗ್ರಾಮರಾಗೋದ್ಭವಾ ಭಾಷಾ ಭಾಷಾಭ್ಯಶ್ಚ ವಿಭಾಷಿಕಾಃ |
ವಿಭಾಷಾಭ್ಯಶ್ಚ ಸಂಜಾತಾಸ್ತಥಾ ಚಾಂತರಭಾಷಿಕಾಃ                                                                || ೧೦ ||

[ಗ್ರಾಮರಾಗೇಷು ಭಾಷಾಣಾಂ ಸಂಖ್ಯಾ ಉದ್ದೇಶಶ್ಚ]

೭೪೮   ಟಕ್ಕರಾಗೇ ದಶ ದ್ವೇ ಕೇಚಿದಿಚ್ಛಂತಿ ಷೋಡಶ |
ತತ ಊರ್ಧ್ವಂ ನಿಗದ್ಯಂತೇ ಚಾಷ್ಟೌ ಮಾಲವಕೈಶಿಕೇ                                                              || ೧೧ ||

೭೪೯   ಕಕುಭೇ ಸಪ್ತ ಯೇ (?ತೇ?) ಪ್ರೋಕ್ತಾಃ ಪಂಚ ಹಿಂದೋಲಕೇ ಸ್ಮೃತಾಃ |
ಪಂಚಮೇ ದಶ ವಿಖ್ಯಾತಾ ಭಿನ್ನಷಡ್ಜೇ ನವ ಸ್ಮೃತಾಃ                                                             || ೧೨ ||

೭೫೦   ಸೌವೀರಕೇ ಚತಸ್ರಸ್ತು ಚತಸ್ರೋ ಭಿನ್ನಪಂಚಮೇ |
ಬೋಟ್ಟರಾಗೇ ತಥಾ sಷ್ಯೇಕಾ ತಥಾ ಮಾಲವಪಂಚಮೇ                                                        || ೧೩ ||

೭೫೧   ಟಕ್ಕಕೈಶಿಕಜಾಸ್ತಿಸ್ರೋ ದ್ವೇ ಚ ವೇಸರಪಾಡವೇ |
ಭಿನ್ನತಾನೇ ತಥಾ ಹ್ಯೇಕಾ ಚೈಕಾ ಗಾಂಧಾರಪಂಚಮೇ                                                             || ೧೪ ||

೭೫೨   ಪಂಚಮಷಾಡವೇ ಹ್ಯೇಕಾ ಇತ್ಯೇತಾಸ್ತು ಸಮಾಸತಃ |
ಭಾಷಾ ವಿಭಾಷಾಃ ಕಥಿತಾಸ್ತೃಧಿಕಾ ಸಪ್ತತಿರ್ಬುಧ್ಯೈಃ                                                            || ೧೫ ||

೭೫೩   ಭಾಷಾಣಾಂ ಚೈವ ನಾಮಾನಿ ಲಕ್ಷಣಂ ಚ ನಿಬೋಧತ |
ಪ್ರಥಮಾ ತ್ರವಣಾ ಜ್ಞೇಯಾ ದ್ವಿತೀಯಾ ತ್ರವಣೋದ್ಭವಾ                                                       || ೧೬ ||

೭೫೪   ವೇರಂಜಿಕಾ ತೃತೀಯಾ ತು ಛೇವಾಟೀ ಚ ಚತುರ್ಥಿಕಾ |
ಮಾಲವೇಸರಿಕಾ ತತ್ರ ಪ್ರಯೋಕ್ತವ್ಯಾ ತು ಪಂಚಮೀ                                                               || ೧೭ ||

೭೫೫   ಷಷ್ಠೀ ಚ ಗುರ್ಜರೀ ಜ್ಞೇಯಾ ಸೌರಾಷ್ಟ್ರೀ ಸಪ್ತಮೀ ತಥಾ |
ಅಷ್ಟಮೀ ಸೈಂಧವೀ ಚೈವ ವೇಸರೀ ನವಮೀ ತಥಾ                                                               || ೧೮ ||

ಪಾಠವಿಮರ್ಶೆ: ೭೪೯ಆ ೭೫೨ಅ ೭೫೬ಇ

—-

೭೪೬   ನಾನು ಈ ಲಕ್ಷಣವನ್ನೆಲ್ಲಾ ನಿನಗೆ ಸಾರವತ್ತಾಗಿ ಹೇಳುತ್ತೇನೆ. ಹಿಂದೆ ಎರಡು ಗ್ರಾಮಗಳನ್ನು ಹೇಳಿದ್ದಾಗಿದೆ. ಗ್ರಾಮರಾಗಗಳು ಅವುಗಳಿಂದ ಹುಟ್ಟಿವೆ.                                                                                                                                        ೯

೭೪೭   ಗ್ರಾಮರಾಗಗಳಿಂದ ಭಾಷಾ[ರಾಗ]ಗಳೂ ಭಾಷಾಗಳಿಂದ ವಿಭಾಷಾ[ರಾಗ]ಗಳೂ ವಿಭಾಷಾಗಳಿಂದ ಅಂತರಭಾಷಾ[ರಾಗ]ಗಳೂ ಹುಟ್ಟಿವೆ.    ೧೦

[ಗ್ರಾಮರಾಗಗಳಲ್ಲಿ ಭಾಷಾರಾಗಗಳ ಸಂಖ್ಯೆ ಮತ್ತು ನಾಮಸಂಗ್ರಹ]

೭೪೮   ಟಕ್ಕ[ವೆಂಬ ಗ್ರಾಮ]ರಾಗದಲ್ಲಿ ಹತ್ತು ಮತ್ತೆರಡು (=ಹನ್ನೆರಡು) (ಭಾಷಾರಾಗಗಳಿವೆ). ಕೆಲವರು (ಅವು) ಹದಿನಾರೆನ್ನುತ್ತಾರೆ <ಇಚ್ಛಂತಿ> ಆಮೇಲೆ ಮಾಲವಕೈಶಿಕದಲ್ಲಿ ಎಂಟೆಂದು ಹೇಳಿದೆ.                                                                                   ೧೧

೭೪೯   ಕಕುಭದಲ್ಲಿ ಅವು (?ಯೇ?ತೇ> ಏಳು ಎಂದು ಹೇಳಿದೆ; ಹಿಂದೋಲದಲ್ಲಿ ಐದೆಂದು ಸ್ಮರಿಸಲಾಗಿದೆ. ಪಂಚಮದಲ್ಲಿ ಹತ್ತು (ಎಂಬುದು) ಚೆನ್ನಾಗಿ ತಿಳಿದಿದೆ. ಭಿನ್ನಷಡ್ಜದಲ್ಲಿ ಒಂಭತ್ತು ಎಂದು ಸ್ಮರಿಸಿದೆ.                                                                 ೧೨

೭೫೦   ಸೌವೀರದಲ್ಲಿ ನಾಲ್ಕು ಭಿನ್ನಪಂಚಮದಲ್ಲಿ ನಾಲ್ಕು, ಅಂತೆಯೇ ಬೋಟ್ಟರಾಗದಲ್ಲಿ ಒಂದೇ, ಹಾಗೆಯೇ ಮಾಲವಪಂಚಮದಲ್ಲೂ ಅಷ್ಟೇ (=ಒಂದೇ)                                                                                                                                     ೧೩

೭೫೧   ಟಕ್ಕಕೈಶಿಕದಲ್ಲಿ ಹುಟ್ಟಿದವುಗಳು ಮೂರು, ವೇಸರಷಾಡವದಲ್ಲಿ ಎರಡು, ಹಾಗೆಯೇ ಭಿನ್ನತಾನದಲ್ಲಿ ಒಂದು, ಗಾಂಧಾರಪಂಚಮದಲ್ಲಿ(ಯೂ)ಒಂದು                                                                                                 ೧೪

೭೫೨   ಪಂಚಮಷಾಡವದಲ್ಲಿ ಒಂದು; ಇವುಗಳೆಲ್ಲ ಒಟ್ಟಾದರೆ, ಭಾಷಾ ಮತ್ತು ವಿಭಾಷಾಗಳು ಎಪ್ಪತ್ತಮೂರು ಎಂದು ವಿದ್ವಾಂಸರೆನ್ನುತ್ತಾರೆ.          ೧೫

೭೫೩   ಭಾಷಾ[ರಾಗ]ಗಳ ಹೆಸರುಗಳನ್ನೂ ಲಕ್ಷಣಗಳನ್ನೂ (ಈಗ) ತಿಳಿದುಕೋ; ಮೊದಲನೆಯದು ತ್ರವಣಾ ಎಂದು ತಿಳಿಯಬೇಕು, ಎರಡನೆಯದು ತ್ರವಣೋದ್ಭವಾ.                                                                                                                            ೧೬

೭೫೪   ಮೂರನೆಯದು ವೇರಂಜಿಕಾ, ನಾಲ್ಕನೆಯದು ಛೇವಾಟೀ, ಮಾಲವೇಸರಿಕಾ ಎಂಬುದನ್ನು ಇಲ್ಲಿ ಐದನೆಯದನ್ನಾಗಿ ಪ್ರಯೋಗಿ(=ಹಾಡಿನುಡಿ)ಸಬೇಕು.                                                                                                        ೧೭

೭೫೫   ಗುರ್ಜರಿಯು ಆರನೆಯದೆಂದು ತಿಳಿಯಬೇಕು; ಹಾಗೆಯೇ ಸೌರಾಷ್ಟ್ರಿಕವು ಏಳನೆಯದು. ಎಂಟನೆಯದು ಸೈಂಧವೀ, ಅಂತೆಯೇ ವೇಸರಿಯು ಒಂಭತ್ತನೆಯದು.                                                                                                                            ೧೮

____

೭೫೬   ಪಂಚಮಾಖ್ಯಾ ತು ದಶಮೀ ರವಿಚಂದ್ರಾ ತಥಾ ಭವೇತ್ |
ಅಂಬಾಹೇರಿ ತು ಲಲಿತಾ ಸ್ಮೃತಾ ಕೋಲಾಹಲೀ ತತಃ                                                              || ೧೯ ||

೭೫೭   ಮಧ್ಯಮಗ್ರಾಮದೇಹಾ ಚ ತಥಾ ಗಾಂಧಾರಪಂಚಮೀ |
ಇತ್ಯೇತಾಃ ಪ್ರಕಟಾ ಭಾಷಾಷ್ಟಕ್ಕರಾಗಸ್ಯ ಷೋಡಶ                                                                || ೨೦ ||

೭೫೮   ಶುದ್ಧಾ ತು ಪ್ರಥಮಾ ಜ್ಞೇಯಾ ಚಾರ್ಧವೇಸರಿಕಾ ತತಃ |
ಹರ್ಷಪೂರೀ ತೃತೀಯಾ ತು ಮಾಂಗಾಲೀ ಚ ಚತುರ್ಥಿಕಾ                                                         || ೨೧ ||

೭೫೯   ಪಂಚಮೀ ಸೈಂಧವೀ ಜ್ಞೇಯಾ ಆಭೀರೀ ಷಷ್ಠಿಕಾ ಮತಾ |
ಖಂಜರೀ (?ನೀ) ಗುರ್ಜರೀ ಚೈವಮಷ್ಟೌ ಮಾಲವಕೈಶಿಕೇ                                                        || ೨೨ ||

೭೬೦   ಕಾಂಬೋಜಾ ಪ್ರಥಮಾ ಜ್ಞೇಯಾ ಮಧ್ಯಮಗ್ರಾಮಿಕಾ ಮತಾ |
ಸಾತವಾಹನಿಕಾ ಚೈವ ತದಂತೇ ಭೋಗವರ್ಧನೀ                                                                    || ೨೩ ||

೭೬೧   ಪಂಚಮೀ ಮುಹರೀ ಜ್ಞೇಯಾ ಷಷ್ಠೀ ಚ ಶಕಮಿಶ್ರಿತಾ |
ಪ್ರಯೋಕ್ತವ್ಯಾ ಪ್ರಯತ್ನೇನ ಸಪ್ತಮೀ ಭಿನ್ನಪಂಚಮೀ                                                           || ೨೪ ||

೭೬೨   ಏತಾಸ್ತು ಕಕುಭೇ ಸಪ್ತ ಭಾಷಾ ಜ್ಞೇಯಾ ಮನೋಹರಾಃ |
ಪ್ರಥಮಾ ವೇಸರೀ ಜ್ಞೇಯಾ ದ್ವಿತೀಯಾ ಚೈವ ಮಂಜರೀ                                                         || ೨೫ ||

೭೬೩   ತತಃ ಕಾರ್ಯಾ ಚ ಛೇವಾಟೀ ಚತುರ್ಥೀ ಷಡ್ಜಮಧ್ಯಮಾ |
ಪಂಚಮೀ ಮಾಧುರೀ ಜ್ಞೇಯಾ ಪಂಚ ಹಿಂದೋಲಕೋದ್ಭವಾಃ                                                  || ೨೬ ||

೭೬೪   ಆಭೀರೀ ಭಾವಿನೀ ಚೈವ ಮಾಂಗಾಲೀ ಸೈಂಧವಿ ತಥಾ |
ಗುರ್ಜರೀ ದಾಕ್ಷಿಣಾತ್ಯಾ ಚ ಆಂಧ್ರೀ ತಾನೋದ್ಭವಾ ಪರಾ                                                        || ೨೭ ||

ಪಾಠವಿಮರ್ಶೆ: ೭೫೬ಇ ೭೫೭ಅ,ಈ ೭೫೮ಆ,ಇ ೭೫೯ಇ ೭೬೦ಇ,ಈ, ೭೬೧ಅ ೭೬೨ಈ ೭೬೪ಈ

—-

೭೫೬   ಪಂಚಮ ಎಂಬುದು ಹತ್ತನೆಯದು; ರವಿಚಂದ್ರಾ ಹಾಗೆಯೇ (ಹನ್ನೊಂದನೆಯದು) ಆಗುತ್ತದೆ. ಅಂಬಾಹೇರಿಯು (ಹನ್ನೆರಡಯದು ಎಂದೂ), ಲಲಿತಾ (ಹದಿಮೂರನೆಯದು ಎಂದೂ) ನಂತರ ಕೋಲಾಹಲಿಯು (ಹದಿನಾಲ್ಕನೆಯದೆಂದು ಸ್ಮರಿಸಲಾಗಿದೆ).           ೧೯

೭೫೭   (ಇದೇ ರೀತಿಯಲ್ಲಿ) ಮಧ್ಯಮಗ್ರಾಮದೇಹಾ (ಹದಿನೈದನೆಯದು) ಮತ್ತು ಗಾಂಧಾರ ಪಂಚಮೀ (ಹದಿನಾರನೆಯದು). ಈ ಹದಿನಾರು ಟಕ್ಕ[ಗ್ರಾಮ]ರಾಗದ ಭಾಷಾ[ರಾಗ]ಗಳೆಂದು ಸ್ಪಷ್ಟವಾಗಿದೆ.                                                                        ೨೦

೭೫೮   (ಮಾಲವಕೈಶಿಕವೆಂಬ ಗ್ರಾಮರಾಗದ ಭಾಷಾ ರಾಗಗಳು ಪೈಕಿ) ಶುದ್ಧಾ ಮೊದಲನೆಯದೆಂದು ತಿಳಿಯಬೇಕು; ನಂತರ ಅರ್ಧವೇಸರಿಕಾ, ಮೂರನೆಯದು ಹರ್ಷಪೂರೀ, ಮಾಂಗಾಲೀ ನಾಲ್ಕನೆಯದು;                                                                       ೨೧

೭೫೯   ಸೈಂಧವಿಯು ಐದನೆಯದೆಂದು ತಿಳಿಯಬೇಕು, ಆಭೀರಿಯು ಆರನೆಯದೆಂದು ಅಭಿಪ್ರಾಯಪಡಲಾಗಿದೆ; ಖಂಜರೀ (?ನೀ) (ಏಳನೆಯದು) ಮತ್ತು ಗುರ್ಜರೀ (ಎಂಟನೆಯದು) – ಈ ಎಂಟು [ಭಾಷಾ ರಾಗಗಳು] ಮಾಲವ ಕೈಶಿಕದಲ್ಲಿ [ಹುಟ್ಟಿವೆ].                 ೨೨

೭೬೦   (ಕಕುಭವೆಂಬ ಗ್ರಾಮರಾಗದ ಭಾಷಾರಾಗಗಳ ಪೈಕಿ) ಕಾಂಬೋಜಾ ಮೊದಲನೆಯದೆಂದು ತಿಳಿಯಬೇಕು ; ಮಧ್ಯಮಗ್ರಾಮಿಕಾ (ಎರಡನೆಯದೆಂದು) ಸಮ್ಮತಿಸಿದೆ; (ಮೂರನೆಯದು) ಸಾತವಾಹನಿಕಾ, ಅದರ ನಂತರ (ನಾಲ್ಕನೆಯದು) ಭೋಗವರ್ಧಿನೀ;     ೨೩

೭೬೧   ಮುಹರೀ ಐದನೆಯದೆಂದು ತಿಳಿಯಬೇಕು, ಆರನೆಯದು ಶಕಮಿಶ್ರಿತಾ, ಏಳನೆಯದಾದ ಭಿನ್ನಪಂಚಮಿಯನ್ನು (ವಿಶೇಷ) ಪ್ರಯತ್ನದಿಂದ ಪ್ರಯೋಗಿಸಬೇಕು.                                                                                                                           ೨೪

೭೬೨   ಮನೋಹರವಾದ ಈ ಏಳೂ (ಭಾಷಾ ರಾಗಗಳು) ಕಕುಭದಲ್ಲಿ ಹುಟ್ಟಿವೆಯೆಂದು ತಿಳಿಯಬೇಕು. (ಹಿಂದೋಲವೆಂಬ ಗ್ರಾಮರಾಗದಲ್ಲಿ ಹುಟ್ಟಿರುವ ಭಾಷಾರಾಗಗಳ ಪೈಕಿ) ವೇಸರೀ ಮೊದಲನೆಯದೆ ಎಂದು ತಿಳಿಯಬೇಕು ; ಎರಡನೆಯದು ಮಂಜರೀ.       ೨೫

೭೬೩   ಆಮೇಲೆ ಛೇವಾಟಿಯನ್ನು (ಮೂರನೆಯದನ್ನಾಗಿ) ಮಾಡಬೇಕು ; ನಾಲ್ಕನೆಯದು ಷಡ್ಜಮಧ್ಯಮಾ. ಮಧುರೀ ಐದನೆಯದೆಂದು ತಿಳಿಯಬೇಕು. ಈ ಐದೂ ಹಿಂದೋಲದಲ್ಲಿ ಹುಟ್ಟಿವೆ.                                                                              ೨೬

೭೬೪   (ಮೂಲವಪಂಚಮಾ ಎಂಬ ಗ್ರಾಮರಾಗದಲ್ಲಿ ಹುಟ್ಟಿರುವ ಭಾಷಾರಾಗಗಳ ಪೈಕಿ) ಆಭೀರೀ, ಭಾವನೀ, ಮಾಂಗಾಲೀ, ಅಂತೆಯೇ ಸೈಂಧವೀ, ಗುರ್ಜರೀ, ದಾಕ್ಷಿಣಾತ್ಯಾ ಆಂಧ್ರೀ, ಮುಂದಿನದು ತಾನೋದ್ಭವಾ,

____

೭೬೫   ನವಮೀ ತ್ರಾವಣೀ ಜ್ಞೇಯಾ ಕೈಶಿಕೀ ದಶಮೀ ಸ್ಮೃತಾ |
ಏತಾ ಭಾಷಾಸ್ತು ವಿಜ್ಞೇಯಾ ಗಾಯಕೈಃ ಪಂಚಮೋದ್ಭವಾಃ                                                      || ೨೮ ||

೭೬೬   ವಿಶುದ್ಧಾ ದಾಕ್ಷಿಣಾತ್ಯಾ ತು ಗಾಂಧಾರೀ ತದನಂತರಮ್ |
ಶ್ರೀಕಂಠೀ ಚೈವ ಪೌರಾಲೀ ಮಾಂಗಾಲೀ ಸೈಂಧವೀ ತಥಾ                                                         || ೨೯ ||

೭೬೭   ಕಾಲಿಂಗೀ ಚ ಪುಲಿಂದೀ ಚ ಭಿನ್ನಷಡ್ಜೋದ್ಭವಾ ನವ |
ಸೌವೀರೀ ಪ್ರಥಮಾ ಜ್ಞೇಯಾ ದ್ವಿತೀಯಾ ವೇಗಮಧ್ಯಮಾ                                                       || ೩೦ ||

೭೬೮   ಸಾಧಾರಿತಾ ತೃತೀಯಾ ತು ಗಾಂಧಾರೀ ಚ ಚತುರ್ಥಿಕಾ |
ಏವಂ ಜ್ಞೇಯಾಶ್ಚತಸ್ರೋ ಹಿ ಭಾಷಾಃ ಸೌವೀರಕೋದ್ಭವಾಃ                                                      || ೩೧ ||

೭೬೯   ಶುದ್ಧಭಿನ್ನಾ ತು ವರಾಟೀ ತಥಾ ಧೈವತಭೂಷಿತಾ |
ವಿಶಾಲಾ ಚ ತತಃ ಪ್ರೋಕ್ತಾ ಭಿನ್ನಪಂಚಮಸಂಭವಾಃ                                                               || ೩೨ ||

೭೭೦   ಮಾಂಗಾಲ್ಯಾಖಾ ತು ಯಾ ಭಾಷಾ ಬೋಟ್ಟರಾಗೋದ್ಭವಾ ತು ಸಾ |
ಮಾಲವಪಂಚಮೇ ಜಾತಾ ಭಾವಿನೀ ಲೋಕಭಾವಿನೀ                                                              || ೩೩ ||

೭೭೧   ಟಕ್ಕಕೈಶಿಕಜಾ ಜ್ಞೇಯಾ ಮಾಲವಾ ಭಿನ್ನವಾಲಿಕಾ |
ತೃತೀಯಾ ದ್ರಾವಿಡೀ ತತ್ರ ಭಾಷಾ ಲಕ್ಷಿತಲಕ್ಷಣಾ                                                                   || ೩೪ ||

೭೭೨   ಬಾಹ್ಯಪಾಡವನಾದಾಖ್ಯೇ ಜಾತೇ ವೇಸರಪಾಡವೇ |
ತಾನೋದ್ಭವಾ ತು ವಿಜ್ಞೇಯಾ ಭಿನ್ನತಾನೇ ವ್ಯವಸ್ಥಿತಾ                                                          || ೩೫ ||

೭೭೩   ಗಾಂಧಾರಪಂಚಮೇ ಹ್ಯೇಕಾ ಭಾಷಾ ಗಾಂಧಾರಿಕಾ ಮತಾ |
ಗಾಂಧಾರೀ ಬಹುಗಾಂಧಾರಾ ಪಂಚ [ಮೇ] ಲೋಕರಂಜಿಕಾ                                                       || ೩೬ ||

೭೭೪   ರೇವಗುಪ್ತೇ ಶಕಾಖ್ಯೈಕಾ[?ಕೇ] ಪ್ರೋಕ್ತಾ [ಪೋತಾ] ಪಂಚಮಷಾಡವೇ |
ಇತ್ಯೇತಾಃ ಪ್ರಕಟಾಃ ಭಾಷಾಃ ಪ್ರಜಾಯಂತೇ ಹ್ಯನೇಕಶಃ |
ಸೋದಾಹರಣಮೇತಾಸಾಂ ಲಕ್ಷಣಂ ಚಾಧುನಾ ಶೃಣು                                                            || ೩೭ ||

ಪಾಠವಿಮರ್ಶೆ : ೭೬೫ಆ ೭೬೭ಅ ೭೬೮ಇ ೭೬೯ಅ,ಇ ೭೭೦ಅ,ಇಈ ೭೭೧ಆ,ಇಈ ೭೭೨ಅ ೭೭೩ಆ,ಇ

—-

೭೬೫   ತ್ರಾವಣೀ ಒಂಭತ್ತನೆಯದೆಂದು ತಿಳಿಯಬೇಕು, ಕೈಶಿಕೀ ಹತ್ತನೆಯದೆಂದು ಸ್ಮರಿಸಲಾಗಿದೆ. ಹಾಡುಗಾರರು ಈ ಭಾಷಾರಾಗಗಳು (ಮೂಲವ)ಪಂಚಮಾದಿಂದ ಹುಟ್ಟಿವೆಯೆಂದು ತಿಳಿಯಬೇಕು.                                                                      ೨೮

೭೬೬   (ಭಿನ್ನಷಡ್ಜಾ ಎಂಬ ಗ್ರಾಮರಾಗದಲ್ಲಿ ಹುಟ್ಟಿರುವ ಭಾಷಾರಾಗಗಳು) ವಿಶುದ್ಧಾ, ದಾಕ್ಷಿಣಾತ್ಯಾ, ಅದಾದ ಮೇಲೆ ಗಾಂಧಾರೀ, ಶ್ರೀಕಂಠೀ, ಪೌರಾಲೀ, ಮಾಂಗಲೀ, ಹಾಗೆಯೇ ಸೈಂಧವೀ,                                                                                        ೨೯

೭೬೭   ಕಾಲಿಂಗೀ ಮತ್ತು ಪುಲಿಂದೀಗಳು ಭಿನ್ನಷಡ್ಜಾದಲ್ಲಿ ಹುಟ್ಟಿರುವ ಒಂಭತ್ತು (ಭಾಷಾ ರಾಗಗಳು]. (ಸೌವೀರೀ ಎಂಬ ಗ್ರಾಮರಾಗದಲ್ಲಿ ಹುಟ್ಟಿರುವ ಭಾಷಾರಾಗಗಳಲ್ಲಿ) ಸೌವೀರಿಯು ಮೊದಲನೆಯದೆಂದು ತಿಳಿಯಬೇಕು ; ಎರಡನೆಯದು ವೇಗಮಧ್ಯಮಾ. ೩೦

೭೬೮   ಸಾಧಾರಿತಾ ಮೂರನೆಯದು, ಗಾಂಧಾರಿಯು ನಾಲ್ಕನೆಯದು. ಹೀಗೆ ಈ ನಾಲ್ಕೂ ಸೌವೀರೀಯಲ್ಲಿ ಹುಟ್ಟಿರುವ ಭಾಷಾ[ರಾಗ]ಗಳೆಂದು ತಿಳಿಯಬೇಕು.                                                                                                                                 ೩೧

೭೬೯   ಶುದ್ಧಭಿನ್ನಾ, ವರಾಟೀ, ಹಾಗೆಯೇ ದೈವತಭೂಷಿತಾ, ಆಮೇಲೆ ವಿಶಾಲಾ (ಎಂಬ ನಾಲ್ಕು) ಭಿನ್ನಪಂಚಮ(ಎಂಬ ಗ್ರಾಮರಾಗ)ದಲ್ಲಿ ಹುಟ್ಟಿವೆ.                                                                                                                                      ೩೨

೭೭೦   ಮಾಂಗಾಲೀ ಎಂಬ ಭಾಷಾ[ರಾಗ]ವು ಬೋಟ್ಟ ಎಂಬ [ಗ್ರಾಮ]ರಾಗದಲ್ಲಿ ಹುಟ್ಟಿದೆ. ಮಾಲವ ಪಂಚಮದಲ್ಲಿ ಭಾವಿನೀ ಮತ್ತು ಲೋಕಭಾವಿನೀ (ಎಂಬ ಭಾಷಾಗಳು) ಹುಟ್ಟಿವೆ. ೩೩

೭೭೧   ಮಾಲವಾ ಮತ್ತು ಭಿನ್ನವಾಲಿಕಾಗಳು ಟಕ್ಕಕೈಶಿಕ [ಎಂಬ ಗ್ರಾಮರಾಗ]ದಲ್ಲಿ ಹುಟ್ಟಿವೆ. ಲಕ್ಷಣಗಳನ್ನು ವಿವರಿಸಲಾಗುವ ದ್ರಾವಿಡೀ ಎಂಬದೂ ಅದರಲ್ಲಿಯೇ ಜನಿಸಿರುವ ಭಾಷಾರಾಗ.                                                                                                ೩೪

೭೭೨   ವೇಸರಪಾಡವದಲ್ಲಿ ಬಾಹ್ಯಷಾಡವಾ ಮತ್ತು ನಾದಾಖ್ಯಾಗಳರೆಡೂ ಜನಿಸಿವೆ. ಭಿನ್ನತಾನದಲ್ಲಿ ತಾನೋದ್ಬವಾ (ಎಂಬ ಭಾಷಾರಾಗವು ಹೀಗೆಯೇ) ವ್ಯವಸ್ಥೆಗೊಂಡಿದೆ.                                                                                                           ೩೫

೭೭೩   ಗಾಂಧಾರಪಂಚಮದಲ್ಲಿ ಗಾಂಧಾರಿಯು ಒಂದೇ (ಭಾಷಾ)ರಾಗ ಎಂದು ಸಮ್ಮತಿಸಿದೆ. (ಗಾಂಧಾರ)ಪಂಚಮದಲ್ಲಿ ಗಾಂಧಾರ(ಸ್ವರ)ವು ಬಹುಲವಾಗಿ ಪ್ರಯೋಗವಾಗುವ ಗಾಂಧಾರಿ(ಭಾಷಾರಾಗ)ಯು ಜನರನ್ನು ರಂಜಿಸುತ್ತದೆ.                                    ೩೬

೭೭೪   ರೇವಗುಪ್ತ(ವೆಂಬ ಗ್ರಾಮರಾಗ)ದಲ್ಲಿ ಶಕ ಎಂಬ ಒಂದೇ (ಭಾಷಾರಾಗ)ವು ಇದೆ ಎಂದು ಹೇಳಿದೆ (ಎಂದು ಕೆಲವರೆನ್ನುತ್ತಾರೆ.<ಏಕೇ>) ಪಂಚಮಷಾಡವ (ಗ್ರಾಮರಾಗ) ದಲ್ಲಿ ಪೋತಾ (ಎಂಬ ಭಾಷಾರಾಗವು ಹುಟ್ಟಿದೆ). ಹೀಗೆ ಸ್ಪಷ್ಟಗೋಚರವಾಗಿರುವ <ಪ್ರಕಟಾಃ>

೭೭೪ಅ

____

[ಭಾಷಾಣಾಂ ಲಕ್ಷಣಾನಿ]

[I ಅಥ ಟಕ್ಕರಾಗೇ]

[i ತ್ರವಣಾ]

೭೭೫   ಮಧ್ಯಮಾಂಶಾ ತು ಷಡ್ಜಾ[೦]ತಾ ಪಂಚಮೇನ ವಿವರ್ಜಿತಾ |
ಧೈವತಸ್ಯ ನಿಷಾದಸ್ಯ ಷಡ್ಜಧೈವತಯೋಸ್ತಥಾ                                                                    || ೩೮ ||

೭೭೬   ಪರಸ್ಪರಂ ತು ಗಮನಂ ದೃಶ್ಯತೇ sತ್ರ ಪುನಃ ಪುನಃ |
ಸ್ಯಾದಿಯಂ ಷಾಡವಾ ಜ್ಞೇಯಾ ಮೂಲಾಖ್ಯಾ ತ್ರವಣಾ ಭವೇತ್                                                || ೩೯ ||

೭೭೭   ಉದಾಹರಣಂ – (ಅ) ಮಾಸಾಸಾಸಾ ಸಾನಿಧಾನಿಧಾನೀ ಧಾಗಾಸಾಸಾ | (ಆ) ಧಾನಿಸಾಮಾ ಗಾಗಾಗಾಮಾ ಸಾನಿಧಾಸಾಸಾಸಾಸಾ ಗಾಮಾಧಾನೀಧಾಧಾಮಾರೀ ಗಾರೀರೀಮರಿಗಾಸಾಸಾನಿಧಾಸಾಸಾ | (ಇ) ನೀಧಗಾಸಾಸಾ ನಿಧನಿಮಾಮಾ ನಿಧಾಸಾಸಾ ನಿಧಾಸಗಮಾಗಾಸಾ ನೀಧನೀಸಾ | (ತ್ರವಣಾ)                                                                                                                                     1

[ii ತ್ರವಣೋದ್ಭವಾ]

೭೭೮   ಷಡಾ[೦]ತಾ ಮಧ್ಯಮಾಂಶಾ ಯಾ ಗಾಂಧಾರಬಹುಲಾ ಸದಾ |
ಪಂಚಮೇನ ವಿಹೀನಾ ತು ಬಹುಲೌ ಧೈವತರ್ಷಭೌ |
ಸಂಕೀರ್ಣಾಯಂ ಸದಾ ಜ್ಞೇಯಾ ಷಾಡವಾ ತ್ರವಣೋದ್ಭವಾ                                                               || ೪೦ ||

೭೭೯   ಉದಾಹರಣಂ – (ಅ) ಮಾನೀನೀನೀಸಾಸ(—-) | (ಆ) ಸಾರೀರೀ ರೀಗಾಗಾ ಗಮಾಮಾ ಮಾಮಾರೀ | (ಇ) ಗರಿನಿನಿಧಾ ಧಾಧಾಮಾಮಗಾರಿಗಾ | (ಈ) ಸಾ ಮಾಗಾರೀ | (ಉ) ಸನಿನಿಗಾಗಾ ನಿನಿಧಾಸರಿಗಾರೀಮಾ | (ಊ) ಗಾಮಾಮಾನೀ | ನೀಸಸಾ | (ತ್ರವಣೋದ್ಭವಾ)          2

ಪಾಠವಿಮರ್ಶೆ: ೭೭೫ಈ ೭೭೬ಈ ೭೭೮ಈ ೭೭೯ಅ

—-

ಭಾಷಾ[ರಾಗ]ಗಳು ಬಹುವಾಗಿ ಹುಟ್ಟುತ್ತವೆ. ಈಗ ಇವುಗಳ ಲಕ್ಷಣವನ್ನು ಉದಾಹರಣೆಗಳೊಡನೆ (ಹೇಳುತ್ತೇನೆ;) ಆಲಿಸು.   ೩೭